Mar 202011
 

ನೀರ ತಿಳಿ ತೊರೆಗಳ ನಿನಾದದ-
ಪಾರ ಹಸಿರಿನ ಶಾಲಗಳ ವಿ-
ಸ್ತಾರ ವನಗಳು ಚಿತ್ರಕೂಟದ ಸೊಭಗ ಮೆರೆಸಿಹವು ||
ಧೀರ ಮುನಿಗಳ ಶಾಂತ ತಪಗಂ-
ಭೀರ ಯಜ್ಞ್ಯದ ಕಾರ್ಯವಲ್ಲದೆ
ದೂರ ದೇಶದ ವಲಸೆ ಪಕ್ಷಿಗಳನ್ನು ಸೆಳೆಯುತಲಿ || ೧ ||
ದ್ರುಮಗಳಡಿಯಲೆ ತಮಸೆ ತಟದಾ-
ಶ್ರಮದೆ ವಾಲ್ಮೀಕಿಮುನಿ ಜಪತಪ
ಕ್ರಮದೆ ನಡೆಸುತ ಹಲವು ವರ್ಷಗಳಲ್ಲೆ ಕಳೆದಿಹನು ||
ಶ್ರಮದೆ ಯೋಜನೆಗಳನು ದಾಟುತ
ಕ್ರಮದೆ ಸ್ಥಳ ಪರಕಿಸಲು ಇದೆವಿ-
ಶ್ರಮಕೆ ಯೋಗ್ಯವನೆಂದು ಕ್ರೌಂಚಗಳೆರಡರಭಿಮತವು || ೨ ||
ಶಾಲದತಿ ಎತ್ತರದ ಮರದಲಿ
ಮೇಲೆ ಬಲಯುತ ಕೊಂಬೆಯಾರಿಸಿ
ನೀಲ ಕ್ರೌಂಚಗಳೊಂದುಗೂಡನು ಮುದದೆ ಕಟ್ಟಿದವು ||
ನೀಳ ಕತ್ತುಗಳೊಂದರೊಂದಿಗೆ
ವಾಲಿಸುತ ತೊರ್ಪಡಿಸೆ ಪ್ರೀತಿಯ
ಲೀಲೆಯನುದಿನ ನೋಡುತಿದ್ದನು ಮುನಿಯು ಸಂಭ್ರಮದಿ || ೩ ||
ಹಾರುತಿರೆ ರೆಕ್ಕೆಗಳ ತುದಿಗಳು
ನೀರ ಸೋಕಿಸೆ ಸಣ್ಣ ಅಲೆಗಳ
ನೇರ ರೇಖೆಗಳೆರಡುಕಡೆಯಲು ಚಂದ ಕಾಣುವುದು ||
ಕೀರಲಿನ ಭಾಷೆಯದದಾದರು
ಸಾರವದ್ಭಾವನೆಯ ಕೇಕೆಗೆ
ಸೂರೆಗೊಂಡನು ಮುನಿಯು ಪ್ರಕೃತಿಯ ರೀತಿಗಳ ಕಂಡು || ೪ ||
ಶಾಲಮರದೆಡೆ ಮುನಿಯು ನೋಡಲು
ಮಾಲೆಯೆನೆ ಕೊರಳುಗಳ ಹೆಣೆದಿಹ
ಕಾಲವನೆ ಮರೆತಿರುವ ಮಿಥುನದ ಕ್ರೌಂಚಗಳ ಕಂಡ ||
ಶೂಲದಂತಹ ಬಾಣವೊಂದನು
ವ್ಯಾಲನೊಬ್ಬನು ಬಳೆಸೆ ಕತ್ತಿನ
ಮೋಲ ಸೀಳಿತು ಗಂಡು ಪಕ್ಷಿಯ ಪ್ರಾಣ ಹಾರಿಸುತ || ೫ ||
ಹೆಣ್ಣು ಗಾಬರಿಯಿಂದ ಹಾರುತ
ಮಣ್ಣಿನಾಸರೆ ಪಡೆದು ರಕ್ತದ
ಬಣ್ಣ ಹರೆಡಿಹ ತನ್ನ ನಲ್ಲನ ದೇಹ ಸೇರುತಲಿ ||
ತಣ್ಣಗಿನ ಕೊರಳನ್ನು ತೀಡುತ
ಸಣ್ಣಗಿನ ಅಳಲನ್ನು ಹೊರಡಿಸೆ
ಕಣ್ಣು ಮಂಜಾಗುತಲಿ ಮುನಿವರ “ಒಡನೆ ಶಪಿಸಿದನು” || ೬ ||

~~~~~~~~~~~~

  3 Responses to “ಮಹರ್ಷಿ ವಾಲ್ಮೀಕಿಯ ಮೊದಲ ಶ್ಲೋಕ ಬರೆದ ಸಂಧರ್ಭವ ವಸ್ತುವಿಟ್ಟು ಬರೆದಿದ್ದೇನೆ:”

  1. ರಾಮಣೀಯಕ ಸ್ವಾತ್ಮಭಾವದ
    ಸೋಮಶೇಖರ ಸಖ ಚರಿತ್ರಾ
    ಭೂಮಿಕೆಯ ಕಲ್ಪನೆ ಮನೋಹರ ಭಾಮಿನೀಪ್ರಿಯರೇ

  2. @Chandramouli, Thanks Sir for the kind words. 🙂

  3. ಸೋಮ – ಬಹಳ ಚೆನ್ನಾಗಿದೆ.

Leave a Reply to CHANDRAMOWLY Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)