Dec 032018
 

ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ
೧. ಸಗಣಿ(ಗೋಮಯ)
೨. ಹಿಂದೂಸ್ಥಾನಿ ಸಂಗೀತ
೩. ಆಕಳಿಕೆ

  5 Responses to “ಪದ್ಯಸಪ್ತಾಹ ೩೩೬: ವರ್ಣನೆ”

  1. ಸಗಣಿ
    ಶುದ್ಧಗೊಳಿಸುವೆಯಂತೆ ಮನೆಯಂಗಳವ ನೀನು
    ಲದ್ದಿಯೇ ಮುಸುರೆಯನು ಮಾಯಗೈವೆ
    ಬುದ್ಧಿಜೀವಿಗಳ ಶಿರದೊಳಗೆ ತುಂಬಿಯುಮೇಕೆ
    ಹದ್ದಿನೊಳು ಯೋಚನೆಯನಿರಿಸದಾದೆ?

    ಎಲ್ಲವನ್ನೂ ಶುದ್ಧಗೊಳಿಸಬಲ್ಲ ಸಗಣಿಯು ಬುದ್ಧಿಜೀವಿಗಳೆನಿಸಿಕೊಂಡವರ ತಲೆಯಲ್ಲಿ ತುಂಬಿಕೊಂಡಿದ್ದರೂ ಅವರ ಯೋಚನೆಗಳನ್ನು ಶುದ್ಧಗೊಳಿಸದಾಯ್ತು ಅನ್ನುವ ಯತ್ನ..(ಸಗಣಿಗೆ ಮಾಡಿದ ಅವಮಾನವೆಂದೆನಿಸಿದರೆ ಕ್ಷಮಿಸಿ)

  2. ಸಿಡಿದ ಪುಡಿಗಾಜನ್ನು ಹೆಕ್ಕಲುತ್ತಮ ಸಗಣಿ
    ಅಡಿಲೋಕದರಸ ಬಲಿ ದ್ಯೋತಕವುಮಿದುವೆ
    ಗುಡುಗುಡಿಸುತಿರಲುದರ ಪಂಚಗ್ಯದೆ ಸೇರಿ
    ಕೊಡುವುದೈ ಹಿತ ಸಗಣಿ ಸ-ಗಣಿಗಿಂ ಮಿಗಿಲು

    • Thank you for your belated response. Ever since I started composing verses for padyapaana, I haven’t missed a single week. This one week had escaped my attention. I have now penned a verse thanks to your reminding of my lapse 🙂
      ತಿಂಗಳ ಕಾಲದ ತಂಗಳ ಸಗಣಿಯು
      ಇಂಗಿನವೋಲ್ ನನ್ನನು ತಲುಪಲ್||
      ಪಾಂಗಿಂ ರಚಿಸಲುಮಾದುದು ಪದ್ಯವ
      ಸಂಗೀತದ ಬಗೆಗೊಂದಾನುಂ||

  3. Hindustani music is one genuine music, so say the art critics. Despite knowing nothing of music of any genre, I agree with the pundits that Hindustani music should only be heard; the singer should not be watched.
    ಸೌಂದರ್ಯಮೀಮಾಂಸಕರು ಸಮ್ಮತಿಸುವರೈ
    ಚಂದ ಹಿಂದೂಸ್ಥಾನಿಗಾನಮೆಂದು|
    ಮಂದಮತಿಯಾದೊಡಂ ನಾನುಮೊಪ್ಪುವೆನಿದನು-
    ಮೆಂದಿಗುಂ ನೋಡಬಾರದು ಗಾತೃವಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)