Dec 072020
 

ವರ್ಣನೆ:

೧. ಹನುಮಂತನ ಬಾಲವನ್ನು ಕಂಡ ರಾಕ್ಷಸಸೇನೆಯ ಅನಿಸಿಕೆ

೨. ಭೀಮನ ಕಡಗ

೩. ಮೊಟ್ಟೆಯಲ್ಲಿರುವ ಹಕ್ಕಿಮರಿ

ಮಾಲಿನಿಯ ಸಮಸ್ಯೆ:

ಪರಿಮಳಮಿರದಿರ್ಕುಂ ಮಾಲಿನೀಮಾಲೆಯೇಗಳ್

  13 Responses to “ಪದ್ಯಸಪ್ತಾಹ ೪೨೫”

  1. ಸುತ್ತಿದೊಡಮುನ್ನತಾಸನವು ತಾನಾಯ್ತಲ್ತೆ
    ಕತ್ತೆತ್ತಿ ನೋಡುವಂತೆಮ್ಮ ರಾಜಂ|
    ಸುತ್ತಿ ಬಟ್ಟೆಯನದಕೆ ಬೆಂಕಿಯನ್ನಿಟ್ಟಾಗ
    ಗುತ್ತಿಗೆಯ ಕೊಟ್ಟವೊಲ್ ಲಂಕೆಯ ಸುಡಲ್||

  2. ಜಾರದೊಲು ಕೈಯಿಂದೆ, ಗದೆಯ ಹಿಡಿಯಂಚಿನೊಳು
    ಕೋರಕದ ಮಾದರಿಯ ಗುಬುಟವಿಹುದು|
    ಗೀರದೊಲು ಆ ಗುಬುಟ ಮಣಿಕಟ್ಟ ಭೀಮ ತಾಂ
    ಭಾರಿಕಡಗವನೊಂದ ತೊಟ್ಟಿರುವನೈ||

  3. ಅಂಗಾಂಗಮೆಲ್ಲಮನುಮಂಡದೆ ಪಕ್ಷಿಪುತ್ರಂ (ಸಂಬೋಧನೆ)
    ಪಾಂಗಿಂದೆ ಪೊಂದಿರುವೆಯೊಂದಿದೆ ಲುಪ್ತಮಾತ್ರಂ|
    ತಂಗಾಳಿಯನ್ನೆಳೆದುಕೊಳ್ಳುಗೆ ಶ್ವಾಸಕೋಶಂ
    ಪೊಂಗಿರ್ಪುದೀಗೊಡೆಯೊ ಚಿಪ್ಪನು ಕೊಕ್ಕಿನಿಂದಂ|| ವಸಂತತಿಲಕ

  4. Carrion and Titun Arum Flowers are bad smelling
    ಬಿರಿವವೆನಿತೊ ಪೂಗಳ್, ಕ್ಯಾರಿಯಾನ್ ಪೂವುಮೇಗಳ್
    ಪರಿಮಳಮಿರದಿರ್ಕುಂ, ಟೈಟನಾರಂ ಕುಪುಷ್ಪಂ|
    ಪರಿಮಳಮಿರದಿರ್ಕುಂ, ಮಾಲಿನೀಮಾಲೆಯೇಗಳ್
    ಪರಿಮಳಮನದೆಂದುಂ ಸೂಸುತಿರ್ದತ್ತು ನೋಡೈ||

  5. Bheema’s kankaNa

    कौरवकीचकशोणितपङ्किल!
    बिम्बितकृष्णपदाङ्गुलिचन्दिर!
    सोदरधैर्यसरोजविभाकर!
    पाण्डवकङ्कण! हे! विजयी भव!
    Dirtied by the blood of the Kauravas & kīcaka,
    Reflecting the moon of śrī-kṛṣṇa’s toenails,
    The sun to the lotus of brothers’ courage,
    O kaṅkaṇa of the pāṇḍava, be victorious!

  6. भीमकङ्कणम् :
    द्रौपदीहृदयदार्ढ्यरूपकं
    बालखेलनरथाङ्गकोपमम् ।
    स्वर्णकारपरितोषकारणं
    भीमसेननवमल्लकङ्कणम् ।।

    Bheema’s new robust bracelet is a metaphor to draupadi’s resoluteness (determination). It resembles the toy-wheel that children trundle. It is the cause of joy for goldsmiths (their stock-in-trade).

  7. ೧. ಹನುಮಂತನ ಬಾಲವನ್ನು ಕಂಡ ರಾಕ್ಷಸೇನೆಯ ಅನಿಸಿಕೆ
    स्वाद्यते च का ह्यनेन वानरेण वारुणी
    यद्बलेन लूम चापलं च वर्धते लघु ।
    ‘म-रामरेत्यसौ जपत्यरे! सुराह्वयं स्मर
    स्व-दामहेऽग्र्यया (/यया) भवेत्स्वशृङ्गसौख्यबृंहणम् ॥

    Which spirit is it that this monkey relishes, the potential of which boosts both its flurry and its tail. Hey! He is chanting ‘maraamaraa’! Recall the name of that great liquor! Let’s relish some of it, so that our horns (power) and joy boost too.

  8. ೩. ಮೊಟ್ಟೆಯಲ್ಲಿರುವ ಹಕ್ಕಿಮರಿ
    भवेयं द्विजन्मा भजेयं सुहृद्भिः
    सह च्छन्दसामन्तमानन्त्यमेवम् ।
    जपन्तं तमण्डस्थितं पक्षिपोतं
    गरीतुं गतो हन्त! कोऽपि द्विजिह्वः ॥

  9. ಸಮಸ್ಯಾಪೂರಣ:

    ಪರಿಪರಿ ಪರಿಮಾಣಂ ಪೂವನುಂ ಕಟ್ಟಿ ಮಾರಲ್
    ಸರಿ ಮೊಳಮಿರದಿರ್ಕುಂ ಮಾಲಿನೀಮಾಲೆಯೇಗಳ್ !
    ಅರೆ, ಬರಿ ಬಿಳಿದೋರ್ಪುಂ ಕಾಕಡಂ ಕೊಳ್ಳೆ ಮಾರೊಳ್
    ಪರಿಮಳಮಿರದಿರ್ಕುಂ ಮಾಲಿನೀಮಾಲೆಯೇಗಳ್ !!

    ಕೊಂಡ “ಮಾರು” ಬಿಳಿಯ “ಕಾಕಡ” ಮಾಲೆಯಲ್ಲಿ ಪರಿಮಳವೂ ಇಲ್ಲ – ನಾಲ್ಕು “ಮೊಳ”ವೂ ಇಲ್ಲ – ಎಂಥ “ಮಾಲಿನಿ” ? ಎಂದು ಅನ್ನಿಸಿದಲ್ಲಿ ಪೂರಣ ಸರಿಯಿದೆಯೆಂದು ಅರ್ಥ !!

  10. ಹನುಮಂತನ ಬಾಲವನ್ನು ಕಂಡ ರಾಕ್ಷಸರ ಅನಿಸಿಕೆ
    ಫಳಫಳನೆ ಜ್ವಲಿಸುತ್ತುಂ
    ತಳೆಯಲ್ ಕರ್ಪೆಲ್ಲ ದೂಡುತೆಮ್ಮಯ ಮನದೊಳ್
    ಬಳೆಯುತ್ತಿರ್ಪುದು ಬಾಲಮೊ
    ಕಳೆಯಲ್ ಧೈರ್ಯಂಗಳನ್ನಿದೆಮ್ಮಯ ಭಯಮೋ

    ಸಮಸ್ಯೆ
    1. ಪರಿದಿರೆ ಮಮನಾಸಂ ಕೋವಿಡಂ ರೋಗದಿಂದಂ
    2. ಪರಿವುದು ಗುಣಮೆಲ್ಲಂ ಬಾಡಿರಲ್ ಕಾಲದೊಳ್ ತಾಂ
    3. ಅರಿವುದೆ ಚೆಲುವೆಲ್ಲಂ ಗರ್ದಭಂ ಲೋಕದೊಳ್ ತಾಂ
    ಪರಿಮಳಮಿರದಿರ್ಕುಂ ಮಲ್ಲಿಕಾಮಾಲೆಯೀಗಳ್
    4.
    ಹರೆಯದ ಸಖಿಯಾಡಲ್ ನೋಡಲೀ ಕಣ್ಣೆ ಸೋಲ್ಗುಂ
    ಪರಿಪರಿಯೊಳಲಂಕಾರಂಗಳಂ ಮಾಡಿಕೊಳ್ಳಲ್
    ಸುರಿದಿರರೆ ಮಿಗೆ ರೂಪಂ ತುಂಬಿರಲ್ ಚಿತ್ತಮೆನ್ನಾ
    ಪರಿಮಳಮಿರದಿರ್ಕುಂ ಮಲ್ಲಿಕಾಮಾಲೆಯೀಗಳ್
    [ ರೂಪವೇ ಮನವನ್ನು ತುಂಬಿರುವುದರಿಂದ ಇನ್ನೊಂದು ಇಂದ್ರಿಯದ ಕೆಲಸಕ್ಕೆ ಅವಕಾಶವಿರಲಿಲ್ಲವೆಂಬ ಭಾವ ]

    ಮೊಟ್ಟೆಯ ಒಳಗಿನ ಹಕ್ಕಿಯ ಸ್ವಗತ
    1.
    ಮೆದುಳಿಲ್ಲ ಮತಿಯಿಲ್ಲ ಹದನಾಗಿ ಬೆಳೆದಿಲ್ಲ
    ಬದುಕಿನ ಅರಿವು ನನಗಿಲ್ಲ – ತಾಯಿಯ
    ಉದರದೊಳಿಹೆನೋ ಹೊರಗೆಲ್ಲೋ?
    2.
    ಪಕ್ಕದ ಮೊಟ್ಟೆಯ ಹಕ್ಕಿಯ ಮರಿಗಾನು
    ತಕ್ಕಂತ ಪಾಠ ಕಲಿಸೇನು – ಮತ್ತೊಮ್ಮೆ
    ಡಿಕ್ಕಿಯ ಹೊಡೆಯೆ ಸಹಿಸೇನು

  11. 1.
    ದಶಶಿರ ಮಿತಿಲಂಕಾಪತಿ
    ಗೆಶತಶಿರ ಮಿತಿಹರಿಶಯ್ಯೆಗೆ ರತಿಪತಿಗೆ ಪಂ |
    ಚಶರವಿರಲ್ಕಿಷ್ಕಿಂದೆಯ
    ಕುಶಾಕ್ಷ ಲಾಂಗೂಲ ಬೆಳೆಸುತಿಹನೋಡೆಂತೋ !|

  12. ೧. ಹನುಮಂತನ ಬಾಲವನ್ನು ಕಂಡ ರಾಕ್ಷಸಸೇನೆಯ ಅನಿಸಿಕೆ
    ತ್ರಿ: ಪೊತ್ತಿಸೆ ನಗರವನೆತ್ತೆತ್ತಲುಂ ಪೊಗೆಯು
    ಗತ್ತಿನ ಯಮನ ಮಹಿಷಂಗೆ ಪೋಲ್ವುದು
    ಮತ್ತದೆ ಬಾಲಂ ಓಡೋಡು

    ೨. ಭೀಮನ ಕಡಗ
    ಕಂ: ತೆರೆವಾಯೆನೆ ಭ್ರಮಿಸುತ್ತುಂ
    ಪೊರಮಡುಗುಂ ರಸನೆಯಂದದಿಂ ಕೈಯ್ಯೆನುತುಂ
    ನೆರೆಯಲ್ ಭಕ್ಷ್ಯಂ ಭೋಜ್ಯಂ
    ಸ್ಮರಣೆಯನೇ ಕಳೆದುದಲ್ತೆ ಭೀಮನ ಕಡಗಂ

    ೩. ಮೊಟ್ಟೆಯಲ್ಲಿರುವ ಹಕ್ಕಿಮರಿ
    ಕಂ: ಪೊಕ್ಕಳ ಬಳ್ಳಿಯನುಳಿದುಂ
    ಮಕ್ಕಳ ಬೆಳವಣಿಗೆಯಲ್ತೆ ಪಕ್ಕಿಗೆ ಮನುಜರ್
    ದಿಕ್ಕಂ ಬರಿಸದೆ ಕಾಂಬರ್
    ಪೊಕ್ಕಾ ಗರ್ಭಕ್ಕಮಾಂತು ರಕ್ಷಣೆವಡೆವರ್

  13. (ಮಾಲಿನಿಯ ಸಮಸ್ಯೆಗೆ)
    ಸರಸವಿರಸದಿಂದಂ ಕೂಡಿ ಹಾಡ್ಹಾಡಿ ಕೂಗಾ
    ಡಿರಮಿಸುತಿರಲಾಹಾರ್ಯಾದಿ ಕಣ್ಣಾಗಿ ಕೊಂಡಾ
    ಡಿರೆ ತಿಳಿದಿಪಧ್ವನೋ್ಯತ್ಕನ್ಟದಿಂದಂ ವೃಥಾರ್ತಂ
    ಪರಿಮಳಮಿರದಿರ್ಕುಂ ಮಾಲಿನೀಮಾಲೆಯಾಗಳ್

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)