೧೨ – ಆದಿಪ್ರಾಸ

 

ಶತಾವಧಾನಿ ಡಾ||‌ ರಾ. ಗಣೇಶರ ಛಂದಸ್ಸು ತರಗತಿಯ ಹನ್ನೆರಡನೆಯ ಭಾಗ ಆದಿಪ್ರಾಸದ ಪ್ರಕಾರಗಳು ::

  9 Responses to “೧೨ – ಆದಿಪ್ರಾಸ”

  1. ಪ್ರಾಸ/ಗಣ ಗಳ ಬಗ್ಗೆ ಕೆಲವು ಸಂದೇಹಗಳು,
    ೧. “ಲಗಂ” ತಪ್ಪಿಸಲು ನಾಮಪದ ಹ್ರಸ್ವ ಮಾಡಬಹುದೇ?
    ಉದಾ: ಶತಾನೀಕ – ಶತನೀಕ ( ಸಂಧಿ ದೋಷ ನೋಡಬೇಕೆ?)
    ೨. ಒಂದು ಪದ್ಯದಲ್ಲಿ, (ಉದಾ: ಚೌಪದಿಯಲ್ಲಿ) ನಾಲ್ಕೂ ಸಾಲುಗಳಲ್ಲಿ ಒಂದೇ ಬಗೆಯ ಪ್ರಾಸವಿರಬೇಕೆ?
    ಅ. ಮೊದಲೆರಡು ಸಾಲು / ಕೊನೆ ಎರಡು ಸಾಲು ಬೇರೆ ಬೇರೆ ಪ್ರಾಸ ಇರಬಹುದೇ?
    ಉದಾ: ಅಂತು – ಬಂತು , ಅಂಕು – ಡೊಂಕು (ವೃಷಭ)
    ಆ, ತಾನು – ತನ್ನಿ , ಬಾನು – ಬನ್ನಿ (ಗಜ – ಹಯ)
    ಗಿಡ – ಕಾಡು – ಗುಡ್ಡ – ಗುಂಡು (ಸಿಂಹ – ಗಜ – ಹಯ – ವೃಷಭ ) ಹೀಗೆ ಬೆರಸುವಂತಿಲ್ಲ, ಅಲ್ಲವೇ?
    ಇ. ನ – ಣ (ಅಣ್ಣ – ಬಣ್ಣ), ತ – ದ (ತಂತು – ಬಂಧು), ಶ/ಷ – ಸ (ಶಿಶು – ಹಸು), ಲ – ಳ( ಕಲಕು – ಬೆಳಕು), ಟ – ಡ (ತಟ – ದಡ) ಆದಿಪ್ರಾಸ ಸರಿಯೇ?
    ೩. ನೋಡಾ – ಕಾಡಿನ (ಗುರು,ಗುರು – ಗುರು,ಲಘು ) – ಗಜ
    ಶಾಂತಿ – ಕಾಂತಾ ( ಗುರು,ಲಘು – ಗುರು,ಗುರು ) – ವೃಷಭ
    ನನ್ನ – ನನ್ನೀ (ಗುರು,ಲಘು – ಗುರು,ಗುರು) – ಹಯ
    ಈ ಪ್ರಾಸಗಳು ಸರಿಯೇ?
    ೪ . “ಹೊಸ / ನಡುಗನ್ನಡಕ್ಕೆ” ಹೊಂದುವ ಸುಲಭ ಛಂದೋಬದ್ಧ ಕಾವ್ಯ ಪ್ರಕಾರಗಳ (ತ್ರಿಪದಿ/ರಗಳೆ…) ನಿಯಮಗಳನ್ನ ತಿಳಿಸಿ.

    • ಉಷಾರವರೇ,
      ೧. ನಾಮಪದ ಹೃಸ್ವಮಾಡುವುದು ಸರಿಯಲ್ಲ. ಕೆಲವು ಮಹಾಕವಿಗಳು ಮಾಡಿದ್ದಾರದರು, ಅವು ಮೇಲ್ಪ೦ಕ್ತಿಯಾಗಬಾರದು.
      ೨, ೩. ಹೌದು ಒ೦ದೇ ಬಗೆಯ ಪ್ರಾಸ ವಿರಬೇಕು(ಇದು ಉತ್ಕೃಷ್ಟ ಮಟ್ಟ). ಸಡಿಲಿಸಲು ನಿಯಮವಿಲ್ಲ, ಪಾಲಿಸಲು ಮಾತ್ರ 🙂
      ೪. ನಮ್ಮ ಕಲಿಕೆಯ ಸಾಮಗ್ರಿ ಲಿ೦ಕ್ – http://padyapaana.com/?page_id=773 – ನಲ್ಲಿ ಕೊಟ್ಟಿದ್ದೇವೆ ನೋಡಿ.

  2. ಶರಭಪ್ರಾಸ ಮತ್ತು ಹಯ ಪ್ರಾಸ (ಒತ್ತಕ್ಷರ ) ಬಂದಾಗ ಪ್ರತಿ ಸಾಲಿನ ಮೊದಲಕ್ಷರ ಹ್ರಸ್ವವೇ ಇರಬೇಕೆಂದಾಗಲೀ ಅಥವಾ ದೀರ್ಘವೇ ಇರಬೇಕೆಂದಾಗಲಿ ನಿಯಮವುಂಟೆ.

    *ಪತ್ರೆಯಿಲ್ಲದ ವೃಕ್ಷ*
    (ಮುಕ್ತಕ)

    ಸ್ತೋತ್ರವಿಲ್ಲದ ಪೂಜೆ ಶಾಸ್ತ್ರವಿಲ್ಲದ ವಿಧಿಯು
    ಕ್ಷಾತ್ರವಿಲ್ಲದ ಯುದ್ಧ ಮಾಡೆ ಫಲವೇನು? |
    ಪುತ್ರರಿಲ್ಲದ ಯೋಗ ಭೋಕ್ತೃವಿಲ್ಲದ ಭೋಗ
    ಪತ್ರೆಯಿಲ್ಲದ ವೃಕ್ಷ ತಿಳಿಯೊ ಶಾಮ ||

    ಶ್ಯಾಮ ✍
    ಇದು ಅಪವಾದವೇ? ದಯಮಾಡಿ ತಿಳಿಸಿ

    • ಇದೇ ತಾಣದಲ್ಲಿರುವ ಕೊಂಡಿಯಲ್ಲಿರುವ(http://padyapaana.com/wp-content/uploads/2011/12/final-chandas.pdf) ಉದಾಹರಣೆಯ ಪ್ರಕಾರ ಅಂತಹ ನಿಯಮಗಳೇನಿಲ್ಲ. ಇಲ್ಲಿ ನೀಡಿರುವ ಉದಾಹರಣೆಯನ್ನು ಗಮನಿಸಿದರೆ ನಿಮ್ಮ ಸಂಶಯ ದೂರವಾಗಬಹುದು.(ಪುಟ ೭, ಶರಭಪ್ರಾಸದ ಉದಾಹರಣೆ ಹಾಗೂ ಶರಭ,ಹಯಪ್ರಾಸಗಳ ವಿವರಣೆಗಳನ್ನು ಗಮನಿಸಿ)
      ಅಂದಹಾಗೆ ನಿಮ್ಮ ಪದ್ಯ ಬಹಳ ಚನ್ನಾಗಿದೆ.

    • ಸಾಮಾನ್ಯವಾಗಿ ಹಯಪ್ರಾಸದಲ್ಲಿ ಆದ್ಯಕ್ಷರವು ದೀರ್ಘವಿರುವುದಿಲ್ಲ: ಸೊಕ್ಕು, ಹಗ್ಗ, ಹುಚ್ಚ, ಲಜ್ಜೆ, ತಟ್ಟೆ, ದಡ್ಡ, ಬಣ್ಣ, ಕತ್ತೆ, ಕದ್ದೆ, ಕನ್ನ, ಕಪ್ಪು, ಹಬ್ಬ, ಅಮ್ಮ, ಅಯ್ಯ, ಹಲ್ಲು, ಅವ್ವ, ದುಶ್ಶಾಸನ, ಬುಸ್ಸೆಂದು ಇತ್ಯಾದಿ. ಕ್ವಚಿತ್ತಾಗಿ ವಾಕ್ಕಾಯ, ವಾಗ್ಗೇಯ ಇಂಥವು ಇವೆ. ಆದರೆ ಶರಭಪ್ರಾಸದಲ್ಲಿ ಎರಡು ರೀತಿಯೂ ಇರಬಹುದಾಗಿದೆ: ವಕ್ರ-ಆಕ್ರಂದನ, ಪರ್ಯಾಯ-ಕಾರ್ಯ ಇತ್ಯಾದಿ. ಹೀಗಿದ್ದರೂ ಸಂಯುಕ್ತಾಕ್ಷರದ ಪೂರ್ವಾಕ್ಷರವು ಗುರುವೇ ಆಗುವುದರಿಂದ, ಮಾತ್ರಾದೃಷ್ಟಿಯಿಂದ ವ್ಯತ್ಯಾಸವಿಲ್ಲ. ಪದ್ಯಪಾನದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ.

  3. ತಮ್ಮ ಸ್ಪಂದನೆಗೆ ಅನಂತ ನಮಸ್ಕಾರಗಳು.

    ನನ್ನ ಪದ್ಯದ ಬಗ್ಗೆ ತಮ್ಮ ತುಂಬೊಲವಿನ ಮೆಚ್ಚುಗೆ ಸಂತೋಷವಾಯಿತು ಸರ್.
    ಧನ್ಯವಾದಗಳು

  4. ಧನ್ಯವಾದಗಳು ಸರ್ .ತಮ್ಮ ಆಮೂಲಾಗ್ರ ವಿವರಣೆಗೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)