ಮಹಾಕುಂಭ

 

  4 Responses to “ಮಹಾಕುಂಭ”

 1. ‘ಪಿಡಿಯಲ್ ಕೈತವಬ೦ಧಗಳ್ ವಿಷಯದಿ೦ ಸ್ವಜ್ಞಪ್ತಿನಾಶ೦ ಗಡಾ
  ಜಡದಿ೦ದಾವೃತನಲ್ತೆ ದೇಹಿ ಮುಳುಗಲ್ ಸ೦ಸಾರಘೋರಾಬ್ಧಿಯೊಳ್
  ತೊಡೆಯುತ್ತೇಳುತೆ ಜಾಡಿಸಲ್ಕೆ ಮುಸುಕ೦ ತೋರ್ಗು೦ ನಿಜ೦’, ಕು೦ಭದೊಳ್
  ಮಡಿಯ೦ ಗಯ್ಯುತೆ ಸಾಧುವೇಳ್ದ ಬಗೆಯೊಳ್ ಲೋಗರ್ಗೆ ಸ೦ದೇಶಮಯ್

 2. ನದಿಯಲ್ಲಿ ಒಬ್ಬನೇ ಸಾಧುವಿರುವ ಈ ಚಿತ್ರ ಖಂಡಿತ ಕುಂಭಮೇಳದ್ದಲ್ಲ.
  ಶಾಲಿನೀ||
  ಚಿತ್ರಂ ತಾನೇಂ, ಕುಂಭದೊಳ್ ಮೀವಸಾಧುಂ?
  ಯಾತ್ರಂ ಕೈಗೊಂಡಿರ್ಪರೈ ಕೋಟಿಸಂಖ್ಯರ್|
  ಮಾತ್ರಂ ತಾನೊರ್ವಾತ ಮಿಂದೇಳುತಿರ್ಪೀ
  ಕ್ಷೇತ್ರಂ ತಾನೇನಲ್ಲವೈ ಸಂಗಮಂ ಕೇಳ್||

 3. ಶಾಲಿನೀ||
  ಯೇsಪಾಂ ಪುಷ್ಪಂ ವೇದ ತೇ ಪುಷ್ಪವಂತಾಃ
  ಪೆಂಪಿಂದಿಂತುಂ ಸಾರ್ದಿರಲ್ ವೇದಮಂತ್ರಂ|
  ಪಾಪಂ ತೀರ್ಚಿರ್ಕುಂ ನದೀತೀರಮೊಂದೇ
  ಸೈಪಂ ತಾಂ ತ್ರೈಸಂಗಮಂ ಗೈವುದೆಂತೋ||

 4. ಪಾವನ ಗಂಗಾ ನದಿಯ ನಾದ ಝಳ ಝಳ
  ಭಕ್ತಿ ಪರವಶತೆಯ ಅಪೂರ್ವ ಕುಂಭ ಮೇಳ
  ಮೋಕ್ಷವನ್ನರಸಿ ಬಂದ ಸಾಧು ಸಂತ ಗಂಗಾ ಸ್ನಾನ
  ತ್ರಿವೇಣಿ ಸಂಗಮದಲಿ ಪರಮಾತ್ಮನಲಿ ಆತ್ಮ ಲೀನ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)