About us – ನಮ್ಮ ಬಗ್ಗೆ

 

Padyapaana – ಪದ್ಯಪಾನ

In the beginning of 2011, ShataavadhaaniDr. R. Ganesh taught the basics of prosody in Kannada to a group of friends interested in Poetry. Having gone through a set of classes, we wanted to practice poetry writing by sharing, getting feedback and improving. For this purpose, we started a blog called Kaavya-Kutuhala. Other than  being very useful for us, this blog also attracted others who got to know about it by chance. Having observed the growth of the blog as well as our poetic skills, we felt that many in the public would enjoy these poems and there would be many persons interested and capable of writing poetry as per the rules of prosody. To broad base the efforts of our group and with a long term goal of bringing back the glory of well structured poetry, we have setup this platform.

All of us are based out of Bangalore and are occupied in various areas of work.

Thank you for your interest

೨೦೧೧ ನೇ ಇಸವಿಯ ಶುರುವಿನಲ್ಲಿ ಕಾವ್ಯಕವಿತೆಗಳಲ್ಲಿ ಆಸಕ್ತರಾದ ಗೆಳೆಯರಿಗೆ ಶತಾವಧಾನಿ ಡಾ|| ರಾ. ಗಣೇಶ ರವರು ಛಂದಸ್ಸು ಹಾಗು ಪದ್ಯ ರಚನೆಯ ವಿಷಯಗಳನ್ನು ಕಲಿಸಿಕೊಟ್ಟರು. ಪದ್ಯ ರಚನೆಯನ್ನು ಅಭ್ಯಾಸ ಮಾಡಿ, ಗೆಳೆಯರೊಂದಿಗೆ ಹಂಚಿಕೊಂಡು, ಅವರ ಅಭಿಪ್ರಾಯಗಳನ್ನೂ, ಸಲಹೆಗಳನ್ನೂ ಅಳವಡಿಸಿಕೊಂಡು ಉತ್ತಮ ಪದ್ಯ ರಚನಕಾರರಾಗಬೇಕೆಂಬ ಆಶಯದಿಂದ ಕಾವ್ಯ-ಕುತೂಹಲ ಎಂಬ ಬ್ಲಾಗ್ ಶುರುಮಾಡಿದ್ದೆವು. ಅದು ಬಹಳ ಚೆನ್ನಾಗಿ ಬೆಳೆದು, ಕಲಿಕೆಯ ಗುಂಪಿನ ಹೊರಗೂ ಜನರನ್ನು ಆಕರ್ಷಿಸಿತು.ಇದನ್ನು ಹಾಗೂ ಪದ್ಯ ರಚನೆಯಲ್ಲಿ ನಾವು ಬೆಳೆದ ರೀತಿಯನ್ನು ಗಮನಿಸಿ, ಛಂದೋಬದ್ಧ ಕವಿತೆಗಳಲ್ಲಿ ಬಹಳಷ್ಟು ಜನರಿಗೆ ಆಸಕ್ತಿ ಹಾಗು ರಚನಾ ಸಾಮರ್ಥ್ಯ ಇರಬಹುದೆಂಬ ಅನುಮಾನ ಧೃಢವಾಯಿತು. ಆದ್ದರಿಂದ, ಈ‌ ಪದ್ಯಪಾನ ಎಂಬ ರಂಗವನ್ನು ಏರ್ಪಡಿಸಿದ್ದೇವೆ. ಇದರಿಂದ ಛಂದೋಬಧ್ಧ ಕವಿತೆಯು ಮತ್ತೆ ಪ್ರಾಮುಖ್ಯ ಪಡೆಯುತ್ತದೆ, ಬೆಳೆಯುತ್ತದೆ ಹಾಗು ಜನರಿಗೆ ಆನಂದ ತರುತ್ತದೆ ಎಂದು ಆಶಿಸುತ್ತೇವೆ.

ನಾವೆಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದು, ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿದ್ದೇವೆ.

ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು.
Contact – ವಿಳಾಸ ::‌ rkekkar@gmail.com, karantha@gmail.com

  18 Responses to “About us – ನಮ್ಮ ಬಗ್ಗೆ”

  1. ಉತ್ತಮ ಪ್ರಯತ್ನ. ಶುಭವಾಗಲಿ

  2. idu tumba vibhinna prayatna!!! wish you all the best.

  3. ಒಂದು ಒಳ್ಳೆಯ ಕಾರ್ಯ …
    ಅದು ಯಶಸ್ಹ್ವಿಯಾಗಲಿ ..
    ಶುಭ ಹಾರೈಕೆಗಳು

  4. ಅತ್ಯಂತ ಶ್ಲಾಘನೀಯ ಪ್ರಯತ್ನ.
    “ಪದ್ಯಪಾನ”ದ ಸಹಾಯದಿಂದ ನನಗೆ ಕನ್ನಡ ಛಂದಸ್ಸಿನ ಬಗ್ಗೆ ತಿಳಿಯುವುದು ಸುಲಭವಾಯಿತು. ನನ್ನ ತೀರ್ಥರೂಪರು ( ದಿ. ತೆಕ್ಕುಂಜ ದಾಮೋದರ ಭಟ್) ಹಲವು ಕವಿತೆಗಳನ್ನು ಬರೆದಿದ್ದು ಹೆಚ್ಚಿನವು ಕಂದ ಪದ್ಯಗಳು . ಅವುಗಳನ್ನು ಓದಿ, (ಅಪ್ರಕಟಿತ ) ತಿಳಿಯಲು ತುಂಬಾ ಸಹಕಾರಿಯಾಗುತ್ತಿದೆ. “ಸೌಂದರ್ಯಲಹರಿ” ಯ ಕನ್ನಡ ಭಾವಾನುವಾದವನ್ನು “ಪಿರಿಯಕ್ಕರ” ದಲ್ಲಿ ಬರೆದಿರುತ್ತಾರೆ. – ಪಿರಿಯಕ್ಕರ ದ ಬಗ್ಗೆ ಮಾಹಿತಿ ಸಿಗಬಹುದೇ. ?
    ಧನ್ಯವಾದಗಳು.

    • ಪಿರಿಯಕ್ಕರವು ಅ೦ಶಗಣಯುತವಾದ ಕನ್ನಡ ಛ೦ದಸ್ಸಿನ ಒ೦ದು ಪ್ರಕಾರ. ಇದರ ಲಕ್ಷಣವನ್ನು ಹೀಗೆ ವಿವರಿಸಬಹುದು:
      ೧. ೪ ಪಾಗಳು
      ೨. ಪ್ರತಿಪಾದದ ಮೊದಲಲ್ಲಿ ೧ ಬ್ರಹ್ಮಗಣ, ನ೦ತರ ೫ ವಿಷ್ಣುಗಣ ಹಾಗು ಕೊನೆಯಲ್ಲಿ ೧ ರುದ್ರಗಣ ಬರುತ್ತದೆ.
      ಬ್ರ | ವಿ | ವಿ | ವಿ | ವಿ | ವಿ | ರು |

      ಬ್ರಹ್ಮಗಣದ ವಿನ್ಯಾಸ – UUU, UU-, -U ಅಥವಾ —
      ವಿಷ್ಣುಗಣದ ವಿನ್ಯಾಸ – UUUU, UUU-, UU-U, UU–, -UU, -U-, –U ಅಥವಾ —
      ರುದ್ರಗಣದ ವಿನ್ಯಾಸ – —-, UU–, -U–, UUU–, –U-, UU-U-, -UU-, UUUU-, —U, UU–U, -U-U, UUU-U, –UU, UU-UU, -UUU ಅಥವಾ UUUUU

      ಅ೦ಶಗಣದ ಬಗೆಗೆ ಹೆಚ್ಚು ತಿಳಿಯಬೇಕಾಗಿದ್ದಲ್ಲಿ ಕನ್ನಡ ಕೈಪಿಡಿಯನ್ನು ಕೊ೦ಡು ಓದಬಹುದು. ಇಲ್ಲವೇ ಸೇಡಿಯಾಪು ಕೃಷ್ಣಭಟ್ಟರ ಕನ್ನಡ ಛ೦ದಸ್ಸು(ಅಥವಾ ಛ೦ದಸ್ಸ೦ಪುಟ) ಪುಸ್ತಕವನ್ನು ನೋಡಬಹುದು.

      • ಶ್ರೀಶ ಕಾರಂತರಿಗೆ ಧನ್ಯವಾದಗಳು.ನೀವು ಕೊಟ್ಟವಿವರಗಳನ್ನು ತಡವಾಗಿ ನೋಡಿದ್ದಕ್ಕೆ ಕ್ಷಮೆ ಇರಲಿ.
        ಸೇಡಿಯಾಪು ಅವರ ಛಂದಸ್ಸಂಪುಟದಲ್ಲಿ ವಿವರಗಳು ದೊರಕಿದುವು.ನಿಮ್ಮ ವಿವರಣೆಗಳು ಸುಲಭವಾಗಿ ಅರ್ಥೈಸಿಕೊಳ್ಳಲು ಪೂರಕವಾಗಿವೆ.
        ಕಳೆದ ಒಂದು ವಾರದಿಂದ ಪದ್ಯಪಾನದಲ್ಲಿನ “ದತ್ತಪದಿ ೦೬ -೨೦೧೨ “, ಲಹರಿ ಎಲ್ಲವನ್ನೂ ಆಸ್ವಾದಿಸಿ ತುಂಬ ತುಂಬ ಆನಂದಿಸಿದೆ.

        • ಇಲ್ಲಿ ಎರಡು ವಿಷಯಗಳು ನನಗೆ ಮನದಟ್ಟಾಗಲಿಲ್ಲ.
          ೧. ಅಂಶ ಗಣಗಳ( ತ್ರಿಮೂರ್ತಿ ಗಣಗಳು) ಶ್ರವ್ಯ ರೂಪ – ಇದು ಯಾಕಾಗಿ ?
          ೨. ಪಿರಿಯಕ್ಕರ ಧಾಟಿಯನ್ನು ವಿವರಿಸುವಲ್ಲಿ, ನಿಯಮಾನುಸಾರ ಗಣವಿಭಜನೆ ಮಾಡಿದುದು ಅರ್ಥವಾಯಿತು, ಆದರೆ ತಾಳ ಖಂಡಗಳಾಗಿ ವಿಭಜಿಸಿದ್ದು ಅರ್ಥವೆ ಆಗಲಿಲ್ಲ. ಇವುಗಳ ಬಗ್ಗೆ ವಿವರಣೆ ಸಿಗಬಹುದೇ.?

          • ೧. ಶ್ರವ್ಯರೂಪ ಯಾಕೆಂದರೆ, ಗೇಯದಿಂದಲೇ ಈ ಪ್ರಕಾರ ಹುಟ್ಟಿರುವುದು.ಅಂದರೆ, ಅಕ್ಷರಗಳ ದೀರ್ಘ/ಹೃಸ್ವತ್ವಗಳನ್ನು ಅನುಸರಿಸದೆ, ಗಣಗಳಲ್ಲಿನ ಅಕ್ಷರಸ್ಥಾನಗಳಿಂದ ಅವುಗಳನ್ನು ದೀರ್ಘವಾಗಿ ಅಥವಾ ಹ್ರಸ್ವವಾಗಿ ಉಚ್ಚರಿಸಲಾಗುತ್ತದೆ. ಹಾಗಾಗಿ ಇವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದರೆ, ಒಮ್ಮೆ ಧಾಟಿಯಲ್ಲಿ ಓದಿಯೇ ತಿಳಿಯಬೇಕು.
            ೨. ಇದನ್ನು ಒಮ್ಮೆ ಪುಸ್ತಕ ನೋಡಿ ಹೇಳುವೆ.

  5. ತುಂಬಾ ಉತ್ತಮ ಪ್ರಯತ್ನ!
    ಹಿಂದೆಯೇ ಬರಬೇಕಿತ್ತು ಈ ವೆಬ್-ಸೈಟು 🙂

    ಪ್ರತಿಕ್ರಿಯೆಗಳು ತಡೆಹಿಡಿಯಲ್ಪಡುತ್ತವೆಯೇ? (Moderated?)
    (ಲಹರಿ ಅಂಕಣಕ್ಕೆ ನನ್ನದೊಂದು ಇನ್ನೂ ಪ್ರಕಟವಾಗಿಲ್ಲ!)

    • ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಲ್ಲಿ Moderation ಇಲ್ಲ. ನಿಮ್ಮ ಪದ್ಯ ಹೇಗೋ ತಪ್ಪಾಗಿ spam ಎಂದು ಸಿಕ್ಕಿಹಾಕ್ಕೊಂಡಿತ್ತು.

  6. A very good attempt.

  7. ಹರಿಯಲಿ ಕಾವ್ಯ ಗಂಗೆ ಕನ್ನಡ ನಾಡಿಂದ ಎಲ್ಲೆಡೆಗೆ!!!!!
    ಹಿಂದೆ ಗುರು ಮುಂದೆ ಗುರಿಯಿರಲುಎಷ್ಟು ಸೊಗಸು

  8. ವಿದ್ವದ್ವೃಂದಕ್ಕೆ ನಮನಗಳು. ನಿಮ್ಮೊಡನೆ ನೆಟ್ ನಲ್ಲಾದರೂ ನಾನು ಇದ್ದೇನೆಂಬುದೇ ನನಗೆ ಸಂತಸ ತರುವ ವಿಷಯ. ನಿನ್ನೆ ಬೆಳಗ್ಗೆ ಶತಾವಧಾನಿಗಳೊಂದಿಗೆ ‘ಅಭಿನವವಾಗ್ದೇವಿ ಕಂತಿ’ ಪುಸ್ತಕ ಮರುಮುದ್ರಣ ಮಾಡುತ್ತೇನೆ. ಜೊತೆಗೆ ಇನ್ನಷ್ಟು ಸಮಸ್ಯಾಪೂರ್ಣಗಳನ್ನು ಸೇರಿಸಬೇಕೆಂದಿದ್ದೇನೆ ಎಂದು ಹೇಳಿದುದಕ್ಕೆ ಪದ್ಯಪಾನದಲ್ಲಿ ಬಂದಿರುವ ಸೂಕ್ತವಾದುವನ್ನು ಪದ್ಯಪಾನ ನಡೆಸುತ್ತಿರುವವರ ಅನುಮತಿ ಪಡೆದು ತೆಗೆದುಕೊಳ್ಳಿ ಎಂದಿದ್ದಾರೆ. ತಾವುಗಳು ನನಗೆ ಈ ಸದವಕಾಶ ಒದಗಿಸಿಕೊಟ್ಟರೆ ನಾನು ತಮಗೆ ಋಣಿ. ನನಗಂತೂ ಹೀಗೆ ಬರೆಯುವ ಶಕ್ತಿ ಇಲ್ಲ, ಶಕ್ತರ ಕವನಗಳನ್ನು ಜನಕ್ಕೆ ಪುಸ್ತಕದ ಮೂಲಕ ತಲುಪಿಸುವ ಅಭಿಲಾಷೆಯಷ್ಟೆ.
    ತಮ್ಮ ಉತ್ತರಾಕಾಂಕ್ಷಿ
    ಎನ್. ರಾಮನಾಥ್

  9. I write poems in kannada, I want to learn more about writing poems. Can some body tell me a web site or cd to learn.

    Gururaj

  10. ಈ ಪದ್ಯಪಾನಕ್ಕೆ ಎಂಟ್ರಿ ಆದಾಗಲೇ ಗೊತ್ತಾಗುತ್ತದೆ ನಮ್ಮ ಕನ್ನಡ ಕಾವ್ಯ ಪ್ರಪಂಚದಲ್ಲಿ ಎಷ್ಟೊಂದು ಗಣಿಗಳಿವೆ-ಅದೂ ಖನನವಾಗದ ಗಣಿಗಳು !! ಖನನವಾಗಿದ್ದರೂ ನಾನು ನೋಡದ ನನ್ನ ಕಣ್ಣಿಗೆ/ಕಿವಿಗೆ/ಮನಸ್ಸಿಗೆ ಬೀಳದ ಅಮೂಲ್ಯ– ಲಕ್ಷ್ಮಿ -ಅಲ್ಲಲ್ಲ== ಸರಸ್ವತಿ ಆಭರಣಗಳು== !!! ಇನ್ನು ಅ೦ಗ್ರೇಜಿ ಜಮಾನಾದಲ್ಲಿ ಈ ಅಮೂಲ್ಯ ಆಭರಣಗಳು
    ಹೇಗೆ ಇರುತ್ತವೆ. ಎಲ್ಲಿ ಸೇರುತ್ತವೆ ಉಪಯೋಗಿಸದೇ! ಎಂಬ ಚಿಂತೆ ಯಾಗುತ್ತದೆ. ಆದರೂ ಈ ನೆಟ್ ಎಂಬುದೊಂದು ಇದೆಯಲ್ಲ ! ನಮಗೆ ಅದೂ ಪುಸ್ತಕ ಗಳನ್ನು ಕೊಳ್ಳಲಾಗದವರಿಗೆ ಒಂದು ಒಳ್ಳೆಯ ಲಾಕರ್ ಸೌಲಭ್ಯದ೦ತಾಗಿದೆ ಲಾಕರ್ ಅಂದರೆ ಬರೇ ಇಡಲಲ್ಲ. ನಿಮ್ಮ೦ಥವರಿಂದ ಸೇರಿಸಲ್ಪಟ್ಟ -ಇಡಲ್ಪಟ್ಟ ವುಗಳನ್ನು ನಮಗೆ ಓದಿ ಮನನಮಾಡಿ ಜೀರ್ಣಿಸಲು ಸಾಧ್ಯವಿದ್ದರೆ ಜೀರ್ಣಿಸಿ ಅಥವಾ ಪ್ರಯತ್ನವನ್ನಾದರೂ ಮಾಡಲು ಅನುವು ಮಾಡಿದ೦ತಾಗಿದೆ. . ಮೈನರ್ ಹೆಸರಲ್ಲಿ ಖಾತೆ ತೆರೆದು ಹಿರಿಯರಿಂದ ಹಣ ತುಂಬಿಸಿ ಮೈನರ್ ಗಳಿಗೆ ಎ.ಟಿ.ಯಮ್ ಕಾರ್ಡ್ ಅಥವಾ ಸಹಿಹಾಕಿದ ಚೆಕ್ ಕೊಟ್ಟ ಹಾಗಾಗಿದೆ. ಅಂತೂ ತುಂಬಾ ಧನ್ಯವಾದಗಳು. ಇಡೀ ಸಮೂಹಕ್ಕೆ.

  11. How to become member? Is there any registration process?

  12. Wanted help regarding chandassu in the Halegannada poem 7th standard abhimanyu parakrama. I hope you reply me.

  13. Param Adarneeya R Ganeshji,
    I am one of your fans and have a request. I see so many of your lectures on youtube in Kannad. Every time I feel so bad that I do not know Kannad. Is it possible to give lectures in English? There would be many like me who would not know Kannad, but would love to hear you.

    Unfortunately, there is no content giving Rasasvad other than you. Mohan KV writes beautiful articles on sadAswAda Google group . But who would give Rasasvad lectures on whole plays? It would be a content of enormous value.You are ocean of knowledge and we are standing on shore not understanding Kannad.

    If I am allowed to beg, I am begging.

    And my apologies for kind of gate crashing on this site with this message.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)