ಅಕ್ಷರ ವೃತ್ತಗಳು (ವರ್ಣವೃತ್ತಗಳು)
ಕೆಲವು ಜನಪ್ರಿಯ ಅಕ್ಷರವೃತ್ತ(ವರ್ಣವೃತ್ತ)ಗಳ ಬಂಧ ವಿನ್ಯಾಸವನ್ನು ಇಲ್ಲಿ ತೋರಲಾಗಿದೆ. ಜೊತೆಯಲ್ಲಿ ಉದಾಹರಣೆಗಳೂ ಇವೆ. ಈ ಉದಾಹರಣೆಗಳನ್ನುಪಯೋಗಿಸಿ, ಆಯಾ ಧಾಟಿಯನ್ನು ಮನಸ್ಸಿನಲ್ಲಿ ತಂದುಕೊಂಡರೆ ಆ ಛಂದಸ್ಸಿನಲ್ಲಿ ರಚಿಸುವುದು ಸುಲಭವಾದೀತು. ಕೆಳಗೆ ತೋರಿರುವ ಛಂದೋಬಂಧಗಳು ಒದೊಂದು ಸಾಲಿನದ್ದಾಗಿದ್ದು, ಉಳಿದ ಮೂರೂ ಸಾಲುಗಳು ಅದೇ ವಿನ್ಯಾಸವನ್ನು ಹೊಂದಿರಬೇಕು. ಕೆಲವೊಂದು ವೃತ್ತಗಳಲ್ಲಿ, ” | ” ಸಂಜ್ಞೆಯು ಇದ್ದು, ಇದು ಯತಿ ಸ್ಥಾನವನ್ನು ಸೂಚಿಸುತ್ತದೆ.
ಛಂದಸ್ಸು |
ಬಂಧ/ಮಾತ್ರಾವಿನ್ಯಾಸ |
ಉದಾಹರಣೆ |
---|---|---|
ದೋಧಕ |
ನಾನನನಾನನನಾನನನಾನಾ |
ದೋಧಕವೃತ್ತದೆಯಾಂತ್ರಿಕನಾದಂ |
ಸ್ವಾಗತ |
ನಾನನಾನನನನಾನನನಾನಾ |
ಸ್ವಾಗತಂಸರಸಕಾವ್ಯಕೆಸಲ್ಗುಂ |
ರಥೋದ್ಧತ |
ನಾನನಾನನನನಾನನಾನನಾ |
ಸ್ವಾಗತಕ್ಕೆಸಹಜಂರಥೋದ್ಧತಂ |
ಇಂದ್ರವಜ್ರಂ |
ನಾನಾನನಾನಾನನನಾನನಾನಾ |
ಗಂಭೀರವೃತ್ತಂಸೊಗಮಿಂದ್ರವಜ್ರಂ |
ಉಪೇಂದ್ರವಜ್ರಂ |
ನನಾನನಾನಾನನನಾನನಾನಾ |
ಉಪೇಂದ್ರವಜ್ರಂಶ್ರವಣಾಭಿರಾಮಂ |
ಇಂದ್ರವಂಶ |
ನಾನಾನನಾನಾನನನಾನನಾನನಾ |
ಅತ್ಯಂತರಮ್ಯಾಕೃತಿಯಿಂದ್ರವಂಶಮೈ |
ವಂಶಸ್ಥ |
ನನಾನನಾನಾನನನಾನನಾನನಾ |
ತೊಡಂಗೆವಂಶಸ್ಥನಿರೂಪಣಂಹಿತಂ |
ದ್ರುತವಿಲಂಬಿತ |
ನನನನಾನನನಾನನನಾನನಾ |
ದ್ರುತವಿಲಂಬಿತಮಲ್ತೆಮನೋಹರಂ |
ಪ್ರಮಿತಾಕ್ಷರ |
ನನನಾನನಾನನನನಾನನನಾ |
ಪ್ರಮಿತಾಕ್ಷರಕ್ಕೆಬೆಲೆಯುಂಟುಸದಾ |
ತೋಟಕ |
ನನನಾನನನಾನನನಾನನನಾ |
ಸಗಣಂಗಳೆಬಂದಿರೆತೋಟಕಮೈ |
ಸ್ರಗ್ವಿಣೀ |
ನಾನನಾನಾನನಾನಾನನಾನಾನನಾ |
ಸ್ರಗ್ವಿಣೀವೃತ್ತದೊಳ್ಸರ್ವದಾರಂಗಳೇ |
ಭುಜಂಗಪ್ರಯಾತ |
ನನಾನಾನನಾನಾನನಾನಾನನಾನಾ |
ಭುಜಂಗಪ್ರಯಾತಂಸದಾನೃತ್ತಗೀತಂ |
ಮತ್ತಕೋಕಿಲ |
ನನನನಾನನನನಾನನಾನನಾ |
ಉಲಿವುದಲ್ತೆಮಧುಮತ್ತಕೋಕಿಲಂ |
ದ್ರುತಪದ |
ನನನನಾನನನನಾನನನಾನಾ |
ದ್ರುತಪದಂಗುರಿಯಸೇರಲುಯೋಗ್ಯಂ |
ಮಂಜುಭಾಷಿಣಿ |
ನನನಾನನಾನನನನಾನನಾನನಾ |
ಶ್ರವಣಾಭಿರಾಮಗತಿಮಂಜುಭಾಷಿಣೀ |
ಕಲಹಂಸ |
ನನನಾನನಾನನನನಾನನನಾನಾ |
ಕಲಹಂಸಮಲ್ತೆಗತಿಸುಂದರವೃತ್ತಂ |
ರುಚಿರಾ |
ನನಾನನಾ|ನನನನನಾನನಾನನಾ |
ವಿಚಾರಿಸಲ್ರುಚಿರೆವಿಚಿತ್ರವೃತ್ತಮೈ |
ವನಮಯೂರ |
ನಾನನನನಾನನನನಾನನನನಾನಾ |
ರಂಜಿಪುದುಕುಂಜದೊಳದೋವನಮಯೂರಂ |
ವಸಂತತಿಲಕ |
ನಾನಾನನಾನನನನಾನನನಾನನಾನಾ |
ಶ್ರೀವೇಂಕಟಾಚಲಪತೇತವಸುಪ್ರಭಾತಂ |
ಮಾಲಿನಿ |
ನನನನನನನಾನಾ|ನಾನನಾನಾನನಾನಾ |
ರಚಿಸಲಿಕತಿಕಷ್ಟಂಮಾಲಿನೀವೃತ್ತಮಿಷ್ಟಂ |
ಮಂದಾಕ್ರಾಂತ |
ನಾನಾನಾನಾ|ನನನನನನಾ|ನಾನನಾನಾನನಾನಾ |
ಮಂದಾಕ್ರಾಂತಂಮುಗುದೆಯರಿಗೇ ಮೀಸಲಾಗಿರ್ಪತಂತ್ರಂ |
ಪೃಥ್ವೀ |
ನನಾನನನನಾನನಾ|ನನನನಾನನಾ ನಾನನಾ |
ಮನೋಜ್ಞಮಿದುಕೇಳ್ವುದೈಕಠಿಣಮಾದೊಡಂ ಪೃಥ್ವಿತಾಂ |
ಮಲ್ಲಿಕಾಮಾಲೆ |
ನಾನನಾನನನಾನನಾ|ನನನಾನನಾನನನಾನನಾ |
ಭಾಮಿನೀಗತಿಯೊಪ್ಪಿರಲ್ನವಮಾಲೆಮಲ್ಲಿಕೆ ಸಲ್ಲದೇ |
ಶಾರ್ದೂಲವಿಕ್ರೀಡಿತ |
ನಾನಾನಾನನನಾನನಾನನನನಾ|ನಾನಾನನಾನಾನನಾ |
ಛಂದೋಲೋಕದೊಳೊಂದಪೂರ್ವಘಟನಂ ಶಾರ್ದೂಲವಿಕ್ರೀಡಿತಂ |
ಮತ್ತೇಭವಿಕ್ರೀಡಿತ |
ನನನಾನಾನನನಾನನಾನನನನಾ|ನಾನಾನನಾನಾನನಾ |
ಗತಿಗಾಂಭೀರ್ಯದತುಂಬುಚೆಲ್ವುಮೆರೆಯಲ್ ಮತ್ತೇಭವಿಕ್ರೀಡಿತಂ |
ಉತ್ಪಲಮಾಲೆ |
ನಾನನನಾನನಾನನನನಾನನನಾನನನಾನನಾನನಾ |
ಉತ್ಪಲಮಾಲೆಕೋಮಲವಿಶಾಲಸುಶೀಲ ವಿಲೋಲವೃತ್ತಮೈ |
ಚಂಪಕಮಾಲೆ |
ನನನನನಾನನಾನನನನಾನನನಾನನನಾನನಾನನಾ |
ಸುಲಲಿತಶಾಂತಕಾಂತಸುಮಕೋಮಲ ಚಂಪಕಮಾಲೆಯಪ್ಪುಗಂ |
ಸ್ರಗ್ಧರಾ |
ನಾನಾನಾನಾನನಾನಾ|ನನನನನನನಾ| ನಾನನಾನಾನನಾನಾ| |
ಇನ್ನೇನಂಪೇಳ್ವುದೋನಾಂತೊಡಕಿನತಡೆಯೇಂ ಸ್ರಗ್ಧರಾವೃತ್ತಮೆಂದುಂ |
ಮಹಾಸ್ರಗ್ಧರಾ |
ನನನಾನಾನಾನನಾನಾ|ನನನನನನನಾ| ನಾನನಾನಾನನಾನಾ| |
ಸೊಗಸೇಸಂದಂತೆತೋರ್ಕುಂ ಲಗುಬಗೆಯೆಸೆಯಲ್ಕೀಮಹಾಸ್ರಗ್ಧರಾಖ್ಯಂ |
ಶಾಲಿನೀ |
ನಾನಾನಾನಾನಾನನಾ ನಾನನಾನಾ |
ವೇದೋದ್ಗಾರಕ್ಕಾಸ್ಪದ೦ ಶಾಲಿನೀ ದಲ್ |
ಶಿಖರಿಣೀ |
ನನಾನಾ ನಾನಾನಾ ನನನನನನಾ ನಾನನನನಾ |
ವಿಷಣ್ಣ೦ ಗ೦ಭೀರ೦ ವಿಕಟಮಧುರ೦ ತಾ೦ ಶಿಖರಿಣೀ |
ಹರಿಣೀ |
ನನನ ನನನಾನಾನಾ ನಾನಾ ನನಾನನನಾನನಾ |
ನೆಗೆವ ಹರಿಣೀವೇಗ೦ ಯೋಗ೦ ತರ೦ಗತುರ೦ಗಕ೦ |
ತರಳ |
ನನನನಾನನ ನಾನನಾನನನಾನನಾ ನನನಾನನಾ |
ತರಳಮೆ೦ಬುದು ಮಲ್ಲಿಕೋತ್ತರಮಾಲೆಗ೦ ಮಿಗಿಲೊಪ್ಪುಗ೦ |
ಅರ್ಧಸಮವೃತ್ತಗಳು |
||
ವಿಯೋಗಿನೀ |
ನನನಾನನನಾ ನನಾನನಾ | ನನನಾ ನಾನನನಾನನಾನನಾ || |
ಕರುಣಾಸ್ಪದಮೀ ವಿಯೋಗಿನೀ | ಚರಿತ೦ ಕೋಮಲಶಬ್ದಶಯ್ಯೆಯಿ೦ || |
ಮಾಲಭಾರಿಣೀ |
ನನನಾನನ ನಾನನಾನನಾನಾ | ನನನಾನಾನ ನನಾನನಾ ನನಾನಾ || |
ಮೆರೆಗು೦ ಗಡ ಮಾಲಭಾರಿಣೀ ಮೇಣ್ | ಗುರುವೊಪ್ಪಲ್ಕೆ ವಿಯೋಗಿನೀ ವಿಶಿಷ್ಟ೦ || |
ಸದಪರವಕ್ತ್ರ |
ನನನನನನ ನಾನನಾನನಾ | ನನನನನಾನ ನನಾನನಾನನಾ || |
ಪುದಿದಿರೆಲಘು ತಾ೦ ವಿಯೋಗಿನೀ | ಸದಪರವಕ್ತ್ರಮೆನಿಪ್ಪುದಾವಗ೦ || |
ಪುಷ್ಪಿತಾಗ್ರ |
ನನನನನನನಾ ನನಾನನಾನಾ | ನನನನನಾನನ ನಾನನಾನನಾನಾ || |
ತುದಿಗೆಸೆದಿರೆ ಮೇಣ್ ಗುರುಪ್ರಸನ್ನ೦ | ಸದಪರವಕ್ತ್ರಮೆ ಪುಷ್ಪಿತಾಗ್ರವೃತ್ತ೦ || |
ಈ ಶುಷ್ಕಾಕ್ಷರಗಳನ್ನು ಹಲವು ಬಾರಿ ಗುನುಗಿಕೊ೦ಡರೆ, ವೃತ್ತದ ಧಾಟಿ ಸ್ಪಷ್ಟವಾಗುತ್ತದೆ
ತುಂಬಾ ಉಪಯುಕ್ತವಾಗಬಲ್ಲ ಪಟ್ಟಿ. ಮತ್ತೇಭ ವಿಕ್ರೀಡಿತಕ್ಕೆ ಉದಾಹರಣೆಯಾಗಿ, ಗದಾಯುದ್ಧದಿಂದ:
ಎನಿತುಂ ದ್ರೌಪದಿ ಮುಕ್ತಕೇಶಿ ನಮೆವಳ್ ತದ್ದುಃಖಮಂ ಕಂಡು ಕಂ-
ಡೆನಿತುಂ ಸೈರಿಪೆವಾನುಮೆನ್ನನುಜರುಂ ಪಾಂಚಾಲಿಯಂ ನೋಡಿ ನೀಂ
ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಯ್ ನೀನಿಂತಿರಾನನ್ನೆಗಂ
ಮುನಿಸಂ ತೀರ್ಚಿ ನರೇಂದ್ರವೈರಿತರುವಂ ನಿರ್ಮೂಲನಂ ಮಾಡುವೆಂ
[…] ಅಕ್ಷರ ವೃತ್ತಗಳು (ವರ್ಣವೃತ್ತಗಳು) […]
ಪಟ್ಟಿ ತುಂಬಾ ಸಹಕಾರಿಯಾಗಿದೆ .
ಆದರೆ ಉದಾಹರಣೆ ಪೂರ್ಣ ಕಾಣುತ್ತಿಲ್ಲ. ದಯವಿಟ್ಟು ಸಹಾಯಮಾಡಿ.
Namaskaara Ganeshare NamO Namaha ||
Sir, Pls nanana badalu ” Yamaathaaraaja…..” Sootravannu anusarisi Lakshanavannu baredare sulabhavaagi nenepidabahudhu. Samskritha video tharagathiyalli neeve Udhaaharisidanthe – ” Dhritha-vilambitham-uktham-udhaariBhihi -Na Bha Bha rai rathi loka manoharam ” . Sootradodone lakshana spashtavaagide. heege Kannadadalloo sootragalannu kodabekaagi Vinanthi.
Haage Samskrithadalli Anushtup, Dhritha-Vilambitha erade udhaahrithavaagide. Mikka Ella Chandhassugala Sootragalannu Kodabekaagi Vinanthi.
Haage Dayamaadi ” Ayi Giri Nandhini …..” Sthotra Yaava Chandassinalli Ide endu thilisa Bekaagi Praarthane.
Thamma Vishwaasi,
Suhas D.P. – Jngr, Bengalooru.
ರಥೋದ್ದತವೋ ರಥೋದ್ಧತವೋ ಸಂದೇಹವಿದೆ. ದಯವಿಟ್ಟು ತಿಳಿಸಿ.