ದೂರದ ಗ್ರಾಮದಲ್ಲಿ, ಹೊಸದಾಗಿ ವಾಸಕ್ಕೆ ಬಂದ ಗೃಹಿಣಿ, ಇಲಿಗಳ ಕಾಟಕ್ಕೆ ಮಾರ್ಗವನ್ನು ಕಾಣದೆ ಖಿನ್ನಳಾಗಿದ್ದಾಗ, ಬಿಸಿಲು ಮಚ್ಚಿನಿಂದ ಇಳಿದು ಬಂದ ಮಾರ್ಜಾಲ ಪರಿಹಾರ, ಸಾಧ್ವಿಗೆ ಸಂಭ್ರಮ ತಂದಿತು.
ಎಲ್ಲರ ಪೂರಣಗಳೂ ಹಲಬಗೆಯಲ್ಲಿ ಚೆಲುವಾಗಿವೆ. ಚಂದ್ರಮೌಳಿಯವರ ಕೀಲಕಪದ “ಮಾರ್ಜಾರಂ” ತುಂಬ ಸುಸಂಗತವಾಗಿದೆ. ಇದೇ ನನ್ನ ಮನದಲ್ಲಿದ್ದದ್ದು. ಅವರ ಪೂರಣಭಾಷೆ-ಭಾವಗಳೂ ಸಲೆಸೊಗಸು. ಸೋಮನ ಅಬ್ಜಾರಂ ಕೀಲಕವೂ ಚೆಲುವಾಗಿದೆ. ವಿಶೇಷವಾಗಿ ಈ ವಿರಲಪ್ರಚುರಪದವು ತುಂಬ ಸೊಗಸು. ಇದನ್ನು ಹುಡುಕಿದುದಕ್ಕಾಗಿ ಅವರಿಗೆ ಮೆಚ್ಚುಗೆ ಸಲ್ಲಿಸಬೇಕು. ಆದರೆ ಸ್ಥಾವರವಾದ ಕೊಳವು ಸುಳಿಯಿತೆಂಬ ಜಂಗಮತ್ವದ(mobility) ಭಾವವನ್ನು ಇಲ್ಲಿ ಅದಕ್ಕೆ ಆರೋಪಿಸುವುದೆಂದರೆ ಸ್ವಲ್ಪ ಹಿತವಾಗದು. ಇಂಥ ಲೋಪವನ್ನು ಭಾಮಹನೆಂಬ ಆಲಂಕಾರಿಕನು ನ್ಯಾಯದೋಷವೆಂದು ಹೆಸರಿಸುತ್ತಾನೆ:-) . ಜೀವೆಂ ಅವರ ಬಜಾರ್ ಎನ್ನುವಕೀಲಕಪದವು ಸಲೆಸೊಗಸಾಗಿದೆ. ಈ ಸಮಸ್ಯೆಯ ಲಘುಭಾವವನ್ನು ಗಮನಿಸಿಕೊಂಡಾಗ ಸಂಚಾರಿಬಜಾರ ಎನ್ನುವ ಅರಿಸಮಾಸವು ಕ್ಷಮ್ಯವಾಗುತ್ತದೆ!! ಆದರೆ ಅವರ ಎರಡು ಪರಿಹಾರಗಳಲ್ಲಿಯೂ ಸಿಂಹಪ್ರಾಸವನ್ನು ಸಮಸ್ಯೆಯ ಗಜಪ್ರಾಸದೊಡನೆ ಸಂಕರಮಾಡಿರುವುದು ತಪ್ಪಾಗಿದೆ. ಇದನ್ನು ಸವರಿಸುವುದು ಅವರಿಗೆ ಬರಿಯ ಲೀಲಾಖೇಲ! ಕೊಪ್ಪಲತೋಟರ ಪರಿಹಾರವು ಸರ್ವವಿಧದಿಂದಲೂ ಅನವದ್ಯ, ಹೃದ್ಯ. ಭಾಷೆ-ಭಾವ-ಬಂಧಗಳೆಲ್ಲ ಸೊಗಸಾಗಿವೆ.
ಗಣೇಶ್ ಸರ್,
“ಸ್ಥಾವರವಾದ ಕೊಳವು ಸುಳಿಯಿತೆಂಬ ಜಂಗಮತ್ವದ(mobility) ಭಾವವನ್ನು ಇಲ್ಲಿ ಅದಕ್ಕೆ ಆರೋಪಿಸುವುದೆಂದರೆ ಸ್ವಲ್ಪ ಹಿತವಾಗದು”
ನನ್ನ ಉದ್ದೇಶವಿದ್ಧದ್ದು ಒಬ್ಬಾಕೆ ತ೦ಗಿಯ ಮದುವೆಗೆ೦ದು ತವರಿಗೆ ಬ೦ಡಿಯನ್ನೇರಿ ಹೊರಡುತ್ತಾಳೆ. ಬ೦ಡಿಯು ದೂರವನ್ನು ಕ್ರಮಿಸುತ್ತಾ ಬ೦ದ೦ತೆ (ಕೆಲಕಾಲದ ನ೦ತರ) ಆಕೆಗೆ ತನ್ನ ತವರೂರಮೂಲೆಯ ತಾವರೆಕೊಳ ಕ೦ಡು (ತವರು ಬ೦ದಿತೆ೦ದು) ಸ೦ಭ್ರಮಗೊಳ್ಳುತ್ತಾಳೆ.
ಇದರಲ್ಲಿ ಜ೦ಗಮವಾದ ಬ೦ಡಿಯಲ್ಲಿ ಕುಳಿತ ಆಕೆಯ ಕಣ್ಣಿಗೆ ಸ್ಥಾವರವಾದ ಕೊಳ ಸುಳಿಯಿತು ಎ೦ದು ಅರ್ಥೈಸಿದ್ದೇನೆ, ತಪ್ಪಾಗುತ್ತದೆಯೆ?
ಘೋರಬಿಸಿಲಿನೊಳ್ ಬಳಲಿರ
ಲೂರಜ ನಗಳು೦ ಜಗುಳ್ದುದುಮೊದಲ ಮಳೆಯು೦ | (ಜಗುಳ್ – ಬೀಳು)
ಭೋರೆನುತ ಹಳ್ಳ ಹೊಲದಿನಿ
ಜಾರ೦ ಸುಳಿಯಲ್ಕೆ ಸಾಧ್ವಿ ಸ೦ಭ್ರಮಗೊ೦ಡಳ್ || (ಆರ – ನೇಗಿಲನ್ನು ಹೊತ್ತ ಎತ್ತುಗಳ ಜೋಡಿ => ನಿಜ + ಆರ೦)
(ಜನರನ್ನು ಬಳಲಿಸಿದ್ದ ಅತಿಯಾದ ಬೇಸಿಗೆಯ ಕೊನೆಗೆ ಮಳೆಬ೦ದು ಹಳ್ಳಕೊಳ್ಳಗಳು ತು೦ಬಿ ಗದ್ದೆಯಲ್ಲಿ ಎತ್ತುಗಳಿಗೆ ನೇಗಿಲನ್ನು ಹೂಡಿ ಕೆಲಸ ಶುರುವಾಗಿದ್ದನ್ನು ಕ೦ಡು ಸಾಧ್ವಿ ಸ೦ಭ್ರಮಿಸಿದಳು)
ಕಲ್ಪನೆ ತುಂಬಾ ಚೆಲುವಾಗಿದೆ. ಇದು ತೀರ ಹೊಸತಾದ ಬಗೆಯೂ ಹೌದು. ಆದರೆ ಅರಿಸಮಾಸ ಮತ್ತು ಹಳಗನ್ನಡದ ವಿರಳತೆಗಳು ಇಲ್ಲಿ ದೂರವಾಗಬೇಕಿವೆ.
ಸಾಮಾನ್ಯವಾಗಿ ಸಮಸ್ಯೆಯ ಸಾಲಿನ ಭಾಷಾಪಾಕವನ್ನೇ ಪರಿಹಾರದಲ್ಲಿಯೂ ಅನುಸರಿಸುವುದು ಒಟ್ಟಂದದ ಪದ್ಯಶಿಲ್ಪಕ್ಕೆ ಒಳಿತು.
ಈಚೆಗೆ ಶ್ರೀಶ, ಕಾಂಚನ ಮತ್ತು ಸೋಮರು ಮಾಡಿದ ಪೂರಣಗಳು ತುಂಬಾ ಚೆಲುವಾಗಿವೆ.
ವಿಶೇಷತಃ ಹಜಾರ> ಅಣ್ಣಾ ಹಜಾರೆ ಮತ್ತು ಸಾವಿರ ಎನ್ನುವ ಬಳಕೆಗಳು ಬಲುಚೆಲುವಾಗಿವೆ.
ಜಾರ ಪದವನ್ನೇ ಬಳಸಿ ಕೀಚಕವಧೆಯ ಹಿನ್ನೆಲೆಯಲ್ಲಿ ಸೋಮನ ಪರಿಹಾರವಂತೂ ಸ್ವಲ್ಪ ಕೂಡ ಜುಗುಪ್ಸಾವಹವಾಗದೆ ರೂಪುಗೊಂಡಿದ್ದು, ಈನಿಟ್ಟಿನಲ್ಲೊಂದು ಮಾದರಿಯೆನ್ನಬಹುದು.
ಪ್ರಸಾದರೇ! ನಿಮ್ಮ ಪದ್ಯದ ಕಲ್ಪನೆ ದಿಟವಾಗಿ ಸ್ತುತ್ಯ. ಆದರೆ ಎರಡನೆಯ ಸಾಲಿನ ವ್ಯಾಕರಣ ಹಾಗೂ ಒಟ್ಟಂದದ ಭಾಷೆಗಲ ಒಪ್ಪವನ್ನು ಸ್ವಲ್ಪ ಸವರಿಸಿರಿ.
ಇಜಾರವು ಮೂಲತಃ ಭಾರತೀಯವೇ. ನಮ್ಮ ಪ್ರಾಚೀನಶಿಲ್ಪಗಳಲ್ಲಿ, ಕಾವ್ಯ-ಕೋಶಗಳಲ್ಲಿದು ಬಂದಿದೆ. ಊರುಕ, ಚಂಡಾತಕ ಇತ್ಯಾದಿ ಹೆಸರುಗಳಿವೆ.
ದಯಮಾಡಿ ಕಂದಪದ್ಯದ ಮೂಲಲಕ್ಷಣಗಲನ್ನು ಕುರಿತಿರುವ ಪಾಠಗಳನ್ನು ಮತ್ತೊಮ್ಮೆ ನೋಡಿ. ಅಲ್ಲದೆ ಪ್ರಾಸದ ಬಗೆಗಿರುವ ಮಾಹಿತಿಯನ್ನೂ ಗಮನಿಸಿರಿ. ಆಗ ನಿಮ್ಮ ಲೋಪಗಳು ನಿಮಗೇ ತಿಳಿಯಾಗುವುವು:-) ಮತ್ತೂ ಕಷ್ಟವಾದಲ್ಲಿ ನನಗೆ ನೇರವಾಗಿ ಫೋನಿಸಿ.
ನೀರಜಮುಖಿಯಾದಳ್ ಪಿಂ-
ಜಾರನ ಸತಿಯಂತು ರಾತ್ರಿಯಾಗಲ್, ಗೃಹದೊಳ್|
ತೀರಲ್ಕೆ ಕಜ್ಜಗಳು ಪಿಂ-
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್||
(ಪಿಂಜಾರ- ಹತ್ತಿಹಿಂಜುವವನು.)
ಓರ್ವ ಗೋಪಿಕಾಸ್ತ್ರೀಯಳನ್ನು ಕುರಿತು
ಅರಳಿದತಾವರೆಕಣ್ಗಳ
ಪೋರಂ ತನ್ನರಳುಮೊಗವ ತೋರಂ ಬಾರಂ
ಮರುಗುತ್ತಿರಲಾ ಗೋಪೀ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ದೂರದ ಗ್ರಾಮದಲ್ಲಿ, ಹೊಸದಾಗಿ ವಾಸಕ್ಕೆ ಬಂದ ಗೃಹಿಣಿ, ಇಲಿಗಳ ಕಾಟಕ್ಕೆ ಮಾರ್ಗವನ್ನು ಕಾಣದೆ ಖಿನ್ನಳಾಗಿದ್ದಾಗ, ಬಿಸಿಲು ಮಚ್ಚಿನಿಂದ ಇಳಿದು ಬಂದ ಮಾರ್ಜಾಲ ಪರಿಹಾರ, ಸಾಧ್ವಿಗೆ ಸಂಭ್ರಮ ತಂದಿತು.
ಘೋರವಿದಯ್ ಮೂಷಿಕಗಳ
ದಾರುಣ ಬಾಧೆಯ ಪರಿಷ್ಕರಣಕೇಂಮಾರ್ಗಂ?
ಸೂರಂ ದಿಟ್ಟಿಸುತಿರೆ ಮಾ-
ರ್ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
🙂 bekkina parihAra tumba chennAgide
ದೂರ೦ ಕ್ರಮಿಸಲ್ ತವರಿ೦-
ಗೇರಿರೆ ಬ೦ಡಿಯನು ತ೦ಗಿ ಮದುವೆಗೆ ತನ್ನಾ
ಊರ೦ ಸೂಚಿಪ ಸೊಗದ-
ಬ್ಜಾರ೦ ಸುಳಿಯಲ್ಕೆ ಸಾಧ್ವಿ ಸ೦ಭ್ರಮಗೊ೦ಡಳ್
ಆರ೦ = ಮೂಲೆ
ಅಬ್ಜಾರ೦=> ತಾವರೆಯ ಕೊಳ, ಊರಿನ ಒ೦ದು ಮೂಲೆಯಲ್ಲಿರುವ ತಾವರೆಯ ಕೊಳ
ತರಕಾರಿಗಳಂ ಕೊಂಡಿರೆ
ಮರೆತಳ್ಕರಿಬೇವುಶುಂಠಿಕೊತ್ತಂಬರಿಯಂ
ಮರಳುತ್ತಿರೆಸಂಚಾರಿಬ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ಸಂಚಾರಿ ಬಜಾರು – ತಳ್ಳುಗಾಡಿಯವನು
ಜೀವೆಂ – ಚೆನ್ನಾದ ಕಲ್ಪನೆ. ನಿಮಗೆ ಕೆಲವೊಂದು ದಕ್ಷಿಣ ಭಾರತೀಯ ತಿಂಡಿ ತಿನಿಸುಗಳ ಬಗ್ಗೆ ವಿಶೇಷ ಅಕ್ಕರೆಯಿರಬಹುದೆಂದು ಗುಮಾನಿ 🙂
ನನಗೆ ಎಲ್ಲಾ ತಿಂಡಿ ತಿನುಸುಗಳ ಬಗ್ಗೆ ವಿಶೇಷ ಅಕ್ಕರೆ! ಅದರಲ್ಲೂ ನಾನು ತಿನ್ನುವಂತಹದ್ದರಲ್ಲಿ 🙂 ನಿಮ್ಮ ಮೆಚ್ಚು ನುಡಿಯಿಂ ಧನ್ಯೋಸ್ಮಿ
ಎಲ್ಲರ ಪೂರಣಗಳೂ ಹಲಬಗೆಯಲ್ಲಿ ಚೆಲುವಾಗಿವೆ. ಚಂದ್ರಮೌಳಿಯವರ ಕೀಲಕಪದ “ಮಾರ್ಜಾರಂ” ತುಂಬ ಸುಸಂಗತವಾಗಿದೆ. ಇದೇ ನನ್ನ ಮನದಲ್ಲಿದ್ದದ್ದು. ಅವರ ಪೂರಣಭಾಷೆ-ಭಾವಗಳೂ ಸಲೆಸೊಗಸು. ಸೋಮನ ಅಬ್ಜಾರಂ ಕೀಲಕವೂ ಚೆಲುವಾಗಿದೆ. ವಿಶೇಷವಾಗಿ ಈ ವಿರಲಪ್ರಚುರಪದವು ತುಂಬ ಸೊಗಸು. ಇದನ್ನು ಹುಡುಕಿದುದಕ್ಕಾಗಿ ಅವರಿಗೆ ಮೆಚ್ಚುಗೆ ಸಲ್ಲಿಸಬೇಕು. ಆದರೆ ಸ್ಥಾವರವಾದ ಕೊಳವು ಸುಳಿಯಿತೆಂಬ ಜಂಗಮತ್ವದ(mobility) ಭಾವವನ್ನು ಇಲ್ಲಿ ಅದಕ್ಕೆ ಆರೋಪಿಸುವುದೆಂದರೆ ಸ್ವಲ್ಪ ಹಿತವಾಗದು. ಇಂಥ ಲೋಪವನ್ನು ಭಾಮಹನೆಂಬ ಆಲಂಕಾರಿಕನು ನ್ಯಾಯದೋಷವೆಂದು ಹೆಸರಿಸುತ್ತಾನೆ:-) . ಜೀವೆಂ ಅವರ ಬಜಾರ್ ಎನ್ನುವಕೀಲಕಪದವು ಸಲೆಸೊಗಸಾಗಿದೆ. ಈ ಸಮಸ್ಯೆಯ ಲಘುಭಾವವನ್ನು ಗಮನಿಸಿಕೊಂಡಾಗ ಸಂಚಾರಿಬಜಾರ ಎನ್ನುವ ಅರಿಸಮಾಸವು ಕ್ಷಮ್ಯವಾಗುತ್ತದೆ!! ಆದರೆ ಅವರ ಎರಡು ಪರಿಹಾರಗಳಲ್ಲಿಯೂ ಸಿಂಹಪ್ರಾಸವನ್ನು ಸಮಸ್ಯೆಯ ಗಜಪ್ರಾಸದೊಡನೆ ಸಂಕರಮಾಡಿರುವುದು ತಪ್ಪಾಗಿದೆ. ಇದನ್ನು ಸವರಿಸುವುದು ಅವರಿಗೆ ಬರಿಯ ಲೀಲಾಖೇಲ! ಕೊಪ್ಪಲತೋಟರ ಪರಿಹಾರವು ಸರ್ವವಿಧದಿಂದಲೂ ಅನವದ್ಯ, ಹೃದ್ಯ. ಭಾಷೆ-ಭಾವ-ಬಂಧಗಳೆಲ್ಲ ಸೊಗಸಾಗಿವೆ.
ಲೀಲಾಖೇಲವೇನೋ ನಿಜ, ಆದರದು ರಾಮಾಯಣದ ಕವಿಗಳ ಭಾರವನು ಹೊತ್ತು ಫಣಿರಾಯನಾಡಿದ ಲೀಲೆ ಅಷ್ಟೆ. 🙂 ಯಥಾಮತಿ ತಿದ್ದಿದ್ದೇನೆ. ಗುರುಪ್ರಸಾದೋ ಬಲವಾನಿತಿ ಮೇ ಮತಿಃ. ಧನ್ಯೋಸ್ಮಿ.
ಬಾರನೆ ತಾವರೆ ಕಣ್ಗಳ
ಫೋರಂ ಕರೆದೊಯ್ಯನೇಕೆ ರಾಸಕೆ ವಿರಹದ
ಭಾರಕೆ ಕುಸಿದಿರೆ ಗೋಪಿಯು
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ಹೀರೆಯಕಾಯಂ ಕೊಂಡಳು
ಕೀರೆಯ ಮರೆತಿರಲು ಮರಳಿ ಮನೆಯಿಂದಲನತಿ
ದೂರಂ ಬರೆ ಸಂಚಾರಿ ಬ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
‘ವಿರಹದ’ ಹಾಗೂ ‘ಅನತಿ’ ಎಂಬಲ್ಲಿ ಕೊನೆಗೆ ಗುರ್ವಕ್ಷರ ಕಡ್ಡಾಯವೆ?
ಗುರುಗಳ್ಕಡ್ಡಾಯಮಾಗಿರೆ ಮತ್ತಿನಿತು ಫಣಿಲೀಲೆಯಿಮಿದು ಸಿದ್ಧಮಾದುದು
ಬಾರನೆ ತಾವರೆ ಕಣ್ಗಳ
ಫೋರಂ ಕರೆದೊಯ್ಯನೇಕೆ ರಾಸಕೆ ಎನ್ನಂ
ಭಾರದಿ ಸುಯ್ದಳು ಗೋಪೀ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ಹೀರೆಯಕಾಯಂ ಕೊಂಡಿರೆ
ಕೀರೆಯ ಮರೆತಿರಲು ದಾಂಟಿ ಹೊಸ್ತಿಲ ಮನೆಯಿಂ
ದಾರಿಗಿಳಿಯೆ ಸಂಚಾರಿ ಬ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ವೆಂಕಟೇಶಾ, ಕ್ಯಾಲಿಫೋರ್ನಿಯಾದಲ್ಲೂ ಸಂಚಾರಿ ಬಜಾರ್ ಇದೆಯೇ? ೨೦೦೮ ರಲ್ಲಿ ನೀನು ಕಟ್ಟಿಗೆ ಒಲೆಯಲ್ಲಿ ಮಾಡಿದ ಅಡಿಗೆಯ ಊಟವನ್ನು ಹಾಕಿಸಿದ್ದನ್ನು ಈಗಲೂ ಜ್ಞಾಪಿಸಿಕೊಳ್ಳುತ್ತಿರುತ್ತೇನೆ.
ವಿರಳವಾಗಿ ಇವೆ, ಗಾಯತ್ರಿ. ಒಮ್ಮೆಯೋ ಇಮ್ಮೆಯೋ ನೋಡಿದ್ದೇನೆ ಅಷ್ಟೆ
ಸೌದೆಯಡಿಗೆಯದು characteristic ರುಚಿ; ಬೇರೆಲ್ಲಿಯೂ ಬರದು 🙂
“ರಾಸಕೆ ಎನ್ನಂ” ಎನ್ನುವಲ್ಲಿ ವಿಸಂಧಿದೋಷ ಬಂದಿದೆ:-)
ಇದನ್ನು ರಾಸಕೆನುತ್ತುಂ ಎಂದು ಸವರಿಸಿದರೆ ಸರಿಯಾದೀತು.
I give up!! 🙂
ಓದಿದಾಗ ಏಕೋ ಹಿತವಾಗಿ ಕೇಳಲಿಲ್ಲ but I couldn’t quite put my finger on it ಈಗ ತಿಳಿಯಿತು.
ನಿಮ್ಮ ಮೆಚ್ಚು ನುಡಿಯಿಂ, ನೀವಿತ್ತ ಅರಿವಿನಿಂ ಪ್ರೋತ್ಶಾಹದಿಂ ಧನ್ಯೋಸ್ಮಿ.
ಎಲ್ಲ ಚೆನ್ನಾಗಿದೆ. ಆದರೆ ಕಂದದ ಸಮಪಾದಗಳ ಕಡೆಯಲ್ಲಿ ಗುರುವೇ ಬರಬೇಕು; ಲಗುವಿನಿಂದ ಕೊನೆಯಾಗಬಾರದು. ಇದೊಂದನ್ನು ದಯಮಾಡಿ ಗಮನಿಸಿಕೊಂಡರೆ ಸಾಕು, ಇದೂ ನಿಮಗೆ ದರಲೀಲಾಖೇಲನವೇ!!
ಮೂರನೆಯ ಬಾರಿಗೆ ಲಘ್ವಂತವನ್ನು ತಿದ್ದಿದೆನಂದಿದ್ದೆ. ಪಾಠ ಈಗಲೂ ದುಷ್ಟವಾಗಿದೆಯೆ?
ಗಣೇಶರ ಉತ್ತರ ನಿಮ್ಮ ಪ್ರಶ್ನೆಗಿದ್ದಿರಬೇಕು. ನೀವು ತಿದ್ದಿರುವುದರಲ್ಲಿ ಸಮಪಾದಗಳು ಗುರುವಿನಿಂದಲೆ ಅಂತ್ಯಗೊಂಡಿವೆ.
ಗಣೇಶ್ ಸರ್,
“ಸ್ಥಾವರವಾದ ಕೊಳವು ಸುಳಿಯಿತೆಂಬ ಜಂಗಮತ್ವದ(mobility) ಭಾವವನ್ನು ಇಲ್ಲಿ ಅದಕ್ಕೆ ಆರೋಪಿಸುವುದೆಂದರೆ ಸ್ವಲ್ಪ ಹಿತವಾಗದು”
ನನ್ನ ಉದ್ದೇಶವಿದ್ಧದ್ದು ಒಬ್ಬಾಕೆ ತ೦ಗಿಯ ಮದುವೆಗೆ೦ದು ತವರಿಗೆ ಬ೦ಡಿಯನ್ನೇರಿ ಹೊರಡುತ್ತಾಳೆ. ಬ೦ಡಿಯು ದೂರವನ್ನು ಕ್ರಮಿಸುತ್ತಾ ಬ೦ದ೦ತೆ (ಕೆಲಕಾಲದ ನ೦ತರ) ಆಕೆಗೆ ತನ್ನ ತವರೂರಮೂಲೆಯ ತಾವರೆಕೊಳ ಕ೦ಡು (ತವರು ಬ೦ದಿತೆ೦ದು) ಸ೦ಭ್ರಮಗೊಳ್ಳುತ್ತಾಳೆ.
ಇದರಲ್ಲಿ ಜ೦ಗಮವಾದ ಬ೦ಡಿಯಲ್ಲಿ ಕುಳಿತ ಆಕೆಯ ಕಣ್ಣಿಗೆ ಸ್ಥಾವರವಾದ ಕೊಳ ಸುಳಿಯಿತು ಎ೦ದು ಅರ್ಥೈಸಿದ್ದೇನೆ, ತಪ್ಪಾಗುತ್ತದೆಯೆ?
ಪರವಾಗಿಲ್ಲ, ಅಂಥ ಪ್ರಮಾದವೇನಿಲ್ಲ. ಆದರೆ ನಾವಿಲ್ಲಿ ಕೂಡಿದಮಟ್ಟಿಗೂ ಸರ್ವವಿಧದಲ್ಲಿ ಅನವದ್ಯವಾದ ಪದ್ಯವನ್ನು ನಿರ್ಮಿಸುವ ಹವಣಿನಲ್ಲಿದ್ದೇವಲ್ಲವೇ! ಇದಕ್ಕಾಗಿ ಈ ಹಠಮಾರಿತನ ನನ್ನದು:-)
ಒಪ್ಪುತ್ತೇನೆ ಸರ್:)
ರವೀಂದ್ರಹೊಳ್ಳರಂ ಪದ್ಯಪಾನಕಂ ಮತ್ತೆ ತರ್ಪುದೇ|
ಕವೀದ್ರರೇ! ಗಡಕ್ಕುಂ ತಾಂ ಸಮಸ್ಯೆ ನಮಗೆಂದಪೆಂ!!
ಹೊಳ್ಳನೊಡನೆ ಮಾತಾಡಿದೆ
ಮುಳುಗಿರ್ಪ ಕಜ್ಜದೊಳ್ ಮುಗಿಸಲ್ಕಛೇರಿಯೊಳ-
ಗುಳಿದಿರ್ಪ ಹೊಣೆಗಾರಿಕೆಗಳಪಿಡಿದು
ಸೆಳೆಯುತಿರೆ ಭಾಧ್ಯತೆಯು ಹಗಲಿನೊಳು-ಇರುಳಿನೊಳು
ಸುಳಿಯಲಾಸ್ಪದವಿಲ್ಲ ಕಾವ್ಯತ್ವಕೆ
ಆದರೂ ಮು೦ದಿನವಾರ, ಬಿಡುವು ಮಾಡಿಕೊ೦ಡು ಬರೆಯುತ್ತೇನೆ ಎ೦ದಿದ್ದಾನೆ
ಬಿರುಬೇಸಗೆಯಬಿಸಿಲಿನಲಿ
ಉರಿಬೇಗೆಯಲಿಬೆವತು ಬಸವಳಿದಳ್
ಮರಳಿರಲುದಿನಕರನು ತಂಗಾಳಿ ಹ-
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ಇದು ನನ್ನ ಮೊತ್ತ ಮೊದಲ ಪ್ರಯತ್ನ, ತಪ್ಪುಗಳಿರುವುದೆಂದು ನಾ ಬಲ್ಲೆ. ತಿದ್ದಿ ಪ್ರೋತ್ಸಾಹಿಸಬೇಕೆಂದು ಹಿರಿಯರಲ್ಲಿ ಮನವಿ.
ಮಂಜುನಾಥರೆ – ಪದ್ಯಪಾನಕ್ಕೆ ಸ್ವಾಗತ. ಮೊದಮೊದಲ ನಡೆಯಲ್ಲಿ ಓಲಾಡುದುದು, ಎಡವುವುದು, ಎಲ್ಲಾ ಸಹಜವೇ.
ಕಂದ ಪದ್ಯಕ್ಕೆ ಸ್ವಲ್ಪ ಗಣಗಳ ವ್ಯತ್ಯಾಸವಾಗಿದೆ ::
೨ ನೆಯ ಸಾಲಿನಲ್ಲಿ ೪ ಗಣಗಳಿವೆ – ೫ ಇರಬೇಕು. ಎರಡನೆಯ ಸಾಲಿನಲ್ಲಿ
೩ ನೆಯ ಸಾಲಿನಲ್ಲಿ ೪ ಗಣಗಳಿವೆ – ೩ ಇರಬೇಕು.
ನೀವು ನೋಡಿಲ್ಲದಿದ್ದರೆ, ಕಂದ ಪದ್ಯದ ನಿಯಮಗಳು ಇಲ್ಲಿವೆ :: http://padyapaana.com/?page_id=438
ಇನ್ನು ಹಜಾರಂ ಎಂಬುವುದು ಪ್ರಥಮಾ ವಿಭಕ್ತಿಯಾಗುತ್ತದೆ (ಹಜಾರವು ಎಂಬರ್ಥ). ಸರಿಯಾಗಲು ಹಜಾರದೊಳ್, ಹಜಾರದಿ, ಹಜಾರದಲ್ಲಿ, ಎಂದೇನಾದರೂ ಆಗಬೇಕಾಗುತ್ತದೆ.
ತೊಂದರೆಯೇನೂ ಇಲ್ಲ. ಸರಿಪಡಿಸಲು ಪ್ರಯತ್ನಿಸಿ.
ತಪ್ಪುಗಳನ್ನೇ ಹುಡುಕಿದ್ದಕ್ಕೆ ಕ್ಷಮೆಯಿರಲಿ. 🙂
ದೋಷಗಳನ್ನು ತೋರಿಸಿಕೊಟ್ಟದ್ದಕ್ಕಾಗಿ ಮತ್ತು ನಿಮ್ಮಗಳ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ.
ನೀರಂ ನೋಡುತೆ ಸವತಿಯ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
ತೀರಿತು ಕಾಟಂ, ಸೊಕ್ಕಿನ
ಜಾರಿಣಿಗಿಂದಾದಶಿಕ್ಷೆ ತಂದಿತು ಸುಖಮಂ
[ಸಾದ್ವಿಯು, ಸವತಿಯ ಜಾರನು ಗಂಡನೆದುರು ಸುಳಿದು ಅವಳು ಸಿಕ್ಕಿಬಿದ್ದಳೆಂದು ಸಂಬ್ರಮಗೊಂಡಳು ಎಂಬರ್ಥ ತರಲೆತ್ನಿಸಿರುವೆ]
savatiya idea chennagide Ram:)
ಶ್ರೀರಾಮನ ಬಾಣಂ ಮೇ-
ಣೀ ರಾಮನ ನೂತ್ನಕಲ್ಪನೆಯ ವಾಗ್ಬಾಣಂ|
ಮೀರಿ ಚಮತ್ಕರಿಪುದಲಾ!!
ತೋರಿದಿರಯ್ ಸೊಗಸಿನೊಂದು ಪರಿಹಾರಪಥಂ||
ಘೋರಬಿಸಿಲಿನೊಳ್ ಬಳಲಿರ
ಲೂರಜ ನಗಳು೦ ಜಗುಳ್ದುದುಮೊದಲ ಮಳೆಯು೦ | (ಜಗುಳ್ – ಬೀಳು)
ಭೋರೆನುತ ಹಳ್ಳ ಹೊಲದಿನಿ
ಜಾರ೦ ಸುಳಿಯಲ್ಕೆ ಸಾಧ್ವಿ ಸ೦ಭ್ರಮಗೊ೦ಡಳ್ || (ಆರ – ನೇಗಿಲನ್ನು ಹೊತ್ತ ಎತ್ತುಗಳ ಜೋಡಿ => ನಿಜ + ಆರ೦)
(ಜನರನ್ನು ಬಳಲಿಸಿದ್ದ ಅತಿಯಾದ ಬೇಸಿಗೆಯ ಕೊನೆಗೆ ಮಳೆಬ೦ದು ಹಳ್ಳಕೊಳ್ಳಗಳು ತು೦ಬಿ ಗದ್ದೆಯಲ್ಲಿ ಎತ್ತುಗಳಿಗೆ ನೇಗಿಲನ್ನು ಹೂಡಿ ಕೆಲಸ ಶುರುವಾಗಿದ್ದನ್ನು ಕ೦ಡು ಸಾಧ್ವಿ ಸ೦ಭ್ರಮಿಸಿದಳು)
ಒಪ್ಪಿಸೆ ನವಪೂರಣಮಂ
ಚಪ್ಪರಿಸುವವೊಲ್ ರಸಜ್ಞರೆಲ್ಲರ್ ನೋಂತುಂ|
ತಪ್ಪಿದಿರಯ್ ಸೋಮಾ! ಅರಿ-
ದಪ್ಪುದು ಮತ್ತಾ ”ನಿಜಾರ”ದೊಳರಿಸಮಾಸಂ!!:-)
ಕಲ್ಪನೆ ತುಂಬಾ ಚೆಲುವಾಗಿದೆ. ಇದು ತೀರ ಹೊಸತಾದ ಬಗೆಯೂ ಹೌದು. ಆದರೆ ಅರಿಸಮಾಸ ಮತ್ತು ಹಳಗನ್ನಡದ ವಿರಳತೆಗಳು ಇಲ್ಲಿ ದೂರವಾಗಬೇಕಿವೆ.
ಸಾಮಾನ್ಯವಾಗಿ ಸಮಸ್ಯೆಯ ಸಾಲಿನ ಭಾಷಾಪಾಕವನ್ನೇ ಪರಿಹಾರದಲ್ಲಿಯೂ ಅನುಸರಿಸುವುದು ಒಟ್ಟಂದದ ಪದ್ಯಶಿಲ್ಪಕ್ಕೆ ಒಳಿತು.
ಅಕಟಕಟಾ…ದುಷ್ಮನ್ ಕಹಾ ಹೈ ಅ೦ದ್ರೆ ಬಗಲ್ಮೆ ಹೈ ಅ೦ತ…..ಅರಿಯನ್ನು ಅರಿಯದಾದೆನೆ….
ಇರಲಿ ಕಪ್ಪವೊ೦ದನೊಪ್ಪಿಸುವೆನೆಸೆದಿರುವೀ ತಪ್ಪಿಗೆ….
ಏರಿರ್ಪ ನಿತ್ಯಜೀವನ
ಧಾರಣೆಯ೦ ತಾ ವಿರೋಧಿಸಲ್ ಚಳುವಳಿಯ೦ |
ಸಾರಿರ್ದ ಜನರೊಳಣ್ಣ ಹ-
ಜಾರ೦ ಸುಳಿಯಲ್ಕೆ ಸಾಧ್ವಿ ಸ೦ಭ್ರಮಗೊ೦ಡಳ್ ||
ಸೋಮ ಹಾಗು ಗಣೇಶರ ಮೆಚ್ಚುಗೆಯಿಂದ ಪ್ರೇರಿತನಾಗಿ ಇನ್ನೊಂದು ಪರಿಹಾರ ::
ಏರಿದ ಯೌವನ ಭರದೊಳ್
ಮೀರಿದ ಗೆಳೆತನ ವದೆಂದು ಕೊರೆದಿರೆ ಮನ ಸಂ –
ಸಾರದೊಡೆ ನಲಿವ ಬಾಲ್ಯದ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್
[ಈಗಿನ ಸಾಧ್ವೀಮಣಿಗೆ Indiscretion of youth ನಿಂದಾಗಿ ಒತ್ತಡವಿತ್ತು. ಬಾಲ್ಯದ ಜಾರನು ಈಗ ಸಂಸಾರೊಂದಿಗನಾಗಿ ಸಂತಸದಿಂದಿರುವುದರಿಂದ ಈಕೆ ಸಂಭ್ರಮಗೊಂಡಳು ]
ಚೆನ್ನಾಗಿದೆ, ಇನ್ನೊ೦ದು ಹೊಸದೃಷ್ಟಿಕೋಣದ ಪೂರಣ:)
ರಾಮ್,
’ಸಾಧ್ವಿ’ ಪದಕ್ಕೆ ಅರ್ಥವೈಶಾಲ್ಯ ಇತ್ತಿರುವಿರಿ. Thanks for the pioneering etymology!
ವೀರಾವೇಶದಿ ಕಾದುಂ
ಪಾರಾಗಿ ಮರಳುವನೆಂದೆದುರು ನೋಳ್ಪಾಗಂ
ದೂರಾಗಿಸಿ ಭಯ, ಶಕುನ ಹ –
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್ ||
[ಹಜಾರಂ = ಸಹಸ್ರಂ]
ವೀರ೦ ಭೀಮ೦ ಸೆರಗ೦
ನಾರಿಯವೊಲ್ ತಾನುಪೊರ್ದು ರೋಷದೆ ಕಾಯಲ್
ಹಾರವ ಕೈಯೊಳು ಪಿಡಿಯುತ
ಜಾರ೦ ಸುಳಿಯಲ್ಕೆ ಸಾಧ್ವಿ ಸ೦ಭ್ರಮಗೊ೦ಡಳ್
ಅರ್ಥಸ್ಪಷ್ಟತೆ ಚೆನ್ನಾಗಿದೆ. ಜಾರ (ಕೀಚಕ) ಯಾರು, ಸಾಧ್ವಿ (ದ್ರೌಪದಿ) ಯಾರು ಎಂದು ಹೆಸರಿಸದಿದ್ದರೂ ತಿಳಿಯುವಷ್ಟು ಅಚ್ಚುಕಟ್ಟಾಗಿದೆ.
ಧನ್ಯವಾದಗಳು ಪ್ರಸಾದು:)
ಈಚೆಗೆ ಶ್ರೀಶ, ಕಾಂಚನ ಮತ್ತು ಸೋಮರು ಮಾಡಿದ ಪೂರಣಗಳು ತುಂಬಾ ಚೆಲುವಾಗಿವೆ.
ವಿಶೇಷತಃ ಹಜಾರ> ಅಣ್ಣಾ ಹಜಾರೆ ಮತ್ತು ಸಾವಿರ ಎನ್ನುವ ಬಳಕೆಗಳು ಬಲುಚೆಲುವಾಗಿವೆ.
ಜಾರ ಪದವನ್ನೇ ಬಳಸಿ ಕೀಚಕವಧೆಯ ಹಿನ್ನೆಲೆಯಲ್ಲಿ ಸೋಮನ ಪರಿಹಾರವಂತೂ ಸ್ವಲ್ಪ ಕೂಡ ಜುಗುಪ್ಸಾವಹವಾಗದೆ ರೂಪುಗೊಂಡಿದ್ದು, ಈನಿಟ್ಟಿನಲ್ಲೊಂದು ಮಾದರಿಯೆನ್ನಬಹುದು.
ಭಾರತಕ್ಕೆ ಸಾಗರದಾಚೆಯ ಯೂರೋಪಿನಿಂದ trouser (ಇಜಾರ) ಎಂಬ ಉಡುಗೆ ಬಂದ ಹೊಸತು. ಈ ಹಿಂದೆ ಬರಿಯ ಧೋತ್ರವನ್ನೇ ನೋಡುತ್ತಿದ್ದ ಹೆಂಡತಿ, ಗಂಡನನ್ನು trouserನಲ್ಲಿ ನೋಡಿ ಆನಂದಿಸಿದಳು
ಪೋರಂ ಯುವಕಂ ವೃದ್ಧಂ
ಯಾರುಂ ಎಂದುಂ ತೊಡುತ್ತಿರಲು ಧೋತ್ರವನುಂ|
ಕ್ಷೀರಾಂಬುಧಿಯತ್ತಣದಿನಿ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್||
ಪ್ರಸಾದರೇ! ನಿಮ್ಮ ಪದ್ಯದ ಕಲ್ಪನೆ ದಿಟವಾಗಿ ಸ್ತುತ್ಯ. ಆದರೆ ಎರಡನೆಯ ಸಾಲಿನ ವ್ಯಾಕರಣ ಹಾಗೂ ಒಟ್ಟಂದದ ಭಾಷೆಗಲ ಒಪ್ಪವನ್ನು ಸ್ವಲ್ಪ ಸವರಿಸಿರಿ.
ಇಜಾರವು ಮೂಲತಃ ಭಾರತೀಯವೇ. ನಮ್ಮ ಪ್ರಾಚೀನಶಿಲ್ಪಗಳಲ್ಲಿ, ಕಾವ್ಯ-ಕೋಶಗಳಲ್ಲಿದು ಬಂದಿದೆ. ಊರುಕ, ಚಂಡಾತಕ ಇತ್ಯಾದಿ ಹೆಸರುಗಳಿವೆ.
ಪೋರ-ಯುವ-ಹಿರಿಯರೆಲ್ಲ
ರ್ಜಾರುನೆರಿಗೆ ಧೋತ್ರವನ್ನುಡುತ್ತಿರಲೆಂದುಂ|
ಚಾರು ತೆರದಿನುಡುತರಸನಿ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್||
‘ಯುವ’ ಸಂಸ್ಕೃತಪದವೆ?
ಹೌದು; ಮೊದಲ ಸಾಲಿನಲ್ಲಿರುವಂಥ ಸಮಾಸವನ್ನು ಮಾಡುವುದು ಹಿತವೆನಿಸದು.
ಪೋರನ್ ಯುವಕನ್ ವೃದ್ಧನ್
ಜಾರುನೆರಿಗೆ ಧೋತ್ರವಲ್ತೆ ತೊಟ್ಟವರೆಂದುಂ|
ಚಾರು ತೆರದಿನುಟ್ಟರಸನಿ
ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್||
ಮೇಲಿನ ಗದ್ಯಭಾಗದಲ್ಲಿ ಒಂದು ದೋಷವಿದೆ. ತೋರಿಸಿದವರಿಗೆ ಬಹುಮಾನವುಂಟು.
ಇಜಾರ ನಮಗೆ ಯೂರೋಪಿನಿಂದ ಬಂದದ್ದಲ್ಲ. ಮಧ್ಯ-ಪ್ರಾಚ್ಯ ದೇಶಗಳಿಂದ ಬಂದದ್ದು. ನಾವು ತೊಡಲಿಲ್ಲ ಅಷ್ಟೇ.
ಮಧ್ಯಪ್ರಾಚ್ಯದ ನಾಡುಗಳಿಗೂ ಇಜಾರವು ಕುದುರೆಯಾಳ್ಗಳಾದ ಮಂಗೋಲಿಯನ್ನರ ಬಳುವಳಿಯಾಗಿ ಬಂದಿರಬೇಕೆಂದು ತೋರುತ್ತದೆ.
ತಿಳಿದವರು ಇತ್ತ ಬೆಳಕು ಚೆಲ್ಲಬೇಕು.
ನಮ್ಮಲ್ಲಿ ಈ ನಡುವೆ ‘ಸೈಕಲ್ ಕಚ್ಚೆ’ ಕಾಣುತ್ತಲೇ ಇಲ್ಲ.
“ನಮ್ಮಲ್ಲಿ ಈ ನಡುವೆ ‘ಸೈಕಲ್ ಕಚ್ಚೆ’ ಕಾಣುತ್ತಲೇ ಇಲ್ಲ.”
ಬಹಳ ದಿನಗಳಿಂದ ಸೈಕಲ್ ಕಚ್ಚೆ ಉಡುವ ವಿಧಾನದ ಬಗ್ಗೆ ಹುಡುಕುತ್ತಿದ್ದೇನೆ. ಯಾರಾದರೂ ಸಹಾಯ ಮಾಡಬಹುದೇ?
ಜಾರಂ ಸುಳಿವ ಸಮಸ್ಯೆ ಪರಿಹಾರದ ಪ್ರಯತ್ನ ಮಾಡಿದ್ದೇನೆ. ಛಂದದಂಗಳದಲ್ಲಿ ತೆವಳುತ್ತಿರುವ ಎನ್ನ ತಪ್ಪುಗಳ ತಿದ್ದಿ ದಾರಿ ತೋರಿರಿ ಅನುಭವಿಗಳ್ ತಾವೆಲ್ಲರುಂ
ತೇರ ಪರುವದಿ ಮಗುವು ಕೈ
ತೊರೆದೋಡ ತೊಡಗಲು ಭೀತಿಯಿಂ ನೇತ್ರಂ
ಅರಸುತಿರಲ್ ಬಾಲತೊಟ್ಟಿ
ಜಾರಂಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್ |
ದಯಮಾಡಿ ಕಂದಪದ್ಯದ ಮೂಲಲಕ್ಷಣಗಲನ್ನು ಕುರಿತಿರುವ ಪಾಠಗಳನ್ನು ಮತ್ತೊಮ್ಮೆ ನೋಡಿ. ಅಲ್ಲದೆ ಪ್ರಾಸದ ಬಗೆಗಿರುವ ಮಾಹಿತಿಯನ್ನೂ ಗಮನಿಸಿರಿ. ಆಗ ನಿಮ್ಮ ಲೋಪಗಳು ನಿಮಗೇ ತಿಳಿಯಾಗುವುವು:-) ಮತ್ತೂ ಕಷ್ಟವಾದಲ್ಲಿ ನನಗೆ ನೇರವಾಗಿ ಫೋನಿಸಿ.