Jul 072020
ರವೀಂದ್ರಹೊಳ್ಳರ ಪದ್ಯ:
ಘನದೇವಸ್ಥಾನಂಗಳ-
ನನುವರ್ತಿಸಿ ದೈವಬಲದೊಳಾಗಮಿಸಿರಲಾಂ|
ಮನೆದೇವರ ಸನ್ನಿಧಿಯೊಳ್
ಮನವಂಜುವುದಾತನೆನ್ನನರಿಯನೆ ದಿಟದಿಂ||
(ದೇವರು ಹತ್ತಿರವಾದಷ್ಟೂ, ಅವನನ್ನು ‘fool’ ಮಾಡುವುದು ಕಷ್ಟ)
ರವೀಂದ್ರಹೊಳ್ಳರ ಪದ್ಯ:
ಘನದೇವಸ್ಥಾನಂಗಳ-
ನನುವರ್ತಿಸಿ ದೈವಬಲದೊಳಾಗಮಿಸಿರಲಾಂ|
ಮನೆದೇವರ ಸನ್ನಿಧಿಯೊಳ್
ಮನವಂಜುವುದಾತನೆನ್ನನರಿಯನೆ ದಿಟದಿಂ||
(ದೇವರು ಹತ್ತಿರವಾದಷ್ಟೂ, ಅವನನ್ನು ‘fool’ ಮಾಡುವುದು ಕಷ್ಟ)
ಒಕ್ಕಽಲಽ ಭಕ್ತಽನುಽ ಪೂಜಿಽಸೆಽ ಕೊಡುವಽನುಽ
ಚಿಕ್ಕಽದೊಂದಲರಽನುಽ ಬಲದೆಽ|
ದಿಕ್ಕೇನಽ ಮಾಡೀತುಽ, ದೇವಽನಽ ಬಲವೇನುಽ
ಒಕ್ಕಽಲಽವನ ಬಽಲಽವೇನುಽ||
ಒಕ್ಕಽಲಲ್ಲದನೊಬ್ಬಽ ಪೂಜಿಽಸೆಽ ಕೊಡುವಽನುಽ
ಚಿಕ್ಕಽದೊಂದಲರಽನುಽಽ ಎಡದೆಽ|
ದಿಕ್ಕೇನಽ ಮಾಡೀತುಽ, ದೇವಽನಽ ಎಡವೇನುಽ
ಒಕ್ಕಽಲಽವನ ಎಽಡಽವೇನುಽ||
ರವೀಂದ್ರ ಹೊಳ್ಳರೆ,
ಪೊಳ್ಳಲ್ಲಂ ನುಡಿ ಪೊಳ್ಳನೆ
ಚಳ್ಳೆಯ ಫಲಮನಪರದ್ಯುಪತಿಗರ್ಪಿಸಿದೈ| (ಅಪರದ್ಯುಪತಿ=ಬೇರೆಯ ದೇವರು)
ಕೊಳ್ಳುಗೆ ಆ ಒಕ್ಕಲೊಳಿನ
ತೆಳ್ಳನೆಯಂಗನೆಯನೆಂತೊ, ಪ್ರಳಯಾಂತಕನೇ||