ನಗಜೆ ಭೂಮಿ ಲಕ್ಷ್ಮಿ ಪೆಸರ
ಸೇರಿಸಿದರೆ ನಾಲ್ಕಕ್ಷರ
ಕೊನೆಗೆಸೇರೆ ಒಂದಕ್ಷರ
ಹೆಸರೊಂದೇ ಐದಕ್ಷರ
ಎಡದಕ್ಷರವೂಂದೊಂದನು
ತೆಗೆದು ನೋಡಿ ಚೋದ್ಯವಿದನು
ಗಣಪ ಬ್ರಹ್ಮ ಷಣ್ಮುಖರು
ಮನ್ಮಥನಗ್ನಿಯು ಬಹರು
ಈ ವರ್ಣಚ್ಯುತಕದ ಸೂಚನೆ ಹೀಗಿದೆ.
ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ ಇವರ ಹೆಸರುಗಳು ಲಭ್ಯ. ಹಾಗಾದರೆ ಆ ಐದಕ್ಷರದ ಪದ ಯಾವುದು