Jul 192020
 

  9 Responses to “ತುರಗಂ ತಾನಾಮೆಯಂತುಟೋಡುತೆ ಗೆಲ್ಗುಂ/ कूर्मजवेनाशु जयति धावन्नश्वः”

  1. ಮೆರೆಯುತ್ತೆಂದಿರೆ ಶಶಕಂ
    “ತುರಗಂ-ವ್ಯಾಘ್ರಂ-ಮೃಗಂಗಳಿರಲೇಂ, ಗೆಲ್ವೆಂ|”
    ತೊರೆದಾತಂಕಮನೆಂತೊ ಚ-
    ತುರಗಂ ತಾನಾಮೆಯಂತುಟೋಡುತೆ ಗೆಲ್ಗುಂ||
    (ಚತುರಗಂ = ವೇಗವಾಗಿ ಓಡುವ ಪ್ರಾಣಿಯೂ…)

  2. ನನ್ನ ಪ್ರಯತ್ನ

    ಕೊರೆವಹಿಮವದ್ಗಿರಿಯಮೇಲ್
    ಬಿರಿದಿಹ ನೀರ್ಗಲ್ಗಳಿರುಕು ದಾಟಲೆಣಿಸಿರೆ |
    ಶರವೇಗಮಿರಲ್ದೞಿವುದು
    ತುರಗಂ ತಾನಾಮೆಯಂತುಟೋಡುತೆ ಗೆಲ್ಗುಂ ||

    • ದಯವಿಟ್ಟು ವಿವರಿಸಿ

      • ಹಿಮಾಲಯದಲ್ಲಿ ಬೆಟ್ಟದ ಮೇಲಿರುವ ನೀರ್ಗಲ್ಲನ್ನು (glacier ಅನ್ನುವ ಅರ್ಥದಲ್ಲಿ) ದಾಟಲು ಪ್ರಯತ್ನಿಸುತ್ತಿರುವ ಕುದುರೆ ವೇಗವಾಗಿ ಓಡಿದರೆ ಸಾಯುವುದು. ನಿಧಾನಕ್ಕೆ ಆಮೆ ವೇಗದಲ್ಲಿ ಹೆಜ್ಜೆಯಿಟ್ಟರೆ ಬದುಕೀತು ಎಂದು ಹೇಳಲು ಯತ್ನಿಸಿದ್ದೇನೆ.
        (ಮತ್ತೊಂದು thread ಆಗಿರುವ ಕಮೆಂಟನ್ನು delete ಮಾಡಲಾಗುವುದೇ)

        • ಶಬ್ದಪ್ರಯೋಗಗಳಲ್ಲಿ ದೋಷಗಳುಂಟೇ?
          ಛಂದಸ್ಸು ಸರಿಯಿದೆಯೇ?
          ಸಮಸ್ಯಾಪೂರಣ ಸರಿಯಿದೆಯೇ? ಇಲ್ಲವೇ?
          ತಿಳಿಸಿಕೊಟ್ಟಲ್ಲಿ ತಿದ್ದಿಕೊಳ್ಳಲು ಸಿದ್ಧ.

    • ಶರವೇಗಮಿರಲ್ದೞಿವುದು – ಇದರ ಪದಚ್ಛೇದ ಹೇಗೆ? (ಇರಲ್ದೆ?)

  3. ಶರವೇಗಮಿರಲ್(?) + ಅೞಿವುದು ಅಂತ ಮಾಡಲು ಹೋಗಿದ್ದೆ. ತಪ್ಪಾಗಿದೆ.
    ಮೂರನೇ ಸಾಲು ಹೀಗೆ ಸರಿ ಮಾಡಿಕೋಬಹುದಾ
    “ಶರವೇಗಮಿರಲೞಿವುದಾ”

    • ಸರಿ. ಈಗ ಅರ್ಥಸ್ಪಷ್ಟತೆ ಇದೆ. ಕಲ್ಪನೆಯಂತೂ ಚೆನ್ನಾಗಿದೆ. ಕಂದಪದ್ಯದಲ್ಲಿ ಪೂರ್ತಿಯಾಗಿ ಹಳಗನ್ನಡವೇ ಇರಬೇಕು. ಇಲ್ಲಿ ಬಿರಿದಿಹ ಮತ್ತು ಇರುಕು ಹಳಗನ್ನಡವಲ್ಲ. ಸಮಪಾದಗಳ ಮಧ್ಯಗಣವು ಸರ್ವಲಘುವಾದರೆ (ಗಳಿರುಕು), ಮೊದಲ ಅಕ್ಷರಕ್ಕೆ ಪದವು ಮುಗಿಯಬೇಕು. ಮುಂದೆ ಇವನ್ನು ಗಮನಿಸಿಕೊಳ್ಳಿ.

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)