Jul 262020
 

ಶ್ರೀ ರಾ. ಗಣೇಶರ ಪದ್ಯ:
ಸೀಸ:
ಪುಣ್ಯಕೋಟಿಯ ಕಥೆಯನೊಂದು ಮುದಿದನವಲ್ಲಿ ಕರುಗಳ್ಗೆ ಕೂರ್ಮೆಯಿಂದೊರೆಯುತಿರಲು
ನೊಗದ ಭಾರಕೆ ನೊಂದ ಗೋಣುಗಳ ಕಥೆಯನ್ನು ಮತ್ತೊಂದೆಡೆಯೊಳೆತ್ತು ಕಥಿಸುತಿರಲು|
ಕರೆಯ ಬಂದಾಕೆಯಂ ಲೀಲೆಯಿಂ ಝಾಡಿಸಿದ ಮೋಜನಾ ತೊಂಡುದನಮೊರೆಯುತಿರಲು
ಹುಲ್ಲುಹುರುಳಿಗಳಲ್ಲಿ ಹುರುಳುತಿರುಳುಗಳಿಲ್ಲವೆಂದು ಘೂಂಕರಿಸುತಿರೆ ಗೂಳಿಯತ್ತಲ್||

ತೇಟಗೀತಿ:
ಕೊಟ್ಟಿಗೆಯ ನಡುವೆ ಗುಂಗಾಡು ಗುನುಗಿನಲ್ಲಿ
ಸದ್ದು ಸದ್ದೆಂದು ಬಾಲಮಂ ಬೀಸಿ ಬೀಸಿ|
ಪಶುಸಮೂಹಮದು ಸಂಭಾಷಣೆಗಳ ನಡುವೆ
ಮೆಲುಕುಹಾಕುತ್ತುಮಿರ್ಪುದೈ ಹಿಂಡಿತುಂಡಂ||

  2 Responses to “ಒಂಟಿ ದನಿ, ಸಾರ್ವಜನಿಕ ಮೂರ್ತಿ ಮತ್ತು ಕೊಟ್ಟಿಗೆಯಲ್ಲಿ ದನಗಳ ಸಂಭಾಷಣೆ”

  1. ಒಂಟಿ ದನಿ
    ಒಂಟಿದನಿಯೆನ್ನದಾರುಂ ಕೇಳರೆನ್ನದಿರು
    ತಂಟೆಯಹುದೈ ನೋಡುನಿನ್ನುಕ್ತಿಯು|
    ಒಂಟಿಯಿದ್ದೇಂ ಪಾಡೆ ಪಂಚಮದಿ ಪರಪುಟ್ಟ-
    ವೀಂಟಿರರೆ ಕರ್ಣದಿಂ ಕೇಳ್ದರೆಲ್ಲರ್||

  2. ಸಾರ್ವಜನಿಕ ಮೂರ್ತಿ – ಕಲ್ಪನೆ ಪ್ರೊ|| ಅ. ರ. ಮಿತ್ರರದ್ದು. ಕಲ್ಲಾಗಿದ್ದ ಅಹಲ್ಯೆಯು ತನ್ನ ಶಾಪವಿಮೋಚನೆಯಾದಮೇಲೆ ಒಂದು ಕೋಲನ್ನು ಹಿಡಿದು ವನದ ನಾಯಿಗಳಿಗೆಲ್ಲ ಹೊಡೆಯಹೋದಳು.
    ಮನೆಯ ರಕ್ಷೆಯು ನಿರಾಳವನೀವುದೆಲ್ಲರ್ಗೆ
    ವನದೊಳಗಮೆಂತೊ ಸಂಕಷ್ಟಗಳ್ ಕೇಳ್|
    ಎನಿತೊ ಬಯಲೊಳಗಹಲ್ಯೆಯು ನಿಲ್ಲುವಂತಾಗೆ
    ಶುನಕಗಳಿಗಾಸರೆಯ ಕಂಭವಾದಳ್!!

    Partly modified above verse to warn public-life aspirants
    ಮಿನುಗಲಿಚ್ಛಿಸುವೆಯೇಂ ರಾಜಕೀಯದೊಳು ಕೇಳ್
    ಅನಿಬರ್ಗೆ ನೀನಾಗದಿರು ನಿಕೃಷ್ಟಂ|
    ಎನಿತೊ ಬಯಲೊಳಗಹಲ್ಯೆಯು ನಿಲ್ಲುವಂತಾಗೆ
    ಶುನಕಗಳಿಗಾಸರೆಯ ಕಂಭವಾದಳ್!!

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)