Jul 062014
 

ಚಂದ್ರೋದಯದ ಬಗ್ಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯರಚನೆಯನ್ನು ಮಾಡಿರಿ

  143 Responses to “ಪದ್ಯಸಪ್ತಾಹ ೧೧೬: ಸಂಪೂರ್ಣವರ್ಣನೆ”

  1. ಎನ್ನಿಂದುನ್ಮಾದಕೆ ಬಲಮೆನುತ್ತೀ ಜಗತ್ತಾಡುತಿರ್ಕುಂ
    ಬಿನ್ನಾಣಂವೆತ್ತಿದುವೆ ನಿಜಸಂಮೋಹದಿಂದರ್ಥಕಾಮಾ-
    ಪನ್ನಂ ಬಾಳ್ಗುಂ ಬವಣೆಬಡುತುಂ ಮೇಣಿದಂ ಕಾಂಬೆನೆಂತೆಂ-
    ದುನ್ನತ್ಯಸ್ಥಂ ವಿಧು ಗಡುದಿಕುಂ ಪ್ರಾಗ್ದಿಶಾಪ್ರಾಜ್ಯರಾಜ್ಯಂ ||

    • ಮಂದಾಕ್ರಾಂತಂ ತವರಚಿತ ಚಂದ್ರೋದಯಪ್ರಾಜ್ಯಚಿತ್ರಂ

    • ಬಹಳ ಬಹಳ ಚೆನ್ನಾಗಿದೆ ಸಾರ್, ಉನ್ಮಾದ, ಸಮ್ಮೋಹ, ಬಿನ್ನಾಣ ಎಲ್ಲದರಿಂದಲೂ ಪದ್ಯ ಮೆರೆದಿದೆ 🙂

      • ಕ್ಷಮಿಸಬೇಕು; ಕೊನೆಯ ಸಾಲಿನಲ್ಲಿ ’ಉನ್ನತ್ಯಸ್ಥಂ……..’ ಎಂಬುದು “ಔನ್ನತ್ಯಸ್ಥಂ…….” ಎಂದಾಗಬೇಕು.

  2. ವಿರಹದ ಬೇಗೆಯಿನಾನುಂ
    ನೆರೆಗೆ ಸದಾ ಮುನಿದ ಕಾದಲರ್ಕಳೆನುತ್ತುಂ |
    ವಿರಚಿಸಿದನೊ ಧಾತೃ ಸುಧಾ-
    ಕರನಂ ಗಗನಾಟವೀಮೃಗೇಂದ್ರವಿಭವನಂ ||

    • ವಿರಹಿಗಳನ್ನು ಕುರಿತು ಕರುಣೆಯಿಂದ ಧಾತೃ ಚಂದ್ರನನ್ನು ಸೃಷ್ಟಿಸಿದ ಕಲ್ಪನೆ ಚೆನ್ನಾಗಿದೆ ಸರ್

  3. ಅಂದದ ಕೆನ್ನೆಗಳಂ ಮೇಣ್
    ನಂದನ ಲೀಲೆಗಳಮಿಂದು ತಾದೋರೆಸೆಯಲ್,
    ಕಂದುಗೆ?ಪೆತ್ತರ್ಗೆ ಕರು
    ಳ್ಗಂದನೊಡಾಡಿರ್ದ ಚಣದ ಮಧುರ ನೆನಪುಗಳ್

    • ಆಹಾ ಪೂರ್ಣ ಚಂದ್ರನನ್ನು ಕಂಡು ಒಬ್ಬ ತಾಯಿಗೆ ತನ್ನ ಕಂದನ ತುಂಬುಗೆನ್ನೆ ನೆನಪಾಗುವ ಕಲ್ಪನೆ ಅದ್ಭುತವಾಗಿದೆ 🙂

  4. ಬಾರೆಲೌ ವಿಧುವೆ ನೀನುದಯದಿಕ್ತಟಕೋಡಿ
    ತೋರೆಲೌ ಕವಿಚಕೋರರ್ಗೆ ಮೊಗವ |
    ವಾರಿಜಾರಿಯೆ ಬಾರೊ ವಿರಹಿವೈರಿಯೆ ಬಾರೊ
    ನೀರಧಿಯ ಸುತ ಬಾರೊ ಬೆಳಗೆ ಜಗವ ||

    ಉದ್ದಾಮಕವಿಗಳ್ಗೆ ಸುಂದರಿಯ ಮೊಗ ನೀನು
    ಮುದ್ದುಕಂದರ್ಗಾದೆ ಚಂದಮಾಮ |
    ಮದ್ದಾನೆಯಾ ಗಂಟೆ ನೀನಾದೆ ಮಾಘಂಗೆ
    ಮುದ್ದುಮಗು ಬಾನಬ್ಬೆಗೆಂದ ರಾಗಂ || (ಉಲ್ಲೇಖಾಲಂಕಾರ)

    ಸಮಾನಪಂಕ್ತಿಯ ಕವಿಗಳಾದ ಮಾಘ-ರಾಗ ರನ್ನು ಸ್ಮರಿಸಿರುವುದೊಂದೇ ಈ ಪದ್ಯದ ಹೆಚ್ಚುಗಾರಿಕೆ, ಬಿಟ್ಟರೆ ಮತ್ತೇನೂ ಇಲ್ಲ.

    • ಇಷ್ಟು ಒಳ್ಳೆಯ ಪದ್ಯಗಳನ್ನು ಬರೆದು, ಅದಕ್ಕೆ ನಾವೀನ್ಯವಿಲ್ಲವೆಂದು ಬೇಸರಿಸುವುದುಂಟೇ?

      • ತಾವು ಸೈ ಎಂದರೆ ನಂಬುವೆ. ಧನ್ಯವಾದಗಳು ಸರ್

    • ಮುದ್ದುಮಗು ಬಾನಬ್ಬೆಗೆ, ಮದ್ದಾನೆಯಾ ಗಂಟೆ… ಆಹಾ! ಕೇಯೂರರ ಪದ್ಯ ಬಹಳ ಚೆನ್ಣಾಗಿದೆ

  5. ರಸಿಕರೆರಗಿ ಪಾದಂಗಳ್ಗೆ ನಲ್ದೀವಿಯಂ ನೈ-
    ಜಸರಸವಿಧಿಗಂ ಬೇಡಲ್ ದಯಾವಾರ್ಧಿ ಬೊಮ್ಮಂ |
    ಕುಸುಮಶರನ ಭಾವೋದ್ದೀಪ್ತಿಗುಂ ನೋಂತು ತಾನೀ
    ಮಿಸುಪಿನೆಸೆವ ರಾಕಾರಾಜನಂ ಮೂಡಿಸಿರ್ಪಂ ||

    • ರಸಿಕರಲ್ಲಿ ಕುಸುಮಶರನ ಭಾವೋದ್ದೀಪನಕ್ಕೆ ವಿಧಾತೃವಿನ ಕರುಣೆಯ ಚಂದ್ರ ಸೃಷ್ಟಿಯ ಕಲ್ಪನೆ ಮುಂದೆಯೆ ಬಂದಿದ್ದರೂ ಮಾಲಿನಿಯ ಬಂಧದಲ್ಲಿ ಇನ್ನೂ ಸೊಗಯಿಸುತ್ತಿದೆ 🙂

  6. ಪೊಗಳ್ವರ್ ನೀರೆಯ ಮೋರೆ ಚಂದಿರನವೋಲೆಂದೆಲ್ಲರುಂ ಕಬ್ಬಿಗರ್
    ಸೊಗಸಿಂತಿರ್ದೊಡೆ ಮೋರೆಯೊಳ್ ರಸಿಕರ್ಗೆನ್ನೊಳ್ ನಲ್ಮೆಯೆಂತೆನ್ನುತುಂ |
    ಮೊಗ ಕರ್ಪಿಟ್ಟ ಶಶಾಂಕನಾನೆ ಋತಮಂ ನಿಶ್ಚೈಪೆನೆಂದಾ ಕ್ಷಣಂ
    ಮುಗಿಲಾ ಮಾರ್ಗಮನೇರ್ದು ಸಾರ್ದಪನಲಾ ! ಪೂರ್ವಾಚಲೋತ್ತುಂಗದಿಂ ||

    • ಮೊದಲಿನ ಎರಡು ಪಾದಗಳ ಛಂದಸ್ಸು ಮತ್ತೇಭದಂತಿಲ್ಲವಲ್ಲ ? ಸಂದೇಹಕ್ಕಾಗಿ ಕ್ಷಮೆಯಿರಲಿ

      • ಸಂದೇಹ ಸಹಜವೇ; ಆದರೆ ಆ ಪಾದಗಳಲ್ಲಿರುವುದು ಶಿಥಿಲದ್ವಿತ್ವದ ಪ್ರಯೋಗ. ಇದನ್ನು ಕನ್ನಡವ್ಯಾಕರಣವೂ ಮಹಾಕವಿಪ್ರಯೋಗವೂ ಒಪ್ಪಿವೆ:-)

    • ಆಹಾ! ಎಂಥ ಸೊಗಸಾದ ಅತಿಶಯೋಕ್ತಿ!!
      ನಿಮ್ಮ ಎರಡು ಪದ್ಯಗಳೂ ಚೆಲುವಾಗಿವೆ.

      • ಮೆಚ್ಚುಗೆಗೂ ಕೇಯೂರರ ಸಂದೇಹದ ಪರಿಹಾರಕ್ಕೂ ಧನ್ಯವಾದಗಳು ಸರ್ 🙂

    • ಇದರಲ್ಲಿ ಕಾವ್ಯಲಿಂಗ ಅಲಂಕಾರವಲ್ಲವೇ ಇರುವುದು? ಬಹಳ ಚೆನ್ನಾಗಿದೆ ಪೆಜತ್ತಾಯರೆ. ಕ್ಷಣಂ ಚಣಂ ಆಗಿದ್ದರೆ ಹಳಗನ್ನಾಡಕ್ಕೆ ಇನ್ನೂ ಚಂದವಲ್ಲವೆ 🙂

  7. ಅಂದಮಾಗಿರೆ ಪಂತಾರ್ಥ,ಭಾವವುಂ
    ಬಂದ ತಾವರೆಗಳ್ ನಾಣ್ಚಿ ನಿಂದಿರಲ್,
    ಸುಂದರಾನನೆಯರ್ ಗೇಹ ಸೇರಿರ
    ಲ್ಕಿಂದುಗಲ್ಲವೆ?ಪಂದ್ಯಾಂತ ಹಾಸಮುಂ?
    ಪಂತಾರ್ಥ=ಪಂತದ ಆಶಯ

    • ಛಂದಸ್ಸು ಯಾವುದು?

      • ಇದು ಸ್ವಾಗತವೆಂದು ಬರೆದೆ. ಆದರೆ ನಾನನಾನನನಾನಾನನಾನನಾ ಆಗಿದೆ.ಕ್ಷಮಿಸಿ.

  8. ಹಿಂದೊಮ್ಮೆ ಚಂದ್ರನ ಬಗೆಗೆ ಉಲ್ಲೇಖಾಲಂಕಾರಯುಕ್ತವಾಗಿ ನಾನು ಹೇಳಿದ ಪದ್ಯವೊಂದು ಹೀಗಿತ್ತು:

    ಬಾಲಾನಾಂ ಪ್ರಿಯಮಾತುಲೋ ವಿರಹಿಣಾಂ ಜೀವಾಂತಕಃ ಪಾವಕೋ
    ರಾಹೋರ್ಮಿಷ್ಟಮರಿಃ ಪ್ರಮೋಷಣಜುಷಾಮಿಂದೀವರಾಣಾಂ ಧವಃ |
    ಪಾಪ್ಮಾ ಪಂಕರುಹಾಂ ಸಮೃದ್ಧಿರುದಧೇಶ್ಚೂಡಾಮಣಿರ್ಧೂರ್ಜಟೇ-
    ರಸ್ಮಾಕಂ ತು ನಿರಂಜನೈಕಮನಸಾಂ ಚಂದ್ರಸ್ತು ಚಂದ್ರಾಯತೇ ||

    • ತುಂಬ ಚೆನ್ನಾಗಿದೆ ಸರ್

    • ಗಣೇಶ್ ಸರ್ ನಾನು ಸ್ವಲ್ಪ ಈ ದಾರಿಯಲ್ಲಿ ಯೋಚನೆ ಮಾಡ್ತಾ ಇದ್ದೆ, ಚೆನ್ಣಾಗಿದೆ ಸರ್ ಉಲ್ಲೇಖಗಳು

  9. ಮತ್ತಷ್ಟು ಹೊಸ ಪದ್ಯಗಳು:

    ಕ್ಷೀರಸಾಗರದಿಂದೇಳ್ವ ಶ್ರೀರಮಾವದನೋಪಮಂ |
    ತೋರಿರ್ಪಂ ಪೂರ್ವದಿಗ್ಭಾಗಸ್ಫಾರಂ ಧೀರಸುಧಾಕರಂ ||

    ದಿನಪಂ ಜಾರಿರೆ ಪಶ್ಚಿಮ-
    ಶರಧಿಯೊಳಾತನ ವಿಯೋಗದಿಂ ಬಿಳಿಚಿರ್ಪೀ|
    ದಿನಲಕ್ಷ್ಮಿಯ ಮೊಗಮೆಂಬಿನ-
    ಮರರೇ! ತೋರ್ದತ್ತು ಪೂರ್ಣಸಿತಕರಬಿಂಬಂ ||

    ನಕ್ತಕೃಷ್ಣನಿಗೆನುತ್ತೆ ಕೂರ್ಮೆಯಿಂ
    ರಕ್ತಿಯಿಂದೆ ವರಸಾಂಧ್ಯರಾಧೆ ಸಂ-
    ಯುಕ್ತೆಯೀವ ನವನೀತಮೆಂಬಿನಂ
    ಮುಕ್ತಮೇಘವಿಧುಬಿಂಬಮೊಪ್ಪುಗುಂ ||

    ಕವಲಿಸಲಿರುಳಿಲಿಗಳನೇಂ
    ಜವದಿಂ ಪೂರ್ವಾದ್ರಿಕುಟಿಯನೇರುತ್ತಾರ್ಪಿಂ |
    ನವವಿಧುಶುಭ್ರಬಿಡಾಲಂ
    ಸ್ತವನೀಯಮೆನಿಸಿದುದಲ್ತೆ ದಿನಶುನಕಾರ್ತಂ ||

    • ಚಂದ್ರನನ್ನು ವಿಯೋಗದಿಂದ ಬಿಳಿಗಟ್ಟಿರುವ ದಿನಲಕ್ಶ್ಮಿಯ ಮುಖಕ್ಕೆ, ರಾತ್ರಿಯೆಂಬ ಕೃಷ್ಣನಿಗೆ ಬೆಣ್ಣೆಯಾಗಿ, ಇರುಳಿನ ಇಲಿಗಳಿಗೆ ಬೆಕ್ಕೆಂಬ ಪದ್ಯಗಳು ಬಹಳ ಅದ್ಭುತವಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಈ ಬಾರಿಯ ಪದ್ಯಪಾನದ ವಸ್ತುವು ಅತಿಹೆಚ್ಚು ಸಾರ್ಥಕವಾದದ್ದೆನಿಸುತ್ತಿದೆ 🙂

      ಕಡೆಯಪದ್ಯವನ್ನು ದಯವಿಟ್ಟು ವಿವರಿಸಿರಿ, ನನಗೆ ಅದು ಪೂರ್ಣವಾಗಿ ಅರ್ಥವಾಗಲಿಲ್ಲ

      • ಇದೊಂದು ವಿಕಟಶೈಲಿಯ ಪದ್ಯ:-) ಹಗಲೆನ್ನುವ ನಾಯಿಯಿಂದ ಭಯಗೊಂಡ ಚಂದ್ರನೆಂಬ ಬೆಕ್ಕು ಕತ್ತಲೆಯೆಂಬ ಇಲಿಗಳನ್ನು ಹಿಡಿಯಲು ಉದಯಾದ್ರಿಯೆಂಬ ಗುಡಿಸಿಲನ್ನೇರಿ ಬೇಟೆಗೆ ಕಾದಿದೆ ಎಂಬುದಿಲ್ಲಿಯ ತಾತ್ಪರ್ಯ.

  10. पुपोष रजनीकरो ऽविकलितां कलां दर्शयन्
    वनेष्वति भयानकं कुतुमुलं वृकोद्घोषितम्।
    स एव नगरे स्थितस् तु कमनीय-गीतोद्भवः
    विचित्रमिह युग्मकं भवति पूर्णचन्द्रोदये॥

    (पृथ्वीः छन्दः।)

    • ಪ್ರಶಂಸಿತಮಧಿವ್ರಜೇದ್ಭವದುದಾರಪೃಥ್ವೀಕ್ರಿಯಾ
      ಪರಂ ತು ಪದಪದ್ಧತೌ ಕವನಕಲ್ಪನೇ ಕ್ವಾಪಿ ತೇ |
      ಇತೋsಪಿ ರುಚಿಮಾರ್ದವಂ ಮಸೃಣತಾಂ ಚ ವಾಂಛತ್ಯಲಂ
      ವಿಮರ್ಶವಿಧಿನಾ ಯತಃ ಪ್ರಯತನಾಲವೋsಮೀ ವಯಮ್ 🙂

  11. ಶ್ಲಿಷ್ಟೋಪಮೆಯನ್ನು ಬಳಸಿಕೊಂಡು ಪದ್ಯಪಾನದ ಹಾಗೆಯೇ ಚಂದ್ರನ ಉದಯವೆಂದು ಕಲ್ಪನೆ:

    ವಾರವಾರವೂ ಪ್ರಶ್ನಪಕ್ಷಗಳ ಪೂರಣಕ್ಕೆನುತ್ತಂ
    ಸಾರುತಿರ್ಪ ಸುಕಲಾವಿಲಾಸಸಂಪೂರ್ಣಚಾರುವೃತ್ತಂ |
    ಸ್ಮೇರಸೌಮ್ಯರಸಪೂರಮಪ್ಪ ಈ ಪದ್ಯಪಾನದಂತೆ
    ಸಾರಸುಂದರಸುಧಾಂಶುಬಿಂಬದುದ್ಭೂತಿ; ವಿಗತಚಿಂತೆ ||

    • ಹೌದು ಸರ್, ಅದರಲ್ಲೂ ಈ ಸಂಚಿಕೆಯ ಪದ್ಯಪಾನದ ಪೂರಣಗಳಿಂದ ಈ ಪದ್ಯದ ಪದ್ಯಪಾನಪ್ರಶಂಸೆ ಬಹಳ ಆಪ್ಯಾಯಮಾನವಾಗಿದೆ 🙂

  12. प्राची प्रसूय रविमुष्णकरं विषण्णा
    तद्रश्मिजालमथितान् मनुजानवेक्ष्य ।
    पापं ममेदमचिरादपवारयानी-
    त्येनं सुधारसरुचिं सुषुवे शशाङ्कम् ॥

    • tRutIyapAdE mUrdhanyaNakArah syAt..

      • ಸುಂದರತರಕವಿತಾಯೈ ಧನ್ಯವಾದಾಂಜಲಯಃ |

        ಪ್ರಾಯೇಣ ಮತ್ಕವಿತಯಾ ಬಹುಧಾ ಮುಧಾ ವಾ
        ಕರ್ಣಾಟವದ್ರಚಿತಯಾ ಚಿತಯಾ ಹತಾ ವಾಕ್ |
        ಪ್ರತ್ಯಗ್ರಸುಂದರಮಿದಂ ಪೆಜತಾಯಪದ್ಯಂ
        ಸದ್ಯಃಪ್ರಸೂಯ ಶಿಶಿರೀಕುರುತೇ ಜಗಂತಿ || 🙂

        • ನಿಮ್ಮ ಪದ್ಯಗಳ ಬಗೆಗಿನ ಮಾತಿಗೆ ನನ್ನ ಒಪ್ಪಿಗೆಯಿಲ್ಲದಿದ್ದರೂ ಮೆಚ್ಚುಗೆಗೆ ಧನ್ಯವಾದಗಳು ಸರ್ 🙂

    • ಕನ್ನಡದಲ್ಲಿ ತಾತ್ಪರ್ಯವನ್ನು ಬರೆಯಿರಿ ನಮಗೆಲ್ಲ ಪೂರ್ಣವಾಗಿ ಪದ್ಯ ಅರ್ಥವಾಗುವುದು 🙂

      • Thanks Soma. ನಾನೂ ಇದನ್ನು ಅನುಮೋದಿಸುತ್ತೇನೆ 🙂
        ಅಪ್ಪಟ ಹಳಗನ್ನಡಿಗರೂ ಸಾರಂಶವನ್ನ ತಿಳಿಸಿದರೆ ಉತ್ತಮ.

      • ಶರ್ಮರೆ.. ಮೆಚ್ಚುಗೆಗಳಿಗೆ ಧನ್ಯವಾದಗಳು. ಮುಂದಿನ ಪದ್ಯಗಳಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ.

  13. ಅಭ್ಯಾಸಕ್ಕಾಗಿ ಮಾಲಿನೀ ಛಂದಸ್ಸನ್ನು ಉಪಯೋಗಿಸಿದ್ದೇನೆ. ಇದನ್ನು ಉಪಜಾತಿ/ಅನುಷ್ಟುಪ್ ಛಂದಸ್ಸಿನಲ್ಲೇ ತರಬಹುದೇನೋ. ಎಂದಿನಂತೆ ಶಬ್ದ/ವ್ಯಾಕರಣ ಶೈಥಿಲ್ಯದ ಆಗರವಾಗಿರಬಹುದು.

    मनसि मृदरभावात्पूर्वदिक्सुन्दरी सा
    मधुरकिरणगोत्रं कन्दुकं सौकुमार्यात् लीलयेव |
    अपरपरिधिकन्यामक्षिपत्केलिकाले
    धरणितलनिवासैः ख्यापितेन्दूदयं तत् || (or is it ख्यापितेन्दूदयस्सः? not sure about it)

    सा पूर्वदिक्सुन्दरी मनसि मृदरभावात् अपरपरिधिकन्यां (प्रति) मदुरकिरणगोत्रं कन्दुकं सौकुमार्यात् अक्षिपत् |
    तत् धरणितलनिवासैः ख्यापितेन्दुदयं (इति)

    ಪೂರ್ವ ದಿಕ್ಕೆಂಬ ಸುಂದರಿಯು ಖೇಲನಭಾವದಿಂದ ಪಶ್ಚಿಮದಿಕ್ಸುಂದರಿಯನ್ನು ಕುರಿತು ಮಧುರಕಿರಣ(ಚಂದ್ರ)ನೆಂಬ ಚೆಂಡನ್ನು ಆಟದ ಸಮಯದಲ್ಲಿ ಸುಕುಮಾರತೆಯಿಂದ (ಹೆಚ್ಚು ಬಲವನ್ನು ಬಳಸದೇ) ಎಸೆದಳು. ಭೂಲೋಕವಾಸಿಗಳಿಂದ ಅದು ಚಂದ್ರೋದಯವೆಂದು ಹೆಸರುಪಡೆಯಿತು.

    ಕೆಳಗೆ ಹೇಳಿರುವಂತೆ ‘ಲೀಲಯೇವ’ ಎಂದು ತಿದ್ದಿದ್ದೇನೆ

    • ಮಧುಮಧುರಮಯೂಖಪ್ರಖ್ಯಮೇತದ್ಧಿ ಪದ್ಯಂ
      ವಿಧುಸಮುದಯದಾಯಂ ತನ್ವದಾಭಾತಿ ನಸ್ತೇ |
      ಪರಮಿದಮವಧೇಯಂ ’ಸೌಕುಮಾರ್ಯಾತ್’ ಪ್ರಯೋಗಃ
      ಸ್ಖಲತಿ ಖಲತಿ ತತ್; ಸ್ಯಾತ್ ಪ್ರಾಯಶೋ ತಾರ್ತಿಯೀಕೇ ||

      ಎಲ್ಲ ಚೆನ್ನಾಗಿದೆ; ಸೌಕುಮಾರ್ಯಾತ್ ಎಂದು ಪಂಚಮೀ ಕೂಡದು, ಅದು ತೃತೀಯೆಯಾಗಬೇಕು. ಆದರೆ ಆಗ ಛಂದಸ್ಸು ಕೆಡುವುದು:-(

      • स्वल्पशक्त्या ಎಂದು ಸವರಣೆ ಮಾಡಿದರೆ ಸರಿಹೋಗುವುದೇ? सौकुमार्य ಪದದಷ್ಟು ಅರ್ಥಸ್ಪಷ್ಟತೆ ನೀಡುವುದಿಲ್ಲ ಅನ್ನಿಸುತ್ತದೆ

        • ಲೀಲಯೈವ ಅಥವಾ ಲೀಲಯೇವ ಎಂಬ ಸವರಣೆ ಮತ್ತೂ ಸರಿಯಾದೀತು.

    • ಕಡಗುತೆ ಭಾವಸಮುದ್ರವ-
      ನೊಡಮೂಡಿಸಿ ಕಲ್ಪನಾತರಂಗಗಳಂ ನೂರ್-
      ಮಡಿಸಿರೆ ಸಹೃದಯಗೆಂದುಂ
      ನುಡಿಹಬ್ಬಂ ಪದ್ಯಪಾನಚಂದ್ರೋದಯದೊಳ್||

      ಉತ್ತಮೋತ್ತಮಕಲ್ಪನೆಗಳನ್ನು ಹೆಣೆದ ಎಲ್ಲರಿಗೂ ಧನ್ಯವಾದಗಳು.

    • ರಾಘವೇಂದ್ರ ಬಹಳ ಚೆನ್ನಾಗಿದೆ ಚೆಂಡಾಟದ ಕಲ್ಪನೆ 🙂

  14. ಸೂರ್ಯನ ಕಿರಣಗಳೇ ಚಂದ್ರನ ಮೇಲೆ ಪ್ರತಿಫಲಿಸುತ್ತವೆ ಎಂಬ ವೈಜ್ಞಾನಿಕ ಸತ್ಯವನ್ನು ಕಲ್ಪನೆಯ ಮೂಲಕ ಹೇಳುವ ಒಂದು ಶಿಶುಪ್ರಯತ್ನ. (ಅತಿಶಯೋಕ್ತ್ಯಲಂಕಾರ)

    ಮೇಘವಿಸ್ಫೂರ್ಜಿತಂ ವೃತ್ತಂ ||
    ಅಸಾಧ್ಯೋ ಮೇ ನೂನಂ ಭವತಿ ರಜನೀಯೋಷಿತುಸ್ಸಂಪ್ರಯೋಗಃ
    ಯತೋ ಹ್ಯೇವಂ ವೇಧಾ ವ್ಯಲಿಖದಲಿಕೇ ಯದ್ದುರುಲ್ಲoಘ್ಯಮಸ್ತಿ |
    ಅತಃ ಸೋಮಾಕಲ್ಪೇ ಶಿಶಿರಕಿರಣೈಶ್ಚನ್ನಸರ್ವಾತ್ಮತೇಜಾಃ
    ಶನೈ ರಾತ್ರಿಂ ಪ್ರಾಪ್ತೋ ರಹಸಿ ದಿನಪೋ ವಂಚಯನ್ ವಾರ್ಜಯೋನಿಮ್ ||

    (ಯಾಮಿನೀಭಾಮಿನಿಯೊಂದಿಗೆ ತನ್ನ ಸಮಾಗಮವು ಬ್ರಹ್ಮನಿಯಮದ ಪ್ರಕಾರ ಅಸಾಧ್ಯವೆಂಬುದನ್ನರಿತ ದಿನಪತಿಯು ಬ್ರಹ್ಮನಿಗೆ ಗೊತ್ತಾಗಬಾರದೆಂದು ತನ್ನ ಪ್ರಖರ ತೇಜಸ್ಸನ್ನೆಲ್ಲ ಉಪಸಂಹರಿಸಿ ಚಂದ್ರನ ವೇಷದಲ್ಲಿ ರಾತ್ರಿಯನ್ನು ಕೂಡಲು ಕಳ್ಳಹೆಜ್ಜೆಯಿಡುತ್ತ ಬಂದನು.)

    • ಮೂರನೇ ಪಾದದಲ್ಲಿ ‘ಛನ್ನ’ ಎಂದು ಮಹಾಪ್ರಾಣ ಬರಬೇಕು.

    • ತುಂಬ ಒಳ್ಳೆಯ ಕಲ್ಪನೆ ಹಾಗೂ ಬಂಧಪ್ರೌಢಿಮೆ. ಇದೇ ಶಿಶುಯತ್ನವಾದರೆ ಯುವಯತ್ನವಿನ್ನೇನಾಗಬಹುದು? 🙂

    • अति सुन्दरम्। वर्जयोनिम् इति स्याद्वा?

      • ವಾಃ ಇತಿ ಜಲಂ, ತತ್ರ ಭವಂ, ವಾರ್ಜಂ = ಕಮಲಂ, ತದ್ಯಸ್ಯ ಯೋನಿರ್ಜನ್ಮಕಾರಣಂ ಸ ಚತುರ್ಮುಖಬ್ರಹ್ಮಾ

    • ಕೇಯೂರರೆ ದಿನಪನ ಕಳ್ಳ ಮಾರ್ಗ ಬಹಳ ಚೆನ್ನಾಗಿ ಮೂಡಿದೆ ಚಂದ್ರೋದಯದಲ್ಲಿ

  15. ಕುದಿವಕೋಪದಕೆಂಡ ಸೋರುವ ಸೂರ್ಯನಂ ಭಜಿಕುಂ ಜಗಂ
    ಒದರಿ ನೀರನೆ ಕಪ್ಪತೋಯುವ ಮೇಘಮಂ ಪಶುಪಕ್ಷಿಗಳ್
    ಚದುರತಾರೆಗಳಂದಚಂದಕೆ ಸೋಲುವರ್ ಹಲರಾದೊಡಂ
    ಮಧುರಜೇನಿನ ಚಂದ್ರಬಿಂದಿಗೆ ಆರಿಗಂ ಹಿತಮಾಗದುಂ?

    • ಅರಿಸಮಾಸಗಳೆಂಬ ಹಾವಸೆ ಪೆರೆಯ(ಚಂದ್ರನ)ಬಿಂದಿಗೆನೀರಿನೊಳ್
      ಸರಿದುಬಂದುವಲಾ! ಇವನ್ನುಳಿದಂತೆ ಪದ್ಯವು ಸುಂದರಂ:-)

      • ಹಸಿರುಹಾವಸೆಯಂದಮೆನಗರಿಯಾಯಿತಲಾ!
        ಕಡೆಯ ಸಾಲನ್ನು ಹೀಗೆ ತಿದ್ದುವೆ ಸರ್.
        “ಮಧಿರ(ಮದಿರ 🙂 ) ಚಂದಿರನೆಂಬ ಬಿಂದಿಗೆ ಆರಿಗಂ ಹಿತಮಾಗದುಂ?”

  16. ತಿಳಿಮೋಡಗಳಕರೆದು ಸಂಜೆಮುಂಜಾವಿನೊಳ್
    ಪೊಳೆವದಿನಪನ ದೂಡು ಪುಸಿವೆಳಕಿನಿಂ|
    ಖಳರುನಿನ್ನುದಯಮನ್ನೀಕ್ಷಿರ್ಪರಿಳೆಯೊಳಗೆ
    ಬೆಳಗುಬಾ ಕಳ್ತಳೆಯರಾಯನಂತೆ|

    ಸಂಜೆಮುಂಜಾವಿನೊಳ್ – ಚಂದ್ರನಿಗೆ ಸಂಜೆಯೇ ಮುಂಜಾವು
    ಪುಸಿವೆಳಕು – ತನ್ನದ್ದಲ್ಲದ ಬೆಳಕು
    ಕಳ್ತಳೆಯರಾಯ – ಕಳ್ಳರಿಗೆ ಕತ್ತಲೆಲ್ಲಿ ಚಂದ್ರನೇ ದಾರಿದೋರುವನು

    ಕಲ್ಪನೆ, ಭಾಷೆ ಎರಡೂ ಸುಮಾರಾಗಿದೆ 🙁 … ಮತ್ತೊಂದ ಪ್ರಯತ್ನಿಸುವೆ

    • ಕಳ್ಳರು ನಿನ್ನ ಉದಯವನ್ನು ಕಾದಿದ್ದಾರೆ ಎಂಬ ಕಲ್ಪನೆ ಚೆನ್ನಾಗಿದೆ

  17. ವಲಯಾಕಾರದಿನೇಂ ? ಶುಚಿದ್ಯುತಿಯಿನೇಂ ? ಸಂಹ್ಲಾದಿಸೌಂದರ್ಯದೇಂ ?
    ಲಲನಾಭೂರಿವಿಲಾಸಭಾಸಿವದನಕ್ಕಾಂ ಸಾಟಿಯಲ್ತೆಂದು ನೋಂ-
    ತಲ ! ಬಾಂಬಟ್ಟೆಯಿನೆಯ್ಯುತುಂ ಕಿಟಕಿಯೊಳ್ ಹಸ್ತಂಗಳಂ ಚಾಚುತುಂ
    ವಿಲಸದ್ವಿಭ್ರಮಮಂ ವರಾಂಗನೆಯರಂ ಬೇಡುತ್ತೆ ಸಾಗಿರ್ಪನಯ್ ||

    • ಒಳ್ಳೆಯ ಕಲ್ಪನೆ. ಈ ತೆರನಾದ ಸಂಸ್ಕೃತಶ್ಲೋಕವೊಂದನ್ನು ಹಿಂದೆ ಕೇಳಿದಂತೆ ನೆನಪು.

      • ಓಹ್. ಸರಿ ಸರ್.. ಧನ್ಯವಾದಗಳು 🙂

    • ಬಹಳ ಚೆನ್ನಾಗಿದೆ

  18. सायं रम्यै रमणवचनैर्नन्दितानां वधूना-
    मेकीभूतो धवलनवलो हास एवेन्दुरास्ते ।
    तस्मात्तासां निशि रसरते दीपतामेष धत्ते
    प्रायः सन्तः प्रतिकृतिविधौ नालसत्वं व्रजन्ति ॥

  19. ಅನುದಿನವು ಕಡೆಕಡೆದು ಬಂದ ಬೆಳಕಿನ ಬೆಣ್ಣೆ-
    ಯನು ನೆಲವೊಳಿರಿಸುತಿಹೆಯಮ್ಮ ನೀನು ।
    ಇನಿತಿನಿತೆ ತಡೆತಡೆದು ನುಂಗಿ ಕರಗಿಪ ಕಳ್ಳ-
    ನನು ಹಿಡಿಯೆ ಕಡೆವುದನೆ ಮರೆತೆಯೇನು ?!

    ಶುಕ್ಲ(ಬೆಣ್ಣೆ)ಪಕ್ಷದಲ್ಲಿ ಬೆಳೆವ – ಕೃಷ್ಣ(ಕಳ್ಳ)ಪಕ್ಷದಲ್ಲಿ ಕರಗುವ “ಚಂದ್ರ”ನ ವರ್ಣನೆ !!
    (ಬೆಳಕನ್ನು ಕಡೆದು ತೆಗೆದ ಬೆಣ್ಣೆಯುಂಡೆ(ಚಂದ್ರ !)ಯನ್ನು “ನೆಲವು”(ಆಕಾಶ !)ದಲ್ಲಿ ಇಡುತ್ತಿದ್ದಾಳೆ – “ಜಗದಂಬೆ” ಎಂಬ ಕಲ್ಪನೆಯಲ್ಲಿ. ಅವಳು ಕಡೆಯುವುದನ್ನು ಮರೆತ ದಿನ – “ಅಮಾವಾಸ್ಯೆ”ಯೇ ?!)

    • ಚೆನ್ನಾಗಿದೆ ,ಉಷಾ 🙂

    • ಉಷಾ ರವರೆ,
      ನವ್ಯ ನವನೀತ ಕಲ್ಪನೆ ! ಅಭಿನಂದನೆ.
      ಎರಡನೆ ಸಾಲನ್ನು ಹೀಗೆ ಬದಲಿಸಿದರೆ “ನೆಲವೊಳಿರಿಸಿ” ಯ ತೊಡಕನ್ನು ನಿವಾರಿಸಬಹುದು.
      ಯನು ಬಾನ ಬೋಗುಣಿಯೊಳಿಡುವ ಭೂಮಾತೆ

    • ಸಲೆ ಸೊಗಸಾದ ಕವಿತೆ!!

    • Thanks for the fine imagination and versification.

    • ಬಹಳ ಚೆನ್ನಾಗಿದೆ ಉಷಾ ಅವರೆ

    • ಎಲ್ಲರಿಗೂ ವಿನೀತ ಧನ್ಯವಾದಗಳು.

  20. ಚಂದ್ರನ ಕುರಿತಾಗಿ ಪದ್ಯಸಪ್ತಾಹವಲ್ಲ ಪದ್ಯವರ್ಷವನ್ನೇ ಇಟ್ಟರೂ ಮುಗಿಯದು ಎಂದೆನ್ನಿಸುತ್ತದೆ. ಅದಕ್ಕೆ ಒಂದು ಪದ್ಯ

    ವೈಭವಾಮೃತರಸಂ ಕವಿಮುಖ್ಯಾಃ
    ಕಲ್ಪನಾಪಿಠರಕೈಃ ಪಿಪಿಬಂತಃ |
    ಅಕ್ಷಯಂ ತವ ತಥಾಪಿ ಹಿಮಾಂಶೋ
    ಸಾಗರಪ್ರಭವ ಏವ ಭೃಶಂ ತ್ವಮ್ ||

    (ಎಲೈ ಚಂದ್ರನೇ, ಕವಿಗಳು ನಿರಂತರವಾಗಿ ನಿನ್ನ ಮಹಿಮಾರಸವನ್ನು ತಮ್ಮ ಕಲ್ಪನಾಭಾಂಡದಿಂದ ಮೊಗೆಮೊಗೆದು ಕುಡಿಯುತ್ತಿದ್ದರೂ ಅದು ಬರಿದಾಗುತ್ತಿಲ್ಲ.
    ನೀನು ಸಾಗರನ ಸುತನೇ ಸರಿ.)

    • पिपिबन्त इत्यत्र प्रथमपिकार उपसर्गाङ्गं वा?

      • ಧನ್ಯವಾದಾಃ ಮಿತ್ರ, ಮಯಾ ತು ಏತದಸಮೀಚೀನಂ ಲಿಖಿತಮ್ | ಸರ್ವಮೇತತ್ quilpad ಮಹಾಶಯಸ್ಯ ತಥಾ ಮಮ ಅಜಾಗರೂಕತಾಯಾಶ್ಚ ಅನುಗ್ರಹಃ |
        ‘ಕಲ್ಪನಾಪಿಠರಕೈರ್ಹಿ ಪಿಬಂತಃ’ ಇತಿ ಪಠಿತವ್ಯಂ |
        ತಥಾಪಿ ಕುಪೂಯಂ ಮೇ ಪದ್ಯಮಿದಮ್ |

    • ಆಹಾ ಬಹಳ ಚೆನ್ನಾಗಿದೆ ಕೇಯೂರರೆ, ನಿಮ್ಮ ಪೂರಣಗಳ ಬಹಳ ಸ್ವಾರಸ್ಯವಾಗಿದೆ. ಇದೂ ಕಾವ್ಯಲಿಂಗಾಲಂಕಾರವಲ್ಲವೇ?

  21. ಬಾಲರ,ವಿರಹಿಜನರ,ಕವಿ
    ಶೀಲರ ಕಣ್ಮಣಿಯೆ ತಾನೆನುತೆ ಸಂಭ್ರಮದಿಂ
    ಕಾಲಾಂತರದೊಳ್ ಕೊರ್ವುತೆ
    ಪಾಲಂದದ ನಗೆಯ ಪರಡುವನೆ ಚಂದ್ರಮ ತಾಂ?

    • ಆಹಾ! ಎಂಥ ಸುಂದರವೂ ಕಾವ್ಯಲಿಂಗಾಲಂಕಾರ-ಸಸಂದೇಹಾಲಂಕಾರಗಳ ಸೊಬಗೂ ಇರುವ ಕಂದ!!

    • ಚಂದ್ರನ ನಗೆಗೆ ಕಾರಣವನ್ನು ಸಸಂದೇಹದಿಂದ ನೀಡಿರುವ ಪದ್ಯ ಬಹಳ ಚೆನ್ನಾಗಿದೆ 🙂

  22. It is not just the denizens of earth that are ignorant; the earth too is ignorant. Though the moon is in its control, the earth blocks the light of the sun from reaching the moon and lives in darkness half the time.

    ಸದಪರವಕ್ತ್ರ|| ಭುವಿಯ ಜನತೆ ಮಾತ್ರಮಲ್ಲವೈ| ಪ್ರತಿಹತಮೆಂಬೆನು ಭೂಮಿಯುಂ ಗಡಂ
    ಶಿವವನರಿಯದೆಲ್ ಮುಳುಂಗುವೊಲ್| ನಿಶೆಯೊಳಗೆಂತುಟೊ ಮೌಢ್ಯದಿಂದವರ್|
    ಹವಣುಗೊಳಿಸದೆಲ್ ಬೆಳಂಗುವೊಲ್| ಶಶಿಯನು ತನ್ನಯ ಶಾಸ್ತಿಯಿದ್ದೊಡಂ
    ರವಿಯಬೆಳಕ ವಾರಿಸುತ್ತೆ ಭೂ|ಮಿಯಿಹುದು ಕಳ್ತಲೊಳರ್ಧಕಾಲ ತಾಂ||

    ಭಾಷೆಯನ್ನು ಕ್ಷಮಿಸಬೇಕು. ಕಳ್ತಲೊಳರ್ಧಕಾಲ ಅರಿಸಮಾಸವಾಯಿತೆ?

  23. ನನ್ನದೊಂದು ಪ್ರಯತ್ನ

    ಏರಿಪ ನಭಮಂ ಗಡ ಪದಿ-
    ನಾರೆನೆ ರೂಪದ ವಿಲಕ್ಷಣಗಳಿಂ ತಿಥಿಯಂ
    ತೋರಲ್ಕೆನೆ ಕರ್ಬಿಳ್ಪಿನ
    ಪೋರನುದಯದಾ ವಿರೂಪಣಂ ನೆಗಳ್ದಪುದಯ್

    ಹದಿನಾರು ಬೇರೆಬೇರೆಯಾಗಿ ಗುರುತಿಸಬಲ್ಲ ಲಕ್ಷಣಗಳಿಂದ ತಿಥಿಯನ್ನು (ಸ್ಫುಟವಾಗಿ) ತೋರಲು ನಭವನ್ನು ಏರುವ ಕರಿ-ಬಿಳಿಯ ಪೋರನ ಉದಯದ ನಿರೂಪಣವು ಮೆರೆಯುವುದು.

    Sun does not transform himself to clearly distinguish one day from another. Moon does to indicate a lunar tithi 🙂

    • ಸೋಮೋದಯಮಂ ಸೋಮಂ
      ಸೀಮಾತೀತಾತ್ಮಸೌಹೃದಗುಣದಿನೀಗಳ್ |
      ಭೂಮಿಸಿದನಲಾ ಎಲ್ಲರ
      ಪ್ರೇಮಲಪದ್ಯಪ್ರತಿಕ್ರಿಯೋದ್ದಾಮತೆಯಿಂ !!

    • ಸೋಮರೆ.. ಸರಸದ ಪದ್ಯವನ್ನೊರೆದು, ಶರವೇಗದಲ್ಲಿ ಪ್ರತಿಯೊಂದು ಪದ್ಯಕ್ಕೂ ಪ್ರತಿಕ್ರಿಯೆಯಿತ್ತುದಕ್ಕೆ ಮರುಳಾಗಿ ಪೋದೆಂ 🙂

    • clap clap

    • dhanyavAda ganEsh Sir, pejettayare, prasAdu 🙂

  24. ಚಂದ್ರನಿಗೆ ಸ್ವಾಗತ:

    ಸೋಲಿಸಲ್ರವಿಯತೀಕ್ಷ್ಣತೆಯಂ ಹಿಂ
    ಬಾಲಿಸುತ್ತವನ ಕಣ್ಮರೆಯಿಂದಂ
    ನೀಲಿಯಾಗಸದೆಮೌನದಿ ಸೋಮಂ
    ತೇಲಿಬರ್ಪುದನು ಕಾಣ್ಬರೆ ಧನ್ಯರ್

  25. ಚಂದಿರನಾಗಸದೊಳ್ತ-
    ನ್ನಿಂದಲೆಬೆಳಕೆಂದುತಾನೆ ಮಿಗಿಲೆನ್ನುತಿರ-|
    ಲ್ಲಂದದತಾರೆಸಮೂಹಗ
    ಳೊಂದೊಂದನುಕಂಡುಮೋರೆಯನು ತಗ್ಗಿಸಿದನ್|

    • ಪದ್ಯವನ್ನು ಹಳಗನ್ನಡದ ಹದದಿಂದ ಮತ್ತೂ ಮಧುರವಾಗಿಸಬಹುದು:
      ಚಂದಿರನಾಗಸದೊಳ್ ತ-
      ನ್ನಿಂದಮೆ ಬೆಳಕೆಂದು, ತಾನೆ ಮಿಗಿಲೆನುತಿರಲಿ-
      ನ್ನಂದದ ತಾರಾನಿಕರಮ-
      ನೊಂದೊಂದಂ ಕಂಡು ಮೋರೆಯನೆ ತಗ್ಗಿಸುವಂ ||

  26. ಕತ್ತsಲs ಕಾಳsನ ಕೊsಲ್ಲುsತೆ ಬಂದಿರ್ಪ
    ನೆತ್ತsರ ದಾಗsಸ ದಿಂದs|
    ಕತ್ತೆತ್ತಿs ನೋಡಲ್ಲಿs ಚಂದ್ರsತಾ ನಗುತಿರ್ಪ
    ತುತ್ತನ್ನುs ತಿನ್ನೆನ್ನs ಕಂದs|

    ಸಾಂಗತ್ಯ ಸರಿಯಿದೆಯೇ? s ಗಳು ತಪ್ಪು ಜಾಗದಲ್ಲಿ ಬಂದಿದ್ದರೆ ದಯವಿಟ್ಟು ಸರಿಪಡಿಸಿರಿ..

    • ಸಾಂಗತ್ಯ ಸರಿಯಾಯ್ತು ಸಾಹಿತ್ಯ ಸವಿಯಾಯ್ತು
      ಅಂಗೀಕರಿಸಿದೆನು ಚೀದಿ!
      ಭಂಗಿತವಾಯ್ತು ಮತ್ತಿಲ್ಲಿ ವರ್ಣನವಸ್ತು
      ಪೊಂಗಿರೆ ತಾಯಿಯ ಹಾದಿ 🙂

  27. ಬಳಲಿರ್ಪೆಂ ಕ್ಷಯರೋಗದಿ-
    ನಳಿಸಲ್ಕಾವ ಲತೆ ಮರ್ದೆನುತೆ ಪುಡುಕುತ್ತುಂ |
    ಬೆಳಕಂ ಚೆಲ್ಲುತುಮೆಲ್ಲೆಡೆ
    ಕಳಾನಿಧಿ ಪೊರಟನಿದೋ ಕೆಳೆಯ ! ಕಾಣೆಲೊ ನೀಂ ||

    • ಅಭಿನವ-ಅಭಿರಾಮಕಲ್ಪನೆ!! ಅಭಿನಂದನೆಗಳು:-)

    • ಒಬ್ಬ ಕಿಶೋರನ ಅಳಲು:

      ಕಾಣಲು ಪೋಗುಮೆನೇನಾ
      ಕ್ಷೀಣಿಪ ಚಂದ್ರಮನನಿಂತು ವರ್ಣಿಸಿರಲ್ ನೀಂ?
      ಮಾಣಿಯನಿವನಂ ಕಂಡಾ
      ಏಣತಿಲಕನೊಯ್ಯನೇಂ ಭಿಷಗ್ಲತೆಯೆನುತುಂ!!

      ಏಣತಿಲಕ=ಚಂದ್ರ. ಭಿಷಗ್ಲತೆ=ಔಷಧೀಯ ಬಳ್ಳಿ

    • ಬಹಳ ಚೆನ್ನಾಗಿದೆ

  28. ಅರಸಿ ತಿಮಿರೆಯು ಬರ್ಪಳೆಂದೊಡೆ
    ಬಿರುಸುಗೊಳ್ಳುತೆ ಹೃದಯ ಬಡಿತವು
    ಹರಿಣವೇ ಪುಟಿದಂತಲಾಯ್ತೇ? ಚಂದ್ರನೆರ್ದೆಯೊಳು|
    ಹರುಷವುಕ್ಕುತ ಬಂದು ಬೆಸೆಸುತೆ
    ತರುಣನಂದಕೆ ಬಲಮನೀಯಲು
    ಕರವ ಚಾಚುತಲವಳ ಬಾಳ್ತೆಯ ರವಿಯೆ ತಾನಾದಂ||
    ಕರವ ಚಾಚು=ಕಿರಣವನ್ನು ಸೂಸು(ಬೆಳಗು)
    (ಕತ್ತಲೆಯ ಸೂರ್ಯನಂತೆ ಚಂದ್ರನಾದ)

    • ಕಾಂಚನಾ ಅವರೇ, ರಾತ್ರಿಯನ್ನು ಪುಲ್ಲಿಂಗ ಮತ್ತು ಚಂದ್ರನನ್ನು ಸ್ತ್ರೀ ಲಿಂಗ ಮಾಡಿರುವಿರೇ?

  29. ಕಾಂಚನಾ ಅವರೆ,
    ಹರುಷವುಕ್ಕೇರಿ ಬಂದು ಬೆಸೆಸುತೆ, ಇಲ್ಲಿ ಒಂದು ಮಾತ್ರೆ ಹೆಚ್ಚಾದಂತಿದೆಯಲ್ಲವೆ? => ಹರುಷವುಕ್ಕೇರ್ಬಂದು ಬೆಸಸುತೆ, ಎಂದು ಸವರಿಸಬಹುದೇ?

  30. ಪದ್ಯಪಾನದ ಪ್ರತಿ ನುಡಿಗೂ “ಸೋಮ ಬಿಂಬ” !! ಸುಂದರವಾಗಿದೆ.

  31. ಈ ಹಿಂದೆ ಪದ್ಯಪಾನದಲ್ಲಿ ಬರೆದಿದ್ದ “ಪ್ರಕೃತಿ ವರ್ಣನೆ”ಯ ಪದ್ಯದಲ್ಲಿನ “ಚಂದ್ರೋದಯ”ದ ಭಾಗ (ಸ್ವಲ್ಪ ಬದಲಾವಣೆಯೊಂದಿಗೆ)

    ಸರಿದಿಹ ಸಂಜೆಗಂಜಿರಲು ಹಚ್ಚಿದುದೀಬಗೆ ಚಂದ್ರ ದೀಪವಂ
    ಸರದಿಯೆ ಬಂದು ಬಾಂದಳದೊಳಾರದು ನೋಡದನಮ್ಮನಂದದಿಂ ।
    ಕರಿಯಿರುಳಿಂದಮಾವಸೆಯು ದೀಪವುಕಾಣದಕಾವ ಕಾರಣಂ ?
    ಮರೆತಿರಲಮ್ಮತಾನೊರೆಸೆ, ಚಿಮ್ಮಣಿತುಂಬಿಹ ಕಪ್ಪು ಕಾಣದುಂ ।।

    (ಬಾನಿನಲ್ಲಿ ನಿತ್ಯ ಸಂಜೆ ಬೆಳಗುವ ಬಗೆಬಗೆ ಆಕೃತಿಯ ಚಂದ್ರದೀಪ – ಬಾಲ್ಯದಲ್ಲಿ (ಮಸಿ ಕಟ್ಟಿದ ಚಿಮಣಿ ಒರೆಸಿ) ಅಜ್ಜಿ ಹಚ್ಚುತ್ತಿದ್ದ ವಿವಿಧ ದೀಪಗಳ ನೆನಪು ತರುವುದು)

    • ನಿಮ್ಮ ಆಶಯ ಬಹಳ ಚೆನ್ನಾಗಿದೆ, ಆದರೆ ಅದು ಪದ್ಯದಲ್ಲಿ ಸ್ಫುರಿಸುತ್ತಿಲ್ಲವಲ್ಲವೇ?

      • ಸೋಮ, “ಸಂಜೆಗತ್ತಲು ಮುಸುಕಲು ಮಕ್ಕಳಂಜುವರೆಂದು (ಮನೆಯಲ್ಲಿ ಅಮ್ಮ ಹಚ್ಚುವಂತೆ) “ಯಾರೋ” ಆಕಾಶದಲ್ಲಿ ಪ್ರತಿದಿನ ಬಗೆಬಗೆಯ ಚಂದ್ರದೀಪ ಹಚ್ಚುತಿದ್ದಾರೆ. ಆದರೆ ಇಂದೇಕೋ (ಅಮಾವಾಸ್ಯೆಯಂದು) ದೀಪ ಕಾಣುತ್ತಿಲ್ಲ – ಕಾರಣ ಹಚ್ಚಿದ ದೀಪದ ಚಿಮಣಿಯನ್ನು ಒರೆಸಲು ಮರೆತಿರಲು ಮಸಿಕಟ್ಟಿದೆ. – ಎಂಬ ಕಲ್ಪನೆ”. ವೃತ್ತದಲ್ಲಿ ತರಲಾಗಲ್ಲ ಎನಿಸುತ್ತಿದೆ.

  32. ಈ ಮಹಾಂತರಿಳೆಯಂ ಕರಂಗಿಸುತೆ ತೃಪ್ತಿ ಕಾಣದಿನ್ನುಂ
    ಭೂಮವಿದ್ಯೆಗಳಿನಾಸೆಯಿಂದೆ ಪುಗೆ ಯತ್ನಿಸಿರ್ಪರೆನ್ನಂ |
    ಕಾಮಕರ್ಬುರರ ಕೈಗೆ ಸಿಲ್ಕಿದೊಡೆ ಸತ್ತೆನಾನೆನುತ್ತುಂ
    ಸೋಮನೀತನುರುವೇಗದಿಂದಿರುವನಲ್ತೆ ಧಾವಿಸುತ್ತುಂ ||

    ಪುಗೆ = ಹೊಕ್ಕುವುದಕ್ಕೆ ಎಂಬರ್ಥದಲ್ಲಿ ಸಾಧುವಾಗುವುದೇ ?
    ಕಾಮಕರ್ಬುರರ = ಕಾಮವೆಂಬ ದೋಷದಿಂದ ರಾಕ್ಷಸರಾಗಿರುವ ಮನುಷ್ಯರ.

    • modala paadadalli iLeyam kaLankisute antAgbEku.

    • puge padapryOga sariyaagiyE ide:-)

    • ಕಾಮುಕರಿಂದ ಚಂದ್ರನು ನಿತ್ಯವೂ ಪರಾರಿಯಾಗುತ್ತಿದ್ದಾನೆಂಬ ಪೂರಣ ಚೆನ್ನಾಗಿದೆ

    • ಧಾವಿಸೀತನಿಂದೆಂತೊ (ಈತನು ಇಂದು ಎಂತೊ) ಲೋಭಿಗಳ್ ಲೋಗರೆನ್ನುತಲ್, ಪೇಳ್
      ಹಾವಭಾವದಿಂ ಬರ್ಪನೇಕೊ ಮಾರನೆಯ ದಿವಸ ಮಗುಳೆ| 😉

  33. सुर्यास्तानान्तरे व्योम्नि दीपाभावे प्रदीपिते |
    रात्र्या हस्तधृते दीपे प्राभूच्चन्द्रोदयः क्षितौ ||
    व्योम्नि सुर्यास्तानान्तरे दीपाभावे रात्र्या हस्तधृते दीपे प्रदीपिते क्षितौ चन्द्रोदयः प्राभूत् |

    ಆಕಾಶದಲ್ಲಿ ಸೂರ್ಯಾಸ್ತದ ನಂತರದಲ್ಲಿ ದೀಪದ ಅಭಾವವಾಗಿರಲು ರಾತ್ರಿಯೆಂಬ ಸುಂದರಿಯಿಂದ ಕೈಯಲ್ಲಿರುವ ದೀಪವು ಪ್ರದೀಪಿತವಾಗಿರಲು ಭೂಮಿಯಲ್ಲಿ ಚಂದ್ರೋದಯವಾಯಿತು

    ಆಗಲೇ ಇಂತಹ ಪದ್ಯಗಳು ಸಂಸ್ಕೃತದಲ್ಲಿ ಬಂದಿರಬಹುದೇನೋ. ಮಾಡಿರುವ ‘ಸತಿಸಪ್ತಮಿ’ ಪ್ರಯೋಗಗಳ ಬಗ್ಗೆ ಪೂರ್ಣವಿಶ್ವಾಸವಿಲ್ಲ हस्तधृते दीपे ಸರಿಯೋ ಅಥವಾ हस्तधृतं दीपं ಸರಿಯೋ ಗೊತ್ತಾಗುತ್ತಿಲ್ಲ. ತಿದ್ದಿ

    • ರಾಘವೇಂದ್ರ, ಏನೂ! ಚಂದ್ರನು ರಾತ್ರಿಸುಂದರಿಯ ಕೈದೀಪವೇ? ಚೆನ್ನಾಗಿದೆ 🙂

    • ಸಾಧುಪ್ರಯೋಗವೇ; ಪದ್ಯವೂ ಚೆನ್ನಾಗಿದೆ.

  34. ಬಾರನೇಕೆನುತೆ ತನ್ನವಲ್ಲಭನುಮೆಲ್ಲುಕಾಣದಾಗಳ್
    ದೂರಸಾಗರವು ಕೋಪಗೊಂಡು ಸೂರ್ಯನ್ನೆ ನುಂಗುತಿರ್ಕುಂ
    ಏರುತಾಗಸಕೆ ಬಾನದಾರಿಯೊಳ್ ಬಂದ ಚಂದ್ರನೀಗಳ್
    ನೀರೆನೀನದೇಕಳ್ಕುತಿರ್ಪೆನಾನಿರ್ಪೆನಿಲ್ಲೆನುತ್ತುಂ

  35. ತಿರೆಯೊಳ್ ರಕ್ತಿಯನಾಂತನಿಂದು ರಮೆಯಂ ವ್ಯಾವರ್ತನಂಗೆಯ್ಯಲಾಂ
    ಚರಿಪೆಂ ನಿಚ್ಛಮೆನುತ್ತೆ ಬಾನ ಪಥಮಂ ತಾನೇರ್ದಪಂ ನಾಣ್ಚುತುಂ
    ಪರರಿಂ ಗೇಹಮಿದಪ್ರಕಾಶಮೆನುವೊಲ್ ಕರ್ಬಿಳ್ಪ ವೇಷಂಗಳಿಂ
    ಚಿರಕಾಲಂ ತನಿಗೆಯ್ಮೆಯೊಡ್ಡಿಪನದಂ ಕಾಂಬರ್ಗೆ ನಿತ್ಯೋತ್ಸವಂ

    ಇಂದು – ಚಂದ್ರ
    ವ್ಯಾವರ್ತನ – ಸುತ್ತುವಿಕೆ (ಪ್ರಿಯಳ ಸುತ್ತ ಪ್ರಿಯನು ಸುತ್ತುವ ಹಾಗೆ)

    ಭೂಮಿಯಲ್ಲಿ ಮನಸೋತ ಚಂದ್ರ (ಅವಳ ಮನವೊಲಿಸಲು) ಚಿರಕಾಲ ಅವಳನ್ನು ಸುತ್ತುವೆನು ಎನುತ್ತೆ ಬಾನನ್ನು ಏರುವನು, ಈ ಕಾರ್ಯವನ್ನು ಮಾಡುವಾಗ ನಾಚಿಕೆಯಾಗಿ ಇತರರಿಗೆ ಕಾಣಬಾರದೆಂಬಂತೆ ವೈವಿಧ್ಯಮಯವಾದ ಕರಿಬಿಳಿಯ ವೇಷಗಳನ್ನು ಧರಿಸುವನು, ಈ ಕಾರ್ಯವನ್ನು ನೋಡುವವರಿಗೆ ನಿತ್ಯವೂ ಸಂಭ್ರಮ

    • ನವೀನಕಲ್ಪನೆಯ ಈ ಪದ್ಯವು ತನ್ನ ಶೈಲಿಯಿಂದಲೂ ಸ್ವಾರಸ್ಯದಿಂದಲೂ ಸೊಗಸಾಗಿದೆ.

  36. ಮೇಘಾರ್ದ್ರಜೂಟಾವೃತಶೀತಲಾಸ್ಯೋ
    ದೋಷಾಕಲಿಂದ್ಯಾಸ್ತಟ ಏವ ತಿಷ್ಠನ್ |
    ಚತುರ್ಷು ಮಾಸೇಷು ಸಿತಾಂಶುರಿತ್ಥಂ
    ಬಹೂದಕಾನಾಂ ವ್ರತಮಾತನೋತಿ ||

    The cool-faced moon, with wet clouds as his matted locks, sitting on the banks of the Night-YamunA accomplishes the vrata of the bahUdaka-sannyAsins during the chAturmAsya.

    (This is not about chandrodaya per se – but the season got to me. Chaturmasya just started now)

  37. || ಜಗದ್ವಂದಿತ ವೃತ್ತ (ಅಶ್ವಗತೀ ವೃತ್ತ),ಉಪಮಾಲಂಕಾರ,ರೂಪಕಾಲಂಕಾರ||

    ಮೂಡುತೆ ಚಂದ್ರಮನಾಗಸದೊಳ್ ಪೊಳೆಗುಂ ಬಿಳುಪಿಂ,
    ಷೋಡಶಿಯಂತೆಯೆ ಬಿನ್ನಣದಿಂ,ಬೆಡಗಿಂ,ನಿಸಿಯೊಳ್|
    ಸೂಡುತೆ ಮೊಲ್ಲೆಗಳಂದದೆ ಚಿಕ್ಕೆಗಳಂ ಮುಡಿಯೊಳ್,
    ಮೋಡದ ಸುಂದರಕಂಠಿಕೆಯಂ ಧರಿಸುತ್ತೆಸೆಗುಂ ||

    ಷೋಡಶಿ ಎಂಬ ಪದಪ್ರಯೋಗದ ಸಾಧುತ್ವದ ಬಗೆಗೆ ಸಂದೇಹವಿದೆ.ಸರಿಯಲ್ಲವೆಂದಾದಲ್ಲಿ,ದಯಮಾಡಿ ಎರಡನೇ ಪಾದವನ್ನು-
    ನೀಡುತೆ ಶೀತಲರಶ್ಮಿಗಳಂ ಧರೆಗಂ ನಿಸಿಯೊಳ್- ಎಂಬುದಾಗಿ ಬದಲಾಯಿಸಿರಿ.

    • ಶಕುಂತಲಾ ಅವರೇ ಹೋಲಿಕೆಗಳು ಚೆನ್ನಾಗಿದೆ :), ಅದರಲ್ಲೂ ‘ಮೋಡದ ಸುಂದರಕಂಠಿಕೆಯಂ’ ಬಹಳ ಚೆನ್ನಾಗಿದೆ. ಅಂತಯೇ ವಿರಳವಾಗಿರುವ ವೃತ್ತದಲ್ಲಿ ಬರೆದದ್ದು ಚೆನ್ನಾಗಿದೆ

      ಆದರೆ ಚಂದ್ರ ಪುಲ್ಲಿಂಗವಾದುದ್ದರಿಂದ ಷೋಡಶಿ ಗಿಂತ ನೀವೇ ಎಂದಂತೆ ‘ನೀಡುತೆ ಶೀತಲರಶ್ಮಿಗಳಂ ಧರೆಗಂ ನಿಸಿಯೊಳ್’ ಸಮಂಜಸವೆನಿಸುತ್ತದೆ. ಅಂತೆಯೇ ‘ಸೂಡುತೆ ಮೊಲ್ಲೆಗಳಂದದೆ ಚಿಕ್ಕೆಗಳಂ ಮುಡಿಯೊಳ್’ ಸ್ತ್ರೀ ಅಲಂಕಾರ ಸೂಚಕವಾಗಿದೆಯಲ್ಲವೇ ಅದನ್ನೂ ಸ್ವಲ್ಪ ಬದಲಿಸಿದರೆ ಚೆನ್ನವೆನಿಸುತ್ತದೆ. ಅಲ್ಲವೇ?

      • ಸೋಮರೆ,

        ಪದ್ಯವನ್ನು ಮೆಚ್ಚಿರುವುದಕ್ಕೆ ಧನ್ಯವಾದಗಳು.ಚಂದ್ರನನ್ನು ಯುವತಿಗೆ ಹೋಲಿಸಿರುವುದೇ ನನ್ನ ಪದ್ಯದ ಸ್ವಾರಸ್ಯ.ಯುವತಿಯ ಮುಖವನ್ನು ಚಂದ್ರನಿಗೆ ಹೋಲಿಸಬಹುದಾದರೆ ಚಂದ್ರನನ್ನೂ ಯುವತಿಗೆ ಹೋಲಿಸಬಹುದಲ್ಲವೆ?
        ಹದಿನಾರರ ಕನ್ಯೆಗೆ ಷೋಡಶಿಯೆನ್ನುವ ಪದ ಸರಿಯೇ ತಪ್ಪೇ ಎಂಬುದು ನನ್ನ ಸಂದೇಹ.ಶಬ್ದಕೋಶದಲ್ಲಿ ಇದು ಕಾಣಲಿಲ್ಲ.ಸರಿಯೆಂದಾದಲ್ಲಿ ನನ್ನ ಪದ್ಯಕ್ಕೆ ಈ ಪದವೇ ಸೂಕ್ತವಾಗಿದೆ.
        ಪುರುಷರೂ ಸ್ತ್ರೀಯರೆಂತೆಯೇ ತಿಲಕವಿಡುವುದು,ಹೂಮುಡಿಯುವುದು,ಓಲೆಗಳನ್ನು,ಬಳೆಗಳನ್ನು, ಕಂಠಿಕೆಗಳನ್ನು ತೊಡುವುದನ್ನು ನಾವು ಕಂಡಿರುವುದರಿಂದ ಇವುಗಳು ತಪ್ಪಾಗಲಾರವು. 🙂 ನಮ್ಮ ಊರ ಪುರೋಹಿತರು ಮುಡಿಗೆ ಹೂಮುಡಿದದ್ದನ್ನು ನೋಡಿರುವೆ.
        ನನ್ನ ಈ ಅನಿಸಿಕೆಗಳ ಬಗ್ಗೆ ಮಾನ್ಯ ಅವಧಾನಿಗಳ ಅಭಿಪ್ರಾಯವನ್ನು ತಿಳಿಯುವ ಕುತೂಹಲವಿದೆ.

  38. ಹಗಲೊಳುಂ ದಿನಪತಾಂ ಮುಗಿಲ ನಿಲುವಂಗಿಯೊಳ್
    ಮುಗುದರಂ ನಡುಗಿಸಿಹ ಚಂದ ಕಾಣಂ ।।
    ನಗುತಲುಂ ತಾರೆಗಳ ಜರತಾರಿಯಂಗಿಯೊಳ್
    ಜಗವನುಂ ಸೆಳೆದಿಹನು ಚಂದತಾನುಂ ।।

    (ಕಪ್ಪು ಕೋಟಿನ ಕಠಿಣ ಸೂರ್ಯ – ಜರತಾರಿ ಅಂಗಿಯ ಕೋಮಲ ಚಂದ್ರ = ಇಬ್ಬರೂ ಒಬ್ಬನೇ ?!)

    • ‘ತಾರೆಗಳ ಜರತಾರಿಯಂಗಿಯೊಳ್’ ಎನ್ನುವುದು ಚೆನ್ನಾಗಿದೆ. ಆದರೆ ಹಗಲೊಳುಂ, ನಗುತಲುಂ, ಜಗವನುಂ ಇವೆಲ್ಲಾ ಹಗಲಿನಲ್ಲಿ ಕೂಡ, ನಗುತಿರಲು ಕೂಡ, ಜಗವನ್ನು ಕೂಡ ಎಂಬ ಅರ್ಥ ಬರುವುದರಿಂದ ಸವರಸಬೇಕು.

  39. ರಸರಾಗಂಗಳವುಕ್ಕುತೇರುತಮಮಾ ಸಂಯೋಗಕೆಂ ಲಜ್ಜೆಗೆ –
    ಟ್ಟೆಸೆದಿರ್ಪಾ ಕಡುದಾರ್ಷ್ಟ್ಯಕಂಜುತಲೆ ಸೋಮಂ ತೋರದಿರ್ಪಂ ಗಡಾ |
    ಪೊಸಮಾಧುರ್ಯವ ಬಿಚ್ಚಿ ಕೋಮಲಗಣಂ ತೋಳೆತ್ತುತುಂ ಬೇಡಲಾ
    ನಿಸಿಯೊಳ್ ಮೆತ್ತಗೆ ಬಂದು ತೋರ್ದ ತಿರೆಗಂ ಸಂಪೂರ್ಣ ಚಂದ್ರಾನನಂ ||

    • ಪೊಸಮಾಧುರ್ಯವ ಬಿಚ್ಚಿ ಕೋಮಲಗಣಂ ತೋಳೆತ್ತುತುಂ ಬೇಡಲಾ
      ನಿಸಿಯೊಳ್ ಮೆತ್ತಗೆ ಬಂದು ತೋರ್ದ ತಿರೆಗಂ ಸಂಪೂರ್ಣ ಚಂದ್ರಾನನಂ

      ಕೋಮಲರ ಅಳಲನ್ನು ಸಂತೈಸುವೆನೆಂದು ನಿಶೆಯಲ್ಲಿ ಮಾತ್ರ ಬರುವ ಪೂರ್ಣಚಂದ್ರನ ಕಲ್ಪನೆ ಚೆನ್ನಾಗಿದೆ ರಾಮ್ 🙂

  40. ರವಿಯ ತಾಪವನು ತಾನೆ ಸಹಿಸುತಿನ್ನೆಮಗೆ ಹಿತವ ನೀಡಲ್
    ಭುವಿಯ ಕಣ್ಮಣಿಯು ತಿರೆಯ ತಿರುತಿರುಗಿ ಬರ್ಪನಲ್ತೆ ಬಾನೊಳ್ |
    ಸವಿಯ ಸೂರೆಗಾಗಸವು ಸಾಲದೆಂದೊಂದುಪಾಯದಿಂದ
    ಕವಿಯ ನುಡಿಗಳೊಳ್, ಪೆಣ್ಣುಮೊಗಗಳೊಳ್ಗುದಿಪ ನಿತ್ಯ ಚಂದ್ರ ||

    • ಓಳ್ಗೆ ಎಂದು ಉಪಯೋಗಿಸುಬಾರದೆಂದು ಕೇಳಿದ ನೆನಪು… ನನ್ನ ಅಭಿಪ್ರಾಯ ತಪ್ಪಿದ್ದಲ್ಲಿ ಕ್ಷಮಿಸಿ

    • ಆಗಸವು ಸಾಲದೆ ಕವಿಯ ನುಡಿಗಳೊಳ್, ಪೆಣ್ಣುಮೊಗಗಳೊಳ್ಗುದಿಪ ಚಂದ್ರ ಚೆನ್ನಿಗನೇ ಸರಿ 🙂 ಚೆನ್ನಾಗಿದೆ

  41. Irrespective of whether he is waning or waxing, the moon always brings up his bright part.
    ವಿದ್ಯುನ್ಮಾಲಾ|| ಕ್ಷೀಣಂಗೊಳ್ಳುತ್ತಿರ್ದೇಂ ಚಂದ್ರಂ
    ಮೇಣೇಂ ದುಹ್ಯಂಗೊಳ್ಳಲ್ಕಾತಂ|
    ಕಾಣಿರ್ಸಿರ್ಪನ್ ಪೊನ್ನಂ ಮಾತ್ರಂ
    ಗೌಣಂ ಲೋಗರ್ಗೂನಾರ್ಧಂ ದಲ್||

    • ಪ್ರಸಾದು ಚಂದ್ರನ ಬಿಳ್ಪೆ ಲೋಕವನ್ನು ಸೆಳೆವುದು, ಆತನ ಕಪ್ಪು ಗೌಣವೆಂಬ ಆಶಯ ಚೆನ್ನಾಗಿದೆ

      ಕ್ಷೀಣಂಗೊಳ್ಳುತ್ತಿರ್ದೇಂ -> ಕ್ಷೀಣಂಗೊಳ್ಳುತ್ತಿರ್ದೊಡೇಂ ಆಗಬೇಕಿತ್ತಲ್ಲವೆ ಆದರೆ ಛಂದಸ್ಸು ಕೆಡುತ್ತದೆ.

      ಲೋಗರ್ಗೂಣಾರ್ಧಂ ಇಲ್ಲಿ ‘ಣ’ ಪ್ರಯೋಗ ಸರಿಯೇ

    • ಕ್ಷೀಣಂಗೊಳ್ಳುತ್ತಿರ್ದು ಏನು? ದುಹ್ಯಂಗೊಳ್ಳುತ್ತಿರ್ದು ಏನು? ಎಂಬರ್ಥದಲ್ಲಿ ಬಳಸಿದ್ದೇನೆ.
      ನೀವು ಹೇಳಿರುವುದು ಸರಿ. ಊನಾರ್ಧಂ ಎಂದಾಗಬೇಕು. ಇಲ್ಲದಿದ್ದರೆ ಅರಿಯಾಗುತ್ತದೆ. ಧನ್ಯವಾದಗಳು. ಮೂಲದಲ್ಲೇ ತಿದ್ದಿದ್ದೇನೆ.

  42. ಒಂದೆರಡು ಲೈಟ್ ಪದ್ಯಗಳು –

    आयाहि मम सुवर्ण सवेगं चन्द्रो विकसति सितकान्तः ।
    संपूर्य कर्णयोः प्रीतिवचो भोजितवती माता ॥

    “ಚಿನ್ನ, ರನ್ನ, ಬೇಗ ಬಾ. ಇಗೋ ನೋಡು ಚಂದಮಾಮ” ಎಂದು ಹೇಳುತ್ತಾ, ಮುದ್ದು ಮಾತುಗಳಿಂದ ಕಿವಿತುಂಬಿಸುತ್ತಾ ಅಮ್ಮ ಊಟ ಮಾಡಿಸಿದಳು.

    बालं प्रीतिकरेणासौ द्योतयित्वा सितावभम् ।
    हसित्वा च मुदात्मानं भजते शशिशंसनम् ॥

    ಅಮ್ಮನ ಪಕ್ಷದಲ್ಲಿ – ಮಗುವಿಗೆ ಪ್ರೀತಿಕರದಿಂದ ಹುಟ್ಟುತ್ತಿರುವ ಶ್ವೇತಚಂದ್ರನನ್ನು ತೋರಿಸುತ್ತ ಸಂತೋಷದಿಂದ ನಗುತ್ತಾ (ತಾಯಿ) ಆದ್ಯತೆಯನ್ನು ಪಡೆಯುವಳು. (ಶಶಿಶಂಸನಮ್ ಮುಖ್ಯಪಾತ್ರತ್ವಮ್. ಶಶೀ = ಒಂದು = ಮುಖ್ಯ)

    ಚಂದ್ರನಪಕ್ಷದಲ್ಲಿ – ಚಂದ್ರನು ತನ್ನ ಪ್ರೀತಿಯ ಕಿರಣಗಳಿಂದ ಕಾಂತಿಮಂತನಾದ ಬಾಲನನ್ನು (ಜಗತ್ತಿಗೆ) ತೋರಿಸುತ್ತಾ ಸಂತೋಷದಿಂದ ನಗುತ್ತ ಶಶಿಲಕ್ಷಣವನ್ನು ಪಡೆದನು. (ಚಂದ್ರನಲ್ಲಿ ಕಾಣುವುದು ಶಶವಲ್ಲ, ಆದರೆ ಅದು ಚಂದ್ರನ ನಗುವೆಂದು ಕಲ್ಪನೆ).

    • ನರೇಶರಿಗೆ ಪದ್ಯಪಾನದ ಸ್ವಾಗತ. ನೀವು ರಚಿಸಿರುವ ಪದ್ಯಗಳ ಛಂದಸ್ಸು ಯಾವುದು? ಅದು ಆರ್ಯೆಯೆಂದು ಬಗೆಯುತ್ತೇನೆ. ಇಲ್ಲಿ ಹಲವು ಛಂದೋದೋಷಗಳಾಗಿವೆ. ದೂರವಾಣಿಯ ಮೂಲಕ ಪರಿಹರಿಸಿಕೊಳ್ಳಬಹುದು;

      • ನಮಸ್ಕಾರ ಗಣೇಶರೇ, ಮೊದಲನೆಯದು ಆರ್ಯದಲ್ಲಿ ಪ್ರಯತ್ನ (ಆರ್ಯದಲ್ಲಿ ನನ್ನ ಮೊದಲ ಪ್ರಯತ್ನವೂ ಹೌದು).
        ಎರಡನೆಯದು ಶ್ಲೋಕದಲ್ಲಿ. ದೂರವಾಣಿಯ ಮೂಲಕ ತಿದ್ದುಪಡಿ ಪಡೆವೆ.

    • सितावभम् इति पदं कथमुत्पन्नम्?

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)