Aug 102020
 

चन्द्रचिन्ता – ವೀಣಾರವರ ಪದ್ಯ:
नीराजयति भूमेर्मां कटाक्षैः यौवतं शतम्।
न शकेsपि नु ताः स्प्रष्टुं श्वशुरः कुप्यति क्षणात्।।
——-
ಚಂದ್ರನ ಚಿಂತೆ – ಉಷಾರವರ ಪದ್ಯ:
ಹೆಂಗರುಳಂ ಭೂಲೋಕದ
ತಂಗೆಂದಿರ ಸೋದರಂ ಸದಾ ಸಂತಂ ಬಾ-|
ನಂಗಳದ ಸಂತೆಯೊಳ್ ಮೇಣ್
ತಿಂಗಳ ಸಂಬಳಿಗನೋಲ್ ಶ್ರಮಿಪ ಕರ್ಮಂ ಕಾಣ್||

  One Response to “ಹೂದೋಟದಲ್ಲಿ ಸಂಜೆ, ಛತ್ರಿ/ಕೊಡೆ, ಚಂದ್ರನ ಚಿಂತೆ”

  1. ಹೂದೋಟದಲ್ಲಿ ಸಂಜೆ
    ಎಲ್ಲವಂ ಮರೆವವೊಲ್ ಸಂಗಾತಿಯೊಡಗೂಡು-
    ತುಲ್ಲಾಸದಿಂ ಸಾರು ಹೂದೋಟವಂ|
    ವಲ್ಲರಿಗಳಂಗಣಕೆ ಪೋಗಲೊಬ್ಬೊಂಟಿಯೇ
    ಮಲ್ಲಿಗೆಯ ಪೂಸೆ ಬಂದಹಿಯ ಸೇರ್ವೈ!!
    (ಬಂದಹಿಯ=ಬಂದ+ಅಹಿಯ)
    ——–
    ಕೊಡೆ
    ಮಳೆಯನೇಂ ನಿಲ್ಲಿಪುದೆ ಕೊಡೆಯು ತಲೆಯನ್ನೆಮ್ಮ-
    ದುಳಿಸುವುದು ನೆನೆಯದಂತಂತೆಯೇ ನೀಂ|
    ಕಳೆಯಲೆಂತಪ್ಪುದೆಂದರಿಯೊ ಈ ಲೋಕದೊಳ
    ಹಳವಂಡಗಳನೆಲ್ಲ ಹಾದಿರಂಪ||
    ———
    ಚಂದ್ರನ ಚಿಂತೆ
    ಎನ್ನರ್ಧಗೋಲಮಾತ್ರಕ್ಕರ್ಕನಾತಪವು
    ಬನ್ನಮದು ಸಾಲದೇಂ ನಿಚ್ಚಮೆನಗೆ|
    ಇನ್ನೇಕೊ ಈ ಭೂಮಿ ಪಕ್ಷಪರ್ಯಂತಮುಂ
    ಖಿನ್ನವಾಗಿಸುವಳಾ ಅರ್ಧಮನ್ನುಂ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)