Jul 072020
 

ವೀಣಾರವರ ಪರಿಹಾರ:
ಕ್ಷಿತಿಗಾ ಸಗ್ಗದಿನಿಳಿದೀ
ರತಿಪತಿಯೂಡೆ ಘೃತಸಿಕ್ತಭೋಜ್ಯಂಗಳಮೋ!
ಸುತನೋ ಬೆಣ್ಣೆಯ ಮುದ್ದೆಯೊ!
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
ಭೂಮಿಗಿಳಿದ ಮನ್ಮಥನಂತಿರುವ ಸುತನಿಗೆ ಚೆನ್ನಾಗಿ ಘೃತಭೋಜನವನ್ನು ಮಾಡಿಸಲು ಅವನು ಗುಂಡುಗುಂಡಗೆ ಬೆಣ್ಣೆಮುದ್ದೆಯಂತಾದ..

ಕಾಂಚನಾರವರ ಪರಿಹಾರ:
ಸುತನಿಂ ಕೊಂಡಾಯುಷ್ಯಮ
ನತಿಯಾಶೆಯೊಳಾ ಯಯಾತಿವಡೆವಂತೆಳಸಂ|
ಕೈತವಮಾದೊಡೆ ನೋಡೌ!
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ||

ಉಷಾರವರ ಪರಿಹಾರ-೧:
ಅತಿಶಯದಾಲೋಡನದೀ
ಗತಿಯೊಳ್ ಬೆಳ್ಪುಂಡೆಯೋಲುಗಲ್ ತೆರೆಯುಲಿಯೊಳ್|
ಕ್ಷಿತಿಜದೆ ತಾಂ ಕಡಲಣುಗಂ
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
ಘೃತ = ನೀರು, ಕಡಲಣುಗ = ಚಂದ್ರ, ಕಡೆದ ಸಾಗರದ ನೀರಿನಿಂದ ಬಂದ ಚಂದ್ರನು ಬೆಣ್ಣೆಯಂತ ಬಿಳಿಯ ಉಂಡೆ

ಉಷಾರವರ ಪರಿಹಾರ-೨:
ಕೃತಕೃತ್ಯಮಾದ ಚೌರ್ಯದ
ಕತದಿಂ ಗಡಮಬ್ಬೆಗಂತು ಜಗಮಂ ತೋರ್ದಾ-|
ಸುತಗಂ ಕಟುವಾಯ್ ಲಾಲಾ-
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
*ಲಾಲಾಘೃತ=ಲಾಲಾರಸ (ಸಾಮಾನ್ಯವಾಗಿ ಮಕ್ಕಳ ಜೊಲ್ಲನ್ನು ’ತುಪ್ಪ’ ವೆನ್ನುವ ವಾಡಿಕೆ ಅಲ್ಲವೇ?) ಕದ್ದುಮೆದ್ದ ಕಳ್ಳ ಕೃಷ್ಣನ ಬಾಯಿ ಬೆಣ್ಣೆಯಾದ ಕಲ್ಪನೆ

ರವೀಂದ್ರಹೊಳ್ಳರ ಪರಿಹಾರ:
ಜಿತದಿಂದಶ್ವಿನಿಗಳ್ ಪ-
ನ್ನತಿಕೆಯಿನೂಡಿಸೆ, ತ್ರಿಶಂಕುದೇಹಂ ದಿವ್ಯಾ-|
ಮೃತಸಂಪೋಷಿತದೈವೀ-
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
(ನವನೀತಮಪ್ಪ = ನವನ್+ಈತಂ+ಅಪ್ಪ ಎಂದೂ ಪದಚ್ಛೇದ ಮಾಡಬಹುದು)

Jul 072020
 

ರವೀಂದ್ರಹೊಳ್ಳರ ಪದ್ಯ: ಘನದೇವಸ್ಥಾನಂಗಳ- ನನುವರ್ತಿಸಿ ದೈವಬಲದೊಳಾಗಮಿಸಿರಲಾಂ| ಮನೆದೇವರ ಸನ್ನಿಧಿಯೊಳ್ ಮನವಂಜುವುದಾತನೆನ್ನನರಿಯನೆ ದಿಟದಿಂ|| (ದೇವರು ಹತ್ತಿರವಾದಷ್ಟೂ, ಅವನನ್ನು ‘fool’ ಮಾಡುವುದು ಕಷ್ಟ)

Jul 062020
 

1) ಸುಧೀರ ಕೇಸರಿಯವರ ಪರಿಹಾರ: काम-ज्या-ज्यायसीं वेणी मल्याल्यालीभिरीप्सितां। युवा कर्षति जायाया निरर्थीकृतसायकाम्।| 2) ಶ್ರೀಮತಿ ಉಷಾರವರ ಪರಿಹಾರ: ಅಡವಿಯೊಳ್ ಪಕ್ಕಿ ಪರಿವಾರಕುಣಿಸಿರೆ ಫಲವ ಜಡೆಬಿಲ್ಲೆಯಂ ದಿಟದ ಪಕ್ಕಿಯೆನುತುಂ| ಒಡೆಯ ಬಳಿಸಾರಲದೊ ಜಡೆ ಸಿಲುಕೆ ಹೆದೆಗಾಗ- ಲೊಡನೆ ಹೌಹಾರ್ದುದೇಂ ಸೀತೆ ಕನಸೊಳ್?!

Jul 052020
 

ಕಾಂಚನಾರ ಪರಿಹಾರ: ಮರಗುವ ಕೆಲವಾತೊಳ್ ರಾಜಗೇಹಕ್ಕೆ ಕಾಡಿಂ, ಭರತನೆ ಕರೆದೊಯ್ಯಲ್! ರಾಮನೊಪ್ಪುತ್ತೆ ಪೋದಂ| ವರಪಿತನಜಪುತ್ರಂ ಸಾವನಪ್ಪಿರ್ಪುದಂ ತಾ ನರೆಚಣದೊಳೆ ಕಾಣಲ್ ಚಿತ್ತನೇತ್ರಂಗಳಿಂದಂ!| (ಶೋಕಭರಿತವಾದ ಭರತನ ಮಾತುಗಳೇ ರಾಮನನ್ನು ಅಯೋಧ್ಯೆಗೆ ಕರೆದೊಯ್ದಿತ್ತು.)

Jul 052020
 

ವೀಣಾ ಉದಯನರ ಪದ್ಯ ತಾರ! ತಾವರೆಯನೆಂದಾ ತಾಯ ಮಾತಿನಿಂ ಪೋರನೈತರೆ ಕೆರೆಯ ದಾರಿಯಲ್ಲಿ ನೀರೆ ಬರಲವಳ ವದನವ ಕಂಡು ಬೆಸಗೊಂಡ ನೀರನುಳಿದೂ ಕಮಲವರಳಲಹುದೇ?! ಇದು ಸಸಂದೇಹಾಲಂಕಾರದಿಂದ ಕಮಲದ ವರ್ಣನೆಯಾಯಿತೋ ಅಥವಾ ಕಮಲವದನೆಯ ವರ್ಣನೆಯಾಯ್ತೋ ಎಂಬ ಗೊಂದಲವಿದೆ. ರಾಮಚಂದ್ರರ ಪದ್ಯ ವಾರಿಯೊಳಗಾಡಿರ್ದ ನೀರೆಯಂ ಕಂಡಾಗ ಜಾರನೈದಂ ಛಲದೆ ಕಾಣದವೊಲೀಸಿ ನೀರಿನೊಳ್ ಪಿಡಿಯಲ್ ಸಪೂರ ನಡುವಂ ಮನದೆ ನೀರಜೆಯ ಸಾಂಗತ್ಯದೋಲ್ ಸಂದೆಗಂ [ಮೆಲ್ಲಗೆ ಈಸಿ ಹೋಗಿ ನೀರಿನಲ್ಲಿದ್ದ ನೀರೆಯ ತೆಳ್ಳನೆಯ ನಡುವನ್ನು ಹಿಡಿಯಲಾಗಿ ತಾನು ಕಮಲದ ಜೊತೆಗಿರುವ ಸಂದೇಹವಾಯ್ತು. (ನಡುವು […]

Jul 052020
 

ವೀಣಾ ಉದಯನರ ೧೧ ಪದ್ಯಗಳು वात्सल्यभावार्द्रपयोधरायाः आशीविषैः सिक्तपयोधरायाः। कंसानुजायाश्च कुपूतनायाः लक्ष्यं मुकुन्दं मनसा स्मरामि॥१॥ चोर! क्व यातोऽसि दधि प्रणाश्य?! वेत्रं गृहीत्वेत्थमनुद्रवन्त्याः। वृन्दावने वन्दितनन्दवध्वाः लक्ष्यं मुकुन्दं मनसा स्मरामि॥२॥ हा!त्रास्य तत्पिञ्छमियं हि तद्गौः हा! ध्वानमन्योऽप्यसुरो हतः स्यात्। अन्विष्यतामित्थमिदं(मं) सखानां लक्ष्यं मुकुन्दं मनसा स्मरामि॥३॥ व्याजेन केनापि गृहस्य कृत्याद् उत्थाय, पश्यामि कदा प्रिय! त्वाम्। इत्याकुलस्त्रीकुललोचनानां लक्ष्यं मुकुन्दं मनसा स्मरामि॥४॥ क्रूरेण […]

Jul 052020
 

ಸಂದೀಪರ ಪದ್ಯ: ಕುಟ್ಟಿದಳು ಹೊಟ್ಟೆಯನು ಸಿಟ್ಟಿನಲ್ಲಕಟಾ ಕಟ್ಟಿತದು ಖಳಕೂಟ ನರಕದಲಿ ನಗುತ| ಹೆಟ್ಟುವೊಲೆ ತಾಯ್ತನವ ಮತ್ಸರವ ಹಡೆಯೆ ಚಟ್ಟದೆಡೆ ಹೋಗಿತ್ತು ಭರತಕುಲದೊಡಲು||

Jul 042020
 

ಶಶಿಕಿರಣ್ ರವರ ಪದ್ಯ भूयान्नः समवर्तिवर्तनपरिज्ञानप्रतिष्ठापितं निर्णिक्तं नचिकेतसः, पितृवचःप्रामाण्यधिक्कारजम्। प्रह्लादस्य, निजाम्बिकागृहविशत्तातावरोधात्मकं दौर्लालित्यममोघमप्रतिभटं तद्भूयसे श्रेयसे।। (ಯಮನ ವರ್ತನೆಯ ಹಿಂದಿರುವ ತತ್ತ್ವವನ್ನು ತಿಳಿಯಬಯಸಿದ ನಚಿಕೇತನ, ತಂದೆಯ ಮಾತನ್ನೂ ಲೆಕ್ಕಿಸದ ಪ್ರಹ್ಲಾದನ, ಅಮ್ಮನ ಮನೆಯೊಳಗೆ ಹೋಗಲು ಬಯಸಿದ ತನ್ನ ತಂದೆಯನ್ನೇ ತಡೆದ ಗಣಪತಿಯ ಮೊಂಡುತನ ನಮಗೆ ಅಪಾರಶ್ರೇಯಸ್ಸನ್ನು ಕರುಣಿಸಲಿ.) ರವೀಂದ್ರಹೊಳ್ಳರ ಪದ್ಯ ಕಂದನ ಕೋಪದಿಂ ಬಡವಳಾಗಿರೆ ಲಕ್ಷ್ಮಿ, ಸರಸ್ವತಿ ಪ್ರತಿ- ಸ್ಪಂದಿಸಿ ಯುಕ್ತಿಗಾಣದಿರೆ ಪಾರ್ವತಿ ಯತ್ನಿಸಿ ಶಕ್ತಿಗುಂದಿರಲ್| ನಂದಿನಿ ಬಂದು ಪಾಲುಣಿಸಿ ಲಾಲಿಸಿ ನಿದ್ರಿಸೆ ತೋರಿದತ್ತು ಬಾ […]

Jul 042020
 

ರವೀಂದ್ರಹೊಳ್ಳರ ಪರಿಹಾರ: ಏಕೆಂದುಂ ಬರೆದವನುಂ ಸಾಕೆಂದುಂ ಕೇಳುತಿರ್ಪನರಿಯದ ಕವಿಗಳ್ ಲೋಕದ ಸಮ್ಮೇಳನದೊಳ್ ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ (ಬರೆದವನಿಗೆ ಬರೆದದ್ದೇಕೆಂದು ಗೊತ್ತಿಲ್ಲ, ಕೇಳುಗನಿಗೆ ಸಾಕೆಂದು ಹೇಳಲೂ ತಿಳಿಯದ ಸಾಹಿತ್ಯಸಮ್ಮೇಳನದ ಗತಿ) ಕಾಂಚನಾರ ಪರಿಹಾರ: ನಾ ಕಾಣುತಿರ್ಪೊಡಂ ಚಾ ಲಾಕಿ ಕ್ರೈಸ್ತಗುರುವರ್ಯನಾ ಕಪಟಕರಂ| ತಾಕಲ್, ನಡೆದಂ ಹೆಳವಂ! ಮೂಕಂ ಪಾಡಲ್ಕೆ! ಕಿವುಡನಾಲಿಸುತಿರ್ದಂ!| (ಮತಾಂತರದ ನಾಟಕ) ಉಷಾರವರ ಪರಿಹಾರ: ಲೋಕದೊಳತಿ ಸಾಮಾನ್ಯಂ ಮೂಕಾಭಿನಯಂ ಸಲಲ್ ಶ್ರವಣಸಾಧನದೊಳ್| ಏಕಾಂಗಿಯಿನೇಕಾಂಕದೆ ಮೂಕಂ ಪಾಡಲ್ಕೆ ಕಿವುಡನಾಲಿಸಿರ್ಪಂ!! ಇಅರ್ ಫೋನ್ ಧರಿಸಿದ ಏಕಾಂಗಿ (ಕಿವುಡ) – (ಇಅರ್ […]

Jul 042020
 

ಶಶಿಕಿರಣ್ ರವರ ಪದ್ಯ: क्रीडोद्भवेन रजसा तरुणस्य रुष्टः केदारकर्दमजुषा कृषकस्य दिग्धः। लोकत्रयप्रसृमरप्रभवस्य पुंस- स्त्रैविक्रमोऽस्तु जगतां प्रशमाय पादः।। ರಾಘವೇಂದ್ರ ಹೆಬ್ಬಳಲುರವರ ಪದ್ಯ जीवमलीमसमानसमन्दिर- खेलनतत्पर बाल हरे। तामसराजसपङ्किलपादं क्षालय मे नयनोष्णजलैः।। O Hari, O child who is engrossed in playing in the dirty mind-abodes of the jIvas, wash your feet dirtied by rajas & tamas with my hot tears. […]