Welcome – ಸ್ವಾಗತ – स्वागतम्
| [ವರ್ಣವೃತ್ತದೊಂದು ಮಾದರಿಯಾಗಿ ಸ್ವಾಗತ ಎಂಬ ಛಂದಸ್ಸಿನಲ್ಲಿ ರಚನೆ:] ಪದ್ಯಪಾನಮಿದು ಕಾವ್ಯವಿಮಾನಂ ಹೃದ್ಯಭಾವನಭಕೇರ್ವ ವಿಧಾನಂ| ಚೋದ್ಯಮಲ್ತೆ ಮದಮೇರದ ಮಾನಂ ಸದ್ಯಮೇ ಸುಕವಿಮೋದನಿಧಾನಂ|| |
[ स्वागतमिति वर्णवृत्तमेकम्।] पद्यपानमिह काव्यविमान- व्योमयानमुदितं रसमानम्। चॊद्यमत्र मदमुक्तविधाने साध्यमाशुकविमोदनिधानम्॥ |
| [ಮಾತ್ರಾಜಾತಿಯ ಮಾದರಿಯಾಗಿ ಹಳಗನ್ನಡದ ಒಂದು ಕಂದ:] ಛಂದಂಗಳ ಪರಿಪರಿಗಳ್ ಸಂದಿರಲಾಸವದ ಸವದ ಶುಚಿರುಚಿಯಿಂದಂ| ಚಂದದ ಪಾತ್ರೆಗಳಂದಂ ಬಂದೊದವದೆ ಸೊಗದ ಸಗ್ಗಮೀ ಕವಿತೆಗಳಿ೦? |
[ मात्राजातिषु आर्यागीतिरिति वा स्कन्धक इति वा छन्दोनिदर्शनम्। ] नानाविधवृत्तानां पानकपात्रेषु पद्यपानमिदमिदम्। आनीतं कवितानां भावनया भाययन्तु विबु्धाननया॥ |
| [ತ್ರಿಮೂರ್ತಿಗಣಬದ್ಧವಾದ (ಅಂಶಛಂದಸ್ಸೆಂದು ಈಚೆಗೆ ಕರೆಯಲ್ಪಡುವ) ನಡುಗನ್ನಡದ ಮಾದರಿಯಾಗಿ ಸಾಂಗತ್ಯ:] ಸಾಂಗತ್ಯವಾಗಿಲೀ ಪದ್ಯಪಾನದೆ ಸಾಂಗವಕ್ರೋಕ್ತಿ-ವ್ಯಂಜನೆಯು| ಪೊಂಗಿರೆ ಭಾವನೆ, ಪದಗತಿ ಜಾರದ ಪಾಂಗಿದು ಸುಕವಿಯೋಜನೆಯು!! |
[ उपजातिषु वा उपजातिकल्पॆषु अनुष्टुप् श्लोकस्य अग्रताबूलबूलम्: ]
वक्रोक्तिव्यञ्जनाधीनं पद्यपानं पदे पदे। अस्खलद्गतिसंधानं कवीनामिति विस्मितिः॥
|
ಅಷ್ಟಾವಧಾನ ಅತಿಸುಲಭ
ಶತಾವಧಾನ ಬಹುಸುಲಭ
ಅಷ್ಟೋತ್ತರಶತಾವಧಾನವೂ ಸುಲಭ
ಪತ್ನೀ ಅವಧಾನ ಎಂಬುದೊಂದುಂಟಯ್ಯಾ
ಆ (ರ್) ಗಣೇಶನಿಂದಲೂ ಸಾಧ್ಯವಿಲ್ಲ ನೋಡಾ
- ನೈಕಾವಧಾನೀ ಶ್ರೀರಾಮ ಡೊಂಗ್ರೆ