Sep 072014
 

pp3

  163 Responses to “ಪದ್ಯಸಪ್ತಾಹ ೧೨೫: ಚಿತ್ರಕ್ಕೆ ಪದ್ಯ”

  1. ಸೆಳೆದಪನಯ್ಯೊ ಶೈಶಿರಮುರಾರಿ ನಿಜೋಜ್ಜ್ವಲವರ್ಣಪರ್ಣಸಂ-
    ಕುಳವಸನಂಗಳಂ; ಕಪಟಿಯಾತನ ಲಂಪಟತಂತ್ರಕೆಂತು ನಾಂ|
    ಅಳಿಯದೆ ನಿಲ್ವುದೆಂದು ತರುಗೋಪಿಕೆಯರ್ ಕಲೆಯುತ್ತುಮೆಲ್ಲರುಂ
    ಘಳಿಲನೆ ಗುಟ್ಟಿನಿಂದೆ ಪ್ರತಿತಂತ್ರನಿರೂಪಣಕಾದರೆಂಬೆನಾಂ||

    (ಇದರ ಸರಳತಾತ್ಪರ್ಯ ಹೀಗಿದೆ: ಚಳಿಗಾಲವೆಂಬ ಕೃಷ್ಣನು ಮರಗಳೆಂಬ ಗೋಪಿಕೆಯರ ಪರ್ಣವಸ್ತ್ರಗಳನ್ನೆಲ್ಲ ಸೆಳೆಯುವನೆಂದು ಚಿಂತಿಸಿ ಆತನ ತಂತ್ರಕ್ಕೆ ಪ್ರತಿತಂತ್ರವನ್ನು ಮಾಡಲೆಂದು ಅವೆಲ್ಲ ಹೀಗೆ ಒಟ್ಟಾಗಿ ಸೇರಿ ಗುಟ್ಟಾಗಿ ಸಮಾಲೋಚನೆ ಮಾಡುತ್ತಿರುವ ಹಾಗೆ ತೋರುತ್ತಿದೆ)

    ಸಂಕುಳ = ಸಂಕುಲ, ಸಮೂಹ. ಘಳಿಲನೆ = ಒಡನೆ

    • Fine imagination. Thanks.
      ವರ್ಷವರ್ಷವು ಚರ್ಚಿಸಿಯುಮಿಂತೆ ಗೋಪಿಯರು
      ಧರ್ಷದೀ ನಿರ್ಣಯವ ತಳೆವರಲ್ತೆಲ್|
      “ಆರ್ಷಕೃಷ್ಣನು ಮಾನಮಂ ಸೆಳೆವಮುನ್ನಮೇ
      ಹರ್ಷದಿಂದೊಪ್ಪಿಸಿಕೊಳುವುದೆ ಲೇಸೌ”||

    • ಬಹಳ ಸುಂದರವಾದ ಕಲ್ಪನೆ ಹಾಗೂ ಪದ್ಯ. ಈ ರೀತಿಯ ಕಲ್ಪನೆಗಳು ಹೊಳೆಯುವುದು ಸಾಮಾನ್ಯರಿಗೆ ಕಷ್ಟಸಾಧ್ಯ.

    • ಬಹಳ ಚೆನ್ನಾಗಿದೆ ಸರ್, ಉಲ್ಲೇಖಾಲಂಕಾರವಲ್ಲವೆ

      • ’ಚೆ’ ಎಂಬುದು ಮಹಾಪ್ರಾಣವಾಗಬೇಕು: ಉಲ್ಲೇಖಾಲಂಕಾರವಲ್ಲ! ಛೆ! 🙂

      • ರಾಮ್ ಮತ್ತು ಸೋಮರಿಗೆ ಧನ್ಯವಾದಗಳು.
        ಪ್ರಿಯ ಸೋಮ, ಇಲ್ಲಿ ರೂಪಕಾತಿಶಯೋಕ್ತಿ ಎಂಬ ಅಲಂಕಾರವಿದೆ.
        ಮರಗಳೇ ಗೋಪಿಕೆಯರು, ಶಿಶಿರವೇ ಕೃಷ್ಣ ಎಂಬ ಅಭೇದಭಾವದಲ್ಲಿ ರೂಪಕವಿದೆ. ಉಳಿದಂತೆ ಈ ಮರಗಳೆಲ್ಲ (ಗೋಪಿಕೆಯರೆಲ್ಲ) ಸೇರಿ ಸಮಾಲೋಚಿಸುತ್ತಿದ್ದಾರೆಂಬ ಕಲ್ಪನೆಯಲ್ಲಿ ಅತಿಶಯವಿದೆ.

  2. गगनाम्बरीषतलकीलितमुद्गान्
    परिभर्जयत्यहह ! किं वनदेवी।
    तरुकाण्डकोटिचमसैरथ कर्तुं
    सरसं च मुद्गमहितोदनमेवम्॥

    • रविचुल्लिघोरतपनान्ननु खाद्यं
      सलिलाभवाच्च सममक्षि विनष्टम् । 🙂

      • न हि मित्र ! मेघजलबिन्दुभिरेव
        स्फुटमस्ति रस्यनवपाचनसिद्धिः।
        करका भवन्ति किल शार्करखण्डाः
        तुहिनांशुकान्तिघृतमप्यथ सज्जम्॥ 🙂

  3. ಪ್ರಹರ್ಷಿಣಿ||
    ಹೇಮಂತಕ್ಕಿನಿತುಮಿದೇಂ ಬಭಸ್ತಿಯೈ (blame) ನಿ-
    ರ್ಣಾಮಂ ಗೈವುದದೆಲೆಯನ್ನುಮೆಲ್ಲಮೆಂದುಂ|
    ವ್ಯೋಮಕ್ಕೇರಿಹ ವಿಟಪಂಗಳಂ ಪತಂಗಂ (Sun)
    ಹೋಮಜ್ವಾಲೆಯವೊಲು (ಸುಟ್ಟು ಉದುರುವಂತೆ) ಗೈದನಲ್ಲಮೇಂ ತಾಂ||

  4. सौवर्णेन समानभानतरुषु स्वस्थानमानानसौ
    भेदज्ञो हरितो नगोऽभिमनुते, साम्येषु किं बन्धुरम् ।
    प्रत्यूचुस्तरवोऽनिलेन सरता सोपेक्षभावं यथा
    साकल्ये निहितं नितान्तगणितं नः सामरस्ये तथा ॥

    ಸುವರ್ಣವರ್ಣಪರ್ಣಗಳಿಂದ ಕೂಡಿದ ಮರಗಳ ಮಧ್ಯೆ ಹಸಿರು ಮರವೊಂದು ತನ್ನ ಸ್ಥಾನಮಾನಗಳನ್ನು, “ಸಮಾನತೆಯಲ್ಲಿ ಏನು ಸೌಂದರ್ಯ?” ಎಂದು ಚಿಂತಿಸಿತು. ಆ ಮರಗಳು ಬೀಸುವ ಗಾಳಿಯಮೂಲಕ ತಿರಸ್ಕಾರ ಭಾವನೆಯೊಂದಿಗೆ ಎಂಬಂತೆ “ನಮ್ಮ ಉತ್ಕೃಷ್ಟತೆ ಒಟ್ಟುಗೂಡಿಕೆಯಲ್ಲಿ ಮತ್ತು ಸಾಮರಸ್ಯದಲ್ಲಿ ಇದೆ”ಯೆಂದು ಹೇಳಿದವು. (ಈ ಚಿತ್ರವನ್ನು ನೋಡಿ ವ್ಯಷ್ಟಿ-ಸಮಷ್ಟಿಗಳ ಸ್ವಲ್ಪ ಹೆವಿ ದ್ವಂದ್ವಭಾವನೆಯು ಮನಸ್ಸಿಗೆ ಬಂದದ್ದು).

  5. ಪಸಿಪತ್ತಲಂಗಳಂ ಚಿರ
    ಕಿಸು,ಪೀತ ಗೊಳಿಸುತಲೆಸೆದರಂ ಕಂಡುಂ ಬಲ್
    ಪೊಸದಕ್ಕೋತಂಬರೆಯುಂ
    ಬಿಸದಳದಿಂ, ಗುಟ್ಟನರಿಯೆ ಕಾತರಿಸಿಹಳೇಂ?

    • ಪದ್ಯಾರ್ಥವು ಸ್ಪಷ್ಟವಾಗುತ್ತಿಲ್ಲ; ದಯಮಾಡಿ ವಿವರಿಸಿರಿ.

      • ಹಸಿರು ಪತ್ತಲಗಳನ್ನು ಸ್ಥಿರವಾದ ಕೆಂಪು,ಹಳದಿ ಬಣ್ಣಕ್ಕೆ ತಿರುಗಿಸಿದವರನ್ನು ಕಂಡ ಅಂಬರೆಯು ಹೊಸತನಕ್ಕೆ ಮಾರು ಹೋಗಿ ಆಶ್ಚರ್ಯದಿಂದ ಅದರ ಹಿಂದಿನ ಗುಟ್ಟನ್ನು ತಿಳಿಯಲು ಕಾತರಿಸಿರುವಳೇ?( ಪಸಿ=ಹಸಿರು ಬಣ್ಣ)

  6. ನೀಲಾಕಾಶಕೆ ನಲ್ಮೆಯ
    ಸಾಲಂಗಳ್ ಕೊಂಬೆ-ರೆಂಬೆಪಿಚಕಾರಿಗಳಿಂ|
    ಲೀಲಾವಸಂತಸೇಕದ
    ಹೋಲಿಕೆಯಂ ನೀಳ್ದುವೇಂ ತರಗೆಲೆಯ ಕತದಿಂ?

    (ಹೋಲಿಕೆ = ಕಾಮನ ಹಬ್ಬ, ಹೋಲಿ)

  7. ನಾನಿಹೆ,ನಾನಿರ್ಪೆನುತುಂ
    ಬಾನನು ಚುಂಬಿಸುತಲಿರ್ಪತರುವೃಂದಗಳೀ|
    ಕಾನನದಾಸೌಂದರ್ಯವ
    ಜೇನಿನಸವಿಯಂತೆಪೆರ್ಚಿಸಿರ್ಪುದನೋಡೈ|

    • ಚೀದಿ,
      ೧) ನಾನಿರ್ಪೆನುತುಂ: ನಾನಿರ್ಪೆನೆನುತುಂ ಅಥವಾ ನಾನಿರ್ಪೆ ಎನುತುಂ
      ೨) ಕಾನನದಾ: (ವೃಂದಗಳ್)ಈ ಎಂದಿರುವಾಗ, (ಕಾನನದ)ಆ ಎನ್ನುವುದು ಪುನರುಕ್ತಿ.
      ೩) ಬಾನನು, ಸೌಂದರ್ಯವ, ಜೇನಿನ, ಸವಿಯಂತೆ – ಇವನ್ನು ಹಳತಾಗಿಸಬೇಕು.
      ಹೀಗೊಂದು ಸವರಣೆ:

      ಆನಿರ್ಪೆನಾನುಮೆನುತುಂ (ಆನ್ ಇರ್ಪೆನ್ ಆನುಂ ಎನುತುಂ)
      ಬಾನಂ ಚುಂಬಿಸುತೆ ಮೆರೆಯೆ ತರುವೃಂದಮುಮೀ|
      ಕಾನನದೀಪ್ತಿಯ ಗೈದಿಹು-
      ದೇನೀ ನಾವೀನ್ಯದಿಂದೆನುತ್ತುಂ ನೋಡಾ||

      • ಇಡೀ ಪದ್ಯವನ್ನೇ ಸರಿಪಡಿಸಿದ್ದಕ್ಕೆ ಧನ್ಯವಾದಗಳು…

        • ಕೊನೆಯ ಪಾದದಲ್ಲಿ ಮಾತ್ರ ಪ್ರಾಸಪದವನ್ನು ಬದಲಿಸಿದ್ದೇನೆ. ಉಳಿದಂತೆ ಎಲ್ಲ ನಿಮ್ಮ ಮಾತೇ. ಭಾಷೆಯನ್ನು ತುಸು ಹಳತಾಗಿಸಿದ್ದೇನೆ ಅಷ್ಟೆ.

    • ಆಶಯ ಚೆನ್ನಾಗಿದೆ

  8. ಉರಿವ ಬಿಸಿಲತಾಪಕ್ಕೆಪ
    ಸಿರನಾಹುತಿಯಿತ್ತುಕಾನನದಜೀವಿಗಳಿಂ|
    ಗಿರುಳಿನ ಕಳ್ತಲೆಯ ತಂಪ
    ನೆರೆಯಲ್ಕಾಗಸವಮುಚ್ಚಿತೀ ತರುಲತೆಗಳ್|

    • ಐಡಿಯ ಚೆನ್ನಾಗಿದೆ. ಮೂರನೆಯ ಪಾದದ ಕೊನೆಯ ಗಣ ಜಗಣವಾಗಿದೆ. ಸವರಿಸಿ.

      • ಸವರಣೆಗಳಿಗೆ wholesale ಧನ್ಯವಾದಗಳು ಪ್ರಸಾದರೆ!!

      • ಉರಿವ ಬಿಸಿಲತಾಪಕ್ಕೆಪ
        ಸಿರನಾಹುತಿಯಿತ್ತುಕಾನನದಜೀವಿಗಳಿಂ|
        ಗಿರುಳಿನ ಕಳ್ತಲೆ ತಂಪ-
        ನ್ನೆರೆಯಲ್ಕಾಗಸವಮುಚ್ಚಿತೀ ತರುಲತೆಗಳ್|

        is this correct?

        • ಕಲ್ಪನೆ ಚೆನ್ನಾಗಿದೆ. ಆದರೆ ಕಡೆಯಲ್ಲಿ “……ಮುಚ್ಚಿತೀ…” ಎನ್ನುವಲ್ಲಿ ಏಕವಚನ ಬಂದಿದೆ. ತರುಗಳ್ ಎಂದಿರುವ ಕಾರಣ ಬಹುವಚನ ಬರಬೇಕು.

    • ಚೆನ್ನಾಗಿದೆ

  9. ಗಾಳಿ ಘೋರನೆ ಬೀಸುತಿರ್ದರು
    ಮೇಳಿಗೆಯ ಬೆಂಬತ್ತಿ ಪೋಗುತೆ
    ಬಾಳದಾರಿಯೊಳಿರದುತನ್ನೊಳ್ದ್ವಿತ್ವಮೆನ್ನುತಿರಲ್|
    ಆಳದಾಳಕು ಬೇರನೂರುತ
    ಲೇಳುತಿರಲಿಳೆಯಿಂದ ಬಾನಿಗೆ
    ಧಾಳಿಕೋರರಿಗಂಜದೆಯೆ ನಿಂತಿರ್ಪುದೀತರುಗಳ್|

    • ಘೋರನೆ- ಗಾಳಿಬೀಸಿರೆ ಭೋರೆನುತ್ತುಂ
      ನಿಂತಿರ್ಪುವೀ*ತರುಗಳ್

      • ಪ್ರಿಯ ಚೀದಿ,
        ಮೇಳಿಗೆ ಎಂದರೆ ಅರ್ಥವಾಗಲಿಲ್ಲ.
        ನಿನ್ನ ಪದ್ಯಗಳಿಗೆ ಪ್ರಸಾದು ಅವರ ತಿದ್ದುಗೆಗಳು ಚೆನ್ನಾಗಿವೆ. ಅವರು ನನ್ನ ಕೆಲಸವನ್ನು ಹಗುರಾಗಿಸಿದ್ದುದಕ್ಕೆ ಧನ್ಯವಾದ.

        • ಪ್ರಸಾದು ಅವರೆ, ಸವರಣೆಗಳಿಗೆ ವಂದನೆಗಳು…
          ಗಣೇಶ್ ಸರ್, ಬೀಸುತಿರ್ದರುಂ +ಏಳಿಗೆ ಎಂಬ ಅರ್ಥದಲ್ಲಿ ಬರೆದಿದ್ದೆ…

  10. ನೆಲನೊಳ್ ನಿಲ್ಲುತೆ ದಿಟ್ಟಿಸಲ್ಕೆ ನಭದುತ್ತುಂಗಂಗಳಂ ಚುಂಬಿಪಾ
    ಅಲರಂ ಪೋಲ್ವೆಲೆಯಂದಮಂ ಕವನಿಸಲ್ ಮತ್ತೇಭದೊಳ್, ಹ್ಲಾದದಿಂ
    ಭಲರೇ ಸತ್ಕವಿವಾಣಿ ಪೆರ್ಚಿಪುದಲಾ ಎಂದೆನ್ನುತುಂ ಭೂರುಹಂ-
    ಗಳ ಪುಂಜಂ ಪರಿವೇಷಮಾಯ್ತೆ ಕವಿಯಂ ಕಾಣಲ್ಕೆನುತ್ತಾಗಳೇ!

    • ವಾಹ್! ಆತ್ಮಪ್ರತ್ಯಯಕ್ಕೆ ತಗುವಂತಹ ರಚನೆ. ’ಕವಿಯುಂ’ ಎಂದರೆ ಹೆಚ್ಚಿನ ಅರ್ಥಸ್ಫುಟತೆ ಇರುತ್ತದೆ.

      • ಕವಿಯಂ ಎಂದೇ ಬರೆದದ್ದು ಪ್ರಸಾದರೆ, ಮರಗಳು ಸುತ್ತುಗಟ್ಟಿ ನಡುವಿರುವ ಕವಿಯನ್ನು ನೋಡುತ್ತಿವೆ ಎಂಬುದು ಆಶಯ

        • ಒಳ್ಳೆಯ ಉತ್ಪ್ರೇಕ್ಷಾಲಂಕಾರವಿಲ್ಲಿದೆ. ಕಲ್ಪನೆಯೂ ಚೆನ್ನಿದೆ.
          ಕಾಂಚನಾ ಅವರೆ, ಇಲ್ಲಿ ವಿಸಂಧಿದೋಷವೇನಿಲ್ಲ. ಆದರೆ ಹೀಗೆ ಚುಂಬಿಪಾ, ಪೆರ್ಚಿಪಾ, ಮನ್ನಿಪಾ ಎಂಬಂತೆ ಅರ್ಥಸ್ವಾರಸ್ಯವಿಲ್ಲದೆ “ಆ” ಎಂಬ ದೀರ್ಘವನ್ನು ಪದ್ಯದಲ್ಲಿ ತರುವುದು ಅಷ್ಟಾಗಿ ಚೆನ್ನೆನಿಸದು:-)

          • ಹೌದು ಗಣೇಶ್ ಸರ್, ಗುರ್ವಕ್ಷರದ ಸ್ಥಾನಗಳು ಕೆಲವೊಮ್ಮೆ ನನ್ನನ್ನು ಹಾದಿತಪ್ಪಿಸುತ್ತಿದೆ, ಗಮನಿಸಿಕೊಳ್ಳುತ್ತೇನೆ 🙂

  11. ಪದ್ಯವು ಬಹಳ ಚೆನ್ನಾಗಿದೆ. ಆದರೆ ಚುಂಬಿಪಾ ಅಲರ್ — ಇಲ್ಲಿ ಸಂಧಿ ಆಗಬೇಕಲ್ಲವೇ?

    • ‘ಚುಂಬಿಪಾ ಅಲರ್’ ಅನ್ನು ಚುಂಬಿಪಾಲರ್ ಎಂದು ಮಾಡಿದರೆ ಎರಡನೆಯ ಪದದ ಮೊದಲಕ್ಷರ ದೀರ್ಘವೆಂಬಂತೆ ತೋರುತ್ತದೆ, ಹಾಗಾಗಿ ಇಲ್ಲಿ ‘ಚುಂಬಿಪಾ ಅಲರ್’ ಸರಿಯಾಗುತ್ತದೆ

      • ಚುಂಬಿಪ + ಆ + ಅಲರ್ ಎಂದಿದ್ದರೆ ಮಾತ್ರ ಸರಿಯಾಗುತ್ತೆ; ಹಾಗಲ್ಲವಾದಲ್ಲಿ ಕಾಂಚನಾರವರೆಂದಂತೆ ಚುಂಬಿಪಲರ್ ಎಂದೇ ಸಂಧಿ ಆಗಬೇಕು. ಆದರೆ ಇಲ್ಲಿ ಬೆಟ್ಟು ಮಾಡಿ ತೋರಿಸಲು ಯಾವ ಅಲರೂ ಕಾಣುತ್ತಿಲ್ಲವಲ್ಲ, ಸೋಮ??

        ಚುಂಬಿಪೊಂದಲರಂ ಎಂದು ಮಾಡಬಹುದೆನಿಸುತ್ತೆ. ಪದ್ಯ ಚೆನ್ನಾಗಿದೆ.

        • ಜೀವೆಂ,

          ನಮಸ್ಕಾರ ಹೇಗಿದ್ದೀರಿ, ಎಷ್ಟು ದಿವಸದ ನಂತರ ಪದ್ಯಪಾನದಲ್ಲಿ ಬರೆಯುತ್ತಿದ್ದೀರಿ. ದಯವಿಟ್ಟು ಹೀಗೆಯೆ ಒಡನಾಟದಲ್ಲಿರಿ 🙂

          ಪದ್ಯದಲ್ಲಿ ನನ್ನ ಆಶಯ ‘ಚುಂಬಿಪ + ಆ + ಅಲರ್’ ಎಂದೇ ಇತ್ತು,
          ಎಲೆಪೂವಿಂಡಿನೊಳಂದಮಂ – ಎಲೆಗಳೆಂಬ ಹೂವಿನ ಹಿಂಡಿನಲ್ಲಿ ಅಂದವನ್ನು ಎಂದು ಬದಲಿಸುತ್ತಿದ್ದೇನೆ (ಹೂವಿನಂತಹ ಎಲೆಯ ಬದಲು ಎಲೆಗಳೆನ್ನುವ ಹೂವಿನ ಪುಂಜವೆಂಬ ವಕ್ರಮಾರ್ಗವನ್ನು ತೆಗೆದುಕೊಂಡಿದ್ದೇನೆ)

          • ಸೋಮ, ನಿನ್ನ ವ್ಯಾಕರಣ ಚೆನ್ನಾಗಿದೆ; ಯಾವುದೇ ತಪ್ಪಿಲ್ಲ. ಆದರೆ ಇಲ್ಲಿಯ ಮತ್ತೊಂದು ಅಂಶದ ಬಗೆಗೆ ಸ್ವಲ್ಪ ತಗಾದೆ ತೆಗೆದಿದ್ದೇನೆ. ಅದನ್ನು ಈ ಮೊದಲೇ ಇರುವ comment ನಲ್ಲಿ ಕಾಣಬಹುದು:-)

  12. ಕರಗಿತಾನು ಗ್ರೀಷ್ಮದೆದುರಿಗೆ
    ಕರುಣೆಯ ನೆರಳ ನೀಡಿ ಮನುಜಗೆ
    ಮರೆತ ಪಾಠವ ಜಗಕೆ ನೆನಪಿಸಿ ಕರ್ತೃನಿಷ್ಥೆಯಲಿ ।।
    ಚರಣ ಮಣ್ಣಲಿ ಶಿರವು ಬಾನಲಿ
    ಹರಡಿ ಕೊಡೆಯನು ವಿಶ್ವರೂಪಗೆ
    ಧರಿಸಿಕಾವಿಯ ತೊರೆದುಹಸಿರನಮೂಲ್ಯ ಸೇವೆಯಲಿ ।।

    • ೧) ಕರುಣೆ/ಯ ನೆರಳ: ಲಘುಬಾಹುಳ್ಯವು ಉಚ್ಚಾರಣೆಗೆ ತೊಡಕಾಗದಂತಿರಬೇಕು. ಹೀಗೆ ಒಂದು ಅಕ್ಷರವನ್ನು ಬೇರ್ಪಡಿಸಿದರೆ ಶ್ರುತಿಕಟುವಾಗುತ್ತದೆ. ಕರುಣಛಾಯೆಯ ಎಂದು ಸವರಬಹುದು.
      ೨) ಚರಣ ಮಣ್ಣಲಿ ಶಿರವು ಬಾನಲಿ: ‘ಶಿರವು’ ಎಂಬಲ್ಲಿ ಪ್ರತ್ಯಯವು (ವು) ಇರುವಂತೆ, ‘ಚರಣ’ಕ್ಕೂ ಪ್ರತ್ಯಯವು ಅಗತ್ಯ. ಇಲ್ಲದಿದ್ದರೆ, ಚರಣಮಣ್ಣಲಿ=ಕಾಲಿನ ಮಣ್ಣಿನಲಿ ಅಥವಾ ಮಣ್ಣಾದ ಕಾಲಿನಲಿ ಎಂಬ ಅರ್ಥ ಬರುತ್ತದೆ.
      ೩) ಪ್ರತ್ಯಯವಿಲ್ಲದ ಶಬ್ದವು ವಿವಿಕ್ತವಾಗಿ ನಿಲ್ಲದು. ಮುಂದಿನ ಶಬ್ದದೊಂದಿಗೆ ಸೇರಿಸಿ ಬರೆಯಬೇಕು: ಕರ್ತೃನಿಷ್ಠೆಯಲಿ, ವಿಶ್ವರೂಪಗೆ.
      ೪) ‘ಹಸುರು’ ಸಾಧುರೂಪ. ‘ಹಸಿರು’ ಸಹ ಸಾಧುವೆ?

      • ಸವರಣೆಗಳಿಗೆ ಧನ್ಯವಾದಗಳು ಮೇಷ್ಟ್ರೇ ….’ಶಿರವು ಬಾನಲಿ ಪಾದ ಭುವಿಯಲಿ’ ೨ನೇ ಪಾಯಿಂಟ್ ಅನ್ನು ಹೀಗೆ ಸವರಬಹುದೇ..? ೩ ನೇ ಪಾಯಿಂಟ್ ಅನ್ನು ಮೂಲದಲ್ಲಿ ತಿದ್ದಿದೇನೆ…

        • ಈಗ ‘ಪಾದ’ಕ್ಕೆ ಚಪ್ಪಲಿಯು (ಪ್ರತ್ಯಯ) ಇಲ್ಲದಂತಾಯಿತು 🙂
          ‘ಶಿರವು ಗಗನದೆ ಪದವು ಪಂಕದೆ’ ಎನ್ನಿರಿ. ‘ಶಿರವು ಬಾನೊಳು ಪದವು ಬುವಿಯೊಳು’ ಎಂದೂ ಹೇಳಬಹುದು. ‘ಗಗನದೆ’ ಹಾಗೂ ‘ಬುವಿಯೊಳು’ ಎಂಬುವು ಸರ್ವಲಘುವಾದರೂ ಶ್ರುತಿಕಟುವಲ್ಲ ಎಂಬುದನ್ನು ಗಮನಿಸಿ.

    • ಬಹಳ ಚೆನ್ನಾಗಿದೆ ವೇದಪ್ರಕಾಶರೆ

    • ಒಳ್ಳೆಯ ಕಲ್ಪನೆ. ಪ್ರಸಾದರೆಂದಂತೆ, ಅನೇಕ ಲಘುಗಳು ಒಟ್ಟಿಗೆ ಸಾಲಾಗಿ ಬರದಂತೆ ರಚಿಸಿದರೆ, ಧಾಟಿಯಲ್ಲಿ ಓದಲು ತೊಡಕಾಗದು.

      • ಸವರಣೆ ಮತ್ತು ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು….. 🙂

  13. || ಕಂದಪದ್ಯ, ಉಪಮಾಲಂಕಾರ ||

    ಪರ್ಣರಹಿತವೃಕ್ಷಂಗಳ್,
    ವರ್ಣದ, ಕಣ್ಸೆಳೆವ ಪೂಗಳಿಂದೆಸೆಯುತಿರಲ್,|
    ವರ್ಣಿಸಲಸದಳಮೆಂಬೆಂ,
    ಸ್ವರ್ಣಖಚಿತದವೊಲೆ ಕಾಂಬ ನೀಲಿಯ ನಭಮಂ ! ||

    • ಆಕಾಶವನ್ನು ಸಿಂಗರಿಸಿರುವ ಪದ್ಯ ಚೆನ್ನ

    • ಒಳ್ಳೆಯ ಕಲ್ಪನೆ. ಪದಪದ್ಧತಿಯೂ ಚೆನ್ನಾಗಿದೆ.

    • ಪದ್ಯವನ್ನು ಮೆಚ್ಚಿದ ಸೊದರರಿಬ್ಬರಿಗೂ ಧನ್ಯವಾದಗಳು.ಬಿಡುವಿರದ ಕೆಲಸದೊತ್ತಡದಿಂದಾಗಿ ಈ ಬಾರಿ ತುಂಬ ಸುಲಭವಾದ ಕಂದಪದ್ಯವನ್ನು ರಚಿಸಬೇಕಾಯಿತು,ಮನ್ನಿಸಿರಿ. ಸಮಯಾವಕಾಶವಿರುವಾಗಲೆಲ್ಲಾ ವೃತ್ತರಚನೆಗೇ ಗಮನಹರಿಸುವೆ.

  14. ಹೇಮಂತನಾಗಮವನೀಪ್ಸೆಯಿಂದೀಕ್ಷೀಸುತೆ
    ಭಾಮೆಯಂಬರೆಯು ತಾ ಕಾಯುತಿರಲು
    ಧೂಮಸಮನೆದ್ದ ಬಣ್ಣದ ಕನಸು, ಹೆಣೆದವೇಂ
    ಪ್ರೇಮ ಮಂದಿರವನಾ ನಲ್ಲಗೆಂದು?

    • ಉದುರಿಬೀಳ್ವುದು ಸ್ವಪ್ನಮಂದಿರವು ತಾನೆಂಬು-
      ದಿದನೋಡಿರಿದ ಧ್ವನಿಯನದ್ಭುತಮನುಂ!

    • ‘ಧೂಮಸಮನೆದ್ದ ಬಣ್ಣದ ಕನಸು’ ಎಂಬ ಹೋಲಿಕೆಯು ಬಹಳ ಹಿಡಿಸಿತು, ಅದಕ್ಕೆ ಪ್ರಸಾದರ ಉಕ್ತಿಯೂ ಚೆನ್ನಾಗಿದೆ 🙂

    • ಉತ್ತಮವಾದ ಪದ್ಯ; ಒಳ್ಳೆಯ ಕಲ್ಪನೆ ಹಾಗೂ ಚೆನ್ನಾದ ರಚನಾಪದ್ಧತಿ ಕೂಡ.

  15. ಸಾಂಗತ್ಯ|| ಕಾವದು (stem) ಕಪ್ಪಿದ್ದೂ ಪೊನ್ನಿನ ಬಣ್ಣವು
    ತೀವಿರ್ಪುದಿಂತೆಂಬೆನೆಲೆಯೊಳ್|
    ತಾವಿದ್ದೂ ಕಡುಗಪ್ಪು ತಾಯ್ತಂದೆಯರು ಪೆತ್ತೊಲ್
    ಸೌವರ್ಣದಿಂದಿರ್ಪ ಕೂಸಂ||

  16. The vibrant leaves are concealing the dusky stem.
    ಚರ್ಚರೀ||
    ದಲಪಾತಿಯೊಲು* ಬದುಂಕ ನಡೆಸಬೇಕದೊ ಬಲುಹಿಂ
    ಕಲೆಯಂ (Black stem) ಮರೆಸುತೆ ಕಾಂಡದೊಳಗ, ತೋರುತೆ ಬಗೆಯಂ|
    ಪೊಲೆಯಂ ಮನೆ-ಮನಕುಕ್ಷಿಯೊಳಿರಿಸುತ್ತಲಿ ನಿರುತಂ
    ಗೆಲುವಂ ಮಿಗೆ ಪರಿಸುತ್ತಲಿ ಸಮೆಸುತ್ತಲಿ ಭವಮಂ||
    * ಪರ್ಣಪಾತಿ=Deciduous tree

  17. ಮೇಲೆ, ಸಂಖ್ಯೆ 4ರಲ್ಲಿನ ನರೇಶರ ಪದ್ಯಕ್ಕೆ ವಿವಾದಿಯಾಗಿ: A small member of the group of trees is still holding green, while its peers have hastened to pale (become yellow). It appeals to them thus:
    ತಾಳ್ರಲೇ/ ಮಕ್ಕುಳ್ರ/ ಕೇಳ್ರಲೆ/ ನನ್ಮಾತ
    ಬಾಳ್ರಲೇ/ ಇನ್ನೊಂ/ದೀಟ್ ದಿವ್ಸ| ಎಂದ್ರೂವೆ
    ಹೇಳ್ರಲೆ/ ಔಸ್ರ/ ಏನ್ಕ್ ಬಿದ್ದ್ರಿ (ಯೋಳ್ರಲೆ ಔಸ್ರ ಯಾನ್ಕ್ ಬುದ್ದ್ರಿ)||

    • ಪ್ರಸಾದು – ೨, ೩ನೆ ಪಾದಗಳಲ್ಲಿ ಬ್ರಹ್ಮಗಣ ೨ ವಿಷ್ಣು ಗಣಗಳ ನಡುವೆ ಬರಬೇಕು.
      ಬ್ರಹ್ಮ ಗಣಕ್ಕೆ ‘ನಾನಾ’ ಅಥವಾ ‘ನನನಾ’ ಎಂಬ ಲಕ್ಷಣಗಳು
      ವಿಷ್ಣು ಗಣಕ್ಕೆ ‘ನಾನಾನಾ’ ಅಥವಾ ‘ನನನಾನಾ’ ಎಂಬ ಲಕ್ಷಣಗಳು.
      ಮೇಲಿನ ಲಕ್ಷಣಗಳಲ್ಲಿ ‘ನಾ’ ಬದಲು ‘ನs’ ಉಪಯೋಗಿಸಬಹುದು.
      ನಿಮ್ಮ ಪದ್ಯದಲ್ಲಿ ಬ್ರಹ್ಮ ಗಣ ಬರುವಲ್ಲಿ ತೊಡಕಾಗಿದೆ.

      • I have corrected a ನಾನನನ ಗಣ to ನಾನಾನ, and have marked the gaNa-s. Please review now and let me know.

        • ಈಗ ಸರಿಯಾಗಿದೆ. ನನಗೆ “ಯಾನ್ಕ್ ಬುದ್ದ್ರಿ” ಎಂಬುದನ್ನು ಮೂರು ಮಾತ್ರೆಗಳಲ್ಲಿ ಓದಲು ಕೊಂಚ ತೊಡಕು. “ಯಾಕ್ಬುದ್ದ್ರಿ” ಸ್ವಲ್ಪ ಮೇಲು. 🙂

  18. ಪಡುದೆಸೆಯೊಳು ಬೀಳುವ ನೇಸರನಿ
    ತ್ತುಡುಗೊರೆಯೋ? ನಿಡುಬಾಳಿನ ಮೂಸೆಯ
    ಕಡವರವೋ? ರವಿ ಮೂಡುವ ಸುಳಿವೋ?
    ಕುಡಿಗಳ ಬದುಕಿನ ಮುಂಬೆಳಗೋ?

    • ಚೆನ್ನಾಗಿದೆ. ‘ಮುಂಬೆಳಕೋ’ ಹೆಚ್ಚು ಸೂಕ್ತವಾಗಿರುತ್ತದೆ. ಎರಡನೆಯ ಪಾದದಲ್ಲಿ ಏಕೆ ಊನಗಣವಿಲ್ಲ? ಮಂದಾನಿಲರಗಳೆಯಾದರೆ, ನಾಲ್ಕನೆಯ ಪಾದದಲ್ಲೂ ಊನಾಗಣವಿರಬಾರದು. ದಯವಿಟ್ಟು ತಿಳಿಯಡಿಸಿ.

      • ಇಲ್ಲ ಪ್ರಸಾದು, ಮುಂಬೆಳಗು ಎಂಬುದೇ ಯುಕ್ತತರ.ಇಲ್ಲಿ ಮಿಗಿಲಾದ ಹಳಗನ್ನಡದ ಬನಿಯಿದೆ.

      • ಬೆಳಕು – ದೀಪ; ಬೆಳಗು – ಹಗಲು.

        ಈ ಪದ್ಯ ಬರೆಯಹೊರಟಾಗ ತಲೆಯಲ್ಲಿ ತೆಂಕಣಗಾಳಿಯಾಟವಾಡಿತು – ಇನ್ನಾವುದೇ deep reason ಇಲ್ಲ. 🙂

        • ಗಣೇಶರೆ,
          ಕವಿಯ ಆಶಯವು ’guiding light’ ಎಂದೆಣಿಸಿ ‘ಮುಂಬೆಳಕು’ ಎಂದು ಸೂಚಿಸಿದೆ. ’ಮುಂಬೆಳಗು’ ಎಂಬುದು ’to dawn, to herald’ ಎಂದು ವೇದ್ಯವಾಯಿತು.

    • ಬಹಳ ಚೆನ್ನಾಗಿದೆ ಜೀವೆಂ

    • ಬೆಡಗಿನ ನುಡಿಗಟ್ಟುಗಳಿಂದೆಸಕವ
      ಮಿಡಿದಿದೆ ಮೋಹಕ ಕಲ್ಪನೆಯು
      🙂

    • ಸೋಮ ಪ್ರಸಾದು ಗುರುರಾಗರೆ ರಾಮಚಂದ್ರಾ
      ನೀಮಿತ್ತ ನಲ್ನುಡಿಗಳಿಂಗಿದೊ ಧನ್ಯವಾದಂ

  19. ಮರೆಯಲ್ತನ್ನನೆಪೊಕ್ಕುತುಂಕನಸಸಿನಾ ಲೋಕಕ್ಕೆ ತಾ ನಿದ್ರೆಯೊಳ್
    ತೆರೆಯಲ್ ರೆಪ್ಪೆಗಳಿಂದಕಂಡೊಡನೆಯೇಂ ಹಾ! ಎನ್ನುತಾಶ್ಚರ್ಯದಿಂ
    ತೆರೆಯಂತಿರ್ದಪನೀಲಿಯಾಗಸದೊಳೋಡಾಡಿರ್ದವೊಲ್ಲೆಲ್ಲಿಯುಂ
    ತರುವೃಂದಂಗಳು ಮೌನನಾಟಕಮನಾಡಿರ್ದಂತೆ ತೋರಿರ್ಪುದೈ

    • ನಿದ್ದೆಯಿಂದೆದ್ದರೆ ಅಬ್ಬಾ! ನೀಲಿಯಾಗಸದಲ್ಲಿ ಇಷ್ಟೆಲ್ಲ ಬದಲಾವಣೆ ಎಂಬ ಕಲ್ಪನೆ ಚೆನ್ನಾಗಿದೆ ಚೀದಿ
      (ಯಾವ ಋತುವಿನಲ್ಲಿ ಮಲಗಿದೆಯಪ್ಪಾ? ಹೇಮಂತದಲ್ಲೆ ಇರಬೇಕು 🙂 )

    • ಚೀದಿ,
      ೧. ರಪ್ಪೆಗಳಿಂದ ಕಾಣುವುದು ಎಂದರೆ ಸ್ವಲ್ಪ ಅರ್ಥ ತೊಡಕಾಗುತ್ತದೆ.
      ೨. ಇರ್ದಪಂ ಅಂದರೆ – ಇರುವನು; ಪೇಳ್ದಪಂ ಅಂದರೆ – ಹೇಳುವನು [ಸದ್ಯದ ಭವಿಷ್ಹ್ಯದ ಸೂಚನೆ]. ಆದ್ದರಿಂದ ‘ತೆರೆಯಂತಿರ್ದಪ’ ಸರಿಯಾಗಲಾರದು. ನನ್ನ ವಿವರಣೆ ಪೂರ್ಣವಾಗಿರ್ರಲಾರದು, ಆದರೂ …
      ೩. ವೊಲ್ + ಎಲ್ಲಿಯುಂ = ವೊಲೆಲ್ಲಿಯುಂ ಹೊರತು ವೊಲ್ಲೆಲ್ಲಿಯುಂ ಅಲ್ಲ. ಇದನ್ನು ‘ವೋಲೆಲ್ಲಿಯುಂ” ಅಂದರೆ ಸರಿಯಾದೀತು
      ೪. ಮೊದಲ ಪಾದದಲ್ಲಿ ಏಕವಚನವಿದೆ. ಕೊನೆಯ ಸಾಲಿನಲ್ಲಿ ಬಹುವಚನ. ಅಂದರೆ ಕನಸು ಕಂಡಿದ್ದು ಅವುಗಳ ಕೆಳಗೆ ಮಲಗಿರುವವನೊಬ್ಬ ಎಂದು ಅರ್ಥೈಸಿಕೊಳ್ಳಬಹುದು. ಕವಿಯೇ ಈ ಅನುಭವವನ್ನು ಹೇಳುತ್ತಿದ್ದರೆ, ಮೊದಲೆರಡು ಪಾದಗಳಿಂದ ಹಾಗನಿಸುವುದಿಲ್ಲ. ಆದರೆ, ಕೊನೆಯ ಸಾಲು ಕವಿಯ ವಾಕ್ಯದಂತಿದೆ. ಅರ್ಥಾತ್, ಕೊಂಚ ಅನ್ವಯ ಕ್ಲೇಶವಿದೆ

      ದೋಷಾನ್ವೇಷಣೆಗೆನ್ನ ನಿಂದಿಸದಿರೈ ಪೇಳಿರ್ಪೆನಾಂ ನೇಹದಿಂ

      • ರಾಮ್ ನಿಮ್ಮ ತಿದ್ದುಪಡಿಗಳು ನನಗೆ ದಾರಿದೀಪವಾಗಲಿ… ಈ ನಿಮ್ಮ ಸಲಹೆಗಳನ್ನು ಮುಂದಿನ ಪದ್ಯಗಳಲ್ಲಿ ಅಳವಡಿಸಲು ಯತ್ನಿಸುವೆ.. ಧನ್ಯವಾದಗಳು…

    • ಪ್ರಿಯ ಚೀದಿ, ಕಲ್ಪನೆ ತುಂಬ ಸೊಗಸಾಗಿದೆ. ಆದರೆ ಪೊರ್ಕುತುಂ ಅಸಾಧುರೂಪ. ಅದು ಪುಗುತುಂ ಎಂದಾಗಬೇಕು. ಹಾಗೆಯೇ ಒಂದೆರಡು ಕಡೆ ಹಳಗನ್ನಡದ ಹದ ಜಾರಿದೆ. ಅವನ್ನು ಮುಖತಃ ವಿಸ್ತರಿಸುವೆ.

  20. ಪಸಿರೆಲೆಗಳ ಜೀವಮನೀಂ-
    ಟೆಸೆಗಲ್ ಭಾಸುರಸುವರ್ಣದಿಂ ಹಾ ಅನಲಂ
    ಜಸದಿಂ ಮೆರೆದಂ ಗಡ ಬನ-
    ಸಿರಿಯಾ ಹವನದೊಳು ನೀಲಧೂಮದೆ ಸುಯ್ದಂ

    ಹಸಿರಿದ್ದ ಮರಗಳನ್ನು ಕಾಳ್ಗಿಚ್ಚು ಪೂರ್ಣವಾಗಿ ಆಹುತಿ ತೆಗೆದುಕೊಂಡಾಗ ನೀಲಿಯ ಧೂಮವೆದ್ದಿತೆಂಬ ಕಲ್ಪನೆ

    • ಕಲ್ಪನೆ ಚೆನ್ನಾಗಿದೆ. ಆದರೆ ಶಿಶಿರದ ಪರ್ಣಗಳನ್ನು ಸ್ಪಷ್ಟವಾಗಿ ಕಾಳ್ಕಿಚ್ಚೆಂದು ಹೆಸರಿಸದೆ, ಬಾನನ್ನೇ ಹೂಗೆಯೆಂದು ವಾಚ್ಯವಾಗಿ ಸಮೀಕರಿಸದೆ ಅರ್ಥವಿಸುವುದು ಕ್ಲೇಶಾವಹ. ಹೀಗಾಗಿ ಇವನ್ನೆಲ್ಲ ಅಳವಡಿಸಿ ಬರೆದರೆ ಮತ್ತೂ ಒಚ್ಳಿತು.

  21. ಮ.ವಿ||
    ರವಿಬಿಂಬಪ್ರತಿಬಿಂಬನೋತ್ಕಟತರುಚ್ಛಾಯಾಪ್ರದೇಶಸ್ಥಿತ
    ಸ್ತವನೀಯಪ್ರತಿಭಾನ್ವಿತಾಕ್ಷಿಪಟಲದ್ಯೋತಿಪ್ರಭಾವಂಗಳೊಳ್
    ಕವಿಗಳ್ ಕಂಡಿರೆ ಚಿತ್ರಮಂ ವಿವಿಧರೂಪಿಂ, ವರ್ಣಿಸಲ್ ಸಲ್ಗುಮೇಂ
    ಕವನಂ ಮದ್ವಚನಪ್ರಭಂ,ಸಲುತೆನಲ್ ಕಾಮಾಲೆಯಾ ಕಣ್ಣಿದೈ!!
    (ರವಿಯ ಬಿಂಬವನ್ನೇ ಪ್ರತಿಬಿಂಬಿಸಲೆಂದು ಉತ್ಕಟವಾಗಿರುವ ತರುಗಳ ಛಾಯಾಪ್ರದೆಶದಲ್ಲಿ ನಿಂತ, ಸ್ತುತ್ಯ ಪ್ರತಿಭೆಯುಳ್ಳವನ ಅಕ್ಷಿಪಟಲದ ದ್ಯೋತಿಪ್ರಭಾವಗಳಲ್ಲಿ, ಕವಿಗಳು ಚಿತ್ರವನ್ನು ವಿವಿಧ ರೂಪಗಳಿಂದ ಕಂಡಿರಲು, ನನ ವಚನದಿಂದ ಹುಟ್ಟಿದ ಕವಿತೆ ವರ್ಣಿಸಲು ಸಲ್ಲುತ್ತದೆಯೇ! ಸಲ್ಲುತ್ತ ಹೇಳುವುದಾದರೆ ಅದು(ಚಿತ್ರವು) ಕಾಮಾಲೆಯ ಕಣ್ಣೇ ಸರಿ!!)

    (ವಿ.ಸೂ:ಹಿಂದೆ ಉತ್ತಮ ಕಲ್ಪನೆಗಳಿಂದ ಪದ್ಯವನ್ನು ಬರೆದ ಎಲ್ಲರ ಪದ್ಯಗಳಿಗೆ ಇದೇ ಪದ್ಯವು ಮೆಚ್ಚುಗೆಯ ಪದ್ಯವೂ, ಚಿತ್ರಕ್ಕೆ ನನ್ನ ಪದ್ಯವೂ ಎರಡೂ ಆಗುತ್ತದೆ. )

    • On the lines of Soma’s verse. Fine imagination K. Punchline is too good.
      (ಮದ್ವಚನ)’ಪ್ರಭಂ’ಗಿಂ ತುಸು ತಿಳಿಯಿರ್ಪ ಶಬ್ದಮಾದೊಡೆ ಸೊಗಯಿಸುಗುಂ. ವಚನಂ ಪ್ರಭಾಯುಕ್ತಮಾದೊಡೆ, ಸಲ್ಗುಮಲ್ತೆ ಕವನಿಕೆಗಂ?

    • ಕೊಪ್ಪಲತೋಟ ಏನು ಭಾಷೆ, ಬಹಳ ಚೆನ್ನಾಗಿದೆ ಕಣಯ್ಯ 🙂

      • ಅಮತ್ಸರಂ ಪರಗುಣಸಂಸ್ತವೋದ್ಯತಂ
        ಸಮಾಹಿತಂ ಸಕಲಕವಿತ್ವಸೌಂದರೀ-
        ಕ್ರಮಪ್ರಶಂಸೆಯೊಳಹಹಾ! ನಿರಂತರಂ
        ಸಮುತ್ಸುಕಂ ಸಹೃದಯನಲ್ತೆ ಸೋಮ! ನೀಂ||

    • ಬಹಳ ಸುಂದರ ಕವಿತೆ 🙂

    • ಸನ್ಯಸ್ತಪದಕಾವ್ಯಾಖ್ಯ-ಕನ್ಯೆಯಂ ಮೆಚ್ಚುತಿರ್ಪರೇ
      ಮಾನ್ಯರೇ! ವಂದಿಸುತ್ತುಂ ನಾಂ ಧನ್ಯವಾದಮನೆನ್ನುವೆಂ||

  22. ಪರಮಪ್ರಕೃತಿಯಪರ್ಣೆಯ ವಸ್ತ್ರಮಾಗಿರ್ದು
    ಪೊರೆದಿರ್ಪ ಪರ್ಣವಿದ ಬಲ್ಲುದೆಂಬೆಂ|
    ಮರೆಮಾಡದೆಯೆ ಬಾನ ಪ್ರಕೃತಿಯೆಲ್ಲವನು ತುಸು
    ತೆರೆದಿರಿಸಬೇಕೆಂದುಮದರ ಸೊಬಗಂ||

    • ಬಾನನ್ನು ಕುರಿತು ಬನಸಿರಿಯ ಔದಾರ್ಯದ ಕಲ್ಪನೆ ಚೆನ್ನಾಗಿದೆ

      • ಸೋಮ, ಇದಕ್ಕೆ ’ಔದಾರ್ಯ’ ಎಂಬ ಮನ್ನಣೆಯು ಸಲ್ಲೀತೆಂದು ನಾನು ಕನಸಿನಲ್ಲಿಯೂ ನೆನೆಸಿರಲಿಲ್ಲ.
        ಸ್ವಗತ: Thanks ಹೇಳಲೆ, ಬೇಡವೆ?

  23. ತಿಂಗಳೊಡೆ ಸರಿವೆರೆತು ಮುಗಿ
    ಲಂಗಳವಂ ಬೆಳಗಿ, ಬರ್ಪ ಹೇಮಂತಂಗಂ
    ರಂಗಿನ ಬರವಂ ಕೋರಲ್
    ಬೆಂಗದಿರನ ಕೋಲನೀಂಟಿ ಭಾಸಿಪರಂ ಕಾಣ್!

    • ಪದ್ಯದ ಭಾಷೆ-ಕಲ್ಪನೆಗಳೆರಡೂ ಸೊಗಸಾಗಿವೆ. ಒಂದು ಸ್ವಲ್ಪ ಸವರಣೆ ಮಾಡಿದಲ್ಲಿ ಮತ್ತೂ ಒಳಿತು:
      ……………..ಹೇಮಂತಂಗಂ”
      ………………………..
      “ಬೆಂಗದಿರನ ಕೋಲನೀಂಟಿ……”

    • ಕಾಂಚನಾ ಅವರೇ ಕಲ್ಪನೆ ನವೀನವಾಗಿದೆ

      • ತಮ್ಮಿಬ್ಬರಿಗೂ ಧನ್ಯವಾದಗಳು.
        (ಪದ್ಯದಲ್ಲಿ ಸವರಣೆಯನ್ನು ಮಾಡಿಕೊಂಡಿದ್ದೇನೆ,ಸರ್)

    • Imagination and diction are both fine.

  24. ಸಿರಿಗನ್ನಡಂ ಗೆಲ್ಗೆ ಅಂತ ಹೇಳಿ, ಹಳೆಗನ್ನಡದಲ್ಲಿ ತತ್ತತ್ತಂ ಬೆಬ್ಬಬ್ಬಂ ಎಂದೂ ಹೇಳಲಾಗದೆ, ಸಂಸ್ಕೃತದಲ್ಲಿ ಇನ್ನೊಂದು ಪ್ರಯತ್ನಂ ಕರೋಮಿ .. ಕ್ಷಮೆಯಿರಲಿ.

    पङ्काद्विमुक्त्यै दिननाथकान्त्यै
    ततस्तदुष्ण्यै नववातधूत्यै ।
    प्रतीक्षमाणे हरिताश्मजाते
    पत्राणि पङ्क्त्याविरतं निपेतुः ॥

    ಕೊಚ್ಚೆಯಿಂದ ಬಿಡುಗಡೆಗಾಗಿ, ಸೂರ್ಯನ ಕಾಂತಿಗಾಗಿ, ಅವನ ಕಾವಿಗಾಗಿ, ಹೊಸ ಗಾಳಿಗಾಗಿ – ಇವುಗಳಿಗೆ ಕಾಯುತ್ತಿದ್ದ ಪಾಚಿಕಲ್ಲುಗಳ ಗುಂಪಿನ ಮೇಲೆ ಎಲೆಗಳು ರಾಶಿ ರಾಶಿಯಾಗಿ ಬಿದ್ದವು.

    • ನರೇಶರೆ ನಿಮ್ಮ ಪೀಠಿಕೆ ಚೆನ್ನಾಗಿದೆ 🙂

      ಪದ್ಯದ ಭಾಷೆ, ಭಾವ ಬಹಳ ಚೆನ್ನಾಗಿದೆ ಆದರೆ ಇದು ಚಿತ್ರದೊಡನೆ ಹೇಗೆ ಹೋಲಿಕೆಯಾಗುತ್ತದೆಂದು ತಿಳೀಯುತ್ತಿಲ್ಲ

      • ಸೋಮರೇ, ಕಲ್ಪನೆ ಹೀಗಿದೆ. ಮೇ-ಆಗಸ್ಟ್ ಮಾಸಗಳಲ್ಲಿ ಆಕಾಶವೂ ಮುಚ್ಚಿಹೋಗುವಷ್ಟು ದಟ್ಟವಾಗಿ ಬೆಳೆದ ಕಾಡು. ಅಲ್ಲಿ ತಲೆಯೆತ್ತಿ ನೋಡುತ್ತಿರುವ ಕಲ್ಲುಗಳು. ಸೆಪ್ಟೆಂಬರ್ ಮುಗಿದು ಅಕ್ಟೋಬರ್ ಬರುತ್ತಿದ್ದಂತೆ ನಾನಾ ಬಣ್ಣಗಳೊಂದಿಗೆ ಹಬ್ಬ ಮಾಡುತ್ತಿವೆ ಎಲೆಗಳು. ಈಗ ಸ್ವಲ್ಪ ಜೋರಾಗಿ ಉಸಿರಾಡಿದರೆ ಬೀಳುವ ಹಾಗಿವೆ. ಆಗ ಸ್ಥಿರಚಿತ್ರ ತೆಗೆದಿರುವುದು. ಆದರೆ ಸ್ಥೈರ್ಯ ವಾಸ್ತವಲ್ಲ. ಚಿತ್ರದ ಡೈನಮಿಕ್ಸನ್ನು ಕುರಿತು ಮಾಡಿದ ಪದ್ಯ.

        ಪ್ರಸಾದು ಅವರೇ, ಧನ್ಯವಾದಗಳು!

        • ಪದ್ಯದ ಕಲ್ಪನೆ-ಬಂಧಗಳೆಲ್ಲ ಚೆನ್ನಾಗಿವೆ. ಆದರೆ “ಉಷ್ಣೈ” ಎಂಬ ಪದದ ಮೂಲವೇನು? ಉಷ್ಣಿ (ಷ್ಣೀ) ಎಂಬ ರೂಪವುಂಟೇ? ಹಾಗಿದ್ದಲ್ಲಿ ಅದರ ಚತುರ್ಥ್ಯೈಕವಚನವೇ ಇದು?

          • Per MW ಉಷ್ಣಿ ಎಂಬ ರೂಪವಿದೆ. ’ಉಷ್ಣ’ಕ್ಕೆ ಬೇರೆ ಇ/ಈಕಾರಾಂತ ಶಬ್ದ ಹೊಳೆಯುತ್ತಿಲ್ಲ.
            ಚತುರ್ಥ್ಯೈಕವಚನವೇ.

          • ಕೋಷಾಂತರದಲ್ಲಿ ಈ ರೂಪ ಕಾಣುತ್ತಿಲ್ಲ, ಕಿಂಚಿತ್ ಪರಿವರ್ತನೆಯೇ ಲೇಸೆಂದು ತೋರುತ್ತದೆ. ಹಾಗಾಗಿ ಔಷ್ಣ್ಯ ಪದದೊಂದಿಗೆ ಸ್ವಲ್ಪ ತಿದ್ದುಪಡಿ –

            पङ्काद्विमुक्त्यै दिननाथकान्त्यै
            तदौष्ण्यवृद्ध्यै नववातधूत्यै ।
            प्रतीक्षमाणे हरिताश्मजाते
            पत्राणि पङ्क्त्याविरतं निपेतुः ॥

            ಕಿಂ ಚ, ಪುಸ್ತಕವನ್ನು ತೆಗೆದು ನೋಡಿದಾಗ ಉಷ ಧಾತುವಿನಿಂದ ಬಂದ ಉಷ್ಣ ಪದವು ಉಣಾದಿ ಸೂತ್ರದಿಂದ ನಿಷ್ಪನ್ನವೆಂದು ಗೊತ್ತಾಯ್ತು.
            ಉಷ ಧತುವಿನ ಭಾವಾರ್ಥಕ ಕ್ತಿನ್ ಪ್ರತ್ಯಯರೂಪವು ಉಷ್ಟಿಃ ಎಂದು ಕೃದಂತರೂಪಮಾಲೆ ಹೇಳುತ್ತದೆ.
            (ಕ್ತಿನ್ನೋ ಕಿತ್ಕೊಂಡ್ತಿನ್ನೋ – ಪ್ರತ್ಯಯವೇನೋ ಪ್ರಾಪ್ತಿಃ, ಕೃತಿಃ, ಇತ್ಯಾದಿ ರೂಪಗಳಲ್ಲಿ ಪರಿಚಿತವೇ).

            ಹಾಗಾಗಿ ततस्तदुष्ट्यै ಎಂದೂ ವ್ಯಾಕರಣಸಮ್ಮತರೂಪವಾದೀತು. ಉಷ್ಟಿಸ್ತು ವಿರಲಪ್ರಯೋಗ ಇತಿ ದೃಶ್ಯತೇ. ಅದಕ್ಕೆ ಉಷ್ಟಿಪ್ರಯೋಗದಿಂದ ತಟಸ್ಥರು ಹೇಳುವಂತೆ ಮಂಡೆ ಬಿಸಿಯಾದೀತು.

          • ಅಡ್ಡಿಯಿಲ್ಲ; ವ್ಯಾಕರಣದ ಸಂಮತಿಯಿದ್ದರೆ ವಿರಳಪ್ರಚುರಪದಗಳನ್ನೂ ಚಾಲತಿಗೆ ತರಬಹುದು. ಆದರೆ ಅವಕ್ಕೆ ಅಪ್ರಸಿದ್ಧ, ದುರೂಹ, ನೇಯಾರ್ಥ, ಅಪ್ರತೀತ ಮುಂತಾದ ದೋಷಗಳು ತಾಕದಂತೆ ನೋಡಿಕೊಂಡರೆ ಸರಿ. ಈ ನಿಟ್ಟಿನಲ್ಲಿ ಇಂಥ ಪದಗಳ ಪ್ರಯೋಗಸಾರ್ಥಕ್ಯವನ್ನು ಉದ್ದಿಷ್ಟಪದ್ಯದೊಳಗೆ ಸಮರ್ಥವಾಗಿ ಕಾಣಿಸುವಂತಾದರೆ ಸಾಕು. ಇದಕ್ಕಾಗಿ ರಸ-ಧ್ವನಿ-ಔಚಿತ್ಯ-ವಕ್ರತೆಗಳೆಂಬ ಕಾವ್ಯಮೀಮಾಂಸಾಮೂಲತತ್ತ್ವಗಳ ಮೂಲಕ ಎಲ್ಲವನ್ನೂ ಶೋಧಿಸಿ ನೋಡುವ ಪ್ರಜ್ಞೆ ಬೆಳೆಯಬೇಕು. ಇದು ಸಂವೇದನಶೀಲವಾದ ಪ್ರಾಮಾಣಿಕಮನಸ್ಸಿಗೆ ಸದಾ ಸುಲಭ.

    • ಸಂಸ್ಕೃತಂ ಗೆಲ್ಗೆ…
      ಪೊಂದೆ ಮೋಕ್ಷಮನುಂ ಮಣ್ಣಿಂ ವಡೆಯಲ್ ಸೂರ್ಯಕಾಂತಿಯಂ|
      ಅರ್ಕತಾತಲಮನ್ನುಂ ಮೇಣ್, ಪೊಸಗಾಳಿಯು ಬೀಸಲೆಂ||
      ದೀಪ್ಸೆಯಿಂ ಹರಿತಾಶ್ಮಂಗಳ್ ಕಾದಿರ್ದೊಡೇನಿದಾದುದೋ!
      ಪಕ್ವಪರ್ಣಗಳಾಧಿಕ್ಯಂ ಛದ್ಮಗೈದುವೆ ಮತ್ತೆಯುಂ||

      • ಛಂದಸ್ಸಾವುದು? ಪ್ರಾಸಮೆಲ್ಲಿ? ಕವಿತಾರ್ಥಂ ಮತ್ತಮಿನ್ನೆಲ್ಲಿ ಪೇಳ್!
        ಸಂದೇಹಕ್ಕುರೆ ಸಿಲ್ಕದಂತೆಯೆ ಪ್ರಸಾದೂ! ನಿಮ್ಮ ಪದ್ಯಾತ್ಮದೊಳ್!

      • ಅನುಷ್ಟುಭ್. ಹಾಗಾಗಿ ಪ್ರಾಸವನ್ನು ಪಾಲಿಸಿಲ್ಲ. ನರೇಶರ ಸಂಸ್ಕೃತಪದ್ಯದ ಅನುವಾದ.

  25. ರವಿನಿರ್ಗಮ್ಯಜಶೀತವಾತ ಸರಸಕ್ಕೋಡೋಡಿ ಬಂದಿರ್ದೊಡಂ
    ನವೆಯಲ್ ಶೋಷಣಭೀತಪೀತಪುನರಾಕರ್ಷಕ್ಕುಮಾಕಾಂಕ್ಷಿತರ್
    ನವರಾಗಾಂಬರವೇಷಭೂಷಣಗಳಂ ಸೌಂದರ್ಯದೌನ್ನತ್ಯಕಾ –
    ಸವಿಸಲ್ ಬಾಡುತೆ ಪರ್ಣರಾಶಿ ಭುವಿಯೊಳ್ ಸದ್ದಿಲ್ಲದೇ ಬಿದ್ದುವೈ

    [ರವಿಯ ನಿರ್ಗಮನದಿಂದ (ದೂರದೂರಕ್ಕೆ ಹೋಗುವುದು) ಹುಟ್ಟಿದ (ಧೈರ್ಯ ಪಡೆದ) ಶೀತಲ ಗಾಳಿಯು ಸರಸಕ್ಕೆಂದು ಬಂದಿರಲಾಗಿ, (ಶೀತದ) ಶೋಷಣೆಯ ಭೀತಿಯನ್ನು ಕುಡಿದ, ಮತ್ತೆ (ರವಿಯಲ್ಲಿ) ಆಕರ್ಷಣೆಯ ಆಕಾಂಕ್ಷೆಯನ್ನು ಹೊಂದಿದವರು (ಮರಗಳು), ಸೌಂದರ್ಯದ ವೃದ್ಧಿಗೆಂದು, ಹೊಸ ಬಣ್ಣಗಳ ಬಟ್ಟೆಗಳ ವೇಷ ಭೂಷಣಕ್ಕಾಗಿ (ತಮ್ಮ ಶಕ್ತಿಯನ್ನು) ಆಸವಿಸಿರಲು, ಎಲೆಗಳು ಹಾಗೆಯೇ ಬಾಡಿ ರಾಶಿಯಾಗಿ ನೆಲಕ್ಕೆ ಬಿದ್ದವು ]

    • ಭಲರೇ! ಪ್ರೌಢಗಭೀರಭಾಷೆಯ ಮಹಾಸಾಮಾಸಿಕೋಲ್ಲಾಸದಿಂ-
      ಪೊಲಿಯಲ್ ರಾಮ! ಕವಿತ್ವಗುಂಫನಕಲಾಕೌಶಲ್ಯಮೇನೊಪ್ಪುಗುಂ|

    • ನೆಲೆಯುಂ ಪ್ರಾಸಸಮಸ್ತರೀತಿಕವಿತಾಲಂಕಾರಮಾರ್ಗಕ್ಕಿದೇಂ
      ನಲಿಯುತ್ತಿರ್ಪೆನಿದಂ ಸದಾ ಪಠಿಸುತುಂ, ರಾಮಾಭಿರಾಮಂ(ರಾಮ!ಅಭಿರಾಮಂ) ಗಡಾ||

    • ಹೌದು. ಶ್ರೀ ಗಣೇಶರೆಂದಂತೆ ಸಮಾಸವಿಜೃಂಭಣೆ ಮುದಾವಹವಾಗಿದೆ.

    • _/\_

  26. वृक्षव्यूहपुरस्सरं कविवराः सत्कल्पनाभ्यःसदा
    बन्धव्या इति चिन्तयन्ति सततं पीतप्रभाः फल्गुने।
    किन्त्वेते तु फलादिभूष्यहरितान् संस्थाप्य चैत्रे पुनः
    व्यूहज्ञा विहरन्ति धीरमनसा सत्क्रान्तदर्शित्वतः॥

  27. ಸತಿಗಂಪತಿಸೌಗಂಧಿಕೆ
    ಯತರಲ್ಪವನಜನಶೌರ್ಯವಂ ಕಪಿಮುರಿಯಲ್
    ಮತಿಕುಸಿಯಲ್ಕಣ್ಸುತ್ತಿರೆ
    ಲತೆವಟಗಳ್ತಿರುಗಿದಂತೆಕಂಡನ್ಭೀಮಂ ||

    • ಆಹಾ! ತುಂಬ ಚಮತ್ಕಾರಪೂರ್ಣವಾದ ಪದ್ಯ!!….ಸ್ವಲ್ಪ ಹಳಗನ್ನಡದ ಹದವೂ ಸೇರಿದರೆ ಇದಕ್ಕೆ ಮತ್ತಷ್ಟು ಸೊಗಸು ಮೈಗೂಡುವುದರಲ್ಲಿ ಸಂದೇಹವಿಲ್ಲ. ಇದಕ್ಕಾಗಿ ನನ್ನನ್ನು ದೂರವಾಣಿಯ ಮೂಲಕ ಸಂಪರ್ಕಿಸಬಹುದು.

    • ಹೌದು, ಕಲ್ಪನೆ ಚೆನ್ನಾಗಿದೆ.
      ೧) ಪತಿ-ಪವನಜ-ಭೀಮ: ಈ ಚಿಕ್ಕ ಛಂದಸ್ಸಿನಲ್ಲಿ ಪರ್ಯಾಯಶಬ್ದದುರ್ವ್ಯಯವನ್ನು ಗೈಯದಿರಿ.
      ೨) ಪತಿ, ಕಪಿ: ಈ ಶಬ್ದಗಳನ್ನು ಪ್ರತ್ಯಯರಹಿತವಾಗಿಸಿದ್ದೀರಿ. ಓದುವಾಗೇನೋ ’ಪತಿಯು’ ’ಕಪಿಯು’ ಎಂದು ವೇದ್ಯವಾಗುತ್ತವೆ. ಆದರೆ ಲಿಖಿತರೂಪವೂ ಅಂತೆಯೇ ಇರಬೇಕು. ಇಲ್ಲದಿದ್ದರೆ, ಪತಿಯೆಂಬ ಸೌಗಂಧಿಕೆ ಎಂದಾಗುತ್ತದೆ. (ಕಪಿಮುರಿ?)

      ಹೀಗೊಂದು ಸವರಣೆ. ಇನ್ನೂ ಹಳತಾಗಿಸಲು ಅವಕಾಶವಿದೆ. ನನ್ನ ಮಿತಿ ಇಷ್ಟೆ:
      ಸತಿಗಂ (ಸೌ)ಗಂಧಿಕಮಂ ತಹ
      ಕತದಿಂ ಕಂಡಾ ಹನೂಮನಿಂ ನಿಜಶೌರ್ಯಂ|
      ಖತಿಗೊಳ್ಳೆ ಕಂಗಳು ಬವಳಿ
      ಲತೆವಟಗಳ್ಗಿಱಿಕಿದೊಲ್ ಪವನಜಂಗಾಯ್ತಯ್||

    • ಆಶಯ ಬಹಳ ಚೆನ್ನಾಗಿದೆ

      • ಸವರಣೆ ಪ್ರೇರಣೆಗಳಿಗೆ ಎಲ್ಲರಿಗೂ ಧನ್ಯವಾದಗಳು….:)

  28. ಬಾಣನಂತೆಸೆವ ವಾಗ್ಬಾಣಗಳೆಸೆದಿರ್ಪಿರ್
    ಜಾಣರ್ ಕೊಪ್ಪಲತೋಟಾಖ್ಯರ್ ದೊರೆಯೆನಲ್
    ಜಾಣರೈ ರಾಮಚಂದ್ರರುಂ

    • ’ಟಾಖ್ಯರ್’ – ಈ ವಿಷ್ಣುಗಣವು ಎರಡು ಮಾತ್ರೆಗಳಷ್ಟು ಊನವಾಯ್ತಲ್ಲವೆ?

      • ಜಾಣರ್ ಕೊ-ಪ್ಪಲ-ತೋಟಾಖ್ಯರ್ ಸರಿಯಾಗಿದೆಯಲ್ಲ?

        • ಬ್ರಹ್ಮಗಣಕ್ಕೆ ನನನಾ, ನಾನಾ, ನಾನs, ನನನs – ಇಷ್ಟು ಅವಕಾಶಗಳಿವೆ; ನಽನಽ ಇಲ್ಲ. ಹಾಗಾಗಿ ನಾನು ’ಜಾಣರ್ ಕೊ-ಪ್ಪಲತೋ-ಟಾಖ್ಯರ್..’ ಎಂದು ಗಣವಿಭಜನೆ ಮಾಡಿಕೊಂಡೆ.

          • ಹೌದಲ್ಲ! ನನ್ನ ಬುದ್ಧಿ ಕಾಡುಮೇಯಲು (ಎಂದಿನಂತೆ) ಹೋಗಿದ್ದಿರಬೇಕು. ಈಗ ಹೇಗಿದೆ?

            ಬಾಣನಂತೆಸೆವ ವಾಗ್ಬಾಣಗಳೆಸೆದಿರ್ಪಿರ್
            ಜಾಣರ್ ಕೊಪ್ಪಲತೋಟಾಖ್ಯರ್ ನೀಂ ದೊರೆಯೆನಲ್
            ಜಾಣರೈ ರಾಮಚಂದ್ರರುಂ

          • ಪಿಂದೆ ಕಾಡೊಳ್ ಮೇಯ್ದುದಿರಲೈ
            ತಿಂದುದಂ ಕಕ್ಕುವುದದಿರಲೈ|
            ಮುಂದೆ ನೀಂ ಪೋಗುವೆಯದೆಲ್ಲಿಗೆ
            ಮಂದೆಯೊಳ್ ಮೇಯಲದ ಪೇಳ್||

    • ಬಾಣನ ವಾಗ್ಬಾಣದಂತೆಲ್ಲಿ ಕಂಡಿತೊ
      ಕಾಣೆನಾನೆನ್ನ ಪದ್ಯದೊಳು|
      ವಾಣಿಯಂ ಮೆಚ್ಚಿಪ ಸರಸದ ಕವಿತೆಯಿಂ
      ಬಾಣತ್ವಮೆಯ್ದಿರ್ಕೆ ನಿಮ್ಮೊಳ್||

    • _/\_

  29. ಪೊರೆ!ಯೆಂದಬಲೆಗೆ ಕೃಷ್ಣಂ
    ಭರದಿಂ ಪೊದಿಸುತ್ತುಮಿತ್ತ ಪೀತಾಂಬರಮಂ
    ಪೊರಿಮೆಂದಿತ್ತಳೆ ತರುಗ
    ಳ್ಗರಿವೆಯನಕ್ಷಯಪ್ರಸಾದಮಂ ದ್ರೌಪದಿಯುಂ?

    • Considering that your ‘ಪೀತಾಂಬರಂ (ಒಡಲು, ಅಂಚು, ಸೆರಗುಗಳೆಲ್ಲವೂ ಝರಿ)’ means ‘silk’:

      ಕೃಷ್ಣೆಗಂ ತೂಲಮೇಂ (cotton) ರೇಸಿಮೆಯೆ ಕೃತಕಮೇಂ (synthetic)
      ಕೃಷ್ಣನಿತ್ತಾ ಅಕ್ಷಯವಸನಂಗಳ್?
      ತೃಷ್ಣೆಯಂ ಹರಿಸಿದಿರಿ ವಾದದಂ ನೀಮಿಂದು
      ಜಿಷ್ಣುವಾರ್ದರ(excelling silk)ಮದೆನ್ನುತೆ ಪೇಳುತಲ್||

    • ಪೊರೆ!ಯೆಂದಬಲೆಗೆ ಕೃಷ್ಣಂ
      ಭರದಿಂ ಪೊದಿಸುತ್ತುಮೀಯೆ ಪೀತಾಂಬರಮಂ
      ಪೊರಿಮೆಂದಿತ್ತಳೆ ತರುಗ
      ಳ್ಗರಿವೆಯನಕ್ಷಯಪ್ರಸಾದಮಂ ದ್ರೌಪದಿಯುಂ?

      (ಸಣ್ಣ ಮಾರ್ಪಾಟು ಮಾಡಿದ್ದೇನೆ)

      • ಈ ಕಷ್ಟಕ್ಕೆ ದ್ರೌಪದಿಗಿಂತ ಚೆನ್ನಾಗಿ ಸ್ಪಂದಿಸುವವರಾರು? ಬಹಳ ಚೆನ್ನಾಗಿದೆ ಜೀವೆಂ 🙂

        ಒಂದು ಸಣ್ಣ ಅಂಶ, ‘ಅಕ್ಷಯಪ್ರಸಾದ’ ಶಿಥಿಲದ್ವಿತ್ವವಾಗುವುದಿಲ್ಲವಲ್ಲ

  30. ಆವ ಹಿನ್ನೆಲೆಯ ನೀಲನಕ್ಷೆಯೊಳು
    ಕಾವಿಕಂಡುದಿದೊ ಕಾವ್ಯಲೋಕದೊಳು
    ಜೀವಮಾರ್ಗದಲಿ ಕೊನೆಯೆ ಕಾಣದೆಲೆ !!
    ಈ ವಿಚಿತ್ರವನು ಭಾವಿಪುದದೆಂತೊ ?

    ಜೀವನ “ಯಾನ”ದ ಗುಂಗಿನಲ್ಲಿ …

    • ಬಹುದಿನಗಳ ಬಳಿಕ ಬರುತ್ತಿದ್ದೀರಿ; ಹದುಳವೇ? ಮತ್ತೆ ಸ್ವಾಗತ:-)
      ಕಡೆಯ ಸಾಲನ್ನು “ಈ ವಿಚಿತ್ರವನದೆಂತು ಭಾವಿಪುದೊ?” ಎಂದು ತಿದ್ದಿದರೆ ಛಂದಸ್ಸಿನ ನಿಟ್ಟಿನಿಂದ ಸರಿಯಾದೀತು.

      • ‘ಹದುಳವೇ? ಮತ್ತೆ ಸ್ವಾಗತ’ವೆಂಬ ಸ್ವಾಗತ ಬಹಳ ಹಿಡಿಸಿತು ಸರ್ 🙂

      • ಧನ್ಯವಾದಗಳು ಗಣೇಶ್ ಸರ್,
        ಹೆಚ್ಚಿದ ಕೆಲಸದ ಒತ್ತಡದಿಂದಾಗಿ ಪದ್ಯ ಬರೆಯುವುದಕ್ಕೇ ಸಾಧ್ಯವಾಗದೆ ಖಿನ್ನಳಾಗಿಬಿಟ್ಟಿದ್ದೇನೆ. ಜೊತೆಗೆ “ಯಾನ”ದ ಓದಿನ ನಂತರ ಮನಸ್ಸು ಮತ್ತಷ್ಟು ಅಂತರ್ಮುಖಿಯಾಗಿಬಿಟ್ಟಿದೆ. ಚಿತ್ರದಲ್ಲಿ – ಕಾಣದ”ಎಲೆ” ಕೊನರುವಂತೆ ಮೊರೆಇಡುತ್ತಿರುವ ವೃಕ್ಷಗಳ ಸ್ಥಿತಿ ನನ್ನದಾಗಿದೆ. ಪದ್ಯಪಾನ ಯಾನ ಮುಂದುವರೆಯಲಿದೆ.
        ತಿದ್ದಿದ ಪದ್ಯ:
        ಆವ ಹಿನ್ನೆಲೆಯ ನೀಲನಕ್ಷೆಯೊಳು
        ಕಾವಿಕಂಡುದಿದೊ ಕಾವ್ಯಲೋಕದೊಳು
        ಜೀವಯಾನ(ವೃಕ್ಷ)ದಲಿ ಕೊನೆಯೆ ಕಾಣದೆಲೆ !!
        ಈ ವಿಚಿತ್ರವನದೆಂತು ಭಾವಿಪುದೊ?

    • ಉಷಾ ಅವರೆ, ಪದ್ಯಪಾನಯಾನಕ್ಕೆ ನಿಮ್ಮಂತಹ crew ಅವಶ್ಯಕತೆ ಇದ್ದೇ ಇತ್ತು, ಹೇಳದೇ ಕೇಳದೆಯೆ ಹೀಗೆಲ್ಲಾ ನೀವು ಕೆಲಸಕ್ಕೆ ಚಕ್ಕರ್ ಹೊಡೆಯುವುದು ಸಲ್ಲದು 🙂

  31. ಅಬ್ಬಾ, ಬಹಳ ದಿನಗಳ ನಂತರ ಪದ್ಯಪಾನದಲ್ಲಿ ನೂರಕ್ಕಿಂತ ಹೆಚ್ಚು comment ಗಳು..

    • ಸರ್ವಲಘು-ಪಲ್ಲವ||
      ಪಲುಕಿದೆಯ ಶಕುನವನು ವಸುಧರ (ಶ್ರೀಧರ)
      ಉಲಿಯದೆಲಿದನುಮಿರಲು ತಿಳಿಯೆಯ (ಇದನ್ನು ಹೇಳದೆ ಇರಬಾರದಿತ್ತೆ?)
      (ಈ ವಾರದ) ಚಲನವನು ಗೊಳಿಸಿದೆಯೊ ಶಮನವ (ನಿಲ್ಲಿಸಿದೆ)
      ಭಲರೆ ಸುಮಶಿಖರನನುಜ| (ಸುಮ=ಚಂದಿರ, ಸೋಮಶೇಖರನ ತಮ್ಮ)

  32. ತಡವಾಗಿ ಅನ್ಯೋಕ್ತಿಯಾದರೂ ಸ್ವೋಕ್ತಿಯಾದ ಒಂದು ಪದ್ಯ 🙂 –

    ಅಂಭ್ರಂಕಷತ್ವಮಸ್ತೀತಿ ಮಾ ಸ್ಮ ದೃಪ್ಯತ ಪಾದಪಾಃ |
    ಮೂಲಮೇತಸ್ಯ ವೋ ಮೂಲಂ ಭೂಗತಂ ಸ್ಮರ್ಯತಾಂ ಸದಾ ||

    ಮರಗಳೇ, ಆಗಸವನ್ನು ಮುಟ್ಟುತ್ತಿರುವೆವೆಂದು ಕೊಬ್ಬದಿರಿ. ಆಗಸವನ್ನು ಮುಟ್ಟಲು ಕಾರಣವಾದ ನಿಮ್ಮ ಬೇರನ್ನು ಯಾವಾಗಲೂ ಸ್ಮರಿಸಿರಿ.

    • ಅಭ್ರಂಕಷತ್ವಮಸ್ತೀತಿ ಎಂದಾಗಬೇಕು. ಮೂಲದಲ್ಲೇ ಸರಿಪಡಿಸಲು ಆಗುತ್ತಿಲ್ಲ.

    • ಬಲುದಿನಗಳ ಬಳಿಕ ಮತ್ತೆ ಬರುತ್ತಿರುವ ಮಹೇಶರಿಗೆ ಸ್ವಾಗತ; ತಡವಾದರೂ ತುಂಬ ಒಳ್ಳೆಯ ಅನ್ಯೋಕ್ತಿಯನ್ನು ಕೊಟ್ಟಿದ್ದೀರ; ಅಭಿನಂದನೆಗಳು. ಕುಶಲ ತಾನೆ?

      • ಧನ್ಯವಾದ 🙂
        ಕುಶಲವಾಗಿದ್ದೇನೆ. ನೀವು?
        ಒಂದು ವಾರ ಕೆಲಸಗಳ ಒತ್ತಡ ಸ್ವಲ್ಪ ಹೆಚ್ಚಿದೆ. ಇಷ್ಟು ದಿನ ಬರೆಯದಿರುವುದಕ್ಕೂ ಅದೇ ಕಾರಣ. ಆದರೆ ಎಲ್ಲರ ಪದ್ಯಗಳನ್ನು ಆಸ್ವಾದಿಸುತ್ತಿರುತ್ತೇನೆ.
        ವಾರ ಕಳೆದ ಮೇಲೆ ದೂರವಾಣಿಯಲ್ಲಿ ಮಾತನಾಡುತ್ತೇನೆ 🙂

    • ಅನನ್ಯೋಕ್ತಿ 🙂

      • ಧನ್ಯವಾದ 🙂

        • ಮಹೇಶರೆ, ಪೂರಣ ಚೆನ್ನಾಗಿದೆ, ಅಪರೂಪವಾಗಿಬಿಟ್ಟಿರಲ್ಲ… ಹೀಗೆ ಒಡನಾಟದಲ್ಲಿರಿ 🙂

          • ಧನ್ಯವಾದ ಶರ್ಮರೆ. ಇಷ್ಟು ದಿನ ಬರೆಯಲು ಬಿಡುವಾಗಿರಲಿಲ್ಲ. ಮೂಲದಲ್ಲಿಯೇ ಪದ್ಯವನ್ನು ಸರಿಪಡಿಸಲು ಏನು ಮಾಡಬೇಕು?

  33. उपरिघटितस् सौवर्णो वै निधिर् मम सन्निधौ
    मरकतमहो तन्मध्यस्थं धने ननु शोभते।
    गुरुमणियुता काचिन् माला प्रसारितवैभवा
    गगनसहितान् पीतान् चार्द्रान् तरून् परिपूजये॥

    गुरुमणिः = नीलमणिः। मरकतं हर्द्वर्णं भवति।

  34. ಇಲ್ಲಿ ನಾನು ಬರೆಯುತ್ತಿರುವುದು ಮೇಲಿರುವ ಚಿತ್ರದಲ್ಲಿ ಕಾಣುತ್ತಿರುವುದಕ್ಕಿಂತ, ಕಾಣದೇ ಇರುವುದಕ್ಕೆ 🙂

    ಹೇಮಂತದಲ್ಲಿ ಎಲೆಗಳು ಹಳದಿಯಾಗಿ ಉದುರಿ ಭೂರಮೆಗೆ ಹೊದಿಗೆ ಹೊದಿಸುವ ಬಗ್ಗೆ:

    ಬರಲು ಹೇಮಂತ ಋತು ಚುಮುಚುಮು
    ಕೊರೆವ ಗಾಳಿಗೆ ನಡುಗಿರಲು ಧರೆ
    ಕೊರಗುತಲಿ ಭೂತಾಯ ಮಕ್ಕಳು ಸಕಲ ತರುನಿಕರ
    ಭರದಿ ತಮ್ಮೆಲೆಗಳನು ಹಳದಿಗೆ
    ತಿರುಗಿಸುತ ಕೆಳಗುದುರಿಸುತಲೀ
    ತರಗು ಹೊದಿಕೆಯ ಹೊದಿಸಿಬಿಟ್ಟವು ಬಿಸುಪ ನೀಡಲಿಕೆ!

Leave a Reply to umamaheshwara shrungeree Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)