Feb 202012
 

ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ

ಕಂದಪದ್ಯದ ಉಳಿದ ಮೂರು ಸಾಲುಗಳನ್ನು ರಚಸಿ ಪೂರಿಸಿರಿ.

  11 Responses to “ಪದ್ಯಸಪ್ತಾಹ – ೮ – ಸಮಸ್ಯೆ”

  1. ಯಾಮ೦ ಕಳೆಯುತ ಜಾಗೃತ-
    ರಾ ಮ೦ತ್ರದ ಘೋಷವ೦ ಪಠಿಸುತಾ ಭಕ್ತಿಯ
    ನೇಮ೦ ಪಾಲಿಸುತಿರಲಭಿ-
    ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ

    ಅಭಿರಾಮ = ಸು೦ದರ -> ಶಿವ
    ಜಾಗೃತರಾ = ಜಾಗೃತರ್ ಆ

    • ದ್ವಿತೀಯಪಾದಾಂತದಲ್ಲಿ ಗುರುವೇ ಬರಬೇಕು! ತಪ್ಪಾಗಿದೆ:-)

  2. ಒಂದು ಪ್ರಯತ್ನ : [ ಸೀತೆಯ ಸ್ವಗತ ]

    ಸೋಮಸುಂದರ ಹರನೇ
    ಕಾಮಿತಾರ್ಥಪ್ರದ ಕಾಮನಪಿತ ಸಖ ಕೇಳೈ
    ನೇಮವೀಸೀತೆಗೆ ಶಿವ-
    ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ

    • ಭಟ್ಟರೇ! ತಮಗಿನ್ನೂ ಭಾಮಿನಿಯ hang-over ಹೋದಂತಿಲ್ಲ:-)
      ದಯಮಾಡಿ ಕಂದಪದ್ಯದ ಲಕ್ಷಣಗಳನ್ನೆಲ್ಲ ಮತ್ತೆ ಗಮನಿಸಿ ಸವರಿಸಿಕೊಳ್ಳಿರಿ.

      • ಮರಳಿದ ಯತ್ನ ಹೀಗಿದೆ :

        ಪರಶಿವ ಶಂಕರ ಕೇಳೈ
        ಕರುಣದಿ ಹರಸುತ ಅನುಮತಿಪುದೆನ್ನ
        ವರರಾಮನಪೂಜೆಯ ನಾ
        ಮೆರೆಯಲು ಶಿವರಾತ್ರಿಯು ಬಲುಸೊಗಸೈ

        • ಹಿಂದಿನದರಲ್ಲಿ ನಾನೇ ಎಡವಿದೆ, ಈಗ ಈ ಪಾಠದ ಕೊನೆಯ ಪ್ರಯತ್ನ :

          ಪರಶಿವ ಶಂಕರ ಕೇಳೈ
          ಕರುಣದಿ ಹರಸುತ ಅನುಮತಿ ನೀಡುವುದೆನಗೇ
          ವರರಾಮನಪೂಜೆಯ ನಾ
          ಮೆರೆಯಲು ಶುಭಕರ ಶಿವರಾತ್ರಿಯು ಬಲುಸೊಗಸೈ

          • ನಿಮ್ಮ ಯತ್ನ ಸ್ತುತ್ಯ. ಆದರೆ ಕಂದದ ಜೀವಾಳವಿರುವುದು ಅದರ ಎರಡನೆಯ ಸಾಲು ಮತ್ತು ನಾಲ್ಕನೆಯ ಸಾಲುಗಳಲ್ಲಿ ಬರುವ ಯತಿ ಅಥವಾ ಜಗಣದಲ್ಲಿ. ಇದು ನಿಮ್ಮಲ್ಲಿ ಪಾಲಿತವಾಗಿಲ್ಲ. ಇದಕ್ಕಾಗಿ ಪಾಠಗಳನ್ನು ದಯವಿಟ್ಟು ಗಮನಿಸಿರಿ:-)

  3. ನೇಮದಿ ಹಬ್ಬದ ದಿನದೊಳ್
    ತಾ ಮಾಡುವನಂ ಅನನ್ಯ ಭಕ್ತಿಯ ಭರದೊಳ್ |
    ಸ್ವಾಮಿಯೆ ಕರಗುವ ತೆರದೊಳ್
    [ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ ]
    ರಾಮನಪೂಜೆ ಮೆರೆಯಲ್ಕೆ ಶಿವರಾತ್ರಿ ಸೊಗಂ ||

    [ರಾಮ = ಒಬ್ಬ ಶಿವ ಭಕ್ತ]

    ಮೌಳಿಯವರೆ – ಸಮಸ್ಯೆಯಲ್ಲಿ ಒಂದು ಛಂದಸ್ಸಿನ ತೊಡಕಿದೆಯೆ? ಕಂದ ಪದ್ಯದ ೨ ಹಾಗು ೪ನೆ ಸಾಲುಗಳಲ್ಲಿ ಮಧ್ಯದ ಗಣ ಸರ್ವ ಲಘುವಾದರೆ, ಮೊದಲ ಮಾತ್ರೆ (ಅಕ್ಷರದ) ನಂತರ ಯತಿ ಬರಬೇಕಲ್ಲವೆ? ಆದ್ದರಿಂದ ಕೊನೆಯ ಸಾಲನ್ನು ಅರ್ಥಕ್ಕೆ ಚ್ಯುತಿ ಬರದಂತೆ ನನ್ನ ಪದ್ಯದಲ್ಲಿ ಬದಲಿಸಿದ್ದೇನೆ. ಸರಿಯಿಲ್ಲದಿದ್ದಲ್ಲಿ ತಿಳಿಸಿ.

  4. ನಿಮ್ಮ ಬದಲಾವಣೆ ಸರಿಯಾಗಿದೆ. ಧನ್ಯವಾದ.

  5. ನಿಘಂಟು: ತಾಮಸ = ಗೂಬೆ. ಗರ್ತ = ಸ್ಮಶಾನ. ಗರ್ತಾರಾಮ = ಸ್ಮಶಾನವೇ ಉದ್ಯಾನವನವಾದವನು = ಶಿವ

    ಕಾಮಹರನ ಸಂಸಾರದಿ
    ನೈ ಮೂಷಕ-ಪಾವು ಹೋರಿ-ಹುಲಿ ನವಿಲುಗಳೈ|
    ತಾಮಸರಿಕ್ತನು! ಗರ್ತಾ
    ರಾಮನ ಪೂಜೆ ಮೆರೆಯಲ್ಕೆ ಶಿವರಾತ್ರಿ ಸೊಗಂ ||

    • ಪರಿಹಾರ ಚೆಲುವಾಗಿದೆ. ಆದರೆ ಮೂಷಕಕ್ಕೆ ಬದಲಾಗಿ ಮೂಗಿಲಿ ಎಂಬ ಪದವನ್ನು ಬಳಸಿದರೆ ಮತ್ತೂ ಸರಿಯಾದೀತು.

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)