Sep 212015
 

ಪಾತಿವ್ರತ್ಯವನ್ನು ವರ್ಣಿಸಿ ಅಲಂಕಾರಯುತ ಪದ್ಯರಚನೆಯನ್ನು ಮಾಡಿರಿ

  38 Responses to “ಪದ್ಯಸಪ್ತಾಹ ೧೬೯: ವರ್ಣನೆ”

  1. ಆ ಮ೦ಡೋದರಿಯಾ ಧರಾತನುಜೆಯಾ ಪಾ೦ಚಾಲಿಯಾ ತಾರೆ ಮ-
    ತ್ತಾ ಮೌನವ್ರತಿಪತ್ನಿಯೇನೊರೆವೆನಾನೆ೦ತೆ೦ತೊ ಗ೦ಡರ್ ಮಗುಳ್
    ನೇಮ೦ಗಳ್ಗೆ ನಿಲು೦ಕದಿರ್ಪ ಸಮಯ೦ಗಳ್ ನೀತಿಮರ್ಯಾದೆಯೇ೦
    ಸಾಮಾನ್ಯ೦ ವ್ರತತೈಲಧಾರೆಯಿರುತಾದರ್ಶ೦ ಪ್ರದೀಪ್ತಿಪ್ರಭ೦

    • ನೀಲಕಂಠರೆ, ನಿಲುಂಕದಿರ್ಪ- ಸಾಧುವೆ ? ನಿಲುಕದಿರ್ಪ ಅಥವಾ ನಿಲ್ಕದಿರ್ಪ – ಸರಿಯಲ್ಲವೆ ? ಕಷ್ಟಪಟ್ಟು ಪದ್ಯದ ಅರ್ಥ ತಿಳಿಯಿತಾದರೂ ವಿವರಣೆಯನ್ನು ನೀಡಿದಲ್ಲಿ ಸುಲಭವಾಗುವುದು .

      • Madam, am not sure about nilunku or niluku. Can we make it silunkadirpa?
        Gist of the verse, considering these pancha-mahaa-pativrataa’s, it is very hard to infer what paativratya is (may be excluding seeta). While there are various situations that these women went through which contradict paativratya as such, we can only observe here their tendency towards adhering to that ideal which itself is like an oil-lamp and the ‘vrata’ is the continuous pouring of oil to that.

  2. ನಾನು ತಿಳಿದಂತೆ , ಸಿಲುಂಕದಿರ್ಪ-ಅಸಾಧು; ಸಿಲುಕದಿರ್ಪ ,ಸಿಲ್ಕದಿರ್ಪ- ಸಾಧುಶಬ್ದಗಳು. “ನೇಮಂಗಳ್ಗೆಣೆಯಾಗದಿರ್ಪ.. “ಎಂದು ಸವರಬಹುದು. ಇದೇ ಪದ್ಯವನ್ನು ನೀವು ಇನ್ನೂ ಚೆನ್ನಾಗಿ ಬರೆಯಲರ್ಹರು.

  3. ಕಾಯುತುಮೊಲವ,ನವನಿಯ
    ಶ್ರೇಯಮನಾಶಿಸುತೆ, ಮಾತೆಯರ್ ಪಿನ್ನೆಡೆಯಲ್
    ಛಾಯೆಯವೊಲ್ ಪತಿಜನದಾ,
    ನ್ಯಾಯಪಥಮಿದಂ ಸುಭದ್ರಮಾಗೆ ಕಡೆದರೇಂ?

    (ಒಲವನ್ನು ರಕ್ಷಿಸಿಕೊಳುತ್ತಾ ,ಭೂಮಿಯ ಶ್ರೇಯಸನಾಶಿಸುತ್ತಾ(ಕುಟುಂಬದ,ಸಮಾಜದ..,ದೇಶದ.), ಈ ಧರ್ಮಮಾರ್ಗವನ್ನು ಕಡೆದರೇಂ)

  4. ಕಾಂಚನಾ, ಕೆಲವು ಸವರಣೆಗಳು ( ತಪ್ಪೊಪ್ಪುಗಳನ್ನು ತಿಳಿದುಕೊಳ್ಳಿರಿ ) :

    “ಕಾಯುತುಮೊಲವ,ನವನಿಯ”- ‘ಕಾಯುತುಮೊಲವನವನಿಯ”
    “..ಮಾತೆಯರ್ ಪಿನ್ನೆಡೆಯಲ್”- “…ಮಾತೆಯರ್ ಪಿಂದುಗೊಳಲ್
    “ಛಾಯೆಯವೊಲ್ ಪತಿಜನದಾ,”-“ಛಾಯೆಯವೊಲ್ ಪತಿಜನರಂ,”

    (ಪಿಂದುಗೊಳ್=ಹಿಂಬಾಲಿಸು )

  5. ಯಾರೊ ಪೇರಿದರೆಂದು ಹವಣನು
    ಸಾರುತಾಕ್ಷೇಪಿಸುತೆ ನಡೆವರೆ!
    ಹಾರಿ ಕುಣಿವಾ ಚಿತ್ತಕಂ ಬಲಮೀವ ಭಾಗ್ಯಮಿದಂ!
    ಮೂರು ಲೋಕವನಂಜಿಪನಲಂ
    ನೀರೆ ಸೀತೆಗೆ ತಂಪನೆರೆದಾ-
    ಭಾರತೆಯನೇ ಮೆರೆದು ತೋರಿರಲಿದರ ಶಕ್ತಿಯನು!

    • ಒಳ್ಳೆಯ ಶೈಲಿಯ ಸುಂದರಪದ್ಯ! ಅಭಿನಂದನೆಗಳು. ಇನ್ನೂ ಇಂತಹ ಹಲವು ಪದ್ಯಗಳು ನಿಮ್ಮಿಂದ ಮೂಡಿ ಬರಲಿ 🙂

  6. ಆದರ್ಶ೦ ವನಿತಾಮುಖೇಕ್ಷಣವರಾದರ್ಶ೦ ಮಹಚ್ಛೀಲನಿ-
    ಷ್ಠಾದರ್ಶ೦ ಪರಮಾದರೇಷ್ಟಸಹಿತ೦ ಕೈಗೆತ್ತಿಕೊ೦ಡಿರ್ಪುದ೦-
    ತಾದತ್ತಲ್ಲದಸಡ್ಡೆದೋರೆ ಕೆಡೆದಾಗಳ್ ಸೀಳ್ದು ಠಳ್ಳೆ೦ದು ನಿ-
    ರ್ವೇದ೦ಗೊ೦ಡು ಮರಳ್ದು ನೋಳ್ಪುದುಚಿತ೦ ತಾನಲ್ಲೆನುತ್ತಿರ್ಪುದಯ್

    • ನೀಲಕಂಠರೆ, ನಿಮ್ಮ ಪದ್ಯ ತುಂಬ ಚೆನ್ನಾಗಿಯೇ ಇರಬಹುದೆನಿಸುತ್ತದೆ. ಆದರೆ ನನಗೆ ಮಾತ್ರ ಅರ್ಥವಾಗುತ್ತಿಲ್ಲ. ವಿವರಿಸುವಿರಾ ?

      • Madam, am afraid!! you would say it is not so good after getting the meaning 🙂

        It is this ‘aadarsha’ that reflects the face of a woman in true sense (like the mirror ‘aadarsha’), and also shows her commitment towards keeping up the ‘mahat-sheela’. This is to be held very carefully (paativratya / mirror), otherwise ends up in falling down, getting broken into pieces and as if avoiding seeing her face again, never will it be recovered.

        • ಪದ್ಯಭಾವವೇನೋ ಚೆನ್ನಾಗಿದೆ. ಆದರೆ ಪದ್ಯದ ಮೊದಲ ಹಾಗೂ ಕೊನೆಯ ಪಾದಗಳಲ್ಲಿಅರ್ಥಸ್ಪಷ್ಟತೆಯಿಲ್ಲ.ನಾನು ತಿಳಿದಂತೆ, “ಮರಳ್ಚಿ “ಎಂದರೆ “ಮರಳಿಸಿ “ಎಂದಾಗುವುದಲ್ಲದೆ, “ಪುನಃ” ಎಂದರ್ಥವಲ್ಲ.” ಮರಳ್ದು” – ಎಂಬುದು ಸರಿಯಾದ ರೂಪ.”ಮರಳ್ಚಿ” ಎಂಬುದೂ ಸರಿಯೆ ?

  7. ರವಿಯೊಳನಂತರಕ್ತಿಯನೆ ಪೊಂದಿದ ನಿರ್ಮಲನೇಹದಂಬುಜಂ,
    ಛವಿಯುತ ಚಂದ್ರನೊರ್ವನನೆ ನಂಬುತೆ ಜೀವಿಸುತಿರ್ಪಕೈರವಂ,
    ಹವಣಿಸದಿರ್ಪೊಡಂ ಹರಿಯಪಾದಕೆ ತಪ್ಪದೆ ಸಲ್ಲೆ ಭಕ್ತಿಯಿಂ,
    ಭವರಹದೊಳ್ ದಿಟಂ ಪತಿಯೊಡಂ ಮನಗಾಣುತೆ ಪೋಗೆ,ಭೀತಿಯೇಂ!

    (ಅಂಬುಜ ಮತ್ತು ಕೈರವವು ಸೂರ್ಯ ,ಚಂದ್ರರ ಒಡನಾಡಿಯಾಗಿ ಜೀವಿಸುತ್ತಾ, ಯಾವ ತಾಪತ್ರಯವೂ ಇಲ್ಲದೇ ಹರಿಯ ಪಾದವನ್ನು ಸೇರುತ್ತಿರುವಾಗ, ಸಂಸಾರದಲ್ಲಿ ಪತಿವ್ರತೆಯರಿಗೆ ಭೀತಿಯೆಲ್ಲಿಯದು?)

    • ತುಂಬ ಸೊಗಸಾದ ಕಲ್ಪನೆಯ ರಮಣೀಯಪದ್ಯ ! ಕೆಲವು ಸವರಣೆಗಳು ಇಂತಿವೆ ( ಸರಿಯೇ ಎಂದು ತಿಳಿದುಕೊಳ್ಳಿರಿ).

      1)”ರವಿಯೊಳನಂತ ಕೂರ್ಮೆಯನೆ….”- “ರವಿಯೊಳನಂತರಕ್ತಿಯನೆ….”( ಅರಿಸಮಾಸವಾಗುವುದಕ್ಕಾಗಿ ಸವರಣೆ )
      2)ಕಾಂತೆಕೈರವಂ- ಕೈರವಂ ಎಂಬುದು ನಪುಂಸಕಲಿಂಗ ಅಥವಾ ಪುಲ್ಲಿಂಗದ ಪದವಾಗುವುದರಿಂದ , ಕಾಂತೆಕೈರವಂ ಎಂಬ ಪ್ರಯೋಗವು ಸರಿಯಾಗಲಾರದೆಂಬ ಸಂದೇಹವಿದೆ. ಹಾಗಾಗಿ” ಜೀವಿಪ ಕಾಂತೆಕೈರವಂ” ಎಂಬುದನ್ನು ” ಜೀವಿಸುತಿರ್ಪ ಕೈರವಂ ” ಎಂದು ಸವರಬಹುದು.
      3)”….ತಪ್ಪದೆ ಸಲ್ಲುತಿರ್ದಿರಲ್”- ಭೂತಕಾಲದಲ್ಲಿರುವುದನ್ನು- ” … ತಪ್ಪದೆ ಸಲ್ಲೆ ಭಕ್ತಿಯಿಂ” ಎಂದು ವರ್ತಮಾನವಾಗಿಸಿದರೆ ಒಳಿತು.
      4)” ….ಮನಗಾಣುತೆ ಪೋಗೆ,… “- “…ಮನಗಾಣುತೆ ಬಾಳೆ,…. “

      • ಕಲ್ಪನೆಯನ್ನು ಮೆಚ್ಚಿದ್ದಕ್ಕಾಗಿ ಮತ್ತು ಸವರಣೆಯನ್ನು ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು, ಶಕುಂತಲಾ .

  8. ಮಂಗಲಸೂತ್ರಮದು ಗಡಾ
    ಬಂಗಾರದೊಡಮೆ ಪತಿವ್ರತೆಗದುಂ ಪತಿಯೋ-
    ರ್ವಂಗೆನೆ ಕಾಣ್ಬುದುವೆಂಬರ್,
    ಕಂಗೆಡಿಸುವಳೆ ಸರಗಳ್ಳರಂ ಹದಿಬದೆ ತಾಂ !?

    ಹಾದಿಬದಿಯ ಸರಗಳ್ಳರ ಕಣ್ತಪ್ಪಿಸುವ “ಹದಿಬದೆ”ಯ ಬಗೆಗಿನ ಪದ್ಯ.
    (ಸಾದ್ವಿ ಚಂದ್ರಮತಿಯ ಮಂಗಳಸೂತ್ರವನ್ನು ಗುರುತಿಸಿದ – ಸತ್ಯಹರಿಶ್ಚಂದ್ರ ಕಥೆಯಿಂದ ಪ್ರೇರೇಪಿತ.)

    • ಉಷಾ ಅವರೆ, ಬೆಂಗಳೂರಿನ ಸರಗಳ್ಳರು ನಿಮ್ಮ ಪದ್ಯರಚನೆಗೆ ನೆರವಾಗಿರುವುದು ಬಹಳ ವಿನೋದವಾಗಿದೆ ! 🙂 ನಿಮ್ಮ ಪದ್ಯದ ಪತಿವ್ರತೆಯು ತುಂಬ “ನಾಟಿ” (naughty) ಇದ್ದಾಳೆ.ಉತ್ತಮಕಲ್ಪನೆಯ ಪದ್ಯಕ್ಕಾಗಿ ಧನ್ಯವಾದಗಳು. ಕೆಲವು ಸವರಣೆಗಳನ್ನು ಮಾಡಿರುವ ಪದ್ಯ ಹೀಗಿದೆ:

      ಮಂಗಲಸೂತ್ರಮದು ಗಡಾ
      ಬಂಗಾರದೊಡಮೆ ಪತಿವ್ರತೆಗಿರಲ್, ಪತಿಯೊ-|
      ರ್ವಂಗೇ ಕಾಂಬಂತೆ ಧರಿಸಿ,
      ಕಂಗೆಡಿಪಳೆ ಸರದ ಕಳ್ಳರಂ ಹದಿಬದೆ ತಾನ್ ?! ||

      (ನಿಮ್ಮ ಪದ್ಯದ ನಾಲ್ಕನೇ ಪಾದ ಸರಿಯೇ ಇರಬಹುದು , ತಿಳಿದುಕೊಳ್ಳಿರಿ )

      • ಧನ್ಯವಾದಗಳು ಶಕುಂತಲಾ, ಹೌದು ವಿನೋದವಾಗೇ ಬರೆದದ್ದು. ಸವರಣೆ ತುಂಬಾ ಚೆನ್ನಾಗಿದೆ.

  9. ಗತ್ತಿನಾ ಪಾಂಡವರು ನಿತ್ಯಂ
    ಕುತ್ತಿನ ಮಳೆಯನಾಂತು ಕರೆದಿರೆ
    ತೆತ್ತಳೇಂ ಸಾಧ್ವಿತನಮಂ ಕಂಗೆಟ್ಟು ಪಾಂಚಾಲಿ!
    ಹತ್ತು ಕೈಗಳನೊಂದುಗೂಡಿಸಿ
    ಮತ್ತೆ ಧರ್ಮಸ್ಥಾಪನೆಗೆಳೆಸು
    ತೆತ್ತರಮನೇರಿದಳೆ! ಲೋಕಹಿತಕ್ಕೆ ಬುಡಮಾಗಿ!

    • sogasaagide. “kuttina maleyanaantu karedire” means??

      • ಕಷ್ಟದ ಮಳೆಯನ್ನು ಕರೆದಿರೆ ,ಕಷ್ಟಗಳನ್ನೊಡ್ಡುತ್ತಿರೆ ..ಎಂದು
        (ಪಣಕ್ಕೊಡ್ಡಿದ್ದು,ಇವಳ ಹೊರತಾಗಿ ಬೇರೆಯವರನ್ನು ವರಿಸಿದ್ದು…ಹೀಗೇ ಕಷ್ಟವನ್ನಿತ್ತ ಕಾಲವೇ ಹೆಚ್ಚಿಗೆಯಾದುದರಿಂದೆ, ಅತಿಶಯವನ್ನು ಸೂಚಿಸಲು ಬಳಸಿದೆ..(“ಆಂತು”ಬಳಸಿದ್ದು ತಪ್ಪಾಗಿದ್ದೀತು :-)) )

  10. ಇಷ್ಟೆ: ಸೀಸದ ಹಾಗೂ ಗೀತಿಯ ಸಾಲುಗಳ ಆದ್ಯಕ್ಷರಗಳು ತಲಾ ಪಾ-ತಿ-ವ್ರ-ತ್ಯ
    ಪಾಙ್ಗಿನ್ದೆ ಗೀಚೇನು ಏನೇನನೋ ಎಲ್ಲ ಏನಿರಲಿ ವಿಷಯಮದು ಇಹದ-ಪರದ
    ತಿಣುಕಿದರು ಬರದಿಹುದು ಸಾಲುಮೊಂದೂ ವಿಷಯಮಿದರೊಳೇಕಿಂತಾಯ್ತೊ ಕಾಣೆನಾನುಂ|
    ವ್ರತದ ನೇಮಂಗಳನು ಸಡಿಲಿಸದೆ ನಡೆದೆನಿದೊ ಹರಡಿಕೊಂಡಿರ್ಪೆ ಪದಕೋಶಂಗಳಂ
    ತ್ಯಜಿಸಿ ನಿದ್ದೆಯ ಗಂಟೆಗಳನೆಷ್ಟು ಕಳೆದರೂ ಶುದ್ಧಚಿತ್ತಮದೊಂದೆ(blank mind) ಸಂದ ಭಾಗ್ಯಂ||
    ಪಾಪ ಪಾಪರ್ರಾಗೊಂಟೋದ ಅನ್ಕಬ್ಯಾಡ
    ತಿರುಗಿ ಬಂಡ್ವಾಳ ಹೂಡ್ಬುಟ್ಟಿ ಗೆದ್ದಾಗೊಂದ್ಸಾ-
    ವ್ರವರೆ (Rs.1,500/-) ಸಾಲಾವ ಕೇಳ್ಕಂಡಿ ಬಂದೇ ನೀ ಬ-
    ರ್ತ್ಯಲ್ವ ಆಗ್ವಿಚಾರ್ಸ್ಕಂತೀನಿ ಮೀಸೆ ತಿರುವಿ||

  11. ಪ್ರಸಾದರೆ, ಪಾ-ತಿ-ವ್ರ-ತ್ಯ -ಗಳೆಂಬ ಆದ್ಯಕ್ಷರಗಳನ್ನು ಕ್ರಮವಾಗಿ ಹೊಂದಿದ ಪಾದಗಳುಳ್ಳ ಪದ್ಯಗಳನ್ನು ರಚಿಸಿರುವ ನಿಮ್ಮ ಜಾಣ್ಮೆಯು ತುಂಬ ಶ್ಲಾಘನೀಯ.ಅಭಿನಂದನೆಗಳು. ಪದ್ಯದ ವಸ್ತುವೂ ಪಾತಿವ್ರತ್ಯವಾಗಿದ್ದು ಹಳಗನ್ನಡದಲ್ಲೇ ಮೂಡಿ ಬಂದಿದ್ದಲ್ಲಿ ಉತ್ಕೃಷ್ಟರಚನೆಗಳೆನಿಸಬಹುದಿತ್ತು.

    • ಶ್ಲಾಘನೆಗಾಗಿ ಧನ್ಯವಾದಗಳು. ನನಗೆ ಹಳಗನ್ನಡವು ಇನ್ನೂ ಸಿದ್ಧಿಸಿಲ್ಲ; ಅಧ್ಯಯನಬಲವಿಲ್ಲ.

  12. ಚಿಂತಿಸದಿರಿ, ಹಳಗನ್ನಡವು ನನಗೂ ಸಿದ್ಧಿಸಿಲ್ಲ. 🙂

    • Well, well! Your admonition “ಹಳಗನ್ನಡದಲ್ಲೇ ಮೂಡಿ ಬಂದಿದ್ದಲ್ಲಿ ಉತ್ಕೃಷ್ಟರಚನೆಗಳೆನಿಸಬಹುದಿತ್ತು” doesn’t hurt much now 😉

  13. ಬಲುವೈಯಾರದಿನಾಪಗಂ,ಕಡಲನೇ ಸೇರುತ್ತೆ ತಾಂ ಸ್ಥೈರ್ಯಕಂ,
    ಒಲವಿಂದಂ ಗಿರಿಪುತ್ರಿಯಪ್ಪಿ ಶಿವನಂ ಪೂರ್ಣತ್ವಮಂ ಪೊಂದುತುಂ,
    ಕಳೆಗುಂದಿರ್ಪಿಳೆ ನೇಸರಿಂ ಬೆಳಗುತಂತಾಬಾನುವುಂ ಚಂದ್ರನಿಂ,
    ಗೆಲವಪ್ಪೊಂದುರೆವಟ್ಟೆಯಂ ಸಮೆದುವೇಂ ,ಪ್ರತ್ಯಕ್ಷದಿಂ ನಾಡಿನೊಳ್!

    (ಸ್ಥೈರ್ಯಕ್ಕಾಗಿ ನದಿಯು ಕಡಲನ್ನು ಸೇರುತ್ತ,ಪೂರ್ಣತೆಗಾಗಿ ಪರ್ವತಿಯು ಶಿವನೊಂದಿಗೊಂದಾಗುತ್ತ,ಇಳೆಯು ನೇಸರಿಂದಲೂ ಮತ್ತು ಆಗಸವು ಚಂದ್ರನಿಂದಲೂ ಬೆಳಗುತ್ತಾ,ಗೆಲುವಾಗುವ ದಾರಿಯನ್ನು ಪ್ರತ್ಯಕ್ಷವಾಗಿಯೇ ಸವೆದವೋ!(ಪಾತಿವ್ರತ್ಯದ ದಾರಿಯನ್ನು))

    • ತುಂಬ ಚೆನ್ನಾಗಿದೆ. ” ಗೆಲುವಪ್ಪೊಂದುರೆವಟ್ಟೆಯಂ…”ಎಂಬುದು “ಗೆಲುವಪ್ಪೊಂದುರುವಟ್ಟೆಯಂ.. ” ಎಂದು ಆಗಬೇಕಲ್ಲವೆ ?

  14. ಜೀವನಪುಷ್ಕಳಮಂ ಮೆರೆ
    ದಾ ವರಸರಸತಿಯ ನಾಮಮಾತ್ರಮುಳಿದವೊಲ್
    ಭಾವದೊರತೆಯೀ, ಮೇರು
    ಜ್ಜೀವನ ರೀತಿಯ ಮಹಾವ್ರತಂ ಕೊನೆಯಪ್ಪಿತಲಾ!

    (ಸರಸ್ವತಿ ನದಿಯು ಬರಿದಾಗಿ ,ಹೆಸರುಮಾತ್ರವೇ ಉಳಿದಿರುವಂತೆ,ಪಾತಿವ್ರತ್ಯವೂ ಈಗ ಹೆಸರಿಗೆ ಪೂರ್ತಿ ಉಳಿದಿದೆ)

    • ವರಸರಸತಿ – ಅರಿಸಮಾಸವಾಗುವುದಿಲ್ಲವೆ ?

  15. ||ಸ್ವಗ್ರಿಣೀವೃತ್ತ||

    ಕಲ್ಲನೇ ದೈವಮೆನ್ನುತ್ತೆ ಪೂಜಿಪ್ಪವೊಲ್,
    ಬೆಲ್ಲದಂತಿರ್ಪ ಭಾವಂಗಳಿಂ ಗಂಡನಂ,|
    ತಲ್ಲಣಂಗೊಳ್ಳದಿರ್ದಳ್ತಿಯಿಂ ಸೇವಿಸಲ್,
    ಗೆಲ್ಲದಿರ್ಪಂಥಸಾಮಾನ್ಯೆಯೆಲ್ಲಿರ್ಪಳೈ ? ||

  16. ಪತಿಸಂತತಿಯನೆಡೆವಿಡದೆ ಕಾವುದದೊ ಗಡಾ
    ಧೃತಿಗೆಡದ ಹದಿಬದೆಯ ಪುಣ್ಯಫಲವುಂ ಮೇಣ್
    ಪತಿಗೈವ ಪಾಪಂಗಳೊಳ್ ನಿಜದಿ ಪರಮ ಪತಿ-
    ವ್ರತೆಗುಂಟೆ ಪಾಲು ದಿಟ *ಗಾವಿಲನೆ ಪೇಳ್ ।।

    * “ಹದಿಬದೆಯ ಧರ್ಮ”ದ ಸಂಚಿ ಹೊನ್ನಮ್ಮನ ನೆನೆಪಿನಲ್ಲಿ !

    • * ವ್ರತೆಗುಂಟೆ ಪಾಲೆಲವೊ *ಗಾವಿಲನೆ ಪೇಳ್ ।।

    • ಪತಿಸಂತತಿಯೆನಲು ದ್ರೌಪದಿಯ ಪರಿಯಾಯ್ತು
      ಪತಿಪರಮನಂ (’ಪರಮಪತಿ’ವ್ರತೆ) ಕುರಿತುದೆನ್ನೆ ವ್ರತಮಂ|
      ಪತಿಗಳೊಳ್ ಭೇದಮುಂ ವ್ರತಮೇನೆ ತಂತ್ರದಿಂ-
      ದತಿಪತಿಯು insulate ಗೈವನಘದಿಂ|| (ಅತಿಪತಿ – The most preferred hubby)

      • “ಚೌಪದಿ” ಅಲಂಕಾರಗೊಂಡು “ದ್ರೌಪದಿ”ಯಾದದ್ದು ಗಮನಿಸಿರಲಿಲ್ಲ ಪ್ರಸಾದ್ ಸರ್,
        ತಿದ್ದಿದ ಪದ್ಯ :

        ಪತಿ,ಸಂತತಿಯನೆಡೆವಿಡದೆ ಕಾವುದದೊ ಗಡಾ
        ಧೃತಿಗೆಡದ ಹದಿಬದೆಯ ಪುಣ್ಯಫಲವುಂ ಮೇಣ್
        ಪತಿಗೈವ ಪಾಪಂಗಳೊಳ್ ದಿಟದಿ, ನಿಜ ಪತಿ-
        ವ್ರತೆಗಿಲ್ಲ ಪಾಲೆಲವೊ ಗಾವಿಲನೆ ಕಾಣ್ !!

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)