ಶ್ರೀ ರಾ. ಗಣೇಶರ ಪದ್ಯ:
ಸೀಸ:
ಪುಣ್ಯಕೋಟಿಯ ಕಥೆಯನೊಂದು ಮುದಿದನವಲ್ಲಿ ಕರುಗಳ್ಗೆ ಕೂರ್ಮೆಯಿಂದೊರೆಯುತಿರಲು
ನೊಗದ ಭಾರಕೆ ನೊಂದ ಗೋಣುಗಳ ಕಥೆಯನ್ನು ಮತ್ತೊಂದೆಡೆಯೊಳೆತ್ತು ಕಥಿಸುತಿರಲು|
ಕರೆಯ ಬಂದಾಕೆಯಂ ಲೀಲೆಯಿಂ ಝಾಡಿಸಿದ ಮೋಜನಾ ತೊಂಡುದನಮೊರೆಯುತಿರಲು
ಹುಲ್ಲುಹುರುಳಿಗಳಲ್ಲಿ ಹುರುಳುತಿರುಳುಗಳಿಲ್ಲವೆಂದು ಘೂಂಕರಿಸುತಿರೆ ಗೂಳಿಯತ್ತಲ್||
ತೇಟಗೀತಿ:
ಕೊಟ್ಟಿಗೆಯ ನಡುವೆ ಗುಂಗಾಡು ಗುನುಗಿನಲ್ಲಿ
ಸದ್ದು ಸದ್ದೆಂದು ಬಾಲಮಂ ಬೀಸಿ ಬೀಸಿ|
ಪಶುಸಮೂಹಮದು ಸಂಭಾಷಣೆಗಳ ನಡುವೆ
ಮೆಲುಕುಹಾಕುತ್ತುಮಿರ್ಪುದೈ ಹಿಂಡಿತುಂಡಂ||
Two verses by Raghavendra Hebbalalu on Kali’s smile:
कालकाललयलास्यसमाप्तौ
नन्दिता नृतिमनोज्ञतया सा।
कालिका मुहुरपीक्षणकामा
हासवित्तमददन्नटराजे।।
At the end of the destroyer’s dance of dissolution,
She was pleased with the beauty of the dance.
Kaalii, desirous of seeing it again,
Gave the money of her smile to the king of dancers.
(नटराट् – नटराजे)
त्रिकालाव्याकृतः स्थाणुर् व्याकृत्यै याचितो यदा।
कालीहासस् तदोत्पन्नः पातु धात्वर्थदो मुदा।।
When the motionless Shiva, the one who is unmanifest in all three times was beseeched for vyAkaraNa,
Kaalii laughed then. May her laughter that gives meaning to dhaatus gladly protect.
ಶಶಿಕಿರಣ್ ರವರ ಪರಿಹಾರ:
ವಿಕತ್ಥನೋದ್ವರ್ಜಿತಮುದ್ಘವೃತ್ತಿಂ
ಜಿತಾರಿಷಟ್ಕಂ ಶಮಸಂಪದೀಡ್ಯಮ್|
ಬುದ್ಧಂ ನಿಭಾಲ್ಯೋಚಿತಮೇವಮಾಹು-
ರ್ಜಾಜ್ವಲ್ತಿ ವಜ್ರಂ ನ ಕದಾಪಿ ಲೋಕೇ||
ಸ್ವಪ್ರತಿಷ್ಠೆಯ ಲೇಶವೂ ಇಲ್ಲದ, ಅರಿಷಡ್ವರ್ಗವನ್ನು ಗೆದ್ದ, ಶಮವೆಂಬ ಸಂಪತ್ತಿಗೇ ಪೂಜ್ಯನಾದ ಬುದ್ಧನನ್ನು ಕಂಡವರು ಈ ಸಮುಚಿತವಾದ ಮಾತನ್ನಾಡಿದರು–ವಜ್ರವೆಂದೂ ಕಣ್ಣುಕೋರೈಸದು.
ಕಾಂಚನಾರವರ ಪರಿಹಾರ:
ಮಜ್ಜನಂಗೊಳುತೆ ಭಕ್ತಿಯಬ್ಧಿಯೊಳ್,
ಸಜ್ಜನಂ ನುಡಿವನಂತೆ, “ದೇವಿಯೀ|
ಬಿಜ್ಜೆಯಿಂದೊಗೆದ ವಕ್ತ್ರದಿಂ ಮಿಗಿಲ್
ಬಜ್ಜರಂ ಬೆಳಗದಿರ್ಪುದೆಂದಿಗುಂ||”
ರವೀಂದ್ರಹೊಳ್ಳರ ಪರಿಹಾರ:
ವಜ್ಜೆಯಾದ ನವಕೋಟಿದರ್ಪದೊಳ್
ಮಜ್ಜಿತಂ ಕೃಪಣಮಾನಿವಾಸನಯ್|
ಬಿಜ್ಜೆಯೊಂದೊಲಿಯೆ ದಾಸನಾಗಲಾ
ಬಜ್ಜರಂ ಬೆಳಗದಿರ್ಪುದೆಂದಿಗುಂ||
(ಮಾ=ಶ್ರೀ. ಶ್ರೀನಿವಾಸನಾಯಕನು ಪುರಂದರದಾಸನಾದ ಪರಿಹಾರ. ಒಂದು ಸ್ವಾರಸ್ಯ: ಬಿಜ್ಜೆ ಒಲಿಯೆ – ಅವಿದ್ಯೆ ಹೋಗಿ ವಿದ್ಯೆ ಎಂಬುದೊಂದು, ಆತನ ಮಡದಿಯ ಹೆಸರು ಸರಸ್ವತಿ ಎಂಬುದೊಂದು)
ವೀಣಾ ಉದಯನರ 2 ಪರಿಹಾರಗಳು:
जाज्वल्ति वज्रं न कदापि लोके
संतो महान्तो निवसन्ति यत्र।
इत्येव निश्चित्य मणीन् स्वदेशं
म्लेच्छा नयन्ति स्म नु भारतात् ते?!
ಸಂತ ಮಹಂತರು ನೆಲೆಸಿದ ಭಾರತದಲ್ಲಿ ವಜ್ರಗಳು ಬೆಳಗುವುದಿಲ್ಲ ಎಂದೇ ನಿಶ್ಚಯಿಸಿ ಮ್ಲೇಚ್ಛರು ನಮ್ಮ ಭೌತಿಕಸಂಪತ್ತನ್ನು ಸೂರೆಗೊಂಡು ತಮ್ಮ ದೇಶಕ್ಕೆ ಕೊಂಡೊಯ್ದರೇ?
रसस्वरूपस्य परात्मनः सा
भा हृद्गता चेत् प्रतिभा तदैव।
नान्तर्गता चेत् द्युमणेः प्रभा तत्
जाज्वल्ति वज्रं न कदापि लोके।।
ರಸಸ್ವರೂಪನಾದ ಪರಮಾತ್ಮನ ಕಿರಣ (ಅಥವಾ ಒಂದು ಕಿರಣವಾದರೂ) ಯಾರ ಹೃದಯಕ್ಕೆ ತಾಕುತ್ತದೋ/ತಾಕಿದಾಗಲೇ ವ್ಯಕ್ತಿ ಪ್ರತಿಭೆಯುಳ್ಳವನಾಗುತ್ತಾನೆ.(ಪ್ರತಿಭೆಗೆ reflect ಅಂತಲೂ ಅರ್ಥ). ಅಂತೆಯೇ, ಸೂರ್ಯನ ಪ್ರಭೆಯೇ ಇಲ್ಲದೆ ವಜ್ರಕ್ಕೆ ಪ್ರತಿಭೆ(reflection)ಯಿಲ್ಲ.
ಶಶಿಕಿರಣ್ ರವರ ಪರಿದ್ಯಗಳು:
ಪರಾನುಭವಸಾಕಲ್ಯಮಪರೋಕ್ಷತಯಾ ಯಯಾ|
ಪ್ರಸ್ತುತೀಕ್ರಿಯತೇ ಸ್ತೌಮಿ ತಾಮೂಹಾಂ ಪ್ರತಿಭಾತ್ಮಿಕಾಮ್||
ಪ್ರತಿಭಾರೂಪದ ಊಹೆಗೆ ನಮ್ಮ ವಂದನೆ. ಅದರಿಂದ ಪರತತ್ತ್ವದ ಅನುಭವವು (ಅಥವಾ ಬೇರೆಯವರ ಅನುಭವಗಳು) ಸಂಪೂರ್ಣವಾಗಿ, ಅಪರೋಕ್ಷವಾಗಿ ಪ್ರಸ್ತುತವಾಗುತ್ತವೆ.
ಶ್ರೇಯಸೇ ಭೂಯಸೇ ಭೂಯಾದಿಭವಕ್ತ್ರಸ್ಯ ಪೀನಸಃ /
ಜಗತಃ ಪಿತರೌ ಯೇನ ಸಮಭೂತಾಂ ಸಸಾಧ್ವಸೌ //
ಜಗನ್ಮಾತಾಪಿತೃಗಳ ಕಳವಳಕ್ಕೆ ಕಾರಣವಾದ ಗಣಪತಿಯ ಶೀತ ನಮ್ಮಗೆ ಶ್ರೇಯಸ್ಸನ್ನು ತರಲಿ.
ಭಗವಾನ್ನಿಜಭಕ್ತಾನಾಂ ಸ್ವಯಂ ರಕ್ಷಾಂ ಚಿಕೀರ್ಷತಿ /
ಇತ್ಯೇವಂ ಬೋಧಯಿತ್ರೇ ತೇ ಬಿಡಾಲಶಿಶವೇ ನಮಃ //
ಭಗವಂತ ತನ್ನ ಭಕ್ತರನ್ನು ತಾನೇ ಸ್ವಯಂ ರಕ್ಷಿಸುತ್ತಾನೆಂದು ತಿಳಿಸಿಕೊಟ್ಟ ಬೆಕ್ಕಿನ ಮರಿಗೆ ನಮಸ್ಕಾರ. (ಇಲ್ಲಿ ಮಾರ್ಜಾಲಕಿಶೋರನ್ಯಾಯ ವಿವಕ್ಷಿತ. ಹೇಗೆ ಬೆಕ್ಕು ತನ್ನ ಮರಿಗಳನ್ನು ತಾನೇ ಬಾಯಲ್ಲಿ ದೃಢವಾಗಿ–ಆದರೆ ಮೃದುವಾಗಿ–ಹಿಡಿದು ಅವುಗಳನ್ನು ಸುರಕ್ಷಿತಸ್ಥಳಕ್ಕೆ ಕೂಂಡೊಯ್ಯುವುದೋ ಹಾಗೆ ಭಗವಂತ ಭಕ್ತರನ್ನು ರಕ್ಷಿಸುತ್ತಾನೆ.)
ವೀಣಾ ಉದಯನರ ಪದ್ಯಗಳು:
विकल्पशतसामग्रीमब्धिबुद्धिषु विस्तृताम् ।
चातुरङ्गीमिमामूहामूहे कोहा भवद्गता? ।
ನೂರಾರು ವಿಕಲ್ಪಗಳೆಂಬ ಸಾಮಗ್ರಿಗಳನ್ನು(pawns), ಅಬ್ಧಿ(10^9)ಬುದ್ಧಿಗಳೆಂಬ ವಿಸ್ತಾರದಲ್ಲಿ(ಹಾಸು) ಹೊಂದಿರುವ ಈ ಊಹೆಯು ಚತುರಂಗವೇನೋ ಎಂದು ನನ್ನ ಊಹೆ, ನಿಮ್ಮದೇನು?
गजवक्त्रक्षुतं श्रुत्वा भीताः कैलासवासिनः।
करोनाशंकया माता कषायमकरोत् भृशम्।।
ವೀಣಾರವರ ಪರಿಹಾರ:
ಕ್ಷಿತಿಗಾ ಸಗ್ಗದಿನಿಳಿದೀ
ರತಿಪತಿಯೂಡೆ ಘೃತಸಿಕ್ತಭೋಜ್ಯಂಗಳಮೋ!
ಸುತನೋ ಬೆಣ್ಣೆಯ ಮುದ್ದೆಯೊ!
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
ಭೂಮಿಗಿಳಿದ ಮನ್ಮಥನಂತಿರುವ ಸುತನಿಗೆ ಚೆನ್ನಾಗಿ ಘೃತಭೋಜನವನ್ನು ಮಾಡಿಸಲು ಅವನು ಗುಂಡುಗುಂಡಗೆ ಬೆಣ್ಣೆಮುದ್ದೆಯಂತಾದ..
ಕಾಂಚನಾರವರ ಪರಿಹಾರ:
ಸುತನಿಂ ಕೊಂಡಾಯುಷ್ಯಮ
ನತಿಯಾಶೆಯೊಳಾ ಯಯಾತಿವಡೆವಂತೆಳಸಂ|
ಕೈತವಮಾದೊಡೆ ನೋಡೌ!
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ||
ಉಷಾರವರ ಪರಿಹಾರ-೧:
ಅತಿಶಯದಾಲೋಡನದೀ
ಗತಿಯೊಳ್ ಬೆಳ್ಪುಂಡೆಯೋಲುಗಲ್ ತೆರೆಯುಲಿಯೊಳ್|
ಕ್ಷಿತಿಜದೆ ತಾಂ ಕಡಲಣುಗಂ
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
ಘೃತ = ನೀರು, ಕಡಲಣುಗ = ಚಂದ್ರ, ಕಡೆದ ಸಾಗರದ ನೀರಿನಿಂದ ಬಂದ ಚಂದ್ರನು ಬೆಣ್ಣೆಯಂತ ಬಿಳಿಯ ಉಂಡೆ
ಉಷಾರವರ ಪರಿಹಾರ-೨:
ಕೃತಕೃತ್ಯಮಾದ ಚೌರ್ಯದ
ಕತದಿಂ ಗಡಮಬ್ಬೆಗಂತು ಜಗಮಂ ತೋರ್ದಾ-|
ಸುತಗಂ ಕಟುವಾಯ್ ಲಾಲಾ-
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
*ಲಾಲಾಘೃತ=ಲಾಲಾರಸ (ಸಾಮಾನ್ಯವಾಗಿ ಮಕ್ಕಳ ಜೊಲ್ಲನ್ನು ’ತುಪ್ಪ’ ವೆನ್ನುವ ವಾಡಿಕೆ ಅಲ್ಲವೇ?) ಕದ್ದುಮೆದ್ದ ಕಳ್ಳ ಕೃಷ್ಣನ ಬಾಯಿ ಬೆಣ್ಣೆಯಾದ ಕಲ್ಪನೆ
ರವೀಂದ್ರಹೊಳ್ಳರ ಪರಿಹಾರ:
ಜಿತದಿಂದಶ್ವಿನಿಗಳ್ ಪ-
ನ್ನತಿಕೆಯಿನೂಡಿಸೆ, ತ್ರಿಶಂಕುದೇಹಂ ದಿವ್ಯಾ-|
ಮೃತಸಂಪೋಷಿತದೈವೀ-
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
(ನವನೀತಮಪ್ಪ = ನವನ್+ಈತಂ+ಅಪ್ಪ ಎಂದೂ ಪದಚ್ಛೇದ ಮಾಡಬಹುದು)
ರವೀಂದ್ರಹೊಳ್ಳರ ಪದ್ಯ:
ಅಚ್ಚರಸಿತಟ್ಟೆಯಿದೊ ನೆಲ
ಗಚ್ಚಿರೆ ಸುರಶಾಪದಿಂದೆ ಟೆಂಠಣಿಸುತೆ ಬಂ
ದೊಚ್ಚಯದಿಂ ವರ್ತಿಸುತಿಳೆ
ಮೆಚ್ಚುವವೋಲ್ ನರ್ತಿಸುತ್ತೆ ನಭಕೇರ್ದಪಳಯ್||
ತಟ್ಟೆ ಎಂಬ ಅಪ್ಸರೆ ಸುರಶಾಪದಿಂದ ನೆಲ ಕಚ್ಚಿರೆ, ಟೆಂಠಣಿಸುತೆ(ವಿರೋಧಿಸು – ಈ ಪದ ತಟ್ಟೆ ಬಿದ್ದಾಗಿನ ಸದ್ದನ್ನು ಹೋಲುತ್ತದೆ) ಒಚ್ಚಯದಿಂದ (ಸ್ನೇಹದಿಂದ) ಸುತ್ತುತ್ತ, ಜಗ ಮೆಚ್ಚುವಂತೆ ನರ್ತಿಸುತ್ತ ಮತ್ತೆ ಆಕಾಶಕ್ಕೇರುತ್ತಾಳೆ)
ರವೀಂದ್ರಹೊಳ್ಳರ ಪದ್ಯ:
ಘನದೇವಸ್ಥಾನಂಗಳ-
ನನುವರ್ತಿಸಿ ದೈವಬಲದೊಳಾಗಮಿಸಿರಲಾಂ|
ಮನೆದೇವರ ಸನ್ನಿಧಿಯೊಳ್
ಮನವಂಜುವುದಾತನೆನ್ನನರಿಯನೆ ದಿಟದಿಂ||
(ದೇವರು ಹತ್ತಿರವಾದಷ್ಟೂ, ಅವನನ್ನು ‘fool’ ಮಾಡುವುದು ಕಷ್ಟ)
1) ಸುಧೀರ ಕೇಸರಿಯವರ ಪರಿಹಾರ:
काम-ज्या-ज्यायसीं वेणी मल्याल्यालीभिरीप्सितां।
युवा कर्षति जायाया निरर्थीकृतसायकाम्।|
2) ಶ್ರೀಮತಿ ಉಷಾರವರ ಪರಿಹಾರ:
ಅಡವಿಯೊಳ್ ಪಕ್ಕಿ ಪರಿವಾರಕುಣಿಸಿರೆ ಫಲವ
ಜಡೆಬಿಲ್ಲೆಯಂ ದಿಟದ ಪಕ್ಕಿಯೆನುತುಂ|
ಒಡೆಯ ಬಳಿಸಾರಲದೊ ಜಡೆ ಸಿಲುಕೆ ಹೆದೆಗಾಗ-
ಲೊಡನೆ ಹೌಹಾರ್ದುದೇಂ ಸೀತೆ ಕನಸೊಳ್?!
ಕಾಂಚನಾರ ಪರಿಹಾರ:
ಮರಗುವ ಕೆಲವಾತೊಳ್ ರಾಜಗೇಹಕ್ಕೆ ಕಾಡಿಂ,
ಭರತನೆ ಕರೆದೊಯ್ಯಲ್! ರಾಮನೊಪ್ಪುತ್ತೆ ಪೋದಂ|
ವರಪಿತನಜಪುತ್ರಂ ಸಾವನಪ್ಪಿರ್ಪುದಂ ತಾ
ನರೆಚಣದೊಳೆ ಕಾಣಲ್ ಚಿತ್ತನೇತ್ರಂಗಳಿಂದಂ!|
(ಶೋಕಭರಿತವಾದ ಭರತನ ಮಾತುಗಳೇ ರಾಮನನ್ನು ಅಯೋಧ್ಯೆಗೆ ಕರೆದೊಯ್ದಿತ್ತು.)