Apr 272012
 

ಈ ಪ್ರಹೇಳಿಕೆಯನ್ನು ಬಿಡಿಸಿ

ದಂತೈರ್ಹೀನಃ ಶಿಲಾಭಕ್ಷೀ

ನಿರ್ಜೀವೋ ಬಹುಭಾಷಕಃ

ಗುಣಸ್ಯೂತಿ ಸಮೃದ್ಧೋಪಿ

ಪರಪಾದೇನ ಗಚ್ಚತಿ

ದಂತಹೀನವದು ತಿಂಬುದು ಕಲ್ಗಳ

ನಂತಭಾಷಕ ಜೀವವಿಲ್ಲ

ಸ್ವಂತ ಸುಗುಣಗಣಿ ಯಾದರೇನನ್ಯ ಪ

ದಾಂತ ಪಿಡಿದು ಚರಿಸುವುದು

Aug 082011
 

ಉತ್ತರನ ತಂಗಿ ಗಂಡನ ಪಿತನು ಯುಧ್ಧದಲಿ

ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ ||

ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು

ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ ||

ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ

ಮಾತೃವನು ತಲೆಯಮೇಲಿರಿಸಿದವನಾರು? || ೩ ||

ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು

ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||