Aug 162011
 

ಇದೊಂದು ಅವಧಾನಪ್ರಿಯರೆಲ್ಲರಿಗೆ ತಿಳಿದಿರಬಹುದಾದ ಸಮಸ್ಯೆ. ಪೂರಿಸಲು, ಎರಡು ಛಂದೋಪ್ರಕಾರಗಳಲ್ಲೂ ಪ್ರಯತ್ನಿಸಬಹುದು.

ಭಾಮಿನೀ ಷಟ್ಪದಿಯ ಕೊನೆಯಸಾಲಿನಲ್ಲಿ

ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ

ಇದೇಸಮಸ್ಯೆ ಚಂಪಕಮಾಲಾವೃತ್ತದ ಕೊನೆಯಸಾಲಿನಲ್ಲಿ

ಕಪಿಯ ವಿವಾಹಗೊಂಡಳುಮೆ ಸಾರ್ಥಕ ಪೂತ ತಪಃಪ್ರಭಾವದಿನ್

  11 Responses to “ಕಪಿಯ ವಿವಾಹಗೊಂಡಳುಮೆ– ಸಮಸ್ಯೆ”

  1. ಬಹಳ ಉತ್ತಮ ಸಮಸ್ಯೆಗೆ ಹೀಗೊಂದು ಸಾಧಾರಣ ಪರಿಹಾರ ::

    ವಿಪಿನದಲಿ ಮೆಚ್ಚಿದ್ದ ವರನವ
    ನಪರಿಮಿತ ಸುಂದರನು ಸರಳನು
    ಕಪಿಯ ಸಂಗಡವವನ ಗೆಳೆತನವೊಂದೆ ಬಾಧಕವು ||
    ಕುಪಿತಗೊಳಿಸದೆ ಜಾಣ್ಮೆಯಲ್ಲಿಯೆ
    ಕಪಿಲೆ ತೀರದ ವನಕೆ ಕಳುಹಿಸಿ
    ಕಪಿಯ, ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ ||

  2. ಮೇಲಿನ ಪರಿಹಾರದ ೪ನೇ ಸಾಲನ್ನು ಬದಲಿಸಿ, ಕೊನೆಯ ೩ ಸಾಲುಗಳನ್ನು ಹೀಗೆಯೂ ಮಾಡಬಹುದು ::

    ತಪದ ತಾಪದಲರಿತುಪಾಯದಿ
    ಕಪಿಲೆ ತೀರದ ವನಕೆ ಕಳುಹಿಸಿ
    ಕಪಿಯ, ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ ||

  3. Hint from the dictionary :
    vRuShAkapi – is an epithet of Vishnu, Shiva, Indra, Agni

  4. ಪ್ರಯತ್ನ ಶ್ಲಾಘನೀಯ. ನೀವುನೀಡಿರುವ ಸೂಚನೆ ಸರಿಯಾದದ್ದು.ಧನ್ಯವಾದಗಳು

  5. ರಾಮಚಂದ್ರ ಮತ್ತು ಮೌಳಿಯವರು ಕೊಟ್ಟ ಸೂಚನೆ ಮೇರೆಗೆ ಒಂದು ಪರಿಹಾರ:

    ಅಪರಜನ್ಮದಿ ಸತಿಯು ನಾನೇನೆ
    ತಪವ ಕಾಠಣ್ಯದಲಿ ನಡೆಸಲ-
    ನುಪಮಳನು ವಿಧವಿಧದಿ ಪರಕಿಸಿ ದೇವ ಮೆಚ್ಚಿದನು
    ಕೃಪೆಯ ತೋರುತ ಕನ್ಯೆ ಗಿರಿಜೆಯ-
    ನುಪರಿಣಯಗೈವೆಯೆನಲು, ವೃಷಾ-
    ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ

  6. ಇನ್ನೊಂದು ಪರಿಹಾರ, ಕೆಲವರು ಹನುಮ ಶಿವನ ಅವತಾರ ಎಂದು ಒಪ್ಪುತ್ತಾರೆ ಆ ಹಿನ್ನಲೆಯಲ್ಲಿ:

    ಉಪರಿಯಾಸನವೊರಗಿ ತಾತನು
    ಕುಪಿತ ಮಕ್ಕಳ ಶಾಂತಗೊಳಿಸುವ
    ನೆಪದಿ ಪೇಳ್ದನು ಪಾರ್ವತೀ ಪರಿಣಯದ ವಿವರವನು
    ಜಪಿಸಲಜ್ಜಿಯು "ಶಿವನೆ-ಹನುಮನು"
    ಚಪಲ ಬುಧ್ಧಿಯ ಮಗನು ಪೇಳ್ದನು
    "ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ"

  7. ಸಮರ್ಥವಾಗಿ ಸಮಸ್ಯಾಪೂರ್‍ಣ ಮಾಡಿದ ರಾಮಸೋಮರಿಗೆ ಅಭಿನಂದನೆ.

  8. pooraNas are really good…vRShaakapi is the only dignified way of solving this problem…But in the structure of parihaaras i see a bit of looseness..pl make the versification more tight and for this a bit of grammar is needed…let us meet once and have some discussions on grammar..
    chandaH prakaara is the right usage…chandOprakaara means chandaH aprakaara!!

  9. ಸಮಸ್ಯಯ ಪರಿಹಾರ: ಛಂದಃಪ್ರಕಾರ : ಚಂಪಕಮಾಲೆ
    (ಛಂದೋಪ್ರಕಾರದ ಅಪ್ರಕಾರ ತೋರಿಸಿದ ಗಣೇಶರಿಗೆ Thanks)

    ತಪಿಸೆಪಿನಾಕಿಯಂ ಕುರಿತು ಪ್ರೇರಿತ ಮನ್ಮಥ ನಡ್ಡಬಂದು ಭ
    ಸ್ಮಪಟಲನಾಗನಂಗತೆಯ ಹೊಂದಲು,ಹೆಚ್ಚಿದ ಧ್ಯಾನ ತತ್ಪರಳ್
    ಸುಪರಿಚಿತಾವಲೋಕನದೆ ಸುಸ್ಥಿತಿ ಹೊಂದಿದ ದೇವನಂ ವೃಷಾ
    ಕಪಿಯ ವಿವಾಹಗೊಂಡಳುಮೆ ಸಾರ್ಥಕ ಪೂತ ತಪಃಪ್ರಭಾವದಿನ್

  10. >But in the structure of parihaaras i see a bit of looseness..pl make the versification more tight and for this a bit of grammar is needed…let us meet once and have some discussions on grammar..

    Yes Sir,
    One class of corrections will help us to understand common grammar mistakes and also to effectively handle the difficulties we stumble upon.

  11. ಕಳ್ಳರ ಅಧಿದೇವ ಸುಬ್ರಹ್ಮಣ್ಯ. ಅವನ ಜನನಕ್ಕಾಗಿ ದೇವತೆಗಳು ಏನೇನೋ ಪಾಡು ಪಡುತ್ತಾರೆ – ಶಿವನನ್ನು ವಿನಂತಿಸಿಕೊಳ್ಳುವುದು ಇತ್ಯಾದಿ. ನಾನು ಹೇಳಿರುವುದು ಇಷ್ಟೇ – ಕಳ್ಳನನ್ನು ಹುಟ್ಟಿಸಲು ಕಪಿಯನ್ನು ಬಲಿ ಕೊಡಲಾಯಿತು. ಶಿವ ತನಗೆ ಮೀಸಲು ಎಂದು ಗೊತ್ತಿದ್ದರೂ ಒಂಟಿಕಾಲ ಮೇಲೆ ನಿಂತು ತಪಸ್ಸು ಮಾಡುವ ಹಾಗೂ ಬರಿಯ ಎಲೆಯ ವಸ್ತ್ರತೊಡುವ ನಾಟಕಗಳನಾಡಿದಳು. ಅನಂಗನೆಂಬ ಕಪಿಯ ಹನನಕ್ಕೆ ನಾಂದಿಯಾಯಿತು ಎಂದು.

    * ಏನೇನೋ ನಾಟಕಗಳನಾಡಿ ಅವನಿಂ ಕೊಲಿಸುತಲನಂಗಕಪಿಯ
    * ಮೀಸಲರಸನನು ವರಿಸಿದಳು

    ತಸ್ಕರಾಧಿಪತಿಯವತಾರಾ
    ತುರ ಸುರರ ಸಂಕಲ್ಪವರಿತು ತೆ
    ರಿಸುವೆ ತತ್ಸಮ ಬೆಲೆಯೆನುತೆ ಮೀಸಲರಸನನವನಿಂ|
    ಪದೈಕಪರ್ಣೈಕಮೆಂಬ ನಾಟ
    ಕಗಳನಾಡಿ ಕೊಲಿಸುತಲನಂಗ
    ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ||

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)