Welcome – ಸ್ವಾಗತ – स्वागतम्

 
[ವರ್ಣವೃತ್ತದೊಂದು ಮಾದರಿಯಾಗಿ ಸ್ವಾಗತ ಎಂಬ ಛಂದಸ್ಸಿನಲ್ಲಿ ರಚನೆ:]
ಪದ್ಯಪಾನಮಿದು ಕಾವ್ಯವಿಮಾನಂ
ಹೃದ್ಯಭಾವನಭಕೇರ್ವ ವಿಧಾನಂ|
ಚೋದ್ಯಮಲ್ತೆ ಮದಮೇರದ ಮಾನಂ
ಸದ್ಯಮೇ ಸುಕವಿಮೋದನಿಧಾನಂ||
[ स्वागतमिति वर्णवृत्तमेकम्।]
पद्यपानमिह काव्यविमान-
व्योमयानमुदितं रसमानम्।
चॊद्यमत्र मदमुक्तविधाने
साध्यमाशुकविमोदनिधानम्॥


[ಮಾತ್ರಾಜಾತಿಯ ಮಾದರಿಯಾಗಿ ಹಳಗನ್ನಡದ ಒಂದು ಕಂದ:]
ಛಂದಂಗಳ ಪರಿಪರಿಗಳ್
ಸಂದಿರಲಾಸವದ ಸವದ ಶುಚಿರುಚಿಯಿಂದಂ|
ಚಂದದ ಪಾತ್ರೆಗಳಂದಂ
ಬಂದೊದವದೆ ಸೊಗದ ಸಗ್ಗಮೀ ಕವಿತೆಗಳಿ೦?
[ मात्राजातिषु आर्यागीतिरिति वा स्कन्धक इति वा छन्दोनिदर्शनम्। ]
नानाविधवृत्तानां
पानकपात्रेषु पद्यपानमिदमिदम्।
आनीतं कवितानां
भावनया भाययन्तु विबु्धाननया॥

[ತ್ರಿಮೂರ್ತಿಗಣಬದ್ಧವಾದ (ಅಂಶಛಂದಸ್ಸೆಂದು ಈಚೆಗೆ ಕರೆಯಲ್ಪಡುವ) ನಡುಗನ್ನಡದ ಮಾದರಿಯಾಗಿ ಸಾಂಗತ್ಯ:]
ಸಾಂಗತ್ಯವಾಗಿಲೀ ಪದ್ಯಪಾನದೆ
ಸಾಂಗವಕ್ರೋಕ್ತಿ-ವ್ಯಂಜನೆಯು|
ಪೊಂಗಿರೆ ಭಾವನೆ, ಪದಗತಿ ಜಾರದ
ಪಾಂಗಿದು ಸುಕವಿಯೋಜನೆಯು!!
[ उपजातिषु वा उपजातिकल्पॆषु अनुष्टुप् श्लोकस्य अग्रताबूलबूलम्: ]

वक्रोक्तिव्यञ्जनाधीनं

पद्यपानं पदे पदे।

अस्खलद्गतिसंधानं

कवीनामिति विस्मितिः॥

 

 

 

  6 Responses to “Welcome – ಸ್ವಾಗತ – स्वागतम्”

  1. ಅಷ್ಟಾವಧಾನ ಅತಿಸುಲಭ

    ಶತಾವಧಾನ ಬಹುಸುಲಭ

    ಅಷ್ಟೋತ್ತರಶತಾವಧಾನವೂ ಸುಲಭ

    ಪತ್ನೀ ಅವಧಾನ ಎಂಬುದೊಂದುಂಟಯ್ಯಾ

    ಆ (ರ್) ಗಣೇಶನಿಂದಲೂ ಸಾಧ್ಯವಿಲ್ಲ ನೋಡಾ

    – ನೈಕಾವಧಾನೀ ಶ್ರೀರಾಮ ಡೊಂಗ್ರೆ

  2. I am a song writer and would like to post my songs in here. Please help me. I loading in the Facebook right now. There are about 200+ loaded.

  3. I am a song writer and would like to post my songs in here. Please help me. I am loading in the Facebook right now. There are about 200+ loaded.

  4. “ಹತ್ತುಜನಕುಪಕಾರ”

    ಮರೆಯದಿರು ಒಂದುದಿನ|
    ಬಿಡುವೆ ನೀನೀಜಗವ||
    ಮರೆತಾದರು ತಪ್ಪುಗಳ|
    ಮಾಡದಿರು ನನಕಂದ||

    ಸಾರಿರುವ ಗ್ರಂಥಗಳ|
    ಸಾರವರಿತರೆ ಚೆನ್ನ||
    ಸಾಕಷ್ಠು ಸಂಗತಿಗಳ|
    ಭಂಡಾರವಲ್ಲಿದೆ ಚಿನ್ನ||

    ಚಿನ್ನ ನಿನ್ನ ಬಾಳೆಂದೂ|
    ಚಿನ್ನದಂತಿರಲೆಂದು||
    ಹರಸಿ ಹಾರೈಸುವೆನು|
    ಈಹಾರೈಕೆ ಲಭಿಸುವುದು||

    ಸತ್ಯದ ನಡೆನುಡಿಯು|
    ಹತ್ತುಜನಕುಪಕಾರ||
    ಮಾಡುವ ಸಧ್ಗುಣವು|
    ತುಂಬಿರಲಿ ನನ ಕಂದ||

    ಕೆ. ವೆಂಕಟಪ್ಪ ಐತಾಂಡಹಳ್ಳಿ,
    ಪಾಂಡೇಲ್, ಕ್ಯಾಲಿಫ಼ೋರ್ನಿಯ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)