ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::
ಛಂದೋಬದ್ಧ ಪದ್ಯ ರಚನಾಸಕ್ತರಿಗೋಸ್ಕರ ಇನ್ನು ಕೆಲವು ಕಲಿಕೆಯ ಸಾಮಗ್ರಿಯನ್ನು ಪದ್ಯಪಾನದಲ್ಲಿ ಅಳವಡಿಸಲಾಗಿದೆ. ಇವು – ನರಸಿಂಹಾಚಾರ್ಯರು, ಕಾಳಿದಾಸನ ರಘುವಂಶದಿಂದ ಕನ್ನಡಕ್ಕೆ ಅನುವಾದಿಸಿರುವ ಎರಡು ಸರ್ಗಗಳು – “ದಿಲೀಪ ಚರಿತೆ” ಹಾಗು “ಅಜ ನೃಪ ಚರಿತೆ“. ಇವುಗಳಲ್ಲಿ ಪದ್ಯಗಳು ಸರಳ ಸುಂದರವಾಗಿದ್ದು, ಪದ್ಯ ರಚನಾಕಾರರಿಗೆ ಉತ್ತಮ ಸಾಮಗ್ರಿಯಾಗಬಹುದೆಂಬ ಭಾವದಿಂದ ಇಲ್ಲಿ ಹಾಕಿದ್ದೇವೆ.
ಇವುಗಳನ್ನು ಉಳಿದ “ಕಲಿಕೆಯ ಸಾಮಗ್ರಿ” ಪುಟಕ್ಕೂ ಕೂಡಿಸಲಾಗಿದೆ.
ರಾಮನಪೂಜೆ ಮೆರೆಯೆ ಶಿವರಾತ್ರಿಯು ಸೊಗಸೈ
ಕಂದಪದ್ಯದ ಉಳಿದ ಮೂರು ಸಾಲುಗಳನ್ನು ರಚಸಿ ಪೂರಿಸಿರಿ.
ನಿಮಗಿಷ್ಟವಾದ ಛಂದಸ್ಸಿನಲ್ಲಿ ಯಾವುದಾದರು ಇತರ ಭಾಷೆಯ ನಿಮಗಿಷ್ಟವಾದ ಪದ್ಯವನ್ನು ಅನುವಾದಿಸಿರಿ (ಉದಾ :: ಸಂಸ್ಕೃತದಿಂದ ಕನ್ನಡಕ್ಕೆ, ತೆಲುಗಿನಿಂದ ಸಂಸ್ಕೃತಕ್ಕೆ, ಅಂಗ್ರೇಜಿಯಿಂದ ಕನ್ನಡಕ್ಕೆ, ಇತ್ಯಾದಿ)
ದಯವಿಟ್ಟು ಮೂಲ ಪದ್ಯವನ್ನೂ ಬರೆಯಿರಿ.
Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ.
ನಿಮ್ಮಿಷ್ಟದ ಛಂದಸ್ಸನ್ನು ಆಯ್ದುಕೊಳ್ಳಿರಿ
ಈ ಚಿತ್ರಕ್ಕೆ ತಕ್ಕ ಪದ್ಯಬರೆಯಿರಿ(ನಿಮಗಿಷ್ಟವಾದ ಛ೦ದಸ್ಸಿನಲ್ಲಿ):
ತನ್ನಘಾತಿಸಿದನಂಪೊಗಳ್ದನಯ್ ||
ಛ೦ದಸ್ಸು – ರಥೋದ್ಧತಾ
ವಿನ್ಯಾಸ – ನಾನನಾನನನನಾನನಾನನಾ
Walk(ವಾಕ್), Run(ರನ್), Jump(ಜ೦ಪ್), Dive(ಡೈವ್) ಈ ಪದಗಳನ್ನು ಉಪಯೋಗಿಸಿ, ಗಜರಾಜನ ವರ್ಣನೆಯನ್ನು ಮತ್ತೇಭವಿಕ್ರೀಡಿತದಲ್ಲಿ ಮಾಡಿ. ಪದಗಳನ್ನು ನಿಜಾರ್ಥದಲ್ಲಿ(ಆ೦ಗ್ಲಭಾಷೆಯಲ್ಲಿ) ಬಳಸುವ೦ತಿಲ್ಲ.
ಮತ್ತೇಭವಿಕ್ರೀಡಿತದ ಪ್ರತಿಸಾಲಿನ ವಿನ್ಯಾಸ – ನನನಾನಾನನನಾನನಾನನನನಾ|ನಾನಾನನಾನಾನನಾ
ನಿಮಗಿಷ್ಟವಾದ ವಿಷಯದ ಬಗೆಗೆ, ಯಾವುದಾದರೂ ವರ್ಣವೃತ್ತದಲ್ಲಿ ಒ೦ದು ಪದ್ಯ ರಚಿಸಿ.