ಕೋಟಿ ಹಸಿರು ಕೋಟಿಯುಸಿರು ತಳೆವುವೆನಿತೊ ಬಗೆಯ ಹೆಸರು
ಸಾಟಿಯೆಂತು ಜಗದೆ ನಡೆವ ಜೀವಜಾತ್ರೆಗಂ ।
ನಾಟಿಗೊಳದೆ ಬೆಳೆದು ಬಣ್ಣವೊಗೆವ ಸೊಗದ ಪುಷ್ಪಪಾತ್ರ
ಮೇಟಿಗೆನುತೆ ಕಳೆವರಯ್ಯೊ ಕಳೆಯ ಕಳೆಯನುಂ ।।
ತಂತಾನೇ ಬೆಳೆದ, ಹೆಸರೇ ಇರದ “ಕಳೆ”ಗಿಡಗಳ ಸೊಗಸು(ಕಳೆ) ಮತ್ತು ವ್ಯವಸಾಯಕ್ಕಾಗಿ ಅವುಗಳ ನಾಶದ ಬಗೆಗಿನ ಕಳಕಳಿಯ ಪದ್ಯ

ಕುರುಚುಗಳ ನಡುವಿನೊಳ್ ಕರ್ಣಕುಂಡಲಧರಂ
ಸ್ಪುರಿಸೆ ನೀಲಾಂಬರದೆ ಪಂಚ ಪಾಂಡವರೊಡಂ ।
ಇರಲಾಗೆ ಕುಂತಿ ಕೃಷ್ಣೆಯು ಕೂಡೆ ಪಕ್ಕಿಯೊಲ್
ಮರಳಿ ನೆನಪಾದುದವರಜ್ಞಾತವಾಸವುಂ ।।
ಸುತ್ತ “ಕುರು”ಚಲು ಗಿಡಗಳು – ನಡುವೆ “ಕರ್ಣ”ಕುಂಡಲ / ನೀಲಾಂಬರ ಹೂ ಗಿಡಗಳು
ನೀಲಿ ಉಡುಗೆಯಲ್ಲಿ ಐದು ಹಕ್ಕಿ – ಪಂಚ ಪಾಂಡವರು / ಉಳಿದೆರಡು ಹಕ್ಕಿ – ಕುಂತಿ & ದ್ರೌಪದಿ
ಪಕ್ಕನೆ ಪಾಂಡವರ “ಅಜ್ಞಾತವಾಸ “ವನ್ನು ನೆನಪಿಸುತ್ತಿದೆ !!
ಧೂಳು-ಹೊಗೆ-ಶಬ್ದಗಳ ನಗರವಾಸದೆ ದಣಿದು
ತಾಳದೆಲೆ ಸಂಕಟವ ಪೋದೆ ವನಕಂ|
ಗಾಳಿಯಿಂ ಮನದ ಬೇನೆಯು ’ಮಾಯೆ’ ಕುಣಿಯಲುಂ (ಹೋದೆ)
ಕೇಳಲ್ಲಿ ನೋಡಿದೆಂ ಬರಿದೆ ’ಮಾಯೆ’!! (ಹಕ್ಕಿಯಂತೆ ಕಾಣುವ ಹೂವು)
bplgu5