May 192012
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ

ಬಾದಾಮಿಯ ಮಹಾನಟ

  70 Responses to “ಪದ್ಯಸಪ್ತಾಹ – ೨೧ – ಚಿತ್ರಕ್ಕೆ ಪದ್ಯ”

  1. Ram,
    The Badami tour has probably faded from your memory. Here is an extract from my report about the tour:
    At Ravalapadi is the most ancient Mahanata idol. The word ‘Nataraja’ is of a much later origin. Till then the anthropomorphic form of Shiva was known as Mahanata. The one in Ravalapadi dates back to 6 AD and is at least one century older to the one in Shiva-cave in Badami, and about six centuries earlier to the one in Chidambaram, Tamilnadu.
    ನಟರಾಜನೆಂಬರೆ ಮನುರೂಪಿ ಶಿವನನ್ನು
    ಸುಟಿಯಾದ ಮಾನಟನವನು|
    ನಟರಾಜನೆಂಬಾಭಿಧಾನವರ್ವಾಚೀನ
    ಭಟ ರಾಮಚಂದ್ರ ತಿದ್ದಯ್ಯೋ||

    • 3rd line spelling error (pronunciation is correct though)
      ನಟರಾಜನೆಂಬಭಿಧಾನವರ್ವಾಚೀನ

      • Honed:
        ನಟರಾಜನಲ್ಲವೀ ಮನುರೂಪಿ ಶಿವ ತಾನು
        ಸುಟಿಯಾದ ಮಾನಟನಿವನು|
        ನಟರಾಜನೆಂಬಭಿಧಾನವರ್ವಾಚೀನ
        ಭಟ ರಾಮಚಂದ್ರ ತಿದ್ದಯ್ಯೋ||

        • ಅತಿಸುಂದರಂ ಪದ್ಯಮತಿಬಂಧುರಂ ಸದ್ಯ-
          ಸ್ಸ್ತುತಿಪಾತ್ರಮಾಯ್ತಯ್ ಪ್ರಸಾದು!!
          ಕ್ರತುರೂಪಿ ಶಿವನ ನರ್ತನರೂಪಿ ಭವನ ಅಂ-
          ಕಿತಮೇ ಮಹಾನಟ, ಸ್ವಾದು!!!

    • ಪ್ರಸಾದು – ತಿಳುವಳಿಕೆಗೆ ಧನ್ಯವಾದ. ಅಂಕಿತವನ್ನು “ನಟರಾಜ” ನ ಬದಲು “ಮಹಾನಟ” ನೆಂದೇ ತಿದ್ದಿದ್ದೇನೆ.

  2. ಮಹಾಭರತಲೀಲೆಗೆನುತುಂ ಭರತದೊಳ್ ಮಲೆವ ಸಾಗರದ ಪಾಂಗೆನೆ ರಸಾಗರನೆ ದಲ್
    ವಿಹಾಸಮಿಹಿಕಾಮಹಿತಸತ್ತ್ವಗುಣಮಾತ್ರಮಿರೆ ತಾಮಸಕಲಾಪಮೆನುವಂಥ ಲಯಮಂ|
    ವಿಹೀನಮಿರೆ ಕಾಲಮತಿದೀನಮಿರೆ ದೇಶಮುಪದೇಶಮೆನೆ ಮೋದಸುಧೆಯೊಂದೆ ನಲಿಯಲ್
    ಮಹಾನಟನಿವಂ ಕರಣಮಾತ್ರಕರಣಂ ಸಗಿರಿಜಾಪ್ರಕರಣಂ ಕವಿಚಲುಕ್ಯವರಣಂ||

  3. ಗಣೇಶರ ಅಮೋಘ ಪದ್ಯದ ನಂತರ ಒಂದು ಲಘು ಪದ್ಯ 🙂

    ಪಿತನೋ ನರ್ತನದಿಂ ಸು-
    ಸ್ಥಿತಿಯೊಳ್ ಸಂರಕ್ಷಿಸಿರ್ಪನೆನ್ನಯ ಕಾಯಂ!
    ಸುತನೋ ಮೋದಕ ಮೋದಿದ
    ಕತದಿಂ ಬೊಜ್ಜ ಬೆಳೆಸಿರ್ಪುದೇನೀ ನ್ಯಾಯಂ

    ಗಣೇಶ, ವಿಘ್ನನಿವಾರಕ, ಪದ್ಯಪಾನಕೇನಾನುಂ ಬಂದಿರ್ದಾದೊಡಂ, ಮನ್ನಿಸೆನ್ನಮ್ ಸ್ವಾಮಿ. ತಮಾಶೆಗಂ ಪೇಳ್ದೆನೈಸೆ. 🙂

    • ರವೀಂದ್ರವರ, ತಮಾಶೆ ಎಂದರೇಂ ತಮದ ಆಶೆಯೇ? ಅಹುದಾದೊಡೆ, ನಿನ್ನ ’ನೈವಿಟಿ’ಗಂ ಮೆಚ್ಚಿ ಅವರ ಬದಲಿಗಾನೇ ನಿನ್ನಂ ಮನ್ನಿಸಿದೆಂ, ಪೋ.

    • ಹೊಳ್ಳ, ಪದ್ಯ ಬಹಳ ಹಿಡಿಸಿತು… ಹಾಗೆಯೇ ಪ್ರಸಾದು ಅವರ ಕೂಡ…

      ಹೊಳ್ಳ೦ ರಚಿಸಲ್ ಹಾಸ್ಯವ-
      ನುಳ್ಳಾ ಪದ್ಯಕೆ ಪ್ರಸಾದು ಟಿಪ್ಪಣಿ ಸೇರಲ್
      ಎಳ್ಳಷ್ಟೂ ಬಿಗುಮಾನವು
      ಘೊಳ್ಳೆನುವನಗೆಯೊಳುಳಿಯದೆ ಪೋಯ್ತಯ್ 🙂

  4. Raveendra, beautiful contrast!
    But, I think the word ‘ennaya’ in 2nd paada is incorrect, for it shall always be in 1st person. If mahanata dances, how will YOUR body be in good health? ಸ್ಥಿತಿಯೊಳ್ ಸಂರಕ್ಷಿಸಿರ್ಪ ತನ್ನಯ ಕಾಯಂ is the simplest correction. Thing of something better.

    • Prasad Sir, good catch. Some time we take too much liberty with haLegannada :(. Again your solution also is missing ‘n’. May be i can change that line to:
      ಪಿತನೋ ನರ್ತನದಿಂ ಸು-
      ಸ್ಥಿತಿಯೊಳ್ ಸಂರಕ್ಷಿಸಿರ್ಪನವನಾ ಕಾಯಂ!
      ಸುತನೋ ಮೋದಕ ಮೋದಿದ
      ಕತದಿಂ ಬೊಜ್ಜ ಬೆಳೆಸಿರ್ಪುದೇನೀ ನ್ಯಾಯಂ

    • ಪ್ರಸಾದರೆ, “ಸಂರಕ್ಷಿಸಿರ್ಪ” ಎಂದರೆ ನಾಮ ವಿಶೇಷಣವಾಯ್ತು. ಅಲ್ಲಿಗೆ, ವಾಕ್ಯ ಮುಗಿದಂತಾಗುವುದಿಲ್ಲ. ಸಂರಕ್ಷಿಸಿರ್ಪನ್ ಎಂದೇ ಹೇಳಬೇಕು. ಆವಾಗ, “ತನ್ನಯ” ಎನ್ನುವಂತಿಲ್ಲ. ತನ್ನಯ ತರಲೇ ಬೇಕಾದಲ್ಲಿ, “ಸ್ಥಿತಿಯೊಳ್ ರಕ್ಷಿಸಿಹನಲ್ತೆ ತನ್ನಯ ಕಾಯಂ!” ಎಂದು ಹೇಳಬೇಕು. ನಿಮ್ಮ ಹಾಸ್ಯೋಕ್ತಿಯ ಸಾಲಿಗೆ ಧನ್ಯವಾದಗಳು.
      ಸೋಮ, ಕಂದನಿಗೊಂದು ಕಂದನಂ ಕೊಟ್ಟುದಕೆ ಧನ್ಯವಾದಗಳು.
      ಗಣೇಶರೆ, ನನಗನಿಸುವಂತೆ, ಬೊಜ್ಜುಎನ್ನುವ ಪದವೇ ಕೊನೆಯ ಸಾಲನ್ನು ಕೆಡಿಸುತ್ತಿದೆಯೇ? ಇಲ್ಲಿ ’ಜ’ಗೆ ಕರ್ಕಶತ್ವವಿದಿಯೇ?”ಕತದಿಂ ಪೊಡೆಯ ಬೆಳೆಸಿರ್ಪುದೇನೀ ನ್ಯಾಯಂ” ಎಂದರೆ ಉತ್ತಮವೇ?

  5. ಮೆರಗ೦ ಸೂಸುತ ದೇಶಕಾಲಗಳನು೦ ಪಾರ್ವಾ ಕಲೋತ್ತು೦ಗವ೦
    ಕರಣ೦ಗಳ್ ಭರತಾಖ್ಯಮಿರ್ದಪಗಳ೦ ತೋರಲ್ಕಿದ೦ ತಾ೦ ಸಮೀ-
    ಕರಣ೦ ಗೈಯುತ ಭ೦ಗಿಗಳ್ ರಚಿಸಿದಾ ಒ೦ದೇ ಶಿಲಾಮೂರ್ತಿಯೊಳ್
    ಹರನಾ ಲೀಲೆಯ ರೌದ್ರಶಾ೦ತತೆಯನ೦ ಮೇಣ೦ಗಳ೦ ಕೆತ್ತುವೊಲ್

  6. ಅದೇಕೆ, ಯಾರಿಗೂ ನನ್ನ ಪದ್ಯದ ಛಂದಸ್ಸಿನ ಬಗೆಗೆ ಪ್ರಶ್ನೆಯಾಗಲಿ, ಕುತೂಹಲವಾಗಲಿ ಇನ್ನೂ ಮೂಡಿಲ್ಲ? ಏನು, ಯಾರಿಗೂ moodಇಲ್ಲವೇ?

    • from my limited knowledge i’m assuming that any verse having more than 27 syllables per pAda is classified as danDaka. so this might fall under that but i’m not sure.. but i liked the pattern though

      U_ (U U U _ ) x 7 per pAda

    • ಗಣೇಶರೆ, ನಾನು ನಿನ್ನೆಯೇ ಅದನ್ನೆ ಯೋಚಿಸುತ್ತಿದ್ದೆ. ಇದನ್ನು ಶ್ರೀಶನಿಗೆ ಹೇಳಿದ್ದೆ ಕೂಡ. ನಮ್ಮ ಪಟ್ಟಿಯ ಯಾವುದೇ ಛಂದಸ್ಸಿಗೂ ಇದು ಹೊಂದಿಕಯಾಗಿರಲಿಲ್ಲ. ಪೃಥ್ವಿಯೊಂದೇ ಜಗಣದಿಂದ ಆರಂಭವಾಗುವ ಸ್ವಲ್ಪ lengthy ಛಂದಸ್ಸು. ಇದು ಅದನ್ನೂ ಮೀರಿಸಿದೆ. ನಾನು ಇನ್ನೊಮ್ಮೆ ಪಟ್ಟಿಯನ್ನು ನೋಡಿ ದೂರವಾಣಿಸಬೇಕೆಂದಿದ್ದೆ. ಕುತೂಹಲವಿಲ್ಲವೆಂದು ತಿಳಿಯಬಾರದು.

    • ಇದ್ಯಾವುದು ಎಂದು ಎಲ್ಲರಿಗೂ ಅನ್ನಿಸಿಯೇ ಇರುತ್ತದೆ. ರೂಡಿಮೆಂಟರಿ ಯಾದಿಯಲ್ಲಿರುವ ವೃತ್ತಗಳನ್ನು ಮೊದಲು ಮುಗಿಸೋಣ ಎಂದು ಸುಮ್ಮನಾದೆ.

    • Ganesh Sir,

      Since there was a proper pattern and since all the Chandas listed in padyapaana is not yet mapped in my mind, I missed this observation:). Please let us know more about this form

      • ಏನಿಲ್ಲ; ಇಪ್ಪತ್ತಾರು ಅಕ್ಷರಗಳ ಮಿತಿಗೆ ಸಾಮಾನ್ಯವಾಗಿ ನಮ್ಮೆಲ್ಲ ಸಾಂಪ್ರದಾಯಿಕವರ್ಣ್ನವೃತ್ತಗಳ ಅಳತೆ ಮುಗಿಯುತ್ತದೆ. ಆದರೆ ಮಹಾನಟನ ಮಾಹಾತ್ಮ್ಯವನ್ನೂ ಆತನ ಅಷ್ಟಾದಶಭುಜಗಳ ಹಾಸು-ಬೀಸನ್ನೂ ಗಮನದಲ್ಲಿರಿಸಿಕೊಂಡು ಶಂಭುನಟನವೃತ್ತಕ್ಕೆ ಮತ್ತೂ ಒಂದು ಗುರು ಹಾಗೂ ಮೂರು ಲಘುಗಳನ್ನು ಮೊದಲಿಗೇ ಸೇರಿಸಿದ್ದೇನೆ. ಹೀಗಾಗಿ ಒಟ್ಟು ಇದು ಮೂವತ್ತು ಅಕ್ಷರಗಳ ದಂಡಕಗತಿಯ ಒಂದು ಬಂಧವಾಯಿತು.

    • ಇದೇನುಲಯಮೇವಿಲಯಮೇ ನಿರತಸಾಗಿಹುದು ಮಾಯವಿದುಪಾಯವಿದು ಬೊಮ್ಮನದೆನಲ್
      ಪುದಿರ್ದುಭವಭಾಂಡಗಳ ಸೃಷ್ಟಿಸಿಬಿಸುಟ್ಟನಟನಾರ್ಭಟವಿದೇನಿದು ಗಣೇಶಕವನಂ
      ಅದೆಷ್ಟುನಿಡಿದೈತ್ರಿದಶದಕ್ಕರ ನವೀನವೆನಲೀ ಜಸನ ಭಾಜಸನ ಭಾಜಸಗಳಿಂ
      ಮದೀಯಮತಿಗಂ ತಿಳಿಯದಂತಿದೆ ಪುರಾತನತೆಯೋ ಪೊಸತೊ’ರಾಗ’ ರ ಪ್ರಯೋಗವೆನಲೇಂ

      ಜಸನ ಭಾಜಸನ ಭಾಜಸ: ಜಗಣ,ಸಗಣ ಇತ್ಯಾದಿ..ಇದು ಜಗಣ, ಭಗಣ, ನಗಣಗಳು ಎರಡುಸಲ ಮತ್ತು ಸಗಣ ಮೂರುಸಲ ಬಂದಿರುವ ಚತುರ್ವಿಧಗಣಗಳ ದಶಗಣಯುಕ್ತ ತ್ರಿದಶಾಕ್ಷರ ವೃತ್ತ. ಇನ್ನು ದಂಡಕ ಸಾಮಾನ್ಯವಾಗಿ ತಗಣಗಳ ಅಸಂಖ್ಯಮಾಲೆಯಿಂದಲೇ ಪ್ರಸಿದ್ಧ. ಈ ವೃತ್ತವನ್ನು ಮಹಾಶಂಭುನಟನ ಅಥವಾ ಶಂಭುಮಹಾನಟನ ಎಂದು ಕರೆಯಬಹುದೇನೋ. ದಂಡಕವೆನ್ನಲಾರೆ.

      • ಧನ್ಯೋಸ್ಮಿ….ಈ ವೃತ್ತಕ್ಕೆ ಒಳ್ಳೆಯ ನಾಮಕರಣ ಮಾಡಿದ್ದೀರಿ. ಸಲೆ ಸೊಗಸಾಯಿತು. ಪದ್ಯದ ಬಗೆಗೆ ಹೇಳಿದರೆ ನನಗೇ ಆರತಿ ಮಾಡಿಕೊಂಡಂತಾದೀತು!

  7. ಬಡಿದಿರಲ್ ಮದ್ದಲೆಯ
    ನುಡಿಸುತಲಿ ಡಮರುಗವ
    ಎಡಪಾದ ಪಿಡಿದೆತ್ತಿ ಹರ ಕುಣಿಯಲು
    ಅಡವುಗಳ ಮೆಚ್ಚುತಲಿ
    ಪಡುತಿಹಳ್ ಶಿವೆ ಸೊಗವ
    ನಡೆಯಲಿಹ ನೈಪುಣ್ಯವಾನಂದಿಸಿ!

  8. ಗುರುವೀತ ಹಸ್ತಾಭಿನಯಕದೇಕಾಂತದಲಿ
    ಹಿರಿಮೆಯ ಮಹಾನಟನು ಬಾದಾಮಿಯಲ್
    ಕರಣಗಳ ಲಾಸ್ಯವನು ತೋರಿಪನು ನಟರಾಜ
    ನೆರೆದಿರುವ ಸಖಿಯರೊಡೆ ಮೆರೆದಿಹ ಚಿದಂಬರದವನ್

    ಗಣೇಶರೆ,
    ಮಹಾನಟನಿವಂ ಕರಣಮಾತ್ರಕರಣಂ ಸಗಿರಿಜಾಪ್ರಕರಣಂ ಕವಿಚಲುಕ್ಯವರಣಂ||

    – ಈ ಸಾಲು ಅರ್ಥವಾಗಲಿಲ್ಲ.ಹಾಗೆಂದ ಮಾತ್ರಕ್ಕೆ ಮಿಕ್ಕ ಮೂರು ಸಾಲುಗಳೂ ಅರ್ಥವಾಗಿದೆಯೆಂದಲ್ಲ. ನಿಮ್ಮ ವ್ಯಾಖ್ಯಾನವಿದ್ದರೆ ನನ್ನಂತವರಿಗೆ ಹೆಚ್ಚು ಪ್ರಯೋಜನವಾಗುತ್ತದೆ.
    ಹಾಗೆಯೇ ನಾನು ಅರ್ಥ ಮಾಡಿಕೊಂಡಿರುವ ಹಾಗೆ ಮಹಾನಟನ ಶಿಲ್ಪದಿಂದ ೮೧ ರೀತಿಯ ಮುದ್ರೆಗಳನ್ನು ಕಲಿಯಬಹುದು. ಕರಣಗಳಿಗೆ ಚಾರಿಗಳನ್ನೂ ತೋರಿಸಬೇಕಾಗುತ್ತದೆಯಲ್ಲವೆ? ಅದು ಚಿದಂಬರ, ತಂಜಾವೂರು,ಹೊಯ್ಸಳ ದೇವಸ್ಥಾನಗಳು ಮತ್ತಿತರ ಕಡೆ ಕಾಣಬರುತ್ತವೆಯಲ್ಲವೆ? ದಯವಿಟ್ಟು ಈ ಅನುಮಾನವನ್ನು ಪರಿಹರಿಸುವಿರೆಂದು ತಿಳಿದಿದ್ದೇನೆ.

    • ಧನ್ಯವಾದ. ನಿಮ್ಮ ಪ್ರಶ್ನೆಗೆ ವಿವರವಾದ ಉತ್ತರವನ್ನು ಮುಖತಃ ನೀಡುತೇನೆ:-)

  9. ವಾತಾಪಿಯ ಮಾನಟನೇ
    ಮಾತೀ ಕಂದನದುಪೇಕ್ಷೆ ಮಾಡದೆ ಪೇಳೈ;
    ನೀ ತಾಂಡವವೆರಡೇಕಾ
    ಲಿಂ ತೋರುವಿ ನಿನಗೆಯಷ್ಟು ಕೈಗಳದೇಕೈ?

    • Excellent!

    • ಸೊಗಸಾದ ಸ್ವೋಪಜ್ಞಕಲ್ಪನೆ. ಧನ್ಯವಾದಗಳು. ಆದರೆ ಸ್ವಲ್ಪ ವ್ಯಾಕರಣ ಸಡಿಲವಾಯಿತು. ಅಡ್ದಿಯಿಲ್ಲ, ಮರಳಿ ಯತ್ನವ ಮಾಡಿ:-)

      • ರಾಗರೆ, ಇದು ಸರಿಯಾದೀತೇ?

        ವಾತಾಪಿಯ ಮಾನಟನೇ
        ಮಾತೀ ಕಂದನದುಪೇಕ್ಷೆ ಮಾಡದೆ ಪೇಳೈ;
        ನೀ ತಾಂಡವವೆರಡೇಕಾ
        ಲೊಳ್ ತೋರುವೆ ನಿನಗೆಯಷ್ಟು ಕೈಗಳದೇಕೈ?:

        • ನಿನಗೆಯಷ್ಟು ಅನ್ನೋದಕ್ಕಿಂತಲೂ ನಿನಗವಷ್ಟು ಎಂದರೆ ಚೆಂದವಿದ್ದೀತಲ್ಲವೇ?

        • ಜೀವೆಂ,
          ಕಲೆಯಾರಾಧಕನ ಬಯಕೆ
          ಗೊಲಿದುಂ ಕನಸೊಳವತೋರ್ದ ಹಸ್ತಸಹಸ್ರಂ
          ಚಲದಿಂ ಪಿಡಿದುಂ ಮನದೊಳ್
          ಗೆಲದಿಂ ಕೊರೆದಿರ್ದುದೇ ಸಕಾರಣಮಕ್ಕುಂ

          (ಗುರುಗಳೇ, ಒಳ್ಳೆಯ ಪ್ರಶ್ನೆ. ನನಗನಿಸುವಂತೆ, ಇದು ಕಲಾಕಾರನ ಚಾತುರಿ. ಒಂದೇ canvas ನಲ್ಲಿ, ಹಲವು ಹಸ್ತವಿನಿಯೋಗಗಳನ್ನು ಸೆರೆ ಹಿಡಿದಿರುವುದು, ಒಂದು ಅದ್ಭುತ ತಂತ್ರವೆನಿಸುತ್ತದೆ. ಈ ಕಲಾಮಾಧ್ಯಮದಲ್ಲಿ, ನಿಶ್ಚಲತೆಯು ಒಂದು ಮಿತಿಯಾಗಿದ್ದರೂ, ಕಲಾಕಾರ ಆ ಮಿತಿಯಲ್ಲೇ ಒಂದು motion film ಅನ್ನು ಸೆರೆಹಿಡಿದಿದ್ದಾನೋ (by overlapping images) ಎನಿಸುತ್ತಿದೆ ನನಗೆ)

          • ರವೀಂದ್ರ,

            ಕಂಡರೆಣೆಕಾರ ಬಯಸಿದ,
            ಕಂಡ, ಕಡೆದನೆನಲು ಸಾಸಿರದ ಕರದಾಶಾ
            ಪಂಡಿತಗೇಕುಂಟಾಯಿತು?
            ಕೊಂಡಿಯನನುಸರಿಸಿ ನೋಡೆ ಕೊನೆ ಮೊದಲಿಲ್ಲೈ

            It’s turtles all the way down 😉

        • ಜೀವೆಂ-ರವರೆ, ನನಗೆ ತೋಚಿದಂತೆ ಪುನಾರಚಿಸಿದ್ದೇನೆ. ತಮ್ಮ ಅಭಿಪ್ರಯ ತಿಳಿಸಿ:

          ವಾತಾಪಿಯ ಮಾನಟ ಕೇಳ್
          ಮಾತಿದು ತರಳನದೆನುತ್ತುಪೇಕ್ಷಿಸದಿರು ನೀಂ|
          ಆ ತಾಂಡವವನ್ನೀರ್ಕಾ
          ಲೊಳ್ ತೋರುವೆಯಾದೊಡೇಕನಿತು ಕೈ ನಿನಗೈ||

          • ಪ್ರಸಾದು-ಅವರೆ, ಪದ್ಯ ಚೆನ್ನಾಗಿದೆ. ನನ್ನ ಪದ್ಯದ ಮಾತುಗಳಿಗೆ ಚೆನ್ನಾದ ಹಳಗನ್ನಡದ ಬಿಗಿಯಿತ್ತಿರಿ – ಧನ್ಯೋಸ್ಮಿ.

          • ಕೊನೆಯ ಪಾದದಲ್ಲಿ ಗಜಪ್ರಾಸ ಕಾಯ್ದುಕೊಳ್ಳುವ ಭರದಲ್ಲಿ ಆದಪ್ರಾಸವನ್ನೇ ಕೈಬಿಟ್ಟೆವಲ್ಲ! ತಿದ್ದಿದ್ದೇನೆ:

            ವಾತಾಪಿಯ ಮಾನಟ ಕೇಳ್
            ಮಾತಿದು ತರಳನದೆನುತ್ತುಪೇಕ್ಷಿಸದೆಲೆ ನೀಂ|
            ಆ ತಾಂಡವಕೀರ್ಕಾಲ್ಗಳ
            ಘಾತವು ಸಾಕೆಂದೊಡೇಕೆ ಬಹುಬಾಹುಗಳೈ||

    • ಸುಯೋಧನನುಮಾಪತಿಯೆ ಆಯುಧಗಳಂ ಕೊಡಲಿ ಕೈಯಲಗು ನೀಂ ಪಿಡಿದಿರಲ್
      ಲಯಾಧ್ವರಮನಾದರಿಸಿ ತಾಂಡವದ ಲೀಲೆಯನು ತೋಷದಲಿ ತೋರವೆ; ಹರಾ
      ಪ್ರಯೋಗದೊಳು ಹಾವದಲಿ ಕೈಗಳನು ಬೀಸುವೊಡೆ ನನ್ನ ಕಡೆ ನೋಟವಿರಿಸಯ್
      ದಯಾಳು; ಪದಿನೆಂಟು ಭುಜವಿಲ್ಲವೆನಗೀ ಮುಗಿದ ಕೈಯೆ ಗತಿ ನೀಗದಿರಿದಂ

  10. श्रान्तास्मि नैनमनुवर्तितुमस्मि पट्वी
    तद्गच्छ तातमिभवक्त्र वदोपरन्तुम् ।
    गौर्या वचस्तदधिगम्य सुतान्महेशो
    नाट्यार्धसंहृतनिजभ्रमिरस्तु भूत्यै ॥
    “I am tired and cannot keep pace with him. So, go Ganesha and tell your father to slow down” – Let Shiva who, hearing these words of Gowri from the mouth of his son, put a full stop to his fast-paced revolutions in the middle of his dance, bring us prosperity.

    • ಸದೃಶಂ ಕಿಲ ಶಂಕರಸ್ಯ ವಾಣೀ
      ಪ್ರಸರಂತೀ ಶ್ರುತಿಹಾರಿಣೀ ಚಕಾಸ್ತಿ|
      ಪರಮತ್ರ ವಿಚಿತ್ರಮೇವಮಾಸ್ತೇ
      ನಟನತ್ರೋಟನಕೋ ನು ಶಂಕರೋsಸೌ!!

      • Thanks Sir
        तादृशी किल गिरीन्द्रसुतायां
        प्रीतिरिन्दुशकलाभरणस्य ।
        तत्कृते स निजताण्डवलीलां
        त्रोटयन्नपि न याति विषादम् ॥

  11. Dear Shankar, Covering all aspects of the picture wonderfully.

  12. ಕಾರಣಾಂತರಗಳಿಂದ ಸಮಯದ ಅಭಾವದಲ್ಲಿ ವಿಶೇಷ ಪ್ರಯತ್ನ ನಡೆಸಲಾಗಲಿಲ್ಲ, ಕ್ಷಮಿಸಿ, ಒಂದೆರಡು ದಿನಗಳಲ್ಲಿ ಮತ್ತೆ ಪಾಕಪ್ರವೀಣರೊಂದಿಗೆ ಗುದ್ದಾಡಲು ಬರುತ್ತೇನೆ,
    ಜನಪದ [ ಅಂಶ ಛಂದಸ್ಸು] ಶೈಲಿಯ ಪ್ರಯತ್ನ :

    ನಟನೆಗೆ ಗುರುವಂತೆ ಸಟಸಟನೇ ಕುಣಿವ್ಯಂತೆ
    ಕಟಿಬದ್ಧನಾಗಿ ಆ ಕಲೆಯೊಳಗೆ |
    ಪಟವ ವಿಗ್ರಹವ ಸಿಂಗರಿಸಿ ನಮಿಸುವರಯ್ಯ
    ನಟರಾಜ ಕರುಣಿಸೋ ಕೌಶಲವ ||

  13. ಪದ್ಯಪಾನದಲ್ಲಿ ನನ್ನ ಮೊದಲನೇ ಪ್ರಯತ್ನ…

    ಕಾಲೆತ್ತಿ ಕೈ ಚಾಚಿ ತಲೆಗೂದಲನು ಹರಡಿ
    ಮಲೆಮೇಲೆ ರೋಷದಲಿ ಕುಣಿಯುತಿರಲೀಶ್ವರ
    ಗಣ-ನಂದಿ ನೂರಿರಲಿ ಗಣೇಶನೆ ಜೊತೆಗಿರಲಿ
    ಹಣೆಬಿರಿದರೆಲ್ಲವೂ ಚಣದಲೇ ನಶ್ವರ

    ಕೊ: ಹಂಸಾನಂದಿಯವರ ಮಾರ್ಗದರ್ಶನಕ್ಕೆ ಧನ್ಯವಾದಗಳು…

    • ಪದ್ಯಪಾನಕ್ಕೆ ಮೊದಲ ಹೆಜ್ಜೆ ಇರಿಸಿದ ನಿಮಗೆ ಎಲ್ಲ ಗೆಳೆಯರ ಪರವಾಗಿ ಹಾರ್ದಿಕಸ್ವಾಗತ.
      ನಿಮ್ಮೀ ಪದ್ಯದ ಕಲ್ಪನೆ ಸೊಗಸಾಗಿದೆ. ಆದರೆ ತುಸುಮಟ್ಟಿಗೆ ಛಂದಸ್ಸು ಹಳಿತಪ್ಪಿದೆ. ದಯಮಾಡಿ ನಮ್ಮ ಪಾಠಗಳನ್ನು ಎಚ್ಚರದಿಂದ ಗಮನಿಸಿರಿ. ನಿಮಗೆ ಹಂಸಾನಂದಿಯವರು ನಿಕಟವಾಗಿ ಸಿಗುವಂತಿದ್ದರೆ ಅವರ ನೆರವನ್ನು ಮತ್ತೂ ಪಡೆಯಿರಿ:-) ಇಲ್ಲವಾದರೆ ಇಲ್ಲಿಯ ಎಲ್ಲ ಗೆಳೆಯರೂ ಇದ್ದಾರೆ:-) ನಾನಂತೂ ಇದ್ದೇಇರುವೆ

    • ಗೆಳೆಯರೆ,
      ಮಲೆಮೇಲೆ ರೋಷದಲಿ ಕುಣಿಯುತಿರ ಲೀಶ್ವರ – ಇಲ್ಲಿ “ಲೀಶ್ವರ” ಒಂದು ಮಾತ್ರೆ ಕಡಿಮೆಯಾಗಿದೆ. ಲೀಶ್ವರಂ ಎಂದು ಮಾಡಬಹುದು ಗಣ-ನಂದಿ ನೂರಿರಲಿ ಗಣೇಶನೆ ಜೊತೆಗಿರಲಿ – “ಗಣೇಶ” ದಲ್ಲಿ ಲಘು-ಗುರು ಮಾತ್ರೆಯ ಆರಂಭದಲ್ಲಿ ಬರುವುದು ಮಾತ್ರಾ ಛಂದಸ್ಸಿಗೆ ಸೂಕ್ತವಲ್ಲ. “ಗಣಪನೂ” ಎಂದು ಮಾಡಬಹುದು. ಇನ್ನಷ್ಟು ಬರೆಯಿರಿ…

  14. ಶ೦ಕರ್ ಅವರ ಅತ್ಯದ್ಭುತವಾದ ಪದ್ಯದಿ೦ದ ಪ್ರೇರಿತನಾಗಿ ನನ್ನದೊ೦ದು ಪ್ರಯತ್ನ (ಸಿ೦ಗನ ಮು೦ದೆ ಮ೦ಗನಿಗೂ ಒ೦ದು ಸ್ಥಾನ ಕೊಡುವ ಈ ಪದ್ಯಪಾನಕ್ಕೆ ನಮಿಸುತ್ತ 🙂 )

    ಮುನಿದಾ ಪಾರ್ವತಿಯ೦ ತಾ೦
    ಪಿನಾಕಿ ರಮಿಸಲ್ಕೆ ಕರಣಗಳನ೦ ತೋರಲ್
    ತನಗು೦ ಬರ್ಪುದು ನಾಟ್ಯವ-
    ದೆನುತಲಿ ಹೆಜ್ಜೆಯನು ಗಣಪನಿಟ್ಟ೦ ಮುಗ್ಧ೦

    • ಸೋಮಂ ಕಟ್ಟಿದನೊಂದು ಕಂದಮದರೊಳ್ ಬಾಲೇಭವಿಕ್ರೀಡಿತಮ್

      ಚೆನ್ನಾಗಿದೆ, ಸೋಮ.

      • ಧನ್ಯವಾದಗಳು ಜೀವೆ೦ 🙂

      • very beautiful comment, more cute than the dance of ganapati!!

        • credit ಎಲ್ಲವೂ ಪುಟ್ಟ ಗಣಪತಿಯ ಆಟದ ಚಿತ್ರವನ್ನು ಮನಸ್ಸಿಗೆ ತಂದು ಕೊಟ್ಟ ಸೋಮ ಅವರಿಗೆ ಸಲ್ಲಬೇಕು; ಹಾಗೆಯೇ ಮತ್ತೇಭದ ಕೆಲ ಗಣವಿನ್ಯಾಸವನ್ನು ಕಂಡದಲ್ಲಿ ಅಳವಡಿಸಿದ್ದಕ್ಕೂ.

    • Soma, Beautiful..cute dance and cute poem. I guess Ruchira also share the source of imagination? 🙂

  15. लालितगङ्गाप्रसरा जयति पदन्यासचतुरता शम्भोः ।
    कवितिलक सोमशेखर तवापि लालितसरस्वतीप्रसरा ॥
    O Somashekhara, adornment of poets, Shiva’s dance is matched by your poesy. The former allows Ganga to flow unbridled and the latter does the same to Sarasvathi

    (पदन्यासचतुरता could mean either dance or poesy)

    • ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ೦ಕರ್ :),

      ನಿಮ್ಮ ಪದ್ಯ ಓದಿದ ಮೇಲೆ ಧನ್ಯೋಸ್ಮಿ ಎ೦ದು ಹೇಳುವುದಕ್ಕೂ ಸ೦ಕೋಚವಾಗುತ್ತಿದೆ.

  16. ಛಲರುದ್ರಂಗಲ್ಲದೆಲನುಜನಿಗಂ
    ಬಲಭದ್ರಂಗೆ ತರವನಿತು ತೋಳ್|
    ಕೆಲ ಭದ್ರಾಂಗನೆಯರ ವೆರಸಿ ಪಿಡಿಯೆ,
    ಬಲು ಛಿದ್ರಂ ಗೈಯಲು ಖಲರಂ||

  17. Variants:
    1) ಛಲರುದ್ರಂಗಲ್ಲದೆಲನುಜನಿಗಂ
    ಬಲಭದ್ರಂಗೆ ತರವನಿತು ತೋಳ್|
    ಕೆಲ ಭದ್ರಾಂಗೆಯರೊಳ್ವೆರೆತಾಡಲ್
    ಬಲು ಛಿದ್ರಂ ಗೈವರ ಕಾಡಲ್||

    2) ಛಲರುದ್ರಂಗಲ್ಲದೆಲನುಜನಿಗಂ
    ಬಲಭದ್ರಂಗೆ ತರವನಿತು ತೋಳ್|
    ಕೆಲ ಭದ್ರಾಂಗನೆಯರ ನೇರ್ಪಿಡಿಯಲ್ (3 words here; not 2!)
    ಬಲು ಛಿದ್ರಂ ಗೈವರ ಬಡಿಯಲ್||

    • ಪ್ರಸಾದ್ ಅವರ ಹಳಗನ್ನಡದ ಹದ ಮುದ ತರುವಂತಿದೆ. ಆದರೆ ಮೊದಲ ಸಾಲಿನಲ್ಲಿ ಸ್ಪಷ್ಟತೆ ಕಾಣಲಿಲ್ಲ. ಹಾಗೆಯೇ ಮೂರನೆಯ ಸಾಲಿನಲ್ಲಿಯೂ!
      ಪದಂಗಳರ್ಥಂ ತೊಡಕಾಗೆ ನೋಳ್ಪೆವಾಂ
      ಸದಾ ನಿಘಂಟುವ್ರಜಮಂ ಮುಗುಳ್ ಪುರುಳ್|
      ಪದೇ ಪದೇ ಕ್ಲೇಶಮನೀಯಲೇತರೊಳ್
      ತ್ವದೀಪ್ಸೆಯಂ ಕಾಂಬುದೊ ಕಾಣೆನಾಂ ಸಖಾ!!:-)

  18. ‘ಛಲರುದ್ರ’ನಿಗಲ್ಲದೆ, ಇಷ್ಟು ತೋಳುಗಳು ಬಲಭದ್ರನ ಅನುಜನಾದ ಕೃಷ್ಣನಿಗೆ ತರವು – ತನ್ನ ಹಲವು ಅಂಗನೆಯರನ್ನು ಒಟ್ಟಿಗೆ ಅಪ್ಪಲು ಹಾಗೂ ಅಸಂಖ್ಯ ರಾಕ್ಷಸ/ ಕುರುಗಳನ್ನು ಸದೆಬಡಿಯಲು. ಶಿವನಿಗೆ ಈ multitasking ಇಲ್ಲ. ಒಮ್ಮೆ ಒಬ್ಬ ರಾಕ್ಷಸನನ್ನು ಕೊಂದರೆ ಅವನ ಕೆಲಸವಾಯಿತು. ಉಳಿದ ಸಮಯದಲ್ಲಿ ತಾಂಡವ/ ಲಾಸ್ಯಗಳನ್ನು ಮಾಡಿಕೊಂಡಿದ್ದುಬಿಡುತ್ತಾನೆ.
    ನೇರ್ಪಿಡಿಯಲ್ = ನೇರ್ಪಾಗಿ ಪಿಡಿಯಲ್ or ನೇರಾಗಿ ಪಿಡಿಯಲ್
    ಅನುಜನಿಗಂ ಬಲಭದ್ರಂಗೆ = ಬಲಭದ್ರನ ಅನುಜನಿಗೆ ಎಂದು ಆಗಬಲ್ಲದೆ?

    • ಅಂಗನೆಯರನ್ನಪ್ಪೆ ಕೈಗಳಿದ್ದರೆ ಸಾಕೆ?
      ಶೃಂಗಾರ ಭಂಗವರ್ಪುದು ಸಾಜಮೈ
      ಸಂಗವನನೇಕರಲಿ ಮಾಡೆ ಕೃಷ್ಣನವ ಪೂ –
      ರ್ಣಾಂಗದ ಪ್ರತಿಮೆಗಳ ಸೃಜಿಸಿರ್ಪನೈ

  19. Lo!

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)