Nov 042011
 

ರಾಮಾಯಣ, ಮಹಾಭಾರತ, ಕಾಳಿದಾಸನ ಮಹಾಕಾವ್ಯಗಳೆಲ್ಲವನ್ನೂ ಮೂಲದಲ್ಲಿ ಓದಿ ಮುಗಿಸಿದ ಗೆಳೆಯನ ಕುರಿತು ಬರೆದ ಪದ್ಯಗಳು ::

ಮೇಲೆ ತೇಲುತ ಸಾಗರಂಗಳ
ಮೂಲೆಯಲ್ಲಳುಕುತ್ತ ಮೆರೆಯದೆ
ಆಳಗಳನೆಲ್ಲವನು ಶೋಧಿಸಿ ಮಥಿಸಿದಾ ಶೂರ |
ಮೂಲ ಗ್ರಂಥಂಗಳ ಪಠನವೀ
ಕಾಲಗಳಲಪರೂಪವಾಗಿರೆ
ಪಾಲು ಕದಳೀ ಫಲದವೋಲ್ ಕಳೆದಿರ್ಪನೀ ಧೀರ ||

ಪರುಠವಿಸುತ ಕುಶಾಗ್ರಮತಿಯ –
ನ್ನರಸಿ ಸತ್ಯಾಂಶಂಗಳೆಳೆಗಳ –
ನೆರಕವೆರೆದಿಹ ತರ್ಕಗಳ ಚಿರ ತತ್ವಗಳ ಬೆಳಗಿ |
ಸರಸ  ಹಾಸದ ಸರಳ ಸಖ ಸುಮ –
ಧುರ ಸರಾಗ ಗುಣಂಗಳಾ ಗಣಿ
ಹರಳೊ ಮುತ್ತಿನ ಮಣಿಯೊ ಹವಳದ ಶಿಲೆಯೊ ನಾನರಿಯೆ ||

  7 Responses to “ಗೆಳೆಯನ ಸಾಧನೆ”

  1. ನಿಮ್ಮ ಗೆಳೆಯರಿಗೆ ಅಭಿನಂದನೆಗಳು. ಅವರು ಯಾರೆಂದು ನೀವು ಹೇಳಲಿಲ್ಲ.

    • ಇಲ್ಲಿರುವ ಅನೇಕರಿಗೆ ಪರಿಚಯದವರೇ. ಅವರಿಗೆ ಮುಜುಗರವಾಗಬಹುದೆಂದು ಹೆಸರನ್ನು ಬಿಟ್ಟೆ 🙂

  2. ಸ್ನೇಹ-ತರ್ಕ-ಶರೀರಬಲ-ಸಂ-
    ದೇಹರಹಿತಹಿತಪ್ರದಾಯಕ-
    ಸಾಹಿತೀಪ್ರತಿಭಾಸ್ಫುರಣೆಗಳ ಹೃದ್ಯಸಂಗಮವು
    ಮಾಹಿತಿಯ ತಂತ್ರಜ್ಞತೆಗೆ ನಿರ್-
    ಮೋಹಸಾಮಾನ್ಯದ ಬದುಕು ದಲ್
    ರೂಹುಗೊಂಡಿರ್ಪುವು ಗಡಾ ಆ ಗೆಳೆಯ ವಾಸುಕಿಯೊಳ್

  3. Congrats Vasuki…..how will you maintain time for all this along with your routine work..just wonderful.

  4. ಅಭಿನಂದನೆಗಳು ವಾಸುಕಿಯವರಿಗೆ, ಗಣೇಶರ ಪದ್ಯವಂತು ರಸಪೂರವಾಗಿದೆ..

  5. abhinandanegaLu. nannanta alpanige daarideepa.. 🙂

Leave a Reply to Manjunatha Kollegala Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)