Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ:
महायुद्धे पूर्णे भुवन-बहु-भारे विगलिते
बृहद्वृक्षस्याधो हसितवदनेन क्रमविदा ।
हृषीकेशेनान्ते प्रतिगमननाट्यं स्वमनसो
विनोदार्थं सार्थं घटितमथ मृत्यु-प्रकरणम् ॥
(ಶ್ರೀಕೃಷ್ಣ ನಿರ್ಯಾಣ)

2) ಉಷಾ ಉಮೇಶರ ಪರಿಹಾರ-೧:
ಅನೂಚಾನಂ ಸಾವೈ, ನಶಿಸುತುದಿಸಲ್ ಮಾನವರೊಳಿಂ
ತನಂತಂ ಚೈತನ್ಯಾನ್ವಿತಕಣಚಯಂ ತಾಮನುದಿನಂ|
ಪುನರ್ಜನ್ಮಕ್ಕಂ ನಿಶ್ಚಿತಮದನಿವಾರ್ಯಂ ಮರುಳೆ ಕಾಣ್
ವಿನೋದಕ್ಕಂ ತಕ್ಕಂತೊದವಿದುದು ಮೃತ್ಯು ಪ್ರಕರಣಂ!!
ಮಾನವ ಶರೀರದಲ್ಲಿ ಅಸಂಖ್ಯ ಜೀವಕಣಗಳು ಸತ್ತು ಹುಟ್ಟುತ್ತಿರುವಾಗೆ – ಪುನರ್ಜನ್ಮಕ್ಕಾಗಿ ನಿಶ್ಚಿತ ಮರಣದಾಟದ ಬಗೆಗಿನ ಪೂರಣ

3) ಉಷಾ ಉಮೇಶರ ಪರಿಹಾರ-೨:
ದಿನಂ ಕಾರ್ಯಾಕಾರ್ಯಂ ಗಡ ಮನುಜಗಂ ಜಾಗೃತಿಯೊಳುಂ
ವಿನಾಕಾರ್ಯಂ ತಕ್ಕಂತೊದವುದದೊ ಸ್ವಪ್ನಪ್ರಕಟಣಂ
ಅನಾಯಾಸಂತಂ ಕಾಣ್ ಕಡುನಿದಿರೆಯಿಂದೆಚ್ಚರಗೊಳಲ್
ವಿನೋದಕ್ಕಂ ತಕ್ಕಂತೊದವಿದುದು ಮೃತ್ಯು ಪ್ರಕರಣಂ
“ಜಾಗೃತ್ – ಸ್ವಪ್ನ – ಸುಷುಪ್ತಿ” ಯ ಕೌತುಕದ ಬಗೆಗಿನ ಪೂರಣ. “ಗಾಢನಿದ್ರೆ” ಮರಣಕ್ಕೆ ಸಮ ಅಲ್ಲವೇ?

  One Response to “ವಿನೋದಕ್ಕಂ ತಕ್ಕಂತೊದವಿದುದು ಮೃತ್ಯುಪ್ರಕರಣಂ/ विनोदार्थं सार्थं घटितमथ मृत्यु-प्रकरणम्”

  1. ಕುನಾಥರ್ ಪಂಚತ್ವಂವಡೆಯೆ ದಿನಮುಂ ಲೋಕಕೊಳಿತೈ
    ಅನೇಕರ್ ಸತ್ತಾಗಳ್ ದಶಮುಖ-ಶಕಾರಾಖ್ಯರೆನಿತೋ|
    ವಿನಾಶಂ ಪಾಪೀಯಸ್ತ್ವಮೆ! ವಿಕಟವಾಗೀಶಗಣದೊಳ್
    ವಿನೋದಕ್ಕಂ ತಕ್ಕಂತೊದವಿದುದು ಮೃತ್ಯುಪ್ರಕರಣಂ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)