ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್
ವಸಂತತಿಲಕ ಛಂದಸ್ಸಿಗೆ ಸರಿಹೊಂದುವ ಈ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ
“ಮುಳಿಸೇಕೆ ಪೆಣ್ಣೇ”
“कविर्मनीषी क्रान्तदर्शी” इति संस्कृत वाङ्गमये संस्तूयमानाः कवयः | रवेरगोचरं हि यत्कवेस्सुगोचरं हि तत् इति समस्यापादस्य हेतुः भारतीयाभाषासु तत्रापि कर्णाटभाषायां प्रसिद्धवाचोविच्छित्तिः/सुभाषितं “ರವಿ ಕಾಣದ್ದನ್ನು ಕವಿ ಕಂಡ” .
‘ವೈಕಾಸಿ’, ‘ಆಡಿ’, ‘ಐಪಸಿ’, ‘ಪಂಗುನಿ’ ಎಂಬ ತಮಿಳು ಮಾಸಗಳ ದತ್ತಪದಗಳನ್ನು ಬಳೆಸಿ ಮಹಾಕಾಲ(ಶಿವ)ನ ವರ್ಣನೆಯನ್ನು ಮಾಡಿರಿ
ಆತ್ಮೀಯ ಪದ್ಯಪಾನಿಗಳೇ ನಿಮ್ಮೆಲ್ಲರ ಸಹಕಾರದಿಂದ ಪದ್ಯಪಾನವು ಇಂದು ಪದ್ಯಸಪ್ತಾಹದ ೨೦೦ನೇ ಸಂಚಿಕೆಗೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ಪದ್ಯರಸಿಕರಿಗೂ ಹಾರ್ದಿಕ ಧನ್ಯವಾದಗಳು ಹಾಗು ಅಭಿನಂದನೆಗಳು 🙂
ಮೂರನೇ ಶತಕದ ಪದ್ಯಸಪ್ತಾಹದ ಸಂಚಿಕಗಳಿಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಾ ಕೆಳಗಿನ ಸಮಸ್ಯೆಯ ಸಾಲನ್ನು ಬಗೆಹರಿಸಬೇಕೆಂದು ವಿನಂತಿಸುತ್ತೇವೆ.
ಉಭಯಭಾಷಾಕವಿಗಳೂ ಭಾಗವಹಿಸಲೆಂದು, ಕನ್ನಡ ಹಾಗು ಸಂಸ್ಕೃತಗಳೆರಡರಲ್ಲೂ ಸಮಸ್ಯೆಯ ಸಾಲನ್ನು ನೀಡಲಾಗಿದೆ.
ಕನ್ನಡ: ಪದ್ಯಪಾನಮಿದು ಮದ್ಯಪಾನಮೇ
ಸಂಸ್ಕೃತ: ಪದ್ಯಪಾನಮಿತಿ ಮದ್ಯಪಾನಿತಾ