Aug 142017
 

ಗೋಕುಲಾಷ್ಟಮಿಯ ಅಲಂಕಾರವನ್ನು ವರ್ಣಿಸಿ ಪದ್ಯ ರಚಿಸಿರಿ

  10 Responses to “ಪದ್ಯಸಪ್ತಾಹ ೨೬೮: ವರ್ಣನೆ”

  1. ಕರದಲಿ ಕೊಳಲನು ಶಿರದೊಳು ಗರಿಯನು
    ಧರಿಸುತಲಧರದಿ ಬೆಣ್ಣೆಯನು
    ಬಿರಿದಿಹ ಮಂದಸ್ಮಿತಕುಸುಮವನೀಂ
    ಕರವನು ಮುಗಿದರಿಗೀಯುತಿಹೆ

  2. ಗಿರಿಯಂ ಬೆರಳುಂಗುರಮಾ-
    -ಗಿರಿಸುತೆ, ವಿಶ್ವಮನೆ ಕೃಷ್ಣ! ಬೆಣ್ಣೆಯ ತೆರದಿಂ-
    -ದಿರಿಸುತೆ ಬಾಯೊಳ್ ಮೆರೆಯೈ
    ಮರೆಸುತುಮೆಮ್ಮೀ ವಿರಿಂಚಿಕೃತ ಭವಭರಮಂ

    ಗಿರಿಯನ್ನು ಬೆರಳುಂಗುರವನ್ನಾಗಿಸಿ,ಜಗತ್ತನ್ನೇ ಬೆಣ್ಣೆಯಂತೆ ಬಾಯೊಳಗಿರಿಸಿಕೊಂಡ ಕೃಷ್ಣ(ಇವೆರಡನ್ನೇ ಕೃಷ್ಣ ಅಲಂಕಾರದಂತೆ ಧರಿಸಿದ ಎಂದುಕೊಂಡು:-) ) ನಮ್ಮ ಭವಬಂಧಗಳನ್ನು ಮರೆಸುತ್ತಾ ಮೆರೆಯಲಿ ಎನ್ನುವ ಪ್ರಯತ್ನ

  3. ಮರೆಯಲಮ್ಮೆವುಧರೆಯೊಳೆಂದಿಗು
    ಹರಿಯ ಬಾಲ್ಯದ ಸೊಗದ ಚಣಗಳ
    ನರರೆ ಕಾಣುವೆವಲ್ತೆ ಕಂದನ ಮುಗ್ಧಕೇಳಿಯೊಳೇ
    ಕೊರಳ ಹಾರವೊ ,ಶಿರದೆ ಪಿಂಛವೊ,
    ಮೆರಗನೆಚ್ಚಿಪ ಪೀತವಸ್ತ್ರಮೊ
    ನೆರೆಯಲಪ್ಪೆವೆ ಬಾಲಕೃಷ್ಣನೆ ಕುವರನೆಮಗೆಂದು!

  4. ಲೋಕವನೆ ಸೇವಿಪಗೆ ಬೆಣ್ಣೆಯುಂಡೆಯು ತರವೆ
    ಸಾಕೆಂತು ಮುಡಿಗೊಂದು ನವಿಲುಗರಿಯುಂ ।
    ನಾಕು ಸಾಲೊಳು ಸಿಂಗರಿಸಲಾಗಲದೊ ಪಾಡಿ
    ಗೋಕುಲಾಷ್ಟಮಿಯಂದು ಮಧುರಾಷ್ಟಕಂ ।।

    ಬಾಯಲ್ಲಿ ಜಗವನ್ನೇ ತೋರಿದ “ಶ್ರೀ ಕೃಷ್ಣ”ನಿಗೆ – ಬರಿ ಬೆಣ್ಣೆಯಿತ್ತು, ನವಿಲುಗರಿಯ ಕಿರೀಟವಿಟ್ಟರೆ ಸಾಕೇ ? ನಾಲ್ಕು ಸಾಲಿನಲ್ಲಿ ಅವನನ್ನು ಬಣ್ಣಿಸಲು ಸಾಧ್ಯವಾಗದು, ಹಾಗಾಗಿ ಪಾಡಿ – “ಗೋಕುಲ” ಅಷ್ಟಮಿಗೆ “ಮಧುರ” ಅಷ್ಟಕ !! (ಅವ ಹುಟ್ಟಿದ್ದು ಮಥುರೆಲಿ ಬೆಳೆದಿದ್ದು ಗೋಕುಲ)

  5. ಕೆಂಪನೆಯ ಕೋಡುಬಳೆರಾಶಿಯು
    ಕಂಪ ಸೂಸುವ ಬೆಳ್ಮಿಠಾಯಿಯು
    ಸಂಪುಟಂ(ರಾಶಿ) ತಿಳಿಹಳದಿಬಣ್ಣದ ತೇಂಗೊಳಲ್ ಮೇಣಿಂ|
    ತಂಪನೀಯುವ ಹೆಸರಪಾಯಸ
    ಜೋಂಪು ಗಸಗಸೆಪಾಯಸದಿನಿಂ
    ’ರಂಪ’ಗಿಷ್ಟವು ಬಣ್ಣಬಣ್ಣದವೆಲ್ಲ ತಿನಿಸುಗಳು||

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)