ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು 🙂
ಹಬ್ಬಗಳ ಹೊಸ ಉಡಿಗೆ-ತೊಡಿಗೆಯ ಸಂಭ್ರಮಗಳ ಬಗ್ಗೆ ಅಲಂಕಾರಯುತ ಪದ್ಯರಚನೆ ಮಾಡಿರಿ.
ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು 🙂
ಹಬ್ಬಗಳ ಹೊಸ ಉಡಿಗೆ-ತೊಡಿಗೆಯ ಸಂಭ್ರಮಗಳ ಬಗ್ಗೆ ಅಲಂಕಾರಯುತ ಪದ್ಯರಚನೆ ಮಾಡಿರಿ.
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳೆಸಿ ದುಷ್ಟರನ್ನು ನಿಂದಿಸುವ ಪದ್ಯವನ್ನು ರಚಿಸಿರಿ.
ಪ್ರಿಯ ಪದ್ಯಪಾನಿಗಳೆ,
ಪದ್ಯಪಾನದ ಪದ್ಯಸಪ್ತಾಹ ಈ ಬಾರಿ ೧೦೦ನೇಯ ಸಂಚಿಕೆಗೆ ಕಾಲಿಟ್ಟಿದೆ!
ಪದ್ಯಪಾನದ ಯುವಕವಿಗಳಿಗೆ ಛಂದಸ್ಸು, ಅಲಂಕಾರಗಳನ್ನು ಪರಿಚಯಿಸಿ ಅಭಿಜಾತಪದ್ಯರಚನೆಯ ಮೊದಲ ಹೆಜ್ಜೆಯಿಡುವುದರಿಂದ ಪ್ರತಿ ಪ್ರಯತ್ನದಲ್ಲೂ ಸಂತತವಾಗಿ ಪೋಷಣೆಯನ್ನು ಕೊಡುತ್ತಾ ನಮ್ಮೆಲ್ಲರ ಸ್ಫೂರ್ತಿಯ ಚಿಲುಮೆಯಾಗಿರುವ ಶತಾವಧಾನಿ ಡಾ|| ಗಣೇಶರಿಗೆ ನಮನಗಳು. ಪದ್ಯಪಾನದಲ್ಲಿ ಆಸಕ್ತಿಯನ್ನು ತೋರಿ ಪದ್ಯರಚನೆಯಲ್ಲಿ ಭಾಗವಹಿಸುತ್ತಿರುವ ಕವಿಗಳಿಗೂ ಮತ್ತು ಪದ್ಯಪಾನದ ಪದ್ಯವನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪದ್ಯಾಭಿಮಾನಿಗಳಿಗೂ ನಮನಗಳು.
ಈ ಬಾರಿ ನಿಮ್ಮ ಇಷ್ಟದ ವಿಷಯದ ಬಗ್ಗೆ ಅದು ಯಾವುದಾದರೂ ಇರಬಹುದು ಇಷ್ಟದ ಛಂದಸ್ಸು, ಕವಿ, ಕಾವ್ಯ, ಶಿಲ್ಪ, ರಾಗ, ಕಾದಂಬರಿ, ತಾಣ, ಅನುಭವ… ಹೀಗೆ ನಿಮ್ಮ ಇಚ್ಛೆಯ ಯಾವುದೇ ವಿಷಯದಲ್ಲಿ ಅಲಂಕಾರಯುತ ಪದ್ಯ ಬರೆಯಿರಿ. ಪದ್ಯದ ಸಂಖ್ಯೆಗಳ, ಭಾಷೆಯ ಅಥವಾ ವಸ್ತುವಿನ ನಿರ್ಬಂಧವಿಲ್ಲ. ಈ ಮುಕ್ತಸಂಚಿಕೆಯಲ್ಲಿ ಅತಿ ಹೆಚ್ಚು ಪದ್ಯಗಳನ್ನು ಬರೆದು ಪದ್ಯಪಾನದ ಪದ್ಯೋತ್ಸವದಲ್ಲಿ ಭಾಗವಹಿಸಿರೆಂದು ಕೋರುತ್ತೇವೆ.
ಪದ್ಯಪಾನ ತಂಡ
ಈ ಸಮಸ್ಯೆಯ ಸಾಲನ್ನು ಪರಿಹರಿಸಿ:
ಬೀರಂ ಬೀರಂ ಬೀರಂ ಬೀರಂ