Jul 232013
 

‘ಬಾಲ್ಯಮೇ ಬಾಳ ಭಾಗ್ಯಂ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಶಾಲಿನಿ, ಮಾಲಿನಿ, ಮಂದಾಕ್ರಾಂತ ಹಾಗೂ ಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ.

Jul 152013
 

ಪ್ರಿಯ ಮಿತ್ರರೆ,
ಪದ್ಯಪಾನದಲ್ಲಿ, ಹೊಸತಾಗಿ, ಅಲಂಕಾರದ ಮೇಲೆ ವಿಡಿಯೋ ಪಾಠಗಳನ್ನು [ಪದ್ಯ ವಿದ್ಯೆಯ ಅಡಿಯಲ್ಲಿ] ಸೇರಿಸಲಾಗಿದೆ. ಇದನ್ನು ಪರಿಶೀಲಿಸಿ, ಕಲಿತು, ನಮ್ಮ ಪದ್ಯಗಳನ್ನು ಅಲಂಕರಿಸಬಹುದು. ಈ ನಿಟ್ಟಿನಲ್ಲಿ, ಈ ವಾರದ ವಿಷಯ :: ರೂಪಕಾಲಂಕಾರದೊಡನೆ ಬಡತನದ ವರ್ಣನೆ. ಸಂಸ್ಕೃತ ಪದ್ಯಗಳೂ ಬರಲಿ.

ಇನ್ನು ನಿಮ್ಮ ಪದ್ಯಗಳ ನಿರೀಕ್ಷೆ 🙂

Dear friends,

In padyapaana, new video lessons on alankaara have been added. Let us try and compose poems with alankaara. To start with, this weeks exercise is to describe Poverty using ruupaka alankaara.

We are in anticipation of your poems 🙂

Jul 092013
 

Dear Padyapānis

Padyapāna which started as a platform for all of us to hone our skills in metrical and classical poetry has got overwhelming responses from all and it led to the organizing of tumbugannaḍa śatāvadhāna. Till now we have been mainly concentrating on versification in kannaḍa except for few stray verses in saṁskṛta. In a bid to expand our horizons a bit more we have decided to start a section in saṁskṛta. Today being ‘आषाढस्य प्रथमदिवसे’ , the first day of the month of āṣāḍha, the day when Yakṣa of the famous Meghadūta spotted the cloud and today’s Nakṣatra being ‘Punarvasu’, the birth star of Rāma (Meghadūta has number of references to Sītā and Rāma  like जनकतनयास्नानपुण्योदकेषु, रामगिर्याश्रमेषु, रघुपतिपदैरङ्कितं मेखलासु ), we couldn’t find a day more apt to start this venture. As āṣāḍha pūrṇimā is celebrated as the birthday of Bhagavān Veda Vyāsa it is apt to start with verses on that great ṛṣi kavi.

So the first topic in this section

Verse/verses on Bhagavān Veda Vyāsa in conformance to any metrical pattern in saṁskṛta.

ಪದ್ಯಪಾನಿಗಳಿಗೆ ನಮಸ್ಕಾರ,
ಛಂದೋಬದ್ಧ ಹಾಗು ಅಭಿಜಾತ ಪದ್ಯರಚನೆಯ ಸಲುವಾಗಿ ಪದ್ಯಪಾನವೆಂಬ ಈ ವೇದಿಕೆ ಆರಂಭವಾಯಿತು. ಇದಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ಹಾಗು ಬೆಂಬಲದ ಫಲವಾಗಿ ತುಂಬುಗನ್ನಡ ಶತಾವಧಾನದ ಆಯೋಜನೆ ಸಾಧ್ಯವಾಯಿತು. ಇಲ್ಲಿಯವರೆಗೆ ನಾವು ಮುಖ್ಯವಾಗಿ (ಕೆಲವು ಪದ್ಯಗಳನ್ನು ಹೊರತುಪಡಿಸಿ) ಕನ್ನಡದಲ್ಲಿ ಪದ್ಯರಚನೆ ಮಾಡುತ್ತಾ ಬಂದಿದ್ದೇವೆ. ಸಂಸ್ಕೃತದಲ್ಲೂ ಸಹ ಪದ್ಯರಚನೆ ಮಾಡುವ ಹಂಬಲದಿಂದ ಸಂಸ್ಕೃತ ವಿಭಾಗವನ್ನು ಆರಂಭಿಸಲು ನಿಶ್ಚಯಿಸಿದ್ದೇವೆ. ಇಂದು ‘आषाढस्य प्रथमदिवसे’ ಅಂದರೆ ಆಷಾಢ ಮಾಸದ ಮೊದಲ ದಿನ, ಇಂದೇ ಮೇಘದೂತ ಕಾವ್ಯದಲ್ಲಿ ನಾಯಕನಾದ ಯಕ್ಷನು ಮೋಡವನ್ನು ಕಂಡದ್ದು ಹಾಗು ಇಂದಿನ ನಕ್ಷತ್ರ ರಘುಕುಲತಿಲಕನಾದ ಶ್ರೀ ರಾಮಚಂದ್ರನ (ಮೇಘದೂತದಲ್ಲಿ ಸೀತಾರಾಮರ ಬಹಳಷ್ಟು ಪಂಕ್ತಿಗಳಿವೆ ಉದಾ: जनकतनयास्नानपुण्योदकेषु, रामगिर्याश्रमेषु, रघुपतिपदैरङ्कितं मेखलासु  ) ಜನ್ಮನಕ್ಷತ್ರವಾದ ಪುನರ್ವಸು ಹೀಗಾಗಿ ಇಂದಿನ ದಿನಕ್ಕಿಂತ ಒಳ್ಳೆಯ ದಿನ ಸಿಗಲಾರದೆಂಬ ಆಶಯದಿಂದ ಇಂದೇ ಈ ವಿಭಾಗವನ್ನು ಆರಂಭಿಸೋಣ.

ಆಷಾಢ ಮಾಸದ ಪೂರ್ಣಿಮೆಯನ್ನು ಭಗವಾನ್ ವೇದ ವ್ಯಾಸರ ಜನ್ಮದಿನವೆಂದು ಆಚರಿಸುವುದರಿಂದ ಈ ಬಾರಿ ಅದನ್ನೇ ವಸ್ತುವಾಗಿ ತೆಗೆದುಕೊಂಡು ಭಗವಾನ್ ವೇದ ವ್ಯಾಸರ ಮೇಲೆ ಛಂದೋಬದ್ಧವಾಗಿ ಸಂಸ್ಕೃತದಲ್ಲಿ ಪದ್ಯವನ್ನು/ಪದ್ಯಗಳನ್ನು ರಚಿಸೋಣ

Jul 072013
 

ಈ‌ ಕೆಳಗಿನ ಚಿತ್ರಕ್ಕೆ ನಿಮ್ಮ ಪದ್ಯಗಳನ್ನು ರಚಿಸಿರಿ. ಉತ್ತರಖಂಡದಲ್ಲಾದ ಪ್ರವಾಹದ ಹಿನ್ನೆಲೆಯಲ್ಲಿ ವಿಸ್ತರಿಸಲೂ ಬಹುದು. ಛಂದಸ್ಸು ನಿಮ್ಮ ಆಯ್ಕೆ.

ಗಂಗಾ ಪ್ರವಾಹ

ಗಂಗಾ ಪ್ರವಾಹ