ಹಿಮಾಲಯದಲ್ಲಿ ಬೆಟ್ಟದ ಮೇಲಿರುವ ನೀರ್ಗಲ್ಲನ್ನು (glacier ಅನ್ನುವ ಅರ್ಥದಲ್ಲಿ) ದಾಟಲು ಪ್ರಯತ್ನಿಸುತ್ತಿರುವ ಕುದುರೆ ವೇಗವಾಗಿ ಓಡಿದರೆ ಸಾಯುವುದು. ನಿಧಾನಕ್ಕೆ ಆಮೆ ವೇಗದಲ್ಲಿ ಹೆಜ್ಜೆಯಿಟ್ಟರೆ ಬದುಕೀತು ಎಂದು ಹೇಳಲು ಯತ್ನಿಸಿದ್ದೇನೆ.
(ಮತ್ತೊಂದು thread ಆಗಿರುವ ಕಮೆಂಟನ್ನು delete ಮಾಡಲಾಗುವುದೇ)
ಸರಿ. ಈಗ ಅರ್ಥಸ್ಪಷ್ಟತೆ ಇದೆ. ಕಲ್ಪನೆಯಂತೂ ಚೆನ್ನಾಗಿದೆ. ಕಂದಪದ್ಯದಲ್ಲಿ ಪೂರ್ತಿಯಾಗಿ ಹಳಗನ್ನಡವೇ ಇರಬೇಕು. ಇಲ್ಲಿ ಬಿರಿದಿಹ ಮತ್ತು ಇರುಕು ಹಳಗನ್ನಡವಲ್ಲ. ಸಮಪಾದಗಳ ಮಧ್ಯಗಣವು ಸರ್ವಲಘುವಾದರೆ (ಗಳಿರುಕು), ಮೊದಲ ಅಕ್ಷರಕ್ಕೆ ಪದವು ಮುಗಿಯಬೇಕು. ಮುಂದೆ ಇವನ್ನು ಗಮನಿಸಿಕೊಳ್ಳಿ.
ಮೆರೆಯುತ್ತೆಂದಿರೆ ಶಶಕಂ
“ತುರಗಂ-ವ್ಯಾಘ್ರಂ-ಮೃಗಂಗಳಿರಲೇಂ, ಗೆಲ್ವೆಂ|”
ತೊರೆದಾತಂಕಮನೆಂತೊ ಚ-
ತುರಗಂ ತಾನಾಮೆಯಂತುಟೋಡುತೆ ಗೆಲ್ಗುಂ||
(ಚತುರಗಂ = ವೇಗವಾಗಿ ಓಡುವ ಪ್ರಾಣಿಯೂ…)
ನನ್ನ ಪ್ರಯತ್ನ
ಕೊರೆವಹಿಮವದ್ಗಿರಿಯಮೇಲ್
ಬಿರಿದಿಹ ನೀರ್ಗಲ್ಗಳಿರುಕು ದಾಟಲೆಣಿಸಿರೆ |
ಶರವೇಗಮಿರಲ್ದೞಿವುದು
ತುರಗಂ ತಾನಾಮೆಯಂತುಟೋಡುತೆ ಗೆಲ್ಗುಂ ||
ದಯವಿಟ್ಟು ವಿವರಿಸಿ
ಹಿಮಾಲಯದಲ್ಲಿ ಬೆಟ್ಟದ ಮೇಲಿರುವ ನೀರ್ಗಲ್ಲನ್ನು (glacier ಅನ್ನುವ ಅರ್ಥದಲ್ಲಿ) ದಾಟಲು ಪ್ರಯತ್ನಿಸುತ್ತಿರುವ ಕುದುರೆ ವೇಗವಾಗಿ ಓಡಿದರೆ ಸಾಯುವುದು. ನಿಧಾನಕ್ಕೆ ಆಮೆ ವೇಗದಲ್ಲಿ ಹೆಜ್ಜೆಯಿಟ್ಟರೆ ಬದುಕೀತು ಎಂದು ಹೇಳಲು ಯತ್ನಿಸಿದ್ದೇನೆ.
(ಮತ್ತೊಂದು thread ಆಗಿರುವ ಕಮೆಂಟನ್ನು delete ಮಾಡಲಾಗುವುದೇ)
ಶಬ್ದಪ್ರಯೋಗಗಳಲ್ಲಿ ದೋಷಗಳುಂಟೇ?
ಛಂದಸ್ಸು ಸರಿಯಿದೆಯೇ?
ಸಮಸ್ಯಾಪೂರಣ ಸರಿಯಿದೆಯೇ? ಇಲ್ಲವೇ?
ತಿಳಿಸಿಕೊಟ್ಟಲ್ಲಿ ತಿದ್ದಿಕೊಳ್ಳಲು ಸಿದ್ಧ.
ಶರವೇಗಮಿರಲ್ದೞಿವುದು – ಇದರ ಪದಚ್ಛೇದ ಹೇಗೆ? (ಇರಲ್ದೆ?)
ಶರವೇಗಮಿರಲ್(?) + ಅೞಿವುದು ಅಂತ ಮಾಡಲು ಹೋಗಿದ್ದೆ. ತಪ್ಪಾಗಿದೆ.
ಮೂರನೇ ಸಾಲು ಹೀಗೆ ಸರಿ ಮಾಡಿಕೋಬಹುದಾ
“ಶರವೇಗಮಿರಲೞಿವುದಾ”
ಸರಿ. ಈಗ ಅರ್ಥಸ್ಪಷ್ಟತೆ ಇದೆ. ಕಲ್ಪನೆಯಂತೂ ಚೆನ್ನಾಗಿದೆ. ಕಂದಪದ್ಯದಲ್ಲಿ ಪೂರ್ತಿಯಾಗಿ ಹಳಗನ್ನಡವೇ ಇರಬೇಕು. ಇಲ್ಲಿ ಬಿರಿದಿಹ ಮತ್ತು ಇರುಕು ಹಳಗನ್ನಡವಲ್ಲ. ಸಮಪಾದಗಳ ಮಧ್ಯಗಣವು ಸರ್ವಲಘುವಾದರೆ (ಗಳಿರುಕು), ಮೊದಲ ಅಕ್ಷರಕ್ಕೆ ಪದವು ಮುಗಿಯಬೇಕು. ಮುಂದೆ ಇವನ್ನು ಗಮನಿಸಿಕೊಳ್ಳಿ.
ಧನ್ಯವಾದಗಳು. ತಿದ್ದುಕೊಳ್ಳುವೆ.