Nov 282016
 

sleeping lights

  92 Responses to “ಪದ್ಯಸಪ್ತಾಹ ೨೩೧: ಚಿತ್ರಕ್ಕೆ ಪದ್ಯ”

  1. ಮಾಜಿದೆ ರೂಪಮೇ ಕರಿಕುವೊಂದಿದೆ ಸ್ನೇಹದೆ ಕಿರ್ಚಿನಿಂದೆ ನಿ
    ಮ್ಮಾಜಿಯಿದೇಕೆ ನೀಂ ಬಿಡಿಮೆನುತ್ತುಪದೇಶಿಸುತಿರ್ಪುದಾವಗಂ
    ಗಾಜಿನ ಬುಡ್ಡಿಯೀ ಪ್ರಣತಿರಾಜಿಯೊಳಿಂತುಟು ರಾಜಿಸಿರ್ಪುದೋ
    ಸಾಜಮಿದಂತ್ಯದೊಳ್ ಗಮನಮೆಂಬುದೊ ಒಂದೆ ಎನುತ್ತೆ ತೋರ್ದುದೇ!
    (ನಿಮ್ಮ ರೂಪವೇ ಮಾಜಿದೆ- ಮರೆಯಾಗಿದೆ. ಸ್ನೇಹ(ಎಣ್ಣೆ) ಕಿಚ್ಚುಗಳಿಂದ ಕರಿಕಾಗಿದೆ. ನಿಮ್ಮ ಈ ಯುದ್ಧವೇಕೆ! ಬಿಡಿ ಎಂದು ಯಾವಾಗಳೂ ಉಪದೇಶಿಸುತ್ತಿರುವ ಈ ಗಾಜಿನ ಬುಡ್ಡಿ ಹಣತೆಗಳ ರಾಜಿಯಲ್ಲಿ ರಾಜಿಸುತ್ತ ಅಂತ್ಯದಲ್ಲಿ ಸಹಜವಾಗಿ ಎಲ್ಲರೂ ಹೋಗುವುದು ಒಂದೇ ಕಡೆಗೆ ಎಂದು ತೋರಿಸುತ್ತಿದೆ)

    • ಕಲ್ಪನೆ ತುಂಬಾ ಚೆನ್ನಾಗಿದೆ.. ಸ್ನೇಹದೆ – ಶಿ.ದ್ವಿ?

    • clap clap

    • ಇರ್ವರಿಗೂ ಧನ್ಯವಾದಗಳು.
      @ಚೀದಿ- ಸ್ನೇಹದ ಹಿಂದೆ ಶೈಥಿಲ್ಯ ಇದೆ 😉 ಅದನ್ನು ನೇಹದ ಎಂದೂ ಮಾಡಿಕೊಳ್ಳಬಹುದು.

    • ಬಹಳ ಚೆನ್ನಾಗಿದೆ ತೋಟ, ಮಾಜಿ, ನಿಮ್ಮಾಜಿ… ರಾಜಿ, ರಾಜಿ ಅನುಪ್ರಾಸಗಳು ರಾರಾಜಿಸುತ್ತಿವೆ 🙂

  2. ದೊರೆತಿರೆ ನೇಹದ ಜತೆಯೀ
    ಕಿರುವಣತೆಗಳೆಂತೊ ಗಟ್ಟಿಯಾಗಿರ್ದಪುವೈ
    ನರಿಗಳ ನಡುವಣ ನಾಯಂ-
    ತಿರೆ ಗಾಜಿಂದಂಟದೊಂಟಿ ಪೊಳ್ಳಾಗಿರ್ಕುಂ!
    (ಸ್ನೇಹದ ಜೊತೆ ಸಿಕ್ಕ ಕಿರಿದಾದ ಹಣತೆಗಳು ಗಟ್ಟಿಯಾಗಿವೆ. ಆದರೆ ಈ ಗಾಜಿಂದ ಅಂಟಿಕೊಳ್ಳದ ಒಂಟಿ ಒಳಗೆಲ್ಲ ಪೊಳ್ಳಾಗಿ ನರಿಗಳ ನಡುವಣ ನಾಯಿಯಂತೆ ಇದೆ )

  3. ಜಗಕಂ ಬೆಳಕೀವರಿಗಂ
    ಸುಗತಿಯದೆಂದೊದಗಿ ಬಂದುದೀ ಬರ್ದುಕಿನೊಳ್?/
    ಬಗೆವರ್ ಸೊಡರಂತೆಸೆವರ್
    ಸೊಗಮಂ ಲೋಕಕುರಿಯುತ್ತಲಿತರ್ರನೆಲ್ಲರ್ //

    ಈ ಜಗತ್ತಿಗೆ ಬೆಳಕನ್ನು ಕೊಟ್ಟವರಿಗೆ ಬದುಕಿನಲ್ಲಿ ಯಾವಾಗ ಒಳ್ಳೆಯದಾಗಿದೆ? ಅವರನ್ನು ಎಲ್ಲರೂ ದೀಪಗಳಂತೆ(ಚಿತ್ರದಲ್ಲಿರುವ) ಎಂದು ತಿಳಿದು ಎಸೆದು ಬಿಡುತ್ತಾರೆ

    • ಚೆನ್ನಾಗಿದೆ.. ಕಡೆಯ ಸಾಲಿನಲ್ಲಿ ಲೋಕಕುರಿಯುತ್ತಲಿತರರ್ನೆಲ್ಲರ್ ಎಂದಾಗಬೇಕಿತ್ತು..

    • ಸೊಗಸಾದ ಕಲ್ಪನೆ

      • ಧನ್ಯವಾದಗಳು. ಟೈಪೋ ಆಗಿತ್ತು. ”ಲೋಕಕುರಿಯುತ್ತಲಿತ್ತರನೆಲ್ಲರ್ ” ಎಂದು ತಿದ್ದಿದ್ದೇನೆ.

    • ಚೆನ್ನಾಗಿದೆ

    • ಚೆನ್ನಾಗಿದೆ. “ಬೆಳಕೀವರ್ಗಂ” ಇತ್ಯಾದಿ ರೂಪಗಳು ಹೆಚ್ಚು ಹಳಗನ್ನಡತನವನ್ನು ಕೊಡುತ್ತದೆ.

      • ಆಹಾ! ಮೇಷ್ಟ್ರ್ ಬಂದ್ರುಽ ಮೇಷ್ಟ್ರ್ ಬಂದ್ರುಽಽ

      • ಸರಿ ಮೇಷ್ಟ್ರೇ, “ಜಗಕಂ ಬೆಳಕೀವರ್ಗಂ ” ಎಂದು ಹಳಗನ್ನಡೀಕರಿಸಿದ್ದೇನೆ.

  4. ಮಾಸ ಕಾರ್ತಿಕವಾದೊಡೇನು ?ಬರಿ ಹಣತೆಗಳ
    ರಾಸಿಯೊಳು ಹರಿಯುವುದೆ ಕಳ್ತಲೊಳು ಬೆಳಕು ?I
    ನೇಸರನ ಬೆಳಗು ಹೊಮ್ಮಿದೊಡೇನು?ಹೀರಿ ಹೊರ-
    ಸೂಸುವುದೆ ?ಸಂಪರ್ಕವಿರದ ಗಾಜು II

    ಸಾಧನ ಸಲಕರಣೆಗಳು ಇದ್ದರೆ ಸಾಲುವುದಿಲ್ಲ; ಮಾನವನಿಗೆ ಯಾವುದೇ ಕಾರ್ಯ ಸಾಧಿಸ ಬೇಕಾದರೆ ಇಚ್ಚಾ ಶಕ್ತಿ , ಜ್ಞಾನ ಶಕ್ತಿ ,ಕ್ರಿಯಾಶಕ್ತಿ ಮೂರು ಜತೆಗೂಡಬೇಕೆಂಬ ಇಂಗಿತಾರ್ಥ.

    • ಕಾರ್ತಿಕಮಾಸದ ಪ್ರಸ್ತಾವ ಯಾರು ತರ್ತಾರೆ ನೋಡೋಣವೆಂದಿದ್ದೆ, ಸಂತೋಷ ಈ ಪದ್ಯದಲ್ಲಿ ಬಂದಿದೆ 🙂

      • ನಿಮ್ಮ ಜ್ಞಾನಶಕ್ತಿಯ ತರಂಗಗಳನ್ನು ನನ್ನ ಇಚ್ಛಾಶಕ್ತಿಯ ಮೂಲಕ ಕ್ರಿಯಾಶಕ್ತಿಯನ್ನಾಗಿ (ಪದ್ಯವನ್ನಾಗಿ) ಪರಿವರ್ತಿಸಲು ಸಾಧ್ಯವಾದುದು ನನಗೂ ಸಂತೋಷ 🙂

    • ಚೆನ್ನಾಗಿದೆ

  5. ಸೊಡರೀಯುತುಮಿರ್ಪನಕಮು
    ಮೆಡೆಯೆಡೆಯೊಳ್ ದಿನಕರಂ,ಕಿರುವಣತೆಯಂ ಮೇಣ್
    ಕಿಡಿಬುರುಡೆಯನಾರ್ ನೋಳ್ಪರ್?
    ಸುಡುವೀ ಸತ್ಯಮನುಮೀ ಜಗಮರಿಯದೇ ಹಾ!!

    • ಕಿಡಿಬುರುಡೆ ಚೆನ್ನಾಗಿದೆ ಪ್ರಯೋಗ

      • agree

      • ಹೌದು. ಕಿಡಿಬುರುಡೆ ಚೆನ್ನಾದ ಪದ ಪ್ರಯೋಗ. ಪದ್ಯವೂ ಚೆನ್ನಾಗಿದೆ. ಇರ್ಪನಕಮುಂ- ಇರ್ಪನ್ನೆಗಂ ಎಂದೂ ಮಾಡಬಹುದು. ನಡುಗನ್ನಡದಲ್ಲಿ ಬಳಸುವ ಇರ್ಪನಕ- ಎಂಬ ಪ್ರಯೋಗ ಹಳಗನ್ನಡದಲ್ಲಿಯೂ ಇದೆಯಾ ಎಂದು ಅನುಮಾನ!

  6. ಕಳೆದು ಪೋದುದು ಕಾಲವೆಮ್ಮಯ
    ದಿಳೆಯ ದೂರ್ತರ ಕತದೊಳೆನ್ನುತೆ
    ಹಳಿದು ಮರುಗುವರೇನು ಸೊಡರಾ ಕಾಲಮಂ ನೆನೆದು!
    ಬೆಳಗೆ ,ಪುಟ್ಟುವ ಸೂರ್ಯನಮಮಾ
    ಕಳೆದುಕೊಂಬನೆ ತಾಳ್ಮೆಯಂ ದಿಟ
    ಮಳಿಸೆ ಯತ್ನಿಸುತಿರ್ದಿರಲ್ ಕರಿಮೋಡ ಹೊಂಚುತಲೀ!!

    • ಚೆನ್ನಾಗಿದೆ

    • ಚೆನ್ನಾಗಿದೆ. ಮುದ್ರಾರಾಕ್ಷಸನಿಂದ “ಧೂರ್ತ” ದೂರ್ತನಾಗಿದ್ದಾನೆ.

      • ಅಕ್ಷಿಗಳಂ ತೆರೆಯದೆ ನಾ
        ನಕ್ಷರದಭ್ಯಾಸಮಂ ಮುಗಿಸಿರಲ್,ತೋಟಾ!
        ಅಕ್ಷರಶ: ಖಲಮುದ್ರಾ
        ರಾಕ್ಷಸರಕ್ಷೆಯೊಳೆ ಬರ್ದುಕಿರ್ಪೆನಲಾ, ಹಾ! 🙂

  7. ಪಾಪಂಗಳಂಗೈದು ಮೋಚನೆಗೆ ತಪಿಸುತಿಹ
    ಶಾಪಪೀಡಿತರವೊಲ್ ನೊಂದು ಬೆಂದಿರ್ಪ
    ದೀಪಂಗಳಿಹುವಿಲ್ಲಿ ಮೋಚನಾಂಗನೆಯವಳ್
    ದೀಪಿಕೆಯು ಬೆಳಗಲ್ಕೆ ಬರುವಳೆನುತ

    ಕೊನೆಯ ಪಾದದಲ್ಲಿ ಮಾತ್ರೆಗಳನ್ನು ಹೊಂದಿಸುವುದಕ್ಕಾಗಿ ಹೊಸಗನ್ನಡ ಬಳಸಿದ್ದೇನೆ. ಬೇರೇನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ, ತಿದ್ದುವಲ್ಲಿ ಸಹಕರಿಸಿ

  8. ಸೊಡರು ಬಲ್ಬಿಗೆ ಹೇಳಿದ್ದು:
    ಮೆರೆದೆ ಕೋರೈಸುತಿಹ ಬೆಳಕನೀಯುವೆಯೆಂದು
    ಚಿರಕಾಲದೆಮ್ಮರಂ ಹಳಿದು ಪೊಗರಿಂ|
    (ದ್)ಉರಿಯುವೆವುಮೀಗಳುಂ ಎಣ್ಣೆ-ಬತ್ತಿಯನಿರಿಸೆ
    ಮಿರುಗಬಲ್ಲೆಯ ಪೇಳು ಇ/ಅನಿತಾದರುಂ||

  9. The power station that transmits electricity is far away. The bulb has to wait for the transmission for it to light up. But at sunset I can immediately light the earthen lamp myself – ಅಹಂ ಬ್ರಹ್ಮಾಸ್ಮಿ.
    ಮತ್ತಮಯೂರಮ್|| (ವಿದ್ಯುತ್)ಕೋಷಾಗಾರಂ ತಾನಿಹುದೆಲ್ಲೋ, ಗಡಮೂರ್ಜಂ
    ಪ್ರೇಷಂ ತಾನೆಂತೋ ಬೆಳಗಲ್ಕಂ ಸಲೆ ಕಂದಂ(bulb)|
    (Lamp)ದೋಷಾಸ್ಯಕ್ಕೆಂತೋ ತಿಲ(ತೈಲ)-ಪಿಂಜೂಲ(ಬತ್ತಿ)ಮನಿತ್ತುಂ
    ಪೂಷಾಸ್ತಂ ತಾನಾಗಿರಲಾನೇ ಬೆಳಕಿತ್ತೆಂ||
    (Just a comparison of ಹಣತೆ & bulb; nothing to do with their disposed state.)

    • Prasadu, Electric signal speed almost nears light speed. We cannot light soDaru faster than that 🙂

    • ಹೊಸ ಹೊಸದಾದ ವೃತ್ತಗಳಲ್ಲಿ ಸಿದ್ಧಹಸ್ತರಾದ ನಿಮಗೆ ವಂದನೆ_/\_ ಗಣೇಶರು ಒಂದು ಅವಧಾನದ ನಿಷೇಧಾಕ್ಷರದಲ್ಲಿ ಪ್ರೊ. ಕೆ ಎಸ್ ಕಣ್ಣನ್ ಅವರು ಪೃಚ್ಛಕರಾದಾಗ ಮತ್ತಮಯೂರವನ್ನು “ನಾನಾನಾನಾ ನನನನನಾನಾ ನನನಾನಾ” ಎಂದು ಬಳಸಿದ್ದರು. ಇದರ ಗತಿಯ ಬಗ್ಗೆ ಒಮ್ಮೆ ಕೇಳಬೇಕು.

  10. ಅದು ಸುಟ್ಟಿರುವ ಬಲ್ಬು ಅಲ್ಲ. ಹಳೆಯ ಹಣತೆಗಳೊಂದಿಗೆ ಇದೆ ಅಷ್ಟೆ, ಅವೂ ಒಡೆದಿರುವ ಹಣತೆಗಳಲ್ಲ, ಕಿಟ್ಟ ಹಿಡಿದಿವೆ ಅಷ್ಟೆ! ನಮ್ಮ ಮನೆಯಲ್ಲಿನ ಝಷ್ಟೆಯ ಚಿತ್ರಣವಿದಷ್ಟೆ. ಮನೆಯಲ್ಲಿನ ಸಾಮಾನುಗಳನ್ನು ಅಷ್ಟು ಒಪ್ಪವಾಗಿಟ್ಟಿದ್ದೇವೆ 🙁
    ಸುಟ್ಟಿರ್ಪ ಹಣತೆಗಳ್ ಮಾತ್ರಮವು ಒಡೆದಿಲ್ಲ
    ಕಿಟ್ಟಗಟ್ಟಿರ್ಪವು ಮಾತ್ರ|
    ಕೆಟ್ಟಿರ್ಪ (bulb)ಕಂದಮೆ? ಸರಿನೋಡಿ ಪೇಳಯ್ಯ
    ಇಟ್ಟಿರ್ಪ ಚಂದವದು ನಾವು!!

    • ಇಟ್ಟಿರ್ಪ ಚಂದ 😀

    • ಹಹ್ಹ! ಚೆನ್ನಾಗಿದೆ. 😀 ಕೆಲವು ವಿಸಂಧಿಗಳಿವೆಯಲ್ಲ!

      • ಅವರು ಸಾಂಗತ್ಯದಲ್ಲಿ ಸಂಧಿಗಳಿಗೆ ಅಂಟಿಕೊಳ್ಳುವುದಿಲ್ಲ 😉

      • ಹ್ಹ ಹ್ಹ ಹಾಗೇನಿಲ್ಲ.
        ’ಮಾತ್ರಮವು ಒಡೆದಿಲ್ಲ’ ಎಂಬಲ್ಲಿ ’ವ’ಡೆದಿಲ್ಲ ಎಂಬ ಉಚ್ಚಾರಣೆಯ ಮೊರೆಹೋದೆ. ಅಲ್ಲದೆ ಉ+ಒ=ಏನೆಂದು ತಿಳಿದುಕೊಳ್ಳಬೇಕಿದೆ.
        ಅಂತೆಯೇ ಪೇಳಯ್ಯ ಯಿ/ಇಟ್ಟಿರ್ಪ. ಅ+ಇ=?

        • ಉ+ಒ =ಉ ಕಾರ ಲೋಪ. ಅವನು+ಒಬ್ಬ =ಅವನೊಬ್ಬ, ಮನಸು+ಒಂದು=ಮನಸೊಂದು………
          ಅ+ಇ = ಇ – ಚಿಕ್ಕ+ಇಲಿ=ಚಿಕ್ಕಿಲಿ…..

          ಪದ್ಯದಲ್ಲಿ ಪೇಳಯ್ಯೊ, ಎಂದೇನಾದರೂ ಮಾಡಿ ಸಂಬೋಧನೆಯನ್ನು ತಂದರೆ ವಿಸಂಧಿದೋಷ ತಪ್ಪುತ್ತದೆ.

        • ಹಾಗಾದರೆ, ಮಾತ್ರಮವು+ಒಡೆದಿಲ್ಲ=ಮಾತ್ರಮವೊಡೆದಿಲ್ಲ ಎಂದಾಗುತ್ತದೆಯೆ?
          ಪೇಳಯ್ಯ+ಇಟ್ಟಿರ್ಪ=ಪೇಳಯ್ಯಿಟ್ಟಿರ್ಪ ಎಂದಾಗುತ್ತದೆಯೆ?

          • “ಮಾತ್ರಮವೊಡೆದಿಲ್ಲ ಸರಿ”, ಆದರೆ “ಪೇಳಯ್ಯಿಟ್ಟಿರ್ಪ ” ಸಂಧಿ ಮಾಡಲಾಗದು ಅನಿಸುತ್ತದೆ. ಮೇಷ್ಟ್ರೇ ಹೇಳಬೇಕು 🙂

      • ಹಾಗಾದರೆ “ಕಂದಮದೆ” ಎಂಬಲ್ಲಿ ಛಂದಸ್ಸು ತಪ್ಪಿದೆ 🙂

        • ಧನ್ಯವಾದಗಳು. ಸರಿಪಡಿಸಿದ್ದೇನೆ. ನಿಮ್ಮ ’ಹಾಗಾದರೆ’ ಎಂಬ ಒಕ್ಕಣೆ …ಚೋದ್ಯವಾಗಿದೆ 😉

  11. ರಥೋದ್ಧತ|| ಮಾರ್ವಾಡಿ ಮುಚ್ಚಲ್ (Tax)ಕರಚೌರ್ಯಮನ್ನುಂ
    ನಿರ್ವಾಹ ಗೈವಂ ದ್ವಯಖಾತೆಯೊಳ್ ತಾಂ|
    ನಿರ್ವಾತದೊಳ್ ಜೀವಿಸೆ ಬೇಕು ಛದ್ಮಂ (Vacuum bulb)
    ಸರ್ವತ್ರಮಿರ್ಪರ್ಗಮದಾವ ಪಂಗುಂ?||

    • ಇಂದ್ರವಜ್ರ

    • 😀 ನಿಮ್ಮ ಕಲ್ಪನೆಗಳು ಮತ್ತಾರಿಗೂ ಹೊಳೆಯಲು ಸಾಧ್ಯವಿಲ್ಲ. “ದ್ವಯಖಾತೆ” ಬಗ್ಗೆ ನೀಲಕಂಠರು ತಕರಾರು ಮಾಡುತ್ತಾರೆ ಎಚ್ಚರ!

      • ಧನ್ಯವಾದಗಳು. ಇದುವರೆವಿಗೆ ನೀಲಕಂಠರು ನನ್ನನ್ನು ಉಳಿಸಿದ್ದಾರೆಂದರೆ, ಬೀಸೋ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯುಸ್ಸು.

  12. ಸೊಡರುಗಳ ಮಾತು:

    ಸಾಜದೆ ನೂರ್ಸೊಡರ್ವೆಳಕನೆರ್ಚಿಪ ಪೆರ್ಮೆಯ ಗೋಲದೀಪಮೇ
    ತೇಜದ ದರ್ಪಮಳ್ಕುತುಳಿಯಲ್ಕೆಸೆವರ್ ಕಸದಂತೆ ನಿನ್ನಮೇಂ
    ಮಾಜಿರಲಾವುಗಳ್ ಬಳಸೆ ಮರ್ತೆ ವಿನೂತನರಂತೆ ಬೆಳ್ಗೆವೇಂ?
    ಗಾಜಿನ ಶೇಷದಿರ್ಕೆ ದೆಸೆಯೈ ಅಕಟಾ ಮೆರೆದಿರ್ಪ ಬಾಳ್ತೆಗಂ

    ಸಹಜವಾಗಿ ನೂರು ಸೊಡರ ಬೆಳಕನ್ನು ಕೊಡುವ ಹೆಮ್ಮೆಯ ಗೋಲದೀಪವೇ, ತೇಜಸ್ಸಿನ ದರ್ಪ ಅಳಕಿ ನಾಶವಾಗಲು ಕಸದಂತೆ ನಿನ್ಣೆಸೆವರು. ಏನು, ಮಾಸಿರಲು ನಾವುಗಳು ಮತ್ತೆ ಬಳೆಸಲು ವಿನೂತನರಂತೆ ಬೆಳಗುವುದಿಲ್ಲವೇನು? ಅಯ್ಯೋ, ಗಾಜಿನ ಪಳವುಳಿಕೆಯ ದೆಸೆಯಾಯ್ತೆ ಮೆರೆದಿರುವ ಬಾಳಿಗೆ

    • ಆಹ! ಸುಧಾಂಶುವಂತೆ ಕಮನೀಯತೆವೆತ್ತುದು ಸೋಮಸೂಕ್ತಿಗಳ್!
      (ನಿನ್ನನೇಂ- ಆಗಬೇಕಲ್ಲವೇ?)

  13. ಉರಿಯಲ್ ತಾನಸಮರ್ಥನಾದೊಡೆ ಸೊಡರ್, ಕಿತ್ತಿರ್ತು ತಾವ್ ಶೀಘ್ರದಿಂ
    ಮರೆವರ್ ಕಾಂತಿಯನಿತ್ತುದಂ ತಮದೊಳಂ, ತಜ್ಜೋೄತಿಯನ್ನಂತೆವೋಲ್/
    ತಿರೆಯೊಳ್ ಮಾನವ ಕಾಯದೊಳ್ ಕಸುವು ತಾನಿಪರ್ ನ್ನೆಗಂ ಲೋಗರಾ
    ನರಗಂ ಗೌರವವೀವರೈ ಹರಹರಾ ಶ್ರೀ ಮಂಜುನಾಥೇಶ್ವರಾ//

    ದೀಪವು ಉರಿಯಲು ಅಸಮರ್ಥವಾದೊಡನೆ ಅದು ಪ್ರಕಾಶವನ್ನಿತ್ತುದ್ದನ್ನು ಮರೆತು ಎಸೆದು ಬಿಡುತ್ತಾರೆ, ಹಾಗೆಯೇ ಮನುಷ್ಯನಲ್ಲಿ ಸಾಮರ್ಥ್ಯವಿರುವವರೆಗೆ ಮಾತ್ರ ಈ ಜಗತ್ತಿನಲ್ಲಿ ಗೌರವ ಸಿಗುತ್ತದೆ.

    • ಸಾಮರ್ಥ್ಯಮೇಂ ದೈಹಿಕವೆ ಮುಡಿ(ಗಿ)ಯೆ ದೇಹವದು
      ತೇಮಾನಗೊಂಬುದೇಂ ಯೌವನದವೋಲ್|
      ವ್ಯೋಮಲೀನರುಮಾದೊಡಂ ಬಾಲಮುರಳಿಯರು
      ಧೀಮಂತರವರ ಸಾಮರ್ಥ್ಯಂ ಚಿರಂ||

    • ಮಂಜುನಾಥೇಶ್ವರ ಶತಕ ಬರೆದು ಬಿಡಿ ಮತ್ತೆ

      • ಖಂಡಿತ! ಇದೇ ಜನ್ಮದಲ್ಲಿ ಬರೆದುಮುಗಿಸಲು ಪ್ರಯತ್ನಿಸುತ್ತೇನೆ 🙂

    • ಭರದಿಂ ಚೆಲ್ವಿನ ಪದ್ಯಮಿಂತು ದಿಟದಿಂ ಸದ್ಭಾವದಿಂದೊಪ್ಪುಗುಂ
      ಸರಿಯಕ್ಕುಂ ಕಳೆಯಲ್ಕೆ ತಾವೆ ತಾನೆನುವುದಾವರ್ತಂಗೊಳುತ್ತಿರ್ಪುದಂ!
      ಮೆರೆಗುಂ ಸೋಮರ ಮಾತಿನಂತೆ ಶತಕಂ ಸಾಹಿತ್ಯಲೋಕೋತ್ಕಟಂ
      ಚರಿಕುಂ ಚಿತ್ತಕಮುತ್ತಮತ್ವದಿನದೇ ಶ್ರೀ ಮಂಜುನಾಥೇಶ್ವರಾ!

      • ಉರಿಯಲ್ ತಾನಸಮರ್ಥನಾದೊಡೆ ಸೊಡರ್ ಕಿತ್ತಿರ್ತದಂ ಶೀಘ್ರದಿಂ”
        ತಿರೆಯೊಳ್ ಮಾನವ ಕಾಯದೊಳ್ ಕ್ಷಮತೆಯಲ್ಲೆ”ನ್ನುತ್ತುಮಾಂ ತಿದ್ದಿಹೆಮ್ //

  14. ಯುದ್ಧದೊಳು ಮಡಿದಿರ್ಪ ಸೈನಿಕರ ಶವದಂತೆ
    ಬಿದ್ದಿವೆಯೊ! ಬತ್ತಿಹೋಗಿರುವ ಹಣತೆಗಳು|
    ಗದ್ದುಗೆಯ ರಕ್ಷಿಸಲು ರಾಜನೂ ಹೋರಾಡಿ
    ಸದ್ದಡಗಿಸುತುರುಳಿದ ಮಿಂಚುಸೊಡರಾಗಿ||

    • ಮಿಂಚುಸೊಡರ್…. ಉಮ್… ಚೆನ್ನಾಗಿದೆ

    • ಚೆನ್ನಾಗಿದೆ. ಕೊನೆಯ ಸಾಲು ಸ್ವಲ್ಪ ಲಘುಬಾಹುಳ್ಯದಿಂದ ಕೂಡಿದೆ ನೋಡಿ. “ಸುತುರುಳಿದ” ಇಲ್ಲಿ ಸ್ವಲ್ಪ ತಿದ್ದಿದರೆ ಚೆನ್ನ.

      • ಧನ್ಯವಾದಗಳು ಸಲಹೆಗೆ ಗಣೇಶ್!!. ಕಡೆಯ ಸಾಲನ್ನು ಹೀಗೆ ಮಾಡಿದರೆ ಸರಿಯಾಗುವುದಾ?
        ‘ಸದ್ದಿಲ್ಲದೇ ಮಣ್ಣನಪ್ಪಿದನು ಮಿಂಚುಸೊಡರಾಗಿ’

  15. ಕಿಟ್ಟಗಟ್ಟಿರ್ದೊಡಂ ಬಲ್ಪಿಂ
    ಸೊಡರಿರ್ಪ ಸುಕಾರಣಂ|
    ನಿಮ್ನಮಿತ್ತದುಮೆಂದೆಂದುಂ
    (Bulb)ಕಂದ ತಾನೂರ್ಧ್ವದಿಂ ಚ್ಯುತಂ||

    • ಪ್ರಾಸಮಂ ಬಿಟ್ಟರೇನೀಗಳ್ ಪ್ರಾಸಾದು ಪ್ರಥಿತಪ್ರಭ
      ದೋಸಮೈ ಕನ್ನಡಕ್ಕೆಂಬರ್ ಮಾಸಲ್ ಪ್ರಾಸಾದಿಕಂ ಗುಣಂ

  16. It is ಅಂತ್ಯೇಷ್ಟಿ time for the dead bulb! The ಹಣತೆ does not melt in the heat of a burning bulb, but the bulb melts in the heat of a burning ಹಣತೆ.
    ಹಚ್ಚುವರ್ ಸೊಡರನೆಲ್ಲಮಂ ತ್ವರಂ
    ಕಿಚ್ಚಿನಿಂದೆ ಮೃತಕಂದುಕಂ ಸುಡಲ್|
    ಬೆಚ್ಚಗಾಗದಿದೆ ಮಿಂಚಿನಿಂ(electric light) ಸೊಡರ್
    ಪೆಚ್ಚುಗೊಳ್ವುದಲೆ (flame)ಅರ್ಚ್ಚಿಯಿಂದದುಂ(bulb)||

  17. Once upon a time, the burning thing was the firewood, and it stayed on ground. When it assumed the form of a wick, it rose from ground onto a lamp (ಹಣತೆ). When it graduated to filament, it asked to be placed on the roof! Men who become more and more vulnerable paradoxically aspire to go higher and higher!
    ಒಂದಾನೊಂದು (Time)ಭಸನ್ತದೊಳ್ ನೆಲನೊಳಿದ್ದುಂ ಕಾಷ್ಠಮೇ ಬೆಂದುದುಂ
    ಮುಂದೇರಿತ್ತದು ಮೃಣ್ಮಯಂ-ಹಣತೆಯಂ (Wick)ಪಿಂಜೂಲರೂಪಿಂ ಗಡಾ|
    ಇಂದಿಂತುನ್ಮುಖಮಕ್ಕು (filament)ಕೇಶರವಿಧಂ ತಾಂ ಪೊಂದೆ ರೂಪಾಂತರಂ
    ಪೊಂದಿರ್ದುಂ, ನಭಕೇರಲಿಚ್ಛಿಸುವರೈ, ಭೇದ್ಯಾತಿಭೇದ್ಯಾಂಗಮಂ||

  18. ಬದುಕನ್ನ ತೇಯುತ್ತಲಿರುಳೆಲ್ಲ ಬಲ್ಬೊಂದು
    ಮುದವನ್ನು ನೀಡಿತ್ತು ಬಲ್ಪಿನಿಂದೆ
    ಎದುರಿರುವ ಪ್ರಣತಿಯ ಗತಿಯುತನಗಿಹುದೆಂದು
    ಹದಿಹರಯದಲಿ ಜೀವ ತೊರೆದಿಹುದು

    • ಚೆನ್ನಾಗಿದೆ . ಮೂರನೆ ಸಾಲು ಸ್ವಲ್ಪ ಲಘುಗಳು ಹೆಚ್ಚಾಗಿ ಒಂದು ಮಾತ್ರೆಯೂ ಕಡಿಮೆ ಆದಂತಿದೆ. ಬಲ್ಬೊಂದು& ಬಲ್ಪಿನಿಂದೆ ಒಳ್ಳೆಯ ಚಮತ್ಕಾರ.

  19. ಇಂದು ನಿನ್ನೆಯದಲ್ತು,ಜಗದೊಳ್
    ಸಂದ ಸಾಜದ ನಿಯಮ!ವಿದಕಾಂ
    ನಿಂದಿರಲ್ ತಲೆವಾಗಿ,ಯಳ್ಚರಿಯನ್ನೆ ಸೃಷ್ಟಿಸಿತೇಂ!!
    ಕಂದರೇಳ್ಗೆಗೆ ನೀಳ್ದು ಸೊಡರ
    ನ್ನಂದು ದಕ್ಷತೆಯನ್ನೆ ತೋರ್ದಾ
    ತಂದೆ ತಾಯ್ವಿರ ಮೌನ ವೀಕ್ಷಣೆಯಾಗೆ ಮಾದರಿ,ತಾಂ!!!

    (ಸಹಜವಾದ ಪ್ರಕೃತಿಯ ನಿಯಮದಂತೆಯೇ ನಾವು ಇರುವುದು,ಎಂತು ಅಚ್ಚರಿಯನ್ನು ಸೃಷ್ಟಿಸಿತು?ಅಯ್ಯೋ! ಕಂದರ ಏಳ್ಗೆಗೆ ಸೊಡರಾಗಿ ಸಂದ,ಆ ಪಾಲಕರು, ತಮ್ಮ ಮಕ್ಕಳ ಕೈಂಕರ್ಯಗಳನ್ನು ನೋಡಿ ಸಂತಸಪಡುತ್ತಿರುವದೇ ನಮಗೆ ಮಾದರಿಯಾಗಿರುವಾಗ!!)

  20. ಎಳೆವಯಸ್ಸಿನಲ ಹಾಸ್ಯವ ಚಿಮ್ಮಿಸಿದೆ ನೀನು
    ತೈಲದೀಪದ ಕಾಲ ಮುಗಿಯಿತೆಂದು |
    ನಿನ್ನ ಮೀರಿಪನೊರ್ವ ನವತರಿಸಿದನು ನೋಡ
    ನೀನೆನ್ನ ಪಥಕಾದೆ ಅನುಯಾಯಿಯೇ ||

    ಸಂತೈಸುತಿಹರೆನ್ನ ಬಲಿಗೆಂದು ವರ್ಷದಲಿ |
    ತಳಮಳದಿ ಗಾಜಿಂದ ದೂರಾದರು ||
    ಹಿರಿಮೆಯಿಂ ಮೆರೆದ ಮನ ಚಡಪಡಿಸುತಿಹುದೆಂದು |
    ಹಂಬಲಿಸಿಲನುಕಂಪ ಸಹಜವಾಗಿ ||

    (MY First attempt in writing and completing a poem. Thanks to all the support and patience by Sri Koppaltota.

    The electric filament bulb that was once riding the wave, has been replaced by some one new. So its
    the oil lamps turn to give it back to the filament-bulb. She says, I at least get some prominence once a
    year on Deepawali day, people runaway from you fearing the danger of glass. You were riding high and
    taunting others once, now you want us to empathize with you….

    Hope it conveys the meaning, I have struggled to fit the words into the scheme of the chandus, have
    made no attempt on making any rhyming formations. Thanks.)

Leave a Reply to ಚೀದಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)