May 022011
 
ಹಸನ ಮಾಳ್ಪೆನು ಜಗವನೆಂದೆನು
ತೊಸರುತಲವರಿವರನೆತ್ತರನು
ಜಸವಪಡೆವೆಂದುಬ್ಬಿ ಹರಿದಿಹುದು ಹುಂಬುಹೊನಲು |
ಅಸಮನೆಂದಿಹನೊಸಮನಬ್ಧಿ
ಗೆಸದೆನೆಂದೊಬಮನೂರತಡ
ಹಿಸಲು ಸೀರೊಡೆದೇಳಲಿಹುದು ರಕುತಬೀಜಗಳು ||

ಹಸನಮಾಳ್ಪೆನು ಜಗವನೆಂದೆನು
ತೊಸರುತಲವರಿವರರಕುತವನು
ಜಸವಪಡೆದೆನುತಲುಬ್ಬಿ

ಹರಿದಿಹುದೋ ಹುಂಬುಹೊನಲು |

ಅಸಮನೆಂದಿಹನೊಸಮನಬ್ಧಿಯ
ಲೆಸದೆನೆಂದೊಬಮನೂರತಡವ
ರಿಸೆ ರಕುತಬೀಜನಕುಡಿಯು ಸಾವಿರದೆ ಸಿಡಿದೇಳ್ವುದು ||

  3 Responses to “ನೆ(ಜ)ಲಸಮನಾದ ಒಸಮ”

  1. ಚೆನ್ನಾಗಿದೆ…
    ಅಸಮನೆಂದಿಹನೊಸಮ ಮತ್ತು ಎಸದೆನೆಂದೊಬಮ….ಒಳ್ಳೆಯ ಪ್ರಯೋಗ…
    ಸ್ವಲ್ಪ ಗಣಿತ ವ್ಯತ್ಯಾಸವಿದೆ….

    ತೊಸ ರು ತ ಲ ವ ರಿ ವ ರ ನೆ ತ್ತ ರ ನು
    U U U U U U U U U – U U U

    ನೆತ್ತರನು ಎ೦ಬಲ್ಲಿ ಮಾತ್ರಾ ಸ೦ಖ್ಯೆ ಒ೦ದು ಹೆಚ್ಚಾಗಿದೆ. ೩*೪ ಆಗಬೇಕು ೪*೩ ಆಗಿದೆ.

    ಹಾಗೆಯೇ,
    ಅಸಮ ನೆಂದಿಹ ನೊಸಮ ನಬ್ಧಿ
    ಕೊನೆಗೆ ಒ೦ದು ಮಾತ್ರೆ ಕಡಿಮೆ ಯಾಗಿದೆ…ಅಬ್ಧಿಯಲೆಸದೆ ಎ೦ದಿದ್ದರೆ ಒಕೆ.
    ಹಿಸಲು ಸೀರೊಡೆ ದೇಳ ಲಿಹು(ದು) ರಕುತ ಬೀಜಗಳು
    ಲಿಹುದೀ ಆಗಿದ್ದರೆ ೪ ಮಾತ್ರೆ ಸರಿಯಾಗುತ್ತಿತ್ತು…

  2. ಶ್ರೀಶ, ಧನ್ಯವಾದಗಳು. ಪದ್ಯವನ್ನು ತಿದ್ದಿರಿಸಲಾಗಿದೆ.

  3. ಸತ್ತನೊಸಮೆ೦ದೊಬಮಹೇಳಿಮ
    ಹತ್ತರದ ವಾರ್ತೆಯುಗ್ರರುಗ
    ಳ್ಗುತ್ತರದವೋಲ್ ಮೂಡಿಬರಲಾಸೆ ಭಾವವು ಜಗದೊಳ್|
    ಅತ್ತಲವರಾ ಪಾತಕಿಯಕೊಲ
    ಲಿತ್ತಲೋಟಿಗೆ ಹಾಕಿ ಲೆಕ್ಕವ
    ಹೆತ್ತ ತಾಯಿಯ ಕತ್ತು ಕುಯ್ಯುವ ಷ೦ಡ ಸ೦ತಾನ ||

Leave a Reply to Rajaneesh Kashyap Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)