Aug 262013
 

ಶ್ರೀ ರಾ. ಗಣೇಶರ ಈಚಿನ ಶತಾವಧಾನದಲ್ಲಿ ಪೃಚ್ಛಕರಾದ ಶ್ರೀಮತಿ ಶ್ರೀಲಲಿತಾ ರೂಪನಗುಡಿಯವರು ನೀಡಿದ ದತ್ತಪದಿಯಿದು: ವಿವಿಧ ಭಾಷೆಗಳಲ್ಲಿ ’ಮಳೆ’ಯ ಸಮಾನಾರ್ಥಕ ಪದಗಳಾದ ವಾನ (Telugu), ಅಮೆ (Japanese), ಯಾಮೂರ್ (Turkish), ರಿಯನ್‍ (Afrikaans)ಗಳನ್ನು ಬಳಸಿ ಬರಗಾಲವರ್ಣನೆ ಮಾಡಿ. ಛಂದೋವೈವಿಧ್ಯವಿರಲಿ.

  31 Responses to “ಪದ್ಯಸಪ್ತಾಹ ೭೯: ದತ್ತಪದಿ”

  1. ವಿಪದಂ ತೋರ್ವಾ ನಭದೊಳ್
    ತಪನೋತ್ಕರ್ಷಿತವಿಲೇಖನಮೆ, ತಿರೆಜನರಂ
    ಕಪಿಯಾ ಮೂರ್ತತೆ ಭರದಿಂ
    ಚಪಲಂಗೈವರಿಯ ನೇರ್ಪಿದೇ ಬರಗಾಲಂ

    ತಿರೆಜನ = ರೈತ
    ವಿಪದಂ = death
    ವಿಲೇಖನ = scratch
    ಕಪಿ = sun
    ಚಪಲಂ = chataka bird
    ಮೂರ್ತತೆ = realization

  2. ’ಅಮೆ’ಯನ್ನು ಆಮೆಯೆಂದು ಓದಿ ಈ ಪ್ರಯತ್ನ ಮಾಡಿದೆ. ಆಮೆ, ವಾನ, ಯಾಮೂರ್, ರಿಯನ್ ಎಂಬ ಕ್ರಮದಲ್ಲಿ ಮಾಡಿದ್ದೇನೆ. ಹೀಗೆ ದತ್ತಪದಗಳ ಕ್ರಮಪರಿವರ್ತನೆ ಮಾಡಬಹುದೇ? ತಿಳಿಸಬೇಕೆಂದು ಪ್ರಾರ್ಥನೆ. ಹಾಗೆಯೇ ತಪ್ಪುಗಳನ್ನು ತಿದ್ದಿದರೆ ಬಹಳ ಸಂತೋಷ.

    आमेघं संस्थिततरुगुरुं गेहावगाहोत्सुका
    रोढुं यत्नं झटिति कुरुते पुत्राय सा वानरा ।
    तोयालेपात् पतनगतिना वृष्ट्या महत्या मूर्छतां
    यातां दृष्ट्वा नवहरिरियं का मे गती रोदिति ॥

    अन्वयः – सा गेहावगाहोत्सुका वानरा पुत्राय (पुत्रं द्रष्टुम्) आमेघं संस्थिततरुगुरुं रोढुं यत्नं झटिति कुरुते । महत्याः वृष्ट्याः तोयालेपात् पतनगतिना मूर्छतां यातां दृष्ट्वा नवहरिः ’का मे इयं गतिः?’ इति रोदिति ।

    ಮಳೆಗಾಲದಲ್ಲಿ ಒಂದು ಹೆಣ್ಣು ಕೋತಿಯು ಮಗನನ್ನು ನೋಡುವ ಆತುರದಿಂದ ಹೆಚ್ಚು ಗಮನ ಕೊಡದೆ ಮೋಡಗಳ ಮಟ್ಟಿಗೆ ಬೆಳೆದಿದ್ದ ಉದ್ದದ ಮರವನ್ನು ಹತ್ತಲು ಹೋದಳು. ಮಳೆಯಿಂದ ಜಾರಿಕೆಯಿತ್ತು ಮರದಲ್ಲಿ. ಜಾರಿ ಬಿದ್ದು ಮೂರ್ಛೆ ಹೋದಳು. ಇದನ್ನು ನೋಡಿದ ಕೋತಿಮರಿಯು ’ನನ್ನ ಗತಿಯೇನು?’ ಎಂದು ಅತ್ತಿತು.

    ಅಮೆಯೊಂದಿಗೆ ಆಮೇಲೆ ಬೇರೆ ಪ್ರಯತ್ನ ಮಾಡುತ್ತೇನೆ.

    • अयि भोः –
      कच्छपमग्रे कृत्वा मन्दाक्रान्तान्वितं भवत्पद्यमिदम्।
      पादचतुष्टयदुष्टं शार्दूलक्रीडिताय कस्माद्यतते ॥
      ಕಚ್ಛಪವನ್ನು (’ಆಮೆ’ಯನ್ನು)ಮುಂದು ಮಾಡಿ ಸಾಗಿದ ನಿಮ್ಮ ಪದ್ಯವು ಮಂದಾಕ್ರಾಂತಾನ್ವಿತವಾಗಿರುವುದರಲ್ಲಿ (ಮೆಲ್ಲನೆಯ ನಡಿಗೆಯಿಂದ ಕೂಡಿರುವುದರಲ್ಲಿ, ಮಂದಾಕ್ರಾಂತಾ-ಛಂದಸ್ಸನ್ನು ಆಶ್ರಯಿಸಿರುವುದರಲ್ಲಿ)ಯಾವ ಆಶ್ಚರ್ಯಾವೂ ಇಲ್ಲ. ಆದರೆ ನಾಲ್ಕು ಪಾದಗಳಲ್ಲಿಯೂ (ಕಾಲುಗಳಲ್ಲಿಯೂ, ಸಾಲುಗಳಲ್ಲಿಯೂ) ದೋಷದಿಂದ (ಛಂದೋಗತಿದೋಷದಿಂದ, ನಡಿಗೆಯ ದೋಷದಿಂದ) ಕೂಡಿರುವ ಅದು ಶಾರ್ದೂಲಕ್ರೀಡಿತವನ್ನು (ಹುಲಿಯ ಆಟವನ್ನು ಆಡಲು, ಶಾರ್ದೂಲವಿಕ್ರೀಡಿತ-ಛಂದಸ್ಸಿನ ಗತಿಯನ್ನು)ಅಪೇಕ್ಷಿಸುವುದು ಸರಿಯೇ?

      • aho satyametat .. kathaMchit saMsArasArodayam iti bisi bELe bAt iva mama manasi sthitaM bhAsate. tadeva manyamAnaH pAdAnAM antimabhAgaH chintitaH. hanta.

    • वयस्य !!
      अनावृष्टिवर्णनस्थाने किमिदं वर्षाकालवर्णनम्?

    • वृत्तमिश्रणं च विषयविस्मरणं च आधारीकृत्य अतिवृष्ट्याः भावेन – “वान, अमे, यामूर्, रियन्” इत्येतैर्युक्तः यत्नोयम् ।

      तन्वाना पदजालवर्णलतिकां वेगं वहन्ती स्वतो
      मन्दाक्रान्तममेयनाशनबला शार्दूलविक्रीडितम् ।
      एकीकर्तुममोघमेलनधियं यामूर्जितां कुर्वती
      वर्षायै भवतात् पदां नतिरियं तस्यै शिवायै धियै ॥

      किंच
      श्रूयतेऽद्य नवो धातुः* संजातोऽण्वोर्विघट्टनात् ।
      अनुकार्येण वृत्तानां मन्दविक्रीडितं तथा ॥
      * Element 115 ununpentium.

  3. ವಿಲಯದಿ ಮುನ್ನಮೆಯೂರ್ವಾ
    ನಲದುರಿಯಾಮೂರಿಯಂ ಧರೆ ಬಿರಿದು ನೋಡಲ್
    ಹಲಧರರ ತಿಣುಕುಮಮರಿಯೆ
    ಸಲೆ ಸುರಿದಳ್ ಜಲದೆ ಮರುಗಿಯೊಡ ಬಲ್ಸರಿಯಂ.

    ವಿಲಯದಿ ಮುನ್ನಮೆ : ಪ್ರಳಯ ಕಾಲಕ್ಕೂ ಮುನ್ನವೆ.
    ಊರ್ವಾನಲದ ಉರಿಯ ಆ ಮೂರಿಯಂ : ವಡಬಾನಲದ ಜ್ವಾಲೆಯ ಆ ಬಾಯಿಯನ್ನು.
    ಧರೆ ಬಿರಿದು ನೋಡಲ್ : ಭೂಮಿ ಬಿರುಕು ಬಿಟ್ಟು ನೋಡಲು.

    ಹಲಧರರ : ರೈತರ
    ತಿಣುಕುಮಂ : ಕಷ್ಟವನ್ನು
    ಅರಿಯೆ : ನೀಗಿಸಲು.
    ಸಲೆ ಸುರಿದಳ್ : ನಿರಂತರವಾಗಿ ಸುರಿದಳು
    ಜಲದೆ : ಮೋಡ ( ಹೆಣ್ಣು ಎಂಬ ಗ್ರಹಿಕೆಯಲ್ಲಿ) .
    ಮರುಗಿ ಒಡ : ಮರುಗಿ ಒಡನೆಯೇ
    ಬಲ್ಸರಿಯಂ : ಬಲವಾದ ಮಳೆಯನ್ನು.

    Japanese : ಮುನ್ನ್ (ಅಮೆ)
    Telugu : ಊರ್ (ವಾನ) ಲ
    Turkish : ಉರಿ(ಯಾಮೂರ್)ಇಯಂ
    Afrikaans : ಮೂ(ರಿಯನ್) ಧರೆ
    Kannada : ಬಲ್(ಸರಿ)

    • (ತಿಣುಕಂ : ಕಷ್ಟವನ್ನು,
      ಹಲಧರರ ತಿಣುಕಮರಿಯಲ್ )

  4. ಸೀಸ|| ಗೈಯದೆಲಿಂ’ದ್ರಿಯನಿ’ಗ್ರಹಂ ತಿರಿಯುತ್ತೆ ಕಾದುತ್ತಲುಣ್ಣುತ್ತೆ ಪರರ ಸೊತ್ತಂ
    ಕುಬ್ಜರ್ ಮೇಣಲ್ಪಾಯುಷಿಗಳಂತೆ ನರ-’ವಾನ’ರರಿಗೆಂದುಂ ಬರಗಾಲಂ ತಪ್ಪದೆಂಬೆಂ|
    ನಿಂತಲ್ಲಿಗೀಯಲಾಹಾರಮಂ ಪ’ರಮೇ’ಷ್ಠಿ ತೃಪ್ತಿಯಿಂ ಸೇವಿಸಿ ಮರಗಿಡಗಳು
    ದೀರ್ಘದಾಯುಷ್ಯಕಾಯಂಗಳಂ ಪೊಂದುತ್ತೆ ಬದುಕುಳಿಯುವವೈ ಬರಗಾಲದೊಳಂ||

    (ಸ್ವ-ಸ್ಥ = ತನ್ನಲ್ಲಿ ನೆಲೆಯಾಗುವುದು)
    ತೇಟಗೀತಿ|| ಸ್ವಾಸ್ಥ್ಯ ಸಾಧಿಸೈ ಮನುಜನೆ ನಿನ್ನೊಳಗೆ ನೀ
    ಚಾರದುದ್ಯಮಂ ನಿಂದಲ್ತು ದೈವದ್ದೆಂದುಂ|
    ದೈವಕ್ಕಿಹುದಂತೆ ಧಾವಂತಂ ಕಾಯಲ್ ನಿನ್ನನ್
    ಎಂದುಮಾದ’ಯಾಮೂರ್ತಿ’ಯು ಬಹನೋಡೋಡಿ||

  5. ಕಳುಹೈ ತಳಿಸಲ್ ಮಘವಾ
    ನಿಳೆಯಂ ಸ್ಮರತಾಪತಪ್ತಗಾತ್ರಳಮೆರೆಯಂ
    ಬಳಿಸಾರಾದೆ ನಮೆದಳಂ
    ಮಳೆಯಾ ಮೂರ್ತಮದು ನೋಳ್ಪೆಯೇಂ? ನಾರಿಯನೀ

  6. ಇವಾಗ ಮೂರನೆಯ ವಿಕೆಟ್ ಕಳೆದುಕೊಳ್ಳುತ್ತೇನೊ ನೋಡೋಣ.

    श्वानोच्छिष्टे ललनवसिता भूतये ‘वा न’ वा नो
    मन्यन्ते तेऽभिनवकृमयो खाद्यशून्ये स’मे’ते ।
    ‘यामू’र्जां खे तपनसहितां भूरि शंसन्ति तोषात्
    शुष्के देशे शुननतिरियं दाहतप्तस्य तस्याम् ॥

    ಭಾವಾರ್ಥ – ಸುಡುವ ಸೂರ್ಯ. ತಿನ್ನಲು ಏನೂ ಇಲ್ಲ. ಅಂತ ಸಮಯದಲ್ಲಿ ಒಂದು ನಾಯಿಯು ಹೆಚ್ಚು ಜೊಲ್ಲು ಸುರಿಸುತ್ತಾ ಮಲಗಿದೆ. (ಧಗೆ ಹೆಚ್ಚಾದಾಗ ಜೊಲ್ಲೂ ಹೆಚ್ಚಂತೆ). ಆ ಜೊಲ್ಲಿನಲ್ಲಿ ಹೊಸದಾಗಿ ಹುಟ್ಟಿಕೊಂಡ ಕೃಮಿಗಳು ’ಇದೆಂಥ ನಮ್ಮ ಭಾಗ್ಯ’ ಅಂತ ಸಂತಸ ಪಡುತ್ತಿವೆ. ಅದೇ ಧಗೆಯಿಂದ ಬಳಲಿದ ನಾಯಿಯು ಮಾತ್ರ ತಲೆಯನ್ನು ತಗ್ಗಿಸಿದೆ.

    • ರವಿ ಕಾಣದ್ದನ್ ಕವಿ ಕಂಡ ಎನ್ನುವುದು ಇದೇ ಇರಬೇಕು. ಇನ್ನು ವಿಕೆಟ್ ವಿಷಯ, ಪಟುಗಳು ಹೇಳಲಿ.

  7. ಎರಡು ಪ್ರಯತ್ನಗಳು

    ದೇವಾ! ನಾಳುಂ ತಿರಿದರಮೆಯಂ ತೀರ್ಚಿಕೊಳ್ಳಲ್ಕೆ ನೋಳ್ಕುಂ
    ಜೀವಂ ಹಯ್ಯೋ ಚಡಪಡಿಸಿಯಾ ಮೂರುಮಂಬಿಟ್ಟು ಬೇಳ್ಕುಂ
    ಸಾವಂ ಕಣ್ದಪ್ಪಿಸುವ ಪರಿಯನ್ ಕಾಣದೊದ್ದಾಡುತಿರ್ಕುಂ
    ನೋವಂ ತಾನುಂಡಕಟ ಕಡೆಗಂ ಸೋತು ಮೆಯ್ಚಾಚುತಿರ್ಕುಂ

    ದಾವಾನಲಂ ಸುಡುತ್ತಿರ್ಕುಂ ದಾರಿದ್ರ್ಯಮೆದ್ದು ಕಾಡುಗುಂ
    ಜೀವಂ ತ್ಯಜಿಸಿಯಾಮೂರಂ ಚೀರಿಯನ್ನಕ್ಕೆ ಬೇಡುಗುಂ

    ನಾಳುಂ- ದಿನವೂ; ಹಳಗನ್ನಡದಲ್ಲಿ ನಾಳ್ ಎಂದರೆ ದಿನ
    ಆ ಮೂರಂ- ಎಲ್ಲರಿಗೂ ಚಿರಪರಿಚಿತವಾದ “ಆ ಮೂರು-ನಾಚಿಕೆ, ಮಾನ, ಮರ್ಯಾದೆ

    • ಮೊದಲ ಪದ್ಯದಲ್ಲಿ:
      ೧) ವಾನ ಬದಲು ವಾನಿ ಎಂದು ಪ್ರಯುಕ್ತವಾಗಿದೆ.
      ೨) ರಿಯನ್ – ಪರಿಯಂ ಬದಲು ಪರಿಯನ್ ಎಂದು ಟಂಕಿಸಬೇಕು

      ಎರಡನೆಯ ಪದ್ಯದ ಅಡಕವು ಹೃದ್ಯವಾಗಿದೆ. ಆದರೆ ’ಆಮೂರಂ’ ಎನ್ನುವ ಬದಲು ’ಮೂರನ್ನುಂ’ ಎಂದರೆ ಸರಿಯಾಗುತ್ತದೇನೋ. ಅವುಗಳನ್ನು ಪದ್ಯದಲ್ಲಿ ಹೆಸರಿಸಿದ್ದರೆ, ’ಆ’ ಎನ್ನಬಹುದಾಗಿತ್ತು.

      • ಧನ್ಯವಾದ ಪ್ರಸಾದ್

        ಮೂರನ್ನುಂ ಎಂದರೆ ಯಾಮೂರ್ ಬರುವುದಿಲ್ಲ. ಅದಲ್ಲದೆ ಮೂರನ್ನುಂ ಎನ್ನುವುದಕ್ಕಿಂತ ಮೂರುಮಂ ರೂಪ ಸಾಧು.

        ಆ ಮೂರಂ ನನಗೆ ಸರಿ ಅನ್ಸುತ್ತೆ. ಮೇಲೆಯೇ ಟಿಪ್ಪಣಿಯನ್ನು ಕೊಟ್ಟಿದ್ದೇನೆ

  8. I have since discovered that “ame” indeed means rain in Japanese. Sorry about the confusion. It of course also means candy 🙂

  9. ಶ್ರೀಕಾಂತಮೂರ್ತಿಗಳೆ,
    ಕ್ಷಮೆ ಇರಲಿ. ಈ ಪದಗಳನ್ನು ಉಪಯೋಗಿಸಿ ದತ್ತಪದಿ ಮಾಡಿರಿ: ವಾನ (Telugu rain), ಅಮೆ (Japanese candy), ಯಾಮೂರ್ (Turkish rain), ರಿಯನ್‍ (Afrikaans rain) 😉

  10. ನರವಾನರವನ ಸಂಕುಲ ಬಳಲಲ್
    ಧರೆಯಾಮೂರ್ಕಾಲದ ಬರದೀ ।
    ಪರಿತಾಪದೊಳದೊ ಭೂಮಮೆ ನಲುಗಿರೆ
    ಹರಿತಾಂ ಪೊರೆವನೆ ನಾನರಿಯೆನ್ ।।

    (ಹರ ಕೊಲ್ಲಲ್ ಪರ ಕಾಯ್ವನೇ ?!)

  11. ಪಸಿವಾ! ನಲುಗಿಸುಗುಂ ಬೂ-
    ಬಸಿರೇ ಬರಿದಾಗಿ ಪಯಿರನೀಯಮೆಯಿಂ ಯಾ-
    ಚಿಸ”ಲಯ್ಯಾ ಮೂರ್ದಿನದಿಂ
    ಪಸಿದಪೆ”ನೆನಲುಸಿರುಮಿಲ್ಲ ಪಾರ್! ಬರದುರಿಯನ್

    ಈಯಮೆ- ಕೊಡದಿರುವಿಕೆ

  12. ಧರೆಯಾಹ್ವಾನವ ಮನ್ನಿಸು
    ತಿರವಾಮೋಡಗಳಮೇಲೆಕೋಪಿಸಿ ಪುರಮಂ
    ತೊರೆದೋಡಿದೆಯಾಮೂರ್ಖನೆ
    ಬರಗಾಲವಿದೈಯದೇಕರಿಯನಾದೆಯೊನೀಂ

    • ಸೂರ್ಯನನ್ನು ಉದ್ದೇಶಿಸಿ ಬರೆದ ಪದ್ಯ ಚೆನ್ನಾಗಿದೆ. ಎರಡನೆಯ ಸಾಲಿನಲ್ಲಿ ಟೈಪೊ ಸರಿಪಡಿಸಿ.
      ಅರಿಯನಾದೆಯೊ = ಅರಿಯನು/ ಅರಿಯನ್ – ತಿಳಿಯನು/ ವೈರಿಯನ್ನು ಎಂಬ ಅರ್ಥಬರುತ್ತದೆ. ವೈರಿ/ ತಿಳಿಯದವನು ಎಂಬರ್ಥ ಬರುತ್ತದೆಯೆ?

  13. ಈ ಬಾರಿ ಪದ್ಯಬಾಹುಳ್ಯ ಕಡಿಮೆ ಇರುವುದರಿಂದ, ಬರಗಾಲದ ಬಗೆಗೆ ಬರೆಯಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ. ಇವೇ ದತ್ತಪದಗಳನ್ನು ಬಳಸಿ ಯಾವುದೇ ವಿಷಯದ ಬಗೆಗೆ ಕವನಿಸಿ. ಪೂರ್ವಾನ್ವಯವಾಗಿ (In retrospect), ವರ್ಷಾಕಾಲದ ಬಗೆಗೆ ಕವನಿಸಿದ್ದಕ್ಕಾಗಿ ನರೇಶರಿಗೆ ಅಭಿನಂದನೆಗಳು 🙂

  14. ವಹ್ನಿಜ್ವಾಲೆಯಂತಿರ್ಕುಂ ಉರಿಯುವುದೀ ಧರೆಯುಂ
    ಏನಿದುಂ ಬಿರು ಬೇಸಿಗೆಯೊ ದಾವಾನಲವೋ
    ಅಮೇಯಾದಿ ಯಾಮೂರ್ದೇವರ ಶಾಪವೋ
    ದೈವ ಲೀಲೆಯೋ ಮೇಣ್ ವಿಧಿಯೋ ಅರಿಯೆನ್

    ನನ್ನ ವಿನಯಪೂರ್ವಕ ಪ್ರಥಮ ಪ್ರಯತ್ನ ತಪ್ಪಿದ್ದರೆ ಕ್ಷಮಿಸಿ

    • ಪ್ರಸನ್ನರಿಗೆ ಪದ್ಯಪಾನಕ್ಕೆ ಸ್ವಾಗತ. ಭಾಷೆ, ಐಡಿಯ ಮತ್ತು ದತ್ತಪದಗಳನ್ನು ಹೊಂದಿಸಿರುವುದು ಚೆನ್ನಾಗಿವೆ. ನಿಮ್ಮ ಆಸಕ್ತಿ ಶ್ಲಾಘನೀಯ. ಆದರೆ ನೀವು ಛಂದಸ್ಸಿನ ಅಂಶಗಳನ್ನು ಗಮನಿಸಿಕೊಂಡಿಲ್ಲ. ದಯವಿಟ್ಟು ಈ ಪುಟದಲ್ಲಿ ಲಭ್ಯವಿರುವ ವಿಡಿಯೋ ಪಾಠಗಳನ್ನು ಅಭ್ಯಾಸಮಾಡಿ ಬಿಡದೆ ಪ್ರಯತ್ನಿಸಿ. ಶುಭಮಸ್ತು.

      • ಮಾನ್ಯ prasAdu ಅವರೇ, ಧನ್ಯವಾದಗಳು! ಛಂದಸ್ಸು ನನಗೆ ಇನ್ನೂ ಹೊಸದು, ಇಲ್ಲಿರುವ ಕವಿಮಿತ್ರರ ಪ್ರಯೋಗಗಳು ಮತ್ತು ಸಂಭಾಷಣೆಗಳು ಚೆಂದಾಗಿವೆ. ವಿಡಿಯೋಗಳಿಂದ ಖಂಡಿತಾ ಕಲಿಯುತ್ತೇನೆ.

      • ಅಕ್ಷರಗಣ ಅಥವಾ ಮಾತ್ರಾಗಣಗಳಲ್ಲಿ ಯಾವುದನ್ನಾದರೂ ಬಳಸಬಹುದೇ? ಅಥವಾ ಯಾವುದಾದರೂ ನಿರ್ದಿಷ್ಟ ಗಣ ಬಳಕೆಯ ಮಾರ್ಗದರ್ಶನವಿದೆಯೇ?

      • ಆ ವಿಡಿಯೊ ತರಗತಿಗಳಷ್ಟನ್ನೂ ನೋಡಿ ಮನನ ಮಾಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ತಾನೇ ದೊರಕುತ್ತವೆ.

  15. ತಂದಿರೆ ಸಜೈಜವಾನವ
    ನಿಂದಿರೆ ನೀವು ಕ್ಷಮೆಪ್ರಭಾಸಬೆಳಗುತಾ ।
    ವಂದಿಪೆ ಆರ್ಯಾಮೂರ್ತಿಗೆ
    ನಂದಿಸಿ ಅರಿಯನ್ನ್ವಿರಾಗಿ ನೆಚ್ಚಿನ ಬಾಪೂ ।।

    ‘ಪ್ರಾಸ’ದ ಪ್ರಯತ್ನ ….ತಪ್ಪಿದ್ದಲ್ಲಿ ಕ್ಷಮಿಸಿ…..

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)