ಕಲಿಕೆಯ ಸಾಮಗ್ರಿ
- ಛ೦ದಸ್ಸು – ಪ್ರವೇಶಿಕೆ – ಈ ಪಾಠವು ಛಂದಸ್ಸು ಕಲಿಯುವಿಕೆಗೆ ಪ್ರವೇಶಿಕೆ (Tutorial)
- ಛಂದಸ್ಸು-ಲೇಖನಗಳು – ಛಂದಸ್ಸಿನ ಬಗ್ಗೆ ಶತಾವಧಾನಿ ಡಾ|| ರಾ ಗಣೇಶರ ಕೆಲವು ಲೇಖನಗಳು
- ಕವಿನಾವಿಕನಿಗೊಂದು ಕಿವಿಮಾತು – ಶತಾವಧಾನಿ ಡಾ|| ರಾ ಗಣೇಶರ ರಚನೆ (ಬಹುತೇಕ ಕಂದ ಪದ್ಯಗಳು)
- ಕಾಳಿದಾಸನ ರಘುವಂಶದಿಂದ ದಿಲೀಪ ಚರಿತೆ ಹಾಗು ಅಜ ನೃಪ ಚರಿತೆ ಗಳ, ನರಸಿಂಹಾಚಾರ್ಯರ ಪದ್ಯಾನುವಾದ.
- ಶ್ರೀ ಗಣಪತಿ ಮೊಳೆಯಾರರು ರಚಿಸಿರುವ ಮೇಘದೂತದ ಪ್ರತಿಕೃತಿ – ಭಾಗ ೩
ಇನ್ನೂ ಹೆಚ್ಚಿನ ಅಭ್ಯಾಸ ಮಾಡಬಯಸುವವರಿಗೆ ಈ ಕೆಳಗಿನ ಕೃತಿಗಳು ಉಪಯುಕ್ತವೆನಿಸುವುವು ::
- ಕನ್ನಡಕೈಪಿಡಿ :: ಮೈಸೂರು ವಿ.ವಿ. ಪ್ರಕಾಶನ (ಹಳಗನ್ನಡವ್ಯಾಕರಣದ ಪರಿಚಯಕ್ಕೆ)
- ಸೇಡಿಯಾಪು ಛಂದಸ್ಸಂಪುಟ :: ಗೋವಿಂದಪೈ ಸಂಶೋಧನಕೇಂದ್ರ, ಉಡುಪಿ (ಛಂದಸ್ಸಿನ ಸಮಗ್ರಮೀಮಾಂಸೆ ಮತ್ತು ಪ್ರಯೋಗಸೌಂದರ್ಯದ ಅರಿವಿಗಾಗಿ)
- ಕನ್ನಡ ಛಂದಸ್ಸಿನ ಚರಿತ್ರೆ (ಎರಡು ಸಂಪುಟಗಳು) :: ಮೈಸೂರು ವಿ.ವಿ. (ಛಂದಸ್ಸಿನ ಬಾಹ್ಯವಿವರಗಳಿಗಾಗಿ)
- ಕನ್ನಡ ಛಂದಸ್ಸ್ವರೂಪ :: ಟಿ.ವಿ.ವೇಂಕಟಾಚಲಶಾಸ್ತ್ರೀ :: ಡಿ.ವಿ.ಕೆ.ಮೂರ್ತಿ ಪ್ರಕಾಶನ, ಮೈಸೂರು (ಛಂದಸ್ಸಿನ ಬಾಹ್ಯವಿವರಗಳಿಗಾಗಿ)
- ಸಂಕ್ಷಿಪ್ತ ಕನ್ನಡ ನಿಘಂಟು :: ಕನ್ನಡ ಸಾಹಿತ್ಯಪರಿಷತ್ತು, ಬೆಂಗಳೂರು (ಪದಸಂಪದಕ್ಕಾಗಿ)
- ಭಾರತೀಯಕಾವ್ಯಮೀಮಾಂಸೆ :: ತೀ.ನಂ.ಶ್ರೀಕಂಠಯ್ಯ :: ಮೈಸೂರುವಿ.ವಿ.(ಕಾವ್ಯತತ್ತ್ವಗಳ ಅರಿವಿಗಾಗಿ)
- ಅಲಂಕಾರಶಾಸ್ತ್ರ :: ಆರ್.ಗಣೇಶ್ :: ಗಾಂಧಿಕೇಂದ್ರ, ಭಾರತೀಯವಿದ್ಯಾಭವನ, ಬೆಂಗಳೂರು (ಕಾವ್ಯತತ್ತ್ವಗಳ ಅರಿವಿಗಾಗಿ)
- ಅಲಂಕಾರತತ್ತ್ವ :: ಎಂ.ಎ.ಹೆಗಡೆ :: ಸಮಾಜಪುಸ್ತಕಾಲಯ, ಧಾರವಾಡ (ಕಾವ್ಯತತ್ತ್ವಗಳ ಅರಿವಿಗಾಗಿ)
ಭಾಷಾವ್ಯುತ್ಪತ್ತಿಯನ್ನು ಬೆಳಸಿಕೊಳ್ಳಲು ಹಾಗೂ ಹಳನ್ನಡ / ನಡುನ್ನಡ ಕಾವ್ಯಸೌಂದರ್ಯವನ್ನು ಅಸ್ವಾದಿಸಲು
- ಪಂಪಭಾರತ :: ಕನ್ನಡಸಾಹಿತ್ಯಪರಿಷತ್ತು, ಬೆಂಗಳೂರು
- ರುದ್ರಭಟ್ಟನ ಜಗನ್ನಾಥವಿಜಯ :: ಕನ್ನಡಸಾಹಿತ್ಯಪರಿಷತ್ತು, ಬೆಂಗಳೂರು
- ರನ್ನನ ಗದಾಯುದ್ಧ :: ಕನ್ನಡಸಾಹಿತ್ಯಪರಿಷತ್ತು, ಬೆಂಗಳೂರು
- ನಾಗವರ್ಮನ ಕರ್ಣಾಟಕಕಾದಂಬರಿ :: ಕನ್ನಡಸಾಹಿತ್ಯಪರಿಷತ್ತು, ಬೆಂಗಳೂರು
- ಜನ್ನನ ಯಶೋಧರಚರಿತೆ :: ಕನ್ನಡಸಾಹಿತ್ಯಪರಿಷತ್ತು, ಬೆಂಗಳೂರು
- ಕುಮಾರವ್ಯಾಸಭಾರತ :: ಇದೀಗ ಗಣಕಪರಿಷತ್ತಿನಿಂದ ಸಿ.ಡಿ. ರೂಪದಲ್ಲಿ ಬಂದಿದೆ
- ಲಕ್ಷ್ಮೀಶನ ಜೈಮಿನಭಾರತ :: ಮೈಸೂರುವಿ.ವಿ.
- ರಾಘವಾಂಕನ ಹರಿಶ್ಚಂದ್ರಕಾವ್ಯ :: ಕನ್ನಡವಿ.ವಿ., ಹಂಪಿ.
- ರಾಮಾಯಣದರ್ಶನಂ :: ಕುವೆಂಪು, ಉದರವಿ ಪ್ರಕಾಶನ, ಮೈಸೂರು
- ಮಂಕುತಿಮ್ಮನ ಕಗ್ಗ :: ಡಿ.ವಿ.ಜಿ., ಕಾವ್ಯಾಲಯ, ಮೈಸೂರು
- ಆರ್. ಗಣೇಶ್ ಅವರು ವ್ಯಾಖ್ಯಾನಿಸಿರುವ ಕುಮಾರವ್ಯಾಸಭಾರತ, ಜೈಮಿನಿಭಾರತ, ಹರಿಶ್ಚಂದ್ರಕಾವ್ಯ, ಗದಾಯುದ್ಧ, ರಾಮಾಯಣದರ್ಶನಂ, ಆನಂದವರ್ಧನನ ಧ್ವನ್ಯಾಲೋಕ, ಕಾಳಿದಾಸನ ಕಾವ್ಯಸಂಸ್ಕೃತಿ, ಗಾಥಾಸಪ್ತಶತಿ, ಭಾಸನಾಟಕಚಕ್ರ, ವಿಶಾಖದತ್ತನ ಮುದ್ರಾರಾಕ್ಷಸ, ಭವಭೂತಿಯ ಉತ್ತರರಾಮಚರಿತೆ, ಶೂದ್ರಕನ ಮೃಚ್ಛಕಟಿಕ, ಕಾಳಿದಾಸನ ರಘುವಂಶ-ಕುಮಾರಸಂಭವ-ಮೇಘದೂತ-ಶಾಕುಂತಲ-ಕಾವ್ಯನಾಟಕಗಳ ಸಿಡಿಗಳು.
ಕಲಿಕಾ ಸಾಮಗ್ರಿಯಿಂದ ತುಂಬಾ ಅನುಕೂಲವಾಗುತ್ತಿದೆ , ಅದರಲ್ಲೂ ವೀಡಿಯೊದಲ್ಲಿ ಬಂದ ಪಾಠಗಳು ತುಂಬ ಚೆನ್ನಾಗಿ ಮೂಡಿಬಂದಿವೆ . ಪುಸ್ತಕದಲ್ಲಿ ಸಿಗದ ವಿಷಯಗಳು ತುಂಬಾಯಿವೆ , ಧನ್ಯವಾದಗಳು .
ಪ್ರಭಾಕರ್ ಅವರೇ,
ಈ ತಾಣವನ್ನು ವೀಕ್ಷಿಸಿ, ಪಾಠಗಳನ್ನು ಗಮನಿಸಿದ್ದಕ್ಕೆ ಧನ್ಯವಾದಗಳು.
ಆದಷ್ಟುಬೇಗ ತಮ್ಮ ಕವಿತೆಗಳ ಮೂಲಕ, ಪದ್ಯಪಾನದಲ್ಲಿ ಸಕ್ರಿಯರಾಗುತ್ತೀರೆ೦ದು ಭಾವಿಸುತ್ತೇನೆ.
ಉತ್ತಮ ವೆಬ್ ಸೈಟ್… ಛಂದಸ್ಸುಗಳ ಬಗ್ಗೆ ಅಂತರ್ಜಾಲದಲ್ಲಿ ಪ್ರಕಟಿಸಿರುವ ನಿಮಗೆ ಹೃದಯಾಂತರಾಳದ ಕೃತಜ್ನತೆಗಳು…
ನಾನು ಛಂದಸ್ಸು-ಪ್ರವೇಶಿಕೆ ಯ ಪಿ ಡಿ ಎಫ್ ಅನ್ನು ಓದುತ್ತಿದ್ದಾಗ ಒಂದು ಸಣ್ಣ ಗೊಂದಲವಾಯಿತು.
೩ನೇ ಪುಟದಲ್ಲಿ ಕೆಳಗಡೆ ಗುರುವೆನಿಸುವ ಅಕ್ಷರಗಳ ಬಗ್ಗೆ ವಿವರಣೆಯನ್ನು ಕೊಟ್ಟಲ್ಲಿ, ವ್ಯಂಜನವು ಸೇರಿದ ಅಕ್ಷರ ಎಂಬುದಾಗಿ ಮುದ್ರಿತವಾಗಿದೆ, ಅದು ವ್ಯಂಜನವು ಸೇರದ ಅಕ್ಷರ ಎಂದಾಗಬೇಕಲ್ಲವೇ ?
ಅದೇ ಪುಟದಲ್ಲಿ ಕೆಳಗಡೆ ಉದಾಹರಣೆಗಳನ್ನು ಕೊಟ್ಟಲ್ಲಿ “ಸೇರದ” ಎಂದಿದೆ.
ಮಾತ್ರೆಗಳ ಬಗ್ಗೆ ತಿಳಿಯಬೇಕೆಂಬ ಕುತೂಹಲದಿಂದ ಓದುತ್ತಿರುವಾಗ ತುಸು ಗೊಂದಲವಾಯಿತು, ಉದಾಹರಣೆಗಳನ್ನು ನೋಡಿದ ಮೇಲೆ ತಪ್ಪಾಗಿದೆ ಎಂದು ತಿಳಿಯಿತು, ನನ್ನಂತೆ ಬರುವ ಕುತೂಹಲಿಗಳಿಗೆ ಗೊಂದಲವಾಗುವ ಅವಕಾಶವಿರುವುದರಿಂದ ಸರಿಪಡಿಸಬೇಕಾಗಿ ವಿನಂತಿ.
ಎಲ್. ಎನ್. ಭಟ್ಟರೇ,
ಪದ್ಯಪಾನಕ್ಕೆ ಸ್ವಾಗತ. ನೀವು ತೋರಿಸಿರುವ ಗೊ೦ದಲ ಸರಿಯಾಗಿಯೇ ಇದೆ. ಆದರೆ, ಅದು ಬದಲಾಗಬೇಕಾಗಿದ್ದದ್ದು, ಉದಾಹರಣೆಯಲ್ಲಿ. ಒ೦ದು ಅಕ್ಷರದ ಉತ್ತರದಲ್ಲಿ ಇನ್ನೊ೦ದು ವ್ಯ೦ಜನ(ಅರ್ಧಾಕ್ಷರ) ಬ೦ದಾಗ, ಹಿ೦ದಿನದು ಗುರುವಾಗುತ್ತದೆ. ಹಾಗಾಗಿ ಉದಾಹರಣೆಯಲ್ಲಿ “ಸೇರದ” ಎ೦ದಿರುವುದು ತಪ್ಪು. ಅದನ್ನು ಸರಿಪಡಿಸಿದ್ದೇವೆ. ಸಲಹೆಗೆ ಧನ್ಯವಾದಗಳು. ಪದ್ಯಪಾನದಲ್ಲಿ ನಿಮ್ಮ ಪದ್ಯಗಳು ಬರಲೆ೦ದು ಆಶಿಸುತ್ತೇವೆ.
ಯಮಾತಾರಾಜಭಾನಸಲಗಂ ನಲ್ಲೂ ತಪ್ಪಾಗಿದೆ “ಯಮ” ವಾಗಿದೆ… ಕ್ಷಮಿಸಿ ತಪ್ಪುಗಳನ್ನೇ ಹುಡುಕುತ್ತಿಲ್ಲ, ಓದುತ್ತಿದ್ದಾಗ ಮತ್ತೊಮ್ಮೆ ಸಂದೇಹವುಂಟಾಯಿತು, ಕಣಜದಲ್ಲಿ ಸರಿಯಾಗಿದೆ ಅದನ್ನು ನೋಡಿ ಧೃಡಪಡಿಸಿಕೊಂಡೆ…
ಎಲ್. ಎನ್. ಭಟ್ಟರೇ,
ಮತ್ತೊಮ್ಮೆ ಧನ್ಯವಾದಗಳು. ಸರಿಪಡಿಸಿದ್ದೇವೆ.
Video lessons are awesome.
Could you please suggest, which one should we take to start with for practice of chandassu? , is it choupadi ,bhamini or kanda ?
It is your choice….choupadi seems little easier from my perspective…but can differ 🙂
any alankara lessons video cd is there ? where I can get ? pls help me
You can get a list of videos by ganesh Sir here. Enjoy. http://padyapaana.com/?page_id=1630
Hello,
here is a link to a public domain e-book on sanskrit prosody which i found relevant to this page:
http://books.google.com/books?id=m7UIAAAAQAAJ
thanks,
damaru
ಶ್ರೀ ಗಣೇಶರ ಭಾಷಣಗಳನ್ನು ಕೇಳುವಾಗ ಅವರು ಅನೇಕರ ಉನ್ನತ ಕೃತಿಗಳನ್ನು ಸೂಚಿಸುತ್ತಾರೆ. ನಾನು ಬಹಳ ದಿನಗಳಿಂದಲೂ ಗೋವಿಂದ ಪೈ ಯವರ “ಗೊಲ್ಗೊಥಾ ಮತ್ತು ವೈಶಾಖಿ” ಯನ್ನು ಅಧ್ಯಯನ ಮಾಡಬೇಕೆಂದು ಹುಡುಕುತ್ತಿದ್ದೇನೆ. ಎಲ್ಲಿ ಸಿಗಬಹುದು ಮೂಲ ? ಅದರಲ್ಲುವು ಶ್ರೀ ಗಣೇಶರಂಥ ಜ್ನ್ಯಾನಿಗಳು ಯಾರಾದರೂ ವ್ಯಾಖ್ಯಾಯಿಸಿದ್ದಾರೆ ಮತ್ತೂ ಉತ್ತಮ!
ಗಣೇಶರು ಮೊಳೆಯಾರರ ಕೃತಿಗಳ ಬಗ್ಗೆ ಬಹಳೆಡೆ ಉಲ್ಲೇಖಿಸುತ್ತಾರೆ. ಅವುಗಳು ಎಲ್ಲಿ ಸಿಗಬಹುದು ? ಅಮೆಜಾನ್, ಫ್ಲಿಪ್ಕಾರ್ಟ್, ನವಕರ್ನಾಟಕ, ಸಪ್ನಾ ಇಲ್ಲೆಲ್ಲಿಯೂ ಇಲ್ಲ.
ಧನ್ಯವಾದಗಳು,
ಶ್ರೀನಾಥ ನಾರಾಯಣ
shreenatha.narayana@gmail.com
Golgotha mattu vaishaaki – You can get it from Ankita, gandhi bazar in the complete works of govinda pai. If not, you can write to Govinda pai pratishtana, Udupi and get it. it was available till recently. It should be available now also.
I shall check and get back to you about Moleyar’s books as i do not have info at hand now. if you can name some of the books thats even better.
Thank you so much, Shreesha. I have heard Dr.Ganesh praising Sri MoLeyaar so much! I do not know the list of all the books he has written. It would have to start from getting the list. Not sure who publishes.
I would not mind buying all of his Kalidasa translations.
Warm Regards,
Shree
Ganapati Moleyar’s meghadoota part 3 is available to download at the top of this page. Just in case if you have not noticed.
Thank you Shreesh. I now have both Pai’s Samagra Kavite and Samagra Naataka books. I have been able to read and enjoy Golgotha and Vaishaki. Thank you so much.
If I was starting Halegannada from scratch, is it mainly through reading existing literature or is there any introductory book available on Halengannada itself?
Warm Regards,
Shreenath
If you are OK to take head on core grammer, you can start with ShabdamaNi darpana. though i do not suggest that way. But its your choice. You can learn through simple, small works or even mukthakas with the help of a dictionary.
Start with gadhaayuddha or mukthakas in kaavyasaara or sookti sudhaarNava with the help of a good dictionary. you can learn quickly and its enjoyable too.
There is one lesson in Padyapaana itself that gives a brief introduction to the haLegannaDa vibhaktis. You may find it useful as an additional resource : http://padyapaana.com/?page_id=1655
ಶ್ರೀಶ ಮತ್ತು ರಾಮಚಂದ್ರ ಅವರಿಗೆ ಧನ್ಯವಾದಗಳು. ನಾನು ಈಗ ಶಬ್ದಮಣಿದರ್ಪಣ ದಿಂದ ಆರಂಭಿಸಿದ್ದೇನೆ. ಇದಲ್ಲದೆ ಟಿ ವಿ ವೆಂಕಟಾಚಲ ಶಾಸ್ತ್ರಿಗಳ ಹಳಗನ್ನಡ ವ್ಯಾಕರಣ ಪ್ರವೇಶಿಕೆ ನೆರವಿಗೆ ಬಂದಿದೆ. ಅವರ ಛಂದಸ್ಸಿನ ಪುಸ್ತಕಗಳೂ ಸುಲಭವಾಗಿ ಓದಲು ಆಗುತ್ತವೆ.
ಮುಖ್ಯವಾಗಿ ಡಿ ವಿ ಜಿ ಯವರ ಕಾವ್ಯಗಳನ್ನು ಓದಲಿಚ್ಸಿಸುವವರು ಕನ್ನಡ ಪುಸ್ತಕ ಪ್ರಾಧಿಕಾರದ ೧೧ ಸಂಪುಟದ ಡಿ ವಿ ಜಿ ಯವರ ಸಮಗ್ರ ಲೇಖನ, ಕಾವ್ಯ ಇತ್ಯಾದಿಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾಡಿದ್ದಾರೆ. ಅತಿ ಉತ್ಕ್ರಷ್ಟ ಕಾಗದದ ಕ್ಯಾಲಿಕೋ ಪ್ರತಿಗಳು ರೂ ೧೩೫. ಒಟ್ಟು ಹನ್ನೊಂದು ಪುಸ್ತಕಗಳಿಗೆ ರೂ ೧೦೬೦. ರವೀಂದ್ರ ಕಲಾ ಕ್ಷೇತ್ರದ ಒಳಗೆ ಹಿಂಭಾಗದಲ್ಲಿರುವ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತವೆ. ಅವರು ಬರೀ ನಗದು ಸ್ವೀಕಾರ ಮಾಡುತ್ತಾರೆ. ಪದ್ಯಪಾನಿಗಳು ನಗದು ತೆಗೆದುಕೊಂಡು ಹೋಗುವುದು.
ಧನ್ಯವಾದಗಳು.
Padyapaanada adalitha varagakke namaskara…Dayavittu kaalidaasana Abhijnana Shakuntalada kannada Avataranike iddalli dayavittu upload maadabekagi savinaya prarthane…Ee natatakavannu halavu kade hukiddene aadare nanage sari anisuva anuvaada sigalilla mathe sankshipta anuvaada sikkide..dayavittu iddalli upload madiddalli thumba upayogavaguthade….
Dhanyavadagalu
ಮಾನ್ಯರೆ,
ಕನ್ನಡದಲ್ಲಿ ಶಾಕುಂತಲದ ಹಲವಾರು ಅನುವಾದಗಳು ಬಂದಿವೆ. ನೀವು ಯಾವ ತರಹದ ಅನುವಾದವನ್ನು ಹುಡುಕುತ್ತಿದ್ದೀರಾ ಎಂದು ಗೊತ್ತಿಲ್ಲ. ಹೊಸಗನ್ನಡದಲ್ಲಿ ಗದ್ಯಪದ್ಯಾತ್ಮಕವಾಗಿ ಎಸ್ ವಿ ಪರಮೇಶ್ವರ ಭಟ್ಟರ ಅನುವಾದ ಮೈಸೂರಿನ ಗೀತಾ ಬುಕ್ ಹೌಸ್ ಇಂದ ಪ್ರಕಟಿತವಾಗಿದೆ. ಹಾಗೂ ಪ್ರತಿಗಳು ಸಪ್ನಾ ಬುಕ್ ಹೌಸ್ ಸೇರಿದಂತೆ ಹಲವು ಕಡೆ ಲಭ್ಯವಿದ್ದಂತೆ ನೋಡಿದ್ದೇನೆ. ಇನ್ನೊಂದು ಹಳಗನ್ನಡದಲ್ಲಿ ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿಗಳ ಪ್ರಸಿದ್ಧವಾದ ಅನುವಾದ-“ಕರ್ಣಾಟಕ ಶಾಕುಂತಲ ನಾಟಕಂ” ಇದು “ಬಸವಪ್ಪ ಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ” ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. (೨೦೧೫)(ಪ್ರಕಾಶಕರು- ಸಂವಹನ, ೧೨/೧ಎ, ಈವನಿಂಗ್ ಬಜಾರ್ ಹಿಂಭಾಗ,ಶಿವರಾಂಪೇಟೆ ಮೈಸೂರು)
ದಯವಿಟ್ಟು ವಿಚಾರಿಸಿ.
ಧನ್ಯವಾದಗಳು.
ಸಲಹೆಯನ್ನು ನೀಡಿದ್ದಕ್ಕೆ ಧನ್ಯವಾದಗಳು.. ನಾನು ಬಸವಪ್ಪ ಶಾಸ್ತ್ರಿಗಳ ಅನುವಾದವನ್ನು ಹುಡುಕುತ್ತಿದ್ದೇನೆ…ಅದೆ ರೀತಿ ಮೆಘದೂತದ ದ. ರಾ. ಬೇಂದ್ರೆಯವರ ಅನುವಾದವನ್ನು ಹಲವು ಕಡೆ (ಸ್ವಪ್ನ, ಗೋಖಲೆ ಸಾರ್ವಜನಿಕ ವಿಚಾರ ಸಮಿತಿ) ಹುಡುಕಿದ್ದೇನೆ. ಅದರ ಬಗ್ಗೆಯೂ ಮಾಹಿತಿ ಇದ್ದಲ್ಲಿ ಸಹಕರಿಸಬೇಕಾಗಿ ವಿನಂತಿ. ಗಣಪತಿ ಮೊಳಯರ ಮೇಘದೂತ ಅನುವಾದ ಈಗಾಗಲೆ ನನ್ನಲ್ಲಿದೆ….
ಧನ್ಯವಾದಗಳು