Dec 282013
 

ame_haddu

  98 Responses to “ಪದ್ಯಸಪ್ತಾಹ ೯೨: ಚಿತ್ರಕ್ಕೆ ಪದ್ಯ”

  1. प्रयत्नद्वयम् —

    वेगेन डयमानस्त्वम् अवतीर्णॊऽसि किं खग ? ।
    मन्दगं वाहनीकृत्य श्रान्तः कूर्मेऽवतिष्ठसि ? ॥

    जटायुपूर्वजः कश्चित् वन्दते कूर्ममत्र हि ।
    आगामिनोऽवतारस्य घटनां सूचयन्निव ॥

    • ರಾಮಪ್ರಿಯರೆ ಬಹಳ ಚೆನ್ನಾಗಿದೆ

      • ಸೋಮ-ಅವರೇ, ಧನ್ಯವಾದಗಳು. ಈ ಪದ್ಯಗಳನ್ನು ಕನ್ನಡದಲ್ಲಿ ಹೀಗೆ ಬರೆಯಬಹುದು —
        ಗಗನದಿ ಬೇಗನೆ ಹಾರುವ ಹದ್ದೇ !
        ಇಳಿದಿಲ್ಲೇತಕೆ ಬಂದಿರುವೆ ?
        ಭುವಿಯೊಳು ಮೆಲ್ಲಗೆ ನಡೆಯುವ ಮುದ್ದೆ
        ದಣಿದಿಹ ನಿನಗೀಗಾಶ್ರಯವೇ ?

        ಜಟಾಯುಗೃಧ್ರನ ಪಿಂತಣನೊಬ್ಬನು
        ಕೂರ್ಮಗೆ ನಮಿಸಲು ಬಂದಿಹನು;
        ಬರುವವತಾರದಿ ನಡೆಯುವ ಘಟನೆಯ-
        ನೀಗಲೆ ನಮಗವ ತಂದಿಹನು.

    • ಪೂರ್ವಂ ಹರೇರ್ಮಹಾಪಕ್ಷೀ ಭಕ್ತ್ಯಾ ಭಭೂವ ವಾಹನಮ್ |
      ಖಗೋ ರೂಢೋ ಹರಿಂ ಸದ್ಯಃ ಕಿಂ ಕಿಂ ನ ಸ್ಯಾತ್ ಕಲೌ ಯುಗೇ ||

      ಹಿಂದೆ ಮಹಾಪಕ್ಷಿಯು (ಜಟಾಯು) ಹರಿಯ ವಾಹನವಾಗಿತ್ತು. ಈಗ ಪಕ್ಷಿಯೇ (ಕೂರ್ಮಾವತಾರದ) ಹರಿಯನ್ನು ಹತ್ತಿದೆ. ಕಲಿ ಯುಗದಲ್ಲಿ ಏನೆಲ್ಲಾ ಆಗದಿರದೊ?

      • Fine perception of swap in roles. Thanks for a fine verse.

      • “ಭಕ್ತ್ಯಾ ಭಭೂವ ವಾಹನಮ್” ಎಂಬುದನ್ನು “ಭಕ್ತ್ಯಾಸೀತ್ ಕಿಲ ವಾಹನಮ್” ಎಂದು ಮಾರ್ಪಡಿಸಿದರೆ ಓದಲು ಚೆನ್ನಾಗಿರುತ್ತದೆಂದು ನನಗೆ ತೋರುತ್ತದೆ.

  2. ಕಾಲ ಮುದುಡುತಲವಿತು ತಾನೆ ತೆವಳುದು ಕಲೆತು
    ತೇಲಿ ಮೆರೆಯಲುವಿನಿತು ಮರಳಿ ಹೊರಳಿ |
    ವಾಲಿ ತೇಲಿದುದಾವೆ ಕಾಣ ಹಾರಿದು ಸೋವೆ
    ಮೂಲ ಮೂಡಿದುದರಿಯದವಳಿಜವಳಿ ||
    (ಆವೆ = ಆಮೆ , ಸೋವೆ = ಗುರುತು)

    (ತೆವಳಿ ಮುದುಡಲಿರುವ 2013 (ಆಮೆಯಾಗಿ) – ಅರಳಿ ಏರುತ್ತಿರುವ 2014 (ಹಕ್ಕಿಯಾಗಿ) : ನಡುವೆ ಕಂಡ “ಕಾಲ”ದ ಈ “ಅವಳಿಜವಳಿ” ಅವಸ್ಥೆಯ ಕಲ್ಪನೆಯಲ್ಲಿ)
    ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

  3. ಪ್ರತಿಲೋಮಿಕದುರವಸ್ಥೆಯ-
    ನತಿಶ್ರಮದೆ ಕಳುಪಿ ಗೆಲ್ದಬಗೆಗಂ ಕಮಠಂ
    ಸ್ತುತಿಗರ್ಹಮೆನುತೆ ಖೇಚರ-
    ಪತಂಗನಿಳಿಯುತೆ ವಿಮರ್ದನಂ ಗೆಯ್ದಂ ದಲ್
    having seen the effort of tortoise to win the race from extreme disadvantageous position a bird came down to greet him and pat him on the back

  4. ತಮದಿಂ ರಜಕೆ ಸರಿವುದು-
    -ತ್ತಮವೋ,ರಜದಿಂ ತಮಸ್ಸಿಗೆ ನಡೆಯು ಸರಿಯೋ?
    ಗಮನವನಾಲೋಕಿಸಿತೇ
    ಸಮತಾ ಭಾವದೆ ಸುಪರ್ಣವಾ ಕಚ್ಛಪವಮ್?

    ಈ ಕಂದಕ್ಕೆ ಮುಂಡಕೋಪನಿಷದ್ ನಲ್ಲಿರುವ ’ದ್ವಾ ಸುಪರ್ಣಾ…’ ಶ್ಲೋಕವೇ ಸ್ಫೂರ್ತಿ. ಆಮೆಯು ತನ್ನ ತಲೆಕಾಲುಗಳನ್ನು ಒಳಗೆಳೆದುಕೊಂಡು ತಮಸ್ಸಿನಲ್ಲಿರುವುದೋ, ಅಥವಾ ಅವನ್ನು ಪೂರ್ತಿಯಾಗಿ ಹೊರಚಾಚಿ ಚಲನಶೀಲವಾಗುವುದೋ ಎನ್ನುವುದನ್ನು ಸುಪರ್ಣವು ಕುತೂಹಲದಿಂದ ನೋಡುತ್ತಿದೆಯೇನೋ ಎಂಬ ಭಾವದಿಂದ ರಚಿಸಿದ ಪದ್ಯ.

    • ಗಾಯತ್ರಿಯವರೇ, ನಿಮ್ಮ ಪದ್ಯಕ್ಕೆ ಮತ್ತು ದ್ವಾಸುಪರ್ಣಾ ಶ್ಲೋಕವನ್ನು ಉಲ್ಲೇಖಿಸಿದ್ದಕ್ಕೆ ಧನ್ಯವಾದಗಳು. ಬ್ರಹ್ಮ, ರಜಸ್ಸು, ತಮಸ್ಸನ್ನು ಆಧರಿಸಿ ಇದೇ ಚಿತ್ರಕ್ಕೆ ನನ್ನದೂ ಒಂದು ಯತ್ನ

      ತಾಮಸರಾಜಸಗುಣದಾ
      ಭೂಮಿಕೆ ಮರ್ತ್ಯರ್ಗೆ ಕಮಠಗೃಧ್ರಾದಿಗಳಾ
      ನೇಮದೊಳಿರ್ಪರ್ ನೋಳ್ಪಂ
      ಸೀಮೆಯ ಮೀರ್ದಪ ವಿಶುದ್ಧಸತ್ವದ ಬೊಮ್ಮಂ

      • ಗಣೇಶ್ ಮತ್ತು ಸೋಮರಿಗೆ ಧನ್ಯವಾದಗಳು.

  5. ವಯೋವರ್ಧನಪಾಶಾಂ ಧಿಕ್
    ಯಯಾ ಕೂರ್ಮಃ ಶಿಲಾಯತೇ |
    ಶೀಘ್ರಂ ರಜ್ಜುಮಹಿಂ ಮತ್ವಾ
    ಶ್ಯೇನಃ ಶೂನ್ಯಂ ಭಜೇತ್ ಪದಮ್ ||

    ವಯೋವರ್ಧನವೆಂಬ ಪಾಶೆಗೆ ಧಿಕ್ಕಾರವಿರಲಿ. ಆ ಕಾರಣದಿಂದಲೇ ಕೂರ್ಮವು ಶಿಲದಂತೆ ತೋರುವುದು. ಹೀಗಿರಲು, ಗರುಡನು ಬೇಗಲೇ ಹಗ್ಗವನ್ನು ಹಾವೆಂದು ತಿಳಿದು ಅಳಿಯುವುದೇನೋ.

  6. ಅಥವಾ ವರವೀರಾಣಾ-
    ಮಾದಾಯಾಪ್ರತಿಮಂ ಪದಮ್ |
    ಪ್ರವೃದ್ಧಪ್ರತ್ಯಯಃ ಶ್ಯೇನೋ
    ಹರೇತ್ ಕೂರ್ಮಂ ಸ ಲೀಲಯಾ ||

    ಅಥವಾ (ಕಳೆದ ಪದ್ಯದ ಸಂಬಧವಿಟ್ಟುಕೊಂಡು) ವರವೀರರ ಅಪ್ರತಿಮ ಸ್ಥಾನವನ್ನು ಪಡೆದು ವಿಶ್ವಾಸವು ಹುಬ್ಬಲು ಆಮೆಯನ್ನೂ ಸುಲಭದಿಂದ ಹರಿಸುವನೋ.

    • ಎರೆಡೂ ಪೂರಣಗಳೂ ಬಹಳಚೆನ್ನಾಗಿದೆ

    • ರಾಗರ ಕಾಮೆಂಟ್-ಅನು ಸ್ಪಷ್ಟತೆಗಾಗಿ ವಿವರಣೆ –
      ೧. ಮುಪ್ಪಿನ ಕಾರಣದಿಂದ ಆಮೆಯು ಶಿಲೆಯಂತೆ ತೋರಿತು. (ಅದರ ಮೇಲೆ ಕುಳಿತುಕೊಳ್ಳಲು ಹದ್ದು ಬಂದಿರುವುದು). ಹಾಗಿರುವುದರಿಂದ, ಬೇಗನೇ, ಹದ್ದು ಹಗ್ಗವನ್ನು ಸರ್ಪವೆಂದು ತಿಳಿದು (ಹಗ್ಗವನ್ನು ತಿಂದು) ಶೂನ್ಯತ್ವವನ್ನು ಪಡೆಯುವುದೇನೊ (ಸಾಯುವುದೇನೋ).

      ೨. ಅಥವಾ, ಅಪ್ರತಿಮಪರಾಕ್ರಮಿಯಾಗಿ ಹದ್ದು ಆಮೆಯನ್ನೂ ಹರಿಸಲು ಸಮರ್ಥನಾದನೇನೋ.

      ಇನ್ನೊಂದು ಪದ್ಯ-ಲೈಟ್
      ವೇಗೇಽಪಿ ಯದಿ ಸಾದೃಶ್ಯಂ ಪೂರ್ವಾ ಪೂರ್ವಾ ಯಥಾಪರಾ |
      ಪಕ್ಷಿಕಚ್ಛಪಯೋಃ ಸಾರ್ಧಂ ಸ್ಥಿತಿಗತ್ಯೋಃ ಕಥಂ ಭವಃ ||

      ’ಈಸ್ಟ್ ಇಸ್ ಈಸ್ಟ್, ವೆಸ್ಟ್ ಇಸ್ ವೆಸ್ಟ್’ ಎಂಬಂತೆ ವೇಗದ ವಿಷಯದ್ಲೂ ಸಾದೃಶ್ಯವಿದ್ದರ (ಫ಼ಾಸ್ಟ್ ಇಸ್ ಫಾಸ್ಟ್..), ಪಕ್ಷಿ ಕಚ್ಛಪಗಳ ಸ್ಥಿತಿ-ಗತಿಗಳ ಸಹಭಾವ ಹೇಗೆ ?

  7. ಖಗಮಿಳೆಗಿಳಿದುದು ಭಾವಿಸಿ
    ಬಗೆಯೊಳ್,ವಿರಮಿಪೆನಿದೊಂದು ಬಂಡೆಯ ಮೇಲಾಂ |
    ಧಗೆಯೊಳ್ ಪಾರುತೆ ನಭದೊಳ್
    ಪಗಲೊಳ್,ದಣಿದಿರೆಯಿದೆನ್ನ ಸೊಗಸಿನ ಪೀಠಂ ||

    • ನಾಲ್ಕನೇ ಪಾದವನ್ನು – ಪಗಲೊಳ್,ದಣಿವಾಯ್ತಿದೆನ್ನ ಸೊಗಸಿನ ಪೀಠಂ ||
      ಎಂಬುದಾಗಿ ತಿದ್ದಿದ್ದೇನೆ.

      ” ಈ ಒಂದು ಬಂಡೆಯ ಮೇಲೆ ನಾನು ವಿರಮಿಸುತ್ತೇನೆ.ಹಗಲಿನಲ್ಲಿ,ಧಗೆಯಲ್ಲಿ,ಆಗಸದಲ್ಲಿ
      ಹಾರುತ್ತಾ ದಣಿವಾಯ್ತು.ಇದು ನನ್ನ ಸೊಗಸಿನ ಪೀಠ”- ಎಂಬುದಾಗಿ ಮನದಲ್ಲಿ ಭಾವಿಸಿ, ಹಕ್ಕಿ ಧರೆಗಿಳಿಯಿತು.

  8. ಅಂಗಹೀನನವೊಲಿರ್ಪೆಯೇಂ ಜಗ-
    ತ್ಸಂಗಮಂ ಬೆಸೆಯೆ ಚಿತ್ತವೃತ್ತಿಯು-
    ತ್ತುಂಗಕೇರ್ವುದೆನೆ ರೆಂಕೆತೋಳ್ಗಳಂ
    ಪೊಂಗಿಸಲ್ ಪದಮನಿಟ್ಟನುದ್ಭಟಂ

    ಉದ್ಭಟ – ಆಮೆ

  9. all poems are very good. I wonder how the ideas, thinkings are changes one by one by different brains , their
    expressions through words either in kannada or sanskrit that too in old(hale)kannada !!!!!!!!!!!!!
    Good wishes to all.
    by mukunda chiplunkar
    karkala
    30-12-2013

    • Dear Mukunda,
      Thanks for the kind words. Welcome to padyapAna. This is the right place to try Poetry. Please go through the lessons available in the site and pen your thoughts. All of us are with you 🙂

  10. ಶಿಖರಮೆನ್ನಯವಾಸಮಿರ್ಕೆ ನಿನ್ನದು ಕಡಲು
    ಸಖನೆನೀನಿನಿಬರಂ ಬಂದುದೇಕಯ್?
    ಪ್ರಖರದುಷ್ಕರಮಿರ್ಪುದೀ ನಗಂ ತಾರಣಿಗೆ
    ಸುಖಮೆಂತದೀಯಲಾಂ ಪೇಳತಿಥಿಯೇ?

    ಪಕ್ಕದಲ್ಲೇ ಇರುವ ಪ್ರಪಾತವನ್ನು ನೋಡಿದರೆ ಆಮೆಯು ಪರ್ವತಶಿಖರವನ್ನು ತಲುಪಿದಂತೆ ತೋರುವುದು

  11. ರೆಂಕೆಯುತ್ತಮಿಕೆಯೆನ್ನೊಳಿರ್ಪುದಯ್
    ನೂಂಕೆ ನೂರ್ಗಜಮನೇರ್ವೆನಯ್!, ಸಖಾ
    ಶಂಕೆಯೆಂತುಟಿದು ಖೇಟಮಲ್ತೆ ಪ-
    ರ್ಯಂಕಮಲ್ತೆ ಗೃಹಮಲ್ತಿದೇ ವರಂ!

    ಖೇಟ – shield

    ರೆಕ್ಕೆಯು ಹೆಚ್ಚೆಂದು ಗೃಧ್ರನು ತನ್ನ ಬೆನ್ನಿನ ಡುಬ್ಬವೇ ಹೆಚ್ಚೆಂದು ಆಮೆಯು ವಾದಿಸುತ್ತಿರುವುದು

  12. ॥ शिखरिणी ॥
    यथा कूर्मः स्वीयामपघनततिं पृष्ठपिहितां
    विधत्ते येनासौ न हि भवति दाक्षाय्यकवलः ।
    हृषीकाण्येवं ये विदधति मनोरुद्धवदना-
    न्यमी संसारे नो विषयवशतां यान्ति सुधियः ॥

    अपघनततिम् = ಅವಯವಸಮೂಹವನ್ನು.
    दाक्षाय्यः = ಹದ್ದು.
    कवलः = ತುತ್ತು.
    हृषीकाणि = ಇಂದ್ರಿಯಗಳು.

    ತಾತ್ಪರ್ಯ – ಆಮೆಯು ತನ್ನೆಲ್ಲ ಅವಯವಗಳನ್ನು ಚಿಪ್ಪಿನೊಳಗೆ ಮರೆಮಾಡುವುದರಿಂದ ಅದು ಹದ್ದಿಗೆ ತುತ್ತಾಗುವುದಿಲ್ಲ. ಅದೇ ರೀತಿ ಯಾರು ಇಂದ್ರಿಯಗಳನ್ನು ಮನಸ್ಸಿನಿಂದ ತಡೆಯುತ್ತಾರೋ ( ನಿಗ್ರಹಿಸುವರೋ ) ಅವರು ವಿಷಯವಶರಾಗುವುದಿಲ್ಲ.

    यदा संहरते चायं कूर्मोऽङ्गानीव सर्वशः – ಎಂಬ ಗೀತಾವಾಕ್ಯವನ್ನು ನೆನಪಿಸಿಕೊಳ್ಳಬಹುದು.

    • ಪೆಜತ್ತಾಯರೆ, ಚೆನ್ನಾಗಿದೆ ಕಲ್ಪನೆ

    • ಯದಾ ಕೂರ್ಮಶ್ಚಕ್ರೇ ಪದಭುಜಕರಾನ್ ಗೋಲಕಸಮಂ
      ಸ ದಾಕ್ಷಾಯ್ಯ್ಯೋದ್ಭೂತೈ-ರ್ಮಥನಪವನೈಃ ಕಂದರಗತಃ |
      ತಥಾ ಲೋಕೇ ಸ್ಯಾತ್ ಸಂ-ಕುಚಿತನಯನಾನಾಂ ನಿಯಮನೈಃ
      ತತಃ ಸ್ಮಾರಂ ಸ್ಮಾರಂ ಘೃತಋಣವಿಧಿಂ ಜೀವ ಶರದಃ ||

      ಯದಾ ಕೂರ್ಮವು ಪದ, ಭುಜ, ಕರಗಳನ್ನು ಸೆಳೆದು ಗೋಲಾಕಾರವಾಯಿತೋ, ತದಾ ಗರುಡನ ಚಲನೆಯಿಂದ, ಅವನ ರೆಕ್ಕೆಗಳಿಂದ ಎದ್ದ ಮಥಿಸುವ ಗಾಳಿಯ ಕಾರಣದಿಂದ ಕಂದರದಲ್ಲಿ ಬಿದ್ದ. ಹಾಗೇ ಲೋಕದಲ್ಲೂ ಒಳ ಸೆಳೆದ ಇಂದ್ರಿಯಗಳುಳ್ಳವರಿಗೂ ಆದೀತು. ಆದ್ದರಿಂದ ಚಾರ್ವಾಕರ ’ಋಣಂ ಕೃತ್ವಾ ಘೃತಂ ಪಿಬೇತ್ ಎಂಬುದನ್ನು ಸ್ಮರಿಸುತ್ತಾ ವರ್ಷಾನುವರ್ಷ ಜೀವಿಸು 🙂

      ನಯನಮ್ ಇತಿ ಇಂದ್ರಿಯಾರ್ಥೇ ಅತ್ರ ಉಕ್ತಮ್.

      • ಚೆನ್ನಾಗಿದೆ ನರೇಶರೇ 🙂
        ಸ್ವಭಾವಂ ಲೋಕಾನಾಂ ನಿಗದತಿ ಮನೋಜ್ಞಾ ಶಿಖರಿಣೀ 🙂

  13. ಮಂದರಪರ್ವತಂ ನೆಗಳ್ದ ಕಾಚ್ಛಪಕೈತವದಿಂದೆ ಹರ್ಷದಾ-
    ನಂದದೆ ಯಾಚಿಸಲ್ ಹರಿಯಲಂಕರಿಸೆನ್ನಯ ಮೂರ್ಧ್ನಿಯಂ, ವೃಷಂ
    ನಿಂದಿರಲುಚ್ಛಯಂ ಕುಸಿಯೆ ಗಾರುಡಿಗಂ ಭ್ರಮೆಯಾಂತು ಬೀಳ್ದಪಂ
    ಮುಂದವನಂಬರಕ್ಕೆರಗಲಾಂತುದು ಶೈಲನಿಜಾಪ್ತುವಂ ಗಡಾ

    ಒಂದು ಹೊಸ ಕಥೆ, ಮಂದರ ಪರ್ವತವು ಹರಿಯ ಕಚ್ಛಪಾವತಾರದಿಂದೆ ಸಂತುಷ್ಟನಾಗಿ (ತಾನು ಹರಿಯನ್ನ ಮೇಟ್ಟಿನಿಂತಿದುದ್ದಕ್ಕೆ) ತನ್ನತಲೆಯಮೇಲೆ ನಿಲ್ಲೆಂದು ಹರಿಯನ್ನು ಯಾಚಿಸಿದಾಗ ಹರಿಯು (ಕೂರ್ಮರೂಪಿಯಾಗಿಯೇ) ನಿಂತನು, ಹರಿಯಭಾರದಿಂದ ಮಂದರವು ಕುಸಿದು (ಅಲ್ಲಿಯೇ ಇದ್ದ ಹರಿಯ ವಾಹನವಾದ) ಗರುಡನು ಬೀಳುವಿಕೆಯಿಂದ ದಿಗ್ಭಾಂತನಾದನು, ನಂತರ ಹರಿಯು ತೆರೆಳಲು ಮಂದರ ತನ್ನ ಸ್ವಗಾತ್ರವನ್ನು ಪಡೆಯಿತು (ಕೃತಾರ್ಥವಾಯಿತು)

    ನೆಗಳ್ದ – ಶಿ.ದ್ವಿ.
    ವೃಷಂ – hari
    ಉಚ್ಛಯಂ – mountain
    ಅಪ್ತು – body

  14. ರಾಮಪ್ರಿಯರ ಸರಳೋಪಕ್ರಮವೂ ಸೋಮನ ಸೀಮಾತೀತಕಲ್ಪನೆಗಳೂ ಪೆಜತ್ತಾಯರ ಓರಣದ ಪದ್ಯಬಂಧವೂ ನರೇಶರ (ನನಗೆ ಅಷ್ಟಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ) ಬಂಧಸೌಷ್ಠವವಿರುವ ಶ್ಲೋಕಗಳೂ ಗಾಯತ್ರಿಯವರ ಅಚ್ಚುಕಟ್ಟಾದ ಪದ್ಯವೂ ಉಷಾ ಅವರ ಸರಳರಚನೆಯೂಶಕುಂತಲಾ ಅವರ ಶ್ಲಕ್ಷ್ಣಪದ್ಯವೂ ಚೆನ್ನಾಗಿವೆ. ಎಲ್ಲರಿಗೂ ಧನ್ಯವಾದ; ಅಭಿನಂದನೆ.

    ಇದೀಗ ನನ್ನ ಒಂದು ಪದ್ಯ:

  15. ಎಲ್ಲರಿಗು ನಮಸ್ಕಾರ. ಒಂದು ಸಣ್ಣ ಪ್ರಯತ್ನ, ಎಂದಿನಂತೆ ತಪ್ಪುಗಳಿದ್ದಲ್ಲಿ ತಿದ್ದಬೇಕಾಗಿ ವಿನಂತಿ. 🙂

    ಸಂದರ್ಭ: ಕೂರ್ಮಾವತಾರಿ ವಿಷ್ಣು ವೈಕುಂಠವ ಬಿಟ್ಟು ಭೂಮಿಯಲ್ಲೇ ವಿಹರಿಸುತ್ತಿರಲು, ಲಕ್ಷ್ಮಿಯು ವ್ಯಥಿಸುತ್ತಿಹಳು. ಇದನ್ನು ಕಂಡ ಗರುಡನು ಸ್ವಾಮಿಯನ್ನು ಮತ್ತೆ ಕ್ಷೀರಸಾಗರಕ್ಕೆ ಕರೆದೊಯ್ಯಲು ಬಂದನೆಂಬ ಒಂದು ಸಣ್ಣ ಕಲ್ಪನೆ..

    ಪ್ರಭು ವಿಯೋಗದಲಿ ವ್ಯಥಿಸುತಿಹ ಕಮಲೆಯ ಕಂಡು
    ಶುಭಪೂರ್ತ ಕ್ಷೀರಾಬ್ಧಿಯಲಿ ಹರ್ಷ ಹಿಂತರಲು
    ನಭದಿಂದ ಭುವಿಯತ್ತ ಧಾವಿಸಿದ ವಿಷ್ಣುರಥ
    ವಿಭುವಾದ ಶ್ರೀ ಕೂರ್ಮನನು ಕರೆದು ತರಲಿಕ್ಕೆ

    • ನಿಮ್ಮ ನವೀನಪ್ರಯತ್ನವು ಸ್ತುತ್ಯರ್ಹ. ಆದರೆ ಎಲ್ಲ ಸಾಲುಗಳನ್ನೂ ಇಪ್ಪತ್ತು ಮಾತ್ರೆಗಳ ಚೌಪದಿಯಾಗಿಸುವ ಮೂಲಕ ಎಲ್ಲಿಯೂ ಪಾದಾಂತದಲ್ಲಿ ವಿರಾಮವುಳಿದಾಗಿದೆ; ತನ್ಮೂಲಕ ಪದ್ಯದ ಪಾದಗಳು ಸಾಕಾಂಕ್ಷವಾಗಿ ಶ್ರುತವಾಗುತ್ತವೆ. ಇದು ಪದ್ಯಗತಿಗೂ ಭಾವಸ್ಥಿತಿಗೂ ಹಿತವಾಗದು. ಈ ಬಗೆಗೆ ಹಿಂದೆ ಶ್ರೀಕಾಂತರು ನಿಮಗೋ ಅಥವಾ ಇನ್ನಿತರ ಪದ್ಯಪಾನಿಗಳಿಗೋ ಸೂಚಿಸಿದಂತೆ ನನ್ನ ನೆನಪು. ದಯಮಾಡಿ ಆ ಸೂಚನೆಯನ್ನು ಗಮನಿಸಿಕೊಳ್ಳಿರಿ. ಶುಭಪೂರ್ತ ಎಂಬ ಪದದ ಅರ್ಥ ಸ್ಪಷ್ಟವಾಗಲಿಲ್ಲ.

      • ಗುರುಗಳಿಗೆ ನಮಸ್ಕಾರ,

        ಇದು ಚೌಪದಿಯಲ್ಲಿ ನನ್ನ ಮೊದಲ ಪ್ರಯತ್ನ. ನೀವು ಹೇಳಿದ ಸೂಚನೆಗಳ ಹಾಗೆ ಶ್ರೀಕಾಂತರ ಸೂಚನೆಯನ್ನು ಗಮನಿಸಿಕೊಳ್ಳುವೆ.
        ಪದ್ಯಪಾನಿಗಳಿಂದ ಸೂಚನೆಗಳು ತಿದ್ದುಪಡಿಗಳು ಪಡೆಯುವುದೇ ಒಂದು ಭಾಗ್ಯ. ಅದಕ್ಕಾಗಿ ನಿಮಗೆಲ್ಲರಿಗೂ ನನ್ನ ವಂದನೆಗಳು.

        ಶುಭಪೂರ್ತ: ಒಳಿತನ್ನು ತನ್ನಲ್ಲಿ ತುಂಬಿಕೊಂಡಿರುವ ಕ್ಷೀರಸಾಗರ ಎಂಬ ಅರ್ಥದಲ್ಲಿ ಪ್ರಯೋಗಿಸಿದೆ. ತಪ್ಪಾಗಿದ್ದರೆ ಸೂಚಿಸಿ.

        • ಸವರಣೆ ಸರಿಯಿದೆಯೆಂದು ಭಾವಿಸಿ ಇಲ್ಲಿ ಪ್ರಸ್ತುತ ಪಡಿಸುತ್ತಿರುವೆ:

          ಪ್ರಭು ವಿಯೋಗದಲಿ ಕ್ಷೀರಾಬ್ಧಿಯೊಳು ಕಮಲೆ ವ
          ಲ್ಲಭನ ನೆನೆದಳುತಿರುವುದನು ಕಂಡೊಡನೆ
          ನಭದಿಂದ ಭುವಿಯತ್ತ ಧಾವಿಸಿದ ವಿಷ್ಣುರಥ
          ವಿಭುವಾದ ಶ್ರೀ ಕೂರ್ಮನನು ಕರೆತರಲು

  16. ಆದಿಕೂರ್ಮನ ಬೆನ್ನೊಳಾದ ಮಂದರಗಿರಿಯ
    ಖೇದಕವ್ರಣಕಿಣಮನನ್ಯಕಚ್ಛಪರೊಳ್ |
    ಓದಿ ತಿಳಿಯುವ ವೃಥಾssಯಾಸಮೇಕಯ್ ಭಾಸ!
    ವೇದಮೇಂ ವಾಂಶಿಕವೆ ಮೇಣ್ ಸಾಧನೆಗಳುಂ ||

    (ವ್ರಣಕಿಣ = ಗಾಯದ ಗುರುತು, ಭಾಸ = ಹದ್ದು, ವಾಂಶಿಕ = ವಂಶಪರಂಪರೆ)

    • ಆಮೆಚಿಪ್ಪಿನ ವಿನ್ಯಾಸಕ್ಕೆ ಕಲ್ಪಿಸಿರುವ ಕಾರಣವಂತೂ ಚೆನ್ನಾಗಿದೆ. ಇದರಿಂದ ಉತ್ತರಾರ್ಧವೇನೂ ನೇರ-ನಿಗಮಿತವಲ್ಲ. ಇಲ್ಲಿಯ (ಉತ್ತರಾರ್ಧ) ಕಲ್ಪನಾಕೌಶಲವೂ ಗಮನೀಯ.

    • ಗಣೇಶ್ ಸರ್, ಬಹಳ ಚೆನ್ನಾಗಿದೆ ಕಲ್ಪನೆ

  17. ಆಸಾದ್ಯ ಭೂಮಿಭರಣಂ ಸುಧಯಾ ವಿಹೀನೋ-
    ಽಶಕ್ತಃ ಸ ಪೃಷ್ಠಪರುಷಂ ಪವಿತುಂ ಪಯೋಭಿಃ |
    ಕರ್ತವ್ಯಮೂಢಗರುಡೋ ಡಯಮಾನ ಎವ
    ಕ್ಷೀರಾಭ್ಧಿಶಾಯಿಗಮಕೋ ನ ಯಯೌ ನ ತಸ್ಥೌ ||

    ಗರುಡನನ್ನೇರಿ ಅಮೃತ ರಕ್ಷಿಸಿದ ಪ್ರಸಂಗ. ಅದಾದ ಮೇಲೆ ಗರುಡನ ಹತ್ತಿರ ಸುಧೆಯು ಮುಗಿದಿತ್ತು. ಆಗ ಭೂಮಿಭರಣನಾದ, ಕಠಿಣ ಬೆನ್ನುಳ್ಳ ಆಮೆಯನ್ನು ಕಂಡು, ಅವನನ್ನು ಪವಿತ್ರಿಸಲು ಅಶಕ್ತನಾದನು. ’ಏನು ಮಾಡಲಿ’ ಎಂಬ ಕರ್ತವ್ಯಮೌಢ್ಯದಿಂದ ವಿಷ್ಣುವಾಹನನಾದ ಗರುಡನು ಹಾರುತ್ತಲೇ ಹೋಗಲೂ ಇಲ್ಲ, ನಿಲ್ಲಲೂ ಇಲ್ಲ.

    (ಕುಮಾರಸಂಭವದ ಶೈಲಾಧಿರಾಜತನಯಾ ನ ಯಯೌ ನ ತಸ್ಥೌ ಸ್ಮರಿಸಿ ಇದು.
    ಪೃಷ್ಠಪರುಷಃ ಇತ್ಯಸ್ಯ ಸಾಧುತ್ವಂ ಪರುಷಪೃಷ್ಠಃ ಇತಿ ಬಹುವ್ರೀಹಿಣಾ, ಅಥವಾ ಪ್ರಕೃತ್ಯಾ ಚಾರುಃ ಇತಿ ವತ್ ತತ್ಪುರುಷೇಣ ಕಲ್ಪನೀಯಂ ಮನ್ಯೇ. ಉಭಯಥಾಪಿ ನ ಸಿದ್ಧ್ಯತಿ ಚೇತ್ ಸೂಚ್ಯತಾಮ್ ಇತಿ ಪ್ರಾರ್ಥಯೇ.).

  18. ಲೋಕದ ವಾರ್ತೆಯನೊರೆಯುವ
    ಚಾಕರಿಯಂನೇಹದಿಂದೆಸಗೆಖಗ ನಿತ್ಯಂ,
    ಶೋಕವಳಿಯೆ,ಚರಿಸದಿರುವ,
    ಹಾಕಿದೆ ಮಣೆಯಂ ಮಿಗಂ ಕೃತಜ್ಞತೆಯಿಂದಂ

    • ಅರ್ಥಸ್ಪಷ್ಟತೆಯಾಗುತ್ತಿಲ್ಲ ದಯಮಾಡಿ ವಿವರಿಸುವಿರಾ? 🙁

      • 🙂 ಖಂಡಿತ. ಆದರೆ ೩ನೇಯ ಪಾದವನ್ನು ತಿದ್ದಿದ್ದೇನೆ. 🙂

        ದಿನವೂ ಲೋಕವಾರ್ತೆಯನ್ನು ಹಕ್ಕಿಯು,ಹೇಳುತ್ತಿರಲಾಗಿ,ಸಂಚರಿಸದಿರುವ(ದೂರ) ಅಳಲನ್ನು ಅಳಿದಿರುವದರಿಂದ ಈ ವನ್ಯಪ್ರಾಣಿಯು ಕೃತಜ್ಞತೆಯಿಂದ ಮಣೆ(ಬೆನ್ನು)ಯನ್ನು ಹಾಕಿದೆ(ಖಗಕ್ಕೆ).

  19. ಮೊಲಮಂ ಪಂದ್ಯದೊಳಾನು ಗೆಲ್ದಪನೆನುತ್ತುಂ ಪೆರ್ಮೆಯಿಂ ಕಚ್ಛಪಂ
    ಸಲೆಬಿನ್ನಾಣದಿನುನ್ನತಾಚಲತಲಕ್ಕಂ ಸಾರ್ದು ವೈಹಂಗಸಂ-
    ಕುಲಸರ್ವೋತ್ತಮಗಂ ನಿಕಾಮರಯಗಂ ಸೌಪರ್ಣಗಂ “ಪಂದ್ಯಕಂ
    ನಿಲು ಬಾ” ಎಂದು ಸವಾಲುಗೆಯ್ವ ಪರಿಯಂ ಕಾಣೌ ಮನೋವಲ್ಲಭೇ !

    ಹಿಂದೆ ಓಟದ ಸ್ಪರ್ಧೆಯಲ್ಲಿ ಆಮೆ ಮೊಲವನ್ನು ಗೆದ್ದ ಕಥೆಯನ್ನು ನೆನೆಯಿರಿ 😉

    • ಅಮಲೋದಾರಗಭೀರಶಬ್ದಸುಮಗುಂಫಂ ಭಾವಮುಂ ಸುಂದರಂ
      ಕ್ರಮಸಂಪ್ರಾಪ್ತಕವಿತ್ವ-ವಿತ್ತ್ವಕಲೆ ದಲ್ ನಿಮ್ಮಾ ಪೆಜತ್ತಾಯರೇ!!

      • ಅಮಲೋದಾರಮನಸ್ಕರಿಂತು ಮುದದಿಂ ಮೆಚ್ಚಲ್ ಮಹಾನಂದಮೈ 🙂

  20. ಆಮೆ ದೀರ್ಘಾಯು. ಗೃಧ್ರದ ಅದೆಷ್ಟೋ ತಲೆಮಾರುಗಳನ್ನು ಕಂಡಿಹುದು.
    ಬೀಗದಿರನಾಯಾಸದಿಂದೊಯ್ವೆನೆನ್ನುತುಂ
    ಕೈಗೆ ಸಿಕ್ಕಿದುದೆಲ್ಲಮನು ಪಕ್ಕಿ ನೀಂ|
    ಮಾಗಿಹನು ಕೂರ್ಮ ಕಂಡೆಷ್ಟೊ ನಿನ್ನಜ್ಜರಂ
    ಯೋಗಮಿಂತೆಯೆ ಬರಿಯ ಚಿಪ್ಪು ನಿನಗಂ||

    • ಕೈಗೆ ಸಿಕ್ಕಿದುದೆಲ್ಲಮಂ ಪಕ್ಕಿ ನೀಂ |
      ಮಾಗಿರ್ಪನ್ ಕೂರ್ಮ ಕಂಡೆಷ್ಟೊ ನಿನ್ನಜ್ಜರಂ
      ಎಂಬುದಾಗಿ ಎರಡು,ಮೂರನೇ ಸಾಲುಗಳನ್ನು ಸವರಿದರೆ ಹೆಚ್ಚು ಸೊಗಸಲ್ಲವೆ?
      ತಮ್ಮ ಅಭಿಪ್ರಾಯಕ್ಕಾಗಿ ನನ್ನ ವಿನಯಪೂರ್ವಕ ಮನವಿ.

    • ಮಾಗಿರ್ಪನ್ – ಆರು ಮಾತ್ರೆಯಾಯಿತಲ್ಲ? ಮಾಗಿರ್ಪ ಎಂದಷ್ಟೇ ಮಾಡಬೇಕು.
      ಭಾಷೆಯನ್ನು ಹಳತಾಗಿಸಿದ್ದೀರಿ. ಸರಿಯೆ. ಕಂದವಾಗಿದ್ದರೆ ಹಾಗೆಯೇ ಮಾಡುತ್ತಿದ್ದೆ. ಪಂಚಮಾತ್ರೆಗೆ ಇದರಿಂದ ವಿನಾಯಿತಿ ಇರುವುದರಿಂದ ಆ ಕುರಿತು ಹೆಚ್ಚು ನಿಗಾ ವಹಿಸಲಿಲ್ಲ.

      • ಧನ್ಯವಾದ ಪ್ರಸಾದರೆ.

  21. ಕಲ್ಪನೆ :- ಭೂಲೋಕದಲ್ಲಿ ಹೊಸವರ್ಷಾ ಚರಣೆಯನ್ನು ನೋಡಲು ಹರಿ ಗರುಡನನ್ನೇರಿ ಬರುತ್ತಾನೆ .ವಿಶ್ವಾಕ್ಷನನ್ನು ಹೊತ್ತ ಗರುಡ ಒಂದು ಕಡೆ ಸುಸ್ತಾಗುತ್ತಾನೆ . ಇದನ್ನು ಹರಿಯಲ್ಲಿ ಹೇಳಿಕೊಂಡಾಗ ನಾನು ಕೂರ್ಮ ರೂಪ ತಾಳುತ್ತೇನೆ . ನೀನು ನನ್ನ ಬೆನ್ನೇರು ಎನ್ನುತ್ತ್ತಾನೆ . ಮಿತ್ರರರ೦ತೆ ಸಂಭಾಷಣೆ ಇಂತಿದೆ–( ವಿನೋದಕ್ಕಾಗಿ )

    II ಉತ್ಸಾಹ ವೃತ್ತ II
    ನಿನ್ನ ಹೇರಿ ಭೂಮಿ ಸುತ್ತಿ ನಾನು ಸುಸ್ತು ಹೊಂದಿದೆಯ್
    ಮನ್ನಿಸಿಂದು ನಿನ್ನ ಮಾತ ನಾನು ಕೂರ್ಮ ರೂಪದಿಂ
    ನನ್ನ ಹೊತ್ತು ಪೃಥ್ವಿ ಸುತ್ತ ನಿನ್ನದಾಮೆ ಪಾಡದೇ೦?
    ಬೆನ್ನನೇರು,ಪರ್ವವೊಂದು ಮಾತಿನಲ್ಲೆ ಸಲ್ಲುಗು೦

  22. ಪಾದ ನಾಲ್ವೊಳಗೊತ್ತಿ ಹೊತ್ತುತಂದಿಹುದಾಮೆ
    ಮೇದಿನಿಯೊಲಿಂತುವೀ ಪದ್ಯವಿದುವೇಂ |
    ಆದುದೆರಡಾಪಾದ ಹಾರೆ ಹಕ್ಕಿಯದಾಗ
    ಮೋದದೊಳು ಸಂದುದೀ ಪದ್ಮವಿದುವೇಂ ||
    (ಪದ್ಮ = ಪಾದದಲ್ಲಿ ಕಂಡ ಶುಭಸೂಚಕ ಚಿನ್ಹೆ / ಒಂದು ವೃತ್ತ ಬಂಧ )

    ಕಂಡ ಪದ್ಯಚಿತ್ರವು ನಾಲ್ಕು ಪಾದದ ಆಮೆಯೋ?! ಎರಡು ಪಾದದ ಹಕ್ಕಿಯೋ?!

  23. ಅಂಬರಮದ್ರಿಯೊಳ್ ನೆಲೆಯನಾಂತುದನೀಕ್ಷಿಸಿ ಕಚ್ಛಪಂ ನಿರಾ-
    ಲಂಬನೆ ನಾಕಸೌಖ್ಯಲಷುಕಂ ಹಠದಿಂ ತೆವಳುತ್ತುಮೇರ್ದು ತಾ-
    ನಂಬಕಯುಗ್ಮಮಂ ಪೊರಳಿಸಲ್ ನಭಮಿನ್ನುಮೆ ದೂರಮಿರ್ಕುಮೆಂ-
    ದಿಂಬಿಗೆ ನೋಡಿದಂ ಗರುಡನಂ ತಿರಿದಂ ಗಡ ಪಾರ್ವಬಿಜ್ಜೆಯಂ ||

    ನಿರಾಲಂಬನೆ = ಯಾರ ಸಹಾಯವೂ ಇಲ್ಲದೆ.
    ಅಂಬಕ = ಕಣ್ಣು
    ಇಂಬು = ಸಹಾಯ.
    ತಿರಿದಂ = ಬೇಡಿದನು.
    ಪಾರ್ವಬಿಜ್ಜೆ = ಹಾರುವ ವಿದ್ಯೆ.

  24. ಮುಚ್ಚಿಡುತುಮೆಲ್ಲವಂ ತನ್ನೊಳಗೆ, ತೆವಳುತಿದೆ-
    ಕಚ್ಛಪಂ ಮನಭಾರದಿಂ ಧರೆಯೊಳು
    ಬಿಚ್ಚಿಯೆಲ್ಲವನುಲಿದು,ಬಂಧು,ಬಳಿ,ಸಖರೊಡನೆ
    ಪಚ್ಚೆಬನದೊಳ್ ಹಕ್ಕಿ ಹಾರುತಿಹುದು

    ಎಲ್ಲವನ್ನೂ ನುಂಗಿಕೊಳ್ಳುವವರ ಸ್ಥಿತಿ ಮತ್ತು ಹಂಚಿಕೊಳ್ಳುವರದನ್ನು ಹೋಲಿಸುವ ಯತ್ನ.(ಆಮೆಯದು ಭಾರವದ ಮನಸ್ಸು ಮತ್ತು ಹಕ್ಕಿಯದು ಹಗುರವಾದದ್ದು.)

  25. मन्दं मन्दं चरति कमठः शीघ्रगश्श्येनराजः
    देशं देशं भ्रमति डयते दूरदर्शी सुदूरम् ।
    दृष्ट्वा श्रुत्वा विविधविषयान् संस्मरन् वाग्विशेषान्
    नित्यं सर्वं वदति कुरुते कूपकूर्मत्वनाशम् ! ॥

    Happy 2014 to all!

    • ಕನ್ನಡದಲ್ಲಿ ಅದೇ ಭಾವದ ಪದ್ಯ —

      ಮೆಲ್ಲಮೆಲ್ಲನೆ ನಡೆಯಲಾಮೆಯು
      ಹದ್ದು ವೇಗದಿ ಹಾರುತ ;
      ದೇಶದೇಶವ ತಿರುಗುತೆಲ್ಲೆಡೆ
      ದೂರದೃಷ್ಟಿಯ ಬೀರುತ ;
      ನೋಡಿ ಕೇಳುತಲೆಲ್ಲ ಸುದ್ದಿಯ
      ತಲೆಯೊಳಿಟ್ಟಿಲ್ಲಿಳಿಯುತ ;
      ವರದಿ ಕೊಡುತಿರೆ ಕೂಪಕೂರ್ಮತೆ-
      ಯಳಿದುಪೋಪುದು ಶಾಶ್ವತ !

  26. Dear Sri Naresh and Sri Ramapriya,

    May I know your present and permanent place of stay please?

    • I have lived in the Washington DC metropolitan area for the last 38 years. (I am not sure about how to answer “permanent” !). Thanks for the inquiry.

    • I live in Albany, upstate New York where we are enjoying a snow day today. Used to live in the Washington DC area before — I met Sri Ramapriyan when I was there. And I’m from Bangalore.

      • ಪುರೋಭಾಗಿತಾಂ ಕ್ಷಂತುಮರ್ಹಂತಿ ಸಂತೋ
        ಭವಂತೋ ಯತಶ್ಚಿಂತಿತಂ ಕಿಂ ನು ಯಾಚೇ |
        ವಧಾನಕ್ರಮೇ ಮಾಮಕೇ ತಾವಕೀನಾ-
        ಮುಪಸ್ಥಾಪಿಕಾಮತ್ರ ಚೇತಿ ಪ್ರಶಸ್ತಾಮ್ ||

        ಇದಾನೀಂ ವಿದಿತ್ವಾ ತು ದೌರ್ಘಟ್ಯಮಸ್ಯ
        ವ್ಯಥಾನುನ್ನಚೇತಾಃ ಕಥಂಚಿತ್ಸಮಾಧಿಮ್ |
        ಸಮಾಲಂಬ್ಯ ಭೂಯೋsಪಿ ಯಾಚೇ ಕ್ಷಮಾಂ ವಾಂ
        ಭವತ್ಸಂಸ್ಕೃತಶ್ರೀರ್ನಿತಾಂತಂ ಮನೋಜ್ಞಾ ||

        • ಭವಚ್ಚಿಂತನೇನೈವ ಭೂಯಾನ್ ಪ್ರಮೋದಃ
          ಕ್ಷಮಾಯಾಚನಸ್ಯ ಪ್ರಸಂಗಸ್ತು ನಾಯಮ್ |
          ದಿನೇ ಚಾಪಿ ಕರ್ಣಾಟಭಾಷಾವಧಾನಂ
          ಜಯಾಖ್ಯೇ ನಗರ್ಯಾಮಪಶ್ಯಂ ಸಹರ್ಷಮ್ ||
          (ಎನ್.ಎಮ್.ಕೇ.ಅರ್.ವಿ ಸಭಾಯಾಂ ಪ್ರವೃತ್ತೇ ಶತಾವಧಾನೇ ದಿನದ್ವಯಂ ಯಾವತ್ ಕಾರ್ಯಕ್ರಮದರ್ಶನೇ ಪ್ರಾಪ್ತಾವಸರೋಽಹಮ್.)

          ತದಾ ಪದ್ಯಪಾನಂ ವಿದಿತ್ವಾ ವಿನೋದಂ
          ಯಥಾಶಕ್ತಿ ಯತ್ನಂ ಕರೋಮ್ಯತ್ರ ವರ್ಯ |
          ಅವಶ್ಯಂ ಪುನಶ್ಚ್ಯಾಪಿ ಭೂಯಾದ್ಧಿ ಭಾಗ್ಯಂ
          ಮದೀಯಂ ತಥೈವಾವಧಾನಂ ಚ ಗನ್ತುಮ್ |

        • ಅನುಚಿತಮಿತಿ ಮನ್ಯೇ ಯಾಚನಂ ಮತ್ಕ್ಷಮಾಯಾಃ
          ಕವಿಗಣಶಿಖರಸ್ಥಾಃ ಜ್ಞಾನವೃದ್ಧಾ ಭವನ್ತಃ |
          ಲಿಖಿತಮಿಹ ಮಯಾ ಭೋಃ ದೋಷಯುಕ್ತಂ ಭವೇಚ್ಚೇತ್
          ತದುಚಿತಮಿತಿ ಮನ್ಯೇ ದರ್ಶಿತಂ ಯದ್ಭವದ್ಭಿಃ ||

          ಅಹಮಪಿ ಪುರಾ ಬೆಂಗಳೂರುತಃ ಏವ ಆಗತವಾನ್ | ತತ್ರೈವಾಭವತ್ ಮಮ ವಿದ್ಯಾಭ್ಯಾಸಃ M.E. ಪರ್ಯನ್ತಮ್ | ಭವತಃ ಶತಾವಧಾನಸ್ಯ ವಿಷಯಂ ನರೇಶಃ ಪುರಾ ಸೂಚಿತವಾನ್ ತಥಾ ತಸ್ಯ ದರ್ಶನಶ್ರವಣಾರ್ಥಂ link ಅಪಿ ಪ್ರೇಷಿತವಾನ್ | ಯದಾ ಅಹಂ ಬೆಂಗಳೂರುನಗರಮಾಗಮಿಷ್ಯಾಮಿ ತದಾ ಪ್ರಯತಿಷ್ಯೇ ಭವತಃ ಕಾರ್ಯಕ್ರಮಮಾಗನ್ತುಮ್ |

  27. विष्णुः कूर्मावतारी विधृतनगवरो भूमिभूषाहृतात्मा
    क्रामं क्रामं समन्तात् प्रमुदितहृदयो नागमन्नैजलोकम् ।
    तस्माल्लक्ष्मीर्विषण्णा गरुडमुरुरयं प्राहिणोत् सानुरोधं
    स क्ष्मामासाद्य तूर्णं सविनयवचनैर्नाथमानश्चकास्ति ॥

    नागमन्नैजलोकम् = न अगमत् नैजलोकम् ।

    ತಾತ್ಪರ್ಯ – ಮಂದರೋದ್ಧರಣಕ್ಕಾಗಿ ಕೂರ್ಮಾವತಾರವನ್ನು ತಳೆದ ವಿಷ್ಣುವು ಭೂಮಿಯ ಸೌಂದರ್ಯದಿಂದ ಆಕೃಷ್ಟನಾಗಿ, ಭೂಮಿಯಲ್ಲೇ ವಿಹರಿಸುತ್ತಾ ಆನಂದದಿಂದಿದ್ದಾಗ, ಖಿನ್ನಳಾದ ಲಕ್ಷ್ಮಿಯಿಂದ ಆತನನ್ನು ಕರೆತರಲು ಕಳುಹಲ್ಪಟ್ಟ ಗರುಡನು ಆತನನ್ನು ಸಮೀಪಿಸಿ ಪ್ರಾರ್ಥಿಸುತ್ತಿದ್ದಾನೆ.

    ಇದೇ ಭಾವದಲ್ಲಿ ಕನ್ನಡ ಪದ್ಯ.

    ಪದಪಿಂ ಬೆಟ್ಟಮನೆತ್ತೆ ಕೂರ್ಮವಪುವಂ ಪೊತ್ತಿರ್ದ ಲಕ್ಷ್ಮೀಧವಂ
    ಹೃದಯಾನಂದಕಭೂಮಿಯೊಳ್ ರಮಿಸುತುಂ ಸಂತೋಷದಿಂದಿರ್ದನಯ್ |
    ಇದರಿಂ ಚಿಂತಿತೆ ವಾರ್ಧಿಜಾತೆ ನಯದಿಂ ಬೇಡಲ್ಕೆ ಪಕ್ಷೀಶನಂ
    ಮುದದಿಂದಾತನಿಳಾತಳಕ್ಕಮಿಳಿದಿರ್ಪಂ ವೀಕ್ಷಿಸೌ ವಲ್ಲಭೇ ||

  28. ಕೂರಲಗುಗುರೆನ್ನವು ಬಲು
    ತೋರಾದಪವೆಂದುಬಗೆಯೆ ಕಂಡಿರ್ಪುದಕೂ-
    ಪಾರದ ಖರ್ಪರ, ಬಾನಿಂ
    ಸಾರಿದುದೆಂತಾನ್ ನಖಂಗಳಂ ಸಲೆ ಮಸೆಯಲ್ ?

    ಚೂಪಾಗಿದ್ದ ತನ್ನ ಉಗುರುಗಳು ತುಂಬಾ ದಪ್ಪವಾದುವು. ಎಂದು ಚಿಂತಿಸುತ್ತಿರೆ, ಕೆಳಗೆ ಕಂಡ ಆಮೆಯ (ಬಂಡೆಯ ಭ್ರಮೆಯಲ್ಲಿ) ಚಿಪ್ಪನ್ನು ನೋಡಿ, ತನ್ನುಗುರುಗಳನ್ನು ಮಸೆಯಲು ಮೇಲಿಂದ ಕೆಳಗೆ ಇಳಿದಿರ ಬಹುದೆ?

    ತೋರ : ದಪ್ಪ
    ಅಕೂಪಾರ : ಆಮೆ, ಬಂಡೆ
    ಖರ್ಪರ : ಆಮೆಯ ಚಿಪ್ಪು, ಒರಟಾದ ಮೈ

  29. ಪಾರುವಾಸೆಯೊಳಿಂದ ಕೂರ್ಮವು
    ಭಾರಿದೇಹವ ಪೊತ್ತಿರಲ್ ತನ
    ಗಾರುಮಿಲ್ಲದೆ ದುಃಖಿಸುತಲಾಗಸವ ನೋಡಿಪುದು|
    ದೂರದಿಂ ಬಂದಿರ್ಪ ಪಕ್ಕಿಯು
    ತೋರುತುಂ ತನಗಿರ್ಪ ಕಷ್ಟವ
    ಸಾರುತುಂ ಜೀವನದ ಸತ್ಯವ ಮರುಳು ಕೂರ್ಮನಿಗೆ|

  30. ಪಿಡಿದೆಳೆ ಪಾವಂ ಕೊಲ್ಲದೆ
    ಬಿಡೆನೆನುತಾಗಸವನಡರಿ ಪೇರರೆಯಂ ತಾನ್
    ತಡುಹಲ್, ಚರಿಸುತಲಿರ್ಪುದು
    ಗಡಮಿದು! ನೋಳ್ಪಂ ವಿಚಿತ್ರಮೆನೆ ಸಾರ್ಚಿದುದೆಂ?

    ಸಾಮಾನ್ಯವಾಗಿ ಹಿಡಿದ ಬೇಟೆಯನ್ನು ಮೇಲಿನಿಂದ ಕೆಳಗೆ ಬಂಡೆಯ ಮೇಲೆ ಬೀಳಿಸಿ ಅದನ್ನು ಕೊಂದು ಭಕ್ಷಿಸುವ ಹದ್ದು, ಚಲಿಸುತ್ತಿರುವ ಬಂಡೆಯನ್ನು(ಆಮೆಯನ್ನು ಬಂಡೆಯೆಂದು ಭಾವಿಸಿ) ನೋಡಿ.. ಸೋಜಿಗ ಎಂದು ವಿಸ್ಮಯಪಟ್ಟುಹತ್ತಿರ ಬಂದಿರ ಬಹುದೆ?

    • ಒಳ್ಳೆಯ ಕಲ್ಪನೆ ಹಾಗೂ ಸ್ತುತ್ಯಭಾಷಾಪ್ರಯೋಗ. ತಮ್ಮ ಕಬ್ಬಿಗತನದ ಬೆಳವಳಿಗೆಯು ಮುದಾವಹವಾಗಿದೆ:-)

  31. ====================================
    ಕಪ್ಪುದೇಹಂಬಡೆದು ತಡೆತಡೆದು ಮುನ್ನಡೆದು
    ದಪ್ಪಕಾಯವನಾಂತು ಹೊರಲಾರದುರೆ ಮುಳಿದು
    ಬಪ್ಪಜಂತುವಿದೇನೊ ರುಚಿನೋಳ್ಪಮಿದರ ಮಾಂಸದ ಬಲ್ಮೆಯಂ |
    ಚಪ್ಪರಿಸಿ ತಾ ನಾಲಗೆಯನಾಡಿಸುತ ಕಣ್ಣ
    ತಪ್ಪಿಸುತಲೈತಂದ ಖಗರಾಜನಿಗೆಯಿಂದು
    ಚಿಪ್ಪು ಸಿಕ್ಕಿದುದದೇನ್ ವಿಧಿಯಾಟವಕಟಕಟವರಿಯೆನಾನು ||
    ====================================

  32. ಗರುಡವಾಹನನಿಳಿದು ಮ೦ದರ
    ಗಿರಿಯ ಬೆನ್ನಲಿ ಹೊರಲು ತಾನೈ
    ತರುತಲಿರೆ ಕೂರ್ಮಾವತಾರದಿ ಕ್ಷೀರ ಸಾಗರಕೆ|
    ಸಿರಿಯ ರಮಣನ ಬೀಳ್ಗೊಡುತ ತಾ
    ಮರಳಿ ವೈಕು೦ಠವನು ಸೇರುವ
    ಭರದೊಳಿರ್ಪನಿದೀಗ ಖಗನಾಗಸದಿ ಗಮಿಸುತಲಿ||

  33. ಕಾಡ ಮಧ್ಯದಿ ಹದ್ದು ನೋಡಿತು
    ಗಾಢ ಮುಪ್ಪಿನ ಪ್ರಾಣಿಯೊಂದನು
    ನೀಡ ಬಯಸಿತು ತಾನು ನೆರವನು ನರರ ಪಾಂಗಿನೊಲು
    ನಾಡ ಜೀವಿಯ ನಡೆಯ ಗಮನಿಸಿ,
    ಜೋಡು ರೆಕ್ಕೆಯ ಬಿಚ್ಚಿ ಹರಡುತ
    ಸೂಡಿ ನೆಳಲಿನ ಕೊಡೆಯ ಮೇಗಡೆ, ಧಗೆಯ ತಪ್ಪಿಸಿತು
    (ಮೈ ಮೇಲಿನ ಕವಚವನ್ನು ಗಮನಿಸದೇ 🙂 )

    • ಮುಳಿಯರ ಪದ್ಯ ಚೆನ್ನಾಗಿದೆ. ಕಾಂಚನಾ ಅವರ ಕಲ್ಪನೆಯಂತೂ ತೀರ ಸೊಗಸಾಗಿದೆ. ಆದರೆ ಕಡೆಯ ಸಾಲಿನಲ್ಲಿ ಗಜಪ್ರಾಸವು ಹಯಪ್ರಾಸವಾಗಿ ಬದಲಾಗಿದೆ. ದಯಮಾಡಿ ತಿದ್ದಿಕೊಳ್ಳಿರಿ.

      • ಗಣೇಶ್ ಸರ್, ಧನ್ಯವಾದಗಳು. ಕಡೆಯ ಸಾಲನ್ನು ತಿದ್ದಿಕೊಂಡಿದ್ದೇನೆ.

  34. ಹಚ್ಚಗಿಹ ಬಯಲಿನೊಳು ಕಂಡಿಹು
    ದಚ್ಚರಿಯದಾಟಿಕೆಯ ಕಚ್ಛಪ
    ದಚ್ಚಿನಾ ಗಾಡಿಯೊಡನಾಟದ ಗಿಲಿಕೆ ಗಿಡುಗವದುಂ |
    ಹುಚ್ಚಿದಲ್ಲವುದಚ್ಚ ಕಾಣಿದು
    ಮುಚ್ಚುಮರೆಯಿಲ್ಲವಿದುವಚ್ಚರ
    ನಿಚ್ಚೆಯಾಟಿಕೆ, ಬೆಚ್ಚುಬೊಂಬೆಯೆ ನೆಚ್ಚ ಗಾರುಡಿಯಂ ||

    (ಅಚ್ಚರ = ದೇವರು, ಬೆಚ್ಚುಬೊಂಬೆ – ಮಾನವ , ಗಾರುಡಿ = ಇಂದ್ರಜಾಲ)
    ಬಾಲ್ಯದಲ್ಲಿ ನಮ್ಮ ತಂದೆ ನಮಗೆ ಕೊಡಿಸಿದ್ದ ಮರದ,ಕತ್ತು ತೂಗಾಡುತ್ತಿದ್ದ,ಗಾಲಿಗಳಿದ್ದ,ದಾರಕಟ್ಟಿ ಎಳೆದಾಡುತ್ತಿದ್ದ ಆಮೆ/ಆನೆ/ಮೊಲದ ಆಟಿಕೆಗಳ ಸವಿನೆನಪಿನಲ್ಲಿ.

  35. ಧರೆಯಾಮೆಯ ಬೆನ್ನೇರಲು

    ಭರದಿಂ ಬಂದಿರ್ಪಭಾಸಮೇ ಕೂರಲ್ಕ-|

    ಚ್ಚರಿಯಿಂ ಕಂಡಿರ್ಪುದುಮಾ

    ಹರಿಯಾ ವಾಹನಮೆ ಹರಿಯನೇರಿರ್ದಪುದೇಂ|

    • ಚೆನ್ನಾಗಿದೆ. ಮೊದಲ ಸಾಲಿನಲ್ಲಿ ಬೆನ್ನೇರಲ್ ಎಂದು ಸವರಿಸಿದರೆ ಮತ್ತೂ ಹಳಗನ್ನಡದ ಬಿಗಿ-ಸೊಗ ತೀವುತ್ತದೆ.

      • ಧನ್ಯವಾದಗಳು ಸಾರ್… ಸರಿ ಪಡಿಸಿಕೊಳ್ಳುವೆ..
        ಭಾಸ ಎಂಬ ಪದವನ್ನು ನಿಮ್ಮಿಂದಲೇ ಎರವಲು ಪಡೆದಿದ್ದೇನೆ..

  36. ನೆರಳಿಲ್ಲಮಿಲ್ಲಸುಖ ಸುಡುವ ಬಿಸಿಲೊಳ್ತಾನು
    ತೆರೆದಿಟ್ಟ ಕಂಗಳ ನಿರೀಕ್ಷಣೆಯಲಿ|
    ಸರಿಯಾದ ಸಮಯಕ್ಕೆ ಪಿಡಿದಿರ್ಪ ಚಿತ್ರದೊಳ್
    ಮರೆಯಾದನಮ್ಮ ಛಾಯಾಗ್ರಾಹಕ|

  37. ಕಾಲಪಕ್ಷಿಗೆ ಕಾಲೆರೆಂಕೆಗಳ್ಸೋಲ್ತವೇಂ
    ಮೂಲಕೂರ್ಮನ ಬೆನ್ನನಾಶ್ರಯಿಸಲು
    ಸ್ಥೂಲಮಂ ಚಲಿಪ ಸೂಕ್ಷ್ಮದೊಳಲೆವ ಕಾರಣದ
    ಲೀಲೆಸಂಕೇತಮೇಂ ಕಮಠಖಗರೊಳ್ !!

  38. ವಸಂತತಿಲಕ|| Vis-a-vis the bird, the tortoise:

    For such a bulky animal, head is so very small
    Ringeth a bell? Deliberate! Terrapin (Tortoise) liveth long|
    Life span directly to the brains attributable, why!
    Lesser the brains, many a year he liveth, Leatherback (tortoise)||
    (Deliberate=Think)

  39. ಕಚ್ಛಪಂ ಚಿಪ್ಪಿನೊಳಗಡಗಿ ರಕ್ಷಣೆ ಪಡೆವು-
    ದಿಚ್ಛೆಯಿಂ, ಶತ್ರುಗಳ್ ಮುತ್ತುವಾಗಳ್|
    ಸ್ವಚ್ಛಂದದಿಂ ಪಾರ್ದು, ಪಕ್ಕಿಯುಂ ತಿವಿದುಂಬ
    ತುಚ್ಛರಾಕ್ರಮಣದಿಂ ಪಾರಪ್ಪುದು ||

    ಜಗದೊಡೆಯನಿತ್ತಿರ್ಪನಾತ್ಮರಕ್ಷಣೆಗೆಂದು
    ಖಗಮೃಗಂಗಳಿಗೆಲ್ಲಮೊಂದೊಂದು ಜಾಣ್ |
    ಬಗೆಯೊಳ್ ವಿಚಾರದಿಂ ವಿಶದಮಪ್ಪುದು, ಬುವಿಯೊ-
    ಳಗೆ ಜೀವಿಪರೊಳಿಲ್ಲಮಸಮರ್ಥತೆ ||

    ಶತ್ರುಗಳು ಮುತ್ತುವಾಗ ಆಮೆಯು ಇಚ್ಚೆಪಟ್ಟು ಚಿಪ್ಪಿನೊಳಗೆ ಅಡಗಿ ರಕ್ಷಣೆ ಹೊಂದುವುದು.ಹಕ್ಕಿಯು ಸ್ವಚ್ಛಂದವಾಗಿ ಹಾರಿ,ತಿವಿದುಂಬ ತುಚ್ಛರಾಕ್ರಮಣದಿಂದ ಪಾರಾಗುವುದು.

    ಜಗದೊಡೆಯನು ಆತ್ಮರಕ್ಷಣೆಗೆಂದು ಖಗಮೃಗಗಳಿಗೆಲ್ಲ ಒಂದೊಂದು ಜ್ಞಾನವನ್ನಿತ್ತಿರುವನು.ಮನದಲ್ಲಿ ಇದನ್ನು ಚಿಂತಿಸಿದಾಗ,ಭೂಮಿಯಲ್ಲಿ ಜೀವಿಸುವವರಲ್ಲಿ ಅಸಮರ್ಥತೆಯಿಲ್ಲವೆಂಬುದು( ಯಾರೂ ಅಸಮರ್ಥರಲ್ಲವೆಂಬುದು) ಸ್ಪಷ್ಟವಾಗುತ್ತದೆ.

  40. #25 in mandAkrAnta, with the obvious allusion to meghadUta brings to mind this verse from the as yet uncomposed gRudhradUta –

    दृष्ट्वा गृध्रं पवनपदवीमाश्रितं दीर्घपक्षं
    स्वेच्छाचारं निशितनयनं कृष्णवर्णावभासम् |
    कामी कूर्मः कमठदयिताश्वासनार्थं जगाद
    संदेशं मे हर विरहितो दुर्गतो मन्दरोहम् ||

    • सम्यगुक्तम् । रचयतु भवान् गृध्रसन्देशमिति मदाशयः !

    • मान्याय तुरङ्गवर्याय पद्यपानपरतया हार्दं स्वागतंव्याहरामि । तथा परमस्ति मे कुतूहलं भवत्परिचयाय । यदि नात्र रहस्यं तर्हि सभाजयितव्योsयं जनः कुतूहलतर्पणॆन ।
      भवदीयं भाविकाव्यं गृध्रदूतमति स्वारस्यं तनुते मयि। परमत्र पद्येsस्मिन्
      तृतीये पादान्ते गुरुणा भाव्यमक्षरं लघुतामजनि । तत् कृपया भवता समीकार्यम् ।

      • No secrets here. I am Ramapriya’s brother. I live in California now but have been in various parts of the country for the last 35 years.

        I have seen the rule stated that lines should end in a guru and in case of odd pAdas the gurufication (:-)) should come from at least a compound consonant at the beginning of the next line, if not from the lengthening of the last syllable. I would be very interested and grateful for any pointers to any, more detailed technical discussions of this that are available. I do see a number of examples in literature, certainly rare, of odd pAdas ending in short vowels, without the first syllable on the next line being a compound consonant, especially in situations where a natural pause in the flow of the sentence occurs at these places.

        • Thanks a lot for the kind information and introduction. Coming to the viShama-paadaanta-guru, as you rightly said we do have many examples where it is laghu.But it is permitted only in metres which have less than fifteen varNa-s in a paada and this too is acceptable only in the case of yati-durbala metres like anuShTubh, upajaati and vasanta-tilaka. This discussion has been done long before in padyapaana and you can find them in the earlier posts.

  41. ಗಟ್ಟದಡಿಯಲಿ ಕೈಯ ಚಳಕವು
    ಗಟ್ಟಿ ಪೇಟವ ಕಟ್ಟಿದಾಮೆಗೆ
    ಪಟ್ಟಕಟ್ಟೆಡವಟ್ಟು ತಂದುದು ಮನ(ಕೆ)ಮೋಹನವು |
    ಸೊಟ್ಟ ಮೂತಿಯ ಹಕ್ಕಿ ಸೋಗಿ(ನಿ)ಯ
    ಪಟ್ಟು ಕಾಣಿದು ತಟ್ಟ ಬಂದುದು
    ಗುಟ್ಟ ಹೇಳುತೆ ಬೆಟ್ಟತೋರಿದುದೆದಕೊ ಕಾಣೆನುನಾಂ ||

    (ಆಮೆಯು ಮನಮೋಹನ ಸಿಂಗರಂತೆ – ಹಕ್ಕಿಯು ಸೋನಿಯಳಂತೆ ಕಂಡ ವಿನೋದದ ಕಲ್ಪನೆ)

  42. ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ
    ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ
    ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ
    ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ
    ವಜ್ರ ಕವಚವ ಹರಿಯುವೆನು ನಿರ್ದಯದಿ
    ಹೀರುತಲಿ ಜೀವರಸವ ಹನಿಹನಿಯ ಸವಿಯುತ
    ಬಿಡಿಸಲಾರಿಹರಿನ್ನಿಲ್ಲ ತಡೆವಾರರೆನ್ನನೀ ನಭದೊಳು
    ಗರುಡನಿವನೆರಗಿಹನು ನೆನೆ ನಿನ್ನ ದೈವವನು
    ಕ್ರೂರ ಕರ್ಮವಿದೆನೆಗೆ ಜೀವನದ ಧರ್ಮ ಕೂರ್ಮಾ

    ವಜ್ರ ಕವಚದ ಭದ್ರ ರಕ್ಷೆಯ ಭೀಮಶಕ್ತಿಯ ಕೂರ್ಮನಿಹೆನು
    ಮಥನ ಕಾಲದಿ ಮಂದರ ಪರ್ವತವನೆತ್ತಿ ಹೊತ್ತಿಹೆನು
    ಆದಿಶೇಷನ ಹಾಲಾಹಲದ ಭುಗಿಲ ಬೇಗೆಯ ಬಲ್ಲೆನು
    ದೇವದಾನವ ಮಥನ ಕಾಲದ ದಿಗಿಲ ಬಗೆಹರಿಸಿಹೆನು
    ಮೇರುದಂಡದ ಮಥನ ಘರ್ಷಣ ದಾರುಣವನುಂಡ ಬೆನ್ನಿನವನು
    ಇಂದಿರೆಯ ಚಂದಿರನ ಮದಿರಾಮೃತದ ಹುಟ್ಟ ಕಂಡಿಹೆನು
    ಕಾಲಘಟ್ಟದ ಕರ್ಮನಿರತನು ಧ್ಯೇಯ ಧರ್ಮದ ಪಥಿಕನು
    ವಜ್ರನಖಗಳ ಕ್ರೂರಕೊಕ್ಕಿನ ಮೇರು ರೆಕ್ಕೆಯ ಸೊಕ್ಕದೇತಕೆ
    ವಜ್ರಕವಚದ ಭದ್ರರಕ್ಷೆಯ ಸೀಳುವಾಸೆಯ ತೊರೆದು ಬಾ
    ವಿರಮಿಸೆನ್ನಯ ಬೆನ್ನಮೇಲೆಯೆ ಶಕ್ತಿಸಂಚಯ ಸ್ನೇಹಕೆ
    ನಭದೊಳಗೆ ಚಿಮ್ಮಿಹಾರುವೆಯಂತೆ ಮತ್ತೊಮ್ಮೆ ವಿಶ್ವದುನ್ನತಿಗೆ
    ಕಾಲಗರ್ಭದಿ ಕಾಯುವೆನು ದೈವ ಕಾರ್ಯದ ಕರೆಯ ಕಂಕಣಕೆ

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)