ಹೋಲಿಯ ಹಬ್ಬಕಿಂತಲೂ ಅದರ ಸಂದರ್ಭಗಳಲ್ಲಿ ಒಂದಾದ ಮದನದಹನ ವನ್ನು ಕುರಿತು ಈ ಚಿಕ್ಕ ಅನುಷ್ಟುಪ್. ದತ್ತಪದಿಗೆ ಅನುಷ್ಟುಪ್ ಆಗಲಿ ಅಂದುಕೊಂಡೆ. ಆದರೆ ಮುಂದೆ ಬೇರೆಯ ಛಂದಸ್ಸಿನಲ್ಲಿ ಬರೆಯಬಹುದು.
ಅರ್ಥ ಸುಲಭ : ರತಿಪತಿಯ ಕಥಾಭಾಗದಲ್ಲಿ ಶಂಭುವು ರಕ್ತಿಭಾವವನ್ನು ಹೊಂದಿದ. ರುದ್ರನ ಕೆಂಗಣ್ಣಿನಿಂದ ಹುಟ್ಟಿದ ಅಗ್ನಿಯಲ್ಲಿ ಮಾರನ ನಗುವು (ಅಥವಾ) ಗರ್ವವು ಒರೆಸಲ್ಪಟ್ಟಿತು.
ಶ್ಲೇಷೆಯನ್ನಿಟ್ಟು ರಚಿಸಿದ್ದು.
ಬಣ್ಣದ ಪಾತ್ರೆಯಲ್ಲಿ (ಅಕ್ಷರಗಳ ಆಕರದಲ್ಲಿ) ನೀರಿನೊಂದಿಗೆ ಸೇರಿ ಇರುವ (ರಸಸಂಪೂರ್ಣೆಯಾದ) ಆನಂದಲಕ್ಷ್ಮಿಯು (ಕಾವ್ಯಲಕ್ಷ್ಮಿಯು) ಜನರ ಮಧ್ಯೆ ಸೇರಿಕೊಂಡು ಹಬ್ಬದಿಂದ (ಛಂದಸ್ಸಿನ ಮೂಲಕ) ನನ್ನ ಸಂತೋಷವನ್ನು ಹೆಚ್ಚಿಸಲಿ.
काण्डे रतिपतेः शम्भुर्भावे रक्तौ समागतः ।
पावके रुद्रनेत्रोत्थे मारस्य स्मेरमार्जनम् ।।
ಹೋಲಿಯ ಹಬ್ಬಕಿಂತಲೂ ಅದರ ಸಂದರ್ಭಗಳಲ್ಲಿ ಒಂದಾದ ಮದನದಹನ ವನ್ನು ಕುರಿತು ಈ ಚಿಕ್ಕ ಅನುಷ್ಟುಪ್. ದತ್ತಪದಿಗೆ ಅನುಷ್ಟುಪ್ ಆಗಲಿ ಅಂದುಕೊಂಡೆ. ಆದರೆ ಮುಂದೆ ಬೇರೆಯ ಛಂದಸ್ಸಿನಲ್ಲಿ ಬರೆಯಬಹುದು.
ಅರ್ಥ ಸುಲಭ : ರತಿಪತಿಯ ಕಥಾಭಾಗದಲ್ಲಿ ಶಂಭುವು ರಕ್ತಿಭಾವವನ್ನು ಹೊಂದಿದ. ರುದ್ರನ ಕೆಂಗಣ್ಣಿನಿಂದ ಹುಟ್ಟಿದ ಅಗ್ನಿಯಲ್ಲಿ ಮಾರನ ನಗುವು (ಅಥವಾ) ಗರ್ವವು ಒರೆಸಲ್ಪಟ್ಟಿತು.
वर्णभाण्डे रसाविष्टा काव्यलक्ष्मी छ्वेरियम् ।
लोके रतिं समावाप्य छन्दसा मे रमं तनोत् ।।
ಶ್ಲೇಷೆಯನ್ನಿಟ್ಟು ರಚಿಸಿದ್ದು.
ಬಣ್ಣದ ಪಾತ್ರೆಯಲ್ಲಿ (ಅಕ್ಷರಗಳ ಆಕರದಲ್ಲಿ) ನೀರಿನೊಂದಿಗೆ ಸೇರಿ ಇರುವ (ರಸಸಂಪೂರ್ಣೆಯಾದ) ಆನಂದಲಕ್ಷ್ಮಿಯು (ಕಾವ್ಯಲಕ್ಷ್ಮಿಯು) ಜನರ ಮಧ್ಯೆ ಸೇರಿಕೊಂಡು ಹಬ್ಬದಿಂದ (ಛಂದಸ್ಸಿನ ಮೂಲಕ) ನನ್ನ ಸಂತೋಷವನ್ನು ಹೆಚ್ಚಿಸಲಿ.
ಛನ್ದಸ್ – ಹಬ್ಬ, ಛಂದಸ್ಸು
ಕಾವ್ಯ – ಆನಂದ, ಕಾವ್ಯ