ಗೆಳೆಯರೆ,
ಕನ್ನಡದ ಜೊತೆಜೊತೆಗೆ, ಸಂಸ್ಕೃತದ ಛಂದಸ್ಸನ್ನು ಜೊತೆಗೆ ಸಂಸ್ಕೃತವನ್ನೂ ಅರಗಿಸಿಕೊಳ್ಳುವ ಮನಸ್ಸು ನನ್ನದು. ಅದಕ್ಕಾಗಿ, ನನ್ನ ಮೊದಲ ಪ್ರಯತ್ನ. ವಿಜಯದಶಮಿಯ ದಿನವೇ ಆರಂಭಿಸಬೇಕೆಂಬ ತರಾತುರಿಯಿಂದ ಬರೆದಿದ್ದೇನೆ. ತಪ್ಪುಗಳನ್ನು ತಿಳಿಸಿ, ತಿದ್ದಿಕೊಳ್ಳುತ್ತೇನೆ.
ಸುಮುಹೂರ್ತೆ ದಶಮ್ಯಾಂ ಹಿ
ಪದ್ಯಂ ರಚಿತುಮುತ್ಸುಕ:
ಬೀಜಮಿದಂ ವಪಾಮ್ಯದ್ಯ,
ದೃಷ್ಟುಮಿಚ್ಚಾಮಿಕಾನನಂ
(ಶುಭ ದಶಮಿಯಂದು ಪದ್ಯರಚಿಸಲು ಉತ್ಸುಕನಾಗಿ, ಮೊದಲ ಬೀಜವನ್ನು ಬಿತ್ತಿದ್ದೇನೆ. (ಬೇಗ)ಕಾಡನ್ನು ನೋಡುವ ಆಸೆ)