Dec 112017
 

“ಚುನಾವಣೆಯ ಆಶ್ವಾಸನೆ”ಯನ್ನು ವರ್ಣಿಸಿ ಪದ್ಯ ರಚಿಸಿರಿ

  48 Responses to “ಪದ್ಯಸಪ್ತಾಹ ೨೮೫: ವರ್ಣನೆ”

  1. ಮತಯಾಚನೆಯಂ ಗೈಯಲ್
    ಸ್ತುತಿಸಲ್ಕಾಶ್ವಾಸನೆಗಳ ಪಟ್ಟಿಯೆನಿಲ್ಗುಂ|
    ಸ್ಮೃತಿಯೊಳ್ ಕಂಡ ಕನಸಿನೊಲ್
    ಪ್ರತಿರೂಪನಿಂತು ತೋರುತಳಿಸುತಲಿರ್ಪರ್|

    • last line correction — ಪ್ರತಿರೂಪಮನಿಂತು….

      • Cheedi -> ಕನಸಿನೊಲ್ -> ಕನಸಿನೋಲ್ allava? it is good if a gist of imagination is mentioned at the end of padya.

        • Thanks Holla.. ಹೌದು.. ಕನಸಿನೋಲ್ ಆಗಬೇಕಿತ್ತು..
          ಅರ್ಥ ಇಷ್ಟೆ– ಇವರುಗಳು ಕೊಡುವ ಆಶ್ವಾಸನೆಗಳು ಕೇಳ್ತಾ ಇದ್ರೆ, ಬರಿಯ ಕನಸಿನಂತೆ ಭಾಸವಾಗುವುದು. ಹಾಗೂ ಆಶ್ವಾಸನೆಗಳ ಪಟ್ಟಿಯೊಂದೆ ನಿಲುವುದು.

  2. ಪದ್ಯಾಬೇಕಂತೀರಿ ಅದ್ಯಾವ್ಮಹಾವಿಷ್ಯ ಮದ್ಯಾನ್ದೊಳ್ಗೇನೇ ಮಾಡ್ಸ್ತೀನಿ
    ಮದ್ಯಾನ್ದೊಳ್ಗೇನೇ ಮಾಡ್ಸ್ತೀನಿ ನನ್ನನ್ನ ವಿದ್ಯಾನ್ಸೌದಕ್ಕೆ ಕಳ್ಸ್ಕೊಡ್ರಿ

  3. ಮತ ಮತ ಮತವೆಂದು ತಿರಿದಾಡುವಿರಿ ನಮ್ಮ
    ಮತದ ಬೆಲೆಯನೇನಾದರು ಬಲ್ಲಿರ

    ತಟ್ಟದ ಬಾಗಿಲದಿಲ್ಲ ಕಟ್ಟದ ಕಂತೆಯದಿಲ್ಲ
    ನೆಟ್ಟಗೆ ಇರುವೊಂದು ನಡೆಯಿಲ್ಲ
    ದಿಟವಾಗಿ ಜಗವನ್ನೇ ತಂದಿಟ್ಟೆನೆಂದವನು
    ಕೊಟ್ಟಿದ್ದು ಕೈ ಮಾತ್ರ ಮರೆತಿಲ್ಲ ಮನುಜ

    ನೋಟೇ ಸರ್ವೋತ್ತಮ ನೋಟೇ ಸರ್ವೇಶ್ವರ
    ನೋಟದಿಲ್ಲದೆ ನೋಟ ದಕ್ಕೀತೆ
    ವೋಟಿಗಾಗಿಯೆ ನೋಟನೇಟೋ ಚೆಲ್ಲದ ಹೊರತು
    ಆಟವು ನಿಂತ್ಹಾಂಗೆ ನೆನೆಕಂಡ್ಯ ಮನುಜ

    ಕನಕದಾಸರು ಕ್ಷಮಿಸುವುದಾಗಿ ಆಶ್ವಾಸನೆಯನ್ನು ಕೊಟ್ಟಿದ್ದಾರೆ

  4. ಅಂಗೈಯೊಳಾಗಸವನಂ
    ಮುಂಗಡಮೀವೀ ಚುನಾವಣೆ ಚತುರ ಸಂಧಾ-
    ನಂ ಗಡ ಮೇಣ್ “ಮತ”ಮನಪಾ-
    ತ್ರಂಗಿಪ್ಪೊಡದೆಂತು “ದಾನ “ಮಪ್ಪುದೊ ಕಾಣೆಂ !!

    • ಅಪಾತ್ರರೇಕಾದರು? ಕೇಳಿಲ್ಲವೇ?

      ಕುನಯಾತ್ ಧನಮಾಪ್ನೋತಿ ಧನಾತ್ ಯಾತಿ ಚ ಪಾತ್ರತಾಂ
      ಪಾತ್ರತ್ವಾತ್ ಮತಮಾಪ್ನೋತಿ ಮತಾತ್ ಗಾತ್ರಂ ಪುನರ್ಧನಂ

      ಯಾವ ಶಂಕೆಯೂ ಬೇಡ.

      • ಜೀವುವಿಕೆಗೆ ಧನ್ಯವಾದಗಳು ಜೀವೆಂ.

        ಅಂಗೈಯೊಳಾಗಸವನಂ
        ಮುಂಗಡಮೀವೀ ಚುನಾವಣೆ ಚತುರ ಸಂಧಾ-
        ನಂ ಗಡ, ಸಮ್ಮತವಂ ಪಾ-
        ತ್ರಂಗಿಪ್ಪೊಡದು “ಮತ ದಾನ ” ಮಪ್ಪುದು ದಿಟಮೈ !!

    • ahaa chennagide. bhasheya pravaaha chennagide.

  5. ಪರಿವರ್ತನಾ ಯಾತ್ರೆಯಭಿವೃದ್ಧಿ ಪರ್ವವೈ
    ಕರುನಾಡು ಹಿರಿಜನರ, ಪಕ್ಷಗಳ್ ಮೆಚ್ಚಿಸಲ್
    ತರತರದಿ ಧರ್ಮಗಳ ಹೋರಾಟ ಮಾಡಿಪರ್
    ಸರಸರನೆ ಮತಗಳಿಂ ಗೆದ್ದಾಡಿಸುವರರೆರೆ!

    • ಪರಿವರ್ತನಾ ಯಾತ್ರೆ contemporary ಆಗಿದೆ. 🙂 ಧರ್ಮಕ್ಕಿಂತ ಮತವನ್ನು ೨ ಅರ್ಥದಲ್ಲಿ ಉಪಯೋಗಿಸಿದರೆ ಇನ್ನು ಚನ್ನೆಯಾಗಿರತ್ತನಿಸುತ್ತೆ.

  6. ಅರಳು ಹುರಿದಂದದೋಲ್ ಮಾತಿನ ಚಟಾಕಿಯರೆ!
    ಬೆರಳಿಡಲ್ ಬಾಯಲ್ಲಿ ದೇಹವಂ ನುಂಗುವರ್
    ಹೊರಳುವುದು ನಾಲಿಗೆಯು ಸುಳ್ಳಿನಾಶ್ವಾಸನೆಯ ನುಚ್ಚರಿಸೆ ಭಾಷಣದಲಿ
    ಬರವ ಹೋಗಿಪೆನೆನ್ನುತಾಸೆಯನು ಹುಟ್ಟಿಪರ್
    ಹರಿವ ಜಲವೊದಗಿಪೆನು, ಸಿರಿಯನುಂ ನೀಡುವೆಂ
    ತರತರದಲಾಶ್ವಾಸನೆಗೆ ಮೋಸಹೋಗಿಹರ್ ಹಿರಿಭಾರತ ಪ್ರಜೆಗಳು

    • ಚೆನ್ನಾಗಿದೆ. ಹಿರಿಭಾರತ -> ಆರಿಸಮಾಸ ಅನಿಸತ್ತೆ. ಆಶ್ವಾಸನೆ ೨ ಬಾರಿ ಬಳಕೆಯಾಗಿದೆ.

  7. ಲಕ್ಷಕ್ಕೊಬ್ಬ ಪ್ರತಿನಿಧಿಯಲ್ಲವೆ? ಲಕ್ಷಜನರು ಅಲ್ಪಪ್ರಮಾಣದಲ್ಲಿ, ಅಳುಕುತ್ತ, ಕುಟುಂಬದವರಿಗೆ ಆಶ್ವಾಸನೆಗಳನಿತ್ತರೆ, ಜನಪ್ರತಿನಿಧಿಯು ಬಹುಪ್ರಮಾಣದಲ್ಲಿ, ಕೆಚ್ಚಿನಿಂದ, ದೇಶಕ್ಕೆಲ್ಲ ಆಶ್ವಾಸನೆಯೀಯುತ್ತಾನೆ!
    ಅಲ್ಪಪ್ರಮಾಣದಾಶ್ವಾಸನೆಯನೀಯುವರು
    (Inconvenience)ಶಲ್ಪವ ನಿವಾರಿಸಲು ಸಾಮಾನ್ಯರು|
    (Propitiation)ಕಲ್ಪಾಣಭೂರಿಯಾಶ್ವಾಸವನೆ ಈಯುವನ-
    ನಲ್ಪನೆನಿಪಂ ಲಕ್ಷಕೊಬ್ಬ ಪ್ರತಿಭೂ(Representative)||

    • ಆಶ್ವಾಸನೆಯಂ ಕುರಿತೀ ವೈಶ್ವಾಮಿತ್ರಪ್ರಯತ್ನಮೋ ಕೇಳ್ ಇತ್ತಲ್
      ತಿಳಿಯದೆಯುಂ ಮತ್ತತ್ತಲ್ ತಿಳಿದಂತಿರ್ದುಂ ತ್ರಿಶಂಕುವನೆ ಸಮನಿಸುಗುಂ

      • ವಿವರಣೆಯನ್ನೂ, ಕಷ್ಟಪದಗಳ ಅರ್ಥವನ್ನೂ ಕೊಟ್ಟಿದ್ದೇನಲ್ಲ! ನಮ್ಮಂಥ ಸಾಮಾನ್ಯರು ಕುಟುಂಬದವರಿಗೆ (ಅದು ಕೊಡಿಸುತ್ತೇನೆ, ಇದು ಕೊಡಿಸುತ್ತೇನೆ ಎಂದು) ಸಣ್ಣಪುಟ್ಟ ಆಶ್ವಾಸನೆಗಳನ್ನು ನೀಡಿದರೆ, ನಮ್ಮಗಳ ಪ್ರತಿನಿಧಿಯಾದವನು ಅದನ್ನೆ ದೊಡ್ಡಪ್ರಮಾಣದಲ್ಲಿ ಮಾಡುತ್ತಾನೆ.

        • > ವಿವರಣೆಯನ್ನೂ, ಕಷ್ಟಪದಗಳ ಅರ್ಥವನ್ನೂ ಕೊಟ್ಟಿದ್ದೇನಲ್ಲ

          ಇದೇನು ಪದ್ಯವೋ ಪಠ್ಯಪುಸ್ತಕವೋ! 🙂

    • Good idea sir.. But, can you keep English words separate. It is breaking our flow of reading. Last line there is one extra mantra (or a LagaM)

  8. ಶಂಕಿಪ ಗುಣಿಗಳ್ ನಮ್ಮವರ್
    ಶಂಕರನೇ ವರವನಿತ್ತನಾದೊಡೆ ನಂಬರ್!
    ಪುಂಖಾನುಪುಂಖದೀ ದಲ್
    ಮಂಕಾಗುವರೇಂ ಚುನಾವಣಾಶ್ವಾಸನೆಗಮ್||

    • ಶಂಕರಂ ’ವರ’ವನಿತ್ತೊಡೆ ನಂಬ್ರ(Number) ಬಂತಿಂದು
      ಕಂಕಣಬಲಂ ತನಗೆ ಕೂಡಿತೆಂದುಂ|
      ಸಂಕೀರ್ತನೆಯ ಮಾಡಳೇಂ ಕನ್ಯೆಯಾತನಂ
      ಶಂಕೆ ನಿನಗೇತರದೊ ರವಿವರ್ಯನೆ!!

      • 🙂

        ಶಂಕರನೇ ’ವರ’ನಾಗೆನುತಲ್
        ಶಂಕರಿಗೈದಾ ತಪಸ್ಸಿಗೊಲಿದವನಾತಮ್|
        ಸಂಕರವಳಿದಳ್ತೆಗೆ ನಿ-
        ಶ್ಯಂಕೆಯಿನೀವಂ ‘ಕುಮಾರಸಂಭವ’ ಶುಭಮಂ||

        • ಪದ್ಯಗಳು ಚೆನ್ನಾಗಿವೆ. ಎರಡೂ ಕಂದರಿಗೆ ಒಂದು ಮಾತ್ರೆ ಜಾಸ್ತಿ ನುಂಗಿಸಿಬಿಟ್ಟಿದ್ದೀರಲ್ಲಾ 🙂

          • Thanks! corrected it. Could not find problem in my first kanda. 🙁

            ಶಂಕರನೇ ’ವರ’ನಾಗೆನೆ
            ಶಂಕರಿತಪಕರ್ದನಾರಿರೂಪದೆ ಪೊರೆದಮ್|
            ಸಂಕರವಳಿದಳ್ತೆಗೆ ನಿ-
            ಶ್ಯಂಕೆಯಿನೀವಂ ‘ಕುಮಾರಸಂಭವ’ ಶುಭಮಂ||

          • -UU UU- -U-
            ಶಂಕಿಪ ಗುಣಿಗಳ್ ನಮ್ಮವರ್

          • ಅಪ್ಪ! ಕಣ್ಣಿನ ಕುರುಡು ಬಿಡಿಸಿದಿರಿ 🙂

            ಶಂಕಿಪರಲ್ತೆಮ್ಮ ಜನರ್
            ಶಂಕರನೇ ವರವನಿತ್ತನಾದೊಡೆ ನಂಬರ್!
            ಪುಂಖಾನುಪುಂಖದೀ ದಲ್
            ಮಂಕಾಗುವರೇಂ ಚುನಾವಣಾಶ್ವಾಸನೆಗಮ್||

  9. ಗಾಳವೊಂದನು ಪಿಡಿದು, ನೂರು ಮೀನನು ಸೆಳೆದು
    ಬೀಳಿಸುತೆ ಬುಟ್ಟಿಯೊಳು ನಗುವ ಬೆಸ್ತನವೊಲ್
    ತೋಳನತ್ತುತೆ ಕೈಯ ಮುಗಿದು ಜನರನು ನಗುವ-
    -ರಾಳುವರು ಸುಳ್ಳ ಹಗ್ಗದೊಳು ಬಿಗಿದು

    • Beautiful…First time for this topic, you are bringing simile from a different source… 3rd line is fantastic. But sentence did not complete, I think. may be we can end with Bigivar||

      • ಬಿಗಿದು is good enough. You can rather make it a ಪೂರ್ಣರೂಪಕ by using such samAsA-s as ಆಶ್ವಾಸನಾವಲಿಶ (ವಲಿಶ=hook), ಜನಮೀನ, ಬೆಸ್ತಪುಢಾರಿ/ನಯವಿಶಾರದಮೈನಿಕ (ನಯವಿಶಾರದ=politician, ಮೈನಿಕ=fisherman)

        • nice words.

        • Thank you Sir..Here is an attempt to incorporate your suggestions..Padya’s bhava has changed a little.

          ಆಶ್ವಾಸನಾವಲಿಶಹಸ್ತರಾಗುತುಮಿವರು
          ವಿಶ್ವಾಸವಂ ಗಳಿಸಿ ಜನಮೀನರಂ
          ವಿಶ್ವಾಂಧರಾಗಿಸುತೆ ಪಿಡಿದು ನುಂಗುವರೇಕೆ
          ನಶ್ವರಾಕಾಂಕ್ಷರೀ ನಯಮೈನಿಕರ್

          ವಿಶ್ವಾಂಧ=ಲೋಕಜ್ಞಾನವನ್ನು ಕಳೆದುಕೊಂಡವನು

      • In the textual form it becomes: ಗಾಳವೊಂದನು ಪಿಡಿದು, ನೂರು ಮೀನನು ಬುಟ್ಟಿಯೊಳು ಸೆಳೆದು ಬೀಳಿಸುತೆ ನಗುವ ಬೆಸ್ತನವೊಲ್ ತೋಳನತ್ತುತೆ ಕೈಯ ಮುಗಿದು ಜನರನು ಸುಳ್ಳ ಹಗ್ಗದೊಳು ಬಿಗಿದು ಆಳುವರು ನಗುತಲ್
        I think, we can make ನಗುವರಾಳುವರು

        • ನಗುತಲ್ ಎಂಬ ಪ್ರಯೋಗ ಸರಿಹೋಗದು ಅನ್ನಿಸುತ್ತದೆ. ಒಂದೋ ಅದು ನಗಲ್ ಅಂತಾಗುತ್ತದೆ ಇಲ್ಲದಿದ್ದರೆ ನಗುತುಂ/ನಗುತ್ತೆ ಎಂದು ವರ್ತಮಾನಕಾಲದಲ್ಲಿ ಬಳಸಲ್ಪಡುತ್ತದೆ. ಇಲ್ಲಿ ನಗುತಲಿ+ಆಳುವರ್ ಎಂದು ಪದವನ್ನು ಒಡೆದುಕೊಳ್ಳುವುದು ಸೂಕ್ತವೆಂಬುದು ನನ್ನ ಅನಿಸಿಕೆ.ನಿಮ್ಮ ಸವರಣೆ ಚೆನ್ನಾಗಿದೆ, ಕುಹಕವನ್ನು ಧ್ವನಿಸುವಂತಿದೆ. ಪದ್ಯ ಚೆನ್ನಾಗಿದೆ @ಅನಂತಣ್ಣ

        • Thanks hoLLare _/\_ I have made the correction to the original verse

  10. ಕೆರೆಯಂ ಕಟ್ಟಿಸಿ ಬಾವಿಯಂ ಸಮೆಸಿ ದೇವಾಗಾರಾಮಂ ಮಾಡಿಸ
    ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸಿ ದೀನರ್ಗಿಮ್ಬುಕೆಯ್ವೆಂ ಸದಾ
    ಪೊರೆವೆಂ ಲೋಗರನೆಲ್ಲರಂ ದಯೆಯಿನಾ ತಾಯಂತೆವೋಲೆನ್ನುತುಂ
    ಸುರಿದಂ ಮದ್ಯಮನಂತೆ ಬಾಯಿಯೊಳಗಂ ಪಟ್ಟಕ್ಕೆ ನೋಂತಿರ್ಪನಾ//

    ಲಕ್ಷ್ಮೀಧರಾಮಾತ್ಯ ಕ್ಷಮಿಸದಿದ್ದರೂ ಪರವಾಗಿಲ್ಲ 🙂

    • ಹ್ಹೆ ಹ್ಹೆ ಆತ ಕ್ಷಮಿಸಿಯಾನು. ಆತನ ತಾಯಿ, ಪಾಪ, ನೊಂದುಕೊಂಡಾಳಷ್ಟೆ 🙂

    • chennagide. ಕೊನೆಯ ಸಾಲಿನ ಕಾಂಟ್ರಾಸ್ಟ್ ಚೆನ್ನಾಗಿದೆ. ದೀನರ್ಗಿಮ್ಬುಕೆಯ್ವೆಂ -> ದೀನರ್ಗಿಮ್ಬುಗೈವೆಂ allave?

  11. ಅಂಡಲೆವರ್ ದಂಡಧರರ್
    ಕೊಂಡಾಡುತಲವರ ಪೊಣ್ಮೆ ಕೈಗಣ್ಮೆಯ ಕೈ-
    ಗೊಂಡೆಸೆಪರ್ ಗಣ ತಂತ್ರವ
    ಗುಂಡಿಯನೊತ್ತವರನೆತ್ತುಗಡೆಗೊಳಿಸಲ್ ಕಾಣ್ !!

    (ಪೊಣ್ಮೆ ಕೈಗಣ್ಮೆ~ ಹಿರಿಮೆ ಗರಿಮೆ )

    ರಾಜಕಾರಿಣಿಗಳನ್ನು ಉದ್ಧಾರ (ಎತ್ತುಗಡೆ) ಮಾಡಿಸುವ EVM ಮಹಿಮೆ !!

Leave a Reply to ಜೀವೆಂ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)