Aug 262012
 

ಈವಾರಕೇನು? ಪೂರಣ
ಕಾವ ಸಮಸ್ಯೆ ಯಿರದೇನು? ಎನ್ನುತ ನೋಳ್ಪಾ
ನೀವಿರುವಿರೆಂದು ತಂದೆನ್ ::
ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್” –

ಸಮಸ್ಯಾ ಪಾದವನ್ನುಪಯೋಗಿಸಿ ಕಂದ ಪದ್ಯವನ್ನು ಪೂರೈಸಿರಿ

  56 Responses to “ಪದ್ಯಸಪ್ತಾಹ – ೩೫ – ಸಮಸ್ಯೆ”

 1. ಆವುದು ಸಮಸ್ಯಮಿಹುದಯ್?
  ನಾವರಿಯೆವು ಸಾಲಿನೊಳ್ಗೆ ಸೂನೃತವುಮಿರಲ್!!!
  ಬೇವು೦ ನಿಮ್ಬವದಿರಲ್ಕೆ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

  • correction:
   ಆವುದು ಸಮಸ್ಯಮಿಹುದಯ್?
   ನಾವರಿಯೆವು ಸಾಲಿನೊಳ್ಗೆ ಸೂನೃತನುಡಿಯೊಳ್!!!
   ಬೇವುಮದಲ್ತೇ ನಿಮ್ಬ೦
   ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

  • ಸೋಮ,

   ನಿಂಬೆಯನೇತಕೆ ಗೈದೆಯೋ ನಿಂಬವ
   ಬೆಂಬತ್ತುವಳು ತಾ ನಿನ್ನನ್ನು| – ಸೋಮಣ್ಣ
   ರೆಂಬೆಯೆಂದಪೆಯಾ ರಂಭೆಯ||

   • ಪ್ರಸಾದು ಒಪ್ಪಿದೆ… 🙂

    ಆದರೂ…

    ರೆ೦ಬೆಯೊsಳು ರ೦ಭೆಯನುಕಾಣೆ ರಸಿಕsನು
    ಗೊoಬೆಯಮದರಿ೦ದ ಮಾಳ್ಪನು, ಪ್ರsಸಾದು
    ನಿ೦ಬಕ೦ ನಿ೦ಬೆಯುಮ೦ತೆ

    • ರೆಂಬೆಯೊಳ್ ರಂಭೆಯ ಕಾಣುವ ರಸಿಕನು
     ಗೊಂಬೆಯನವಳ ಮಾಳ್ಪನೆ? ಸೋಮಣ್ಣ
     ತುಂಬಿದ ಜೀವ ಹರಣವ?? or
     ಮುಂಬರಿಯದೆ ತಾನೇತಕ್ಕೋ!! or
     ಲಂಬಿಸದೆಲೆ ತಾ ಕೂಡಿಕೆ|| or
     ಹಂಬಲಿಸಲು ತಾನಾಮೇಲೆ||

    • ಗೊoಬೆಯಮದರಿ೦ದ > ಗೊಂಬೆಯ mother ಇಂದ
     (I have capitalized on the matrAdosha here):
     ರೆಂಬೆಯಿನ್ ರಂಭೆಯ ಮಾಡಲಾ ಸುಪನಾತಿ
     ಗೊಂಬೆಯ ಮದರ ಬೆಸಿಬೇಕೆ? ಸೋಮಯ್ಯ
     ನಂಬೆಯ ನಿನ್ನ ಸಾಮರ್ಥ್ಯ??

     • ಪ್ರಸಾದು :),
      ನಿಮ್ಮ ತರ್ಕಗಳ ಜಾಡೇ ತಿಳಿಯುವುದಿಲ್ಲ… ಏಕೆ೦ದರೆ…

      ಕವಿತೆsಯs ರೆ೦ಬೆsಯಿ೦ ಕವಿಯೊರ್ವs ರ೦ಭೆಯs
      ಸವೆಯsದs ರೂಪsವs ತಾನುs – ವರ್ಣಿsಸೆs
      ಸವಿಯಾದs ಗೊ೦ಬೆsಯದನೆ೦sದುs

      ತಿಳಿದsವsರದನೋದಿs ಮೆಚ್ಚುsಗೆs ತೋರುsತs
      ಭಳರೆ೦ದುs ಪೇಳುsವುsದಷ್ಟೆs – ದಿಟದೊsಳುs
      ತಳಿಪುsದೆs ಜೀವsವುs ಪೇಳೈ? OR
      ತಳಿಪುsದುs ಪದ್ಯsವುs ಕೇಳೈ!!!

    • 3 errors here:
     1) ಳು ರ೦ಭೆ – ಇಲ್ಲಿ ಜಗಣ ಆಗಿದೆ
     2) ಗೊoಬೆಯಮದರಿ೦(ದ) – ಇಲ್ಲಿ ಒಂದು ಮಾತ್ರೆ ಜಾಸ್ತಿ ಇದೆ
     2) ಯುಮ೦ತೆ – ಮತ್ತೆ ಜಗಣ ಆಗಿದೆ

     • ಪ್ರಸಾದು :),
      ಅ೦ಶ ಛ೦ದಸ್ಸಿನ ನಿಯಮ ಈಗ ತಿಳಿಯಿತು, ನಾನು ‘ನs’ ಮತ್ತು ‘ನಾ’ ಗಳನ್ನು ಒ೦ದೇ ಎ೦ದು ತಿಳಿದಿದ್ದೆ… ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು…

      ನಿಯಮsವsನರಿಯsದೆs ಲಯಮೊ೦ದೆs ಪಿಡಿದಿರ್ದುs
      ಜಯಿಸಲ್ಕೆs ಪೋದೆs ಪದ್ಯsವs – ಸರಿದಾರಿs
      ದಯೆಯಿಟ್ಟುs ತೋರ್ದsವಗೆ ಜೈ ಜೈ

   • ರಂಭೆsಯsನಾರಾರುs ರಂಬೆsಯೆಂದೊರೆದಾಗs
    ತುಂಬುsರೂಪಿಣಿಯs ನೆನೆಯುತ್ತs – ರಂಪಯ್ಯs
    ನಿಂಬೆsಯs ಸವಿದs ಮೊಗವೇಕೈ 🙂

   • ಹುಳಿಯನು ನೀನೇಕೆ ಹಿಂಡುವೆ ರಾಮಯ್ಯ
    ಹಳಿದು ತೋರದಿರೀರ್ಷೆಯನು ನೀ – ನೆಂದೆಂದು
    ಗಿಳಿಯೆಂದು ತಿಳಿಯೋ ಸತಿಯಳ|

   • ಗಿಳಿಯೆಂದು ತಿಳಿ ನಿನ್ ಸತಿಯಳ 😉

   • ಪ್ರಸಾದು –
    ತ್ರಿಪದಿsಯs ನಿಯಮsಗsಳಪವಾದs ಗೈಯುತ್ತs
    ಶಪಿಪುsದುs ಸರಿಯೇಂ ನನಮುಗ್ಧs – ಪ್ರಶ್ನೆಯs
    ಜಪಮುಂದುs ವರಿಸಿs ರಂಭೆsಯs
    🙂

   • ನಾನು ರಂಭೆ-ಜಪ ಮುಂದುವರಿಸಿಲ್ಲಪ್ಪ!

    ನಿನಗೆ ನಾ ಕೌಟುಂಬಿಕವನುಪದೇಶಿಸಿ
    ಮನದೆ ನಾ ನೆನೆಯೆ ರಂಭೆಯ| – ಭಾರ್ಗವಿ
    ದನಕೆಂಬಂತೆನ್ನ ಬಡಿವsಳು||

   • ತ್ರಿಪದಿಯೊಳ್ ಮೂರನೆಯ ಗಣವನುಪ್ರಾಸದೊಳಗಿರಬೇಕದೆಂದಿಗೂ ರಂಗನಾಥ. ಪೇಳಿದರು ಗಮನಿಸದೆ ರಂಭೆ ಗೊಂಬೆಗಳಲ್ಲೆ ಮಗ್ನನಾಗಿರ್ಪಂಗದೇಂ ಪೇಳಲೈ. 🙂

   • ಕ್ಷಮೆ ಇರಲಿ ರಾಮ್. ಇಂದು ಸಂಜೆ ಗಣೇಶರನ್ನು ಭೇಟಿಯಾಗಿದ್ದೆ. “ರಾಮಚಂದ್ರ ಹೇಳಿರುವುದು ಗಣಪ್ರಾಸದ ಬಗೆಗೆ.” ಎಂದು ಅವರು ಹೇಳುವವರೆಗೆ ಈ ಸೂಕ್ಷ್ಮ ತಿಳಿದಿರಲಿಲ್ಲ. ಎಲ್ಲ ಪದ್ಯಗಳನ್ನೂ ತಿದ್ದಿಟ್ಟುಕೊಂಡಿದ್ದೇನೆ. ಮತ್ತೆ ಪೋಸ್ಟ್ ಮಾಡೆ.

   • ಸೋಮ,
    Ref: Your penultimate tripadi above.
    ಭೈರಪ್ಪನವರ ಸಾಕ್ಷಿ ಕಾದಂಬರಿಯ ಪರಿಭಾಷೆಯಲ್ಲಿ ಹೇಳಬಹುದಾದರೆ, ನಿಮ್ಮಂತಹ ಸತ್ಯನಾರಾಯಣಪ್ಪನನ್ನು ಕೆಡಿಸಿದ ಮಂಜಯ್ಯನನ್ನಾಗಿಸಿಬಿಟ್ಟಿರಿ ನನ್ನನ್ನು. ಯಾವ ಪಾಪಶೇಷವೋ ಇದು!

    • ಪ್ರಸಾದು 🙂

     ಏನ್ ಹೀಗ೦ದ್ಬಿಟ್ರಿ ನೀವು… ಕೇಳಿ…

     ಸತ್ಯsನಾರಾಯsಣs ಮಿಥ್ಯsದs ಮ೦ಜಯ್ಯs
     ಸ್ಥುತ್ಯs ಭೈರಪ್ಪsರsಪಾತ್ರs – ಮನದೊsಳುs
     ನಿತ್ಯಮುs ಪ್ರsಭಾsವsಬೀರೆs

     ನಿಲ್ಲಿsಪುsದೆsಸತ್ಯsನಲ್ಲಿsಮsನsವsದುs
     ಚೆಲ್ಲಾಟ ಮಾಳ್ಪs ಮ೦ಜಯ್ಯs – ನಲುಮ೦ತೆs
     ನಿಲ್ಲsಲsದsಸಾಧ್ಯs ಕೇಳೈ

 2. ಮಾವಿಂಗೆ ಬೆಲ್ಲಮೆರೆಯ
  ಲ್ಕರ್ವಿನ ಫಲಮೀವುದಲ್ತೆ? ನಿಂಬೆಯ ರಸಮಂ
  ತೀವಲ್ಕೆ ಮರದ ಬುಡದೊಳ್
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

  • ಪೂರಣ ಚೆನ್ನಾಗಿದೆ, ಆದರೆ ೨ನೆಯ ಪಾದದ ಪ್ರಾಸ ತಪ್ಪಿದೆ.

   • ಪ್ರಸಾದು, ಪ್ರಾಸದ ತೊಂದರೆಯೇನೂ ಕಾಣೆನೆ? ಕರ್ +ವಿನ: ಪ್ರಾಸಾಕ್ಷರವೂ ಇದೆ, ಗುರುವೂ ಇದೆ ದೀರ್ಘಾಕ್ಷರವಲ್ಲದಿದ್ದರೂ.

   • 1) ಏಕಾಕ್ಷರ ಗಜಪ್ರಾಸಕ್ಕೆ ಆ, ಈ, ಊ, ೠ, ಏ, ಐ, ಔ, ಅಂ, ಅ: ಗಳು (ವ್ಯಂಜನಸಹಿತ/ರಹಿತ) ಮಾತ್ರ ಒದಗುವುವು.
    2) ಗಜಪ್ರಾಸಕ್ಕೆ ಸಂಯುಕ್ತಾಕ್ಷರವನ್ನು (ಪ್ರಸ್ತುತದಲ್ಲಿ ರೇಫಸಹಿತ) ಆಯ್ದುಕೊಂಡಲ್ಲಿ, ಅದರ ಉತ್ತರಾರ್ಧವ್ಯಂಜನವನ್ನೇ (ಪ್ರಸ್ತುತದಲ್ಲಿ ರೇಫ) ಪ್ರತಿಪಾದದಲ್ಲೂ ಬಳಸಬೇಕು.
    3) ಒಂದು ಸಹಜವಾಡ ವಿನಾಯಿತಿ ಲಬ್ಧವಾಗಿದೆ: ಕರ್ ಹಾಗೂ ಕಾರ್ ಎರಡೂ ಸಾಧುರೂಪಗಳು.

    • ರಂಪಮ್ಮಾಡದಿರೈ ವಕಾರವಿಹುದೈ ಸಂಯುಕ್ತದೊಳ್ ಕರ್ವಿನೊಳ್ 🙂

     • ಶತಾಯು ಜೀವೆಂ,
      ತಮ್ಮ, ‘ರೇಫ’ದ್ದಿದೆ ವಿಕಾರವಲ್ಲ’ವ’ಕಾರ,
      ವೊಮ್ಮೆ ‘ಕರ್’ಕಾರವನ್ನಾಯ್ದುಕೊಳ್ಳಲ್|
      ಹಿಮ್ಮೆಟ್ಟದೆಲೆ ಖೀರು-ಗೇರ್-ಚೀರ್-ಗಳಲ್ಲದೆಲೆ
      ಸುಮ್ಮನೆ ಬಳಸಬೇಕು ಡರ್-ತೈರ್-ಗಳಂ||

  • 🙂

 3. ಹೂದಳೆದರೂ, ತಳೆಯದಿದ್ದರೂ ಬೇವು ಕಹಿಯೇ. ನಿಂಬೆ ಸರ್ವದಾ ಪ್ರಯೋಜನಕಾರಿ – ಕಾಯಿರಲಿ ಹಣ್ಣಿರಲಿ.

  ಹೇವವೆ, ಪೂದಳೆಯದೊಡಂ
  ಬೇವದು ಪೂದಳೆಯೆ. ಪಣ್ಣು ನಿಂಬೆಯೆ ದಿಟದೊಳ್|
  ಸೇವನಕೊದಗುಂ ಕಾಯೂ,
  ಭಾವನಗೊಳ್ಳುತಲುಪ್ಪಿನಕಾಯೊಳದೆಂದುಂ||

 4. ಕಾವೇರಿಸುತಾ ಗ್ರೀಷ್ಮವ-
  ದೀವುದು ಪೂಗಳ ವಸ೦ತದಾ ಚಿಗುರಿನೊಳ೦
  ಮೇವಾ ಭೃ೦ಗದ ಸ೦ಗದೆ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

  ಈ ರೀತಿ ಪ್ರಯೋಗ ಮಾಡಬಹುದೆ?
  ಮೇವಾ – ಮೇಯುವ ಆ
  ಬೇವದು – ಬೇಯುವ ಅದು

  • “ಕಾವೇರಿಸುತಾ ಗ್ರೀಷ್ಮಂ”
   ಪಾವನಿಗಾದಳೆ ಕಠೋರ ಪಾವಕಳು ಮಗಳ್
   ಏವೇಳ್ವೆನೀ ವಿಚಿತ್ರಂ
   ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

   😉

   • ಕ೦ದದಲ್ಲಿ ನಿ೦ಬೆಯಗಿಡದ ಬಗ್ಗೆಯಷ್ಟೇ ಹೇಳುತ್ತಿದ್ದೇನೆ೦ಬುದನ್ನು ತರಲಾಗಲಿಲ್ಲ… ಸರಿಯಾಗಿ ಹಿಡಿದಿರಿ

    ಜೀವೆ೦ ‘ಬೇಯುವು’ದನುನಾ೦
    ‘ಬೇವದು’ಎ೦ಬೀ ಪ್ರಯೋಗಮ೦ ಮಾಡಿರ್ಪೆ೦
    ಕಾವದು ಬೇಸಿಗೆಯಿ೦ ದಲ್ 😉
    ಕೋವಿದರೀಪರಿಯ ಹಾಸ್ಯ ಮಾಳ್ಪುದು ಸೊಗಸಯ್ 🙂

 5. Fine vigraha of ’ಬೇವದು’

 6. ಬೇವಿನ ನಿಂಬೆಯ ಸಸಿಗಳು
  ತಾವೇ ಚುಂಬಿಸಿ ಪರಾಗದುಣಿಸದುಕೂಡಲ್
  ತೀವಿತದೊಂದೇ ಕಾಂಡದಿ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್

  ಹೇವವೆ ತುಂಬಿಹ ನೀಚರು
  ಭಾವವ ಬದಲಿಪರೆ? ಧರ್ಮಮಾರ್ಗದಿನಡೆಯಲ್
  ಪಾವನವಪ್ಪುದೆ ದೇಶಂ?
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್ !

 7. ಈವುದದೌಷಧಗಳಿಗಾ
  ಬೇವದು, ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್
  ಮಾವ೦ ಮಿಗೆ ಭೋಜನದೊಳ-
  ತೀವ೦ ಭಕ್ಷ್ಯಗಳ ಗಯ್ಯಲುತ್ತಮಮಲ್ತೇ

 8. ಸೇವಿಗೆಯು ಖೀರಿಗೊಪ್ಪುಗು
  ಮಾವಿನ ನೆಯ್ಕಱಿದ ತಿಂಡಿಗೆಂದುಂ ಸಲ್ಗುಂ
  ತೊವ್ವೆಯ ಸಂಗಡ ಗೊಜ್ಜಿಗೆ
  ಬೇವದು ಪೂದಳೆಯೆ, ಪಣ್ಣು ನಿಂಬೆಯೆ, ದಿಟದೊಳ್

 9. ಆವ ನವರಸದ ಕೂಟದಿ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್
  ಕಾವುದೈ ಆನವಮಾಸದಿ
  ನೋವನೆ ಮೈದಳೆದು ಪೆಣ್ಣು ನಂಬಿರೆ ನಿಜದೊಳ್ |

  ( ಕಹಿಗೆ ಕಹಿಯು ಒತ್ತಿ ಬರುವ ಸಿಹಿ, ನೋವಿಗೆ ನೋವು ಒತ್ತಿ ಬರುವ ನಲಿವು, ಅನ್ನುವ ಭಾವದಲ್ಲಿ
  ಪದ್ಯಾವಧಾನದ ಮದ್ಯೆ ಬಂದ ಪುಟ್ಟ ಕಂದ, “ಅಪ್ರಸ್ತುತ”ವೆನಿಸಿದೆಯೇ ? )

 10. ಉಷಾ ಅವರೆ :),

  ಚೆನ್ನಾಗಿದೆ ಪದ್ಯ

  ಪದ್ಯಪಾನದೊಳಗ೦ ಕ೦ದಮಪ್ರಸ್ತುತಮಕ್ಕುಮೇ?

  ಖಗಗಳ್ ಬಾನೊಳ್ ವನದೊಳ್
  ಮಿಗಗಳವೊಲು ಪದ್ಯಪಾನದೊಳಗು೦ ಕ೦ದ೦
  ಬಗೆಯಿರಿ ‘ಐ’ತ್ವವ ಗುರುವೆನೆ
  ಸೊಗಿಪುದು ಗತಿಯೊಳ್ಗೆ ನಿಮ್ಮ ಚೊಚ್ಚಲ ಕ೦ದ೦

  ‘ಕಾವುದೈ ಆನವಮಾಸದಿ’ ಸಾಲಿನಲ್ಲಿ ಒ೦ದು ಮಾತ್ರೆ ಹೆಚ್ಚಾಗಿದೆ, ಹೀಗೆ ಸವರಿಸಬಹುದು:
  ‘ಕಾವುದದಾ ನವಮಾಸದೆ’

  • ಸೋಮ ಸರ್,
   “ಲಘು”ವಾಗಿದ್ದ ” I “ತ್ವದ “ಗುರು”ತ್ವವನ್ನ (ಅದ್ವೈತ !) ತೋರಿಸಿದ್ದೀರ.
   ಹೆಚ್ಚಾದ “ಮಾತ್ರೆ”ಯನ್ನ ಕರಗಿಸಿದ ಪರಿ ಅರ್ಥವಾಗಿದೆ.
   ಕಂದನನ್ನ ಮೆಚ್ಚಿ,ತಿದ್ದಿ ನಡೆಸುತ್ತಿರುವ ನಿಮ್ಮೆಲ್ಲರಿಗೆ ನಾನು ಋಣಿ.
   ಪದ್ಯ ವಿದ್ಯೆಯ ನನ್ನ ಕೆಲವು ಸಂದೇಹಗಳನ್ನು ಬಗೆಹರಿಸಿಕೊಳ್ಳುವ ಬಗೆ ತಿಳಿಸಿ.

  • ಉಶಾರವರೆ –
   ಪದ್ಯ ವಿದ್ಯ್ಯೆಯೊಳೇನು ಸಂಶಯಗಳಿರ್ದೊಡಂ ಅಲ್ಲಿಯೇ (ಪಾಠಗಳ ಪುಟದೊಳಗಿನಾ ಕಮೆಂಟುಗಳಲ್ಲಿ) ಕೇಳಿದೊಡೆಯದೆ ಉತ್ತಮಂ. ಉತ್ತರವದೆಲ್ಲರಿಗು ಸಿಗುವಂತದಾಗಲ್ಕೆ ಪಾಠದುಪಯುಕ್ತತೆಯು ತಾ ಬೆಳೆವುದೌ.

 11. ಆವುದೊ ಜೀನನ್ನೆಲ್ಲಿಗೊ
  ಈವುದೆ ಪರಿಯೈ ಬಯೋಲಜಿಯ ಶಾಸ್ತ್ರಗಳಲ್ |
  ಜೀವಗಳಂ ಬೆಸೆವಾಟದಿ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್ ||

 12. ಜೀವವ ಹಿಂಡುವ ಕಹಿಯಿಂ
  ಸಾವರಿಸಲ್ ಸಾಧ್ಯ ನಿಂಬೆ ಪುಳಿಗಂ ಸಿದ್ಧಂ |

  ಮೇವಿರದ ಜಿಹ್ವೆಯಾಳ್ಮೆಗೆ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್ ||

  ಬಡಪಾಯಿ, ರುಚಿಭಕ್ಷ್ಯ ಕಾಣದಿಹ ನಾಲಿಗೆಯನಾಳಲ್ಕೆ, ಬೇವುತಾ ಪೂದಳೆದೊಡಂ, ಕಹಿಯನ್ನು ಪೊಡೆಯಲ್ಕೆ ಪುಳಿ ನಿಂಬೆಯೇ ಬೇಕದೆಂಬರ್ಥ ತರಲೆಂದು ನಾನೆಳಸಿರಲ್. ಪದ್ಯದೊಳ್ಗದು ತೋರುತಿಲ್ಲೆಂಬದನುಮಾನ, ಬರೆದೆನೆಂದಿಲ್ಲದನ್ನು ನೀಡಿರುವೆನೈ. ಅರ್ಥ ತೋರಲು ಸಾರ್ಥವಿಲ್ಲವಾದೊಡೆ ವ್ಯರ್ಥವೆಂತಾದರೂ ಮೋಜಿನಾನಂದಕಂ.

  • ರಸನೆಯ ಕಹಿಯ೦ ದೂಡಲ್
   ಪೊಸಮಾರ್ಗವ ತೋರುತುತ್ತಮ೦ ಪದ್ಯಮುಮ೦
   ಕಿಸೆಯಿದೆಸೆಯಲ್ ರಾಮ೦
   ರಸದೀ ಪೂರಣದಿಮಾಯ್ತು ಹರ್ಷೋತ್ಕರ್ಷ೦

   • ಸೋಮರ ಸಮನ್ವಯಿಕಮದು
    ಸೋಮ ರಸಂಬೋಲ್ವ ಋಜುಪದಾವೃತ ಪೇಯಂ
    ಪ್ರೇಮದ ವಿಮರ್ಶನಂಬದು
    ತಾಮಸವಂ ನೂಂಕಿ ತಳೆವುದುತ್ತೇಜಕವಂ

    • ನಲ್ಮೆಯ ಪದ್ಯಕ್ಕೆ ಧನ್ಯವಾದಗಳು ಚ೦ದ್ರಮೌಳಿಯವರೇ 🙂

     ಗಣೇಶ್ ಸರ್ ಮತ್ತು ನೀವು ತೋರಿದ ವಿಮರ್ಶೆಯ ಪದ್ಯಗಳ ರಾಜಮಾರ್ಗದಲ್ಲಿ ಸಣ್ಣಹೆಜ್ಜೆಯನ್ನಷ್ಟೇ ಇಡಲು ನನಗೆ ಸಾಧ್ಯ ಸರ್…

     ಪಿರಿಯರ್ ತೋರಿದ ಪಥದೊ-
     ಳ್ಗೊರೆದೆ೦ ಕಿರಿದೀ ವಿಮರ್ಶೆಗಳನ೦, ಚ೦ದ೦
     ಸರಿಯೆ೦ದುತ್ತೇಜನಮ೦
     ಪೊರೆವರ್ ನೀಡಲ್ಕಘಾದಶಕ್ತಿಯದೆಮಗ೦

     • correction:
      ಪೊರೆವರ್ ನೀಡಲ್ಕಗಾಧಶಕ್ತಿಯದೆಮಗ೦

  • Thanks

 13. ಆವ ರುಟೇಸಿ (Rutaceae) ಕುಟುಂಬದೆ
  ನಾವಾ ‘ಸಿಟ್ರಸ್ ಲಿಮೋನ’ವನು ಗುರುತಿಪೆವೋ|
  ಕೋವಿದರಿಂತೆಂಬರು “ನಂ
  ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್”||

  • नीम (ನೀಂ= ನೀವ್ ) ಪೇಳ್ವುದು ಸರಿ,
   “ನಿಂಬ” ಮೆಂದಡೆ ಬೇವೆಂದರ್ಥ !?

   • ನೋಡಿ “ನಿಂಬ ಪೂದಳೆದು ಪೊದಳ್ದ ಪರಿಯ”
    ನಿಂಬ (ಹೂ), ನಿಂಬಿ (ಹೀಚು), ನಿಂಬು (ಕಾಯಿ), ನಿಂಬೆ (ಹಣ್ಣು)
    “ಬೇವದು ಪೂದಳೆಯೆ ಪಣ್ಣು ನಿಂಬೆಯೆ ದಿಟದೊಳ್ !!”

  • ನಿಂಬೆಗಿಡದಲ್ಲಿ ನಿಂಬೆಹಣ್ಣು ಬೆಳೆಯುತ್ತದೆ ಎಂಬುದನ್ನು బ్రహ్మాండంగ చప్పేనంతే.

  • ಎರಡನೆಯ ಪಾದವನ್ನು ತುಸು ಸವರಬೇಕು: ತಾವಾ ‘ಸಿಟ್ರಸ್ ಲಿಮೋನ’ವನು ಗುರುತಿಸುತಲ್|

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)