ಸ್ನೇಹಿತರೆ,
ಇನ್ನೊಂದು ಸಮಸ್ಯೆ
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿಸುಲಭ
ಸ್ನೇಹಿತರೇ,
ಇನ್ನೊಂದು ಸಮಸ್ಯೆ…
“ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ”
ನಾಳೆ ಭಾನುವಾರವಿದೆ… ಎಲ್ಲರು ಪ್ರಯತ್ನಿಸಬೇಕಾಗಿ ವಿನಂತಿ ![]()
ನಾಳೆ ರಾತ್ರಿ ನನ್ನ ಪರಿಹಾರ post ಮಾಡುತ್ತೇನೆ
ಸಮಸ್ಯೆ, ಭಾಮಿನಿ ಕೊನೆ ಸಾಲು ![]()
ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ
ಗೆಳೆಯರೇ ಇನ್ನೊಂದು ಸಮಸ್ಯೆ
ಉತ್ತರನ ತಂಗಿ ಗಂಡನ ಪಿತನು ಯುಧ್ಧದಲಿ
ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ ||
ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು
ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ ||
ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ
ಮಾತೃವನು ತಲೆಯಮೇಲಿರಿಸಿದವನಾರು? || ೩ ||
ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು
ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||
ಆದಿಪ್ರಾಸವಿರದ ವಾರ್ಧಕ ಷಟ್ಪದಿ
ಕ್ಷಾಮವತಿಯದೊಡೇನ್? ರೋಗದಿಂ ಕೃಶನಾಗೆ
ಶಿಥಿಲಪ್ರಾಯವು ಬಡಿದು ಹತ್ತಾರು ಕಷ್ಟಗಳ -
ನಿಂದ ಬುಧ್ಧಿಯು ಸಮತೆ ಕಳೆಚಿರಲು ದೇಹದಿಂ ಪ್ರಾಣಜಾರುತಲಿರ್ದೊಡೇನ್?
ಮದಗಜಗಳಧಿಪನಲಿ ನೆತ್ತಿ ಸೀಳುತ ಕವಳ
ಸವೆಯ ಬಯಸುವವೊಂದೆ ಮನದಾಸೆ ಹೊಂದಿರ್ಪ
ಮಹನೀಯಮಾನಿಗಳ ಮೊದಲಿಗನು ಕೆಸರಿಯು ಜೀರ್ಣಿಪನೆ ಹುಲ್ಲ ತಿಂದು?
ಘಂಟೆಗಳ ಮುಳ್ಳೊಂದು ನಿಮಿಷಗಳಿಗೊಂದು, ನಾ
ಭಂಟ ಕ್ಷಣಕೆನೆವೊಂದು ದುಡಿಯೆ, ಅನ್ಯೋನ್ಯ
ನಂಟಿನರಿವಲಿ ಸಮಯಸೂಚಿತಾ ಸಾಗುವೆನೆ
ಜಂಟಿ ದಾಂಪತ್ಯವನುಸರಿಸು ಜಾಣ(ಣೆ) |೧|