Freshly-floweredTree

 

  3 Responses to “Freshly-floweredTree”

  1. ಮಣ್ಣಿನಿಂದಾದ ಬೆಟ್ಟವು ಬೇಕು ಪ್ರಕೃತಿಗೆ
    ಮಣ್ಣಿನಿಂದುದಿಸಿರುವ ಮರ ಬೇಕು ಖೇಚರಕೆ
    ಮಣ್ಣಿನಿಂ ಕಟ್ಟಿರುವ ಮನೆ ಬೇಕು ಮಾನವಗೆ
    ಮಣ್ಣದುವೆ ಶಾಶ್ವತವು ಅನ್ಯವಲ್ಲ |

  2. ಭೋಗ ಷಟ್ಪದಿಯಲ್ಲಿ ಒಂದು ಪ್ರಯತ್ನ:
    —————————————–

    ಬೋಳು ಗುಡ್ಡದಲ್ಲಿ ನೋಡು
    ಹಾಳು ಬಿದ್ದ ಮನೆಯ ಪಕ್ಕ
    ಢಾಳವಾಗಿ ಹೂವು ಬಿಟ್ಟ ಮರವು ನಿಂತಿದೆ
    ಕೂಳು ಗಳಿಕೆ ಕೆಲಸದಲ್ಲಿ
    ತಾಳತಪ್ಪದಂತೆ ನಡೆಯೆ
    ಬಾಳಿನಲ್ಲಿ ಗೆಲುವು ಸಿದ್ಧವೆಂದು ಹೇಳಿದೆ

  3. ಇದಾವ ಛಂದವೊ/ಕಂದವೋ/ದುರ್ಗಂಧವೋ ಮಂದಮತಿ ನಾನರಿಯೆ,
    ಮನಕೆ ತೋರಿದ ರೀತಿ ಟಂಕಿಸಿರುವೆ.
    ————————————————————————–
    ಭುವಿಯ ಸಾರವದೆಲ್ಲವರಳಿ ತೋರಿಸರಲೊಸುಗ,
    ಬಿತ್ತೀತೇ ಮರವದುವು ಬೀಜವಿಲ್ಲಿ.
    ಅಂತರಂಗದ ಸಿರಿಯ ಹೊರಗೆ ತೋರುತ್ತ ಭುವಿ
    ಅಡಗಿಸಿತೆ ಸೌಂದರ್ಯ ಬೀಜದಲ್ಲಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)