Aug 172015
 

ಶೈಲಂಗಳೇ ಬೀದಿಗೆ ಬಂದುದಲ್ತೆ ಕಾಣ್

  130 Responses to “ಪದ್ಯಸಪ್ತಾಹ ೧೬೪: ಸಮಸ್ಯಾಪೂರಣ”

  1. ಕಾಲ೦ ಕಿಡಲ್ ಮತ್ಸರಮಾರುತ೦ ಬಿಡಲ್
    ಸೋಲಲ್ಕೆ ದಾಳ೦ಗಳೊಳ೦ ಪೃಥಾರ್ಭಕರ್
    ಶೀಲ೦ಗಳೊಳ್ ಸಲ್ವ ಮಹದ್ಗುಣಾವಲೀ-
    ಶೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    ಪಾ೦ಡವರು ದ್ಯೂತದಲ್ಲಿ ಸೋತು ಬೀದಿಯಲ್ಲಿ ನಡೆಯುತ್ತ ಅಡವಿಗೆ ಹೊರಡುವಾಗಿನ ಚಿತ್ರ. ಮತ್ಸರದ ಗಾಳಿ ಬಿಟ್ಟಿರಲು ಮಹನೀಯಗುಣಗಳ ಶೈಲಗಳೇ ಬೀದಿಗೆ ಬಿದ್ದಿವೆ ಎ೦ಬ ಅರ್ಥ. (ಮೊನ್ನಿನ ಆಶುಕವಿತಾಗೋಷ್ಠಿಯಲ್ಲಿ ಪೂರಯಿಸಿದ್ದು, ಕಿ೦ಚಿದ್ವ್ಯತ್ಯಾಸದೊ೦ದಿಗೆ).

  2. ಇಂದ್ರವಂಶ||
    (ಕುಬೇರರು)ಪೌಲಸ್ತ್ಯರುದ್ವಾಹದೆ(ಮದುವೆ) ಬಂಧುಗಳ್ ವಲಂ
    ಜೂಲಾಡುವೆಷ್ಟೋ ವಿಧಭೂಷಣಂಗಳಂ|
    ಡೌಲಿಂದೆ ತೊಟ್ಟೋಡಿರೆ ಛತ್ರಕಂ, ಪ್ರಭಾ-
    ಶೈಲಂಗಳೇ (jewel mountains) ಬೀದಿಗೆ ಬಂದುದಲ್ತೆ ಕಾಣ್||

  3. ತೇಲುತ್ತೆ ಸಾಗಲ್ ಖಗದಂತೆ ಮೇಘದೊಳ್
    ನೀಲಾಂಬರಂ ಭೇದಿಸಿ ಯಾನಪಾತ್ರೆಯೊಳ್
    “ಶೈಲಂಗಳೇ ಬೀದಿಗೆ ಬಂದುದಲ್ತೆ ,ಕಾಣ್”
    ಪೇಳುತ್ತೆ ಕಂದಂ ಸೆಳೆದಿರ್ದುದಬ್ಬೆಯಂ

    • Fine imagination

      • ಪೂರಣ ತುಂಬ ಸೊಗಸಾಗಿದೆ. ಅದರೆ ಕಂದ ಎಂಬುದು ನಪುಂಸಕಲಿಂಗದ ಪದ. ಹೀಗಾಗಿ “……….ಸೆಳೆದಿರ್ದುದಬ್ಬೆಯಂ” ಎಂದಲ್ಲಿ ಸಾಧು.

  4. ಕೋಲಾರದಿಂ ವಾಹನದೊಳ್ ನಿಧಾನದಿಂ
    ಮಾಲನ್ನು ನಾಂ ಸಾಗಿಸುವಾಗಲೊಮ್ಮೆಗೇ|
    ದೋಲಾಯಗೊಂಡಾಡಿರೆ ವಾಹನಂ ಸುಧಾ-
    ಶೈಲಂಗಳೇ (marble slabs) ಬೀದಿಗೆ ಬಂದುದಲ್ತೆ ಕಾಣ್||

    • ಮೊನ್ನೆ ಗಣೇಶರು ಬಳ್ಳಾರಿಯನ್ನು ಕಲ್ಪಿಸಿ ಪರಿಹರಿಸಿದ್ದರು. ನೀವು ಕೋಲಾರವನ್ನು ತಂದಿರಿ. ಒಟ್ಟಾರೆ ಇಬ್ಬರೂ ಗಣಿಗಾರಿಕೆಯವರನ್ನು ಬೀದಿಗೆಳೆದಿರಿ.

      • ಪ್ರಸಾದ್ ಅವರ ಪೂರಣ ಚೆನ್ನಾಗಿದೆ. ಆದರೆ ಭಾಷೆಯ ಸುಧಾರಣೆ ಬೇಕಿದೆ.
        @ ಕೊಪ್ಪಲತೋಟ.
        ಗಣಿಧಣಿಗಳು ದೇಶವನ್ನೇ ಬೀದಿಗೆ ಎಳೆದಾಗ ನಮ್ಮ ಕೆಲಸವೇನು ಮಹಾ?

  5. ನೀಲಾ೦ಬರ೦ ತೊಟ್ಟು ಬಲ೦ ಬರಲ್ ಮಹ-
    ಲ್ಲೀಲಾವಿಹಾರ೦ಗೆ ಸಹಾಯ್ಯದಿ೦ ಸಲ-
    ಲ್ವೇಲಾಸುವರ್ಣ೦ ಧವಳಾದ್ರಿ ಮೇರುವ-
    ಚ್ಛೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    ರಾಮ ಕೃಷ್ಣರು ನೀಲಾ೦ಬರ, ಸುವರ್ಣಾ೦ಬರಗಳನ್ನು ತೊಟ್ಟು ನಡೆದಾಡುತ್ತಿರಲು ಹಿಮಾಲಯ ಮೇರುಪರ್ವತಗಳೇ ಬೀದಿಗೆ ಬ೦ದುವೇನೋ ಎ೦ಬ೦ತೆ ತೋರುತ್ತಿದ್ದರು.

    • Another intriguing keelaka! This word is not like, say, ಪತಿ which takes quite some natural prefixes. ಶೈಲ demands the coining of a complex ಸಮಾಸ thus. Let the other padyapaanis take cue.

    • ರಾಮಕೃಷ್ಣರು ಎಲ್ಲಿಂದ ಬಂದರು!

      • ಕ್ಷಮಿಸಿ.. ಬಲರಾಮ-ಶ್ರೀಕೃಷ್ಣರ ಬದಲು ರಾಮಕೃಷ್ಣರು ಎಂದುಕೊಂಡೆ.. ಚೆನ್ನಾಗಿದೆ

    • ಕಲ್ಪನೆ ಚೆನ್ನಾಗಿದೆ. ಆದರೆ ವ್ಯಾಕರಣವು ಸ್ವಲ್ಪ ಜಾರಿದೆ.

  6. Jungle lodge resorts
    ಜಾಲಕ್ಕೆ ಸಿಕ್ಕುತ್ತೆ ನರಳ್ದುದಯ್ ತಿರೆ-
    ವ್ಯಾಲರ್ಕಳಿಂದಾವೃತಮಾಗೆ ಕಾನನಂ
    ಪೋಲಪ್ಪುಗುಂ ವನ್ಯವಿಲಾಸವಾಸದಿಂ
    ಶೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    • Very fine interpretation. This will reign as the best imagination.

      • dhanyavaada prasadu 🙂

      • ಪೂರಣ ಚೆನ್ನಾಗಿದೆ. ಸಿಲ್ಕುತ್ತೆ ಎಂದು ತಿದ್ದಿದರೆ ಚೆನ್ನ. ತಿರೆ ನಪುಂಸಕದಲ್ಲಿ ಬಳಕೆಯಾಗುವ ಪದ. ಅದನ್ನು ಹಾಗೆಯೇ ಅನ್ವಯಿಸಬೇಕು.

    • ಸೋಮರೆ ಚೆನ್ನಾಗಿದೆ. ………ಆವೃತಗೊಳ್ಳೆ ಕಾನನಂ ಎಂಬುದು …… ಆವೃತಂಗೊಳ್ಳೆ ಕಾನನಂ ಎಂದಾಗಬೇಕಲ್ಲವೆ? ಆಗ ಛಂದಸ್ಸು ಕೆಡುವುದು. ….ಆವೃತಮಾಗೆ ಕಾನನಂ ಎಂದು ತಿದ್ದಬಹುದಲ್ಲವೆ? ಪೋಲಪ್ಪುಗುಂ ಎಂದರೇನು ?

      • ನೀವೆಂದಂತೆ ಆವೃತಗೊಳ್ಳೆ ಅಸಾಧು, ಧನ್ಯವಾದ 🙂 ಆವೃತಮಾಗೆ ಎಂದು ಸವರಿಸುವುದೇ ಒಳಿತು

        • ಪೋಲು ಎಂದರೆ ಹಾಳು ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ

  7. ಮೇಲಿಂದವಳ್ ಮುಂದಲೆಯನ್ನೆ ಕರ್ಷಿಸಲ್
    ಕಾಲಿಂದಿವಳ್ ಸೊಂಟಕೆ ಪೊಯ್ದಪಳ್ ಚಿರಂ
    ಕಾಲಂಬೆನಲ್ ಬೈಗುಳಮುಣ್ಮೆಯೀರ್ಷೆಯಾ
    ಶೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    ಪ್ರಸಾದು ಕಾವ್ಯನಾಮದ ಪೂರಣ 😉

    • ವ್ಯಾಕರಣವು ಸ್ವಲ್ಪ ಜಾರಿತಲ್ಲಾ ಸೋಮಣ್ಣಾ!

      • (ಪ್ರಾಸಸಂಕರವಾಗಿದೆ. ಕ್ಷಮೆ ಇರಲಿ)
        ಬೆಟ್ಟsದ ಮ್ಯಾಗಿಟ್ಟದ್ಗಟ್ಯಾಗಿ ನಿಲ್ತೈತ?
        ತಿಟ್ಗುಂಟ ಜಾರಿ ಬುಡಕೇನೆ| ಬತ್ತೈತೆ
        ಚೊಟ್ಟಸೋಮನೆ ತಾನಪವಾದಂ??

      • ಗಣೇಶ್ ಸರ್, ಬೀದಿ ರಂಪ ತೋರಿಸುವ ಆತುರದಲ್ಲಿ ಜಾರಿದೆ 🙂

  8. ಕಾಲಕ್ಕೆ, ,ಶೇಂಗಾಯ್ ಬೆಳೆಯುರ್ಕಿ ಬಂದುದಂ
    ಸಾಲಾಗೆ, ಮಾರಾಟಕೆ ತಂದು ಪೇರಿಸಲ್
    ಮೇಲಕ್ಕೆ ಬಂದಾ ಜನರೆಂದರೈ”ಭಲಾ!
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್!”
    (ಕಡಲೇ ಕಾಯ್ ಪರಿಷೆಯಲ್ಲಿ..)

    • ಚೆನ್ನಾಗಿದೆ.

      • ಕಲ್ಪನೆ ಚೆನ್ನಾಗಿದೆ. ಆದರೆ ಹೊಯ್ದು ಎಂಬುದು ಹಳಗನ್ನಡದಲ್ಲಿ ಕೊಲ್ಲು ಎಂಬರ್ಥದ ಪದ. ಹೀಗಾಗಿ ಪೇರಿಸಲ್ ಎಂದರೆ ಯುಕ್ತ.

        • ತುಂಬಾ ಧನ್ಯವಾದ, ಕೊಲೆಯನ್ನು ತಪ್ಪಿಸಿದ್ದಕ್ಕೆ 🙂

  9. ಓಲಾಡುತಾಗುಂಬೆಯ ಭೂರಿಭೂಮಿಭೃತ್-
    ಪಾಲೀಪರೀವಾರಿತವರ್ತ್ಮದೊಳ್ ನರರ್ |
    ಸೋಲುತ್ತೆ ವೇಳ್ದರ್ ಪೊಸತಾಗಿ ಬಂದಪರ್
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ ||

    • ಅರ್ಥವಾಗಲಿಲ್ಲ 🙁

      • ತುಂಬ ಸೊಗಸಾದ ಪೂರಣ; ಭಾಷೆಯೂ ಚೆನ್ನಾಗಿದೆ.
        ನೀಲಕಂಠರೇ! ಬಯಲುಸೀಮೆಯನ್ನು ತೊರೆದು ಸ್ವಲ್ಪ ಮಲೆಸೀಮೆಗೆ ಬನ್ನಿ,
        ಆಗ ಇದು ಅರ್ಥವಾಗುವುದು:-)

        • ತ್ರಿಶ೦ಕು ಸ್ವರ್ಗದ೦ತೆ ನಮ್ಮ ಹಳ್ಳಿ ಇರುವುದೇ ಬಯಲು ಮಲೆಸೀಮೆಗಳ ಮಧ್ಯೆ ಸರ್ 🙂 ಮಲೆಯ ಭಟ್ಟರನ್ನು ಕೇಳಿದೆ. ಅಲ್ಪಸ್ವಲ್ಪ ಅರ್ಥವಾಯಿತು…

          • ಇನ್ನ ಶಾನ ಕಲ್ಯsದೈತೆ ತಾವು 😉

          • ಹೌದ್ರಿಯೆಪ್ಪ. ಅದಕ್ಕ೦ತನ ನಿಮ್ಮ೦ತೋರ್ ನಡಬರಕ ಕಚ್ಚಾಡಕತ್ತೀನಿ 🙂

  10. Republicday parade

    ಸಾಲಂಕೃತಾಗಾಧಮೆನಿಪ್ಪ ಶೌರ್ಯದಿಂ
    ದಾಲೇಪನಂಗೊಂಡ ವಿಶಿಷ್ಟ ದರ್ಶನ-
    ಕ್ಕಾಲೋಕಿಸಲ್ ವಂದ ಪುರಸ್ಥನೆಂದಪಂ
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್

  11. ಕಾಲಾಂಗರಾ ರಾವಣವಾಹಿನೀಮಹಾ-
    ಕೀಲಾಲಪರ್ಕಳ್ ರಣಕಂ ಬರುತ್ತಿರಲ್ |
    ಮಾಲೋಲಮುಖ್ಯರ್ ಬೆರಗಾಗಿ ಪೇಳ್ದಪರ್
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ ||

  12. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸಕ್ಕೆ ಹೋಗುವಾಗ ಮಂಗಮ್ಮನ ಪಾಳ್ಯದಲ್ಲಿ ಬಿಬಿಎಂಪಿಯ ರಸಭರಿತ ಕಸದವಾಹನಗಳ ಸಾಲಿನ ಒಡನಾಟಕ್ಕೆ ಮನಸೋತು 🙂

    ಲೀಲಾವಿಲಾಸಕ್ಕೆಣೆಯಿರ್ಪುದೇಂ ದಿಟಂ
    ತೋಲಂಗೊಳಲ್ಕಾರ್ ಕ್ಷಮರಿರ್ದಪರ್ ಬೃಹ
    ನ್ನಾಲೀಯಸಂಸ್ಕಾರಮನೆ ಪೊತ್ತ ಗಂಧವ-
    ಚ್ಛೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    ಬೃಹನ್ನಾಲೀಯ – big gutter

    • ನಿಮ್ಮ ಕಲ್ಪನೆಗಳೋ (ಅನುಭವಗಳೋ)ಅಸಾಮಾನ್ಯ ಅದ್ಭುತ!!
      ಮೂರನೆಯ ಸಾಲಿನ ಛಂದಸ್ಸು ಸ್ವಲ್ಪ ಎಡವಿದೆ. ಕಸದ ಲಾರಿ ಪಲ್ಟಿಯಾಗಿಬಿಟ್ಟೀತು!!

  13. ಓಲೈಸಿ ಸಮ್ಮರ್ದದೊಳೆ೦ತೊ ವಾಹದೊಳ್
    ಲೀಲಾವಿಹಾರಕ್ಕೆನುವ೦ತೆ ಸಾರಿರಲ್
    ಲೋ ಲೋ ಬೃಹದ್ ಹ೦ಪ್ ಬರೆ ಸಾಲುಸಾಲ್ಗಳೊಳ್
    ಶೈಲ೦ಗಳೇ ಬೀದಿಗೆ ಬ೦ದುವಲ್ತೆ ಕಾಣ್

    • ಒಳ್ಳೆಯ ಕಲ್ಪನೆ.. ಬೃಹದ್ ಹಂಪ್ ಪ್ರಬಲಾರಿಸಮಾಸವಿದ್ದರೂ ಆಕ್ಷೇಪಾರ್ಹವಲ್ಲ 😉

    • ನೀಲಕಂಠರೆ, ವಿನೋದವಾದ ಕಲ್ಪನೆ ಸೊಗಸಾಗಿದೆ.ಎರಡನೇ ಪಾದದಲ್ಲಿ ಟಂಕನದೋಷವಾಗಿ ಸಾಗಿರಲ್ ಬದಲಾಗಿ ಸಾರಿರಲ್ ಆಗಿದೆಯೆ ? “ಸಾರಿರಲ್” ಎಂಬುದೇ ಆಗಿದ್ದಲ್ಲಿ ಅದು “ಸಾರ್ದಿರಲ್” ಎಂದಾಗಬೇಕಲ್ಲವೆ?

      • ನನ್ನ ಜ್ಞಾನದೋಷ ಇರಬೇಕು. ತಿದ್ದಿಕೊಳ್ಳುತ್ತೇನೆ ಮೇಡಮ್. ಧನ್ಯವಾದಗಳು 🙂

        • ಇದೊಂದು paradox. ಜ್ಞಾನದೋಷವಿದ್ದರೆ ಜ್ಞಾನದೋಷವು ಗೊತ್ತಾಗುವುದಿಲ್ಲವಲ್ಲ!

  14. ಸೋಲುಂಡು ಬಾಳೆವ್, ಮತವೀಯಿರೆನ್ನುತುಂ,
    ಕಾಲಿಟ್ಟು ಬಂದೇ , ಕರಚಾಚಿ ನಿಂದಿರಲ್,
    ಲೀಲಾವಿನೋದಕ್ಕೆಲೆ ಲೋಗರೆಂದಪರ್
    “ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್!”

  15. ಲೀಲಾರಣೋತ್ಸಾಹಿಯ ಸೈನ್ಯಸತ್ತ್ವದೊಂ-
    ಆಲೀಢಭಂಗೀಭರಮಂ ಪೊಗಳ್ವುದೇಂ?
    ವ್ಯಾಲೋಲಶುಂಡಾಲಚಯಂನೆಗಳ್ದಿರಲ್
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್

    • ಆಲಾಪಮಂ ಕೊಂಡಿರೆ ಯುದ್ಧವೈಭವಂ,
      ಲೀಲಾವಿಶೇಷಾದ್ಭುತಶಬ್ದಪುಂಜವಾ- |
      ಕ್ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್,
      ಸೋಲಿಲ್ಲದಂತೀ ಪದಪಾನರಂಗದೊಳ್ ||

      ( ವಾಕ್ +ಶೈಲ – ಸಂಧಿ ಹೇಗೆಂದು ತಿಳಿದಿಲ್ಲ )

      • ಆಹಾ! ಏನದ್ಭುತ!!

      • ಮೇಡಮ್, ಅದು ವಾಕ್ ಶೈಲ, ವಾಕ್ಶೈಲ ಅಲ್ಲವೇ?

        • ನೀಲಕಂಠರೆ, ಮೊದಲು ವಾಕ್ಶೈಲ ಎಂದೇ ಬರೆದೆ. ಆಮೇಲೆ ಯಾಕೋ ಸಂದೇಹವಾಯಿತು. ನೀವೆಂದಿರುವುದೇ ಸರಿಯಿರಬಹುದು. ಧನ್ಯವಾದಗಳು. “ವಾಕ್ ಶೈಲ” ವನ್ನು ಸಂಧಿ ಮಾಡದೆ ಹಾಗೇ ಸಮಾಸವಾಗಿ ಬಳಸಲು ಅವಕಾಶವಿದೆಯೆ ?

          • adakke yaava sandhi-niyamavoo illavalla, madam. heegaagi sandhi maaduva pramEyave baruvudilla.

          • ಬಹುಶಃ ವಾಕ್+ಶೈಲ = ವಾಕ್ಛೈಲ ಎಂದು ಆಗುತ್ತದೆ.

          • koppalatotare, ut + shvaasa = uchchhvaasa,
            but vaak + siddhi = vaaksiddhi (no sandhi)
            similarly no sandhi here…

          • ವಾಕ್+ಶ್ರೀ=ವಾಕ್ಛ್ರೀ

          • ಸ೦ಸ್ಕೃತಭಾರತಿ ಸ೦ಧಿ ಪುಸ್ತಕದಲ್ಲಿ ಕೊಟ್ಟ ರೀತಿ ನೋಡಿದರೆ, ಈ ಸ೦ಧಿಯನ್ನು ಮಾಡಲೂಬಹುದು ಮಾಡದೆಯೂ ಇರಬಹುದು ಅನಸ್ತದೆ.
            ಕುವೆ೦ಪು ಅವರು ಅನೇಕ ಕಡೆ ಬಳಸುವಲ್ಲಿ ವಾಕ್ಶ್ರೀ ಎ೦ತಲೇ ಇದೆ. ಸ೦ಧಿ ಇಲ್ಲ. ಸ೦ಧಿ ಮಾಡಿಉಚ್ಚರಿಸಹೋದರೆ ನಾಲಗೆ, ಗ೦ಟಲು, ಎದೆ ಎಲ್ಲ ನೋಯುತ್ತವೆ 🙂

          • ವ್ಯಾಕರಣದಲ್ಲಿ ಉಚ್ಚಾರ ಮಾಡಲು ಸುಲಭವಾಗುವಂತೆ ಸಂಧಿಗಳನ್ನು ಮಾಡಿದ್ದಾರೆ. ಎದೆ ಗಂಟಲು ನಾಲಗೆ ಎಲ್ಲ ನೋವಾಗುವಂತೆ ಮಾಡುವ ನಿಮ್ಮ ಉಚ್ಚಾರಣೆಯ ಕ್ರಮ ಹೇಗೆ ಎಂದು ಮುಂದಿನ ಬಾರಿ ಸಿಕ್ಕಿದಾಗಳೇ ಕೇಳಿ ನೋಡುವೆ 😉
            ಕುವೆಂಪು ಅವರನ್ನು ವ್ಯಾಕರಣಕ್ಕೆ ಪ್ರಮಾಣವಾಗಿ ತೆಗೆದುಕೊಳ್ಳುವುದು ಸೂಕ್ತವಲ್ಲ ಅವರೇ ಹೇಳಿದಂತೆ –
            “ಕವಿಗೆ ಕರ್ಣಂ ಪ್ರಮಾಣಂ ವ್ಯಾಕರಣಮಲ್ತು,
            ವ್ಯಾಕರಣಮೇಕೆಂಬೆಯೇಂ ಮರೆವುದಕೆ ಕಲ್ತು” ಎಂದು ಹಲವು ಕಡೆಗಳಲ್ಲಿ ಮರೆತುಬಿಡುತ್ತಾರೆ. ಸಂಸ್ಕೃತಭಾರತಿಯ ಪುಸ್ತಕವನ್ನು ನಾನು ನೋಡಿಲ್ಲ. ಈ ಸಂಧಿಯ ನಿಯಮದ ಸಾಧುತ್ವಕ್ಕೆ ಗಣೇಶರ ಉತ್ತರಕ್ಕೆ ಕಾಯಬೇಕು. 🙂

          • ವಾಕ್ಶೈಲ ಎಂಬುದೇ ಹೆಚ್ಚು ಯುಕ್ತ.
            ಇದು ವ್ಯಂಜನಸಂಧಿಗಳಲ್ಲೊಂದು ಬಗೆ. ಕಂಠೋಷ್ಠವರ್ಗಾಕ್ಷರಗಳ ಪರುಷವರ್ಣಗಳು (ಕ, ಖ, ಪ, ಫ) ಊಷ್ಮವರ್ಣಗಳಿಗೆ (ಸ, ಶ, ಷ) ಮುನ್ನ ಬಂದಾಗ ಅವು ಹಾಗೆಯೇ ಉಳಿಯುತ್ತವೆ.
            ಉದಾ:
            ವಾಕ್ಸತಿ, ವಾಕ್ಶಾರದೆ, ವಾಕ್ಷಡಾನನ
            ಇನ್ನು ವಾಕ್ಛ್ರೀ ಎಂಬುದು ವಿಕಲ್ಪವಾಗಿ ಯುಕ್ತ.

          • ಸಂಧಿಯ ಕುರಿತಾಗಿ ವಿವರವಾಗಿ ತಿಳಿಸಿ ನಮ್ಮೆಲ್ಲರ ಸಂದೇಹಗಳನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು ,ಸಹೋದರರೆ.

          • ಮೇಡಮ್, ಸ೦ಧಿಗೋಸುಗ ಗ೦ಟಲು ಕಿತ್ತುಕೊ೦ಡ ನನಗೂ ಕೊಪ್ಪಲತೋಟರಿಗೂ ಧನ್ಯವಾದಗಳಿಲ್ಲವೇ? 🙂

          • ಇಲ್ಲದಾಗುವುದೆ ನೀಲಕಂಠರೆ ? ನಿಮ್ಮ ಸ್ವಾರಸ್ಯಪೂರ್ಣಚರ್ಚೆ ತುಂಬ ಕುಶಿ ನೀಡಿದೆ. ಮುಕ್ತಾಯವಾದದ್ದು ಬೇಸರವಾಯಿತೆನುವಷ್ಟು.. 🙂 ಹಾಗಾಗಿಯೇ “ನಮ್ಮೆಲ್ಲರ ಸಂದೇಹ”ವೆಂದು ಸಹೋದರರಿಗೆ ಬರೆದೆ. ನಮ್ಮೆಲ್ಲರಲ್ಲಿ ನೀವಿಬ್ಬರೂ ಸೇರಿರುವಿರಷ್ಟೆ ? 🙂

      • ತುಂಬ ಚೆನ್ನಾದ ಪ್ರತಿಪದ್ಯ.

        • ಧನ್ಯವಾದಗಳು ಪ್ರಸಾದರೆ .

    • ನೀಲಕಂಠರೆ,
      ಈಗಾಗಲೇ ನಾಲಗೆ, ಗ೦ಟಲು, ಎದೆಗಳು ನೋಯುತ್ತಿದ್ದರೆ, ತದಿತರ ಅಂಗಗಳು ನೋವಿಗೀಡಾಗುತ್ತವೆ 🙂

  16. I am a new member and a Padya enthusiast. Here are few Choupadis for this samasya – poorana.

    ಹೇಳಿಹಂ ಪ್ರವಾದಿ ಸನ್ಮಾರ್ಗಮಂ ಕೇಳ್
    ಸಲ್ಲದದು ಈ ಕಾಲಧರ್ಮಕೆ ಎನುವವರಮ್ ಕಾಣ್
    ಮೇಲುಪ್ಪರಿಗೆಗಳ ವಿಮಾನೋಡ್ಡಯನದಿಮ್ ಉರುಳಿಸಲ್
    ಶೈಲನ್ಗಳೇ ಬೀದಿಗೆ ಬಂದುವಲ್ತೆ ಕಾಣ್

    ———————–

    ಮೇಲವೇ ಕುರ್ಚಿಯೋಳ್ ಕುಳಿತವರ್ ಹೇಳ್
    ತೋಳನ್ಗಳೇ ಕುರಿಯ ಹೊದಿಕೆಯಲಿ ನುಂಗುತಿರಲ್
    ಕಲಿಕಾಲವೇ ನೂಕಿರುವುದವರ ಸೆರೆಗಳೊಲ್
    ಶೈಲನ್ಗಳೇ ಬೀದಿಗೆ ಬಂದುವಲ್ತೆ ಕಾಣ್

    —————————-

    ಶೀಲಂಗಳಂ ಗಾಳಿಗೆ ತೂರಿ ನಡೆದ ಮನ್ತ್ರಿಗಳ್
    ಜಾಲದೊಳಂ ಬಿದ್ದ ಆಯುಕ್ತ ನ್ಯಾಯಪತಿಗಳ್
    ಮೈಲಿನಲ್ಲಿ ಸಿಲುಕಿರಲ್ ಸತ್ಯಧರ್ಮಾದಿಗಳ
    ಶೈಲನ್ಗಳೇ ಬೀದಿಗೆ ಬಂದುವಲ್ತೆ ಕಾಣ್

    ————————-

    ಕಲಿಯುಗದ ಮಹಿಮೆಯನ್ ಏನೆನಲಿ ಕೇಳ್
    ತೋಳನ್ಗಳೇ ಕುರಿಯ ಚರ್ಮದೊಳ್ ನಿಂದು
    ನಲುಮೆಯ ನಯ ನೀತಿಗಳಂ ನುಂಗೆ
    ಶೈಲನ್ಗಳೇ ಬೀದಿಗೆ ಬಂದುವಲ್ತೆ ಕಾಣ್

    • ಸತ್ಯನಾರಾಯಣರೇ, ಹಾರ್ದಿಕ ಸ್ವಾಗತ. ತಮ್ಮ ಹಳಗನ್ನಡ ಪದಜ್ಞಾನ ಚೆನ್ನಾಗಿದೆ. ಆದರೆ ತಾವು ಬರೆದ ಪದ್ಯಗಳು ಛ೦ದೋಬದ್ಧವಾಗಿಲ್ಲ. ನಾಲ್ಕು ಸಾಲಿನ ಯಾವುದೇ ಪದ್ಯ ಚೌಪದಿ ಅಲ್ಲ. ಕೊಟ್ಟ ಸಾಲು ಇ೦ದ್ರವ೦ಶ ಎ೦ಬ ಛ೦ದದ್ದು. ದಯವಿಟ್ಟು ಇದೇ ತಾಣದ ಕಲಿಕೆಯ ಸಾಮಗ್ರಿಗಳನ್ನು ಬಳಸಿ ರೂಢಿಸಿಕೊಳ್ಳಿ. ತಮಗೆ ಬೇಗ ಸಿದ್ಧಿಸುತ್ತದೆ.

    • ಮೂರ್ತಿಗಳಿಗೆ ಗೋಷ್ಠಿಗೆ ಸ್ವಾಗತ. ಬಿಡದೆ ಯತ್ನಿಸಿ. ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮ್ಮ ಪದ್ಯಗಳನ್ನು ಹೀಗೆ ಸವರಬಹುದು:
      ಆಲಿಂಗಿಸಿಂ ಸತ್ಪಥಮನ್ನೆ ಎಂದೊಡಂ
      ಕಾಲಾಪರೂಪಂ (opp. of ಅನುರೂಪ) ಗುರುವಾಕ್ಯಮೆನ್ನುತುಂ|
      ಮೇಲಿರ್ಪ ಸೌಧಂಗಳ ಹಾಯೆ ಯಾನದಿಂ (aeroplane)
      ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್||

      ಮೇಲಿರ್ಪ ಪೀಠಸ್ಥರು ಗರ್ವದಿಂ ವಲಂ
      ತೋಳಂಗಳೊಲ್ ನುಂಗಿರೆ ಮೇಷವೇಶದೊಳ್|
      ಕಾಲಾಂತದೊಳ್ ಸೋಲುತೆ ಸೇರೆ ಬಂಧಮಂ (jail)
      ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್||

      ಶೀಲಂಗಳಂ ಗಾಳಿಗೆ ತೂರಿ ಮಂತ್ರಿಗಳ್
      ಜಾಲಕ್ಕೆ ತಾಂ ಸಿಕ್ಕುತೆ ನ್ಯಾಯಶಾಸ್ತ್ರಿಗಳ್|
      ಶೂಲಂ ಗಡೊಂದೇ ಗತಿಯಾಗಲಿನ್ನೆಗಂ
      ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್||

  17. ಭೂಲಕ್ಷ್ಮಿಗಾಗಲ್ ಭರದಿಂದೆ ಕಂಪನಂ,
    ಕಾಲಂಗೆ ತುತ್ತಾಗಿರೆ ಕೋಟಿಜಂತುಗಳ್,|
    ಸಾಲಂಗಳಿಂದಾವೃತಮಿರ್ದುರುಳ್ದಿರಲ್,
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ ||

    • ಒಳ್ಳೆಯ ಸ್ವಭಾವೋಕ್ತಿಯನ್ನೇ ರಚಿಸಿದ್ದೀರಿ; ಅಲ್ಲದೆ ಇದು ನಮಗೆಲ್ಲ ತುಂಬ ಚಿಂತಾಕಾರಕವಾದ ಪ್ರಕೃತಿವಿನಾಶದ ಕಟುಸತ್ಯವನ್ನೇ ಧ್ವನಿಸಿ ಮತ್ತಷ್ಟು ಮಾರ್ಮಿಕವಾಗಿದೆ.

      • ಧನ್ಯವಾದಗಳು ಸಹೋದರರೆ.

  18. ಲೀಲಾವಿನೋದಂಗಳನಂತೆ ತೋರುತುಂ
    ಬಾಲಾರ್ಕನಾಚ್ಚಾದಿತ ಕಾಂತಿಯಿಂ ಬರಲ್,
    ತೋಳಿಂದಲೆತ್ತಾಡಿಸೆ ವಂದ ಪೆಣ್ಗಳೊಲ್,
    ಶೈಲಂಗಳೇ ಬೀದಿಗೆಬಂದುವಲ್ತೆ ಕಾಣ್!
    (ಬಾಲರವಿಯು ಬರುತ್ತಿರಲಾಗಿ, ಎತ್ತಾಡಿಸಲು ಬಂದ ಹೆಣ್ಣುಗಳಂತೆ ಬೆಟ್ಟಗಳು ಬಂದವೇ?)

    • ಶೈಲಂ ಬರಲ್ ವೀಥಿಗಮೇನು ವಿಸ್ಮಯಂ?
      ಬಾಲಂ (juvenile sun) ಬರಲ್ ಬೀದಿಗೆ ಮುನ್ನಮೇನೆ ತಾಂ!
      ಓಲೈಸಿ ಪಿಂತಕ್ಕೆಳೆಯಲ್ ಸುಪೀತನಂ
      ಶೀಲವ್ರತಂ ಪೋದೊಲು ತಾ ಗಡಂಗಿಗಂ||

    • ತು೦ಬ ಚೆನ್ನಾಗಿದೆ ಮೇಡಮ್

    • ಚೆನ್ನಾಗಿದೆ ಕಾಂಚನಾ.ಮೊದಲನೇ ಪಾದವನ್ನು “….ವಿನೋದಂಗಳನಂತೆ ತೋರುತುಂ” ಬದಲಾಗಿ ‘… ವಿನೋದಂಗಳನಾಡಿ ತೋರುತುಂ “ಎಂಬುದಾಗಿಯೂ, ಮೂರನೇ ಪಾದವನ್ನು”ತೋಳಿಂದಲೆತ್ತಾಡಿಸೆ ವಂದ ಪೆಣ್ಗಳೊಲ್” ಬದಲಾಗಿ ” ತೋಳಿಂದಮೆತ್ತಾಡಿಸೆ , ಪೆಣ್ಗಳಂತೆವೊಲ್ “ಎಂಬುದಾಗಿಯೂ ಬರೆದಲ್ಲಿ ಒಳಿತಲ್ಲವೆ ? ಆದರೆ ಬೆಟ್ಟಗಳು ಬೀದಿಗೆ ಬಂದಂತಾಗುವುದು ಹೇಗೆಂದು ಸ್ಪಷ್ಟವಾಗಲಿಲ್ಲ.

  19. ವಿನೋದವಾಗಿ !!

    ಮೇಲೇಳಲಿಂತುಂ ತಡಕಿರ್ದುಮಲ್ತೆ ಮೇಣ್
    ಕಾಲಿಕ್ಕಲಂತುಂ ಗಡ ಮಾಂಸಪರ್ವತಂ !
    ಬಾಲಾವಿನೋದರ್ ಕಡು ಚೋದ್ಯಗೈದರೈ,
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ !!

    ಓಡಾಡುವ(walking! ಮಾಡುವ) ದಪ್ಪವ್ಯಕ್ತಿ (ಮಾಂಸಪರ್ವತ)ಗಳನ್ನು ಕಂಡು ಮಕ್ಕಳ ಕುಚೋದ್ಯ !!

    • **ಬಾಲರ್ವಿನೋದರ್ ಕಡು ಚೋದ್ಯಗೈವವೋಲ್

      • “ಬಾಲವಿನೋದರ್’ ಅಥವಾ “ಬಾಲರುಂ, ವಿನೋದರುಂ” -ಸರಿಯಾದವುಗಳು.”ಬಾಲರ್ವಿನೋದರ್ “ಬಗ್ಗೆ ನನಗೆ ತಿಳಿದಿಲ್ಲ. “ಚೋದ್ಯಗೈವವೋಲ್” ಎಂಬುದು ಅಸಾಧುರೂಪ. ಅದು “ಚೋದ್ಯಂಗೈವವೋಲ್” ಎಂದಾಗಬೇಕು. “ಚೋದ್ಯಮಂ ಕೈವವೋಲ್ ” , ಕ್ರಿಯಾಸಮಾಸವಾಗಿ” ಚೋದ್ಯಂಗೈವವೋಲ್ ” ಎಂದಾಗುವುದು.

    • ಮೇಲೇಳಲಿಂತುಂ – ವಿಷಯವನ್ನು ಈ ಮುನ್ನ ಪ್ರಸ್ತಾವಿಸಿದ್ದರೆ, ಇಂತುಂ(ಹೀಗೆ) ಎನ್ನಬಹುದು. ಮೇಲೇಳಲೆಂತೋ ಎಂದರೆ ಈ ದೋಷವು ತಪ್ಪುತ್ತದೆ.

  20. ಉಷಾ ಅವರೇ, ನಿಮಗಾಗಿ ಕಾಯುತ್ತಿದ್ದೆ. 🙂 ಬೊಜ್ಜು ಹಲವರನ್ನು ಕಾಡುವ ಶೈಲಗಾತ್ರಸಮಸ್ಯೆಯಾಗಿದ್ದು, ನಿಮ್ಮ ಪೂರಣ ಚೆನ್ನಾಗಿ ಮೂಡಿದೆ.
    ಕೆಲವು ಸವರಣೆಗಳನ್ನು ಮಾಡಿ ಪದ್ಯವನ್ನು ಸ್ವಲ್ಪ ಬದಲಾಯಿಸಿದ್ದೇನೆ. ಬಾಲಾವಿನೋದರ್ ಎಂಬುದು ಬಾಲವಿನೋದರ್ ಎಂದಾಗಬೇಕಲ್ಲವೆ?

    ಮೇಲೇಳೆ ಕಷ್ಟಂಬಡೆ ಬೊಜ್ಜ ದೇಹಿಗಳ್,
    ಕಾಲೂರೆ,ಮಾಂಸಾವೃತಪರ್ವತಂಗಳೇ |
    ಬಾಲಂ ಕುಚೋದ್ಯಕ್ಕೆನೆ, ನೋಡಿ ಪೇಳ್ದನೈ
    “ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್”||

    • ಆಡಿಕೊಳ್ಳುವಹಾಗೆ ಬರೆದಿರುವ ಪದ್ಯವನ್ನು ಕೊಂಡಾಡಿಕೊಳ್ಳುವ ಹಾಗೆ ಮಾಡಿರುವಿರಿ ಶಕುಂತಲಾ !! ಧನ್ಯವಾದಗಳು.
      **ಬಾಲರ್ವಿನೋದರ್ – ಸರಿಯಾಗುದೇ ?

      • ಹಾಡಿಕೊಳ್ಳುವ ಹಾಗೆ ( ಛಂದೋಬದ್ಧವಾಗಿ ) ಬರೆದ ಪದ್ಯವನ್ನು,(ಸಾಲಮಂ) ಕೊಂಡು,ಹಾಡಿಕೊಳ್ಳುವ ಹಾಗೆ ಮಾಡಿದ್ದೇನೆ ಅಷ್ಟೆ. ಹೆಚ್ಚಿಗೇನೂ ಇಲ್ಲ,ಉಷಾ ಅವರೆ.

      • ಉಷಾರವರೆ, ನೀವು ಎಡಗಾಲಿನಲ್ಲಿ ಗೀಚಿದ್ದನ್ನು ಅವರು ಬಲಗೈಯಲ್ಲಿ ತಿದ್ದಿದರು ಎಂಬುದೆ ನಿಮ್ಮ ಆತ್ಮಪ್ರತ್ಯಯ?

  21. ಶಾಲಾದಿ ಸೌಧಂಗಳನಂದು ನಿರ್ಮಿಸಲ್,
    ಸಾಲಾದ ಶಿಲ್ಪಂಗಳನೊಪ್ಪಿ ನಿಲ್ಲಿಸಲ್,
    ಕಾಲಂಗಳಿಂ ಕೆತ್ತಿರೆ ಕಲ್ಗಳಂ, ಮಹಾನ್
    ಶೈಲಂಗಳೇ ಬೀದಿಗೆ ಬಂದುವಲ್ತೆ, ಕಾಣ್!

  22. ಶಾಲಾ ಕಲಾಕೂಟಕೆ ಮಣ್ಣಿನಿಂದಲೀ
    ಸಾಲಾದ ವೆಟ್ಟಂಗಳ ಮಾಡೆ ಚೆಂದದಿಂ
    ಬಾಲರ್ಕಳಾ ಮಾದರಿಯಂ ತರಲ್ಕೆ ಹಾ!
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್

    • ಚೀದಿಯವರೆ, ಒಳ್ಳೆಯ ಶೈಲಿಯ ಸೊಗಸಾದ ಪೂರಣ.ಎಲ್ಲರಿಗೂ ಶಾಲಾದಿನಗಳನ್ನು ನೆನಪಿಸುವಂತಿದೆ.
      ಮೊದಲನೇ ಪಾದವನ್ನು”ಶಾಲಾ ಕಲಾಕೂಟಕೆ ಮಣ್ಣಿನಿಂದಲೀ “-ಬದಲಾಗಿ ” ಶಾಲಾಕಲಾಕೂಟಕೆ ಮಣ್ಣ ಚೂರ್ಣದಿಂ ” ಎಂದು ಸವರಿದರೆ ಒಳಿತಲ್ಲವೆ ? “…..ಮಣ್ಣಿನಿಂದಮೀ ” ಎಂದು ತಿದ್ದಬಹುದಾದರೂ , ” ಈ ಸಾಲಾದ ಬೆಟ್ಟಂಗಳ….” ಎಂಬಲ್ಲಿ “ಈ” ,ಅಷ್ಟಾಗಿ ಅಗತ್ಯವೆನಿಸದಲ್ಲವೆ ?

      • ಸವರಣೆಗಳಿಗೆ ಧನ್ಯವಾದಗಳು madam..

        • ಚೀದಿಯವರೆ, ಸ್ಚಾಗತ. ಇನ್ನೊಂದು ಸಂದೇಹ. ” ಸಾಲಾದ ಬೆಟ್ಟಂಗಳ… ” ಎಂದಾಗಬೇಕಲ್ಲದೆ,
          ” ಸಾಲಾದ ವೆಟ್ಟಂಗಳ .. ” ಆಗಲಾರದಲ್ಲವೆ? ಏಕೆಂದರೆ, ಇದು ಸಮಾಸವಲ್ಲದೆ , ಸ್ವತಂತ್ರಪದವಾಗಿ ಬಳಸಲ್ಪಟ್ಟಿದೆಯಷ್ಟೆ ?

  23. ಮಾಲಾಕಲಾಲಂಕೃತಮಾರ್ಗವೃತ್ತದೊಳ್,
    ನೀಲೋತ್ಪಲಂ ಕಂಗೊಳಿಪಂಥ ತೋಟದೊಳ್,|
    ಮೇಲಾದ ನಿರ್ಮಾಣದೆ,ಪೂವ ಪೈರ್ಗಳಿಂ,
    ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ ||

  24. ಆಲೇಪನಂಗೊಳ್ಳದೆ ಹಾದಿಬೀದಿಗಂ
    ಭೂಲುಪ್ತಮಾಗಿರ್ದೊಡಮೇನು ಭಾಗ್ಯಮೈ?
    ಹೋಲುತ್ತೆ ಜೀವತ್ಪಶುರಕ್ತನಾಳಮಂ
    (Bitumen)ಶೈಲಂಗಳೇ ಬೀದಿಗೆ ಬಂದುದಲ್ತೆ ಕಾಣ್||

    • ಪ್ರಸಾದರೆ,ಒಳ್ಳೆಯ ಕಲ್ಪನೆ . ಪ್ರಾಸಕ್ಕಾಗಿ ನವೀನಪದಗಳನ್ನು ಆಯ್ದುಕೊಂಡು ರಸ್ತೆಯ ದುಃಸ್ಥಿತಿಯನ್ನು ವರ್ಣಿಸಿ, ಜಾಣ್ಮೆಯಿಂದ ಬೆಟ್ಟಗಳನ್ನು ಬೀದಿಗೆ ತಂದಿರುವುದು ಚೆನ್ನಾಗಿದೆ. ಹಳಗನ್ನಡಕ್ಕಾಗಿ ,ಭಾಷೆಯಲ್ಲಿ ಸ್ವಲ್ಪ ಸವರಣೆ ಮಾಡಿಕೊಂಡಲ್ಲಿ ಒಳಿತು.

      • ಧನ್ಯವಾದಗಳು. ಭಾಷಾಲುಪ್ತಿಯು ಅಧ್ಯಯನರಾಹಿತ್ಯಫಲ.

  25. ಓಲಾಡುತುಂ ವಾಹಿನಿಯೆಂತೊ ಸರ್ಪಿಸಲ್
    ಪೋಲಾಗದೊಲ್ ನೀರನು ನಿಲ್ಲಿಸುತ್ತುಮೀ
    (hills)ಶೈಲಂಗಳೇ ಸೇತುವೊಲಂತೆ ನಿಂದಿರಲ್
    (ಅಣೆಕಟ್ಟು)ಶೈಲಂಗಳೇ (ನದಿಯ)ಬೀದಿಗೆ ಬಂದುದಲ್ತೆ ಕಾಣ್||

    • ಒಳ್ಳೆಯ ಕಲ್ಪನೆ.ಭಾಷೆ,ವ್ಯಾಕರಣದಲ್ಲಿ ಸ್ವಲ್ಪ ಸವರಣೆಯನ್ನು ಮಾಡಿಕೊಂಡಲ್ಲಿ ಪದ್ಯದ ಶೋಭೆ ಹೆಚ್ಚುವುದು.

      • ದಯವಿಟ್ಟು ವ್ಯಾಕರಣದೋಷವನ್ನು ತೋರಿಸಿರಿ. ತಿದ್ದಿಕೊಳ್ಳಲು ಅನುವಾಗುತ್ತದೆ.

        • “ಪೋಲಾಗದೊಲ್ ನೀರನು ನಿಲ್ಲಿಸುತ್ತುಮೀ” ಎಂಬಲ್ಲಿ “ಪೋಲಾಗದವೊಲ್ ನೀರಂ ನಿಲ್ಲಿಸುತ್ತುಮೀ “‘ ಎಂದಾಗಬೇಕಷ್ಟೆ ? ಆಗ ಛಂದಸ್ಸು ಕೆಡುವುದು. ” ಪೋಲಾಗದಿರ್ಪಂತೆಯೆ ನೀರ ನಿಲ್ಲಿಸಲ್ ” ಎಂದು ಸವರಬಹುದಲ್ಲವೆ ? ” ಶೈಲಂಗಳೇ ಸೇತುವೊಲಂತೆ ನಿಂದಿರಲ್ ” ಎಂಬ ಸಾಲನ್ನು ” ಶೈಲಂಗಳೇ ಸೇತುವವೋಲೆ ನಿಂದಿರಲ್ ” ಎಂದು ಸವರಬಹುದಲ್ಲವೆ ?
          “ಶೈಲಂಗಳೇ ಬೀದಿಗೆ ಬಂದುವಲ್ತೆ ಕಾಣ್ ” ಎಂಬುದೇ ಸರಿ .

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)