Nov 262018
 

೧. ಕಂದ
ಮದನಾರಿಯು ನಾರಿಯಾದ ಪರಿಯೇಂ ಚದುರೋ

೨. ಮಂಜುಭಾಷಿಣಿ (ರಥೋದ್ಧತಕ್ಕೆ ಮೊದಲು ಎರಡು ಲಘು)
ಸಕಲಂಕನಲ್ತೆ ರವಿ ಭಾವಿಸಲ್ ಸದಾ

  6 Responses to “ಪದ್ಯಸಪ್ತಾಹ ೨೩೫: ಸಮಸ್ಯಾಪೂರಣ”

  1. ಮೊದಲೊಳ್ ಮಣ್ಣಿನ ಶಿಲ್ಪಿಗ
    ಮೊದವಿದ ಮಣ್ಣಲ್ಪಮಿರ್ದೊಡಭ್ಯಾಸಕದೋ
    ಬದಲಿಸೆ ಮಾಡಿದ ಮಣ್ಣಿನ
    ಮದನಾರಿಯು ನಾರಿಯಾದ ಪರಿಯೇಂ ಚದುರೋ

    ಪ್ರಕಟಂಗೊಳುತ್ತೆ ಪೃಥೆವೇಳ್ದ ಮಂತ್ರಕಂ
    ದಕಟಾ! ಎನುತ್ತುಮಿರಲಾಕೆಗಿತ್ತನೋ
    ವಿಕಳಾಸ್ಪದಾರ್ಭಕನನೀ ವಿಚಾರದೊಳ್
    ಸಕಳಂಕನಲ್ತೆ ರವಿ ಭಾವಿಸಲ್ ಸದಾ//

    • ಮದನಾರಿಯಂ ಮಾಡಪೋಗಿ ಅದು ಕೆಟ್ಟೊಡೇಂ
      ಉದಯೋನ್ಮುಖಗೆ ಚಿಂತೆಯೇಕೊ ಕಾಣೆಂ|
      ಮಿದಿಯಬೇಕಿಲ್ಲ ಮಣ್ಣನು, ತೀಡಬೇಕಿಲ್ಲ
      ಬದಲಿ(/ಲು)ಪೆಸರೊಂದನಿಟ್ಟೊಡಮಾಗದೇಂ||

      Second verse is fine 😉

  2. ಒದವುತೆ ಕಂಕಣ ಭಾಗ್ಯಂ
    ಸದಾಶಿವನೆನುವವನೋರ್ವ ಸಚ್ಚರಿತಂಗಂ
    ಸದಮಲಮತಿ ಪಾರ್ವತಿ ನಾ_
    ಮದ ನಾರಿಯು ನಾರಿಯಾದ ಪರಿಯೇಂ ಚದುರೋ !!

    “ಸದಾಶಿವ”ನೆಂಬ ಗಂಡಿಗೆ “ಪಾರ್ವತಿ” ಎಂಬ ಹೆಸರಿನ ಹೆಣ್ಣು ಹೆಂಡತಿಯಾಗಿ ದೊರೆತ ರೀತಿಯು ಯೋಗ್ಯವೇ ಆಗಿದೆ!!

  3. ಮದುವಣಿಗ ಚ೦ದ್ರಹಾಸ೦
    ಮುದಬಾಷ್ಪವ ಸುರಿಸಿ ವಿಷಯೆಯ೦ ಪೊಗಳಿದನಿ೦-I
    ತು ”ದಿವಿಜತೆಯನಾ೦ತುದದೋ
    ಮದನಾರಿಯು ನಾರಿಯಾದ ಪರಿಯೇಂ ಚದುರೋ!” II

    ಇದು ಚಂದ್ರಹಾಸನ ಕಥೆಯನ್ನು ಆಧರಿಸಿ ಬಿಡಿಸಿದ ಪರಿಹಾರ . ಚಂದ್ರಹಾಸನು ವಿಷಯೆಯು ವಿಷವನ್ನು ತೆಗೆದ ಪರಿ ಏನು ಚಾತುರ್ಯದಿಂದ ಕೊಡಿತ್ತೆಂದು ಮದನನಲ್ಲಿ ಹೊಗಳಿದ.
    ಮದನ + ಅರಿ (ವಿಷ )= ಮದನಾರಿ

  4. ಚಿಕುರಂ, ಗಿಡಂ, ತ್ವಚೆಯು, ಪ್ರಾಣಿಯೆಲ್ಲಮುಂ
    ಪಿಕ-ಕಾಕ ಮೇಣಿತರೆ ಪಕ್ಷಿಯೆಲ್ಲಮುಂ|
    ವಿಕಲಂಗೊಳುತ್ತೆ ಸುಡುತಿಂದು ಗ್ರೀಷ್ಮದೊಳ್
    ಸಕಲಂ ಕನಲ್ತೆ ರವಿ ಭಾವಿಸಲ್ ಸದಾ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)