Jul 152013
 

ಪ್ರಿಯ ಮಿತ್ರರೆ,
ಪದ್ಯಪಾನದಲ್ಲಿ, ಹೊಸತಾಗಿ, ಅಲಂಕಾರದ ಮೇಲೆ ವಿಡಿಯೋ ಪಾಠಗಳನ್ನು [ಪದ್ಯ ವಿದ್ಯೆಯ ಅಡಿಯಲ್ಲಿ] ಸೇರಿಸಲಾಗಿದೆ. ಇದನ್ನು ಪರಿಶೀಲಿಸಿ, ಕಲಿತು, ನಮ್ಮ ಪದ್ಯಗಳನ್ನು ಅಲಂಕರಿಸಬಹುದು. ಈ ನಿಟ್ಟಿನಲ್ಲಿ, ಈ ವಾರದ ವಿಷಯ :: ರೂಪಕಾಲಂಕಾರದೊಡನೆ ಬಡತನದ ವರ್ಣನೆ. ಸಂಸ್ಕೃತ ಪದ್ಯಗಳೂ ಬರಲಿ.

ಇನ್ನು ನಿಮ್ಮ ಪದ್ಯಗಳ ನಿರೀಕ್ಷೆ 🙂

Dear friends,

In padyapaana, new video lessons on alankaara have been added. Let us try and compose poems with alankaara. To start with, this weeks exercise is to describe Poverty using ruupaka alankaara.

We are in anticipation of your poems 🙂

  119 Responses to “ಪದ್ಯ ಸಪ್ತಾಹ ೭೫: ಅಲಂಕಾರಯುತ ವರ್ಣನೆ :: ಬಡತನ”

  1. Inspired by the style of Venkatadhvari:

    आत्म-गौरव-लेशाङ्क-समुत्सारण-वेत्रकम् ।
    सर्व-खादक-सन्दोह-वैश्वानर-विचोदकं ॥

    सूक्ष्म-घ्राण-समोपेत-मित्र-मण्डल-सोनहं ।
    सिकता-निर्मिताकाङ्क्षा-प्रासद-प्रलयार्णवं ॥

    दीन-कुक्कुर-वालान्त-दुष्ट-संलग्न-स्फोटकम् ।
    दुःखब्रह्मं सुखयमं दारिद्र्यं धिक्करोम्यहं ॥

    “The bamboo cane to drive out the last signs of self-respect;
    The fuel to the hunger-fires of hordes of debtors [khAdaka means both debtor and eater];

    Garlic to fine-smelling circles of friends [ 🙂 ];
    The ocean of pralaya to the sand-castles of desires;

    The firecracker firmly tied by naughty boys to the tail of the dog called “poor man”; [ :)) ]
    Brahma to sorrows and Yama to joys, I condemn poverty”

    [The panchami in 2nd pada of 3rd verse is not laghu, but I couldn’t find any natural word for firecracker. Help?]

    • Dear Mohan,

      Really wonderful imagery. Very impressive quality versification.But why don’t you use ardhaakShara “ma” instead of anusvaara which is unsuitable, at the end of padyaardha-s?
      by the by, the duHkhabrahmaM is grammatically wrong. why don’t you replace it by duHkhaajaM sukhakInaashaM….?

      • Thank you sir, will note the anusvaara typos. I’d hoped brahman would undergo a transformation like rajan when a prefix was added, but now I learned a new word: kiinaasha! Thanks!

    • Priya mohan avare

      Thank you for the delightful poems and translation

  2. ಶಾಲಿನೀ ವೃತ್ತದಲ್ಲಿ..!!

    संसाराब्धौ क्षुन्मुखेंद्रारिभिष्च
    दुर्दैवाहीशाधृतागेन तीव्रम् ।
    क्लेशज्वाला प्रोत्थिता मथ्यमाने
    दारिद्र्यश्रीः हन्ति नित्यं सुलोकान् ॥

  3. ಬಿಳಿಯ ಬಟ್ಟೆಯ ಕೆಸರ ಕಲೆ ಮುಂ-
    ಬೆಳಗು ಗಾಳಿಯ ಹೊಲಸು ನಾತವು
    ಹೊಳೆವ ಹುಣ್ಣಿಮೆ ಚಂದ್ರ ಬಿಂಬದ ರಾಹು ಹಿಡಿತವೆ ಸೈ ।
    ಮಳಲು ನೆಲದಲಿ ಸುರಿದ ನೀರಿದು
    ಹುಳುವು ಬಿದ್ದಿಹ ಹಣ್ಣ ಮರ ನೀ
    ರೊಳಗೆ ಬಿದ್ದಿಹ ಚಕ್ಕುಲಿಯು ಬಡತನದ ಸಜ್ಜನನು

    ಬಳಸಿ ಬಳಸಿ ಸವಕಲಾದ ರೂಪಕಗಳೇ ಆದರೂ, ಹೊಸ ಪಾಠದ ಅಸೈನ್ಮೆಂಟ್ ಆದ್ದರಿಂದ ಇರಲಿ ಅಂತ ಹಾಕಿದ್ದೇನೆ! ಹೇಗೆ ಒಳ್ಳೆಯ , desirable ಗುಣಗಳೂ ಒಂದು ಚಿಕ್ಕ ಕಾರಣಕ್ಕೇ undesirable ಆಗುತ್ತವೋ , ಅಂತೆಯೇ ಲೋಕರೂಢಿಯಲ್ಲಿ ಸಜ್ಜನರೂ ಬಡವರೆಂಬ ಕಾರಣಕ್ಕೆಂದು ಬೇಡವಾಗುತ್ತಾರೆ ಅನ್ನುವುದನ್ನು ತೋರುವ ಯತ್ನ.

    ಇದಕ್ಕೆ ಏಕೋಹಿ ದೋಷೋ ಗುಣಸನ್ನಿಪಾತೇ ಎಂಬ ಪದ್ಯವೇ ಸ್ಫೂರ್ತಿಯೆಂದು ಕೂಡ ಹೇಳಲೇಬೇಕಿಲ್ಲ. ಅಲ್ಲಿಯ ಉಪಮೆಯ ಬದಲಿಗೆ ರೂಪಕವನ್ನು ಬಳಸಿದ್ದೇನಷ್ಟೆ. ಬಡತನದ ಕಾರಣಕ್ಕೆ ಉಪೇಕ್ಷೆಗೊಳ್ಳುವ ಸಜ್ಜನನಿಗೆ ಲಗಂ-ಯುಕ್ತವಾದ ಕಾರಣಕ್ಕೇ ಬೇಡವೆನಿಸುವ ಪದ್ಯವೂ ಒಂದು ರೂಪಕವೆನ್ನಿಸಿ, ಲಗಂ ದೋಷ ಸಹಿತವಾಗಿಯೇ ಪೋಸ್ಟಿಸಿದ್ದೇನೆ 🙂

    • ಗೆಳೆಯ ಮಂಜುನಾಥರ ಜೊತೆ ಮಾತಾಡುತ್ತಿದ್ದಾಗ ಮೊದಲಿನ ಷಟ್ಪದಿಯಲ್ಲಿದ್ದ ವೈರುಧ್ಯವನ್ನು ತೋರಿಸಿಕೊಟ್ಟರು – ಈಗ ಅದಕ್ಕೆಂದೆ ತಪ್ಪುಗಳನ್ನಷ್ಟು ತಿದ್ದಿ ಬರೆದಿದ್ದೇನೆ

      ಬಿಳಿಯ ಬಟ್ಟೆಯ ಕೆಸರ ಕಲೆ ಮುಂ-
      ಬೆಳಗು ಗಾಳಿಯ ಹೊಲಸು ನಾತವು
      ಹೊಳೆವ ಹುಣ್ಣಿಮೆ ಚಂದ್ರ ಬಿಂಬದ ರಾಹು ಹಿಡಿತವೆ ಸೈ ।
      ಕೊಳಗ ಹಾಲಿಗೆ ಬಿದ್ದ ಹುಳಿ ಹಾ
      ಡೊಳಗೆ ಕೇಳಿದಪಸ್ವರವು ಸಾ
      ರೊಳಗೆ ಬಿದ್ದಿಹ ಜಿರಳೆ ಸೈ ಸಜ್ಜನನ ಬಡತನವು ||

      • ಪ್ರಿಯ ಹಂಸಾನಂದಿಗಳೇ,
        ನಿಮ್ಮ ಪದ್ಯವೇನೋ ಚೆಲುವಾಗಿದೆ. ಆದರೆ ಅಲ್ಲಿ ರೂಪಕಾಲಂಕಾರವಿಲ್ಲ. ಇದನ್ನು ಉಲ್ಲೇಖಾಲಂಕಾರವೆಂದು ಶಾಸ್ತ್ರಜ್ಞರು ಭಾವಿಸುತ್ತಾರೆ. ದಯಮಾಡಿ ಈ ಎರಡೂ ಅಲಂಕಾರಗಳ ಬಗೆಗೆ ವಿಡಿಯೋ ಪಾಠದ ವಿವರಗಳನ್ನು ಗಮನಿಸಿರಿ.

        • ಗಣೇಶರೆ, ನಮಸ್ಕಾರ.

          ಅಸೈನ್ಮೆಂಟ್ ಮಾಡಿದಮೇಲೆ ಈಗ ಪಾಠ ಕೇಳುತ್ತಿದ್ದೇನೆ ಅದರ ಪರಿಣಾಮವಿದು! ಪಾಠವಾದ ಮೇಲೆ ಮತ್ತೊಂದು ಸರಿಯಾದ ಪ್ರಯತ್ನ ಮಾಡುತ್ತೇನೆ.

  4. वित्तरिक्तरुक्षक्षेत्रे जठरज्वलनोष्णके
    निवासबीजहीने किं वर्धिष्यति फलादरम्

    Following is what I intend to mean: In a “bankrupt” desert, with the heat of hunger blazing down, without the house of a seed, why will the fruits of respect grow? —- I am not sure if the verse conveys the meaning or not! Kindly help me with suggestions/corrections 🙂

    • ಯುಕ್ತಮಸ್ತಿ ಭವತ್ಪದ್ಯಂ ಕಿಂ ಚ ಶೈಲೀಪರಿಷ್ಕೃತಿಃ |
      ತತ್ರ ತತ್ರ ನಿಭಾಲ್ಯಾ ಮದ್ವಿಶ್ವಾಸೋsತ್ರ ತು ವಿದ್ಯತೇ 🙂 ||

    • Incorporating the corrections (there was a problem with the chandas in the first paada) , Courtesy — Ganesh:

      वित्तरिक्तमरुक्षेत्रे जठरज्वलनोष्णके
      निवासबीजहीने किं वर्धिष्यति फलादरम्

  5. ಪ್ರಖರ ಖದ್ಯೋತಾಗ್ನಿ ಸುಡಲೆಲ್ಲಕಡೆಯಿಂದ
    ನಖ ಶಿಖಾಂತದಿ ಕುದಿದು ಬೆಂದು ಬಸಿದು
    ಮುಖ ಬಾಡಿ ರೂಪವುರಿದಂಬರಕ್ಕೇರಿ ಜಲ
    ಶಿಖರವಾಗುವ ಹೊತ್ತದೇ ಬಡತನ

    ಅತಿಘೋರ ಶಿಕ್ಷಾವಿಧಾನಗಳ ನಿರ್ಣಯಿಸೆ
    ಪತಿತರಂ ಶೋಷಿಸಲು ದಂಡಧರನು
    ಮತಿಯೋಡದಿರೆ ಕೊನೆಗೆ ಸೃಷ್ಟಿಸಿದಸರ್ವ ಸ-
    ಮ್ಮತವಾಯ್ತುನರಕಕ್ಕದೇ ಬಡತನ

    ಮುರಿದಮಂಡಿಯನೋವು ಬೆಂಕಿಯಲ್ಲಿನಕಾವು
    ಇರಿದ ಬೆನ್ನಿನ್ನಬಾವು ರಸದ ಬೇವು
    ಹರಿದ ಕೌಪೀನಕ್ಕೆ ಸಿಕ್ಕಜಾಲಿಯಮುಳ್ಳ
    ನರತಿತಿಕ್ಷಾಶಾಲೆಯೇ ಬಡತನ

    ಶಿವನತಿರುಪೆಯಭಾಗ ರಾಮಪತ್ನಿವಿಯೋಗ
    ಬವಣೆ ನಳ ಚಂದ್ರಮತಿಪತಿ ಪಟ್ಟುದುಂ
    ಸವಕಲಾಗಲು ಕಲಿಗೆ ಪೊಸತೊಂದಪುಟ್ಟಿಸಿದ
    ನವವಿಧಿಪ್ರಾರಬ್ಧವದೆ ಬಡತನ

    ಹೆದರಿಸಿರೆ ಶಿವನೋಡಿ ಗಿರಿಶಿಖರದಲಿ ಕುಳಿತ
    ಹೆದರಿ ಹರಿ ಕಡಲ ಮಧ್ಯದಿ ಮಲಗಿದ
    ಹೆದರಿ ಮೇಲಕ್ಕೇರ್ವ ಹದನಬಿಡದಿಹನನಗ್ನಿ
    ಬೆದರಿಸುವ ಭೂತವದುವೇ ಬಡತನ

    ಮೊದಲು ಕೊನೆಯಿರದ ಗಗನವೊ, ಸುತ್ತಲೂ ಸೆದೆಯು
    ತೊದೆವ ವಾಯುವೊ, ಬೇಗೆಯಾರದಿಹ ಬೆಂಕಿ
    ಕುದಿದೊಗೆದ ಕಣ್ಣೀರೊ ಭೂಭಾರ ವೀಯೈದ
    ರೆದೆಮಿಡಿತರೂಪಾದುದೇ ಬಡತನ

    • ಸೊಗಸಾದ ಕಾವ್ಯಮಂ ನೀಮಿತ್ತಿರಯ್ ಸಾಜ-
      ಮಗಣಿತೋಕ್ತಿವಿಲಾಸಭಾಸದಿಂದಂ |
      ಜಗುಳಿತೇತಕೆ ಮಿತ್ರ ! ರೂಪಕಾಲಂಕೃತಿಯ
      ಮುಗುಳೀ ಮನೋಜ್ಞಲತೆಯಿಂ ವರಾಕಂ ||

      • ವಸ್ತುವನಲಂಕರಿಪದಾಹ ಬಂಧದ ಮೋಹ
        ಶಿಸ್ತುಮೈಗೂಡದಿಹ ಸ್ವೇಚ್ಛೆ ಶಾಸ್ತ್ರವಿಧಿ
        ಪ್ರಸ್ತುತಿಯ ಮೀರಿ ಕೊಚ್ಚುತ ಹರಿವ ಹುಚ್ಚುಹೊಳೆ
        ನೇಸ್ತಕ್ಕೆ ಕ್ಷಮೆಯಿರಲಿ ಸುಮನನಮನ

  6. ಕೆಳೆಯರನರಸಿಪ ಮುಕರಂ
    ಪೊಳೆವಾ ನಾಡಿಂಗೆ ಮೊದಲಿಗನೊಳಾದರ್ಶಂ
    ಗಲಿತಚರಿತವೀಥಿಕೆಯ-
    ಲ್ತಿಳೆಯೊಳ್ ಕೊಳೆಯೆನುತಲಕ್ಷ್ಮಿ ನೀಳ್ದಪ ವರಮಯ್

    ಕೆಳೆಯರನರಸಿಪ ಮುಕರಂ -> ಗೆಳೆಯರನ್ನು ಹುಡುಕಿಕೊಡುವ ಕನ್ನಡಿ
    ಪೊಳೆವಾ ನಾಡಿಂಗೆ ಮೊದಲಿಗನೊಳಾದರ್ಶಂ -> ಉಜ್ವಲನಾಡಿನ ಭವಿಷ್ಯಕ್ಕೆ ನಾಡಿನ ಮುಂದಾಳಿಗೆ ಇರಬೇಕಾದ ಆದರ್ಶ (ತಾನು ಬಡತನದಲ್ಲಿದ್ದು ದೇಶಕ್ಕೆ ದುಡಿವೆನೆನ್ನುವ ಆದರ್ಶ)
    ಗಲಿತಚರಿತವೀಥಿಕೆ -> ಚಾರಿತ್ರ್ಯಕೆಡುವುದಕ್ಕೆ ಮಾರ್ಗ
    ಇಳೆಯೊಳ್ ಕೊಳೆಯೆನುತಲಕ್ಷ್ಮಿ ನೀಳ್ದಪವರಮಯ್ -> ದರಿದ್ರಲಕ್ಷ್ಮಿಯ ಉಪಹಾರ

    • ಆಹಾ! ಸೋಮಕವಿತ್ವಂ
      ಮೋಹಕವಾಣೀವಿಲಾಸಮಣಿದರ್ಪಣಮೇ |
      ಗಾಹಿತಕಲ್ಪನವನಿತಾ-
      ವಾಹಿನಿ ದಲ್, ರೂಪಕಪ್ರಕಾರನಿರೂಪಂ ||

  7. ಸ್ಥಳಮಂ ಚೊಕ್ಕಟವಿಟ್ಟು ಮೂಲೆಯೊಳಗಂ ಬಾಯ್ಮುಚ್ಚಿದಾ ಸಂತನೊಲ್
    ತುಳಿವಾ ಪಾದಕೆ ರಕ್ಷೆ, ಶೌಚಗಳನುಂ ನೀಡಿರ್ಪ ಮೌನಾಖ್ಯರೊಲ್
    ಫಳಮಂ ಕಾಪಿಡುತಿರ್ದನಂತರ ಗಡಾ ದೂರಾದ ಪೇಶೀಗಳೋ –
    ಲಳಿಯಲ್ ಹೇಸದಿರೆಂದು ಸ್ವಾಮಿ ಸುಖಕೆಂ, ಪೋ ಪೋ ಮಡಗ್ದಂಗಿರೈ
    [ಪೇಶೀ = ಸಿಪ್ಪೆ]
    [ರೂಪಕದ ಬದಲು ಉಪಮಾಲಂಕಾರವಾಗಿದೆ :-)]

    • ವರನೇ ಚಾರುವಿವಾಹದೊಳ್ ವಧುವಿನಂತಾಗಲ್ಕೆ ಮೇಣೆಂಬುದೇಂ?
      ಅರರೇ! ರೂಪಕಮಾಗಲಿಂತುಪಮೆ ಹಾ! ಹಾ! ರಾಮ! ಮತ್ತೇಂ ಗತೀ? 🙂

    • ಉಪಮಾವಪ್ಪುದು ರೂಪಕಿಲ್ಲದಿರೆ ‘ವೋಲ್’ಎನ್ನುತ್ತೆ ನಾಮಾಡಿದೆಂ
      ಅಪಚಾರಂಗಳಿವಲ್ಲವೆನ್ನುತ ಪದಂ ಮಾರ್ಪಾಟಿಸಿರ್ಪೆಂ ಗಡಾ

      ಸ್ಥಳಮಂ ಚೊಕ್ಕಟವಿಟ್ಟು ಮೂಲೆಯೊಳಗಂ ಬಾಯ್ಮುಚ್ಚಿದಂ ಮಾರ್ಜನಂ
      ತುಳಿವಾ ಪಾದಕೆ ರಕ್ಷೆ ನೀಳ್ಪ ಯುಗಳರ್ ಸೊಲ್ಲೆತ್ತದೇ ಕುಂತಿರಲ್
      ಫಳಮಂ ಕಾಪಿಡುತಿರ್ದನಂತರ ಗಡಾ ದೂರಪ್ಪುವೈ ಶಿಪ್ಪೆಗಳ್
      ಕಳೆಯಲ್ ಹೇಸದಿರೆಂದು ಸ್ವಾಮಿ ಸುಖಕೆಂ, ಪೋ ಪೋ ಮಡಗ್ದಂಗಿರೈ

      [ಮಾರ್ಜನ = ಪೊರಕೆ]
      [ಕೊನೆಯ ಸಾಲಿನಲ್ಲೊಂದು ಶಿ.ದ್ವಿ]

      • ಸ್ರಗ್ಧರಾ || ಉಪ್ಪಿಟ್ಟಂ ದೋಸೆಯನ್ನಾಗಿಸುತಿಡಲಿಯನಾ
        ದೋಸೆಯಿಂ ಮಾಳ್ಪ ಪಾಂಗಿಂ
        ತಪ್ಪಾಗಿರ್ಕುಂ ವಯಸ್ಯಾ! ಸದಯಸಹೃದಯಾ !
        ರಾಮಚಂದ್ರಾ ! ಗುಣೇಂದ್ರಾ !!
        ಕಪ್ಪಿಟ್ಟಿರ್ಕುಂ ಕವಿತ್ವಂ ಸುರುಚಿರಮೆನಿಪಾ
        ರೂಪಕಂ ಲುಪ್ತಮಾಗಳ್
        ತುಪ್ಪಂ ತಾಂ ಬೆಣ್ಣೆಯಾಗಲ್ಕಳವೆ? ಉಪಮೆಯುಂ
        ನೀಗೆ “ವೋಲ್” ರೂಪಮೇಂ ಪೇಳ್? 🙂 🙂

        • ಸ್ವರವೊಂದಿರ್ದುದು ಮಾಡುನೀಂ ಬಡವನಾ ನಾಮಂ ‘ಮಡಗ್ದಂಗಿರೆಂ’
          ವರರೂಪಕ್ಕದು ಸಲ್ವುದೆನ್ನುತಲಹಾ ಒತ್ತಾಯಿಸಿರ್ಕುಂ ಗಡಾ
          ಹುರುಪೆಷ್ಟಿರ್ದೊಡೆ ‘ವೋಲ’ಬಾಣಸಿಗಗಂ ತಾನಪ್ಪುದೇ ಭೋಜನಂ
          ಸರಿಯೊಪ್ಪಿರ್ಕೆರಿಪೇರಿಯಾಗದೆನುತುಂ ಬೇರೊಂದನೇ ಮಾಳ್ಪೆನಾಂ
          🙂 🙂

        • ರಂಪರು ಯಾಕೋ ತಂಪಾಗಿದ್ದಾರೆ, ಅವರ ವರಸೆಯನ್ನು ನಾನು ಮುಂದುವರೆಸುತ್ತೇನೆ ಅವರು ಬರುವವರೆಗೆ: ಉಪ್ಪಿಟ್ಟು, ದೋಸೆ ಇಡಲಿಗಳನ್ನಾಗಿಸಿದ ಮೇಲೆ ಕವಿತ್ವ ಕಪ್ಪಿಟ್ಟಿದ್ದು ಕಾಫಿಗೆ ಇರಬೇಕಲ್ಲವೇ? 😀

          • ಕಾಮೆಂಟ್ ಚೆನ್ನಾಗಿದೆ.
            ನನಗೆ ಸಲ್ಲುವ ಬೈಗುಳನ್ನು ಹಂಚಿಕೊಳ್ಳಲು ಒಬ್ಬರು ಸಿಕ್ಕಿದುದು ಸಂತೋಷದಾಯಕ 😉
            ಅಲಂಕಾರಪಾಠಗಳನ್ನು ಇನ್ನೂ ನೋಡಿಲ್ಲ. ಹಾಗಾಗಿ ತಡ. ಈಗ ಒಂದು tentative ಪದ್ಯ ಹಾಕಿದ್ದೇನೆ. ೧೭ ನೋಡಿ.

          • ಪ್ರಿಯ ಜಿ ವೆಂ, ನಾನು ನನ್ನ ಸ್ರಗ್ಧರಾ-ವಿನೋದಪ್ರದ್ಯದಲ್ಲಿ ಉಪ್ಪಿಟ್ಟಿನ ಪ್ರಸ್ತಾವ ತಂದಿದ್ದಕ್ಕೆ ಕಾರಣ “ಉಪಮಾ” ಎಂಬ ಅಲಂಕಾರಕ್ಕೂ “ಉಪ್ಮಾ” ಗೂ ಇರುವ ಧ್ವನಿಸಾಮದಿಂದ. ಅದನ್ನು ನೀವು ತುಂಬ ಸೊಗಸಾಗಿ ಕಾಫಿಗೆ ತಂದು ಮುಟ್ಟಿಸಿದ್ದೀರಿ.

            ಹಾದಿರಂಪರಿನ್ನು ಓದದೇ ನೋಡದೇ
            ಸ್ವಾದುಪದ್ಯರೂಪಕಂಗಳನ್ನು |
            ಪೋದಿಮಾಳ್ಪ ಜಾಣ್ಮೆಗೇನೆಂಬೆನೋ ನಾನು
            ಬೀದಿಯಿದುವೆ ಭಾರತೀಯರೆಮ್ಮಾ ||
            (ನಾವೆಲ್ಲ ಯಾವುದೇ modern gadgetಗಳನ್ನು operation manual ಗಳನ್ನು ಓದುವ ಹಂಗಿಲ್ಲದೆ operate ಮಾಡುವೆವಷ್ಟೆ:-)
            ಪೋದಿ ಎಂದರೆ ಆರೈಕೆ ಎಂದರ್ಥ.

          • ಉಪ್ಪಿಟ್ಟಿನೊಂದಿಗೆ ಕಪ್ಪನೆ ಕಾಫಿಯ
            ಕಪ್ಪೊಂದು ಬೇಕೇ ಬೇಕಲ್ಲ ಚಪಲಕ್ಕೆ
            ಸೊಪ್ಪು ಹಾಕದಲೆ ದಾರಿಲ್ಲ

            (ಟೀನವರು ಬೇಕಾದರೆ ಸೊಪ್ಪು ಹಾಕಿಕೊಳ್ಳಬಹುದು)

            ಓದದೆ ಪಾಠವ ಪೋದಿಯ ಮಾಡುವ
            ಬೀದಿಯಿದೆಲ್ಲ ನಾಡಲ್ಲಿ ಜನರೆಲ್ಲ
            ಮೋದದೆ ಸವೆದು ಸುಖಿಪರು 😉

  8. In vasantatilakA :

    वेश्मन्-विहीन-पथिकः कृतबन्धुदूरः
    लोभार्थमोहजहितो विजित-क्षुधोऽयं |
    सन्यासनामचितवान् खलु शंसनीयः
    दारिद्र्य-कूप-पतितो हिहिही- कृतोऽस्ति ||

    With kith and kin distant,
    Abandoned greed, money and craving,
    The master of hunger,
    The homeless wanderer
    with the label renunciate is celebrated.
    While the poverty-well-fallen
    are met with sniggering – he he he.

    Offtopic : While typing this, it occurred to me that the pratyAhAra for soft-consonants is curiously हश् “Hush” 😀

    • Dear friend, there are several grammatical errors in your poem and even the main issue of fitting a clear rUpakaalaMkaara is missing. Pl call me on phone so that I can clarify the grammatical errors in detail.

  9. ಪದ್ಯರಚನೆಯಲ್ಲಿ ಮತ್ತೊಂದು ಬಡ ಪ್ರಯತ್ನ ಛಂದಸ್ಸು ಹಲವು ಕಡೆ ತಪ್ಪಿದೆ ದ್ವಿತೀಯಾಕ್ಷರ ಪ್ರಾಸ ಸಾಧ್ಯವಾಗಲಿಲ್ಲ ಮನ್ನಿಸಿ ಯಾರಾದರೂ ತಿದ್ದಿದರೆ ಆಭಾರಿಯಾಗಿರುತ್ತೇನೆ

    ಆಶಿಸಿದೆ ಭವ್ಯಭವನವನು ಕಟ್ಟಲು
    ರಾಗ ಚಂದ್ರಮೌಳಿಯವರಂತೆI
    ಆದರೆ ನನ್ನತಿ (ಶಬ್ದ) ದಾರಿದ್ರ್ಯದಲಿ
    ಮೂಡಿದುದು ಹರಿದ ಮುರಿದ ಗುಡಿಸಲು II

    • ಇದೇ ಭಾವವನ್ನು ಸ್ವಲ್ಪ ಬೇರೆಯರೀತಿ ವ್ಯಕ್ತಪಡಿಸಿದ್ದೇನೆ:

      ರಾಗರೊಲು ಮೌಳಿಯೊಲು ನಲ್ಗಬ್ಬಮೊರೆವೆನೆನೆ
      ಸಾಗಲುತ್ಸಾಹಪರ್ವತಶಿಖರದಿಂ
      ಮಾಗಿರದ ಸೊಲ್ಗಾಳಿ ಬೀಸೆ ತ್ರಾಸಪ್ರಾಸ-
      ಮಾಗುತುರುಳಿದೆ ಗೊಂದಲಕ್ಕಜದೊಳು
      ರೂಪಕಗಳನ್ನು ಬಳೆಸುವ ಪ್ರಯತ್ನ ಪಟ್ಟಿದ್ದೇನೆ: ಉತ್ಸಾಹಪರ್ವತ, ಸೊಲ್ಗಾಳಿ, ತ್ರಾಸಪ್ರಾಸ,

  10. ಬಡತನವು ದೇವತೆಗಳಿಗೂ ಮಹಾಪುರುಷರಿಗೂ ಸಹ ಬಿಟ್ಟದ್ದಲ್ಲವೆಂದು ಸಮಾಧಾನ ಪಟ್ಟುಕೊಂಡ ಬಡವನೊಬ್ಬನ ಭಾವನೆಗಳಿಗೆ ಪದ್ಯರೂಪ ನೀಡುವ ಪ್ರಯತ್ನ ಮಾಡಿದ್ದೇನೆ.

    ನಾನು ಬಡವನೆ, ಅಲ್ಲ, ಅಟ್ಟಡುಗೆಗನುವಿಲ್ಲ,
    ಏನ ಪೇಳಲಿ, ರಾಮ ಕಂದ ಫಲ ತಿಂದ |
    ನಾನು ಬಡವನೆ, ಅಲ್ಲ, ಭಕ್ಷ್ಯಭೋಜ್ಯವಿದೂರ,
    ಏನ ಪೇಳಲಿ, ಶಿವನೆ ತಿರಿದುಣ್ಣುವಂ |

    ನಾನು ಬಡವನೆ, ಅಲ್ಲ, ಮೃಷ್ಟಾನ್ನ ಬೇಕಿಲ್ಲ,
    ಏನ ಪೇಳಲಿ, ಕೃಷ್ಣ ಪೃಥುಕವನೆ ತಿಂದ |. (ಪೃಥುಕ = ಅವಲಕ್ಕಿ)
    ನಾನು ಬಡವನೆ, ಅಲ್ಲ, ಧನಕನಕಹೀನನೈ,
    ಏನ ಪೇಳಲಿ, ತಿರುಮಲೇಶ ಬಡವಂ |. (ಹಣವಿಲ್ಲದೆ ಕುಬೇರನನ್ನು ಬೇಡಿದ)

    ನಾನು ಬಡವನೆ, ಅಲ್ಲ, ವಾಸಗೃಹವೆನಗಿಲ್ಲ,
    ಏನ ಪೇಳಲಿ, ಪಾಂಡವರು ವನದೊಳಿರ್ದರ್ |
    ನಾನು ಬಡವನೆ, ಅಲ್ಲ, | ಉಡೆ ವಸ್ತ್ರ ಸಿಗಲಿಲ್ಲ,
    ಏನ ಪೇಳಲಿ, ನಳನು ಸೀರೆಯುಟ್ಟo|. (ಹಂಡತಿಯ ಸೀರ ಹರಿದು)

    ನಾನು ಬಡವನೆ, ಅಲ್ಲ, ಬಡತನವದೆನಗಿಲ್ಲ,
    ಏನ ಪೇಳಲಿ, ಪ್ರಾಪ್ತದಲೆ ಸುಖವದಿಹುದು |
    ನಾನು ಬಡವನೆ, ಅಲ್ಲ, ಬಾಹ್ಯದಲಿ ನಿರ್ಗತಿಕ
    ಏನ ಪೇಳಲಿ, ಮನದೆ ಧನಿಕನಹೆನು |

    ದೋಷಗಳಿದ್ದರೆ ಕ್ಷಮೆಯಿರಲಿ. ಕುಂದುಗಳನ್ನು ತಿಳಿಸಿದರೆ ಮುಂದಿನ ಪ್ರಯತ್ನಗಳಿಗೆ ಮಾರ್ಗದರ್ಶನವಾದೀತು.

    • ಆತ್ಮೀಯರೇ! ನಿಮ್ಮ ಕವಿತೆಯ ಸೊಗಗ್ಸು ಮನನೀಯ. ಆದರೆ ರೂಪಕವು ಮಾತ್ರ ಮಾಯ !!!
      ತಮ್ಮ ವ್ಯಾಜ(ನಿಮಿತ್ತ)ದಿಂದ ಎಲ್ಲ ಮಿತ್ರರಿಗೂ ಒಂದು ನಿವೇದನೆಯನ್ನು ಮಾಡಿಕೊಳ್ಳುತ್ತಿದ್ದೇನೆ.

      ದಯಮಾಡಿ ಅಲಂಕಾರದ ವಿಡಿಯೋಪಾಠಗಳನ್ನೋ ಇನ್ನಿತರ ಗ್ರಂಥಗಳನ್ನೋ ಚೆನ್ನಾಗಿ ಗಮನಿಸಿ ಕವನಿಸಿರಿ. ಹೆಚ್ಚಿನವರ ಕವಿತಾಕೌಶಲಕ್ಕೆ ಕೊರತೆಯಿಲ್ಲ, ಛಂದಸ್ಸಂತೂ ಪಳಗಿದೆ. ಆದರೆ ಹೊಸತಾದ ಅಲಂಕಾರನಿಯಮವು ಮಾತ್ರ ಮೈಗೂಡಿದಂತಿಲ್ಲ:-)

  11. ನೂರಾಸೆಯ ಪೇರಲೆಗಳ
    ವೇರುಕ್ಕುವ ಪೂರ್ವಕರ್ಮಫಲಗಳ ನದಿಗಳ್
    ಸೇರುವ ನೆಮ್ಮಿನ ತೀರವು
    ಪಾರಾಗುವ ಬಗೆಯು ಕಾಣದಬ್ಧಿ ಬಡತನಂ

    • ಅತಿಸುಂದರಕಂದಪದ್ಯಮೀ
      ಗತಿಯಿಂ ಮೂಡಿದುದಾರವಾಗ್ರಮಾ-
      ಪತಿ! ವೆಂಕಟ! ಭಾವಬಂಧುರ-
      ದ್ಯುತಿಯಿಂ ಕಂದಲಿತಂ ವಿನೂತನಂ ||

  12. भूश्रीकोशे भुवनमुकुटे विस्तृते देशमेरौ
    देवावासे नगरशिखरे राजधान्यां महत्याम् ।
    आग्नेये मे ननु विहरतः स्वेच्छया भागधेयं
    त्यक्तं पत्रं पथि बहुचिरं मन्यते स्वस्य भूतिम् ॥

    ಭಾವಾರ್ಥ ಹೀಗಿದೆ – ಶ್ರೀಮಂತವಾದ ಅಮೇರಿಕ ದೇಶದ ರಾಜಧಾನಿಯಾದ ವಾಷಿಂಟನ್ನಿನ ಆಗ್ನೇಯಭಾಗವು ಬಡವರಪ್ರದೇಶ. ಅಲ್ಲಿ ಸುರಕ್ಷತೆಯೂ ಕಡಿಮೆ. ರಾತ್ರಿಹೊತ್ತಿನಲ್ಲಿ ಅಡ್ಡಾಡಿದರೆ ಜೇಬಿಗೋ ಜೀವಕ್ಕೊ ಅಪಾಯ ಇದ್ದಿದ್ದೆ. ಇದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ನಗರದ ಆ ಭಾಗದಲ್ಲಿ ಬಿಸಾಡಿದ ಕಾಗದವೊಂದು ತನ್ನ ಸ್ವಾತಂತ್ರ್ಯವನ್ನು ಭಾಗ್ಯವೆಂದು ಕಾಣುತ್ತದೆ ಈ ಪದ್ಯದಲ್ಲಿ. ಬಡವರ ಪ್ರದೇಶದಲ್ಲಿ ಸ್ವಚ್ಛತೆ ಕಡಿಮೆ ತಾನೆ. ಧನಿಕರ ಪ್ರದೇಶದಲ್ಲಿ ಪೌರಕಾರ್ಮಿಕರು ನಿತ್ಯ ನೆಲ ಗುಡಿಸುತ್ತಾರೆ. ಅದೇ ಕಾಳಜಿ ಬಡವರ ಕಾಲೋನಿಯಲ್ಲಿ ಎಲ್ಲ್ ಸ್ವಾಮಿ ಕಾಣುತ್ತೆ? ಅದಕ್ಕೆ ಅದರ ಸ್ವಾತಂತ್ರ್ಯ.

    ಅಮೇರಿಕೆಯನ್ನು ವರ್ಣಿಸಲು ಈ ಪದಗಳನ್ನು ಬಳಿಸಿದ್ದೇನೆ –
    ಭೂಶ್ರೀಕೊಶ (ಭೂಮಿಯ ನಿಧಿ),
    ದೇಶಮೇರುಃ (ದೇಶವೇ ಮೇರು ಪರ್ವತ – ಅಂತಹ ಪ್ರಾಮುಖ್ಯತೆಯನ್ನು ಲೋಕ ಕೊಡುತ್ತೆದು ಭಾವ)
    ಭುವನಮುಕುಟು
    ಅಂತೆಯೇ ಅದರ ರಾಜಧಾನಿಯನ್ನು ವರ್ಣಿಸಲು — ದೇವರ ಆವಾಸವೆಂದು ಮತ್ತು ನಗರಶಿಖರವೆಂದು (ಆ ನಗರವೇ ಶಿಖರ).

    ತಪ್ಪುಗಳನ್ನು ತಿದ್ದಬೇಕೆಂದು ಪ್ರಾರ್ಥನೆ.

    • प्रियसख !

      नूनमभिनवकल्पनानुप्राणितं भवत्पद्यं हरति चेतांसि सचॆतसाम् । किं च नात्र रूपकाल्ङ्कारॊ जागर्ति स्फुटतया। सत्यमेवालङ्कारोsयं भूश्रीकोशे देशमेरौ इत्यादिषु पदेशु श्रावणमासि रविकान्तिरिव क्वचिद्दृश्यते। तथापि
      रूपकमर्हतीतोsपि प्रौढिमानं भवत्कवितासु कमनीयरतासु ।

  13. ಚಂ||
    ಬಡತನ ರಾವು ಜೀವರವಿಯಂ ಪಿಡಿದೆಂದಿಗೆ ಮೋಕ್ಷದಕ್ಷಣಂ?
    ಬಡತನ ಬೆಂಕಿ ಹತ್ತಿರಲದೆಂದಿಗೆ ತಾಳ್ವುದು ಶಾಂತಲಕ್ಷಣಂ?
    ಮೃಡನಯನಾಗ್ನಿ ಸಂತತದಿ ದಾಹಿಪ ರೂಪ ದರಿದ್ರವಾದುದೈ
    ಅಡಿಗಡಿಗೆದ್ದುಕೊಲ್ವ ನವ ನೂತನ ಯಾತನೆ ಯೀವ ಸಾವಿದೈ

    (ರಾಹುಗ್ರಸ್ತರವಿಗೆ ಬಿಡುಗಡೆಯುಂಟು, ಹತ್ತಿದಬೆಂಕಿ ಆರುವುದು, ರುದ್ರನೇತ್ರ ಸದಾ ತೆರದಿರದು, ಆದರೆ ಬಡತನದ ಗ್ರಹಣ, ದಹನ ಸಂತತ ಎಂಬ ಭಾವ)

    ಮೆಲನೆ ನಿಧಾನದಿಂ ಕೊಲುವ ಶಂಕರ ನೀಂಟದ ಕಾಲಕೂಟವೈ
    ಛಲದೊಳಗೇಳುವರ್ಷಗಳ ದಾಟುತ ಕಾಡುವ ಕಾಗೆದೇರನೈ
    ನಿಲದೆ ಚಣಂ ವಿದಾರಿಸುತ ಕೊಲ್ಲುತ ಕೊಲ್ಲದ ದಂದಶೂಕನೈ
    ಕುಲುಮೆಯೊಳುಂ ಸುಧಾರಿಸದೆ ಪೆಟ್ಟಿನಮೇಲ್ವಿಡಿಕೆಟ್ಟ ಯಂತ್ರವೈ

    (ಹಾಲಾಹಲ ಒಮ್ಮೆಯೇ ಕೊಲ್ಲುವಂಥಾದ್ದು, ಬಡತನದ ಗರಳ ನಿಧಾನವಿಷ, ಶನಿ(ಕಾಗೆದೇರ)ಕಾಟ ಏಳರಾಟವಾದರೆ ಇದು ಏಳಕ್ಕೇ ಮುಗಿಯದ ನೂತನಶನಿ, ಹಾವು (ದಂದಶೂಕ) ಒಂದು ಸಲಕಚ್ಚಿದರೆ, ದಾರಿದ್ರ್ಯಸರ್ಪ ಸದಾ ಕಚ್ಚುತ್ತ ಕೊಲ್ಲದೆ ಹಿಂಸಿಸುವ ಹೊಸ ಹಾವು, ಕಮ್ಮಾರನ ಚಮ್ಮಟಿಗೆಯೇಟಿಗೆ ನಿಲುಗಡೆಯಿದೆ ಆದರೆ ಬಡತನ, ನಿಲುಗಡೆಯಕೀಲಿಯಿಲ್ಲದೆ ಬಡಿಯುವ ಯಂತ್ರ)

    ರೂಪಕಾಲಂಕಾರದಲ್ಲಿ ವಾಕ್ಯಗತ, ಸಮಾಸಗತ, ಅಭೇದ, ತಾದ್ರೂಪ್ಯ, ಅಧಿಕ, ನ್ಯೂನ, ಅನುಭಯ ಇತ್ಯಾದಿ ಭೇದಗಳಿವೆ ಎಂದು ಅಲಂಕಾರ ಶಾಸ್ತ್ರಗಳು ತಿಳಿಸುತ್ತವೆ. ಇಲ್ಲಿ ಯಾವ ರೂಪಕ ಬಂದಿದೆಯೋ, ಬಂದಿಲ್ಲವೋ ಅವಧಾನಿಗಳೇ ತಿಳಿಸಬೇಕು. ಬಳಸದ ವಿಧಾನಗಳನ್ನು ಉಳಿದವರು ಯತ್ನಿಸಬಹುದು. ಮರೆತುಹೋದದ್ದು ಮರುಕಳಿಸಿದಾಗ ಮೈಗೂಡುವ ಮೈಲಿಗೆಯಂತೆ ಈ ಸ್ವೇಚ್ಚಾಯತ್ನ. ಹದ್ದುಗಳಮೀರದೆಲೆ ತಿದ್ದಿಕೊಳೆ ಮನವುಂಟು…

    • ಚಂದ್ರಮೌಳಿಯವರೆ, ಪದ್ಯಗಳು ಬಹಳ ಚೆನ್ನಾಗಿದೆ:)
      ರೂಪಕಾಲಂಕಾರ ಪ್ರಭೇದಗಳನ್ನು ತಿಳಿಸಿಕೊಟ್ಟಿರುವಿರಿ ಧನ್ಯವಾದಗಳು. ವಾಕ್ಯಗತ, ಸಮಾಸಗತ, ಅಭೇದ, ತಾದ್ರೂಪ್ಯ, ಅಧಿಕ, ನ್ಯೂನ, ಅನುಭಯಗಳ ಸ್ಥೂಲಲಕ್ಷಣಗಳನ್ನು ಅಥವಾ ಬಳಕೆಯ ಒಂದೊದು ಉದಾಹರಣೆಯನ್ನು ಕೊಟ್ಟರೆ ಪ್ರಯತ್ನಿಸುತ್ತೇವೆ

      • Thanks Dear Soma. Ganesh is the competent person to guide on this . I have sought his views for the same reason and I am with you awaiting…

        • ಸೊಗಸಾದ ಅಭೇದ ಮತ್ತು ತಾದ್ರೂಪ್ಯ ರೂಪಕಗಳ ವಲಯಕ್ಕೆ ಬರುವಂಥ ಉದಾಹರಣಪದ್ಯಗಳನ್ನು ರಚಿಸಿದ್ದೀರಿ.
          ತುಂಬ ಧನ್ಯವಾದ.

          • ದಾರಿದ್ರ್ಯವರ್ಣನೆಗೆ ರೂಪಕವು ಸೋತುದೇಂ
            ದಾರಿದ್ರ್ಯಕೇಕಲಂಕಾರವೆನುತ?
            ದಾರಿದ್ರ್ಯ ಮಹಿಮೆ ಕಾವ್ಯಕೆಸೋಕದಿರೆಸಾಕು
            ಭಾರವಿಲ್ಲೆಂದುದೈ ಕವಿತೆ ನಗುತ 🙂

      • ಪ್ರಿಯ ಸೋಮ,
        ನಿನ್ನ್ ಉತ್ಸಾಹ-ಉದ್ಯಮಶೀಲತೆಗಳಿಗೆ ದಕ್ಕದ ಯಾವುದೇ ಗುರಿಯಿರಲಾರದೆಂಡರೆ ಅತಿಶಯವಲ್ಲ. ಈ ಪ್ರಭೇದಗಳನ್ನು ತಿಳಿಯಲು ಅಪ್ಪಯದೀಕ್ಷಿತರ ಕುವಲಯಾನಂದಗ್ರಂಥವನ್ನು ನೋಡಬೇಕು. ಆದರೆ ಸದ್ಯದ ಪ್ರಯೋಗದಕ್ಷತೆಗೆ ಕೇವಲ ರೂಪಕಸಾಮಾನ್ಯದ ಅರಿವು ಸಾಕು. ಶಾಸ್ತ್ರವು ಒಂದು ಅಳವನ್ನು ಮೀರಿದ ಬಳಿಕ ಪ್ರಯೋಗಕ್ಕೆ ದುಷ್ಕರವಾಗುವುದು.ಈ ಬಗೆಗೆ ಹೆಚ್ಚಿನ ವಿವರವನ್ನು ಮುಖತಃ ಹೇಳಿಯೇನು.

        • Priya Ganesharige namanagaLu

          We are grateful for your expert guidance. I am particularly impressed by your handling of a disparate range of poetic talent among Padyapaanis. Your comment on too much detail getting in the way of good composition brings to mind an English metaphor ” losing the wood for the trees”

        • ಗಣೇಶ್ ಸರ್, ಆಯ್ತು ನಿಮ್ಮೊಡನೆ ಮಾತನಾಡುತ್ತೇನೆ 🙂

  14. ಹುಟ್ಟಿಬಂದಿಹ ತಟ್ಟೆಹೊಟ್ಟೆಯು
    ಮೆಟ್ಟಿನಿಲ್ಲಲು ಕಷ್ಟ ಕರ್ಮದಿ
    ಮುಟ್ಟಿಕೂಳಿಗು ಜೀವತೇದಿರೆ ನೊಂದು ಬಡತನದೊಳ್ ।
    ಗುಟ್ಟು ಕಂಡಿದೆ ಹುಟ್ಟಘಟ್ಟದೆ
    ಕೊಟ್ಟು ಬರುವಾ ಕರ್ಮಮರ್ಮವ
    ನಿಟ್ಟ ವಿಧಿಯಾ ತಾರತಮ್ಯದೆ ಬಂದ ಬದುಕಿನೊಳುಂ ।।

    (ತಟ್ಟೆಹೊಟ್ಟೆ = ಕೃಶದೇಹ , ಹುಟ್ಟಘಟ್ಟ = ಬದುಕಿನ ಅವಸ್ಥೆ)

    ಹಿಟ್ಟಿಲ್ಲದ ಹೊಟ್ಟೆ, ಜುಟ್ಟಿನಲ್ಲಿ ಮುಡಿದೊಂದು “ಚೆಂಡು”ಹೂ – ಬಡತನದ ಅಲಂಕಾರ ಸರಿಯಿದೆಯೇ?

    • ಪದ್ಯವೇನೋ ಚೆನ್ನಾಗಿದೆ. ಆದರೆ ರೂಪಕಾಲಂಕಾರದ ಪಸೆಯಿಲ್ಲಿಲ್ಲ:-)

      • ಕ್ಷಮಿಸಿ ಗಣೇಶ್ ಸರ್, “ಅಲಂಕಾರ”ದ ಬಗೆಗೆ ಅರಿವಿಲ್ಲ. ವಿಡಿಯೋ ಪಾಠಗಳನಿನ್ನೂ ವೀಕ್ಷಿಸಲು ಸಾಧ್ಯವಾಗಿಲ್ಲ (ಕೆಲಸದ ಒತ್ತಡ). ನಿಮ್ಮ “ಅಲಂಕಾರ ಶಾಸ್ತ್ರ” ಓದಿ, ಪದ್ಯ ರಚನೆಯ ಆಳ ವಿಸ್ತಾರಗಳ ಕಲ್ಪನೆ ಒದಗಿ, ಒಂದು ವಿಧವಾದ ಉತ್ಸುಕತೆ ಮೂಡಿದೆ. ಹೂ “ಚೆಂಡು” ಮುಡಿಯುವ ಕಾತುರವಿದೆ.

  15. ದಾರಿದ್ರ್ಯಾಂಜನ-ಲಿಪ್ತೇನ ವೃಥಾನ್ಯೇಂದ್ರಿಯ-ಧಾರಿಣಾ |
    ಸರ್ವಂ ಸಾರಮಯಂ ವಿಶ್ವಂ ನೇತ್ರಾಭ್ಯಾಮನುಭೂಯತೇ ||

    ಡಿವ್ಯ ಅಂಜನವನ್ನು (ಕಣ್ಣಿಗೆ) ಹಚ್ಚಿಕೊಂಡವರಿಗೆ ವಿಶೇಷವಾಗಿ ಜಗತ್ತಿನಲ್ಲಿರುವುದೆಲ್ಲಾ ಕಾಣಿಸುತ್ತದೆಯಂತೆ.
    ಆದರೆ ದಾರಿದ್ರ್ಯವೆಂಬ ಅಂಜನವನ್ನು ಹಚ್ಚಿಕೊಂಡವನು ಜಗತ್ತಿನ ಸರ್ವ ಸುಖ-ಸಾರಗಳನ್ನೂ ಕೇವಲ ಕಣ್ಣುಗಳಿಂದಲೇ ಅನುಭವಿಸಬೇಕು ಎಂದು ಕುಹಕ.

    ದಾರಿದ್ರ್ಯಾಂಜನ ಎನ್ನುವಲ್ಲಿ ರೂಪಕಾಲಂಕಾರದ ಪ್ರಯತ್ನ.

    • ಸುಧೀರ್ ಸರ್, ಬಹಳ ಚೆನ್ನಾಗಿದೆ ಬಡವನ ಅಸಹಾಯಕ ನೋಟದ ವರ್ಣನೆ

    • ಸುಧೀರಪ್ರತಿಭಾಪ್ರೋತಂ ಪದ್ಯಕೌಶೇಯಮನ್ವಹಮ್ |
      ನ ಜಹಾತಿ ವಿಧೇರ್ಯೋಷಾ ವೇಷಭೂಷಣಕೇಷಣಾ ||

  16. ಕೂಳೆಕಾಣ್ಕೆಯೆಂದು ಗೆಯ್ವ ಕಾರ್ಯವಾಸಿಮನದವರ್
    ನಾಳಿನಾಸೆಗಣ್ಗಳಿಂದೆ ನಲ್ಮೆಗನಸನರಸುವರ್

    ಸುಧೀರ್ ಅವರ ಪದ್ಯದಿಂದಪ್ರೇರಿತನಾಗಿ

  17. ಕಾಸ ಬಿಚ್ಚದಿರದಿರ್ದಿರಲೇನು ಸಿರಿವಂತ
    ರಾಸಿಕ್ಯದಾರಿದ್ರ್ಯಮಿರದಾತನೊಳ್|
    ಮಾಸುಸೀರೆಯನುಟ್ಟ ದೀನವಧುವೊಳವನುಂ
    ಸೋಸಿ ನೋಡನೆ ಛವಿಸಮೃದ್ಧಿಯನ್ನುಂ||

    I am not sure if ರಾಸಿಕ್ಯದಾರಿದ್ರ್ಯ and ಛವಿಸಮೃದ್ಧಿ are ರೂಪಕಾಲಂಕಾರ. ನನ್ನದು ’ನೇತಿ-ನೇತಿ’ಪ್ರಕ್ರಿಯಾ ಕಲಿಕೆ.

    • ಇಲ್ಲ, ನಿಮ್ಮ ನೇತಿ ನೇತಿ ಕ್ರಮದ ಕಲಿಕೆ ವೇದಾಂತಕ್ಕಾದೀತು; ಕಾವ್ಯಾಲಂಕಾರಕ್ಕಲ್ಲ. ನೀವು ರೂಪಕವೆಂದು ಹೆಸರಿಸಿರುವ ಪದಪುಂಜಗಳಲ್ಲಿ ರೂಪಕಾಲಂಕಾರವಿಲ್ಲ. ರೂಪಕವು ಉಪಮಾನ-ಉಪಮೇಯಗಳ ಅಭೇದನಿರೂಪಣೆಯಲ್ಲಿದೆಯಲ್ಲದೆ ಸುಮ್ಮನೆ ಸಮಾಸಗಳಲ್ಲಿಲ್ಲ. ರಾಸಿಕ್ಯ ಮತ್ತು ದಾರಿದ್ರ್ಯಗಳ ನಡುವೆಯಾಗಲಿ ಛವಿ ಮತ್ತು ಸಮೃದ್ಧಿಗಳ ನಡುವೆಯಾಗಲಿ ಯಾವುದೇ ಉಪಮಾನೋಪಮೇಯಭಾವವಿಲ್ಲ. ಹೆಚ್ಚಿನನ್ವುವರಗಳನ್ನು ಮುಖತಃ ತಿಳಿಸುವೆ.

      • ’ಉಪಮಾನ-ಉಪಮೇಯಗಳ ಅಭೇದನಿರೂಪಣೆ’ – ಎಷ್ಟೋಮಟ್ಟಿಗೆ ಬೋಧೆಯಾಯಿತು. ಆದರೂ ಇನ್ನೊಂದೆರಡು ಪದ್ಯಗಳು ಎಡವದ ಹೊರತು ಅದು ಸಿದ್ಧಿಸದು. ಎಂದಿನಂತೆ ತಿದ್ದಬೇಕೆಂದು ವಿನಂತಿ.

        • ಎಡವದೆ ನಡೆಯಂ ಕಲಿಯಲ್
          ನಡಿಗೆಯ ಬೆಲೆಯೆಂತು ತಿಳಿಯಲಕ್ಕುಂ ಜಗದೊಳ್ |
          ಮಡದಿಯ ಮುನಿಸಂ ಸವಿಯದ
          ಮಡಿಗಂಡಂಗೆಂತು ಗೃಹಿತೆಯಳವಟ್ಟಿರ್ಕುಂ?

          (ಗೃಹಿತೆ =House-holdership, ಗಾರ್ಹಸ್ಥ್ಯ)

  18. ರೂಪಕಾಲಂಕಾರದ ಬಡತನದ ಪದ್ಯಗಳು 🙂

    ಮಾನಮುಚ್ಚಲು ತಂದೆಯುಡುತಿದ್ದ ಕೋಪೀನ
    ವೇನು ಹರಿದರುಮದನೆಯುಡುತಿದ್ದರು
    ಬಾನಿಗಿಂತೆತ್ತರಕೆ ಬೆಳೆದೆನನ್ನೀಮಗನಿ
    ಗೇನಿದ್ದರಿನ್ನು ಬೇಡುವ ಬಡತನ

    ಬಂದಿರಲು ಬಡಭಿಕ್ಷು ಗತಿಯಿಲ್ಲದವನಂತೆ
    ನಿಂದಿರಲ್ಮನೆಯಂಗಳದಿ ಬೇಡುತ|
    ಬಂದಳೊಳಗಿಂದಕೊಡಲೇನಿಲ್ಲ ನನ್ನಲ್ಲಿ
    ಮುಂದೆಪೋಪೆಂದಳೈ ಮನೆಯೊಡತಿಯು|

    ಬಡವರನು ಕೀಳಾಗಿ ಕಾಣುತ್ತಿರಲ್ದೊರೆಯು
    ಬಡದೋಡಿಸಿದನವರ ಪುರದಾಚೆಗೆ|
    ಸುಡಲುತನ್ನರಮನೆಯ ಕೆಚ್ಚೆದ್ದ ಬಡಜನರು
    ಕಡೆಗವನ ಸಿರಿಯೆಬಡತನವಾಯಿತು|

    ಮಾಡಿದ ಸಾಲವ ಬಡವನು
    ಕಾಡಲು ಶನಿದೆಸೆಯಧೋಗತಿಗವನ ದೂಡಲ್
    ನಾಡನು ತೊರೆದನು ನಿಶೆಯೊ
    ಳ್ಳೋಡಿದ ಸಾವನ್ನುತಾನು ಸೇರುವುದಕ್ಕಂ

    ಮೇಲಿನ ನನ್ನ ದಂಡಯಾತ್ರೆಯ ಪದ್ಯಗಳಲ್ಲಿ ರೂಪಕಾಲಂಕಾರದ ಲಕ್ಷಣವೆಲ್ಲೂ ತಿಳಿಯಲಿಲ್ಲ…

    ಬಹಳಷ್ಟು ಪ್ರಯತ್ನದ ನಂತರೆ ಬರೆದ ಕೆಳಗಿ ಪದ್ಯದಲ್ಲಿ “ದುರ್ಭಾಗ್ಯದೇವತೆಯ” ಎಂಬಲ್ಲಿ ರೂಪಕಾಲಂಕಾರವಾಗಬಹುದೆ? ದಯವಿಟ್ಟು ತಿಳಿಸಿಕೊಡಿ

    ಬರಗಾಲದೊಳ್ಸುತ್ತಲಿರಲು ನೀರಿನಕೊರತೆ
    ಯುರಿಬಿಸಿಲಿನಿಂಬೆಳೆಯು ಸುಡುತಲಿರಲು|
    ಧರೆಯೊಳಿಹಬಡಜನರಿಗುಂಟಾದ ವೇದನೆಯೊ
    ಳಿರಲು ದುರ್ಭಾಗ್ಯದೇವತೆಯ ಗತಿಯು|

    • ಅಲಂಕಾರದ ವಿಷಯದಲ್ಲಿ ಏನೂ ಹೇಳಲಾರೆ. ಇತರೆ:
      ೧) ಕೌಪೀನ. ಕೋಪೀನ ಎಂಬ ರೂಪ ಸಾಧುವೆ ತಿಳಿಯದು.
      ೨) ಮುಂದೆಪೋಪೆಂದಳೈ – ಪೋಪೆ = ಪೋಗುವೆ. ’ಮುಂದೆಪೋಗೆಂದಳೈ’ ಎಂದಾಗಬೇಕು.
      ೩) ನಿಶೆಯೊಳ್ಳೋಡಿದ – ಅಸಾಧು. ನಿಶೆಯೊಳ್+ಓಡಿದ=ನಿಶೆಯೊಳೋಡಿದ

  19. ಬಿರುಗಾಳಿಯಂ ಬೀಸುತೊಡನಾಡಿಯನೆ ಕೆಡಹಿ
    ದರು ವನಸ್ಪತಿಗಳಾಗೀಗಳೊಮ್ಮೆ|
    ಮರುತನಂ ಹದಮಾಗಿ ಸಂವಹಿಸಿ ಸಲಹುವುವು
    ಪರಿಪರಿಯಿನನವರತವಿದ ಮರೆವೆವೈ||

    ಅಕ್ಷಿತರು ಮಡದಿಯಳ ಕುಡಿನೋಟದಿಂದೊಮ್ಮೆ
    ರಕ್ಷಿಪುದು ಪತಿಯ ಗ್ರಹಗತಿ ಕೂಡಲ್|
    ದಾಕ್ಷಿಣ್ಯಮಿಲ್ಲದೆಯೆ ಮಿಕ್ಕೆಲ್ಲ ಕಾಲದೊಳ್
    ರೂಕ್ಷ ಬಿರುನೋಟದಿಂ ಕಂಗೆಡಿಪುದೈ||

    ಅಕ್ಷಿತರು ರೂಪಕವೆನಿಸುತ್ತದೆಯೇನೋ. ಆದರೆ ಪ್ರಸ್ತುತತೆ ಅತ್ಯಲ್ಪ ಅಲ್ಲವೆ?

    ನೇತಿ ೨!

  20. ನೀವೂ ಸೇರಿದಂತೆ ನಿರಪವಾದವಾಗಿ ನೀಳ್ಗವಿತೆಗಳನ್ನು ಈ ಕಂತಿನಲ್ಲಿ ಬರೆದವರೆಲ್ಲರೂ ರೂಪಕಾಲಂಕಾರವನ್ನು ತರಲು ಸೋತಿದ್ದಾರೆಂದರೆ ಯಾರೂ ಬೇಸರ ಪಡಬಾರದು. ದಯಮಾಡಿ ಮತ್ತೊಮ್ಮೆ ಪಾಠಗಳನ್ನು ಕಾಣುವ ಮೂಲಕವೋ “ಅಲಂಕಾರತತ್ತ್ವ” “ಕನ್ನಡಕೈಪಿಡಿ” ಮುಂತಾದ ಗ್ರಂಠಗಳನ್ನು ಪರಿಶೀಲಿಸುವ ಮೂಲಕವೋ ಎಚ್ಚರದಿಂದ ಉದಾಹರಣೆಗಳನ್ನು ಲಕ್ಷ್ಯ-ಲಕ್ಷಣಸಮನ್ವಯದ ಹಾದಿಯಲ್ಲಿ ಗ್ರಹಿಸಿರಿ. ಇಲ್ಲವಾದರೆ ಆಸಕ್ತರಿಗೆ ಮತ್ತೊಮ್ಮೆ ಮುಖತಃಅ ವಿವರಿಸಿ ತಿಳಿಸುವೆ.

  21. बन्धनान्मुच्यते सर्वाच्छीतोष्णमतिलङ्घते ।
    देही सकृदुपास्ते यो दारिद्र्यब्रह्म निर्गुणम् ।

    भिक्षावेलाविलसद्याच्ञावाग्वीचिसन्ततावधुना ।
    मद्दारिद्र्यपयोधौ मैत्रावरुणीयते वदान्यः कः ॥

    ೧) ನಿರ್ಗುಣವಾದ (ಗುಣತ್ರಯಾತೀತವಾದ/ಸದ್ಗುಣಗಳಿಗೆ ಆಸ್ಪದವನ್ನು ಕೊಡದ) ದಾರಿದ್ರ್ಯಬ್ರಹ್ಮವನ್ನು ಉಪಾಸನೆ ಮಾಡುವಾತನು ಎಲ್ಲಾ ಬಂಧನಗಳಿಂದ (ಭವಬಂಧನಗಳಿಂದ/ಬಂಧುಮಿತ್ರಾದಿಬಂಧನಗಳಿಂದ) ಮುಕ್ತಗೊಂಡು, ಶೀತೋಷ್ಣಾದಿದ್ವಂದ್ವಗಳನ್ನು (ಜ್ಞಾನದಿಂದ / ಅಸಹಾಯಕತೆಯಿಂದ ಅವುಗಳಿಗೆ ಹೊಂದಿಕೊಂಡು) ಮೀರುತ್ತಾನೆ.

    ೨) ನನ್ನ ದಾರುದ್ರ್ಯವೆಂಬ ಕಡಲಿಗೆ ಭಿಕ್ಷಾವೇಳೆಯೇ (ಭಿಕ್ಷಾಸಮಯವೇ) ವೇಳೆ (ದಡ). ನನ್ನ ಯಾಚನೆಯ ಮಾತುಗಳೇ ಆ ದಡಕ್ಕೆ ಬಂದು ಬಡಿಯುವ ತರಂಗಗಳು. ಇಂತಹ ಕಡಲಿಗೆ ಯಾವ ದಾನಿ ಅಗಸ್ತ್ಯನಾಗುವನೋ (ಅಗಸ್ತ್ಯನು ಸಮುದ್ರಪಾನವನ್ನು ಮಾಡಿದ ಸಂದರ್ಭವನ್ನು ಸ್ಮರಿಸಬೇಕು) ನಾನು ತಿಳಿಯೆ.

  22. ಇರುವೆ-ಕಾರ್ಮಿಕನಲ್ಲ, ನಲಿವ ಮಿಡತೆಗೆ ಸಲ್ಲ
    ಪೆರಲೆಂದು ನಾನೊಂದು ಬಡಪದ್ಯಮಂ
    ಮರಳಿ ಮಾಡುತ ಯತ್ನ, ರೂಪಕವ ತರಲೆಂದು
    ಬರೆದಿರ್ಕೆ ಹೀಗೊಂದು ಚೌಪದಿಯನು ::

    ನೆರೆದ ಸಹಜತೆ ಹೊನಲು ಮಣ್ಣ ಪರಿಮಳ ಸೂಸಿ
    ತೆರೆಸಿತ್ತು ಮದಗಣ್ಣಿನಾ ಕುರುಡನು
    ಸಿರಿಯಜ್ವರವು ಬಿಟ್ಟು ಹೊರೆಯ ಧನವಿಳಿಯುತ್ತೆ
    ಮರುಕಳಿಸಿತಾನಂದ ತಾದಾತ್ಮ್ಯದ

    • ಭಲೇ ರಾಮ್! ಅಂತೂ ರೂಪಕಾಲಂಕಾರವನ್ನು ಚೌಪದಿಯಲ್ಲಿ ಸೆರೆ ಹಿಡಿದೇಬಿಟ್ಟಿರಿ, ಅಭಿನಂದನೆಗಳು:-)

  23. ಬಾರರು ಬಾಂಧವರುಂ, ಗೆಣೆ –
    ಗಾರರಿರದಿರೆ ಧನವೆಂಬ ಸಿಹಿಯು ಮನುಜರೊಳ್
    ದೂರ ಸರಿಯವೇಂ ಲತೆಯಿಂ
    ಪಾರ್ವ ಭಮರವಿರದಿರಲ್ಕೆ ಸುಮಸಿಂಗಾರಂ

    • ಪೂರ್ವಾರ್ಧದಲ್ಲಿ ಒಳ್ಳೆಯ ರೂಪಕವೇ ಇದೆ. ಉತ್ತ್ರಾರ್ಧವು ದೃಷ್ಟಾಂತಾಲಂಕಾರದ ಛಾಯೆಯನ್ನು ಹೊಂಡಿದೆ. ಆದರೆ ಅಡ್ಡಿಯಿಲ್ಲ. ಇಡಿಯ ಪದ್ಯವು ರೂಪಕಮಯವೇ ಅಗಬೇಕೆಂದೇನಿಲ್ಲ. ಆದರೆ ರೂಪಕಪ್ರಾಧಾನ್ಯವಾದರೂ ಇರಬೇಕಷ್ಟೆ. ಸುಮಶೃಂಗಾರಂಮ್ ಎಂದಾದಲ್ಲಿ ಅರಿಸಮಾಸವು ತಪ್ಪೀತು.

  24. ಚಳಿಪೊದಿಕೆ ಹೇಮಂತನಾಟೋಪರಕ್ಷೆಗಿರೆ
    ತೆಳುಗೈಯ್ಗಳಿಂದೆ ಯತ್ನದ ಗೆಯ್ಮೆಗಳ್
    ಗಲಿತಸುಖಮಂ ನಿತ್ಯಮನುಭವಿಸುತಿರ್ದು ಗಡ
    ಗುಳಿಗಂಗಳಿಂ ಶೂನ್ಯಕಾವ್ಯಮೊರೆವರ್

    • ರೂಪಕಾಅಲಂಕಾರವು ಪ್ರಸ್ಫುಟವಾಗಿ ಬಂದಿಲ್ಲವೆಂಬುದೊಂದೇ ಈ ಪದ್ಯದ ಕೊರತೆ. ಕಲ್ಪನೆ ಮಾತ್ರ ಸೊಗಸಾಗಿದೆ.

  25. ಬಧಿರಮಧುವ್ರತಾದಿಬಹುಬಂಭರಭೀರಟನೋದ್ಧಟಾರ್ಭಟ
    ಕ್ಕಧರಮತೋದಕಾಶಯಜಲೋತ್ಪಲಮಪ್ಪ ಸಮಾಜಭಾಜಕ
    ರ್ಗಧಿಕಪಟಿಷ್ಠಖೂಳಕರವಾಳಮಿದಕ್ಕಟ ; ಪಾರದೇಶ್ಯರ್ಗಿಂ
    ತಧುನವಿಚಿತ್ರರಂಜಕಮೃಗಂ ಗಡಮೀ ಘನರಾಷ್ಟ್ರಭರ್ತ್ಸನಂ

    ಬಧಿರಮಧುವ್ರತಾದಿ…. – ಕಿವಿ ಕೆಪ್ಪಾಗಿರುವ ನಮ್ಮ ಮಧುವ್ರತರು ಅರ್ಥಾತ್ ಮಧುವನ್ನು(ಮದ್ಯವನ್ನು) ಹೀರುವ so called “ಜನಪ್ರತಿನಿಧಿಗಳು”
    ಅಧರಮತೋದಕಾಶಯ… – ಕೀಳಾದ ಮತಗಳೆಂಬ (votes) ಸರೋವರದ ಕನ್ನೈದಿಲೆ ಪುಷ್ಪ
    ಪಟಿಷ್ಠ – ಹರಿತವಾದ

    • ಬಂಧಗುಣವೇನೋ ಸೊಗಸಾಗಿದೆ. ಆದರೆ ಪದ್ಯದ ಭಾವವು ಮಾತ್ರ ಸ್ಪಷ್ಟವಾಗುತ್ತಿಲ್ಲ.
      ದೂರವಾಣಿಯಲ್ಲಿ ಚರ್ಚಿಸಬಹುದು.

      • Dear sir,

        “ಉಳಿದ ಸಮ್ಯಗಳಲ್ಲಿ ಕಿವುಡರಂತೆ ಬರಿಯ ಸದ್ದು ಮಾಡುತ್ತಿರುವ ನಮ್ಮ ರಾಜಕಾರಣಿಗಳೆಂಬ ದುಂಬಿಗಳಿಗೆ ಬಡತನವೆಂಬುದು ಮತಗಳು ಎಂಬ ಕೀಳಾದ ಸರೋವರದ ಪುಷ್ಪ. ಸಮಾಜಘಾತುಕರಿಗೆ ಬಡತನವೆಂಬುದು ಸಮಾಜವನ್ನು ಒಡೆಯುವ ಕೂರಸಿಯಂತೆ ಮತ್ತು ವಿದೇಶೀಯರಿಗೆ ನಮ್ಮ ದೇಶದ ಬಡತನವನ್ನು ಕಂಡರೆ ಅಚ್ಚರಿಯ, ರಂಜಕವಾದ ಮಿಗವನ್ನು ಕಂಡಂತೆ” ಎಂಬ ಕಲ್ಪನೆಯಿಟ್ಟುಕೊಂಡು ಪದ್ಯವನ್ನು ರಚಿಸಿದೆ. ಪದ್ಯದಲ್ಲಿ ತೊಡರುಗಳಿದ್ದಲ್ಲಿ ಇಂದು ನಾನೇ ತಮ್ಮನ್ನು ಕಾಣಬರುತ್ತಿರುವೆ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ). ತಮಗೆ ತೊಂದರೆಯಿಲ್ಲದಿದ್ದಲ್ಲಿ ಅಲ್ಲಿಯೇ ತಮ್ಮಿಂದಲೇ ಪದ್ಯಭಾವದ ಕೊರತೆಯನ್ನು ಕುರಿತು ತಿಳಿದುಕೊಂಡು ಸರಿಪಡಿಸುತ್ತೇನೆ.

  26. ಬಡಕಲುತನವೆಂದರೆ

    ಚಾರ್ವಾಕರ್ಗಳ ತತ್ವನಿಷ್ಠೆ, ಜಿಪುಣರ್ಕಳ್ ತೋರ್ದಪೌದಾರ್ಯಮಯ್,
    ಗರ್ವಂ ಜ್ಞಾನಿಗಳೊಳ್, ವಿರಕ್ತನೊಲವುಂ, ಸಂಸಾರಿವೈರಾಗ್ಯಮಯ್,
    ಪರ್ವಂ ತಾಮರೆಯೊಳ್ ಸ್ಥಿತಂಗೆ, ಶಮಮುಂ ಪರ್ಯಾಕುಲಂಗಪ್ರಿಯರ್
    ಶರ್ವಂಗಂ, ಧೃತಿ ಲೌಲ್ಯತಪ್ತಮತಿಗಂ, ಶಾಸ್ತ್ರಾರ್ಥಿಯೊಳ್ ಕಾವ್ಯಮಯ್

    ಚಾರ್ವಾಕರ್ -> materialists
    ಪರ್ವಂ ತಾಮರೆಯೊಳ್ ಸ್ಥಿತಂಗೆ -> ಬ್ರಹ್ಮನಕುರಿತು ಹಬ್ಬಗಳು
    ಶಮಮುಂ ಪರ್ಯಾಕುಲಂಗೆ -> ಧಾವಂತೆಪೀಡಿತನಿಗೆ ಶಾಂತಿಯು
    ಧೃತಿ ಲೌಲ್ಯತಪ್ತಮತಿಗಂ -> firmness in ficklemind

  27. ಹೃದಯವೈಶಾಲ್ಯತೆಯ ಭೂಮಿಯೊಳು ಕಂಗೊಳಿಪ
    ಸದಯವೌದಾರ್ಯತೆಯ ಭವ್ಯ ಮಹಲು
    ಮುದದ ವಿಶ್ವಾಸನಿಧಿ, ಮಾನವತೆ ಬಂಗಾರ –
    ವದು ಮೆರೆದಿರಲ್ ಯಾರು ಬಡವರಲ್ತು

    ಪ್ರೀತಿ ರತ್ನಗಳಿಂದ ಸೌಜನ್ಯದಾಭರಣ –
    ವಾತಿಥ್ಯದುಗ್ರಾಣ ರಾಸಿಕ್ಯ ಸೆಲೆಯು
    ಮಾತ ಮುತ್ತಿನ ಸರ್ವ ಸಗುಣಗಳ ಖನಿಯಾಗೊ
    ರೀತಿ ಬಡಮಲ್ತು ತುಂಬಿದ ಕೊಡಗಳ

  28. आचार्य-करुणाकरे स्नेह-पात्रे प्रदिपके |
    दग्धामपि तमोहर्त्रीं मत्कार्पण्य-दशां भजे ||

    I salute the wick of my wretched condition (dasha= wick / condition); of the pradIpaka (lamp) embodied by the teacher’s compassion,which is a receptacle of oil/ affection (sneha oil / affection; pAtra = vessel/ recipient); a wick which itself was burnt/ miserable (dagdhA = burnt/wretched) to dispel my ignorance / darkness (tamO-hantrI).

  29. ಮೈಯ ಮುಚ್ಚದ ಕಪ್ಪಡಂ ಕಂಕಣಂ ಜೀವ ಪೋಪನ್ನೆಗಂ ಬೇಳ್ವ ವಿಧಿಯ ಪಡೆದಂ
    ಕೈಯನೊಡ್ಡಲ್ಕೇಳ್ವ ನಾಸ್ತಿನಾಸ್ತಿಯೆ ಋತ್ವಿಜರುಮೊಲ್ದು ನೀಳ್ದಿರ್ಪ ಸ್ವಸ್ತಿವಚನಂ
    ಬೈಯಲುಂ ಕಟಕಿಯನಾಡಲುಂ ಪರಿವ ಕಂಬನಿಯಗ್ನಿ ಪೊತ್ತೊಯ್ವಾಹುತಿಯ ಭಾಗಂ
    ಮೈಯ ಚಟ್ಟದೊಳಿಟ್ಟು ಪೊಯ್ವ ನೀರದು ಮಂಗಳಸ್ನಾನಮಮೃತಾಭಿಷೇಕಮೆಂಬೆಂ

  30. ನಾನು ಶ್ರೀಮಂತನಾದರೆ ಅಪಹೃತನಾಗಿಬಿಟ್ಟೇನು (ಕಿಡ್ನ್ಯಾಪ್). ಹಾಗಾಗಿ, ದುಂಬಿಯು ನೈದಿಲೆಯ(?) ದಳಗಳನ್ನೇ ರಾತ್ರಿಹೊತ್ತು ಹೊದಿಕೆ ಮಾಡಿಕೊಂಡಂತೆ, ಬೆಚ್ಚನೆಯ ಗುಡಿಸಿಲಿನಲ್ಲಿ ಬಡವನಾಗೇ ಉಳಿಯುವೆ:

    ಸದಪರವಕ್ತ್ರ, ಪ್ರಾಸರಹಿತ|| (ಕನ್ನಡಕ್ಕೆ ಯತಿಯಿಲ್ಲ, ನನಗೆ …….)
    ರವಿಖನಕನು ಬಿಂದುಚೌರ್ಯವ|ನ್ನೆಸಗುವೊಡಾಗದೆಲಿರ್ದು ವಿತ್ತಿಗಂ|
    ಬಡವಿಯಳಿಯು ಪತ್ರಛದ್ದವಿ|ದ್ದೊಲಿರುವೆ ಝೋಪಡಿವಾಸಿಯೆಂದಿಗುಂ||
    (ಖನಕ = ಕಳ್ಳ)

    ರೂಪಕವಿದೆಯೆ?

  31. ನಂದದಾ ಬೇಗೆಯೊಳ್ ಬೆಂದಿಹಾ ಭೋಜನಂ
    ಸಂದಿಹಾ ಬೆಮರಿನೊಳ್ ಮಜ್ಜನವದುಂ
    ನೊಂದಿಹಾ ಜೀವಕುಂ ಕಂಡಿತೇ ಸ್ವಪ್ನದೊಳ್
    ಕುಂದಿತೇ ನಿದಿರೆಯೊಳ್ ದಾರಿದ್ರ್ಯವುಂ ।।

    (ಕೊನೆಯ ಸಾಲು – “ಬಂದಿರಲ್ ನಿದೆರೆಗುಂ ದಾರಿದ್ರ್ಯಮುಂ / ಕುಂದಿರಲ್ ನಿದೆರೆಯುಂ ದಾರಿದ್ರ್ಯದೊಳ್” ಯಾವುದು ಹೆಚ್ಚು ಸೂಕ್ತ, ದಯವಿಟ್ಟು ತಿಳಿಸಿಕೊಡಿ )

    • ನಂದದಾ, ಬೆಂದಿಹಾ, ಸಂದಿಹಾ, ನೊಂದಿಹಾ – ಅಸಾಧುಪ್ರಯೋಗಗಳು. ಇವುಗಳಲ್ಲಿರುವ +ಆ is truly redundant.

      ಭೋಜನಕ್ಕೂ ಮಜ್ಜನಕ್ಕೂ ಸ್ಪಷ್ಟಸಂಬಂಧ ಕಾಣದು. ನನಗೆ ತಿಳಿದಂತೆ ಸವರಿದ್ದೇನೆ:
      ಬಡತನದ ಬೇಗೆಯೊಳ್ ಬೆಂದುದಲ್ತನ್ನ ತಾಂ
      ದುಡಿವ ಮೈ ಬೆಮರಿನೊಳ್ ಬೆಂದಿರ್ಪುದು|
      ಒಡವೆಯಂ ಕಂಡೊಡೇಂ ಸ್ವಪ್ನದೊಳಗೆಚ್ಚರದೆ
      ತುಡಿತವಂ ಪೆರ್ಚಿಪುದು ಕಾರ್ಪಣ್ಯದಂ||

      Anyway, there is no rUpaka here.

  32. ದೀಪ್ಕಗ್ಳಂಗೆs ನಿಮ್ ಪದ್ಯಗ್ಳುs ಬೆಳ್ಗಿದ್ರೂ ನಾ ಬರ್ದೆs
    ರೂಪ್ಕs ಗೀಪ್ಕs ಇಲ್ಲಾಂತ್ಯಾರೂ ಬ್ಯಾಸ್ರs ಮಾಡ್ಕsಬ್ಯಾಡ್ರಿs ::

    ಬಡವರ್ ತೊಂದ್ರೆs ಹೊಟ್ತುಂಬ್ದೋರ್ಗದ್ದೆಂಗೊತ್ತಾಗ್ತೈತ್ರಪ್ಪs
    ವೊಡಲಿನ್ ಕಿಚ್ನs ತಣ್ಗಾಗ್ಸೋದ್ರಾಗ್ ಜೀವs ಸವ್ದೋಯ್ತೈತೆs
    ಹಿಡಕೊಂಡ್ಭೂತs ಬೆನ್ನತ್ಬುಟ್ರೆs ಸತ್ರೂ ಇಳ್ಯಾಕಿಲ್ಲs
    ಕುಡಕೊಂಡ್ ಕೊಂಚs ಮರೆಯಾಣಾಂದ್ರೆs ಯೆಂಡಕ್ರೊಕ್ಕs ಚೊಕ್ಕs

    • ವಟ್ತುಂಬ್ದೋರಂತೆಂಬೆsಯೇನೋ ಮುದ್ದೆs ಉಂಡೋರ್ನ್ ಮಾತ್ರs
      ಗುಟ್ತನ್ದಾಗ್ ಕಂಟ್ಮಟ್ಟs ಕುಡ್ದೋರ್ನ್ ಯಾನಂತಂತ್ಯೋ ರಾಮs||

  33. ಬಾಳಬಳ್ಳಿಯು ಬಾಡಿ ಹೋಗಿದೆ
    ತಾಳಲಾರದೆ ಬಡತನದುರಿಯ
    ಕೂಳು ಕಾಣದೆ ಬೇರಹೊಟ್ಟೆಗೆ ಸೋತು ಹಸಿವಿಂದ
    ನಾಳೆ ಸುರಿಯುವ ಹೊನ್ನಮಳೆಯಲಿ
    ಬೀಳುತೇಳುವ ಕನಸು ಕಾಣುತ
    ಗಾಳಿ ದಾಳಿಗು ಗಟ್ಟಿ ಕೂತಿದೆ ಹಿಡಿದು ಜೀವವನು

    • ಒಳ್ಳೆಯ ಪದ್ಯ. ಏಕದೇಶೀಯವಾಗಿ ರೂಪಕವು ಬಂದಿದೆ. ಆದರೂ ಪರವಾಗಿಲ್ಲ.:-)

  34. ರೂಪಕವು ನನಗೆ ಅತ್ಯಂತಪ್ರಿಯವೂ ಸಹಜಸುಲಭವೂ ಆದ ಅಲಂಕಾರ.ಇಂಥ ಮೂಲಭೂತವೂ ಸರಳವಾದರೂ ಧ್ವನಿಸಾಧ್ಯತಾಸ್ಪೃಹಣೀಯವೂ ಆದ ಅಲಂಕಾರವನ್ನು ಬಳಸಿ ಅಸಂಖ್ಯಪದ್ಯಗಳನ್ನು ನಾನು ರಚಿಸಿರುವೆನಾದರೂ ಇದೀಗ ಬದತನದ ಬಗೆಗೆ ರೂಪಕವನ್ನು ಬಳಸಿ ಕವನಿಸಬೇಕೆಂದಾಗ ನನ್ನ ಗಂಟಲು ಹಿಡಿದಿದೆ:-). ಆದರೂ ಹೇಗೋ ಎರಡು ಪದ್ಯಗಳನ್ನು ಇಲ್ಲಿ ಹವಣಿಸಿದ್ದೇನೆ. ಇವೆರಡರಲ್ಲಿಯೂ ರೂಪಕದೊಡನೆ ಇತರ ಅಲಂಕಾರಗಳು ನುಸುಳಿವೆ.ಇದರಿಂದ ಅಲಂಕಾರವೊಂದನ್ನು ಪ್ರತ್ಯೇಕಾವಧಾನದಿಂದ ಅಳವಡಿಸುವುವದರಲ್ಲಿರುವ ಕಷ್ಟವೂ(!) ಸರ್ವವೇದ್ಯ:-)

    ದಾರಿದ್ರ್ಯಾನಲತಪ್ತಂ-
    ಗೋರಂತೆ ವಿಯುಕ್ತರಪ್ಪರೆಲ್ಲರುಮೆನುತುಂ |
    ಸಾರುವವೊಲ್ ನಿಟ್ಟುಸಿರೇ
    ದೂರಂ ಸಾರಿರ್ಪುದಲ್ತೆ ಧೂಮಾಕೃತಿಯಿಂ ||

    (ಬಡತನದ ಬೆಂಕಿಯಲ್ಲಿ ಬಿದ್ದವನಿಗೆ ಎಲ್ಲರೂ ದೂರಾಗುತ್ತಾರೆ. ಅವನ ನಿಟ್ಟುಸಿರು ಕೂಡ
    ಹೊಗೆಯ ರೂಪವನ್ನು ತಾಳಿ ಅವನಿಂದ ದೂರವೇ ಹೋಗುತ್ತದೆ!
    ಬೆಂಕಿಯಿಂದ ಹೊಗೆಯು ದೂರಕ್ಕೆ ಸಾಗುವುದು ಲೋಕವೇದ್ಯ. ಈ ಅಂಶದ ಮೇಲೆ ಪ್ರಕೃತಪದ್ಯವು ರಚಿತವಾಗಿದೆ.
    ಇಲ್ಲಿ ಮೊದಲಿಗೆ ರೂಪಕವು ತೀರ ಸರಳ-ಯಾತಯಾಮರೂಪದಿಂದ ಬಂದಿದೆ. ಆ ಬಳಿಕದ ಹೇತೂತ್ಪ್ರೇಕ್ಷೆಯೇ ಇಲ್ಲಿ ಪ್ರಧಾನವಾಗಿಬಿಟ್ಟಿದೆ:-)

    ಆಕಿಂಚನ್ಯಚಿದಂಬರಸ್ಥನಟರಾಜಂ ನರ್ತಿಪಂ ಮಾನವಂ
    ಸಾಕೂತಾಖಿಲಲೋಕಭರ್ತ್ಸನಮಹಾಗೀತಾಳಿತಾಳಾವಳೀ-
    ಪಾಕಕ್ಕಂ ಪದಮೊಂದನುಂ ನೆಲದೆ ನಟ್ಟೂರಲ್ಕೆ ಪಕ್ಕಾಗದಂ-
    ತೇಕಾರ್ತಿಪ್ರಕರಾಗ್ನಿಗೋಳವಲಯಂ ಹಾ! ಪ್ರೇಕ್ಷಕರಲ್ ಕಾಣರೇಂ?

    (ಬಡತನವೆಂಬ ಚಿದಂಬರದಲ್ಲಿ ಬಡವನು ನಟರಾಜನಾಗಿ ನರ್ತಿಸುತ್ತಾನೆ. ಆ ನಟರಾಜನಂತೆ ಇವನಿಗೆ ಒಂದುಕಾಲನ್ನು ಕೂಡ ನೆಲದಲ್ಲಿ ಊರಿ ನಿಲ್ಲಲಾಗುವುದಿಲ್ಲ!
    ಕಷ್ಟಗಳ ಅಗ್ನಿಗೋಳಗಳೇ ಇವನ ಸುತ್ತ ಪ್ರಭಾವಳಿಯಾಗಿವೆ.ಆದರೆ ಈ ವಿಚಿತ್ರನೃತ್ಯವನ್ನು ಕಾಣಲು ಯಾರೂ ಪ್ರೇಕ್ಷಕರಾಗಲು ಇಷ್ಟಪಡುವುದಿಲ್ಲ!!

    ಇಲ್ಲೇನೋ ರೂಪಕವು ಪ್ರಧಾನವಾಗಿ ಬಂದಿದೆ. ಆದರೆ ವ್ಯತಿರೇಕಾಲಂಕಾರದ ನೆರಳೂ ಉತ್ತರಾಧದಲ್ಲಿ ಮೈಚಾಚಿದೆ. ಪದ ಎಂಬಲ್ಲಿ ತೀರ ಸೂಕ್ಷ್ಮವಾಗಿ ಶ್ಲೇಷೆಯೂ ಬಂದಿದೆ:-)

    ಇನ್ನು ಅಪ್ಪಟ ರೂಪಕವನ್ನೇ ಬಳಸಿ ಒಂದು ಪದ್ಯವನ್ನಾದರೂ ಇಲ್ಲಿ ನಿವೇದಿದಬೇಕೆಂಬ ಇದೀಗ ಉಕ್ಕಿದ ಬಯಕೆಯಂತೆ ಆಶುವಾಗಿ ಟಂಕಿಸುತ್ತಿದ್ದೇನೆ:

    ಮೋದಸಿಂಧುವಿಗಗಸ್ತ್ಯಮೌನಿ ಮೇ-
    ಣಾದರಾತಪಕೆ ಕಾರ್ಮುಗಿಲ್ ಜನಾ-
    ಮೋದಮೈಥುನಕೆ ಗರ್ಭಗುಪ್ತಿ ನಿ-
    ರ್ವೇದಮೇ ಬಡತನಂ ಜಗತ್ತಿಗಂ ||

    ಇದು ವಿವರಣನಿರಪೇಕ್ಷವೆಂದು ಭಾವಿಸಿ ವಿರಮಿಸುವೆ:-)

  35. ಆರುಮಿಲ್ಲದ ಬಾಲಭೈರನ
    ದಾರಿಯೊಳ್ ಕಲ್ಮುಳ್ಳು ಹರಡಿರ
    ಲೂರತೊರೆಯುತೆ ಸಾಗಿರಲು ಬಡತನದಸಿರಿಯಿಂದ|
    ನೂರುಸಾವಿರ ಜನರ ಹೃದಯದಿ
    ಸಾರುತಲಿ ಸತ್ಯವನು ಧೈರ್ಯದೊ
    ಳೇರಿದರು ಸಾಹಿತ್ಯಲೋಕದೆ ಸಿರಿಯಪೆರ್ಚಿಸುತ|

    ಭೈರಪ್ಪನವರ ಬಾಲ್ಯದಲ್ಲಿದ್ದ ಬಡತನದ ಬಗ್ಗೆ ಹಾಗೂ ಅವರ ನಂತರದ ಸಾಧನೆಯನ್ನು ಕುರಿತ ಪದ್ಯ… ರೂಪಕಾಲಂಕಾರವಿಲ್ಲದಿದ್ದರೆ ತಿಳಿಹೇಳಿರಿ

  36. ತಡವಾಗಿ ಒಂದು ಪದ್ಯ –

    दैन्यदोषाकरे वृद्धिं जुषमाणे दिने दिने ।
    हेतुर्गौरवलोपस्य कलङ्कोऽप्यस्य वर्धते ॥

    ದೈನ್ಯದೋಷಾಕರೇ ವೃದ್ಧಿಂ ಜುಷಮಾಣೇ ದಿನೇ ದಿನೇ |
    ಹೇತುರ್ಗೌರವಲೋಪಸ್ಯ ಕಲಂಕೋऽಪ್ಯಸ್ಯ ವರ್ಧತೇ ||

    दोषाकरे = चन्द्रे, दोषाणाम् आकरे |
    गौरवलोपस्य = गौरस्य गौरवर्णस्य यो वलोपः अवलोपः तस्य, गौरवस्य यो लोपः तस्य |
    कलङ्कः = अङ्कः, अपवादादिः कलङ्कः

    ಬಡತನವೆನ್ನುವ ದೋಷಾಕರ (ಚಂದ್ರ / ದೋಷಗಳ ಆಗರವು) ಪ್ರತಿದಿನ ವೃದ್ಧಿಯನ್ನು ಹೊಂದುತ್ತಿರಲು ಗೌರವಲೋಪಕ್ಕೆ (ಗೌರ-ವಲೋಪ=ಬಿಳಿಯ ಬಣ್ಣದ ಲೋಪಕ್ಕೆ / ಗೌರವ-ಲೋಪ=ಗೌರವದ ಲೋಪಕ್ಕೆ) ಕಾರಣವಾದ ಅದರ(ಚಂದ್ರನ / ಬಡತನದ) ಕಳಂಕವೂ (ಕಲೆಯೂ / ಅಪವಾದವೇ ಮೊದಲಾದ ಕಳಂಕವೂ) ಕೂಡ ಹೆಚ್ಚುತ್ತದೆ.

    • ಇಂದುದಾರಿದ್ರ್ಯದ ಶ್ಲೇಷಂ ಚಂದದೀ ಪದ್ಯರತ್ನದೊಳ್
      ಮಿಂದ ಶ್ವೇತಗರುತ್ಮಂ ಪೋಲುತ್ತಲೌನ್ನತ್ಯಮಾಂಪದೇ? 🙂

      ಶ್ವೇತಗರುತ್ಮಂ = ಹಂಸ

      • ಪ್ರಿಯ ಶರ್ಮರೆ,
        ಸ್ಪಂದನಕ್ಕಾಗಿ ಧನ್ಯವಾದ 🙂

    • कविताकामिनी तेऽसौ श्लेषामोदप्रदायिनी ।
      सुरूपका विराराष्टि पदलालित्यभूषिता ॥ 😉

  37. ಮಳೆಯ ಹನಿಯವು ಮಿಡಿದ ಕಂಬನಿ
    ಸುಳಿದ ಗಾಳಿಯು ನಿಡಿದುದುಸಿರದು
    ಜಳವು ತಾಕಿದುದದುವೆ ಬದುಕಿನ ಬೇಗೆ ಬಡತನದಿ ।
    ಕಳೆಯೆ ಕಳವಳದೊಳಗೆ ಬಾಳನು
    ಹಳಿದು ವಿಧಿಯನು ಹುದುಗೆ ನಿಧಿಯನು
    ತಳದೊಳಾಳದಿ ನೀಳ ತಾಳದ ಬವಣೆ ಬಡತನದಿ ।।

  38. ರೂಪಕಾಲಂಕಾರದಲ್ಲಿ ನನ್ನದೊಂದು ಪ್ರಯತ್ನ

    ಉರುವಲಿಲ್ಲದಲುದರದೊಳುರಿವೊತ್ತಿಯುರ್ರೆಂದಿತು
    ಸುರುವಲಾಗಾಗಳ್ ಜೊಲ್ಲೆಂಬ ತುಪ್ಪಮಂ ಚುರ್ರೆಂದಿತು
    ಮರುಗಲುರಿಯಾರದಿರೆ ಸುಯ್ಯಿಂ ಮತ್ತೂದೆ ಗುರ್ರೆಂದಿತು
    ಬರಿಗೈ ಬರಿವೊಟ್ಟೆಯೊಳೆ ನಿತ್ಯಂ ಬಡಜನರ್ ಬೇಳ್ವರಿಂತು

    ಮರುಗು- ಕುದಿ (ದ್ರವಗಳು), ಕೊರಗು

    ಬೇಳ್ವರ್- ಹೋಮ ಮಾಡುವರು, ಹವಿಸ್ಸನ್ನು ಅರ್ಪಿಸುವರು

    ಸೌದೆಯಿಲ್ಲದೆ ಜಠರಾಗ್ನಿ ಉರಿಯುತ್ತದೆ. ಅದಕ್ಕೆಆಜ್ಯವ್ಯ್ ನಾಲಿಗೆಯಿಂದೂರುವ ಜೊಲ್ಲು. ಬೇಗೆಯಿಂದ ಕುದೊಯುತ್ತಿರೆ, ಉರಿಯಾರದಂತೆ ನಿಟ್ಟುಸಿರೆಂಬ ಗಾಳಿ ಊದಲು ಅದು ಮತ್ತೆ ಹೆಚ್ಚಿ ಉರಿವುದು. ಏನೂ ತಮ್ಮ ಹತ್ತಿರವಿಲದಿದ್ದರೂ ಬಡವರು ಹವನಕಾರ್ಯವನ್ನು ನಿತ್ಯಪೂರೈಸುವರು

    • ಆಹಾ! ಬಡತನದ ಕುರಿತು ಕಲ್ಪನಾವಿಲಾಸದಿಂದ ಶ್ರೀಮಂತವಾದ ಪದ್ಯ 🙂

      • ಮಹೇಶ ಭಟ್ಟರೆ- ಮೆಚ್ಚುಗೆಗೆ ತುಂಬ ಥ್ಯಾಂಕ್ಸ್

    • ಶ್ರೀಕಾಂತ್ ಸರ್ ,
      ಬಡತನದ ಬಗ್ಗೆ ನನಗೂ ಇದೇ ಕಲ್ಪನೆಇತ್ತು (ಆದರೆ, “ಯಜ್ಞ”ದ ಕಲ್ಪನೆಯಿರಲಿಲ್ಲ). ಜೊಲ್ಲಿನ ಬದಲು ಕಂಬನಿ/ಬೆವರ ಕಲ್ಪನೆಯಿತ್ತು. ಆದರೂ ರೂಪಕಾಲಂಕಾರ ತರಲಾಗಲಿಲ್ಲ. ಎಲ್ಲರ ಪದ್ಯಗಳನ್ನು ಗಮನಿಸಿ ರೂಪಕಾಲಂಕಾರದಬಗ್ಗೆ ಅರ್ಥಮಾಡಿಕೊಳ್ಳುತಿದ್ದೇನೆ. ಮತ್ತಷ್ಟು ವಿವರಣೆ ಬೇಕಿದೆ.

    • ಶ್ರೀಕಾಂತ್ ಸರ್ ,
      ಇದು ಯಾವ ಛಂದಸ್ಸು?

      • ಉಷರವರೆ- ಇದು ನಡುವಣಕ್ಕರ- ಅಂಶ ಛಂದಸ್ಸಿನ ಅಕ್ಕರ ಪ್ರಕಾರದಲ್ಲಿ ಒಂದು ಪ್ರಭೆದ. ಮೊದಲಿಗೆ ಒಂದು ಬ್ರಹ್ಮಗನ, ಆಮೇಲೆ ಮುರು ವಿಷ್ಣುಗಣಗಳು, ಕೊನೆಗೆ ಒಮ್ದು ರುದ್ರಗಣ. ಹೀಗೆ ನಾಲ್ಕು ಪಾದಗಳು

    • ಅದ್ಭುತವಾದ ನವಕಲ್ಪನೆಯ ಮಾರ್ಮಿಕಪದ್ಯ, ಧನ್ಯವಾದಗಳು.

    • ಸಂಹತ ಸಮಾಸಗಳಿಲ್ಲದೆ ಸರಳವಾಗಿ ಸಾಧಿಸಿದ ರೂಪಕಾಲಂಕಾರ! ಬೋಧಪ್ರದವಾಗಿದೆ. ಧನ್ಯವಾದಗಳು.

  39. ನಾನು ಈ ಪದ್ಯಪಾನಕ್ಕೆ ಹೊಸಾ ಸೇರ್ಪಡೆ, ನನ್ನದೊಂದು ಚಿಕ್ಕ ಪ್ರಯತ್ನ .

    ಬಡತನವೆಂದರೆ ಅದು ಬಡತನವಲ್ಲ
    ಜಡವಾದರು ಹರಿವ ಹಣವಿಲ್ಲದವ ಕಾಣೋ
    ಬಡತನವೆಂದರೆ ಅದು ಬಡತನವಲ್ಲ
    ಹೃದಯ ಶ್ರೀಮಂತಿಕೆ ತುಂಬಿದ ಜನ ಮಾಣೋ

    • ಪ್ರಭಂಜನರಿಗೆ ಗೋಷ್ಟಿಗೆ ಸ್ವಾಗತ. ಪದ್ಯರಚನೆ ಆರಂಭಿಸಿದ್ದೀರಿ. ಮೊದಲ ಪದ್ಯ ಎಲ್ಲರದೂ ಹೀಗೆಯೇ ಇರುವುದು. ಪ್ರಯತ್ನ ಮುಂದುವರಿಯಲಿ. ಇಲ್ಲಿನ ಪಾಠಗಳನ್ನು ಗಮನಿಸಿಕೊಂಡು ಈ ಪದ್ಯವನ್ನೂ ತಿದ್ದಿರಿ, ಇನ್ನೂ ಚೆನ್ನಾದವುಗಳನ್ನೂ ರಚಿಸಿರಿ. ಮತ್ತೊಮ್ಮೆ ಅಭಿನಂದನೆಗಳು.

      • ಧನ್ಯವಾದಗಳು , ಈ ಪದ್ಯಪಾನ ನಿಜವಾಗಲು ಸಹಕಾರಿ,
        ಕನ್ನಡದ ವ್ಯಾಕರಣ ಚಂದಸ್ಸು ಕಲಿಕೆಗೆ ಒಳ್ಳೆಯ ವೇದಿಕೆ. ನನ್ನ ಬರವಣಿಗೆಯಲ್ಲೂ ಬದಲಾವಣೆ ತರುವದೆಂಬ ಆಶಯವಿದೆ .

      • ನನ್ನಂಥ ಯಂಬ್ರಮ್ಮನಲ್ಲೇ ಬದಲಾವಣೆ ತಂದಿದೆ ಎಂದಮೇಲೆ ನಿಮ್ಮಂಥ ಸಂಸ್ಕಾರವಂತರಲ್ಲಿ ನಿಜವಾಗಿಯೂ ತರುತ್ತದೆ.

        • I thought the full name is not M. Brahma but V.M. Brahma as per standard Indian Convention. It stands for Vaikuntha Murari Brahma 🙂

  40. ಮಿಡಿದೆದೆಯ ತಾಪದೊಳಗಿಂಗವನ ಕಣ್ಣೀರ
    ಕಡಲು ಕಟ್ಟಿದೆ ನೋಡ ಕಳವಳದ ಮೋಡ ।
    ಸುಡುವೊಡಲ ಬೆಳಕಿನೊಳು ಸುರಿದ ಬೆಮರಿನ ಮಳೆಯಿಂ
    ದೊಡನೆ ಮೂಡಿಹುದಾಸೆ ಕಾಮನಬಿಲ್ಲು ।।

    • ಉಷರವರೆ- ಕೊನೆಯ ಎರಡು ಪಾದಗಳಲ್ಲಿ ಮಾತ್ರೆ ಹೆಚ್ಚಾಗಿ ಛಂದಸ್ಸೆಡವಿದೆ. ಮೊದಲಪಾದದಲ್ಲಿ ಟೈಪೋಇದೆ (ದಕಾರಕ್ಕೆ ಗಕಾರ). ರೂಪಕವನ್ನು ನೀವಿಲ್ಲ ಬಳಸುವ ಪ್ರಯತ್ನಗಳು ಶ್ಲಾಘನೀಯ. ಸ್ವಲ್ಪ ತೊಡಕುಗಳಿವೆ. ಕೆಲವನ್ನು ಮಾತ್ರೆ ರೂಪಕಮಾಡಿ ಉಳಿದವನ್ನ ಹಾಗೇ ಉಳಿಸಿಕೊಂಡಿದ್ದೀರ. ಅರ್ಥದ ಹೊಂದು ಒಂದರಿಂದ ಇನ್ನೊಂದಕ್ಕೆ ಸಿಗ್ತಿಲ್ಲ. ಮೋಡ ಒಂದಾದರೆ ಮಳೆ ಇನ್ನೊಂದು ಕಡೆಯಿಂದ ಸುರಿಯುತಿದೆ. ತಾಪವನ್ನು ಮಿಡಿವೆದೆಗೂ ಆರೋಪಿಸಿ ಒಡಲಿಗೂ ಕೊಟ್ಟು ಮತ್ತೆ ಅಲ್ಲಿಂದಲೇ ಮಳೆಯೂ ಬೆಳಕೂ ಹುಟ್ಟುತ್ತಿವೆ. ಸ್ವಲ್ಪ. ರೂಪಕಗಳನ್ನು ವರ್ಗಾಯಿಸಿ ಪರಸ್ಪರ ಹೊಂದಾಣಿಕೆ ಇದ್ದರೆ ಇನ್ನೂ ಚೆನ್ನಾಗಿರುತ್ತೆ, ಅರ್ಥ ಸ್ಫುಟವಾಗುತ್ತೆ.

      ಬಡತನವೂ ಸ್ಪಷ್ಟವಾಗಿ ಇಲ್ಲಿ ಬಂದಿಲ್ಲ. ನೀವು ಚಿತ್ರಿಸಿರುವ ದೃಶ್ಯಕ್ಕೆ ಬಡತನವೇ ಅಲ್ಲದೆ ಇತರ ಹಲವು ಕಾರಣಗಳನ್ನು ಕಲ್ಪಿಸಿಕೊಳ್ಳಬಹುದು

    • ಉಷರವರೆ. ನಾನು ಹೇಳಿದ್ದು ಒಂದು ಗೈಡೆನ್ಸ್-ಗೆ. ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ. ಪದ್ಯಗಳು ಚೆನ್ನಾಗಿ ಬರ್ತಿವೆ.

      ಅಂದಹಾಗೆ ಮೇಲಿನ ನಿಮ್ಮ ಐಡಿಯನ ಕಫ್ದು ಒಂದು ಪದ್ಯ ಮಾಡಿದ್ದೀನಿ.

      ಕಂಗಳಾ ಕಳವಳದ ಕಾರ್ಮುಗಿಲ್ಗಳ್ ಕರೆಯೆ
      ಮಂಗಡೆಗೆ ಕಂಬನಿಯ ಮಳೆಯು ಧುಮುಕೆ
      ಬೆಂಗದಿರನೆಂಬೊಡಲ ಬೇಗೆಯಿಂದದು ಕರಗಿ
      ಚಂಗನದೊ ಮಳೆಬಿಲ್ಲು ಝಳಪಿಸಿತಹೋ ||

      ಮಣ್+ಕಡೆಗೆ= ಮಂಗಡೆಗೆ

      ಗಣೇಶರೆ- ಕೊನೆಗೆ ಬಂದಿರುವುದು ಯಾವ ಅಲಂಕಾರ?

      • ನಿಮ್ಮ ಆತ್ಮೀಯ ಸಲಹೆಗೆ ಧನ್ಯವಾದಗಳು ಶ್ರೀಕಾಂತ್ ಸರ್,
        ಉದಾಹರಣೆಗಳಿಂದ “ರೂಪಕ”ವನ್ನ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತಿದ್ದೇನೆ. ತಿದ್ದಿದ ಪದ್ಯ:

        ಸುಡುವೊಡಲ ತಾಪದಿಂದಿಂಗವನ ಕಣ್ಣೀರ-
        ಕಡಲು, ಕಟ್ಟಿಹ ಕಳವಳದಮೋಡದಿಂ
        ದೊಡನೆ ಸುರಿದಿಹ ಬೆವರಮಳೆಯಿಂದೆ ಮೂಡಿತೇಂ
        ಬದತನದೊಳಾಸೆ ಕಾಮನಬಿಲ್ಲು ।।

        ನಿಮ್ಮ ಪದ್ಯ ನೋಡಿದ ಮೇಲೆ, ಈ ಪದ್ಯ ಹಾಕಲು ಮನಸಿಲ್ಲ. ಛಂದಸ್ಸು ಸರಿಪಡಿಸಿ – “ಬಡತನ” ತಂದ ಪದ್ಯವಷ್ಟೇ . ಅಲಂಕಾರದಬಗ್ಗೆ ಮತ್ತೂ ಸಂಶಯವಿದೆ.

  41. Better late than never 🙂

    लक्ष्मी-तिरस्कृत-रमाधव-पार्श्व-देश !
    क्षुत्तप्त-सूनु-पितुरम्बकवारिवाहिन्!
    राज्योदयास्तमनयोरुपयुक्त-हेते!
    दारिद्र्य-देव! गमने किल सुन्दरस्त्वम् ।

    O, The space next to ViShNu after being rejected by Lakshmi!
    O, The flow of tears from the father seeing a son burnt/tormented by hunger!
    O, The weapon used in creation and destruction of empires!
    O, Thou the deity of poverty, aren’t you handsome in your departure?

Leave a Reply to ಮೌರ್ಯ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)