Apr 292012
 

ಅಂಶ ಛಂದಸ್ಸಿನಲ್ಲಿ (ಸಾಂಗತ್ಯ, ತ್ರಿಪದಿ ಅಥವಾ ಸೀಸ) ಯಾವುದಾದರು ವಿಷಯದ ಮೇಲೆ ಕರುಣ ರಸಮಯವಾದ ಪದ್ಯಗಳನ್ನು ರಚಿಸಿರಿ.

ಅಂಶ ಛಂದಸ್ಸಿನ ವಿವರಗಳು ಇಲ್ಲಿವೆ

  24 Responses to “ಪದ್ಯಸಪ್ತಾಹ – ೧೮ – ಲಹರಿ”

  1. ಹೋರಿಗರುವನ್ನು ಹುಟ್ಟಿದ ಕೆಲವೇ ದಿನಗಳಲ್ಲಿ ಅಮ್ಮನ ಹಾಲನ್ನು ತಪ್ಪಿಸಿದ ಮಾಲೀಕ ಕಟುಕರಿಗೆ ಮಾರುತ್ತಾನೆ, ಏನೂ ಅರಿಯದ ಆ ಮುಗ್ಧ ಕರುವಿನ ಬಾಯನ್ನೇ ಹೊಲಿದು [ಸಾಗಾಣಿಕೆಮಾಡುವಾಗ ಕೂಗಿಕೊಳ್ಳದಂತೇ] ಸಾಗಿಸುವಾಗಿನ ದೃಶ್ಯ ಹೃದಯವಿದ್ರಾವಕ, ಕಲ್ಪಿಸಿಕೊಳ್ಳಲೂ ಕಣ್ಣೀರು ಒಸರುವ ಇಂತಹ ಕೃತ್ಯಗಳು ಈಗ ನಡೆಯುತ್ತಿವೆ:

    ತಾಯಹಾಲನು ಬಿಡಿಸಿ ಬಾಯನ್ನೇ ಕಟ್ಟುತ್ತಾ
    ಮಾಯದೆಳೆತಂದರು ಹರನೇ
    ಸಾಯಿಸಿ ತಿಂಬರು ಆರೂ ಕೇಳುವರಿಲ್ಲ
    ರಾಯ ಮಾರಿದನೆನ್ನ ಬಿರನೇ

    • ಚಿಕ್ಕ ವಿನಂತಿ: ಕೇವಲ ಪದ್ಯರಚನೆಗೆಂತಲೇ ಅಲ್ಲದೇ, [ಛಂದದಲ್ಲಿ ವ್ಯತ್ಯಾಸಗಳಿರಬಹುದು] ಕಾರಣಾಧಾರಿತವಾಗಿ ಬರೆದ ಈ ಪದ್ಯದ ಪೂರ್ಣಪಾಠ ಇಲ್ಲಿದೆ: http://nimmodanevrbhat.blogspot.in/2012/04/blog-post_29.html

    • ಪದ್ಯ ಚೆನ್ನಾಗಿದೆ. ಆದರೆ ಇದು ಯಾವುದೇ ಅಂಶ(ತ್ರಿಮೂರ್ತಿ)ಗಣದ ಛಂದಸ್ಸಲ್ಲ. ಮಾತ್ರಾಚೌಪದಿಯೇ ಆಗಿದೆ.

      • ಕ್ಷಮಿಸಿರಿ. ಇದು ಶ್ರೀಲಲಿತಾ ಅವರ ಪದ್ಯಕ್ಕೆ ಪ್ರತಿಕ್ರಿಯೆಯಾಗಬೇಕಿತ್ತು:-) ಇಲ್ಲಿ ಕಣ್ತಪ್ಪಿನಿಂದ ನುಸುಳಿದೆ. ಆದ್ರೆ ಭಟ್ಟರ ಸಾಂಗತ್ಯದಲ್ಲಿ ಒಂದೆಡೆ ಮಾತ್ರ (ಮೊದಲನೆಯ ಸಾಲಿನ ಎರಡನೆಯ ಗಣದಲ್ಲಿ) ವಿಷ್ಣುಗಣಕ್ಕೆ ಬದಲಾಗಿ ರುದ್ರವು ಬಂದಿದೆ(ಲನುಬಿಡಿಸಿ).

  2. ಸಾಂಗತ್ಯ, ತ್ರಿಪದಿ ಅಥವಾ ಸೀಸ – ಈ ಮೂರೇ ಆಗಬೇಕೆ? ಯಾವುದಾದರೂ ಅಂಶ ಛಂದಸ್ಸಾದರಾದೀತೆ?

    • ಜೀವೆಂ – ಯಾವುದಾದರು ಸರಿಯೆ. ಪದ್ಯಪಾನದಲ್ಲಿ ವಿವರಣೆಗಳಿರುವುದು ಸಾಂಗತ್ಯ, ತ್ರಿಪದಿ, ಸೀಸ – ಇಷ್ಟರದ್ದೇ.
      ಅಂಶ ಎನ್ನುವುದೂ ಅಭ್ಯಾಸಿಗರಿಗೆ ಅಭ್ಯಾಸವಾಗಲಿಯೆಂದು. ಬೇರೆ ಛಂದಸ್ಸುಗಳಲ್ಲಿ ರಚಿಸಿದರೂ ಆದೀತು. 🙂

  3. ಪದ್ಯಪಾನಕ್ಕಾಗಿ ಪ್ರಥಮಪ್ರಯತ್ನ.

    ಮರಿಹುಲಿಯು ಬೇಟೆಯಾಡಿದ ರಾತ್ರಿ ತಾಯಿಯಾ-
    ದರಿಸುವುದದನು ಮೈಯ ನೆಕ್ಕಿ |
    ಮರಿಜಿಂಕೆಯನು ನೆನೆದು ಗೋಳಾಡುವುದದರಬ್ಬೆ
    ಅರಿತೇವು ಹೇಗಿದರ ಮರ್ಮ ಹೇಳೇ !

    • ಲಲಿತ,

      ಸ್ವಾಗತ!, ಬಹಳ ದಿನಗಳಿ೦ದ ನಿಮ್ಮಿ೦ದ ಪದ್ಯಗಳನ್ನು ಎದಿರಿನೋಡುತ್ತಿದ್ದೆವು 🙂
      ನಿಮ್ಮ ಪ೦ಚಮಾತ್ರಾ ಚೌಪದಿಯ ಪದ್ಯ ಬಹಳ ಚೆನ್ನಾಗಿದೆ. ಉತ್ತಮ ಪದ್ಯದಿ೦ದ ಆರ೦ಭಿಸುತ್ತಿರುವಿರಿ,
      ಹೀಗೆ ಬರೆಯುತ್ತೀರೆ೦ದು ಆಶಿಸುತ್ತೇನೆ

      ಒ೦ದು ಅ೦ಶ ಗಮನಿಸಬಹುದು, ಎರಡನೇಯ ಸಾಲಿನಲ್ಲಿ ೩ ಮಾತ್ರೆಗಳು ಕಡಿಮೆಯಾಗಿವೆ, ಹೀಗೆಸವರಿಸಬಹುದು:
      ಉದಾ: ದರಿಸುವುದದನು ಮೈಯ ಮುದದಿ ನೆಕ್ಕಿ

      • ಲಲಿತ,

        ಕ್ಷಮಿಸಿ, ನೀವು ಬರೆದಿರುವುದು ಸಾ೦ಗತ್ಯವಲ್ಲವೇ ನಾನು ಅದನ್ನು ಪ೦ಚಮಾತ್ರಾಚೌಪದಿಯೆ೦ದು ತಪ್ಪಾಗಿ ಓದಿಕೊ೦ಡೆ. ಈಗ ಮತ್ತೊಮ್ಮೆ ನೋಡಿದಾಗ ತಿಳಿಯಿತು.

    • ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯದ ಕಲ್ಪನೆ ಬಹಳ ಹಿಡಿಸಿತು. ಎರಡು ವಿಭಿನ್ನ ದೃಷ್ಟಿಕೋನಗಳನ್ನು ಚೆನ್ನಾಗಿ ತೋರಿದೆ.
      ಮೂರನೇ ಸಾಲಿನ ಕೊನೆಯ ಗಣದಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ ::
      ಮರಿಜಿಂಕೆ + ಯನು ನೆನೆದು + ಗೋಳಾಡು + ವುದದರಬ್ಬೆ

      “ಗೋಳಾಡಲದರಬ್ಬೆ” ಎಂದರೆ ಸರಿಹೋಗಬಹುದು.

    • ಪದ್ಯಪಾನಕ್ಕೆ ತಡವಾಗಿ ಬಂದ ನಿಮಗೆ ತಡವಾಗಿಯೇ ನಲ್ಬರವನ್ನು ಕೋರುತ್ತಿದ್ದೇನೆ:-)
      ನಿಮ್ಮ ಪದ್ಯದ ಬಗೆಗೆ ನನ್ನ ಅಭಿಪ್ರಾಯವನ್ನು ಭಟ್ಟರ ಪದ್ಯಕ್ಕೆ ಹಾಕುವಲ್ಲಿ ಲಗತ್ತಿಸಿಬಿಟ್ಟೆ:-) ದಯಮಾಡಿ ಅಲ್ಲಿ ನೋಡಿರಿ.

  4. ನನ್ನ ಹೈಸ್ಕೂಲ್ ಸಹಪಾಠಿಯೊಬ್ಬನ ಬಗ್ಗೆ

    ಹುಡುಗ ಬಸ್ಸಿಗೆ ಸಿಕ್ಕಿ ಮಡಿದಾಗ ಮಹಜರಿಗೆ
    ನಡೆತಂದ ಪೋಲೀಸಧಿಕಾರಿ ಬೇರಲ್ಲ
    ಹುಡುಗನ ಅಪ್ಪ ಬೇರಲ್ಲ

    • ತುಂಬ ಒಳ್ಳೆಯ ಹೃದಯಸ್ಪರ್ಶಿಪದ್ಯ. ಲಕ್ಷಣಶುದ್ಧವಾದ ಚಿಕ್ಕ ತ್ರಿಪದಿಯಲ್ಲಿ ಭಾವವು ಸಾಂದ್ರವಾಗಿ ಹೊಮ್ಮಿದೆ.

  5. ಮಗನನ್ನು ಕಳೆದುಕೊಂಡ ತಾಯಿಯೊಬ್ಬಳು ಹೇಳಿದ್ದು:

    ಒಡಲೋಳುs ಬೆಂಕಿsಯುs ಕಡಲಾಗೇ ಕಣ್ಣೀರುs
    ಹುಡುಗಾನೀ ಮರೆಯಾದೆs ಯಾಕೇ
    ಮಡಿಲsದುs ಬರಿದಾಯ್ತುs ನುಡಿಯೆಲ್ಲಾ ನಿಂತ್ ಹೋಯ್ತುs
    ಸುಡುಗಾಡೇ ಗತಿಯಾಯ್ತೇ ನಿನಗೇ

    ಕಂದಮ್ಮs ಮೊಗತೋರೋ ನಿಂದುsನೀ ಕುಣಿದಾಡೋ
    ಬಂದೆಮ್ಮs ನೋವಾನೀ ತೊಳೆಯೋ
    ಚಂದಿರsನs ಸಹವಾಸಾ ಈಗಾಲೇ ನಿನಗೇಕೋ
    ಚಂದಾದಾ ಮೊಸರನ್ನs ನಿನಗೋ

    ಇಲ್ಲಿದೆsಯೋ ಹಾಲ್ತುಪ್ಪs ಕೋಡ್ಬsಳೇ ಕಜ್ಜಾಯs
    ಮೆಲ್ಲsಲುs ಬೇಗ್ಬಾರೋ ನೀನೂ
    ನಿಲ್ಲೋನೀ ನಾಬಂದೇ ನೀನಿಲ್ದೇ ನಾನೇನೋ
    ಕಲ್ಲೆsದೆs ಮಾಡ್ಬೇಡ್ವೋ ಮಗುವೇ

    • ಪದ್ಯಗಳ ಭಾವತೀವ್ರತೆ ಮತ್ತು ಸ್ವಭಾವೋಕ್ತಿಶಕ್ತಿಯು ಪ್ರಶಂಸನೀಯವಾಗಿದೆ. ಆದರೆ ಕಡೆಯ ಪದ್ಯದಲ್ಲಿ ಸ್ವಲ್ಪ ಭಾಷಾಶೈಥಿಲ್ಯ ಮೂಡಿದೆ. ದಯಮಾದಿ ಆದ್ಯಂತದ ಹದವನ್ನು ಗಮನಿಸಿರಿ.

  6. ತಾಯs ಮರಣದ ವಾರ್ತೆ ತಲುಪೆs ವಿsದೂಶಕಗೆ
    ಕಾಯಕsರ೦ಗದೊsಳಿರಲು
    ಬಾಯೆsಬಿರಿಯುವ ಹಾಗೆ ನಗುವsನು ಹ೦ಚಿsದ
    ಗಾಯವsಮನದೊsಳೆs ತಡೆದು

    ‘ಮೇರಾ ನಾಮ್ ಜೋಕರ್’ ನಲ್ಲಿ ಬರುವ ಸ೦ಧರ್ಭ.
    ಆದರೆ ರಾಜ್ ಕಪೂರ್ ಉತ್ತಮವಾಗಿ ಆ ಪಾತ್ರವನ್ನು ನಿಭಾಯಿಸಿಲ್ಲವೆ೦ದೇ ನನಗನಿಸುತ್ತದೆ.

    • ಸೋಮ, ಕೆಲವೊಂದೆಡೆ ಗಣಭಂಗವಾಗಿದೆ. ಸವರಿಸಬೇಕು.

  7. Ganesh Sir,

    ಇನ್ನೊಮ್ಮೆ ನಿಯಮ ನೋಡಿ ಪ್ರಯತ್ನಿಸುತ್ತಿದ್ದೇನೆ, ನನಗೆ ಅ೦ಶ ಛ೦ದಸ್ಸು ಇನ್ನು ಸರಿಯಾಗಿ ಅರ್ಥವಾಗಿಲ್ಲ, ಹಾಗಾಗಿ ಪದ್ಯವನ್ನು ಸಾ೦ಗತ್ಯದಲ್ಲಿ ಪ್ರಯತ್ನಿಸಿ ಅದರ ಗಣವಿಭಾಗವನ್ನು ಕೆಳಗೆ ಕೊಟ್ಟಿದ್ದೇನೆ.
    ನಾನನನs -> ದೂಶಕಗೆs ನಿಯಮದ ಬ೦ಧ/ವಿನ್ಯಾಸದಲ್ಲಿ ವಿಷ್ಣು ಗಣಕ್ಕೆ ಕೊಟ್ಟಿಲ್ಲ ಈ ಪ್ರಯೋಗ ಸಾಧುವೇ?

    ತಾಯs ಮsರಣವಾರ್ತೆs ತಲುಪೆs ವಿsದೂಶಕಗೆs
    ಕಾಯsಕs ರ೦ಗsದೊsಳಿರಲು
    ಬಾಯೆs ಬಿsರಿವ ಹಾಗೆs ನಗುವsನು ಹ೦ಚಿsದs
    ಗಾಯsವsಮನದೊsಳೆs ತಡೆದು

    ತಾಯsಮs ರಣವಾರ್ತೆs ತಲುಪೆsವಿs ದೂಶಕಗೆs
    ಕಾಯsಕs ರ೦ಗsದೊs ಳಿರಲು
    ಬಾಯೆsಬಿs ರಿವಹಾಗೆs ನಗುವsನು ಹ೦ಚಿsದs
    ಗಾಯsವs ಮನದೊsಳೆs ತಡೆದು

    • ವಿ|ದೂಷಕಗೆ… ಎಂಬಲ್ಲಿ ಗಣಸ್ವರೂಪವು ವಿಷ್ಣುವಾಗದು; ಅದು ರುದ್ರವಾಗುವುದು.:-)

      |ತಾಯ ಮ|ರಣವಾರ್ತೆ|ಕೇಳ್ದ ವಿ|ದೂಷಕ|
      ಎಂದು ಸವರಿಸಬಹುದು.

  8. ನಾನೊಮ್ಮೆ ಕಂಡೆನು ಕೂಡುರಸ್ತೆಯ ಬಳಿ
    ವೈನಾದ ಕೂಸಿನ ಶವವ
    ತಾನಿತ್ತೊ ಕರುಣಾರಾಹಿತ್ಯಳ ಕೂಸದು
    ಘನ ಮೂರ್ತಾಸದರಾಯುಸ್ಸಿತ್ತೊ

    ಕೊನೆಯ ಪಾದಾದಿ ಮಾತ್ರ ಸಿಂಹಪ್ರಾಸವಾಗಿದೆ. ಅಂಶಛಂದಸ್ಸಿನಲ್ಲಿ ಇದು ಸಾಧುವೆ?

    • ಇಂಥ ಪ್ರಾಸಪರಿವರ್ತನೆ ಎಲ್ಲಿಯೂ ಸಾಧುವಲ್ಲ:-)

  9. ನಾನೊಮ್ಮೆ ಕಂಡೆನು ಕೂಡುರಸ್ತೆಯ ಬಳಿ
    ವೈನಾದ ಕೂಸಿನ ಶವವ
    ತಾನಿತ್ತೊ ಕರುಣಾರಾಹಿತ್ಯನ(ಳ) ಕೂಸದು
    ಘನ ಮೂರ್ತಾಸದರಾಯುಸ್ಸಿತ್ತೊ

    • ನಾನೊಮ್ಮೆ ಕಂಡೆನು ಕೂಡುರಸ್ತೆಯ ಬಳಿ
      ವೈನಾದ ಕೂಸಿನ ಶವವ
      ತಾನಿತ್ತೊ ಕರುಣಾರಾಹಿತ್ಯನ(ಳ) ಕೂಸದು
      ಐನಾಕ್ಷನಿತ್ತಾಯುವನಿತೋ

  10. [ಮನೆಯಲ್ಲಿ ಹುಟ್ಟಿ ಬೆಳೆದ ದನವನ್ನು ಮಾರಾಟ ಮಾಡುವಾಗ, ಮನೆಯಾಕೆಯ ಮೊಗ ಸಣ್ಣಗಾಗುವ ಸಂದರ್ಭ]

    ಗೌರವ್ವಾ ನನ್ನವ್ವಾ ಮುನಿಸೇನ ಬೇಡವ್ವಾ
    ಸೇರುವ ಮನೆಬಲು ಚಂದ
    ತೌರಿನ ಗಾರಿದ ನೆಲವಲ್ಲ ಕಾಣವ್ವ
    ತೀರದು ಹಸುರಿನ ಮೇವ|

    ತಣ್ಣೀರನಿತ್ತರೂ ಹಾಲನ್ನೆ ಕೊಟ್ಯವ್ವ
    ಬಣ್ಣೀಸಲೇನ್ನಾನು ಕವಿಯೇ
    ಕಣ್ಣೀರ ಹನಿನಾಕು ಸುರಿಸುವೇ ಪುಟ್ಟವ್ವಾ
    ಹುಣ್ಣೀಮೆ ತಾರವ್ವ ಮನಿಗೇ [ಸೇರುವ ಮನೆಗೆ]

    ಅರಿಸಿನ ಕುಂಕುಮ ಹಚ್ಚುತ್ತಾ ತಲೆನೀವಿ
    ಕೊರಳೀನಾ ಸರವನ್ನ ಬಿಡಿಸೀ
    ನೆರೆಯಾಗಿ ಹೊಸಹಗ್ಗ ಕುತ್ತಿಗೇ ಸೇರಲು
    ಸರಿದಾಳ ತಲೆಯನ್ನ ಇಳಿಸೀ
    [ನೆರೆ = ಆಧಾರ, ಸಹಾಯ]

Leave a Reply to Soma Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)