Jan 022017
 

  12 Responses to “ಪದ್ಯಸಪ್ತಾಹ ೨೩೬: ಚಿತ್ರಕ್ಕೆಪದ್ಯ”

  1. ಜರೆಯುತೆ ಜಗಳವ ಗೈಯಲ್
    ಮರೆಯಲ್ ಜೊತೆಗಿದರ್ ಕಾಲಮನನುಜರೀವರ್ರ್|
    ಭರದಿಂ ಮನಂಗಳೀಗಳ್
    ಕುರುಕುತೆ ಮತ್ತೆಪುದುವಾಳೆ ಯತ್ನಿಸುತಿರ್ಪವ್//

    ಫ್ರೇಮ್ನ ಒಳಗಿರುವುದು ದಾಯಾದಿಗಳ ಮನಸ್ಸು.

    ತಪ್ಪಿದ್ದಲ್ಲಿ ತಿದ್ದಬೇಕು.

  2. ಮಾನವ ತಂತ್ರಜ್ಞಾನದೊ
    ಳೇನೋ ಮಾಡಲ್ಕೆ ಪೋಗದೇನಾಯ್ತೆಂದ-
    ಧ್ವಾನಂ ಗೈದೆನೆ ನೆನೆಯ-
    ಲ್ಕಾನಂದದ ಪಳೆಯಶೈಶವ ಮನಗಾಣ್ಪಂ|

  3. ರಥೋದ್ಧತ|| ಕಂಬಿಬೇಲಿಯನು ಕಟ್ಟಿಕೊಳ್ಳುತುಂ
    ಹುಂಬರೊಲ್ ಸೆಟೆದು ನಿಲ್ಲೆ ರಾಷ್ಟ್ರಗಳ್|
    ನಂಬಿರಲ್ ಸಹಮನಸ್ಕರೆಂತೊ ತಾ-
    ವೆಂಬುವರ್ “ಮನಕೆ ಬೇಲಿಯಾವುದೈ”||

  4. ಮನದಹಂಕೃತಿ ಬೆಳೆದು ನಮ್ಮಯ
    ತನದ ರಕ್ಕಸ ನಾಟ್ಯವಾಡುತ
    ಲಿನಿತು ದುಗುಡದ ಬೇಲಿ ನಮ್ಮನು ದೂರವಾಗಿಸಿರೆ
    ಇನನ ಕಾಂತಿಯ ತೆರದಲೊಲವಿನ
    ಹೊನಲ ಬೆಳಕಲಿ ಮತ್ತೆ ಪ್ರೀತಿಯ
    ಕೊನರು ಮೂಡುತಲಿರಲಿ ಬದುಕಿನ ಬರಡು ಭೂಮಿಯಲಿ

    ತಮ್ಮ egoಇಂದಾಗಿ ದೂರವಾದ ಗೆಳೆಯರಿಬ್ಬರು/ಪ್ರೇಮಿಗಳು/ದಂಪತಿಗಳು ಹೀಗಂದುಕೊಳ್ಳಬಹುದೆಂಬ ಭಾವದಲ್ಲಿ ಬರೆದದ್ದು..ಒಲವಿನ ಬೆಳಕಲ್ಲಿ ಪ್ರೀತಿ ಚಿಗುರಲಿ ಅನ್ನುವುದು ಸರಿಯೋ ತಪ್ಪೋ ಗೊತ್ತಿಲ್ಲ. ದಯವಿಟ್ಟು ತಪ್ಪುಗಳನ್ನು ತಿಳಿಸಿ ಸಹಕರಿಸಿ

  5. ಶಿಲ್ಪನದೋಷ
    ಇಂದ್ರವಜ್ರ|| ಸಂದಿರ್ಪುದಿಂದಿಂಗಮಿವರ್ಗೆ ಬಾಲ್ಯಂ
    ನಿಂದಿರ್ಪರಿನ್ನೇಂ ಕರಲಾಘದಿಂದಂ?
    ಹಿಂದಿಕ್ಕಲೇವೇಳ್ಕು ಪರಸ್ಪರರ್ಗಂ
    ಮುಂದೊಮ್ಮೆ ಬೆನ್ನಂ, ಬೆಳೆದಂತೆ ದೇಹಂ||

  6. ಮನದೆ ಸಿತದ ಪೋರಂ ಸಾತ್ವಿಕಂ, ನೇಹಕಂ ತಾ-
    ನನಿಬರನೊಲಿಸಲ್ಕೆಂದೀಕ್ಷಿಪಂ, ಪಾರಹಂಕಾ-
    ರನಿರತರಪಕರ್ಷಗ್ಲಾನಿಯಂದೋರ್ಪುದಂ ಹಾ
    ಘನತೆಯುಳಿದ ಜೀವರ್ಗೆಂದೆ ಸಲ್ಗುಂ ವಿಷಾದಂ

  7. ಕುಂಟಾಟ ಕಬ್ಬಡಿಗಳಾ
    ನಂಟು ಬೆಸೆದಿರಲ್ಕದೆಂತು ಕಳೆವುದು ಬಂಧಂ!
    ಕುಂಟು ನೆವಗಳಿಂದೊದವಿದ
    ಕಂಟಕಗಳಿಗಸು ವದೆಲ್ಲುಳಿಗು ಕಡೆವರೆಗುಂ
    (ಬಾಲ್ಯದಲ್ಲಿ ಬೆಳೆದ ಸ್ನೇಹವು ಕಡೆವರೆಗೂ ಶಾಶ್ವತವೇ. ಕೆಲವೊಮ್ಮೆ ಗೆಳೆತನಕ್ಕೆ ಕಂಟಕ ವಾದರೂ ಅವು ಬಾಳುವಂತದ್ದಲ್ಲ)

  8. ಬರಿ ನಿನ್ನದಲ್ಲದಿರುವೀ ಬಾಳು ಹೆಣೆದು ಕೊಂ-
    ಡಿರೆ ಪರರ ಬಾಳಿನೆಳೆಗಳಿಗಂಟಿ
    ಸರಿ-ಬೆಸದ ನಡುವಿನಲಿ ಹಿಂದಿರುಗೆ, ಬಿಟ್ಟೆನೆಂ-
    ದರು ಬಿಡದೆ ಬೆನ್ನಿಗಂಟಿದೆಯೆ ನಂಟು ।।

    ಕಾಡುವ ಬದುಕಿನ “ದ್ವಂದ್ವ”ದ ಬಗ್ಗೆ – ನಮ್ಮ ಬಾಳು ಸಂಪೂರ್ಣ ನಮ್ಮದಲ್ಲ, ಅದರಲ್ಲಿ ಇತರರ ಬಾಳಿನ ಎಳೆಗಳು ಹೆಣೆದುಕೊಂಡಿರುತ್ತದೆ. ಬೇಡವೆಂದು “ವಿಮುಖ”ಗೊಂಡರೂ ಬೆನ್ನುಬೀಳುವುದು “ಮಮಕಾರ” !!

    • ಚೆನ್ನಾಗಿದೆ. (ಎರಡನೆಯ ಪಾದದಲ್ಲಿ ಕೊನೆಯ ಗುರು?)

      • ಧನ್ಯವಾದಗಳು ಪ್ರಸಾದ್ ಸರ್,
        ತಿದ್ದಿದ ಪದ್ಯ :
        ಬರಿ ನಿನ್ನದಲ್ಲದಿರುವೀ ಬಾಳು ಹೆಣೆದು ಕೊಂ-
        ಡಿರೆ ಪರರ ಬಾಳಿನೆಳೆಗಳೊಡನಂಟಿ ।
        ಸರಿ-ಬೆಸದ ನಡುವಿನಲಿ ಹಿಂದಿರುಗೆ, ಬಿಟ್ಟೆನೆಂ-
        ದರು ಬಿಡದೆ ಬೆನ್ನಿಗಂಟಿದೆಯೆ ನಂಟು ।।

  9. ತಿರುಗಿ ನಟಿಸಿ ವಿರೋಧಮಂ ಜನ
    ರೆರಗುವಂದದೆ ಜಗಳವೆಬ್ಬಿಸಿ
    ಸುರಿವ ರಕ್ತದ ಕೋಡಿಯೊಳ್ ಮತವನ್ನೆ ಆಯುವರೈ!
    ಪರಿದು ಬಂದೊಡೆ ಹಣವು ನಾಡಿನ
    ತರತರದ ಕಜ್ಜಂಗಳಿಗೆ ಕರ
    ವೆರೆಸಿ ಗುಟ್ಟಿಂದೊಂದುಗೂಡಿಯೆ ಕಾರ್ಯಮೆಸಗುವರೈ!
    (ವಿರೋಧವು ಜನಸಾಮಾನ್ಯನಲ್ಲಿ ಮಾತ್ರವುಳಿಯುವಂತಾಗುತ್ತದೆ,ತಾವು ಎಲ್ಲವನ್ನೂ ಮರೆತು ಕಾರ್ಯ(?)ವೆಸಗುತ್ತಾರೆ ನಾಯಕರು) :-)(ನಾಯಕರಲ್ಲಿ ವಿರೋಧವು ಕೇವಲ ನಟನೆಗೇ ಸೀಮಿತವಾಗುತ್ತದೆ)

    • ಸುರಿವ ರಕ್ತದ ಕೋಡಿಯೊಳ್ ಮತವನ್ನೆ ಆಯುವರೈ clap clap

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)