Nov 102020
 

ವರ್ಣನೆಯ ವಸ್ತುಗಳು:

೧. ಆಕಾಶದ ಬಣ್ಣಗಳು

೨. ಹಾರುವ ಕುದುರೆ

೩. ಮಲೆನಾಡಿನ ಒಂಟಿಮನೆ 

ಅರ್ಧಸಮವೃತ್ತವಾದ ಔಪಚ್ಛಂದಸಿಕಾ  ಛಂದಸ್ಸಿನ ಸಮಸ್ಯೆ:

ನರನಿಂದಾದುದು ವಾನರಂಗಳಲ್ತೇ 

ಗತಿ:

ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)

ನ ನ ನಾ ನಾ ನ ನ ನಾ ನ ನಾ ನ ನಾ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

  7 Responses to “ಪದ್ಯಸಪ್ತಾಹ ೪೨೧”

 1. ಉರಗಂ ವಡೆವೊಲ್ ಭುಜಂಗಮಂ ಮೇಣ್
  ಕರಿ ತಾಂ ಪುಟ್ಟಿಪುದಂತೆ ಹಸ್ತಿಯಂ ಕಾಣ್|
  ಕುರಿಯುಂ ಕುರಿಯನ್ನೆ ಈಯುವೊಲ್ ವಾ-
  ನರನಿಂದಾದುದು ವಾನರಂಗಳಲ್ತೇ||

 2. ಬಯಲಿನಿತೆ ಅಲ್ಲಲ್ಲಿ ಮಲೆನಾಡಿನೊಳಗೆಲ್ಲ
  ಪಯಿರಿಲ್ಲ ಅಲ್ಲೆಲ್ಲ ಮನೆಗಳುದಿಸೆ|
  ನಯನವೋಗುವ ದೂರಕೊಂದೊಂದೆ ಮನೆಯಲ್ಲಿ
  ಹುಯಿಲಿಡಲುಬೇಕು ನೆರೆಯವರ ಕರೆಯೆ||

 3. ಆಕಾಶದ ಬಣ್ಣಗಳು
  ನಿರ್ಗುಣಂ ಗಗನಮಲ್ತೆ ಗಡಾ ಸಂ-
  ಸರ್ಗದಿಂದಲದೊ ಕಾಣ್ ನಿಜಗರ್ಭಾಂ-|
  ತರ್ಗತೋಲ್ಕ-ಶಶಿ-ತಾರೆಗಳಿಂದಂ
  ಸರ್ಗವಪ್ಪುದೆನಿತೋ ರುಚಿವರ್ಗಂ||

 4. ಹಾರುವ ಕುದುರೆ
  ’ವೇಗದಿಂದೋಡಿದೆನು ಹಾರವೆನು ಈಗೆಂ’ದು
  ಬೀಗಲೇಕೋ ಹಯವೆ ಕ್ಷಣಿಕಕಾಗಿ|
  ಮೇಗಳೇರಿದೊಡೇನು ಅಲ್ಲಿಯೇ ಖೇಚರದ
  ಹಾಗೆ ನೀಂ ಮರದೆ ನಿದ್ರಿಸಬಲ್ಲೆಯೇಂ!!

 5. ಕನ್ನಡ ಸಕ್ಕದ ಗಳ ಈ ಅಪರೂಪದ ಭಾಷೆ, ಸಾಹಿತ್ಯ ‌‌‌ವ್ಯಾಕರಣ ಛಂದಸ್ಸು ಅಲಂಕಾರ ಗಳ ಚೆಲುವಾದ ಅರ್ಥಪೂರ್ಣ ಪದಪಾದಪದ್ಯಪದ್ಮಸಾಗರದ ಅನನ್ಯವಾದ ಮಹೋನ್ನತ ರಚನೆಗಳು..ಅಬ್ಬಾ…ಈ ಸರಸ್ವತಿಯ ಸುತರಂ ಕಂಡು…ಈ‌ ಮನಕೆ ತುಂಬಾ ಸಂತೋಷವಾಯಿತು..ಶ್ರೀ ಗುರುಗಳಿಗೆ,ಗುರುಮಾತೆಯರಿಗೆ ನನ್ನ ಈ ಬಡವನ ಅನಂತ ಶಿರಸಾಷ್ಟಾಂಗ ಪ್ರಣಾಮಗಳು…ಈ ಚರ್ಚೆ ಸಾಹಿತ್ಯ ಸಂವಾದ ನಿರಂತರವಾಗಿರಲಿ….ಹಳೆಗನ್ನಡ ನಿಮ್ಮಿಂದ ಹೊಳೆವ ಕನ್ನಡವಾಗಿದೆ..

  • ಧನ್ಯವಾದ. ಪದ್ಯರಚನೆಯಲ್ಲಿ ಭಾಗವಹಿಸಿರೆಂದು ತಮ್ಮನ್ನು ಆಹ್ವಾನಿಸುತ್ತಿದ್ದೇನೆ. ಪದ್ಯಪಾನದ ಮೌಲ್ಯವೃದ್ಧಿಯಾಗಲಿ.

 6. ರೆಕ್ಕೆಯ ಕುದುರೆ
  1.
  ಓಟಕೆ ಕಾಲ್ಗಳ ಬಲದಿಂ
  ಪಾಟವಮಿರ್ದೊಡನೆ ಜಗದೆ ಸಾಗಲ್ ಕುದುರೇ!
  ಆಟಕೆ ಗಗನದೆ ಪಾರಲ್
  ಸಾಟಿಗೆ ರೆಕ್ಕೆಗಳವಾಗೆ ಕಾಲ್ಗಳೆ ಬೀಳ್ಗುಂ
  2.
  ರೆಕ್ಕೆಯ ಕುದುರೆಯೆ ಹಕ್ಕಿಯ ತೆರದಲ್ಲಿ
  ಸೊಕ್ಕಿಂದ ಮೆರೆದು ಹಾರಾಡೆ – ಜನರಿನ್ನು
  ಪಕ್ಕೆಯ ತಿವಿಗುಂ ಜೋಪಾನ

  ಮಲೆನಾಡಿನ ಒಂಟಿಮನೆ
  ಕಾಡ ಪರಿಸರದೆ ಮೇಡಿನಡಿಗಳಲಿ ಮೆರೆಯುವೊಂಟಿಮನೆಯೊಳ್
  ಸೂಡೆ ಸುಮವಿಹುದು ಪಾಡೆ ಪಿಕವಹದು ನಾಡೆ ಪ್ರಕೃತಿಮಯವು
  ಕೂಡಲಲ್ಲಿ ಮತ್ತಾರುಮಿಲ್ಲ ಮೃಗಪಕ್ಷಿಗಳನು ಹೊರತು
  ತೀಡುತಲ್ಲಿ ಭೂಮಾತೆಯೊಡಲ ನಲಿವರ್ಗೆಯೊಂಟಿತನವೆ?

  ಸಮಸ್ಯೆ
  1.
  ಪರದಿಂದಪರಂ ಗಡಪ್ಪವೋಲೇ
  ನರನಿಂದಾದುದು ವಾನರಂಗಳಲ್ತೇ
  2.
  ಅರರೇ ವರನಾಟಕಂಗಳೊಳ್ ತಾಂ
  ಭರಿಸಲ್ ವಾನರ ಪಾತ್ರಮಂ ಸಮಸ್ತಂ
  ತುರುಗಳ್ಗಡವೇ ವಿಚಿತ್ರರೂಪಂ
  ನರನಿಂದಾದುದು ವಾನರಂಗಳಲ್ತೇ
  [ ನಾಟಕದಲ್ಲಿ ವಾನರ ಪಾತರನ್ನು ಹಸುಗಳು ಹಾಕಲಾಗುತ್ತದೆಯೇ? ಅದು ನರನಿಂದಲೇ ಆಗಬೇಕು ]

  ಆಕಾಶದ ಬಣ್ಣಗಳು
  ನೀಲಿಯ ಬಾನೆಂದು ಪೇಳಿದರೆಲ್ಲರು
  ತಾಳದ ರವಿಯು ರಂಗನ್ನು – ಎರೆದರೂ
  ಕಾಲನ ವರ್ಣ ನಿಜವರ್ಣ

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)